ಆರ್ ಜಿ ತುಪ್ಪದ ಮಾಲೀಕ ರಾಜಗೋಪಾಲರಿಗೆ ಪ್ರತಾಪ್ ಸಿಂಹ ಗೌರವ

ಮೈಸೂರು: ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ್ 18 ಯಾದವ ಗಿರಿ ನಿವಾಸಿ ಆರ್ ಜಿ ತುಪ್ಪದ ಮಾಲೀಕರಾದ ರಾಜಗೋಪಾಲ್ ಅವರನ್ನು
ಮಾಜಿ ಸಂಸದ ಪ್ರತಾಪ್ ಸಿಂಹ ಸನ್ಮಾನಿಸಿ, ಗೌರವಿಸಿದರು.

ಐ ಲವ್ ಯು ಯಾದವಗಿರಿಗೆ ಮೈಸೂರು ನಗರಪಾಲಿಕೆ ಪ್ರಶಸ್ತಿ ಲಭಿಸಿರುವ ಹಿನ್ನೆಲೆಯಲ್ಲಿ ಶುಕ್ರವಾರ ರಾಜಗೋಪಲ್ ಅವರ ಮನೆಗೆ ಭೇಟಿ ನೀಡಿದ ಪ್ರತಾಪ್ ಸಿಂಹ,ಹಿರಿಯರಾದ ರಾಜಗೋಪಾಲರನ್ನು ಗೌರವಿಸಿದರು.

ಈ ಸಂದರ್ಭದಲ್ಲಿ ಎಸ್.ಕೆ ದಿನೇಶ್,
ಚಾಮರಾಜ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ದಿನೇಶ್ ಗೌಡ, ಬೊ. ಉಮೇಶ್, ಆರ್ ಪರಮೇಶ ಗೌಡ, ಶ್ರೀನಿವಾಸ್, ಪ್ರಕಾಶ್, ಅಶೋಕ್, ನಜರ್ಬಾದ್ ಅಭಿ, ಜಯಣ್ಣ,ಸುರೇಶ್, ಹರೀಶ್ ಹಾಗೂ ಮುಖಂಡರು ಹಾಜರಿದ್ದರು.

ಆರ್ ಜಿ ತುಪ್ಪದ ಮಾಲೀಕ ರಾಜಗೋಪಾಲರಿಗೆ ಪ್ರತಾಪ್ ಸಿಂಹ ಗೌರವ Read More