ಹೆಚ್ ಡಿ ಕೆ ಹುಟ್ಟುಹಬ್ಬ:ವಿದ್ಯಾರ್ಥಿಗಳಿಗೆ ನೋಟ್ ಬುಕ್, ಹಣ್ಣು ವಿತರಣೆ

ಮೈಸೂರು: ಎಸ್ ಪ್ರಕಾಶ್ ಪ್ರಿಯಾದರ್ಶನ ಸ್ನೇಹ ಬಳಗದ ವತಿಯಿಂದ
ವಿದ್ಯಾರ್ಥಿಗಳಿಗೆ ನೋಟ್ ಬುಕ್ ಮತ್ತು ಹಣ್ಣು ಹಂಪಲು ವಿತರಣೆ ಮಾಡುವ ಮೂಲಕ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.

ಮೈಸೂರಿನ ಕುವೆಂಪು ನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ಮೆತ್ತಲೋಕ ವಿದ್ಯಾರ್ಥಿ ನಿಲಯದ ಬಂಧುಗಳಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ವತಿಯಿಂದ ನೋಟ್ ಬುಕ್,ಹಣ್ಣು ಹಂಪಲು ವಿತರಿಸಿ ಎಚ್ ಡಿ ಕುಮಾರಸ್ವಾಮಿ ಅವರ ಜನ್ಮದಿನವನ್ನು ಆಚರಿಸಿ ಸಂಭ್ರಮಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯದರ್ಶನ್ ಅವರು, ಬೃಹತ್ ಕೈಗಾರಿಕಾ ಮತ್ತು ಉಕ್ಕು ಖಾತೆ ಸಚಿವರಾದ ಎಚ್ ಡಿ ಕುಮಾರಸ್ವಾಮಿ ಅವರು ದೇಶದ ಅಭಿವೃದ್ಧಿ ಜೊತೆಗೆ ಹೆಚ್ಚಿನ ಆದ್ಯತೆಯ ಮೇಲೆ ರಾಜ್ಯದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ, ಇವರಿಗೆ ತಾಯಿ ಚಾಮುಂಡೇಶ್ವರಿ ಹೆಚ್ಚಿನ ಆರೋಗ್ಯ ಕರುಣಿಸಲಿ ಎಂದು ಹಾರೈಸಿದರು.

ಈಗಾಗಲೇ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿ ಜನರ ನೆನಪಿನಲ್ಲಿ ಉಳಿಯುವಂತಹ ಕೆಲಸ ಮಾಡಿದ್ದಾರೆ,
ಲಾಟರಿ ನಿಷೇಧ, ಸಾರಾಯಿ ನಿಷೇಧ, ಗ್ರಾಮ ವಾಸ್ತವ್ಯ, ರೈತರ ಸಾಲ ಮನ್ನಾ ಮತ್ತಿತರ ಒಳ್ಳೆಯ ಕೆಲಸ ಮಾಡಿ ಜನಪರ ಆಡಳಿತ ನೀಡಿದ್ದಾರೆ, ಅವರು ಮತ್ತೊಮ್ಮೆ ಈ ರಾಜ್ಯದ ಮುಖ್ಯಮಂತ್ರಿ ಆಗಲಿ ಎಂದು ಅವರು ತಾಯಿ ಚಾಮುಂಡೇಶ್ವರಿ ದೇವಿಯನ್ನು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.

ನಂತರ ಸ್ನೇಹ ಬಳಗದ ಸದಸ್ಯರು ವಿದ್ಯಾರ್ಥಿಗಳು ಎಚ್ ಡಿ ಕುಮಾರಸ್ವಾಮಿ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದರು.

ಈ ಸಂದರ್ಭದಲ್ಲಿ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್, ಹಿರಿಯ ಕ್ರೀಡಾಪಟು ಮಹದೇವ್,ಸಿಂಚನಗೌಡ, ವಿದ್ಯಾ, ನಾಗಶ್ರೀ ಸುಚಿಂದ್ರ, ಛಾಯಾ,ಗಾಯಕ ಯಶವಂತ್ ಕುಮಾರ್, ಜಗದೀಶ್,ರಾಜೇಶ್ ಕುಮಾರ್,ಮಹೇಶ, ಶ್ರೀಧರ್, ಎಸ್ ಪಿ ಅಕ್ಷಯ್ ಪ್ರಿಯಾದರ್ಶನ್ ,ದತ್ತ ಮತ್ತಿತರರು ಹಾಜರಿದ್ದರು.

ಹೆಚ್ ಡಿ ಕೆ ಹುಟ್ಟುಹಬ್ಬ:ವಿದ್ಯಾರ್ಥಿಗಳಿಗೆ ನೋಟ್ ಬುಕ್, ಹಣ್ಣು ವಿತರಣೆ Read More

ಡಾ. ಬಿ ಆರ್ ಅಂಬೇಡ್ಕರ್ 69ನೇ ಮಹಾ ಪರಿನಿಬ್ಬಾಣ ದಿನ-ಸೇವಾಕಾರ್ಯ

ಮೈಸೂರು: .ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ವತಿಯಿಂದ ಡಾ. ಬಿ ಆರ್ ಅಂಬೇಡ್ಕರ್ 69ನೇ ಮಹಾ ಪರಿನಿಬ್ಬಾಣ ದಿನದ ಪ್ರಯುಕ್ತ‌ ಸೇವಾಕಾರ್ಯ ಹಮ್ಮಿಕೊಳ್ಳಲಾಯಿತು.

ನಗರದ ಸರಸ್ವತಿಪುರಂನಲ್ಲಿರುವ ಸಾನಿಧ್ಯ ವೃದ್ಧಾಶ್ರಮದ ಹಿರಿಯ ನಾಗರಿಕ ಬಂಧುಗಳಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ವತಿಯಿಂದ ಹಣ್ಣು ಹಂಪಲು ವಿತರಿಸುವ ಮೂಲಕ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಹಾಪರಿನಿಬ್ಬಾಣ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿ ಗೌರವ ನಮನ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಹಿರಿಯ ಕ್ರೀಡಾಪಟು ಮಹದೇವ್, ಭಾರತ ರತ್ನ ಡಾ ಬಿ ಆರ್ ಅಂಬೇಡ್ಕರ್ ಅವರ 69ನೇ ಮಹಾಪರಿ ನಿಬ್ಬಣ ದಿನವನ್ನು ಇಂದಿನ ಯುವಪೀಳಿಗೆ ಸ್ಮರಿಸಬೇಕು ಎಂದು ಹೇಳಿದರು.
ಅಂಬೇಡ್ಕರ್ ಅವರ ಆದರ್ಶ, ತತ್ವ ಸಿದ್ಧಾಂತವನ್ನು ಅಳವಡಿಸಿಕೊಂಡು ಅವರು ನೀಡಿರುವ ಸಂವಿಧಾನ ಅಡಿಯಲ್ಲಿ ಎಲ್ಲರೂ ಶಾಂತಿಯುತವಾಗಿ ಸಹ ಬಾಳ್ವೆಯೊಂದಿಗೆ ಬಾಳಬೇಕು ಎಂದು ತಿಳಿಸಿದರು.

ಸ್ನೇಹ ಬಳಗವು ಸೇವಾ ಕಾರ್ಯದೊಂದಿಗೆ ಗೌರವ ನಮನ ಸಲ್ಲಿಸುತ್ತಿರುವುದು ಅತ್ಯಂತ ಸಂತೋಷಕರ ಸಂಗತಿ ಎಂದು ಹೇಳಿದರು.
ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯದರ್ಶನ್ ಮಾತನಾಡಿ,ಡಾ. ಬಿ. ಆರ್.ಅಂಬೇಡ್ಕರ್ ಅವರು ನೀಡಿರುವ ಸಂವಿಧಾನವನ್ನು ಭಾರತದ ಪ್ರತಿಯೊಬ್ಬ ಪ್ರಜೆಯು ಅಳವಡಿಸಿಕೊಂಡು ಬದುಕುತ್ತಿದ್ದೇವೆ ಎಂದು ತಿಳಿಸಿದರು.

ಪ್ರತಿಯೊಬ್ಬ ಪ್ರಜೆಗೂ ಸಮಾನತೆ, ಮತದಾನದ ಹಕ್ಕನ್ನು ನೀಡಿರುವ ಈ ಆದರ್ಶ ಪುರುಷ ಭೌತಿಕವಾಗಿ ನಮ್ಮ ಜೊತೆ ಇಲ್ಲದೆ ಇರಬಹುದು ಆದರೆ ಅವರ ನಡೆದು ಬಂದ ಹಾದಿ ಅವರ ಆದರ್ಶ ವ್ಯಕ್ತಿತ್ವ ನಮಗೆಲ್ಲರಿಗೂ ಸದಾ ಪ್ರೇರಣೆಯಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮ ದಲ್ಲಿ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್,ಸಿಂಚನಗೌಡ (ಮಂಗಳಮುಖಿ), ವಿದ್ಯಾ, ಛಾಯಾ,ಗಾಯಕ ಯಶವಂತ್ ಕುಮಾರ್, ರಾಜೇಶ್ ಕುಮಾರ್, ಮಹೇಶ, ನಿರೀಕ್ಷಿತ್,ದತ್ತ ಮತ್ತಿತರರು ಹಾಜರಿದ್ದರು.

ಡಾ. ಬಿ ಆರ್ ಅಂಬೇಡ್ಕರ್ 69ನೇ ಮಹಾ ಪರಿನಿಬ್ಬಾಣ ದಿನ-ಸೇವಾಕಾರ್ಯ Read More

ರವಿಚಂದ್ರ, ಸಿಂಚನಗೌಡಗೆ ಸನ್ಮಾನ

ಮೈಸೂರು: ಎಸ್ ಪ್ರಕಾಶ್ ಪ್ರಿಯದರ್ಶನ್ ಸ್ನೇಹ ಬಳಗದ ವತಿಯಿಂದ ಕನಕದಾಸ ಪತ್ತಿನ ಸಹಕಾರ ಸಂಘದ ನೂತನ ನಿರ್ದೇಶಕ ಎಂ. ರವಿಚಂದ್ರ ಮತ್ತು ಎಂ ಎಂ ಗ್ರೂಪ್ಸ್ ನವರು ನೀಡಿರುವ ಕರ್ನಾಟಕ ಅಚೀವರ್ಸ್ ಅವಾರ್ಡ್ ಪುರಸ್ಕೃತ ಸಿಂಚನಗೌಡ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಮೈಸೂರು ನಗರ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್, ವಿದ್ಯಾ, ದೇವ ರತ್ನ,ರಾಜೇಶ್ ಕುಮಾರ್,ಮಹೇಶ, ಶ್ರೀಧರ್, ಮಹದೇವಸ್ವಾಮಿ, ದತ್ತ ಮತ್ತಿತರರು ಹಾಜರಿದ್ದರು.

ರವಿಚಂದ್ರ, ಸಿಂಚನಗೌಡಗೆ ಸನ್ಮಾನ Read More

ಮಕ್ಕಳು ಓದಿನ ಜೊತೆ ಕ್ರೀಡಾಸಕ್ತಿ ಬೆಳೆಸಿಕೊಳ್ಳಿ- ಮಕ್ಕಳಿಗೆ ರವಿಚಂದ್ರ ಕರೆ

ಮೈಸೂರು: ಶಿಕ್ಷಣ ಎನ್ನುವುದು ಪ್ರತಿಯೊಂದು ಮಕ್ಕಳಿಗೆ ಸಿಗಬೇಕಾದ ಮೂಲಭೂತ ಹಕ್ಕು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ಪೋಷಕರ ಕರ್ತವ್ಯ ಎಂದು ಕನಕದಾಸ ಪತ್ತಿನ ಸಹಕಾರ ಸಂಘದ ನಿರ್ದೇಶಕ ಎಂ. ರವಿಚಂದ್ರ ತಿಳಿಸಿದರು.

ಎಂ.ಜಿ. ರಸ್ತೆಯಲ್ಲಿರುವ ಸಿ.ಎಸ್.ಐ. ಬಾಯ್ಸ್ ಬೋರ್ಡಿಂಗ್ ಹೋಮ್ ವಿದ್ಯಾರ್ಥಿಗಳಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ವತಿಯಿಂದ ನೋಟ್ ಬುಕ್, ಲೇಖನಿ ಸಾಮಗ್ರಿ,ಹಣ್ಣು ಹಂಪಲು ವಿತರಿಸಿದ ವೇಳೆ ಅವರು ಮಾತನಾಡಿದರು.

ಮಕ್ಕಳು ಓದಿನಿ ಕಡೆ ಹೆಚ್ಚು ಗಮನ ಕೊಟ್ಟು ವಿದ್ಯಾವಂತರಾಗಬೇಕು. ಶಿಕ್ಷಣದ ಜೊತೆಯಲ್ಲಿ ಕಲೆ,ಕ್ರೀಡೆ,ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಆಸಕ್ತಿ‌ ಬೆಳೆಸಿಕೊಳ್ಳಬೇಕು, ಯಾವ ಕ್ಷೇತ್ರದಲ್ಲಿ ಮಕ್ಕಳಿಗೆ ಒಲವಿದೆ ಅದನ್ನು ಗುರುತಿಸಿ ಪೋಷಕರು, ಶಿಕ್ಷಕರು ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು.

ಇಂತಹ ಶಿಕ್ಷಣ ಸಿಕ್ಕಾಗ ಮಕ್ಕಳು ಪ್ರತಿಭಾನ್ವಿತರಾಗಿ ಮುಖ್ಯ ವಾಹಿನಿಗೆ ಬಂದು ದೇಶದ ಅತ್ಯುತ್ತಮ ಪ್ರಜೆಯಾಗಲಿದ್ದಾರೆ. ಹಾಗೆ ವಿದ್ಯಾರ್ಥಿಗಳು ಕೂಡ ತಾವು ಪಡೆದ ಶಿಕ್ಷಣವನ್ನು ಇನ್ನೊಬ್ಬರಿಗೆ ವಿದ್ಯಾದಾನ ಮಾಡಲು ಮುಂದಾಗಬೇಕೆಂದು ರವಿಚಂದ್ರ
ಕರೆ ನೀಡಿದರು.

ಈ ಸಂದರ್ಭದಲ್ಲಿ ಮೈಸೂರು ನಗರ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್,ಸಿಂಚನಗೌಡ, ಬೋರ್ಡಿಂಗ್ ಹೊಮ್ ನ ದೇವ ರತ್ನ,ರಾಜೇಶ್ ಕುಮಾರ್,ಮಹೇಶ, ಶ್ರೀಧರ್, ಮಹದೇವಸ್ವಾಮಿ, ದತ್ತ ಮತ್ತಿತರರು ಹಾಜರಿದ್ದರು.

ಮಕ್ಕಳು ಓದಿನ ಜೊತೆ ಕ್ರೀಡಾಸಕ್ತಿ ಬೆಳೆಸಿಕೊಳ್ಳಿ- ಮಕ್ಕಳಿಗೆ ರವಿಚಂದ್ರ ಕರೆ Read More

ಸೇವಾ ಕಾರ್ಯಗಳು ಯುವಕರಿಗೆ ಸ್ಪೂರ್ತಿ:ಎಲ್. ನಾಗೇಂದ್ರ

ಮೈಸೂರು: ಸೇವೆಯಂತಹ ಕಾರ್ಯಗಳು ಸಮಾಜವನ್ನು ಬದಲಾಯಿಸುತ್ತವೆ, ಯುವಕರು ಇಂತಹ ಕಾರ್ಯಕ್ರಮಗಳಿಂದ ಸ್ಫೂರ್ತಿ ಪಡೆಯಬೇಕು ಎಂದು ಮೈಸೂರು ನಗರ ಬಿಜೆಪಿ ಅಧ್ಯಕ್ಷರಾದ ಎಲ್. ನಾಗೇಂದ್ರ ತಿಳಿಸಿದರು.

ವಿದ್ಯಾರಣ್ಯಪುರಂ ನಲ್ಲಿರುವ ಸಾರ್ವಜನಿಕ ಸುಬ್ಬಣ್ಣ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಹಣ್ಣುಹಂಪಲು, ನೋಟ್‌ಬುಕ್‌ಗಳು ಮತ್ತು ಲೇಖನಿ ಸಾಮಗ್ರಿಗಳನ್ನು ವಿತರಿಸುವ ಮೂಲಕ ಎಸ್. ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗ ತನ್ನ 250ನೇ ಸೇವಾ ಕಾರ್ಯಕ್ರಮವನ್ನು ಆಚರಿಸಿದ ವೇಳೆ ನಾಗೇಂದ್ರ ಅವರು ಭಾಗವಹಿಸಿ ಅಭಿನಂದನೆ ಸಲ್ಲಿಸಿ ಮಾತನಾಡಿದರು.

ಮೈಸೂರು ನಗರ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಾಶಂಕರ ಗೌಡ ಮಾತನಾಡಿ,
ವಿದ್ಯಾರ್ಥಿಗಳಿಗೆ ಹಣ್ಣು ಮತ್ತು ಶಿಕ್ಷಣ ಸಾಮಗ್ರಿಗಳನ್ನು ನೀಡುವ ಸಂವೇದನೆ ಸಮಾಜದಲ್ಲಿ ಮೌಲಿಕ ಬದಲಾವಣೆ ತರುತ್ತದೆ ಎಂದು ಪ್ರಶಂಸಿಸಿದರು.

ಕಾರ್ಯಕ್ರಮದ ರೂವಾರಿ ಮೈಸೂರು ನಗರ ಜೆಡಿಎಸ್ ಕಾರ್ಯಾಧ್ಯಕ್ಷರಾದ ಎಸ್. ಪ್ರಕಾಶ್ ಪ್ರಿಯಾದರ್ಶನ್ ಮಾತನಾಡಿ,
ಸೇವೆ, ಹಣ್ಣು ಹಂಚಿಕೆ ಮತ್ತು ಮಾನವೀಯತೆ ಇವೇ ನಮ್ಮ ಬಳಗದ ಮೌಲ್ಯಗಳು ಎಂದು ಹೇಳಿದರು.

ಇದು ಕೇವಲ ಸಹಾಯವಲ್ಲ, ಸಮಾಜಕ್ಕೆ ಕೃತಜ್ಞತೆ ವ್ಯಕ್ತಪಡಿಸುವ ನಮ್ಮ ಮಾರ್ಗ ಎಂದು ತಿಳಿಸಿದರು.

ಈ ಸೇವಾ ಕಾರ್ಯವನ್ನು ಮುಂದುವರಿಸುತ್ತೇವೆ, ಸ್ನೇಹ ಬಳಗವು ಮುಂದಿನ ದಿನಗಳಲ್ಲಿ ಇನ್ನಷ್ಟು ಆಶ್ರಮಗಳು, ವಿದ್ಯಾರ್ಥಿ ನಿಲಯಗಳು, ವಿಶೇಷ ಚೇತನ ಕೇಂದ್ರಗಳು ಮತ್ತು ವಯೋವೃದ್ಧರಿಗೆ ಸೇವೆ ನೀಡುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ‌ ಮಾಜಿ ಉಪ ಮಹಾಪೌರ ಶೈಲೇಂದ್ರ,ಮಂಗಳೂರು ಮಹಿಳಾ ರತ್ನ ಪ್ರಶಸ್ತಿ ಪುರಸ್ಕೃತರು, ಸಮಾಜ ಸೇವಕಿ ವಿದ್ಯಾ,ಮಂಗಳಮುಖಿ ಪ್ರತಿನಿಧಿ ಸಿಂಚು ಗೌಡ, ⁠ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಶಿವಕುಮಾರ್ ಕೊಳಸಂದಿ,ಭುವನೇಶ್ವರಿ ಸೇವಾ ಟ್ರಸ್ಟ್ ಅಧ್ಯಕ್ಷೆ ನಾಗಶ್ರೀ,
ಹಿರಿಯ ಕ್ರೀಡಾಪಟು ಮಹಾದೇವ್, ಛಾಯ, ಗಾಯಕ ಯಶವಂತ್ ಕುಮಾರ್, ಭವ್ಯ,ಸುಬ್ರಮಣ್ಯ, ಸಚಿಂದ್ರ , ಸುಬ್ಬಣ್ಣ ಹಾಸ್ಟೆಲ್ ನ ಗೋಪಾಲ್ ಗೌಡ, ಬಂಡಿಕೇರಿ ರವಿ,ಮಂಜುನಾಥ್, ಬಿಜೆಪಿ ಮುಖಂಡರಾದ ಪುರುಷೋತ್ತಮ್, ಭಾಸ್ಕರ್, ವಡಿವೇಲು ಚಟ್ಟಿಯಾರ್, ಬಿಜೆಪಿ ಮುಖಂಡ ಪುರುಷೋತ್ತಮ್, ಶಿವಲಿಂಗ ಸ್ವಾಮಿ,ರಾಜು ಬಂಡೆಪ್ಪ,ಮಹೇಶ, ಮಂಜುನಾಥ್, ಎಸ್ ಪಿ ಅಕ್ಷಯ ಪ್ರಿಯಾದರ್ಶನ್ , ಹರ್ಷಿತ ಎಸ್ ನಾಗೇಶ್,ದತ್ತ ಹಾಗೂ ಅನೇಕ ಸಮಾಜ ಸೇವಕರು, ವಿದ್ಯಾರ್ಥಿಗಳು ಹಾಗೂ ಸ್ನೇಹ ಬಳಗದ ಸದಸ್ಯರು ಉಪಸ್ಥಿತರಿದ್ದರು.

ಸೇವಾ ಕಾರ್ಯಗಳು ಯುವಕರಿಗೆ ಸ್ಪೂರ್ತಿ:ಎಲ್. ನಾಗೇಂದ್ರ Read More

ಮಕ್ಕಳಿಗೆ ಹಿರಿಯರ ಮಾರ್ಗದರ್ಶನ ಸಿಗುತ್ತಿಲ್ಲ- ಲೋಕೇಶ್ ಕುಮಾರ್ ವಿಷಾದ

ಮೈಸೂರು: ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ನಾಣ್ಣುಡಿ ಆಧುನಿಕ ಜೀವನ ಶೈಲಿಯಿಂದ ಮರೆಯಾಗುತ್ತಿರುವುದರಿಂದ ಮಕ್ಕಳು ಯುವಕರಿಗೆ ಸೂಕ್ತ ಮಾರ್ಗದರ್ಶನ ಸಿಗುತ್ತಿಲ್ಲ ಎಂದು ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ನಿರ್ದೇಶಕ ಎಂ ಲೋಕೇಶ್ ಕುಮಾರ್ ವಿಷಾದಿಸಿದರು.

ಕುವೆಂಪು ನಗರದ ಎಂ.ಬ್ಲಾಕ್ ನಲ್ಲಿರುವ ಬೆಳಕು ವಾತ್ಸಲ್ಯದಾಮದ ಹಿರಿಯ ನಾಗರಿಕರಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ ಸ್ನೇಹ ಬಳಗದ ವತಿಯಿಂದ ಕಡೇ ಕಾರ್ತಿಕ ಸೋಮವಾರದ ಅಂಗವಾಗಿ ಹೊಸ ಸೀರೆ, ಹಣ್ಣು ಹಂಪಲು ವಿತರಣಾ ಕಾರ್ಯಕ್ರಮದ ವೇಳೆ‌ ಲೋಕೇಶ್ ಕುಮಾರ್ (ಮಾದಾಪುರ)ಅವರು ಮಾತನಾಡಿದರು.

ಇತ್ತೀಚಿನ ವರ್ಷಗಳಲ್ಲಿ ವೃದ್ಧಾಶ್ರಮಗಳು ಹೆಚ್ಚುತ್ತಿವೆ ಹಾಗಾಗಿ ಹಿರಿಯರು ನೀಡುತ್ತಿದ್ದ ಮಾರ್ಗದರ್ಶನ ಇಂದು ಇಲ್ಲವಾಗಿದೆ, ಹಿರಿಯರನ್ನು ನಿರ್ಲಕ್ಷಿಸುತ್ತಿರುವುದು ನೋವಿನ ಸಂಗತಿಯಾಗಿದೆ ಎಂದು ಬೇಸರ‌ ವ್ಯಕ್ತಪಡಿಸಿದರು.

ಹಿರಿಯರ ಬದುಕು ಅತಂತ್ರವಾಗಿ ವೃದ್ಧಾಶ್ರಗಳಲ್ಲಿ ಆಶ್ರಯ ಪಡೆಯುವ ಸ್ಥಿತಿ ನಿರ್ಮಾಣವಾಗಿದ್ದು,ಹಿರಿಯ ತಾಯಂದಿರನ್ನು ಹೆಚ್ಚು ಕಾಳಜಿ ವಹಿಸಿ ಆಶ್ರಯ ನೀಡಿ ಆರೈಕೆ ಮಾಡುತ್ತಿರುವ ಬೆಳಕು ವಾತ್ಸಲ್ಯದಾಮದ ಸೇವೆ ಅಪಾರ ಎಂದು ಲೋಕೇಶ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಮೈಸೂರು ನಗರ ಜೆ.ಡಿ.ಎಸ್ ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್, ಶಿಂಷ ದಿನೇಶ್,ಮೋಹನ್ ಕುಮಾರ್,ಕಾಳೇಗೌಡ, ರಾಜಶೇಖರ್, ಹಿರಿಯ ಕ್ರೀಡಾಪಟು ಮಹಾದೇವ್, ಸುಬ್ರಮಣ್ಯ,ರಾಜೇಶ್ ಕುಮಾರ್,ಮಹೇಶ, ಶ್ರೀಧರ್, ದತ್ತ ಮತ್ತಿತರರು ಹಾಜರಿದ್ದರು.

ಮಕ್ಕಳಿಗೆ ಹಿರಿಯರ ಮಾರ್ಗದರ್ಶನ ಸಿಗುತ್ತಿಲ್ಲ- ಲೋಕೇಶ್ ಕುಮಾರ್ ವಿಷಾದ Read More

ಕನಕರು ದೇಶ ಕಂಡ ಶ್ರೇಷ್ಠ ದಾಸರು: ರಘುರಾಮ್ ವಾಜಪಾಯಿ

ಮೈಸೂರು: ಕನಕದಾಸರು ದೇಶ ಕಂಡ ದಾಸ ಶ್ರೇಷ್ಠರು ಎಂದು ಹಿರಿಯ ಸಮಾಜ ಸೇವಕ
ಕೆ.ರಘುರಾಮ್ ವಾಜಪಾಯಿ ತಿಳಿಸಿದರು.

ನಗರದ ಎಂ.ಜಿ. ರಸ್ತೆಯಲ್ಲಿರುವ ಸಿ.ಎಸ್.ಐ. ಗರ್ಲ್ಸ್ ಬೋರ್ಡಿಂಗ್ ಹೋಮ್ ನಲ್ಲಿ ಎಸ್ ಪ್ರಕಾಶ್ ಪ್ರಿಯಾದರ್ಶನ ಸ್ನೇಹ ಬಳಗದ ವತಿಯಿಂದ ದಾಸ ಶ್ರೇಷ್ಠ ಶ್ರೀ ಭಕ್ತ ಕನಕದಾಸರ 538ನೇ ಜಯಂತೋತ್ಸವ ಆಚರಣೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಮಹನೀಯರಿಗೆ ಕನಕ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಜಾತಿ, ಮತ, ಪಂಥಗಳನ್ನು ಹೋಗಲಾಡಿಸಿದರು. 12ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪವನ್ನು ಸ್ಥಾಪಿಸಿ ಸಮ ಸಮಾಜ ಕಟ್ಟುವ ಕೆಲಸ ಮಾಡಿದವರು ಎಲ್ಲಾ ಸಮಾಜದ ಏಳಿಗೆಗೆ ಶ್ರಮಿಸಿದವರು ಎಂದು ಬಣ್ಣಿಸಿದರು.

ರಾಜ್ಯ ಜೆ.ಡಿ.ಎಸ್. ವಕ್ತಾರ ರವಿಚಂದ್ರ ಗೌಡ ಮಾತನಾಡಿ,ಸಮಾಜ ಸುಧಾರಣೆಗಾಗಿ ಕೀರ್ತನೆಗಳ ಮೂಲಕ ಜಾತಿ ಮುಖ್ಯ ಅಲ್ಲ ನೀತಿ ಮುಖ್ಯ ಎಂದು ಕನಕದಾಸರು ಸಾರಿದರು

ತಮ್ಮ ಭಕ್ತಿಯಿಂದ ಶ್ರೀ ಕೃಷ್ಣನನ್ನೇ ತನ್ನಡೆಗೆ
ಒಲಿಸಿಕೊಂಡವರು, ಸಂತ ಶ್ರೇಷ್ಠ ಶ್ರೀ ಭಕ್ತಿ ಕನಕದಾಸರು ಎಂದು ಹೇಳಿದರು.

ಜನಸಾಮಾನ್ಯರಲ್ಲಿ ಮಾನವೀಯ ಮೌಲ್ಯವನ್ನು ಬೆಳೆಸುವ ದಾಸ ಸಾಹಿತ್ಯ ಭಕ್ತಿ ಪಂಥದ ಮೂಲಕ ಮನಕುಲಕ್ಕೆ ಅತ್ಯುತ್ತಮ ಸಂದೇಶವನ್ನು ನೀಡಿದ್ದಾರೆ ಎಂದು ತಿಳಿಸಿದರು.

ಈ‌ ವೇಳೆ ಬೋರ್ಡಿಂಗ್ ಹೋಮ್ ನ ಹೆಣ್ಣು ಮಕ್ಕಳಿಗೆ ನೋಟ್ ಬುಕ್,ಹಣ್ಣು ಹಂಪಲು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಕನಕ ಜಯಂತಿಯನ್ನು ಆಚರಿಸಲಾಯಿತು.

ಡಾ.ರಘುರಾಮ್ ವಾಜಪೇಯಿ, ( ಸಾಮಾಜಿಕ ಕ್ಷೇತ್ರ)ಎನ್ ರಾಜು, ( ಸಂಘಟನಾ ಕ್ಷೇತ್ರ) ವಿಜಯ್ ಕುಮಾರ್ ( ಸಾಮಾಜಿಕ ಕ್ಷೇತ್ರ) ಕಲೀo ಷರೀಫ್, ( ಸಾಮಾಜಿಕ ಕ್ಷೇತ್ರ) ಮುತ್ತಣ್ಣ ( ವೈದ್ಯಕೀಯ ಕ್ಷೇತ್ರ) ಎಸ್.ಆರ್.ರವಿಕುಮಾರ್ ( ಸಹಕಾರಿ ಕ್ಷೇತ್ರ)ಮಹದೇವ್ (ಕ್ರೀಡಾ ಕ್ಷೇತ್ರ), ಸಿ.ಜೆ. ಹೋಮದೇವ್( ಪತ್ರಿಕಾ ಕ್ಷೇತ್ರ), ಎಂ ರಾಮಕೃಷ್ಣ (ಧಾರ್ಮಿಕ ಕ್ಷೇತ್ರ)ಇವರನ್ನು ಸನ್ಮಾನಿಸಿ ಪ್ರಶಸ್ತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷರಾದ ಲಿಂಗರಾಜು, ಜೀವದಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ,ಮೈಸೂರು ನಗರ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್, ರವಿಚಂದ್ರ,ಬಿಜೆಪಿ ಮುಖಂಡ ಪುರುಷೋತ್ತಮ್, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷರಾದ ಕೆ ಆರ್ ಮಿಲ್ ಶಿವಣ್ಣ, ರಾಜುಬಂಡೆಪ್ಪ.ಭವ್ಯ,
ಸುಬ್ರಮಣ್ಯ,ರಾಜೇಶ್ ಕುಮಾರ್,ಮಹೇಶ, ಬೆಳಕು ಚಾರಿಟೇಬಲ್ ಟ್ರಸ್ಟ್ ನ ಕೃಷ್ಣ ಮಧುಸೂದನ್, ಶ್ರೀಧರ್, ಎಸ್. ಪಿ.ಅಕ್ಷಯ್ ಪ್ರಿಯಾದರ್ಶನ್, ದತ್ತ,ಹರ್ಷಿತ್ ಎಸ್ ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.

ಕನಕರು ದೇಶ ಕಂಡ ಶ್ರೇಷ್ಠ ದಾಸರು: ರಘುರಾಮ್ ವಾಜಪಾಯಿ Read More

ಮಕ್ಕಳಿಗೆ ಕನ್ನಡ ಪರಂಪರೆ ಪರಿಚಯಿಸಿ: ಪ್ರಕಾಶ್ ಪ್ರಿಯದರ್ಶನ್

ಮೈಸೂರು: ಕರ್ನಾಟಕ ರಾಜ್ಯೋತ್ಸವ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತ ವಾಗದಿರಲಿ ಎಂದು ಜೆಡಿಎಸ್ ಕಾರ್ಯಧ್ಯಕ್ಷ ಎಸ್ ಪ್ರಕಾಶ್ ಪ್ರಿಯದರ್ಶನ್ ಹೇಳಿದರು.

ನಗರದ ರಾಮಾನುಜ ರಸ್ತೆಯಲ್ಲಿರುವ ಜ್ಯೋತಿರ್ಗಮಯ ಉಚಿತ ವಿದ್ಯಾರ್ಥಿನಿಯರ ನಿಲಯದ ಬಂಧುಗಳಿಗೆ ಎಸ್ ಪ್ರಕಾಶ್ ಪ್ರಿಯದರ್ಶನ್ ಸ್ನೇಹ ಬಳಗದ ವತಿಯಿಂದ ಪುಸ್ತಕ ಹಾಗೂ ಹಣ್ಣು ಹಂಪಲು ವಿತರಿಸುವ ಮೂಲಕ 70ನೇ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿದ ವೇಳೆ ಅವರು ಮಾತನಾಡಿದರು.

ತಾವು ಕನ್ನಡಿಗರೆಂದು ಹೇಳಿಕೊಳ್ಳುವ ಪೋಷಕರು ತಮ್ಮ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿಯೇ ಕಲಿಯಬೇಕು. ಇಂಗ್ಲಿಷ್ ಸಂಸ್ಕೃತಿಯನ್ನೇ ಮೈಗೂಡಿಸಿಕೊಳ್ಳಬೇಕು ಎಂಬ ಸಂಕುಚಿತ ಭಾವನೆಗೆ ಒಳಗಾಗದೇ, ಕನ್ನಡ ನಾಡಿನ ಹಿರಿಮೆಯನ್ನು ಅರಿತು ತಮ್ಮ ಮಕ್ಕಳಿಗೂ ತಿಳಿಸಬೇಕು. ಆ ಮೂಲಕ ಅವರಿಗೆ ಕನ್ನಡ ಸಾಹಿತ್ಯದ ಭವ್ಯ ಪರಂಪರೆಯನ್ನು ಪರಿಚಯಿಸಿಕೊಡ ಬೇಕು ಎಂದು ಸಲಹೆ ನೀಡಿದರು.

ನಾಡಿನ ಭವ್ಯ ಇತಿಹಾಸದಿಂದ ಇಂದಿನ ಮಕ್ಕಳು ವಂಚಿತರಾಗಿದ್ದಾರೆ. ಕೇವಲ ಮಾಧ್ಯಮಗಳಲ್ಲಿ ಬರುವ ಚಿತ್ರಗಳು, ಘಟನೆಗಳೇ ನಮ್ಮ ನಾಡಿನ ಪರಂಪರೆ ಎಂದು ಭಾವಿಸಿದ್ದಾರೆ. ಕನ್ನಡ ನಾಡಿನಿಂದಲೇ ಕನ್ನಡ ಮರೆಯಾಗುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಕನ್ನಡದ ಹಿರಿಮೆ ಸಂಪೂರ್ಣ ಇಲ್ಲದಂತಾಗುವ ಮೊದಲು ಎಚ್ಚೆತ್ತುಕೊಳ್ಳಬೇಕಿದೆ ಎಂದು ಪ್ರಕಾಶ್ ಪ್ರಿಯದರ್ಶನ್ ಕರೆ ನೀಡಿದರು.

ಈ ಸಂದರ್ಭದಲ್ಲಿ ಜ್ಯೋತಿರ್ಗಮಯ ವಿದ್ಯಾರ್ಥಿನಿಯರ ನಿಲಯದ ಮಾದೇಶ್,ಮಯೂರ ಕನ್ನಡ ಯುವಕರ ಬಳಗದ ಅಧ್ಯಕ್ಷರಾದ ಜಿ ರಾಘವೇಂದ್ರ, ಕಾಂಗ್ರೆಸ್ ಯುವ ಮುಖಂಡ ಎಂ. ರವಿಚಂದ್ರ , ಕರುಣಾಮಯಿ ವಿಷ್ಣುವರ್ಧನ್ ಸಂಘದ ಅಧ್ಯಕ್ಷ ಎಸ್ ಎನ್ ರಾಜೇಶ್, ಬಿಜೆಪಿ ಮುಖಂಡ ಪುರುಷೋತ್ತಮ್, ಅಮಿತ್, ಹಿರಿಯ ಕ್ರೀಡಾಪಟು ಮಹದೇವ್,ಛಾಯ,ಗಾಯಕ ಯಶವಂತ್ ಕುಮಾರ್, ಭವ್ಯ,ಸುಬ್ರಮಣ್ಯ,ರಾಜೇಶ್ ಕುಮಾರ್,ಮಹೇಶ, ಸತ್ಯ ಪ್ರಕಾಶ್, ಶ್ರೀಧರ್, ಎಸ್. ಪಿ.ಅಕ್ಷಯ್ ಪ್ರಿಯಾದರ್ಶನ್, ದತ್ತ,ಹರ್ಷಿತ್ ಎಸ್ ನಾಗೇಶ್ ಮತ್ತಿತರರು ಹಾಜರಿದ್ದರು.

ಮಕ್ಕಳಿಗೆ ಕನ್ನಡ ಪರಂಪರೆ ಪರಿಚಯಿಸಿ: ಪ್ರಕಾಶ್ ಪ್ರಿಯದರ್ಶನ್ Read More

ದಾನ ಮಾಡುವ ಮನಸ್ಸು ಮುಖ್ಯ: ಸತ್ಯನಾರಾಯಣ್

ಮೈಸೂರು: ಮನುಷ್ಯ ಎಷ್ಟೇ ಹಣವಂತನಾದರೂ ಮತ್ತೊಬ್ಬರಿಗೆ ಸಹಾಯ ಮಾಡುವ ಗುಣವಿಲ್ಲದೆ ಇದ್ದರೆ ಪ್ರಯೋಜನವಿಲ್ಲ ಎಂದು ಸಂಸ್ಕೃತ ಪಾಠ ಶಾಲೆಯ ಪ್ರಾಶುಂಪಲಾರಾದ ಸತ್ಯನಾರಾಯಣ್ ತಿಳಿಸಿದರು.

ನಗರದ ಸಯಾಜಿ ರಾವ್ ರಸ್ತೆಯಲ್ಲಿರುವ ಸಂಸ್ಕೃತ ಪಾಠ ಶಾಲೆಯ ವಿದ್ಯಾರ್ಥಿ ಬಂಧುಗಳಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ಸೇವಾ ಕಾರ್ಯದ ಹಿನ್ನೆಲೆಯಲ್ಲಿ ನೋಟ್ ಬುಕ್,ಹಣ್ಣು ಹಂಪಲು ವಿತರಿಸಿದ ವೇಳೆ ಅವರು ಮಾತನಾಡಿದರು.

ದಾನಮಾಡುವ ಮನಸ್ಸು ಮುಖ್ಯವಾಗಿರುತ್ತದೆ.ಇತರರಿಗೆ ಒಳಿತು ಮಾಡುವ ಯಾವ ಅವಕಾಶವನ್ನು ಕಳೆದುಕೊಳ್ಳಬೇಡಿ ಎಂದು ಸಲಹೆ ನೀಡಿದರು.

ನಾಳಿನ ಬಗ್ಗೆ ಬಲ್ಲವರಾರು ನಾವು ಎಷ್ಟು ಸಂತೋಷದಿಂದ ತಿಂದುಂಡು ಬದುಕಿದೆವು ಎನ್ನುವುದಕ್ಕಿಂತ ನಾವು ಪರರ ಕಷ್ಟ ಸುಖಗಳಿಗೆ ಹೇಗೆ ನೆರವಾದೆವು ಭರವಸೆಯ ಬೆಳಕಾದೆವು ಎನ್ನುವುದೇ ಜೀವನದ ಪರಿಪೂರ್ಣತೆ ಎಂದು ಸತ್ಯನಾರಾಯಣ್ ತಿಳಿಸಿದರು.

ಎಸ್ ಪ್ರಕಾಶ್ ಪ್ರಿಯಾದರ್ಶನ ಸ್ನೇಹ ಬಳಗವು ನಿರಂತರವಾಗಿ ವಾರಕ್ಕೊಮ್ಮೆ ಒಂದಲ್ಲ ಒಂದು ಕಡೆ ಸೇವಾ ಕಾರ್ಯ ನಡೆಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮೈಸೂರು ನಗರ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್, ಛಾಯ,ಗಾಯಕ ಯಶವಂತ್ ಕುಮಾರ್, ಭವ್ಯ,ಸುಬ್ರಮಣ್ಯ,ರಾಜೇಶ್ ಕುಮಾರ್,ಮಹೇಶ, ಎಸ್. ಪಿ.ಅಕ್ಷಯ್ ಪ್ರಿಯಾದರ್ಶನ್, ದತ್ತ,ಹರ್ಷಿತ್ ಎಸ್ ನಾಗೇಶ್, ಸಂಸ್ಕೃತ ಪಾಠಶಾಲೆಯ ಶಿಕ್ಷಕರುಗಳಾದ ಸುಮಂತ್, ಸಿ. ಎಸ್.ವೀರಪ್ಪಾಜಿ, ಕುಮಾರ್ ಭಟ್ಟ್ ಬೋರೇಗೌಡ, ಶರ್ಮ ಗಣಪತಿ, ರಾಜು ಮತ್ತಿತರರು ಹಾಜರಿದ್ದರು.

ದಾನ ಮಾಡುವ ಮನಸ್ಸು ಮುಖ್ಯ: ಸತ್ಯನಾರಾಯಣ್ Read More

ದೃಷ್ಟಿ ದೋಷವುಳ್ಳ ಹೆಣ್ಣು ಮಕ್ಕಳಿಗೆ ಹಣ್ಣು ಹಂಪಲು ವಿತರಿಸಿ ದಸರಾ ಸಂಭ್ರಮ

ಮೈಸೂರು: ನಗರದ ರಾಮಾನುಜ ರಸ್ತೆಯಲ್ಲಿರುವ ಜೆಎಸ್ಎಸ್ ಸಂಸ್ಥೆಯವರ ವಿಶೇಷ ಚೇತನ ದೃಷ್ಟಿದೋಷವುಳ್ಳ ಉದ್ಯೋಗಸ್ಥ ಹಾಗೂ ವಿದ್ಯಾರ್ಥಿನಿಯರ ನಿಲಯದಲ್ಲಿ ನಾಡಹಬ್ಬ ದಸರಾ ಪ್ರಯುಕ್ತ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ವತಿಯಿಂದ ಹಣ್ಣು,ಹಂಪಲು ವಿತರಿಸಲಾಯಿತು.

ಸ್ನೇಹ ಬಳಗದ ಸದಸ್ಯರು ಅವರೊಂದಿಗೆ ಬೆರೆತು ಅವರ ಯೋಗಕ್ಷೇಮ ವಿಚಾರಿಸಿ ಹಣ್ಣು ಹಂಪಲು ವಿತರಿಸಿ, ದಸರಾ ಹಬ್ಬದ ಶುಭಾಶಯ ಗಳನ್ನು ತಿಳಿಸಿ,ಸೇವಾ ಸಂಭ್ರಮಾಚರಣೆ ಮಾಡಿದರು.

ಈ ಮಭ್ರಮದಲ್ಲಿ ಮೈಸೂರು ನಗರ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್, ಗಾಯಕ ಯಶವಂತ್ ಕುಮಾರ್, ಹಿರಿಯ ಕ್ರೀಡಾಪಟು ಮಹದೇವ್, ರಾಜೇಶ್ ಕುಮಾರ್,ಮಹೇಶ್, ಸರ್ವಮಂಗಳ,ಶೋಭಾ , ಎಸ್. ಪಿ ಅಕ್ಷಯ್ ಪ್ರಿಯಾದರ್ಶನ್, ಹರ್ಷಿತ್ ಎಸ್ ನಾಗೇಶ್, ದತ್ತ ಮತ್ತಿತರರು ಪಾಲ್ಗೊಂಡಿದ್ದರು.

ದೃಷ್ಟಿ ದೋಷವುಳ್ಳ ಹೆಣ್ಣು ಮಕ್ಕಳಿಗೆ ಹಣ್ಣು ಹಂಪಲು ವಿತರಿಸಿ ದಸರಾ ಸಂಭ್ರಮ Read More