ಜ್ಯುವೆಲ್ಲರಿ ಶಾಪ್ ನಲ್ಲಿ ಆಭರಣ ದೋಚಿದ ಮುಸುಕುಧಾರಿ ದರೋಡೆಕೋರರು

ಬೆಂಗಳೂರು: ಬೆಂಗಳೂರು ಹೊರವಲಯದ ಮಾದನಾಯಕನ ಹಳ್ಳಿ ಬಳಿ ಗನ್ ತೋರಿಸಿ ಬೆದರಿಕೆ ಹಾಕಿ ಜ್ಯುವೆಲ್ಲರಿ ಶಾಪ್ ನಲ್ಲಿ ಚಿನ್ನಾಭರಣ ದೋಚಿರುವ ಘಟನೆ ನಡೆದಿದ್ದು ಆಭರಣ ಅಂಗಡಿಗಳವರು ತೀವ್ರ ‌ಆತಂಕಗೊಂಡಿದ್ದಾರೆ.

ರಾಮ್ ಜ್ಯುವೆಲ್ಲರಿ ಶಾಪ್ ನಲ್ಲಿ ಈ ಘಟನೆ ನಡೆದಿದ್ದು,ದರೋಡೆಕೋರರು ಮುಸುಕುಧಾರಿಗಳಾಗಿ ಒಳಗೆ ನುಗ್ಗುವ‌ ದೃಶ್ಯ
ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಜ್ಯುವಲ್ಲರಿ ಶಾಪ್ ಮುಚ್ಚಲು ಸಿಬ್ಬಂದಿ ಆಭರಣಗಳ ಬಾಕ್ಸ್ಗಳನ್ನು ಜೋಡಿಸಿ ಇಡುತ್ತಿದ್ದಾಗಲೇ ಮುಸುಕು ಧರಿಸಿದ್ದ ಮೂವರು ದರೋಡೆಕೋರರು ಸಡನ್ನಾಗಿ ಒಳಗೆ ನುಗ್ಗಿ ಗಲ್ಲಾದ ಚೇರ್ ನಲ್ಲಿ ಕುಳಿತಿದ್ದ ಮಾಲೀಕನಿಗೆ ಗನ್ ತೋರಿಸಿ ಬೆದರಿಕೆ ಹಾಕಿದ್ದಾರೆ,ಉಳಿದವರು ಆಭರಣಗಳ ಬಾಕ್ಸ್ಗಳನ್ನು ಚೀಲಕ್ಕೆ ತುಂಬಿ ಓಡುತ್ತಾರೆ.

ಮಾಚೋಹಳ್ಳಿ ಗೇಟ್ ನ ಭೈರವೇಶ್ವರ ಕಾಂಪ್ಲೆಕ್ಸ್ ನಲ್ಲಿರೋ ರಾಮ್ ಜ್ಯುವೆಲ್ಲರ್ಸ್
ಮುಚ್ಚುವಾಗ ದರೋಡೆಕೋರರು ನುಗ್ಗಿದ್ದು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಈ ವೇಳೆ ಮಾಲೀಕ ಕನ್ನಯ್ಯಲಾಲ್ ಕಿರುಚಾಡಿ ಸಹಾಯಕ್ಕೆ ಕೂಗಿದ್ದಾರೆ.ಕನ್ನಯ್ಯಲಾಲ್ ಕೂಗಾಟ ಕೇಳಿ ಪಕ್ಕದ ಅಂಗಡಿಯವರು ಬಂದಿದ್ದಾರೆ.ಅವರ ಮೇಲೂ ಚಾಕುವಿನಿಂದ ಅಟ್ಯಾಕ್ ಮಾಡಿ ಪರಾರಿಯಾಗಿದ್ದಾರೆ.

ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಜ್ಯುವೆಲ್ಲರಿ ಶಾಪ್ ನಲ್ಲಿ ಆಭರಣ ದೋಚಿದ ಮುಸುಕುಧಾರಿ ದರೋಡೆಕೋರರು Read More

ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಕಾಲಿಗೆ ಗುಂಡು

ಮೈಸೂರು: ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ.

ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗೋಪಾಲಪುರ ಗ್ರಾಮದ ಬಳಿ ಘಟನೆ ನಡೆದಿದ್ದು,ಮಹಜರ್ ನಡೆಸುವ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿ ಆಗಲು ಯತ್ನಿಸಿದ ಹಿನ್ನಲೆಯಲ್ಲಿ ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿಸಿ ಹಿಡಿದಿದ್ದಾರೆ.

ಆರೋಪಿ ನಡೆಸಿದ ದಾಳಿಯಲ್ಲಿ ಸಬ್ ಜಯಪುರ ಠಾಣೆ ಸಬ್ಇನ್ಸ್ಪೆಕ್ಟರ್ ಪ್ರಕಾಶ್
ಮತ್ತು ಕಾನ್ಸ್‌ಟೇಬಲ್ ಗಾಯಗೊಂಡಿದ್ದಾರೆ.

ಕೇರಳಾ ಮೂಲದ ಆರೋಪಿ ಆದರ್ಶ್ ನನ್ನು ಹಿಡಿಯಲಾಗಿದೆ.

ಕೆಲ ದಿನಗಳ ಹಿಂದೆ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಆರೋಹಳ್ಳಿ ಬಳಿ ಹಾಡುಹಗಲೇ ಕೇರಳ ಮೂಲದ ಉದ್ಯಮಿಯನ್ನ ಅಡ್ಡಗಟ್ಟಿ ದರೋಡೆ ನಡೆಸಲಾಗಿತ್ತು.

ಈ ಪ್ರಕರಣಕ್ಕೆ ಸಂಭಂಧಿಸಿದಂತೆ ಪೊಲೀಸರು ಈಗಾಗಲೇ 3 ಆರೋಪಿಗಳನ್ನ ಬಂಧಿಸಿದ್ದಾರೆ.ಇನ್ನೂ ಮೂವರು ಆರೋಪಿಗಳನ್ನ ಕೇರಳಾದಲ್ಲಿ ಬಂದಿಸಲಾಗಿದ್ದು ಈ ಪೈಕಿ ಆದರ್ಶ್ ಸಹ ಒಬ್ಬ.

ದರೋಡೆ ನಡೆದ ಸ್ಥಳದ ಬಳಿ ಪೊಲೀಸರಿಗೆ ಕ್ವಾಲಿಸ್ ಕಾರು ದೊರೆತಿತ್ತು.ಇದರ ಮಾಲೀಕ ಆದರ್ಶ್ ಎಂದು ಪತ್ತೆಹಚ್ಚಲಾಗಿತ್ತು.ಆದರ್ಶ್ ಹಾಗೂ ಸಂಗಡಿಗರ ಬಂಧನಕ್ಕೆ ಸಾಕಷ್ಟು ಕಸರತ್ತು ನಡೆಸಿದ್ದ ಜಿಲ್ಲಾ ಪೊಲೀಸರಿಗೆ ಬಂಧನ ಸವಾಲಾಗಿತ್ತು.ಕೊನೆಗೂ ಆದರ್ಶ್ ಪೊಲೀಸರ ಬಲೆಗೆ ಬಿದ್ದಿದ್ದ.

ಈತನ ಕಾರು ದೊರೆತ ಸ್ಥಳಕ್ಕೆ ಮಹಜರ್ ನಡೆಸುವ ಸಲುವಾಗಿ ಜಯಪುರ ಸಬ್ ಇನ್ಸ್ಪೆಕ್ಟರ್ ಪ್ರಕಾಶ್,ಪಿರಿಯಾಪಟ್ಟಣ ಸಿಪಿಐ ದೀಪಕ್ ಹಾಗೂ ಇಬ್ಬರು ಸಿಬ್ಬಂದಿಗಳು ಕರೆದೊಯ್ದಿದ್ದಾರೆ.ಕಾರು ಪತ್ತೆಯಾದ ಸ್ಥಳವನ್ನ ಆದರ್ಶ್ ಗುರುತಿಸಿದ್ದಾನೆ.ನಂತರ ಮೂತ್ರವಿಸರ್ಜನೆ ನೆಪವೊಡ್ಡಿ ರಸ್ತೆ ಬದಿಯಲ್ಲಿ ನಿಂತು,ಯಾರೋ ಕುಡಿದು ಬಿಸಾಕಿದ್ದ ಬಿಯರ್ ಬಾಟಲಿಯನ್ನ ಒಡೆದು ಸಬ್ ಇನ್ಸ್ಪೆಕ್ಟರ್ ಪ್ರಕಾಶ್ ಹಾಗೂ ಸಿಬ್ಬಂದಿ ಹರೀಶ್ ಮೇಲೆ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ.

ಪ್ರಕಾಶ್ ರವರು ಸಾಕಷ್ಟು ಬಾರಿ ಶರಣಾಗುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ,ಈ ವೇಳೆ ಜೊತೆಯಲ್ಲಿದ್ದ ಇನ್ಸ್ಪೆಕ್ಟರ್ ದೀಪಕ್ ಆತ್ಮರಕ್ಷಣೆಗಾಗಿ ತಮ್ಮಲ್ಲಿದ್ದ ಪಿಸ್ತೂಲ್ ನಿಂದ ಆದರ್ಶ್ ಮೇಲೆ ಗುಂಡು ಹಾರಿಸಿದ್ದಾರೆ.ಆದರ್ಶ್ ಎಡಗಾಲಿಗೆ ಗುಂಡು ತಗುಲಿ ಬಿದ್ದಿದ್ದಾನೆ.

ಗಾಯಗೊಂಡ ಪ್ರಕಾಶ್ ಹಾಗೂ ಹರೀಶ್ ರನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

ಆದರ್ಶ್ ನನ್ನು ಮೇಟಗಳ್ಳಿಯಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಎಸ್ಪಿ ವಿಷ್ಣುವರ್ಧನ್,ಅಡಿಷನಲ್ ಎಸ್ಪಿ ಮಲ್ಲಿಕ್,ಡಿವೈಎಸ್ಪಿ ಕರೀಂ ರಾವ್ ತರ್,ಸರ್ಕಲ್ ಇನ್ಸ್ಪೆಕ್ಟರ್ ಶೇಖರ್ ಹಾಗೂ ಸಿಬ್ಬಂದಿ ಭೇಟಿ ಪರಿಶೀಲನೆ ನಡೆಸಿದ್ದಾರೆ.

ಜಯಪುರ ಪೊಲೀಸರು ಈ ಸಂಭಂಧ ಪ್ರಕರಣ ದಾಖಲಿಸಿದ್ದಾರೆ.

ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಕಾಲಿಗೆ ಗುಂಡು Read More

ರೈಲಿನಲ್ಲಿ ಪ್ರಯಾಣಿಕರನ್ನು ದೋಚುತ್ತಿದ್ದ ನಾಲ್ಕು ಮಂದಿ ಯುವಕರು ಅಂದರ್

ಮೈಸೂರು: ರೈಲಿನಲ್ಲಿ ಪ್ರಯಾಣಿಕರನ್ನು ದೋಚುತ್ತಿದ್ದ ನಾಲ್ಕು ಮಂದಿ ಯುವಕರನ್ನು ಮೈಸೂರು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ಮೈಸೂರು-ಬೆಂಗಳೂರು ರೈಲಿನಲ್ಲಿ ಚಿನ್ನಾಭರಣ, ಮೊಬೈಲ್ ಗಳು ಹಾಗೂ ನಗದು ಕಳವು ಮಾಡಿದ್ದ ಮೈಸೂರಿನ ಘೋಷಿಯಾ ನಗರದ ನಾಲ್ಕು ಮಂದಿಯನ್ನು
ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಮೈಸೂರು- ಬೆಂಗಳೂರು ರೈಲನ್ನು ನಿನ್ನೆ ಸಂಜೆ ಮೈಸೂರಲ್ಲಿ ಹತ್ತಿದ್ದಾರೆ.
ರೈಲು ಪಾಂಡವಪುರ ತಲುಪಿದ ನಂತರ ಮದ್ದೂರಿನವರೆಗೂ ಲಾಂಗು, ಮುಚ್ಚುಗಳನ್ನು ರೈಲಿನಲ್ಲಿ ಪ್ರದರ್ಶಿಸಿ ಪ್ರಯಾಣಿಕರನ್ನು ಬೆದರಿಸಿ ಮೊಬೈಲ್, ನಗದು ಹಾಗೂ ಮಹಿಳೆಯರು ಧರಿಸಿದ್ದ ಚಿನ್ನಾಭರಣಗಳನ್ನು ದೋಚಿದ್ದಾರೆ.

ನಂತರ ಖದೀಮರು ರಾಮನಗರದಲ್ಲಿ ಇಳಿದು ಪರಾರಿಯಾಗಿದ್ದರು.ಆನಂತರ ಮೈಸೂರಿಗೆ ಬರುತ್ತಿದ್ದ ರೈಲನ್ನು ಹತ್ತಿ ಮೈಸೂರು ರೈಲ್ವೆ ನಿಲ್ದಾಣದಲ್ಲಿ ಇಳಿದಿದ್ದಾರೆ.

ಮತ್ತೆ ರಾತ್ರಿ ಬೆಂಗಳೂರಿಗೆ ತೆರಳುವ ರೈಲನ್ನು ಹತ್ತಲು ಹೋದಾಗ, ದರೋಡೆ ವಿಷಯ ತಿಳಿದಿದ್ದ ರೈಲ್ವೆ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ,ಆಗ ರೈಲಿನಲ್ಲಿ ದೋಚಿದ್ದಾಗಿ ಬಾಯಿಬಿಟ್ಟಿದ್ದಾರೆ‌.

ಬಂಧಿತ ನಾಲ್ವರು ಆರೋಪಿಗಳಿಂದ ರೈಲ್ವೆ ಪೊಲೀಸರು ನಗದು, ಲ್ಯಾಪ್ ಟಾಪ್, ಮೊಬೈಲ್ ಗಳು, ಚಿನ್ನಾಭರಣವನ್ನು ವಶಪಡಿಸಿಕೊಂಡು ಆರೋಪಿ ಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

ಮೈಸೂರು ರೈಲ್ವೆ ಪೊಲೀಸ್ ಇನ್ಸ್ಪೆಕ್ಟರ್ ಚೇತನ್ ಹಾಗೂ ತಂಡ ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ರೈಲಿನಲ್ಲಿ ಪ್ರಯಾಣಿಕರನ್ನು ದೋಚುತ್ತಿದ್ದ ನಾಲ್ಕು ಮಂದಿ ಯುವಕರು ಅಂದರ್ Read More

ಮೈಸೂರಿನಲ್ಲೂ ಹಾಡಹಗಲೇ ಮುಸುಕು ಧಾರಿಗಳಿಂದ ಉದ್ಯಮಿ ದರೋಡೆ

ಮೈಸೂರು: ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಬೀದರ್, ಮಂಗಳೂರಿನಲ್ಲಿ ನಡೆದ ದರೋಡೆ ಪ್ರಕರಣಗಳು ಮಾಸುವ ಮುನ್ನವೇ ಈಗ ಮೈಸೂರಿನಲ್ಲೂ ಹಾಡಹಗಲೇ ದುಷ್ಕರ್ಮಿಗಳು ದರೋಡೆ ನಡೆಸಿದ್ದು,ಜನತೆ‌ ಬೆಚ್ಚಿಬಿದ್ದಿದ್ದಾರೆ.

ಮೈಸೂರು-ಮಾನಂದವಾಡಿ ರಾಜ್ಯ ಹೆದ್ದಾರಿ ಜಯಪುರ ಠಾಣೆ ವ್ಯಾಪ್ತಿಯ ಗುಜ್ಜೆಗೌಡನಪುರ ಗ್ರಾಮದ ಸೋಮವಾರ ಬೆಳಿಗ್ಗೆ 9-15ರ ಸಮಯದಲ್ಲಿ ಕೇರಳ ಉದ್ಯಮಿಯೊಬ್ಬರ ಕಾರನ್ನು(ಡಿ.ಎಲ್-08 ಸಿಎಕೆ-9775)ಅಡ್ಡಗಟ್ಟಿದ ಮುಸುಕು ದಾರಿಗಳ ಗುಂಪು ಹಲ್ಲೆ ನಡೆಸಿ,ಉದ್ಯಮಿ ಹಾಗೂ ಚಾಲಕನನ್ನು ಹೊರಗೆ ಎಳೆದು ಬಿಸಾಡಿ 1.50ಲಕ್ಷ ಹಣದ ಸಮೇತ,ಇನ್ನೊವ ಕಾರನ್ನು ಕದ್ದು ಪರಾರಿಯಾಗಿದ್ದಾರೆ.

ಕೇರಳದ ಅಡಿಕೆ ವ್ಯಾಪಾರಿ ಶಫಿ ಹಾಗೂ ಚಾಲಕ ಅಶ್ರಫ್ ಅವರ ಮೇಲೆ ದರೋಡೆಕೋರರು ಹಲ್ಲೆ ಮಾಡಿದ್ದು, ಗಾಯಗೊಂಡಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಜಯಪುರ ಪೊಲೀಸರು ಹಲ್ಲೆಗೆ ಒಳಗಾದ ಉದ್ಯಮಿ ಮತ್ತು ಚಾಲಕನನ್ನು ಸಮೀಪದ ಹಂಪಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ಕರೆದೋಯ್ದು ಚಿಕಿತ್ಸೆ ಕೊಡಿಸಿದ್ದಾರೆ.

ಉದ್ಯಮಿಗೆ ಹಲ್ಲೆ ಮಾಡಿದ ಮುಸುಕುದಾರಿಗಳ ಗುಂಪು ಕೃತ್ಯಕ್ಕೆ ಕೆಂಪು ಬಣ್ಣದ ಕಾರು,ಮತ್ತು ಎರ್ಟಿಗಾ ಸೇರಿದಂತೆ ಎರಡು ಕಾರುಗಳಲ್ಲಿ ಬಂದು ಅಡ್ಡಗಟ್ಟಿ ಹಲ್ಲೆ ನಡೆಸಿ, ಹಣ ಮತ್ತು ಕಾರು ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಜಯಪುರ ಠಾಣಾ ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವಿಷ್ಣುವರ್ಧನ, ಹೆಚ್ಚುವರಿ ಎಸ್.ಪಿ ಮಲ್ಲಿಕ್,ಡಿವೈಎಸ್ಪಿ ರಘು,ಜಯಪುರ ಠಾಣಾ ಪಿಎಸ್ಐ ಪ್ರಕಾಶ್ ಯತ್ತಿನಮನಿ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮೈಸೂರಿನಲ್ಲೂ ಹಾಡಹಗಲೇ ಮುಸುಕು ಧಾರಿಗಳಿಂದ ಉದ್ಯಮಿ ದರೋಡೆ Read More