ಸೈನಿಕ ಅಕಾಡೆಮಿಯ ಪುಟಾಣಿ ಮಕ್ಕಳಿಂದ ಶ್ರದ್ಧಾಂಜಲಿ

ಮೈಸೂರು: ಮೈಸೂರಿನ ಬೆಳವಾಡಿಯಲ್ಲಿ, ರಕ್ಷಣಾ ಇಲಾಖೆಗೆ ಸಂಭಂಧಿಸಿದಂತೆ ತರಬೇತಿ ನೀಡುತ್ತಿರುವ ಸೈನಿಕ ಅಕಾಡೆಮಿಯಲ್ಲಿ ಮಕ್ಕಳು ಉಗ್ರರಿಂದ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸಿದರು.

ಕಾಶ್ಮೀರದ ಪೆಹಾಲ್ಗಮ್ ನಲ್ಲಿ ನಿನ್ನೆ ನಡೆದ ಉಗ್ರರ ಅಟ್ಟಹಾಸದಲ್ಲಿ ಕರ್ನಾಟಕದವರು ಸೇರಿ 28 ಅಮಾಯಕ ನಾಗರಿಕರು ಜೊತೆಗೆ ಒಬ್ಬ ಸೇನಾಧಿಕಾರಿ ಪ್ರಾಣ ಕಳೆದುಕೊಂಡಿರುವುದು ಬಹಳ ದುಃಖಕರ ಸಂಗತಿ, ಜೀವ ಕಳೆದುಕೊಂಡ ಎಲ್ಲಾ ನಾಗರಿಕರಿಗೆ ಸೈನಿಕ ಅಕಾಡೆಮಿಯ ಪುಟಾಣಿ ಮಕ್ಕಳಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ವೇಳೆ ಮಾಜಿ ಕಾಮಾಂಡೋ ಮತ್ತು ಸೈನಿಕ ಅಕಾಡೆಮಿಯ ಸಂಸ್ಥಾಪಕ ಶ್ರೀಧರ ಸಿ ಎಂ ಮಾತನಾಡಿ,ನಾನು ಕೂಡ ಆ ಒಂದು ಸುಂದರವಾದ ಪ್ರದೇಶದಲ್ಲಿ 3 ತಿಂಗಳು ಕರ್ತವ್ಯ ನಿರ್ವಹಿಸಿದ್ದೇನೆ, ಈ ಪ್ರದೇಶ ಜನ ಸಾಮಾನ್ಯರಿಗೆ ಹೊರ ರಾಜ್ಯದ ನಾಗರಿಕರಿಗೆ ಕಣ್ತುಂಬುವ ಪ್ರಶಾಂತವಾಗಿರುವ ಪ್ರದೇಶವಾಗಿದೆ, ಇಂತಹ ಸುಂದರವಾದ ಪ್ರದೇಶದ ಸವಿರುಚಿಯನ್ನು ಸವಿಯಲೇಬೇಕು, ಆದರೆ ಮ್ಯಾನ್ ಮೇಡ್ ಮೆಷಿನ್ ಟೆರರಿಸ್ಟ್ ಗಳಿಗೆ ಕೊನೆ ಯಾವಾಗ ಎಂದು ಪ್ರಶ್ನಿಸಿದರು.

ಈ ಉಗ್ರವಾದಿಗಳು ಮನುಷ್ಯ ರೂಪಿಸಿರುವ ಮಷೀನ್ ಆಗಿರುತ್ತವೆ, ಅವುಗಳಿಗೆ ಮನುಷ್ಯನ ಬೆಲೆ ಗೊತ್ತೇ ಇರಲ್ಲ, ಇಂತಹ ಮಷೀನ್ ಗಳನ್ನು ಗುಪ್ತ ಜಾಗದಲ್ಲಿ ತಯಾರಿಸುತ್ತಾರೆ, ಇಂತಃ ಮಷೀನ್ ಗಳಿಗೆ ಪ್ರಪಂಚ, ಮನುಷ್ಯನ ಜೀವ, ಬಾಂಧವ್ಯ ಏನು ಗೊತ್ತಿರುವುದಿಲ್ಲ, ಇರುವ ಮನುಷ್ಯನ ಸುಖವನ್ನು ಬಿಟ್ಟು ಕಾಣದ ಸ್ವರ್ಗವನ್ನು ಹುಡುಕುತ್ತಾರೆ ಎಂದು ಹೇಳಿದರು.

ಧರ್ಮ ಜಾತಿಯೆಂದು ದೇಶದೊಳಗೆ ಅನ್ಯಾಯ ಹೆಚ್ಚಾಗಿದೆ, ನಾವೆಲ್ಲರೂ ಒಂದೇ ಎಂಬ ಮನೋಭಾವನೆ ಯಾವಾಗ ಬರುತ್ತದೊ ಎಂದು ಬೇಸರ ದಲ್ಲೇ ಶ್ರೀಧರ್ ತಿಳಿಸಿದರು ‌

ಭಾರತೀಯ ಸೇನೇ ಒಂದಕ್ಕೆ ಪರಿಹಾರ ಹತ್ತು ತಲೆ ತಂದೇ ತರುತ್ತದೆ, ಪಾಕಿಸ್ತಾನ ಬೇಗನೆ ಕುಗ್ಗುತ್ತದೆ ಇದು ಸತ್ಯ ಎಂದು ನುಡಿದರು.

ಸೈನಿಕ ಅಕಾಡೆಮಿಯ ಪುಟಾಣಿ ಮಕ್ಕಳಿಂದ ಶ್ರದ್ಧಾಂಜಲಿ Read More

ಸೈನಿಕ ಅಕಾಡೆಮಿಯಲ್ಲಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ

ಮೈಸೂರು: ಮೈಸೂರಿನ ಬೆಳವಾಡಿಯಲ್ಲಿರುವ ಸೈನಿಕ ಅಕಾಡೆಮಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಭಕ್ತಿ ಪೂರ್ವಕವಾಗಿ ಆಚರಿಸಲಾಯಿತು.

ಇದೆ ಸಂದರ್ಭದಲ್ಲಿ ಹಿಂದೂ ಮಹತ್ವವನ್ನು ಚಿಕ್ಕವಯಸ್ಸಿನಿಂದಲೇ ತನ್ನ ತಾಯಿಯಿಂದ ಅರಿತು ರಾಜ ಮನತನವನ್ನು ಬಿಟ್ಟು ಹಿಂದೂ ಸೇವಕನಾಗಿ ಹಿಂದುತ್ವವನ್ನು ಉಳಿಸಿ ಬೆಳೆಸಿದ ವೀರ ಶಿವಾಜಿ ಮಹಾರಾಜರು ಎಂದು ಏನ್ ಎಸ್ ಜಿ ಬ್ಲಾಕ್ ಕ್ಯಾಟ್ ಕಮಾಂಡೋ ಮತ್ತು ಸೈನಿಕ ಅಕಾಡೆಮಿ ಸಂಸ್ಥಾಪಕರಾದ ಶ್ರೀಧರ ಸಿ ಎಂ ತಿಳಿಸಿದರು.

ಈ ಸಂಧರ್ಭದಲ್ಲಿ ಅಧ್ಯಾಪಕರು ವಿಜಯ್ ಕುಮಾರ್ ಮತ್ತು ಭಾವಿ ಸೈನಿಕರು ಉಪಸ್ಥಿತರಿದ್ದರು.

ಸೈನಿಕ ಅಕಾಡೆಮಿಯಲ್ಲಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ Read More

ರಕ್ಷಣಾ ಇಲಾಖೆಗೆ ಸಂಬಂಧಿಸಿದಂತೆ ವಸತಿ ತರಬೇತಿ ಕೇಂದ್ರ ಮೈಸೂರಿನಲ್ಲಿರುವುದು ಹೆಮ್ಮೆ-ಮಹೇಂದ್ರ.ಸಿ ಕೆ

ಮೈಸೂರು: ಮೈಸೂರಿನ ಬೆಳವಾಡಿಯಲ್ಲಿರುವ ಸೈನಿಕ ಅಕಾಡೆಮಿನಲ್ಲಿ ಸುಮಾರು ಮೂರು ತಿಂಗಳಿಂದ ತರಬೇತಿ ಪಡೆದು ಪರೀಕ್ಷೆ ಬರೆಯಲು ತೆರಳುತ್ತಿರುವ ಅಭ್ಯರ್ಥಿಗಳಿಗೆ ಶುಭ ಕೋರಲಾಯಿತು.

ಅಭ್ಯರ್ಥಿಗಳಿಗೆ ಶುಭವಾಗಲೆಂದು ಬೆಳಿಗ್ಗೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆಯಲಾಯಿತು.

ಸಂಜೆ ಸೈನಿಕ ಅಕಾಡೆಮಿಯಲ್ಲಿ ಮೈಸೂರು ಪತ್ರಿಕಾ ಸಂಘದ ಮಾಜಿ ಅಧ್ಯಕ್ಷರಾದ ಮಹೇಂದ್ರ.ಸಿ ಕೆ ಅವರ ಉಪಸ್ಥಿತಿಯಲ್ಲಿ ಸ್ಪರ್ಧಾರ್ಥಿಗಳಿಗೆ ಶುಭಕೋರುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಮಹೇಂದ್ರ.ಸಿ ಕೆ ಅವರು ಪರೀಕ್ಷೆಗೆ ಸಂಬಂಧಿಸಿದಂತೆ ಮಕ್ಕಳಿಗೆ ಆತ್ಮವಿಶ್ವಾಸ ತುಂಬಿದರು.

ಧಕ್ಷಿಣ ಭಾರತದಲ್ಲಿ ಈ ತರಹ ರಕ್ಷಣಾ ಇಲಾಖೆಗೆ ಸಂಬಂಧಿಸಿದಂತೆ ವಸತಿ ತರಬೇತಿ ಕೇಂದ್ರ ಇರುವುದು ಹೆಮ್ಮೆಯ‌ ವಿಷಯವಾಗಿದೆ, ಈ ಸಂಸ್ಥೆಯಿಂದ 361 ಅಭ್ಯರ್ಥಿಗಳು ರಕ್ಷಣಾ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವುದು ಒಂದು ದೊಡ್ಡ ಸಾಧನೆ ಎಂದು ಶ್ಲಾಘಿಸಿದರು.

ಇಂತಹ ಸಂಸ್ಥೆಯಲ್ಲಿ ನೀವು ತರಬೇತಿ ಪಡೆದಿರುವುದು ನಿಜವಾಗಿಯೂ ಶ್ಲಾಘನೀಯ, ನೀವೆಲ್ಲರೂ ಪರೀಕ್ಷೆ ಬರೆದು ಆಯ್ಕೆ ಆದಮೇಲೆ ನಿಮ್ಮೆಲ್ಲರನ್ನೂ ನಾನೇ ಬಂದು ಸನ್ಮಾನಿಸುತ್ತೇನೆ ಎಂದು ವಿಶ್ವಾಸ ನೀಡಿದರು.

ಇದೇ‌ ವೇಳೆ ಸೈನಿಕ್ ಅಕಾಡೆಮಿಯ ಎಲ್ಲಾ ಅಧ್ಯಾಪಕರು ಸ್ಪರ್ಧಾರ್ಥಿಗಳಿಗೆ ಪರೀಕ್ಷೆಯ ಬಗ್ಗೆ ವಿಶ್ವಾಸ ತುಂಬಿದರು.

ಸೈನಿಕ್ ಅಕಾಡೆಮಿಯ ಸಂಸ್ಥಾಪಕರಾದ ಮಾಜಿ ಕಮಾಂಡೋ ಶ್ರೀಧರ್.ಸಿಎಂ ಅವರು ಕಳೆದ ಮೂರು ತಿಂಗಳಿನಿಂದ ನಮ್ಮಲ್ಲಿ ತರಬೇತಿ ಪಡೆದ ನಿಮ್ಮ ಪ್ರಯತ್ನ, ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ ಪರೀಕ್ಷೆ ಬರೆಯಲು ತಯಾರಾಗಿರುವ ನೀವು ಯುದ್ಧಕ್ಕೆ ಸಜ್ಜಾದ ಸೈನಿಕರಂತೆ,ನೀವೆಲ್ಲರೂ ಸೇನೆಗೆ ಆಯ್ಕೆಯಾಗಿ ಎಂದು ಶುಭ ಕೋರಿದರು,

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಹೇಂದ್ರ.ಸಿ ಕೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಹ ಸಂಸ್ಥಾಪಕಿ ಅನಿತಾ ಶ್ರೀಧರ, ಅಧ್ಯಾಪಕರಾದ ರವಿ, ವಿಜಯ್, ನಮ್ರತಾ, ಮಲ್ಲಿಕಾರ್ಜುನ, ಶ್ರೀಲಕ್ಷ್ಮಿ ಹಾಗೂ ಸಿಬ್ಬಂದಿ, ಸಹ ಸಿಬ್ಬಂದಿ ದಿಲೀಪ್, ಚೇತನ್, ಉಪಸ್ಥಿತರಿದ್ದರು.

ರಕ್ಷಣಾ ಇಲಾಖೆಗೆ ಸಂಬಂಧಿಸಿದಂತೆ ವಸತಿ ತರಬೇತಿ ಕೇಂದ್ರ ಮೈಸೂರಿನಲ್ಲಿರುವುದು ಹೆಮ್ಮೆ-ಮಹೇಂದ್ರ.ಸಿ ಕೆ Read More

ಭವಿಷ್ಯದ ಸೈನಿಕರಿಂದ ನೇತಾಜಿ ಜನ್ಮ ದಿನಾಚರಣೆ

ಮೈಸೂರು: ಮೈಸೂರಿನ ಬೆಳವಾಡಿ
ಸಿಲಿಕಾನ್ ವ್ಯಾಲಿ ಬಡಾವಣೆಯಲ್ಲಿ ಸೈನಿಕ ಅಕಾಡೆಮಿ ವತಿಯಿಂದ ಭವಿಷ್ಯದ ಸೈನಿಕರೊಂದಿಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 128 ನೇ
ಜನ್ಮ ಜಯಂತಿಯನ್ನು ಆಚರಿಸಲಾಯಿತು.

ಈ ವೇಳೆ ಮಾಜಿ ಕಮಾಂಡೋ ಮತ್ತು ಸೈನಿಕ ಅಕಾಡೆಮಿ ಸಂಸ್ಥಾಪಕರಾದ ಶ್ರೀಧರ ಸಿ ಎಂ ರವರು ಮಾತನಾಡಿ, ಬೋಸ್ ಜಿ ಅವರು ಭಾರತದ ಮೊದಲ ಸೇನಾಧ್ಯಕ್ಷರು.ಇದನ್ನು ಹೇಳಲು ನನಗೆ ಖುಷಿ ಎಂದು ತಿಳಿಸಿದರು.

ನೇತಾಜಿ ಯಾವುದೇ ಸರ್ಕಾರದ ಸಹಾಯ ಪಡೆಯದೇ 25 ಸಾವಿರಕ್ಕೂ ಹೆಚ್ಚು ಸೈನಿಕರನ್ನು ತಯಾರಿಸಿ ಬ್ರಿಟಿಷರ ವಿರುದ್ದ ಯುದ್ಧ ಘೋಷಣೆ ಮಾಡಿ ಬ್ರಿಟಿಷರಿಗೆ ನಡುಕ ಉಂಟುಮಾಡಿದ್ದರು, ಇಂತಹ ಮಹಾ ಪರಾಕ್ರಮಿಯ ಬಗ್ಗೆ ಎಷ್ಟು ಹೇಳಿದರು ಸಾಲದು, ಒಟ್ಟಾರೆ ಬ್ರಿಟಿಷರು ಭಾರತ ಬಿಟ್ಟು ತೊಲುಗಲು ಮುಖ್ಯ ಕಾರಣ ಕ್ರಾಂತಿಕಾರಿ ಸುಭಾಷ್ ಚಂದ್ರ ಬೋಸ್ ಎಂದು ಶ್ರೀಧರ ಸಿ ಎಂ ತಿಳಿಸಿದರು.

ಭವಿಷ್ಯದ ಸೈನಿಕರಿಂದ ನೇತಾಜಿ ಜನ್ಮ ದಿನಾಚರಣೆ Read More

ಸೈನಿಕ ಅಕಾಡೆಮಿಯಲ್ಲಿ ಎಸ್ ಎಂ ಕೃಷ್ಣ ಅವರಿಗೆ ಶ್ರದ್ಧಾಂಜಲಿ

ಮೈಸೂರು: ಮೈಸೂರಿನ ಸೈನಿಕ ಅಕಾಡೆಮಿಯಲ್ಲಿ ದೇಶ ರಕ್ಷಣೆಗಾಗಿ ಸೇರಲು ತರಬೇತಿ ಪಡೆದುಕೊಳ್ಳುತ್ತಿರುವ ಭವಿಷ್ಯದ ಸೈನಿಕರು ಮಾಜಿ ಮುಖ್ಯಮಂತ್ರಿ ಎಸ್. ಎಂ ಕೃಷ್ಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾಜಿ ಕಮಾಂಡೋ ಮತ್ತು ಸೈನಿಕ ಅಕಾಡೆಮಿ ಸಂಸ್ಥಾಪಕರು ಶ್ರೀಧರ ಸಿ ಎಂ, ಅಧ್ಯಾಪಕರಾದ ವಿಜಯ ಕುಮಾರ್ ಮತ್ತು ಅಕಾಡೆಮಿಯ ಅಭ್ಯರ್ಥಿಗಳು ಉಪಸ್ಥಿತರಿದ್ದರು.

ಶ್ರೀಧರ ಸಿ ಎಂ‌ ಅವರು ಎಸ್.ಎಂ ಕೃಷ್ಣ ಕುರಿತು ಮಾತನಾಡಿ ಅವರು ಮುಖ್ಯ ಮಂತ್ರಿಯಾಗಿ ಮಾಡಿರುವ‌ ಅಭಿವೃದ್ಧಿ ಕಾರ್ಯಗಳನ್ನು ತಿಳಿಸಿಕೊಟ್ಟರು.

ಸೈನಿಕ ಅಕಾಡೆಮಿಯಲ್ಲಿ ಎಸ್ ಎಂ ಕೃಷ್ಣ ಅವರಿಗೆ ಶ್ರದ್ಧಾಂಜಲಿ Read More