250ನೇ ಸೇವಾ ಸಂಭ್ರಮದ ಪೋಸ್ಟರ್ ಬಿಡುಗಡೆಗೊಳಿಸಿದ ಸಾ.ರಾ. ಮಹೇಶ್
ಮೈಸೂರು: ಎಸ್ ಪ್ರಕಾಶ್ ಪ್ರಿಯ ದರ್ಶನ್ ಸ್ನೇಹ ಬಳಗದ 250ನೇ ಸೇವಾ ಸಂಭ್ರಮದ ಪೋಸ್ಟರ್ ಅನ್ನು ಮಾಜಿ ಸಚಿವ ಸಾ.ರಾ. ಮಹೇಶ್ ಬಿಡುಗಡೆಗೊಳಿಸಿದರು.
ಈ ವೇಳೆ ಮಾತನಾಡಿದ ಸಾ.ರಾ. ಮಹೇಶ್ ಅವರು 250ನೇ ಸಂಭ್ರಮಾಚರಣೆ ಯಲ್ಲಿರುವ ಎಸ್ ಪ್ರಕಾಶ್ ಪ್ರಿಯಾ ದರ್ಶನ್ ಸ್ನೇಹ ಬಳಗವು ಪ್ರತಿ ಭಾನುವಾರ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಆಶ್ರಮ ವಿದ್ಯಾರ್ಥಿ ನಿಲಯಗಳಲ್ಲಿ ಹಣ್ಣು ಹಂಪಲು,ನೋಟ್ ಬುಕ್,ವೃದ್ಧರಿಗೆ ಸೀರೆ ಹೀಗೆ ಅನೇಕ ಸೇವಾ ಕಾರ್ಯ ನಡೆಸಿಕೊಂಡು ಬಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಭಾನುವಾರ 250 ನೆಯದಾಗಿದ್ದು ನಿಜಕ್ಕೂ ಈ ಸ್ನೇಹ ಬಳಗದ ಸೇವೆಯು ಶ್ಲಾಘನೀಯ ಕಾರ್ಯ, ಈ ಸ್ನೇಹ ಬಳಗದಿಂದ ಕೆಆರ್ ಕ್ಷೇತ್ರದ ಜನತೆಗೆ ಇನ್ನೂ ಹೆಚ್ಚಿನ ಸೇವೆ ಸಿಗಲಿ ಎಂದು ಸಾ.ರಾ.ಮಹೇಶ್ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಜಿ.ಡಿ. ಹರೀಶ ಗೌಡ, ವಿಧಾನಪರಿಷತ್ ಸದಸ್ಯ ಸಿ.ಎನ್ ಮಂಜೇಗೌಡ, ಮಾಜಿ ಶಾಸಕರಾದ ಅಶ್ವಿನ್ ಕುಮಾರ್, ಮಹದೇವ್, ಮಾಜಿ ಮಹಾಪೌರರಾದ ಆರ್ ಲಿಂಗಪ್ಪ, ಎಂ ಜೆ ರವಿಕುಮಾರ್, ರಾಜ್ಯ ವಕ್ತಾರರಾದ ರವಿಚಂದ್ರ ಗೌಡ, ಮೈಸೂರು ನಗರ ಜೆಡಿಎಸ್ ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್, ಲೇಕ್ ಅಂಡ್ ಪೈಂಟ್ ಮಾಜಿ ಅಧ್ಯಕ್ಷ ಕೃಷ್ಣ, ನಗರ ಪಾಲಿಕೆ ಮಾಜಿ ಸದಸ್ಯರುಗಳಾದ ಎಸ್ ಬಿ ಎಂ ಮಂಜು, ಅಶ್ವಿನಿ ಅನಂತು,ಶೋಭಾ, ಕೆ ಆರ್ ಕ್ಷೇತ್ರದ ಅಧ್ಯಕ್ಷ ಬಿ.ಜಿ. ಸಂತೋಷ್, ನರಸಿಂಹರಾಜ ಬ್ಲಾಕ್ ಅಧ್ಯಕ್ಷರುಗಳಾದ ಎಂ ಎನ್ ರಾಮು, ರಿಜ್ವಾನ್ ಮತ್ತಿತರರು ಹಾಜರಿದ್ದರು.
250ನೇ ಸೇವಾ ಸಂಭ್ರಮದ ಪೋಸ್ಟರ್ ಬಿಡುಗಡೆಗೊಳಿಸಿದ ಸಾ.ರಾ. ಮಹೇಶ್ Read More





