ದಸರಾ: ಸಾಯಿಸಿರಿ ವೃದ್ಧಾಶ್ರಮಕ್ಕೆ ಸೀಲಿಂಗ್ ಫ್ಯಾನ್, ಹಣ್ಣು ಹಂಪಲು ವಿತರಣೆ

ಮೈಸೂರು: ಮೈಸೂರಿನ ಜೆ.ಪಿ. ನಗರದಲ್ಲಿರುವ ಸಾಯಿಸಿರಿ ವೃದ್ದಾಶ್ರಮದ ತಾಯಂದಿರಿಗೆ ನಾಡಹಬ್ಬ ದಸರಾ ಪ್ರಯುಕ್ತ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ವತಿಯಿಂದ ಸೀಲಿಂಗ್ ಫ್ಯಾನ್,ಹಣ್ಣು ಹಂಪಲು ವಿತರಿಸಲಾಯಿತು.

ಈ ವೇಳೆ ತಾಯಂದಿರ ಯೋಗಕ್ಷೇಮ ವಿಚಾರಿಸಿದ ಸ್ನೇಹ ಬಳಗದ ಸದಸ್ಯರು ದಸರಾ ಹಬ್ಬದ ಶುಭಾಶಯಗಳು ತಿಳಿಸಿ ಸೇವಾ ಸಂಭ್ರಮಾಚರಣೆ ಮಾಡಿದರು.

ಈ ಸಂದರ್ಭದಲ್ಲಿ ಮೈಸೂರು ನಗರ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್,ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್, ಛಾಯ,ಗಾಯಕ ಯಶವಂತ್ ಕುಮಾರ್, ಹಿರಿಯ ಕ್ರೀಡಾಪಟು ಮಹದೇವ್, ಭವ್ಯ,ಸುಬ್ರಮಣಿ,ಮಹೇಶ್, ಎಲ್.ಐ.ಸಿ. ವೆಂಕಟೇಶ್, ದತ್ತ ಮತ್ತಿತರರು ಹಾಜರಿದ್ದರು.

ದಸರಾ: ಸಾಯಿಸಿರಿ ವೃದ್ಧಾಶ್ರಮಕ್ಕೆ ಸೀಲಿಂಗ್ ಫ್ಯಾನ್, ಹಣ್ಣು ಹಂಪಲು ವಿತರಣೆ Read More

ಮಾತೆ ಮೇರಿ ಜನ್ಮದಿನ: ಶ್ರವಣ ದೋಷ ವಿದ್ಯಾರ್ಥಿಗಳಿಗೆ ಲೇಖನಿ,ಹಣ್ಣು ವಿತರಣೆ

ಮೈಸೂರು: ನಗರದ ಶ್ರೀರಾಂಪುರ 2ನೇ ಹಂತದಲ್ಲಿನ ಮರ್ಸಿ ಕಾನ್ವೆಂಟ್ ನಲ್ಲಿ ಶ್ರವಣದೋಷವುಳ್ಳ ವಿದ್ಯಾರ್ಥಿಗಳಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ವತಿಯಿಂದ ಲೇಖನಿ, ಹಣ್ಣು ಹಂಪಲು ವಿತರಿಸುವ ಮೂಲಕ ಮಾತೆ ಮೇರಿ ಜನ್ಮದಿನವನ್ನು ಸ್ಮರಿಸಲಾಯಿತು.

ಸಂತ ಮೇರಿ ಪ್ರಭು ಏಸುಕ್ರಿಸ್ತನ ತಾಯಿ. ತಾಯಿಯಾಗಲು ದೇವರಿಂದ ಕರೆ ಹೊಂದಿದ ಮಾತೆ ಮೇರಿ ಮನುಕುಲದ ತಾಯಿಯಾ ಗಿರುವುದರಿಂದ ಇವರ ಜನ್ಮದಿನವನ್ನು ಸ್ಮರಿಸಿ ಒಳ್ಳೆಯ ಕಾರ್ಯ ಮಾಡಲಾಗುತ್ತಿದೆ ಎಂದು
ಮೈಸೂರು ನಗರ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್ ಈ‌ ವೇಳೆ ತಿಳಿಸಿದರು.

ಈ ಸಂದರ್ಭದಲ್ಲಿ ದುರ್ಗಾ ಫೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್, ಪತ್ರಿಕಾ ವಿತರ ಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್,ಗಾಯಕ ಯಶವಂತ್ ಕುಮಾರ್, ಹಿರಿಯ ಕ್ರೀಡಾಪಟು ಮಹದೇವ್, ಜ್ಯೋತಿ ಸಾನ್ವಿಕ,ಮಹೇಶ್, ರಾಜೇಶ್ ಕುಮಾರ್, ಎಲ್.ಐ.ಸಿ. ವೆಂಕಟೇಶ್, ಎಸ್ ಪಿ ಅಕ್ಷಯ್ ಪ್ರಿಯಾದರ್ಶನ್, ಹರ್ಷಿತ್ ಎಸ್ ನಾಗೇಶ್,ದತ್ತ, ಸಿದ್ದಾರ್ಥ್ ಮತ್ತಿತರರು ಹಾಜರಿದ್ದರು.

ಮಾತೆ ಮೇರಿ ಜನ್ಮದಿನ: ಶ್ರವಣ ದೋಷ ವಿದ್ಯಾರ್ಥಿಗಳಿಗೆ ಲೇಖನಿ,ಹಣ್ಣು ವಿತರಣೆ Read More

ಶ್ರೀ ಶಿವರಾತ್ರಿ‌ಸ್ವಾಮೀಜಿಯವರ ಹುಟ್ಟುಹಬ್ಬ: ಹಿರಿಯರಿಗೆ ಹಣ್ಣು ವಿತರಣೆ

ಮೈಸೂರು: ನಗರದ ಸರಸ್ವತಿಪುರಂನಲ್ಲಿನ ಸಾನಿಧ್ಯ ವೃದ್ಧಾಶ್ರಮದ ಹಿರಿಯರಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ ಸ್ನೇಹ ಬಳಗದ ವತಿಯಿಂದ ಹಣ್ಣು,ಹಂಪಲು ವಿತರಿಸಲಾಯಿತು.

ಶ್ರೀಕ್ಷೇತ್ರ ಸುತ್ತೂರು ಶ್ರೀಮಠದ ಜಗದ್ಗುರು ಪೂಜ್ಯ ಡಾ. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರ ಹುಟ್ಟುಹಬ್ಬದ ಪ್ರಯುಕ್ತ ಹಿರಿಯ ನಾಗರಿಕರಿಗೆ
ಹಣ್ಣು ಹಂಪಲು ವಿತರಿಸಲಾಯಿತು.

ಈ ವೇಳೆ ಮೈಸೂರು ನಗರ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್, ಆಶ್ರಮದ ನಿಲಯ ಪಾಲಕ ಚಂದ್ರಶೇಖರ್,ಛಾಯಾ,ಗಾಯಕ ಯಶವಂತ್ ಕುಮಾರ್, ಹಿರಿಯ ಕ್ರೀಡಾಪಟು ಮಹದೇವ್,ಮಹೇಶ್, ರಾಜೇಶ್ ಕುಮಾರ್, ಎಸ್ ಪಿ ಅಕ್ಷಯ್ ಪ್ರಿಯಾದರ್ಶನ್, ದತ್ತ ಮತ್ತಿತರರು ಹಾಜರಿದ್ದರು.

ಶ್ರೀ ಶಿವರಾತ್ರಿ‌ಸ್ವಾಮೀಜಿಯವರ ಹುಟ್ಟುಹಬ್ಬ: ಹಿರಿಯರಿಗೆ ಹಣ್ಣು ವಿತರಣೆ Read More

ರಾಯಣ್ಣ ಯುವಜನರಿಗೆ ಸ್ಪೂರ್ತಿ- ಎಸ್ ಪ್ರಕಾಶ್ ಪ್ರಿಯಾದರ್ಶನ್

ಮೈಸೂರು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರು ದೇಶಪ್ರೇಮಿಯಾಗಿದ್ದು ಅವರ ಆದರ್ಶ ಎಲ್ಲರಿಗೂ ಸ್ಪೂರ್ತಿಯಾಗಲಿ ಎಂದು ಜೆಡಿಎಸ್ ಕಾರ್ಯಧ್ಯಕ್ಷ ಎಸ್ ಪ್ರಕಾಶ್ ಪ್ರಿಯದರ್ಶನ್ ತಿಳಿಸಿದರು

ನಗರದ ವಿದ್ಯಾರಣ್ಯಪುರಂನಲ್ಲಿರುವ ಸಾರ್ವಜನಿಕ ಸುಬ್ಬಣ್ಣ ಹಾಸ್ಟೆಲ್‍ ವಿದ್ಯಾರ್ಥಿಗಳಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ ಸ್ನೇಹ ಬಳಗದ ವತಿಯಿಂದ ನೋಟ್ ಬುಕ್,ಹಣ್ಣು ಹಂಪಲು ವಿತರಿಸುವ ಮೂಲಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದ ವೇಳೆ ಅವರು ಮಾತನಾಡಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಹುತಾತ್ಮರಾಗಿದ್ದ ಸಂಗೊಳ್ಳಿ ರಾಯಣ್ಣ ಅವರ ನಿಸ್ವಾರ್ಥ ಹೋರಾಟ ದೇಶಪ್ರೇಮ ಯುವಜನತೆಯಲ್ಲಿ ಸ್ಪೂರ್ತಿಯಾಗಬೇಕಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮೈಸೂರು ನಗರ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್, ಶಾಲಾ ಮುಖ್ಯ ಶಿಕ್ಷಕರಾದ ನಟರಾಜ್,ಸುಬ್ರಮಣ್ಯ,ಗಾಯಕ ಯಶವಂತ್ ಕುಮಾರ್, ಬಿಜೆಪಿ ಮುಖಂಡ ಪುರುಷೋತ್ತಮ್, ಬಂಡಿಕೇರಿ ರವಿ, ವೀರಭದ್ರ ಸ್ವಾಮಿ , ಮಹೇಶ್, ಶೈಲೇಶ್,ಹರ್ಷಿತ್ ಎಸ್ ನಾಗೇಶ್, ವಿಕ್ರಂ ಅಯ್ಯಂಗಾರ್, ನಿರೀಕ್ಷಿತ್,ಮತ್ತಿತರರು ಹಾಜರಿದ್ದರು.

ರಾಯಣ್ಣ ಯುವಜನರಿಗೆ ಸ್ಪೂರ್ತಿ- ಎಸ್ ಪ್ರಕಾಶ್ ಪ್ರಿಯಾದರ್ಶನ್ Read More

ಸಾ.ರಾ. ಮಹೇಶ್ ಹುಟ್ಟುಹಬ್ಬ:ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ

ಮೈಸೂರು: ಮಾಜಿ ಸಚಿವ ಸಾ.ರಾ. ಮಹೇಶ್ ಹುಟ್ಟುಹಬ್ಬದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಎಸ್ ಪ್ರಕಾಶ್ ಪ್ರಿಯದರ್ಶನ ಸ್ನೇಹ ಬಳಗದ ವತಿಯಿಂದ ನೋಟ್ ಬುಕ್,ಹಣ್ಣು ಹಂಪಲು ವಿತರಿಸಲಾಯಿತು.

ವಿದ್ಯಾರ್ಥಿಗಳಿಗೆ ನೋಟ್ ಬುಕ್, ಹಣ್ಣು ಹಂಪಲು ಹಿರಿಯ ಸಮಾಜ ಸೇವಕ ರಘುರಾಮ ವಾಜಪೇಯಿ ಅವರು ವಿತರಿಸಿದರು.

ನಗರದ ಜೆಪಿ ನಗರದಲ್ಲಿರುವ ಶ್ರೀ ಪೇಜಾವರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ ಸ್ನೇಹ ಬಳಗದ ವತಿಯಿಂದ ನೋಟ್ ಬುಕ್, ಹಣ್ಣು ಹಂಪಲು ವಿತರಿಸಿ,ಸಾರಾ ಮಹೇಶ್ ರವರ ಹುಟ್ಟುಹಬ್ಬ ಆಚರಣೆಯನ್ನು ಅರ್ಥಪೂರ್ಣವಾಗಿ ಆರಿಸಲಾಯಿತು.

ಈ ವೇಳೆ ಸ್ನೇಹ ಬಳಗದ ಸದಸ್ಯರು ಮತ್ತು ವಿದ್ಯಾರ್ಥಿಗಳು ಸಾರಾ ಮಹೇಶ್ ಅವರಿಗೆ ಹುಟ್ಟು ಹಬ್ಬದ ಶುಭ ಕೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಸಮಾಜ ಸೇವಕರಾದ ರಘುರಾಮ್ ವಾಜಪೇಯಿ ಅವರು,ಸಾರಾ ಮಹೇಶ್ ಅವರನ್ನು ವಿದ್ಯಾರ್ಥಿ ದೆಸೆಯಿಂದಲೂ ಬಲ್ಲೆ, ಸದಾ ಜನರಿಗೆ ಒಳಿತು ಮಾಡುವ ಮನಸ್ಸುಳ್ಳ ವ್ಯಕ್ತಿ, ಅವರು ಹಂತ ಹಂತವಾಗಿ ಬೆಳೆದು ಶಾಸಕರಾಗಿ ಸಚಿವರಾಗಿ ಜನರ ಸೇವೆ ಮಾಡುವುದರ ಜೊತೆಯಲ್ಲಿ ಅವರ ವೈಯಕ್ತಿಕವಾಗಿ ಸಂಪಾದನೆ ಮಾಡಿದ ಬಹುಪಾಲು ಹಣವನ್ನು ಕೆ ಆರ್ ನಗರದ ಜನತೆಗೆ ಒಂದಲ್ಲ ಒಂದು ರೀತಿಯಲ್ಲಿ ನೀಡಿದ್ದಾರೆ ಇಂತಹ ಮನಸುಳ್ಳ ಸಾರಾ ಮಹೇಶ್ ಗೆ ತಾಯಿ ಚಾಮುಂಡೇಶ್ವರಿ ಇನ್ನೂ ಹೆಚ್ಚಿನ ರಾಜಕೀಯ ಶಕ್ತಿ ನೀಡಲಿ ಎಂದು ಶುಭ ಹಾರೈಸಿದರು.

ಜೆಡಿಎಸ್ ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್ ಅವರು ಮಾತನಾಡಿ, ಮಾಜಿ ಸಚಿವರಾದ ಸಾರಾ ಮಹೇಶ್ ರವರು ಕೆ ಆರ್ ನಗರದ ಸರ್ವತೋಮುಖ ಅಭಿವೃದ್ಧಿಯನ್ನು ಮಾಡಿದ್ದು ಸಚಿವರಾಗಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿ ಅನೇಕ ಜನಪರ ಕಾರ್ಯಕ್ರಮಗಳನ್ನು ಮಾಡಿದ್ದಾರೆ, ಜನರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಅವರು ಮುಂದಿನ ಚುನಾವಣೆಯಲ್ಲಿ ಗೆದ್ದು ಕೆ ಆರ್ ನಗರದ ಶಾಸಕರಾಗಿ, ಸಚಿವರಾಗಿ ರಾಜ್ಯದ ಜನತೆಯ ಸೇವೆ ಮಾಡಲೆಂದು ಶುಭ ಕೋರಿದರು

ಈ ಸಂದರ್ಭದಲ್ಲಿ ವಿದ್ಯಾರ್ಥಿ ನಿಲಯದ ಪುಟ್ಟಣ್ಣ, ಸುಬ್ರಮಣ್ಯ,ಛಾಯಾ,ಗಾಯಕ ಯಶವಂತ್ ಕುಮಾರ್, ವೀರಭದ್ರ ಸ್ವಾಮಿ , ಮಹೇಶ್, ರಾಜೇಶ್ ಕುಮಾರ್,ಎಸ್ ಪಿ ಅಕ್ಷಯ್ ಪ್ರಿಯಾದರ್ಶನ್, ದರ್ಶನ್ ,ಹರ್ಷಿತ್ ಎಸ್ ನಾಗೇಶ್, ನಿರೀಕ್ಷಿತ್ ಮತ್ತಿತರರು ಹಾಜರಿದ್ದರು.

ಸಾ.ರಾ. ಮಹೇಶ್ ಹುಟ್ಟುಹಬ್ಬ:ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ Read More

ಬೋರ್ಡಿಂಗ್ ಬಾಯ್ಸ್ ಗೆ ನೋಟ್ ಬುಕ್, ಹಣ್ಣು ವಿತರಿಸಿ ವಿಶ್ವ ಸ್ನೇಹಿತರ ದಿನಾಚರಣೆ

ಮೈಸೂರು: ನಗರದ ಎಂ.ಜಿ.ರಸ್ತೆಯಲ್ಲಿರುವ ಸಿ.ಎಸ್.ಐ. ಬಾಯ್ಸ್ ಬೋರ್ಡಿಂಗ್ ಹೋಮ್ ವಿದ್ಯಾರ್ಥಿಗಳಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ ಸ್ನೇಹ ಬಳಗದ ವತಿಯಿಂದ ನೋಟ್ ಬುಕ್, ಹಣ್ಣು ಹಂಪಲು ವಿತರಿಸಿ ವಿಶ್ವ ಸ್ನೇಹಿತರ ದಿನ ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಜೆಡಿಎಸ್ ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್ ಅವರು,
ನಮ್ಮ ಭಾರತ ದೇಶದ ಕೃಷ್ಣ ಸುಧಾಮ, ಅಮರ್- ಅಕ್ಬರ್- ಅಂತೋಣಿ ಕಾಲದ ಇತಿಹಾಸದಿಂದ ಪ್ರಜಾಪ್ರಭುತ್ವದವರೆಗೂ ಸ್ನೇಹ-ಭಾಂದವ್ಯ ಮೌಲ್ಯಯುತವಾಗಿದ್ದು ಎಂದು ಹೇಳಿದರು.

ಯಾವುದೇ ಸಾಧನೆ ಮಾಡಲು ಮತ್ತು ಯೋಜನೆ ಯಶಸ್ವಿಯಾಗ ಬೇಕಾದರೆ ಸ್ನೇಹಿತರ ಸಹಕಾರ ಬಹುಮುಖ್ಯ, ಹಾಗಾಗಿ ಸ್ನೇಹಕ್ಕೆ ಯಾವುದೇ ಜಾತಿ ಧರ್ಮ ವಯಸ್ಸಿನ ಭೇದಭಾವ ಇಲ್ಲ, ಸಮಾಜದಲ್ಲಿ ಸ್ನೇಹ ಸಂಪಾದನೆಯೇ ಶಾಶ್ವತವಾದ ಸಾಧನೆ ಎಂದು ನುಡಿದರು.

ಈ ಸಂದರ್ಭದಲ್ಲಿ ಲಕ್ಷ್ಮಿಪುರಂ ಪೊಲೀಸ್ ಠಾಣೆಯ ದಯಾನಂದ್, ಬೋರ್ಡಿಂಗ್ ಹೋಮ್ ನ ದೇವರತ್ನ,ಗಾಯಕ ಯಶವಂತ್ ಕುಮಾರ್, ಹಿರಿಯ ಕ್ರೀಡಾಪಟು ಮಹದೇವ್, ವೀರಭದ್ರ ಸ್ವಾಮಿ , ಶ್ರೀಧರ್,ಮಹೇಶ್,ರಾಜೇಶ್ ಕುಮಾರ್,ಎಸ್ ಪಿ ಅಕ್ಷಯ್ ಪ್ರಿಯದರ್ಶನ್, ಹರ್ಷಿತ್ ಎಸ್ ನಾಗೇಶ್, ನಿರೀಕ್ಷಿತ್ ಮತ್ತಿತರರು ಹಾಜರಿದ್ದರು.

ಬೋರ್ಡಿಂಗ್ ಬಾಯ್ಸ್ ಗೆ ನೋಟ್ ಬುಕ್, ಹಣ್ಣು ವಿತರಿಸಿ ವಿಶ್ವ ಸ್ನೇಹಿತರ ದಿನಾಚರಣೆ Read More

ವಿದ್ಯಾರ್ಥಿನಿಯರಿಗೆ ನೋಟ್ ಬುಕ್, ಹಣ್ಣು ವಿತರಣೆ

ಮೈಸೂರು, ಜೂ.2: ನಗರದ ಎಂ.ಜಿ.ರಸ್ತೆಯಲ್ಲಿರುವ ಸಿ.ಎಸ್.ಐ. ಗರ್ಲ್ಸ್ ಬೋರ್ಡಿಂಗ್ ವಿದ್ಯಾರ್ಥಿನಿಯರಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ ಸ್ನೇಹ ಬಳಗದ ವತಿಯಿಂದ ನೋಟ್ ಬುಕ್, ಹಣ್ಣು ಹಂಪಲು ವಿತರಿಸಿ ಉತ್ತಮ ವ್ಯಾಸಂಗ ಮಾಡಲೆಂದು ಶುಭ ಹಾರೈಸಲಾಯಿತು.

ಈ ಸಂದರ್ಭದಲ್ಲಿ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್, ಕೆ.ಆರ್. ಕ್ಷೇತ್ರದ ಬಿ.ಜೆ.ಪಿ.ಕಾರ್ಯದರ್ಶಿ ಬೈರತಿ ಲಿಂಗರಾಜು, ಬೋರ್ಡಿಂಗ್ ಹೋಂ ನ ಗೀತಾ, ಗಾಯಕ ಯಶವಂತ್ ಕುಮಾರ್, ಛಾಯಾ,ಹಿರಿಯ ಕ್ರೀಡಾಪಟು ಮಹದೇವ್, ಸುಬ್ರಮಣಿ, ಮಹೇಶ್, ರಾಜೇಶ್ ಕುಮಾರ್,ಎಸ್ ಪಿ ಅಕ್ಷಯ್ ಪ್ರಿಯಾದರ್ಶನ್, ದತ್ತ ಮತ್ತಿತರರು ಹಾಜರಿದ್ದರು.

ವಿದ್ಯಾರ್ಥಿನಿಯರಿಗೆ ನೋಟ್ ಬುಕ್, ಹಣ್ಣು ವಿತರಣೆ Read More

ವಿದ್ಯಾರ್ಥಿಗಳಿಗೆ ನೋಟ್ ಬುಕ್, ಹಣ್ಣು ವಿತರಿಸಿ ಅಂಬೇಡ್ಕರ್ ಜಯಂತಿ ಆಚರಣೆ

ಮೈಸೂರು: ಕುವೆಂಪುನಗರ, ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ಮೆತ್ತಾಲೋಕ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ವತಿಯಿಂದ ನೋಟ್ ಬುಕ್, ಹಣ್ಣು ಹಂಪಲು ವಿತರಿಸುವ ಮೂಲಕ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.

ಈ ವೇಳೆ ಶೋಭನ ಬಂತೆ ಜಿ ಅವರು ಎಲ್ಲರಿಗೂ ಬುದ್ಧ ಭಗವಾನರ ದಮ್ಮ ಪ್ರವಚನ ನೀಡಿ ಎಲ್ಲರೂ ಪಂಚಶೀಲ ಪರಿಪಾಲನೆ ಮಾಡುವಂತೆ ತಿಳಿಸಿದರು.

ಹೆಚ್ಚು ಹೆಚ್ಚು ದಾನ ನೀಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಿ, ದಾನದಿಂದ ಕುಶಲ ಕಮ್ಮ ಪ್ರಾಪ್ತಿಯಾಗುತ್ತದೆ ಎಂದು ತಿಳಿಸಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯ ಶುಭ ಕೋರಿದರು.

ವಿಶುದ್ಧ ಶೀಲ ಬಂತೆ ಜಿ,ಮೈಸೂರು ನಗರ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಚಿಕ್ಕ ಗರಡಿ ಅಧ್ಯಕ್ಷ ಬಿ. ನಾಗರಾಜು ( ಬಿಲ್ಲಯ್ಯ ),ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್, ಹಿರಿಯ ಕ್ರೀಡಾಪಟು ಮಹದೇವ್, ಜೆ.ಡಿ.ಎಸ್. ಮುಖಂಡ ವೆಂಕಟೇಶ್, ಸ್ವಾಮಿ.ದನಗಳ್ಳಿ,ಸುಬ್ರಮಣಿ ,
ರಾಜೇಶ್ ಕುಮಾರ್, ಮಹೇಶ್, ವೀರಭದ್ರ ಸ್ವಾಮಿ, ಶ್ರೀಧರ್,ಎಸ್.ಪಿ.ಅಕ್ಷಯ್ ಪ್ರಿಯಾದರ್ಶನ್, ಹರ್ಷಿತ್ ಎಸ್ ನಾಗೇಶ್, ದತ್ತ ಮತ್ತಿತರರು ಹಾಜರಿದ್ದರು.

ವಿದ್ಯಾರ್ಥಿಗಳಿಗೆ ನೋಟ್ ಬುಕ್, ಹಣ್ಣು ವಿತರಿಸಿ ಅಂಬೇಡ್ಕರ್ ಜಯಂತಿ ಆಚರಣೆ Read More

ಕೋವಿಡ್ ನಂತರ ಮಾನಸಿಕ ಆರೋಗ್ಯದ ಸಮಸ್ಯೆಗಳು ಹೆಚ್ಚಾಗುತ್ತಿವೆ :‌ ಖುಷಿ ವಿನು

ಮೈಸೂರು, ಏ.7: ಕೋವಿಡ್ ನಂತರ ಮಾನಸಿಕ ಆರೋಗ್ಯದ ಸಮಸ್ಯೆಗಳು ಹೆಚ್ಚಾಗುತ್ತಿವೆ ಕೆ.ವಿ.ಕೆ ಫೌಂಡೇಶನ್ ಅಧ್ಯಕ್ಷರಾದ ಖುಷಿ ವಿನು ಅಭಿಪ್ರಾಯ ಪಟ್ಟರು.

ನಗರದ ರಾಮಾನುಜ ರಸ್ತೆಯಲ್ಲಿರುವ ಜೆ.ಎಸ್.ಎಸ್ ಸಂಸ್ಥೆಯವರ ದೃಷ್ಟಿ ದೋಷವುಳ್ಳ ಮಹಿಳೆಯರು ಹಾಗೂ ವಿದ್ಯಾರ್ಥಿನಿ ಬಂಧುಗಳಿಗೆ ಎಸ್ ಪ್ರಕಾಶ್ ಪ್ರಿಯಾ ದರ್ಶನ್ ಬಳಗದ ವತಿಯಿಂದ ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಹಣ್ಣು ಹಂಪಲು ಹಾಗೂ ದಿನಸಿ ಸಾಮಗ್ರಿಗಳನ್ನು ವಿತರಿಸಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದ ವೇಳೆ ಅವರು ಮಾತನಾಡಿದರು.

ಈ ವೇಳೆ ಮಾತನಾಡಿದ ಖುಷಿ ವಿನು, ಮಾನಸಿಕ ಒತ್ತಡ, ಆತಂಕ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ ಎಂದು ಹೇಳಿದರು.

ನಮ್ಮಲ್ಲಿ ನಾನು ಎಂಬ ಭಾವನೆ ಹೆಚ್ಚಾಗುತ್ತಿದ್ದು ದುಃಖ ಮತ್ತು ನೋವುಗಳಿಗೆ ಕಾರಣವಾಗುತ್ತಿದೆ, ಪ್ರಸ್ತುತ ಸಾರ್ವಜನಿಕರಲ್ಲಿ ಸಂಯಮ ಸಮಾಧಾನ ಗಣನೀಯವಾಗಿ ಕಡಿಮೆಯಾಗುತ್ತಿದೆ, ಅನಗತ್ಯವಾಗಿ ಕೋಪಗೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಮಾನಸಿಕ ಸಮತೋಲನ ಕಾಪಾಡಿಕೊಳ್ಳಬೇಕು ಇಲ್ಲದಿದ್ದರೆ ನಮ್ಮ ದೇಹದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಖುಷಿ ವಿನು ತಿಳಿಸಿದರು.

ಈ ಸಂದರ್ಭದಲ್ಲಿ ಮೈಸೂರು ನಗರ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್,ದುರ್ಗಾ ಫೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್,ಛಾಯಾ,ಗಾಯಕ ಯಶ್ವಂತ್ ಕುಮಾರ್, ಹಿರಿಯ ಕ್ರೀಡಾಪಟು ಮಹದೇವ್, ಭವ್ಯ, ಸುಬ್ರಮಣಿ ,ರಾಜೇಶ್ ಕುಮಾರ್, ಮಹೇಶ್, ವೀರಭದ್ರ ಸ್ವಾಮಿ, ರಾಜು, ರಾಕೇಶ್, ಕೀರ್ತನ,ಎಸ್.ಪಿ.ಅಕ್ಷಯ್ ಪ್ರಿಯಾದರ್ಶನ್, ಹರ್ಷಿತ್ ಎಸ್ ನಾಗೇಶ್, ದತ್ತ ಮತ್ತಿತರರು ಹಾಜರಿದ್ದರು.

ಕೋವಿಡ್ ನಂತರ ಮಾನಸಿಕ ಆರೋಗ್ಯದ ಸಮಸ್ಯೆಗಳು ಹೆಚ್ಚಾಗುತ್ತಿವೆ :‌ ಖುಷಿ ವಿನು Read More

ನೀರನ್ನು ಮಿತವಾಗಿ ಬಳಸಿ: ಎಸ್ ಪ್ರಕಾಶ್ ಪ್ರಿಯಾದರ್ಶನ್

ಮೈಸೂರು: ವಿಶ್ವಾದ್ಯಂತ ಸುಮಾರು 200 ಕೋಟಿ ಮಂದಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ ಎಂದು ಜೆಡಿಎಸ್ ಕಾರ್ಯಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್ ವಿಷಾದಿಸಿದರು.

ಮೈಸೂರಿನ ಎಂ.ಜಿ. ರಸ್ತೆಯಲ್ಲಿರುವ ಜೆ.ಎಸ್.ಎಸ್. ಸಂಸ್ಥೆಯವರ ಸಾಹುಕಾರ್ ಸಿದ್ದಲಿಂಗಯ್ಯನವರ ಸಂಸ್ಕೃತ, ವೇದ,ಜ್ಯೋತಿಷ್ಯ ಪಾಠಶಾಲೆಯ ವಿದ್ಯಾರ್ಥಿ ನಿಲಯದಲ್ಲಿ ವಿಶ್ವ ಜಲ ದಿನ ಅಂಗವಾಗಿ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ಸೇವಾ ಕಾರ್ಯಕ್ರಮದಲ್ಲಿ ನೀರಿನ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸಿ ಹಣ್ಣು, ಹಂಪಲು, ದಿನಸಿ ಸಾಮಗ್ರಿಗಳನ್ನು ವಿತರಿಸಿ ಅವರು ಮಾತನಾಡಿರು

ಒಂದು ಕೆಜಿ ಅಕ್ಕಿ ಬೆಳೆಯಲು 2,500 ಲೀಟ‌ರ್ ನೀರು ವೆಚ್ಚವಾಗುತ್ತದೆ. ನಮ್ಮ ಒಂದು ಹೊತ್ತಿನ ಊಟದ ಹಿಂದೆ ಸರಾಸರಿ 750 ಲೀಟರ್‌ಗಳಷ್ಟು ನೀರು ಬಳಕೆಯಾಗಿರುತ್ತದೆ. ನಿತ್ಯದ ಕೆಲಸಗಳಿಗೆ ಮಿತವಾಗಿ, ಸುಸ್ಥಿರವಾಗಿ ನೀರನ್ನು ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.

ಈ ವೇಳೆ ವಿದ್ಯಾರ್ಥಿ ನಿಲಯದ ನಿಲಯ ಪಾಲಕರಾದ ಮಹೇಶ್, ಮೋಹನ್ ಹಾಗೂ ಸಿಬ್ಬಂದಿ ವರ್ಗ, ರಾಷ್ಟ್ರ, ರಾಜ್ಯ,ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಪದ್ಮಾವತಿ, ಛಾಯಾ,ಗಾಯಕ ಯಶ್ವಂತ್ ಕುಮಾರ್, ಹಿರಿಯ ಕ್ರೀಡಾಪಟು ಮಹದೇವ್, ವೀರಭದ್ರ ಸ್ವಾಮಿ,ರಾಜೇಶ್ ಕುಮಾರ್, ಮಹೇಶ್, ಶ್ರೀಧರ್, ಬಿಜೆಪಿ ಮುಖಂಡ ಪುರುಷೋತ್ತಮ್ ,ದತ್ತ,ಕೀರ್ತನ,ಎಸ್.ಪಿ.ಅಕ್ಷಯ್ ಪ್ರಿಯಾದರ್ಶನ್, ಹರ್ಷಿತ್ ಎಸ್ ನಾಗೇಶ್ ಮತ್ತಿತರರು ಹಾಜರಿದ್ದರು.

ನೀರನ್ನು ಮಿತವಾಗಿ ಬಳಸಿ: ಎಸ್ ಪ್ರಕಾಶ್ ಪ್ರಿಯಾದರ್ಶನ್ Read More