ಮೈಸೂರಲ್ಲಿ ಮುಂದುವರಿದ ಮಾದಕ ವಸ್ತುಗಳ ವಿರುದ್ದ ಸಮರ:140 ಶಂಕಿತರು ವಶ
ಮೈಸೂರು: ಮಾದಕ ವಸ್ತುಗಳ ವಿರುದ್ದ ಮೈಸೂರು ನಗರ ಪೊಲೀಸರು
ಸಮರ ಮುಂದುವರಿಸಿದ್ದಾರೆ.
ಬುಧುವಾರ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ನೇತೃತ್ವದಲ್ಲಿ ನಗರದ ಹಲವೆಡೆ ದಾಳಿ ನಡೆಸಿ ಮಾದಕ ಮಾರಾಟಗಾರರಿಗೆ ಮಾದಕ ಸೇವಿಸುವವರಿಗೆ ಚುರುಕುಮುಟ್ಟಿಸಿದ್ದಾರೆ.
11 ಕಾಲೇಜ್ ಹಾಸ್ಟೆಲ್ ಗಳು, ಖಾಸಗಿ ಹಾಸ್ಟೆಲ್ ಗಳು, ಪ್ರತ್ಯೇಕವಾಗಿ ಬಾಡಿಗೆಗೆ ಪಡೆದು ತಂಗಿರುವ ವಿಧ್ಯಾರ್ಥಿಗಳ ಕೊಠಡಿಗಳ ಮೇಲೆ ದಾಳಿ ನಡೆಸಲಾಗಿದೆ.
ಈ ವೇಳೆ ಗಾಂಜಾ ಸೇವನೆ ಮಾಡಿದ 140 ಶಂಕಿತರನ್ನ ವಶಕ್ಕೆ ಪಡೆಯಲಾಗಿದೆ.
ಎನ್ ಡಿ ಪಿಎಸ್ ಕಾಯ್ದೆ ಅನ್ವಯ ಒಬ್ಬನನ್ನು ಬಂಧಿಸಲಾಗಿದೆ.
ಪೊಲೀಸರು ಒಟ್ಟು 860 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ
ಮೈಸೂರಲ್ಲಿ ಮುಂದುವರಿದ ಮಾದಕ ವಸ್ತುಗಳ ವಿರುದ್ದ ಸಮರ:140 ಶಂಕಿತರು ವಶ Read More