ಮಕ್ಕಳಿಗೆ ಶಿಕ್ಷಣದಷ್ಟೇ ರಂಗಭೂಮಿಯೂ ಮುಖ್ಯ: ನಟ ಪ್ರಕಾಶ್ ರಾಜ್

ಮೈಸೂರು: ಮಕ್ಕಳಿಗೆ ಶಿಕ್ಷಣ ಎಷ್ಟು ಮುಖ್ಯವೋ ಅಷ್ಟೇ ರಂಗಭೂಮಿಯು ಸಹ ಮುಖ್ಯ,ಮಕ್ಕಳ ಬಹುರೂಪಿ ಎಂಬುದು ಒಂದು ಪ್ರಮುಖ ಆಯಾಮವಾಗಿದೆ ಎಂದು
ಚಿತ್ರ ನಟ ಪ್ರಕಾಶ್ ರಾಜ್ ಅವರು ಹೇಳಿದರು.

ಬಹುರೂಪಿ ನಾಟಕೋತ್ಸವವನ್ನು
ಮಕ್ಕಳ ರೂಪದಲ್ಲಿ ಆರಂಭ ಮಾಡುತ್ತಿರುವುದು ಆರೋಗ್ಯಕರ ಬೆಳವಣಿಗೆ ಎಂದು ತಿಳಿಸಿದರು.

ಮೈಸೂರು ರಂಗಾಯಣದ ವತಿಯಿಂದ ಕರ್ನಾಟಕ ಕಲಾಮಂದಿರದಲ್ಲಿ ಮಕ್ಕಳ ಬಹುರೂಪಿ ನಾಟಕೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಕ್ಕಳು ಎಂಬುದು ಒಂದು ಭಾಗ. ನಾವೆಲ್ಲ ಮಕ್ಕಳನ್ನು ಭವಿಷ್ಯಕ್ಕಾಗಿ ರೂಪಿಸಬಾರದು ಇವತ್ತಿಗೂ ಸಹ ಮಕ್ಕಳಿಗೆ ಅವರದೇ ಆದ ಪ್ರಪಂಚ ಎಂಬುದಿದೆ,ಅದವೇ ಹಸಿರಿನ ಪ್ರಪಂಚ, ಕುತೂಹಲದ ಪ್ರಪಂಚ ಎಂದು ಹೇಳಿದರು.

ಜೊತೆಗೆ ತನ್ನನ್ನು ತಾನು ರೂಪಿಸಿಕೊಳ್ಳುವಂತಹ ಪ್ರಪಂಚ ಇದೆ. ಮಕ್ಕಳನ್ನು ನಾವು ಬೆಳೆಸಬೇಕಾಗಿಲ್ಲ ಬೆಳೆಯುತ್ತಿರುವ ಮಕ್ಕಳನ್ನು ನಾವು ಸೂಕ್ಷ್ಮ ಗೊಳಿಸಬೇಕು ಎಂದು ತಿಳಿಸಿದರು.

ಮನೆಯಲ್ಲೇ ಒಂದು ಅದ್ಭುತವಾದ ಕಲಿಕೆ ಇದ್ದರೂ ಸಹ ಶಾಲೆಯಿಂದ ಬಂದಂತ ಮಕ್ಕಳನ್ನ ನಂತರ ಟ್ಯೂಷನ್ ಹಾಕಿ ಅವರಿಗೆ ಒತ್ತಡದ ರೀತಿಯಲ್ಲಿ ನಾವು ತೊಡಗಿಸುತ್ತಿದ್ದೇವೆ. ಮಕ್ಕಳ ಬಗ್ಗೆ ಪೋಷಕರು ಸಹ ಯೋಚನೆ ಮಾಡಬೇಕು ಅವರ ಬಗ್ಗೆ ಗಮನ ಕೊಡಬೇಕು ಎಂದು ಪ್ರಕಾಶ್ ರಾಜ್ ಸಲಹೆ ನೀಡಿದರು.

ಸಮಾರಂಭದಲ್ಲಿ ಮೈಸೂರು ರಂಗಾಯಣದ ನಿರ್ದೇಶಕರಾದ ಸತೀಶ್ ತಿಪಟೂರು, ಮೈಸೂರು ವಿಭಾಗದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ವಿ.ಎನ್ ಮಲ್ಲಿಕಾರ್ಜುನಸ್ವಾಮಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಜವರೇಗೌಡ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ ಡಿ ಸುದರ್ಶನ್ ಉಪಸ್ಥಿತರಿದ್ದರು.

ಮಕ್ಕಳಿಗೆ ಶಿಕ್ಷಣದಷ್ಟೇ ರಂಗಭೂಮಿಯೂ ಮುಖ್ಯ: ನಟ ಪ್ರಕಾಶ್ ರಾಜ್ Read More

ಜ.14 ರಿಂದ 19 ರವರೆಗೆ ಬಹುರೂಪಿ ನಾಟಕೋತ್ಸವ

ಮೈಸೂರು: ಕರ್ನಾಟಕ ಕಲಾ ಮಂದಿರದಲ್ಲಿ ಜನವರಿ 14 ರಿಂದ 19 ವರೆಗೆ ರಾಷ್ಟ್ರೀಯ ಬಹುರೂಪಿ ನಾಟಕೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಪಿ ಶಿವರಾಜು ತಿಳಿಸಿದರು.

ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಕೈಜೋಡಿಸುವ ಮೂಲಕ ನಾಟಕೋತ್ಸವವನ್ನು ಯಶಸ್ವಿಗೊಳಿಸಲು ಸಹಕರಿಸಿ ಎಂದು ಅಪರ ಜಿಲ್ಲಾಧಿಕಾರಿಗಳಾದ ಡಾ. ಪಿ ಶಿವರಾಜು ಅವರು ತಿಳಿಸಿದರು

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬಹುರೂಪಿ ನಾಟಕೋತ್ಸವ -2025 ರ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು,ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಕೈಜೋಡಿಸುವ ಮೂಲಕ ನಾಟಕೋತ್ಸವವನ್ನು ಯಶಸ್ವಿಗೊಳಿಸಲು ಸಹಕರಿಸಬೇಕೆಂದು ಮನವಿ ಮಾಡಿದರು.

ನಾಗರೀಕ ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ನಾಟಕಗಳನ್ನು ಆಯೋಜಿಸಲಾಗುತ್ತದೆ ಎಂದು ತಿಳಿಸಿದರು.

ಮಹಾನಗರ ಪಾಲಿಕೆಯ ವತಿಯಿಂದ ಕಲಾಮಂದಿರ ಹಾಗೂ ರಂಗಾಯಣದ ಆವರಣದಲ್ಲಿ ಸ್ವಚ್ಚತೆ ಮಾಡಬೇಕು. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಮೊಬೈಲ್ ಟಾಯ್ಲೆಟ್ ವ್ಯವಸ್ಥೆ ಮಾಡಬೇಕು. ನಗರದ ಪ್ರಮುಖ ಸ್ಥಳಗಳಲ್ಲಿ ಸರ್ಕಾರದ ಯೋಜನೆಗಳಿಗೆ ಪ್ರಚಾರ ನೀಡಲು ವ್ಯವಸ್ಥೆ ಮಾಡಿರುವ ಡಿಜಿಟಲ್ ಸ್ಕ್ರಿನ್ ಮೂಲಕ ಉತ್ಸವದ ಪ್ರಚಾರ ಮಾಡಬೇಕು ಎಂದು ಶಿವರಾಜು ಸೂಚಿಸಿದರು.

ಬಹುರೂಪಿ ನಾಟಕೋತ್ಸವ ನಡೆಯುವುದರಿಂದ ಆ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಆಗದಂತೆ ಚೆಸ್ಕಾಂ ಅಧಿಕಾರಿಗಳು ಜಾಗ್ರತೆ ವಹಿಸಬೇಕು. ಉತ್ಸವದ ದಿನಗಳಲ್ಲಿ ಸಂಜೆ 6 ರಿಂದ ರಾತ್ರಿ 10 ಗಂಟೆಯವರೆಗೆ ನಗರದ ವಿವಿಧ ಬಡಾವಣೆಗಳಿಗೆ ನಗರ ಸಾರಿಗೆ ಬಸ್ ಸೌಲಭ್ಯವನ್ನು ಕೆ ಎಸ್ ಆರ್ ಟಿ ಸಿ ವತಿಯಿಂದ ಒದಗಿಸಬೇಕು.ಶಾಲಾ ಕಾಲೇಜು ಶಿಕ್ಷಕರು ಹಾಗೂ ಮಕ್ಕಳು ನಾಟಕೋತ್ಸವದಲ್ಲಿ ಭಾಗವಹಿಸಲು ಅವರಿಗೆ ಮಾಹಿತಿಯನ್ನು ನೀಡಬೇಕು ಎಂದು ಸಲಹೆ ನೀಡಿದರು.

ರಂಗಾಯಣದ ನಿರ್ದೇಶಕರಾದ ಸತೀಶ್ ತಿಪಟೂರು ಮಾತನಾಡಿ ರಂಗಾಯಣ ಪ್ರಾರಂಭವಾಗಿ 35 ವರ್ಷಗಳು ಸಂದಿವೆ. ಬಹುರೂಪಿ ನಾಟಕೋತ್ಸವದಲ್ಲಿ 6 ದಿನಗಳ ಕಾಲ 24 ನಾಟಕಗಳು ಪ್ರದರ್ಶನ ಆಗುತ್ತವೆ. ಇದರಲ್ಲಿ ಬೇರೆ ಬೇರೆ ಭಾಷೆಯ ನಾಟಕಗಳು ಇವೆ. ಈ ಬಾರಿ ಮಕ್ಕಳಿಗಾಗಿ ಮಕ್ಕಳ ನಾಟಕೋತ್ಸವ ವನ್ನು ಒಂದು ವೇದಿಕೆಯಲ್ಲಿ ಮಾಡಲಾಗುತ್ತದೆ. ಎಲ್ಲಾ ಇಲಾಖೆಗಳ ಸಹಕಾರ ನೀಡುವ ಮೂಲಕ ನಾಟಕೋತ್ಸವ ಯಶಸ್ವಿಗೆ ಕೈಜೋಡಿಸಿ ಎಂದು ಕೋರಿದರು.

ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಮಲ್ಲಿಕಾರ್ಜುನ ಸ್ವಾಮಿ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಜವರೇಗೌಡ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಟಿ ಕೆ ಹರೀಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಜ.14 ರಿಂದ 19 ರವರೆಗೆ ಬಹುರೂಪಿ ನಾಟಕೋತ್ಸವ Read More

ಇಂದು ಕಿರುರಂಗಮಂದಿರದಲ್ಲಿ ನಾಟ್ಯದೇವಚರಿತೆ ನಾಟಕ ಪ್ರದರ್ಶನ

ಮೈಸೂರು: ಮೈಸೂರಿನ ರಂಗಾಯಣ ಕ್ಯಾಂಪಸ್‌ನಲ್ಲಿರುವ ಕಿರು ರಂಗಮಂದಿರದಲ್ಲಿ
ನ.7ರಿಂದ ಸಂಜೆ ರಂಗವಲ್ಲಿ ‌ರಂಗಸಂಭ್ರಮ ನಾಟಕೋತ್ಸವ ನಡೆಯುತ್ತಿದೆ.

ಇಂದು ಸಂಜೆ 5.30ಕ್ಕೆ ಮೈಸೂರು ಪೊಲೀಸ್ ಬ್ಯಾಂಡ್, ಕೆ ಎಆರ್ ಪಿ ಮೌಂಟೆಡ್ ಕಂಪನಿ ಮೈಸೂರು ವತಿಯಿಂದ.

ನಂತರ ಕ್ಯಾಂಪಸ್‌ನಲ್ಲಿರುವ ಕಿರು ರಂಗಮಂದಿರದಲ್ಲಿ
ನಾಟ್ಯದೇವಚರಿತೆ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಸಂಚಯ ಅವರು ಇಂದು ಸಂಜೆ‌ 7 ಗಂಟೆಗೆ ಕಿರು ರಂಗಮಂದಿರ ದಲ್ಲಿ ನಾಟ್ಯದೇವಚರಿತೆ ನಾಟಕವನ್ನು ಪ್ರದರ್ಶಿಸಲಿದ್ದಾರೆ.

ಈ ನಾಟಕದ ನಿರ್ದೇಶನವನ್ನು ಪೃಥ್ವಿ ವೇಣುಗೋಪಾಲ್ ನಿರ್ವಹಿಸಲಿದ್ದಾರೆ.

ನ.9 ಸಂಜೆ 5.30ಕ್ಕೆ ಸುಗಮ ಸಂಗೀತ.ಮೈಸೂರಿನ ನಿತಿನ್ ರಾಜಾರಾಮ್ ಶಾಸ್ತ್ರಿ ಮತ್ತು ವೃಂದದವರಿಂದ.

ಸಂಜೆ 7‌ಗಂಟೆಗೆ ಏ ಫ್ರೆಂಡ್ ಬಿಯಾಂಡ್ ದಿ ಫೆನ್ಸ್ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.
ನಿರ್ದೇಶನ ಶ್ರವಣ್ ಹೆಗ್ಗೋಡು.ಪ್ರಸ್ತುತ ಪಡಿಸುವವರು ಕಲಾಭಿ ಥಿಯೇಟರ್ ಮಂಗಳೂರು.

ನ.10ರಂದು ಸಂಜೆ 4.30ಕ್ಕೆ ಬ್ರಾಸ್ ಬ್ಯಾಂಡ್ ವಾದ್ಯಗೋಷ್ಠಿ. ಮೈಸೂರು, ಗಾಂಧಿನಗರ ಭಾರತ್ ಬ್ರಾಸ್ ಬ್ಯಾಂಡ್ ಅವರಿಂದ.

ಸಂಜೆ‌ 7ಕ್ಕೆ ಶಿವೋಹಂ ನಾಟಕ ಪ್ರದರ್ಶನ. ನಿರ್ದೇಶನ ಗಣೇಶ್ ಮಂದಾರ್ತಿ. ಪ್ರಸ್ತುತಪಡಿಸುವವರು ಕ್ರಾನಿಕಲ್ಸ್ ಆಫ್ ಇಂಡಿಯಾ, ಬೆಂಗಳೂರು ಅವರಿಂದ.

ನಾಟಕಗಳಿಗೆ 100 ರೂ ಟಿಕೆಟ್ ದರ ವಿಧಿಸಲಾಗಿದೆ ಉಳಿದ ಕಾರ್ಯಕ್ರಮಗಳು ಉಚಿತ.

ಇಂದು ಕಿರುರಂಗಮಂದಿರದಲ್ಲಿ ನಾಟ್ಯದೇವಚರಿತೆ ನಾಟಕ ಪ್ರದರ್ಶನ Read More