ಹಿರಿಯ ನಾಗರಿಕರಿಗೆ ಹಣ್ಣು ಹಂಪಲು ವಿತರಿಸಿ ಅಪ್ಪು ಹುಟ್ಟು ಹಬ್ಬ ಆಚರಣೆ

ಮೈಸೂರು: ನಗರದ ಶ್ರೀರಾಂಪುರ, ಶಿವನ ದೇವಸ್ಥಾನದ ಬಳಿ ಇರುವ ಬೆಳಕು ವಾತ್ಸಲ್ಯದಾಮದ ಹಿರಿಯ ನಾಗರಿಕರಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗ ಹಣ್ಣು, ಹಂಪಲು ದಿನಸಿ ಸಾಮಗ್ರಿ ವಿತರಿಸಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಹುಟ್ಟುಹಬ್ಬ ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಜೆಡಿಎಸ್ ಕಾರ್ಯಧ್ಯಕ್ಷ ಎಸ್ ಪ್ರಕಾಶ್ ಪ್ರಿಯದರ್ಶನ್,
ಕನ್ನಡ ಸಿನಿಮಾರಂಗದ ಮೇರು ಪ್ರತಿಭೆ ಅಪ್ಪು ಅವರ ಸಮಾಜ ಮುಖಿ ಚಿಂತನೆ ಎಲ್ಲರಿಗೂ ಮಾದರಿ ಯಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಸ್.ಪಿ.ಅಕ್ಷಯ್ ಪ್ರಿಯಾದರ್ಶನ್ ಅವರು ಪುನೀತ್ ರಾಜಕುಮಾರ್ ಅವರ ಭಾವಚಿತ್ರ ಹಿಡಿದು ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಬೆಳಕು ವಾತ್ಸಲ್ಯ ದಾಮದ ಮಂಗಳ, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್,ಛಾಯಾ,
ಗಾಯಕ ಯಶ್ವಂತ್ ಕುಮಾರ್, ರಾಜೇಶ್ ಕುಮಾರ್, ಮಹೇಶ್, ಶ್ರೀಧರ್, ಮಹದೇವ್ ಸ್ವಾಮಿ,ದತ್ತ, ಹರ್ಷಿತ್ ಎಸ್ ನಾಗೇಶ್ ಮತ್ತಿತರರು ಹಾಜರಿದ್ದರು.

ಹಿರಿಯ ನಾಗರಿಕರಿಗೆ ಹಣ್ಣು ಹಂಪಲು ವಿತರಿಸಿ ಅಪ್ಪು ಹುಟ್ಟು ಹಬ್ಬ ಆಚರಣೆ Read More

ವಿದ್ಯಾರ್ಥಿಗಳಲ್ಲಿ ಉತ್ತಮ ನಡವಳಿಕೆ ಇರಲಿ:ಪ್ರಕಾಶ್ ಪ್ರಿಯದರ್ಶನ

ಮೈಸೂರು: ವಿದ್ಯಾರ್ಥಿಗಳು ಶೈಕ್ಷಣಿಕ
ಜೀವನದಲ್ಲಿ ಸಹನೆ, ಉತ್ತಮ ನಡವಳಿಕೆ ಹೊಂದಬೇಕು ಎಂದು ಜೆಡಿಎಸ್ ಕಾರ್ಯಧ್ಯಕ್ಷ ಎಸ್ ಪ್ರಕಾಶ್ ಪ್ರಿಯದರ್ಶನ್ ಸಲಹೆ ನೀಡಿದರು.

ನಗರದ ಎಂ.ಜಿ. ರಸ್ತೆಯಲ್ಲಿರುವ ಸಿ ಎಸ್ ಐ ಹಾರ್ಡಿಕ್ ಬಾಯ್ಸ್ ಹಾಸ್ಟೆಲ್ ವಿದ್ಯಾರ್ಥಿ ಗಳಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ 218ನೇ ವಾರದ ಹಣ್ಣುಗಳ ವಿತರಣಾ ಕಾರ್ಯಕ್ರಮದಲ್ಲಿ ಹಣ್ಣು, ಹಂಪಲು, ಹಾಗೂ ಲೇಖನಿ ಸಾಮಗ್ರಿಗಳನ್ನು ವಿತರಿಸಿ ಅವರು ಮಾತನಾಡಿರು.

ವಿದ್ಯಾರ್ಥಿಗಳಲ್ಲಿ ಶಿಸ್ತು ಬಹಳ ಮುಖ್ಯ. ಕಂಪನಿಗಳ ನಿರೀಕ್ಷೆಗೆ ತಕ್ಕಂತೆ ವಿದ್ಯಾರ್ಥಿಗಳು ರೂಪುಗೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಹಾಸ್ಟೆಲ್ ನ ದೇವೇಂದ್ರ ರತ್ನ, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್, ಭವ್ಯ,ಸುಬ್ರಮಣಿ, ಹಿರಿಯ ಕ್ರೀಡಾಪಟು ಮಹಾದೇವ, ರಾಜೇಶ್ ಕುಮಾರ್,ಶ್ರೀಧರ್, ಗಾಯಕ ಯಶ್ವಂತ್ ಕುಮಾರ್, ದತ್ತ,ಎಸ್.ಪಿ.ಅಕ್ಷಯ್ ಪ್ರಿಯಾದರ್ಶನ್, ಹರ್ಷಿತ್ ಎಸ್ ನಾಗೇಶ್ ಮತ್ತಿತರರು ಹಾಜರಿದ್ದರು.

ವಿದ್ಯಾರ್ಥಿಗಳಲ್ಲಿ ಉತ್ತಮ ನಡವಳಿಕೆ ಇರಲಿ:ಪ್ರಕಾಶ್ ಪ್ರಿಯದರ್ಶನ Read More

ರಮಾಬಾಯಿ ತ್ಯಾಗದ ಸಂಕೇತ: ಎಸ್ ಪ್ರಕಾಶ್ ಪ್ರಿಯಾದರ್ಶನ್

ಮೈಸೂರು: ಮಹಾ‌ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನದ ಯಶಸ್ಸಿನ ಹಿಂದೆ ರಮಾಬಾಯಿಯರ ತ್ಯಾಗ ದೊಡ್ಡದಿದೆ ಎಂದು‌ ಜೆಡಿಎಸ್ ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯದರ್ಶನ್ ಹೇಳಿದರು.

ಮೈಸೂರಿನ ಅರವಿಂದ ನಗರದ
ಜೆ ಎಸ್ ಎಸ್ ವೃದ್ಧಾಶ್ರಮದ ಹಿರಿಯ ನಾಗರಿಕರಿಗೆ ಎಸ್ ಪ್ರಕಾಶ್ ಪ್ರಿಯದರ್ಶನ್
ಸ್ನೇಹ ಬಳಗದ ವತಿಯಿಂದ ಹಣ್ಣು ಹಂಪಲು ಹಾಗೂ ದಿನಸಿ ಸಾಮಗ್ರಿಗಳನ್ನು ವಿತರಿಸುವ ಮೂಲಕ ರಮಾಬಾಯಿ ಅಂಬೇಡ್ಕರ್ ಅವರ 127 ನೇ ಜನ್ಮ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ರಮಾಬಾಯಿ ಅವರು ಒಬ್ಬ ತಾಯಿಯಾಗಿ, ಪತ್ನಿಯಾಗಿ, ಮಗಳಾಗಿ, ಸಹೋದರಿಯಾಗಿ, ಗೆಳತಿಯಾಗಿ, ಹಿತೆಷಿಯಾಗಿ ಅಂಬೇಡ್ಕರ್ ಜೀವನದಲ್ಲಿ ಸಾಥ್ ನೀಡಿದ್ದಾರೆ.ಇವರ ತ್ಯಾಗದ ಪ್ರತೀಕವಾಗಿಯೇ ಡಾ. ಬಾಬಾಸಾಹೇಬರು ವಿಶ್ವ ಚೇತನವಾಗಿ ಹೊರಹೊಮ್ಮಿ ಇಡಿ ಜಗತ್ತಿನಲ್ಲಿಯೇ ಪ್ರಸಿದ್ದಿಯನ್ನು ಪಡೆದರು ಎಂದು ಬಣ್ಣಿಸಿದರು.

ರಮಾಬಾಯಿ ಬಾಬಾಸಾಹೇಬರ ಪ್ರತಿ ಕ್ಷಣದಲ್ಲೂ ಆಸರೆಯಾಗಿ ನಿಂತು ಆತ್ಮಸ್ಥೆರ್ಯವನ್ನು ತುಂಬಿದರು.ಆ ತಾಯಿ ಸ್ತ್ರೀ ಕುಲಕ್ಕೆ ಆದರ್ಶವಾಗಿದೆ. ಒಬ್ಬ ಪುರುಷ ಯಶಸ್ವಿಯಾಗಬೇಕಾದರೆ ಒಬ್ಬ ಸ್ತ್ರೀ ಪಾತ್ರ ಅತ್ಯವಶ್ಯಕವಾಗಿದೆ ಸ್ತ್ರೀ ಇಲ್ಲದಿದ್ದರೆ ಈ ಭೂಮಿಗೆ ಅಸ್ತಿತ್ವವೇ ಇಲ್ಲದಂತಾಗುತ್ತದೆ ಎಂದು ಎಸ್ ಪ್ರಕಾಶ್ ಪ್ರಿಯಾದರ್ಶನ್ ತಿಳಿಸಿದರು.

ಈ ವೇಳೆ ಪತ್ರಿಕ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್, ಸುಬ್ರಮಣಿ,ವೀರಭದ್ರ ಸ್ವಾಮಿ, ಛಾಯಾ,ಯಶ್ವಂತ್ ಕುಮಾರ್,
ಮಹದೇವ್, ಮಹೇಶ್, ಮಹದೇವಸ್ವಾಮಿ,
ಎಸ್.ಪಿ.ಅಕ್ಷಯ್ ಪ್ರಿಯಾದರ್ಶನ್, ಹರ್ಷಿತ್ ಎಸ್ ನಾಗೇಶ್ ಮತ್ತಿತರರು ಹಾಜರಿದ್ದರು.

ರಮಾಬಾಯಿ ತ್ಯಾಗದ ಸಂಕೇತ: ಎಸ್ ಪ್ರಕಾಶ್ ಪ್ರಿಯಾದರ್ಶನ್ Read More

ಎಸ್ ಪ್ರಕಾಶ್ ಪ್ರಿಯದರ್ಶನ್ ಸ್ನೇಹ ಬಳಗದಿಂದ ಲೇಖನಿ,ದಿನಸಿ ವಿತರಣೆ

ಮೈಸೂರು: ಮೈಸೂರಿನ ‌ಎಸ್ ಪ್ರಕಾಶ್ ಪ್ರಿಯದರ್ಶನ್ ಸ್ನೇಹ ಬಳಗದ‌ ವತಿಯಿಂದ
ಎಂದಿನಂತೆ ಸಮಾಜಸೇವೆ ಮುಂದುವರಿದಿದ್ದು,ಹಣ್ಣುಹಂಪಲು, ಲೇಖನಿ ಹಾಗೂ ದಿನಸಿ ಸಾಮಗ್ರಿ ವಿತರಿಸಲಾಯಿತು.

ಮೈಸೂರಿನ ಎಂ.ಜಿ. ರಸ್ತೆಯಲ್ಲಿರುವ ಸಿ.ಎಸ್.ಐ. ಗರ್ಲ್ಸ್ ಬೋರ್ಡಿಂಗ್ ಹೋಮ್‌ ಬಂಧುಗಳಿಗೆ ಎಸ್ ಪ್ರಕಾಶ್ ಪ್ರಿಯದರ್ಶನ್ ಸ್ನೇಹ ಬಳಗದ ವತಿಯಿಂದ ಹಣ್ಣು, ಹಂಪಲು, ಲೇಖನಿ ಸಾಮಗ್ರಿ ಹಾಗೂ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮೈಸೂರು ನಗರ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್, ಪತ್ರಿಕ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್, ನಿಲಯ ಪಾಲಕಿ ಗೀತಾ, ಕಾಂಗ್ರೆಸ್ ಮುಖಂಡ ಆನಂದ್, ಬಿ.ಜೆ.ಪಿ. ಮುಖಂಡ ಪುರುಷೋತ್ತಮ್,ವೀರಭದ್ರ ಸ್ವಾಮಿ, ಛಾಯಾ,ಯಶ್ವಂತ್ ಕುಮಾರ್,ಮಹದೇವ್,ಶ್ರೀಧರ್ ,ಮಹೇಶ್,ವಿನಯ್, ಎಸ್.ಪಿ.ಅಕ್ಷಯ್ ಪ್ರಿಯಾದರ್ಶನ್, ಹರ್ಷಿತ್ ಎಸ್ ನಾಗೇಶ್ ಮತ್ತಿತರರು ಹಾಜರಿದ್ದರು.

ಎಸ್ ಪ್ರಕಾಶ್ ಪ್ರಿಯದರ್ಶನ್ ಸ್ನೇಹ ಬಳಗದಿಂದ ಲೇಖನಿ,ದಿನಸಿ ವಿತರಣೆ Read More

ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಸಂಗೊಳ್ಳಿ ರಾಯಣ್ಣ-ಪ್ರಕಾಶ್ ಪ್ರಿಯದರ್ಶನ್

ಮೈಸೂರು: ಕಿತ್ತೂರು ಸಂಸ್ಥಾನದ ರಕ್ಷಣೆಗೆ ನಿಂತ ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಶೂರ ಎಂದು ಜೆಡಿಎಸ್ ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯದರ್ಶನ್ ಬಣ್ಣಿಸಿದರು.

ನಗರದ ಕುವೆಂಪು ನಗರ ಎಂ ಬ್ಲಾಕ್ ನಲ್ಲಿರುವ ಬೆಳಕು ವಾತ್ಸಲ್ಯ ದಾಮದ ಹಿರಿಯ ನಾಗರಿಕರಿಗೆ ಎಸ್ ಪ್ರಕಾಶ್ ಪ್ರಿಯದರ್ಶನ್ ಸ್ನೇಹ ಬಳಗದ ವತಿಯಿಂದ ಹಣ್ಣು ಹಂಪಲು ಹಾಗೂ ದಿನಸಿ ಸಾಮಗಳನ್ನು ವಿತರಿಸುವ ಮೂಲಕ 76ನೇ ಗಣರಾಜ್ಯೋತ್ಸವ ಆಚರಿಸಿ, ವೀರ ಸೇನಾನಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಬಲಿದಾನ ಸ್ಮರಿಸಲಾಯಿತು.

ಈ ಕಾರ್ಯಕ್ರಮದ ವೇಳೆ ಮಾತನಾಡಿದ ಪ್ರಕಾಶ್ ಪ್ರಿಯದರ್ಶನ್,
ದೇಶದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಅನೇಕ ಮಹನೀಯರು ಪ್ರಾಣತ್ಯಾಗ ಮಾಡಿದ್ದು, ಅದರಲ್ಲಿ ರಾಯಣ್ಣನ ಪಾತ್ರ ಬಹಳ ಮಹತ್ವದಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸುಬ್ರಮಣಿ,ವೀರಭದ್ರ ಸ್ವಾಮಿ, ಯಶ್ವಂತ್ ಕುಮಾರ್,ಮಹದೇವ್, ಶ್ರೀಧರ್ ,ಮಹೇಶ್, ಎಸ್.ಪಿ.ಅಕ್ಷಯ್ ಪ್ರಿಯಾದರ್ಶನ್, ಹರ್ಷಿತ್ ಎಸ್ ನಾಗೇಶ್ ಮತ್ತಿತರರು ಹಾಜರಿದ್ದರು.

ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಸಂಗೊಳ್ಳಿ ರಾಯಣ್ಣ-ಪ್ರಕಾಶ್ ಪ್ರಿಯದರ್ಶನ್ Read More

ಸ್ವಾಮಿ ವಿವೇಕಾನಂದರು ಯುವ ಜನಾಂಗಕ್ಕೆ ಪ್ರೇರಣೆ: ಎಸ್ ಪ್ರಕಾಶ್ ಪ್ರಿಯದರ್ಶನ್

ಮೈಸೂರು: ಸ್ವಾಮಿ ವಿವೇಕಾನಂದರು ಜಗತ್ತೇ ಒಂದು ಕುಟುಂಬ ಎಂಬ ಸಂದೇಶವನ್ನು ನೀಡಿ ವಿಶ್ವ ಶಾಂತಿಯ ಕಲ್ಪನೆಯನ್ನು ನೀಡಿದ ಮಹಾನ್ ವ್ಯಕ್ತಿ ಎಂದು ಜೆಡಿಎಸ್ ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯದರ್ಶನ್ ಹೇಳಿದರು.

ಸರಸ್ವತಿಪುರಂನಲ್ಲಿರುವ ಮಹಾಬೋಧಿ ವಿದ್ಯಾರ್ಥಿ ನಿಲಯದ
ವಿದ್ಯಾರ್ಥಿಗಳಿಗೆ ಎಸ್ ಪ್ರಕಾಶ್ ಪಿಯದರ್ಶನ್ ಸ್ನೇಹ ಬಳಗದ ವತಿಯಿಂದ ಹಣ್ಣು ಹಂಪಲು ಹಾಗೂ ದಿನಸಿ ಸಾಮಗ್ರಿಗಳನ್ನು ವಿತರಿಸಿ
ಸ್ವಾಮಿ ವಿವೇಕಾನಂದ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದ ವೇಳೆ ಅವರು ಮಾತನಾಡಿದರು.

ಸ್ವಾಮಿ ವಿವೇಕಾನಂದರು ಭಾರತ ದೇಶದ ಯುವ ಜನಾಂಗಕ್ಕೆ ಮತ್ತು ದೇಶದ ಜನರಿಗೆ ಪ್ರೇರಣಾದಾಯಕ ವ್ಯಕ್ತಿ. ಕೇವಲ 39 ವರ್ಷ ಬದುಕಿದ ವಿವೇಕಾನಂದರು ಭಾರತದ ಎಲ್ಲಾ ಕ್ಷೇತ್ರಗಳಿಗೂ ಅನ್ವಯ ಆಗುವ ರೀತಿಯ ಸಂದೇಶವನ್ನ ನೀಡಿದ್ದಾರೆ
ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಹಾಬೋಧಿ ನಿಲಯ ಪಾಲಕ ವಿವೇಕ್, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್ , ಸುಬ್ರಮಣಿ,ವೀರಭದ್ರ ಸ್ವಾಮಿ, ಮಹದೇವ್,ಮಹೇಶ್, ಎಸ್ ಪಿ ಅಕ್ಷಯ್ ಪ್ರಿಯಾದರ್ಶನ್, ಹರ್ಷಿತ್ ಎಸ್ ನಾಗೇಶ್ ಮತ್ತಿತರರು ಹಾಜರಿದ್ದರು.

ಸ್ವಾಮಿ ವಿವೇಕಾನಂದರು ಯುವ ಜನಾಂಗಕ್ಕೆ ಪ್ರೇರಣೆ: ಎಸ್ ಪ್ರಕಾಶ್ ಪ್ರಿಯದರ್ಶನ್ Read More

ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ದಿನದರ್ಶಿಕೆ ಬಿಡುಗಡೆ

ಮೈಸೂರು: ಮೈಸೂರಿನ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗ 2025ರ ದಿನದರ್ಶಿಕೆ ಹೊರತಂದಿದೆ.

ಹಿರಿಯ ಸಮಾಜ ಸೇವಕರಾದ ಕೆ.ರಘುರಾಮ ವಾಜಪೇಯಿ, ನಗರ ಪಾಲಿಕೆ ಮಾಜಿ ಸದಸ್ಯರಾದ ಮಾ.ವಿ. ರಾಮ್ ಪ್ರಸಾದ್ ಡಾ: ಬಿ. ಎಸ್. ಪ್ರೇಮ ಕುಮಾರಿ ಅವರು ದಿನದರ್ಶಿಕೆ ಬಿಡುಗಡೆ ಮಾಡಿ ಶುಭ‌ ಹಾರಿಸಿದರು.

ಮೈಸೂರು ನಗರ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್, ಕೆ. ಎಂ. ಪಿ. ಕೆ. ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್,ನಿರೂಪಕ ಅಜಯ್ ಶಾಸ್ತ್ರಿ, ವಕೀಲ ಸಿ ಜೆ ರಾಘವೇಂದ್ರ,ಸುಚಿಂದ್ರ, ಮಿರ್ಲೆ ಪಣೀಶ್, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್, ನಿಲಯ ಪಾಲಕಿ ರೇವತಿ ,ವೀರಭದ್ರ ಸ್ವಾಮಿ, ಮಹದೇವ್, ಶ್ರೀಧರ್ ,ಮಹೇಶ್, ರಾಜೇಶ್ ಕುಮಾರ್, ನವನೀತ್ ಕುಮಾರ್, ಜಯಮ್ಮ , ಎಸ್ ಪಿ ಅಕ್ಷಯ್ ಪ್ರಿಯಾದರ್ಶನ್, ಹರ್ಷಿತ್ ಎಸ್ ನಾಗೇಶ್ ಮತ್ತಿತರರು ಹಾಜರಿದ್ದು ಬಳಗಕ್ಕೆ ಶುಭ ಕೋರಿದರು.

ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ದಿನದರ್ಶಿಕೆ ಬಿಡುಗಡೆ Read More

ದೃಷ್ಟಿ ವಿಕಲಚೇತನರಿಗೆ ದಿನಸಿ ಸಾಮಗ್ರಿ, ಹಣ್ಣು ವಿತರಿಸಿ‌ ವಿಷ್ಣು ಸ್ಮರಣೆ

ಮೈಸೂರು: ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದಿಂದ ದೃಷ್ಟಿ ವಿಕಲಚೇತನರಿಗೆ ದಿನಸಿ ಸಾಮಗ್ರಿ, ಹಣ್ಣು ವಿತರಿಸುವ ಮೂಲಕ ವಿಷ್ಣುವರ್ಧನ್ ಅವರ 15ನೇ ವರ್ಷದ ಪುಣ್ಯಸ್ಮರಣೆ ಮಾಡಲಾಯಿತು.

ಮೈಸೂರಿನ ರಾಮಾನುಜ ರಸ್ತೆಯಲ್ಲಿರುವ ಜೆಎಸ್ಎಸ್ ಸಂಸ್ಥೆಯವರ ದೃಷ್ಟಿ ದೋಷವುಳ್ಳ ಉದ್ಯೋಗಸ್ಥ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರ ನಿಲಯದ ಬಂಧುಗಳಿಗೆ ಹಣ್ಣು ಹಂಪಲು ಹಾಗೂ ದಿನಸಿ ಸಾಮಗ್ರಿಗಳನ್ನು‌ ವಿತರಿಸಿ ವಿಷ್ಣುವರ್ಧನ್ ಅವರನ್ನು ಸ್ಮರಿಸಲಾಯಿತು.

ಈ ವೇಳೆ ಮಾತನಾಡಿದ ಜೆಡಿಎಸ್ ಕಾರ್ಯದಕ್ಷ ಎಸ್ ಪ್ರಕಾಶ್ ಪ್ರಿಯದರ್ಶನ್,
ಕನ್ನಡಿಗರ ಕಣ್ಮಣಿ ಡಾ. ವಿಷ್ಣುವರ್ಧನ್ ಮಾನವೀಯ ಮೌಲ್ಯಗಳ ಹರಿಕಾರರಾಗಿ, ಉತ್ತಮ ನಟನೆಯ ಮೂಲಕ ಜನ ಮಾನಸದಲ್ಲಿ ಹಸಿರಾಗಿದ್ದಾರೆ ಎಂದು ಸ್ಮರಿಸಿದರು.

ಈ ಸಂದರ್ಭದಲ್ಲಿ ನಿಲಯ ಪಾಲಕಿ ಅನಿತಾ, ಡಾ:ಬಿ. ಎಸ್. ಪ್ರೇಮ ಕುಮಾರಿ, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್ ,ವೀರಭದ್ರ ಸ್ವಾಮಿ, ಮಹದೇವ್,ಯಶ್ವಂತ್ ಕುಮಾರ್,ಮಹೇಶ್, ರಾಜೇಶ್ ಕುಮಾರ್, ನವನೀತ್ ಕುಮಾರ್, ಜಯಮ್ಮ, ಎಸ್ ಪಿ ಅಕ್ಷಯ್ ಪ್ರಿಯಾದರ್ಶನ್, ಹರ್ಷಿತ್ ಎಸ್ ನಾಗೇಶ್ ಮತ್ತಿತರರು ಹಾಜರಿದ್ದರು.

ದೃಷ್ಟಿ ವಿಕಲಚೇತನರಿಗೆ ದಿನಸಿ ಸಾಮಗ್ರಿ, ಹಣ್ಣು ವಿತರಿಸಿ‌ ವಿಷ್ಣು ಸ್ಮರಣೆ Read More

ಡಾ. ವೀರೇಂದ್ರ ಹೆಗಡೆ ಜನ್ಮದಿನ ಪ್ರಯುಕ್ತವೃದ್ಧಾಶ್ರಮದಲ್ಲಿ ಸೇವಾ ಕಾರ್ಯ

ಮೈಸೂರು: ‌ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆ ಅವರ 76 ನೇ ಜನ್ಮದಿನೋತ್ಸವ ಪ್ರಯುಕ್ತ ಎಸ್ ಪ್ರಕಾಶ್ ಪ್ರಿಯದರ್ಶನ್ ಸ್ನೇಹ ಬಳಗದ ವತಿಯಿಂದ ಸೇವಾ‌ ಕಾರ್ಯ ಹಮ್ಮಿಕೊಳ್ಳಲಾಯಿತು.

ನಗರದ ಶ್ರೀರಾಂಪುರದಲ್ಲಿರುವ ಬೆಳಕು ವಾತ್ಸಲ್ಯದಾಮದ ಹಿರಿಯ ನಾಗರಿಕರಿಗೆ ಸೀರೆ , ಹಣ್ಣು ಹಂಪಲು ಹಾಗೂ ಗೃಹ ಉಪಯೋಗಿ ವಸ್ತುಗಳನ್ನು ನೀಡುವ ಮೂಲಕ ಪರಮಪೂಜ್ಯ ಡಾ. ವೀರೇಂದ್ರ ಹೆಗಡೆ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಜೆಡಿಎಸ್ ಕಾರ್ಯದಕ್ಷ ಎಸ್ ಪ್ರಕಾಶ್ ಪ್ರಿಯದರ್ಶನ ಅವರು,ಐವತ್ತು ವರ್ಷಗಳಿಗೂ ಹೆಚ್ಚು ಕಾಲದಿಂದ ಧರ್ಮಸ್ಥಳ ಶ್ರೀ ಕ್ಷೇತ್ರದಲ್ಲಿ ಧರ್ಮಾಧಿಕಾರಿಯಾಗಿರುವ ಡಾ. ಡಿ ವೀರೇಂದ್ರ ಹೆಗ್ಗಡೆ ತಮ್ಮ ಭಕ್ತಿ, ಧರ್ಮಸೇವೆ ಮತ್ತು ಸಮಾಜಸೇವೆಗಳಿಂದ ಜನಜನಿತವಾಗಿದ್ದಾರೆ ಎಂದು ಹೇಳಿದರು.

ಶ್ರೀ ಕ್ಷೇತ್ರಕ್ಕೆ ಒಂದು ಭವ್ಯ ಕಳೆ ಮತ್ತು ಗೌರವ ತಂದುಕೊಟ್ಟ ಕೀರ್ತಿ ಅವರದ್ದು.
ಧರ್ಮಸ್ಥಳದ ಮಂಜುನಾಥನ ದರ್ಶನ ಮಾಡದ ಕನ್ನಡಿಗರು ಯಾರೂ ಇಲ್ಲ ಎಂದರೆ ಅತಿಶಯೋಕ್ತಿ ಎನಿಸಲಾರದು.

ಬಹುತೇಕ ಭಕ್ತರಿಗೆ ಧರ್ಮಸ್ಥಳದ ಮಂಜುನಾಥ ಎಂದರೆ ಗಾಢವಾದ ಭಕ್ತಿ ಮತ್ತು ನಂಬಿಕೆ. ಹಾಗೆಯೇ, ಧರ್ಮಾಧಿಕಾರಿ ವೀರಂದ್ರ ಹೆಗ್ಗಡೆ ಎಂದರೂ ಅಷ್ಟೇ ಗೌರವ,ಅವರು ಸಮುದಾಯ ಸೇವೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಆರೋಗ್ಯ, ಶಿಕ್ಷಣ ಮತ್ತು ಸಂಸ್ಕೃತಿಕ ಕ್ಷೇತ್ರದಲ್ಲಿ ಅವರು ಮಾಡುತ್ತಿರುವ ಸೇವೆ ಶ್ರೇಷ್ಠ ಎಂದು ಬಣ್ಣಿಸಿದರು.

ಈ ಸಂದರ್ಭದಲ್ಲಿ ವಕೀಲರು, ಮೈಸೂರು ನಗರ ಬಿಜೆಪಿ ಉಪಾಧ್ಯಕ್ಷರಾದ ಸಿ ಕೆ ರುದ್ರಮೂರ್ತಿ, ಬೆಳಕು ವಾತ್ಸಲ್ಯದಾಮದ ಮಂಗಳ, ಗ್ಯಾರೇಜ್ ಸ್ವಾಮಿ, ಸುಬ್ರಹ್ಮಣ್ಯ, ವೀರಭದ್ರ ಸ್ವಾಮಿ, ಯಶ್ವಂತ್ ಕುಮಾರ್, ರಾಜೇಶ್ ಕುಮಾರ್, ಮಹೇಶ್, ಎಸ್ ಪಿ ಅಕ್ಷಯ್ ಪಿಯಾದರ್ಶನ , ಹರ್ಷಿತ್ ಎಸ್ ನಾಗೇಶ್, ಪೂರ್ವಿಕ,ಅಭಿ, ಚಂದನ್, ರಾಮ್ ಕುಮಾರ್, ಜೈರಾಮ್ ಮತ್ತಿತರರು ಹಾಜರಿದ್ದರು.

ಡಾ. ವೀರೇಂದ್ರ ಹೆಗಡೆ ಜನ್ಮದಿನ ಪ್ರಯುಕ್ತವೃದ್ಧಾಶ್ರಮದಲ್ಲಿ ಸೇವಾ ಕಾರ್ಯ Read More