ಅಪ್ರಾಪ್ತ ಬಾಲಕಿ ಮೇಲೆ‌ ಅತ್ಯಾಚಾರ ಎಸಗಿದ ಆರೋಪಿಗೆ 20 ವರ್ಷ ಜೈಲುಶಿಕ್ಷೆ

ಮೈಸೂರು: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ವ್ಯಕ್ತಿಗೆ ಜೈಲುಶಿಕ್ಷೆ ಹಾಗೂ ದಂಡ ವಿಧಿಸಿ ಮೈಸೂರಿನ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ದಡಘಟ್ಟ ಗ್ರಾಮದ ಆರೋಪಿ ಕಿರಣ ಎಂಬಾತ ಜೈಲುಶಿಕ್ಷೆಗೆ ಗುರಿಯಾದ ಆರೋಪಿ.

ಪಿರಿಯಾಪಟ್ಟಣ ತಾಲ್ಲೂಕು ಬೆಟ್ಟದಪುರ ಠಾಣಾ ವ್ಯಾಪ್ತಿಗೆ ಸೇರಿದ ಹಲಗನಹಳ್ಳಿ ಗ್ರಾಮದ ದೂರುದಾರರ ಮಗಳು ಪಿ.ಯು.ಸಿ ವಿದ್ಯಾರ್ಥಿನಿ.

ಆಕೆಯನ್ನು ಜಾತ್ರೆಯ ಸಮಯದಲ್ಲಿ ಮಕ್ಕಳ ಆಟದ ಸಾಮಾನುಗಳನ್ನು ಮಾರಾಟ ಮಾಡುವ ಕೆಲಸ ಮಾಡುತ್ತಿದ್ದ ದಡಘಟ್ಟ ಗ್ರಾಮದ ಆರೋಪಿ ಕಿರಣ ಎಂಬಾತ ಪರಿಚಯ ಮಾಡಿಕೊಂಡಿದ್ದನು.

ಆರೋಪಿಗೆ ಈಗಾಗಲೇ ಮದುವೆಯಾಗಿದ್ದರೂ ಸಹ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವುದಾಗಿ ಪುಸಲಾಯಿಸಿ 23-3-2022 ರಂದು ನಿಮ್ಮ ತಾಯಿ ಕರೆಯುತ್ತಿದ್ದಾರೆ ಎಂದು ಹೇಳಿ ಹಲಗನಹಳ್ಳಿಯಿಂದ ಕರೆದುಕೊಂಡು ಹುಬ್ಬಳ್ಳಿಗೆ ಬಂದು ಅಲ್ಲಿ ಒಂದು ಮನೆಯಲ್ಲಿ ಇದ್ದನು.

ಈ ಸಮಯದಲ್ಲಿ ಬಾಲಕಿಗೆ ತಾಳಿಯನ್ನು ಕಟ್ಟಿ ಬಾಲ್ಯ ವಿವಾಹ ಮಾಡಿಕೊಂಡಿದ್ದು, ನಂತರ ಅದೇ ಮನೆಯಲ್ಲಿ ಹಲವಾರು ಬಾರಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ.

ಇದು ಸಾಬೀತಾದುದರಿಂದ ಬೈಲುಕುಪ್ಪೆ ವೃತ್ತ ನಿರೀಕ್ಷಕ ಬಿ.ಜಿ.ಪ್ರಕಾಶ್ ಅವರು ಆರೋಪಿತನ ವಿರುದ್ಧ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಮೈಸೂರಿನ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ. ನ್ಯಾಯಾಧೀಶ ಆನಂದ್ ಪಿ. ಹೊಗಾಡೆ ಅವರು, ಆರೋಪಿ ವಿರುದ್ಧ ಅಪರಾಧ ಸಾಬೀತಾಗಿದೆ ಎಂದು ತಿಳಿಸಿ ಆರೋಪಿ ಕಿರಣ ಹೆಚ್.ಎಂ.ಗೆ ಪೊಕ್ಸೋ ಕಾಯಿದೆಯಡಿ ಅಪರಾಧಗಳಿಗೆ ಒಟ್ಟು 20 ವರ್ಷ ಕಠಿಣ ಸಜೆ ಹಾಗೂ 5,000 ದಂಡ, ಬಾಲಕಿಯನ್ನು ಅಪಹರಣ ಮಾಡಿದ ಅಪರಾಧಕ್ಕೆ 10 ವರ್ಷ ಸಾದಾ ಸಜೆ ಮತ್ತು 5,000 ದಂಡ, ಬಾಲಕಿಯನ್ನು ಬಾಲ್ಯ ವಿವಾಹ ಮಾಡಿಕೊಂಡಿರುವ ಅಪರಾಧಕ್ಕೆ 1 ವರ್ಷ ಸಾದಾ ಸಜೆ ಹಾಗೂ 5,000 ರೂ ದಂಡ ವಿಧಿಸಿ ತೀರ್ಪು ಪ್ರಕಟಿಸಿದರು.

ಸರ್ಕಾರದ ಪರವಾಗಿ ಮೈಸೂರು ಪೋಕ್ಸೋ ವಿಶೇಷ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರಾದ ಕೆ.ಬಿ.ಜಯಂತಿ ಅವರು ವಾದ ಮಂಡಿಸಿದರು.

ಅಪ್ರಾಪ್ತ ಬಾಲಕಿ ಮೇಲೆ‌ ಅತ್ಯಾಚಾರ ಎಸಗಿದ ಆರೋಪಿಗೆ 20 ವರ್ಷ ಜೈಲುಶಿಕ್ಷೆ Read More

ಹಣ್ಣು ಮಾರಾಟಕ್ಕೆ ಬಂದಿದ್ದ ಮಹಿಳೆ ಮೇಲೆ ಅತ್ಯಾಚಾರ:ಇಬ್ಬರು ಪೊಲೀಸ್ ಅರೆಸ್ಟ್

ತಿರುವಣ್ಣಾಮಲೈ: ಹಣ್ಣು ಮಾರಾಟ ಮಾಡಲು ಬಂದಿದ್ದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ ತಮಿಳುನಾಡಿನ ಇಬ್ಬರು ಪೊಲೀಸರನ್ನು ಬಂಧಿಸಲಾಗಿದೆ.

ಆಂಧ್ರಪ್ರದೇಶದ 25 ವರ್ಷದ ಮಹಿಳೆ ಹಣ್ಣುಗಳನ್ನು ಮಾರಾಟ ಮಾಡುವ ಸಲುವಾಗಿ ತಮಿಳುನಾಡಿನ ತಿರುವಣ್ಣಾಮಲೈಗೆ ಬಂದಿದ್ದಳು.

ಸಂತ್ರಸ್ತೆ ಮತ್ತು ಆಕೆಯ ತಾಯಿ ತಿರುವಣ್ಣಾಮಲೈಗೆ ಬಂದಿದ್ದು, ತಡರಾತ್ರಿ ಮನೆಗೆ ಮರಳಲು ಇಬ್ಬರೂ ರಸ್ತೆ ಬದಿ ನಿಂತಿದ್ದಾಗ ಗಸ್ತಿನಲ್ಲಿದ್ದ ಕಾನ್ಸ್ ಟೇಬಲ್ ಗಳಾದ ಡಿ. ಸುರೇಶ್ ರಾಜ್ ಮತ್ತು ಪಿ. ಸುಂದರ್ ತಮ್ಮ ವಾಹನ ನಿಲ್ಲಿಸಿ ಅವರನ್ನು ವಿಚಾರಿಸಿದ್ದಾರೆ.

ಅನಂತರ ಮಹಿಳೆಯರನ್ನು ಬಲವಂತವಾಗಿ ಏಕಾಂತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ತಮ್ಮ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸಂತ್ರಸ್ತೆಯ ತಾಯಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಯುವತಿಯ ಮೇಲೆ ಅತ್ಯಾಚಾರ ಎಸಗಿದ ಇಬ್ಬರು ಪೊಲೀಸರನ್ನು ಬಂಧಿಸಿ ಹುದ್ದೆಯಿಂದ ಅಮಾನತುಗೊಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ರಕ್ಷಕರಾದ ಪೊಲೀಸರೇ ಈ ಕೃತ್ಯ ಎಸಗಿರುವುದು ನಿಜಕ್ಕೂ ಹೇಯ ಪೊಲೀಸ್ ಇಲಾಖೆಗೇ ಕಪ್ಪು ಮಸಿ‌ ಬಳಿದಂತಾಗಿದೆ.

ಹಣ್ಣು ಮಾರಾಟಕ್ಕೆ ಬಂದಿದ್ದ ಮಹಿಳೆ ಮೇಲೆ ಅತ್ಯಾಚಾರ:ಇಬ್ಬರು ಪೊಲೀಸ್ ಅರೆಸ್ಟ್ Read More

ಬಸ್ ಕಾಯುತ್ತಿದ್ದ ಮಹಿಳೆ ಕರೆದೊಯ್ದು ರೇಪ್

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಮಹಿಳೆ ಮೇಲೆ ಇಬ್ಬರು ಕಿರಾತಕರು ಅತ್ಯಾಚಾರ ಎಸಗಿ ಚಿನ್ನಾಭರಣ‌ ದೋಚಿರುವ ಅತ್ಯಂತ ಹೇಯ ಘಟನೆ ನಡೆದಿದೆ.

ಕೆಆರ್ ಮಾರುಕಟ್ಟೆ ಬಳಿ ಮಹಿಳೆ ಮೇಲೆ ಅತ್ಯಾಚಾರ ನಡೆಸಲಾಗಿದ್ದು, ಎಸ್.ಜೆ.ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್‌ ಗೆ ಕಾಯುತ್ತಿದ್ದ ಮಹಿಳೆಯ ಮೇಲೆ ಇಬ್ಬರು ದುಷ್ಕರ್ಮಿಗಳು ಅತ್ಯಾಚಾರ ಎಸಗಿ ಆಕೆಯ ಬಳಿ ಇದ್ದ ಮೊಬೈಲ್, ನಗದು ಹಾಗೂ ಚಿನ್ನಾಭರಣ ದೋಚಿದ್ದಾರೆ.

ಈ ಬಗ್ಗೆ 37 ವರ್ಷದ ಮಹಿಳೆ ಕೇಂದ್ರ ವಿಭಾಗದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸಂತ್ರಸ್ತ ಮಹಿಳೆ ಯಲಹಂಕಕ್ಕೆ ತೆರಳಲು ಕೆ.ಆ‌ರ್. ಮಾರ್ಕೆಟ್‌ ಬಳಿ ಬಸ್‌ ಕಾಯುತ್ತಿದ್ದರು. ಈ ವೇಳೆ ಬಂದ ಇಬ್ಬರು ವ್ಯಕ್ತಿಗಳು ಮಹಿಳೆಗೆ ದಾರಿ ತೋರಿಸುವುದಾಗಿ ಕರೆದೊಯ್ದಿದ್ದಾರೆ.

ಬಳಿಕ ಗೋಡೌನ್ ಸ್ಟ್ರೀಟ್ ಬಳಿ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಮಾಡಿ, ನಂತರ ಬೆದರಿಸಿ ಮೊಬೈಲ್, ಹಣ, ಚಿನ್ನಾಭರಣ ದೋಚಿ ಪರಾರಿಯಾದರೆಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಎಸ್.ಜೆ.ಪಾರ್ಕ್ ಪೊಲೀಸರು ಸಿಸಿಟಿವಿ‌ ದೃಶ್ಯ ಆಧರಿಸಿ ಆರೋಪಿಗಳ ಬಂಧನಕ್ಕೆ ಬಲೆ‌ ಬೀಸಿದ್ದಾರೆ.

ಬಸ್ ಕಾಯುತ್ತಿದ್ದ ಮಹಿಳೆ ಕರೆದೊಯ್ದು ರೇಪ್ Read More