ಬೆಂಗಳೂರಿನಲ್ಲಿ ಪೈಶಾಚಿಕ ಘಟನೆ:ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ

ಬೆಂಗಳೂರು: ಎಲ್ಲೆಡೆ ಸಂಕ್ರಾಂತಿ ಹಬ್ಬದ ಸಡಗರ ಮನೆ ಮಾಡಿದ್ದರೆ ಇತ್ತ ರಾಜ್ಯದ ರಾಜಧಾನಿ,ಸಿಲಿಕಾನ್ ಸಿಟಿಯಲ್ಲಿ ಪೈಶಾಚಿಕ ಕೃತ್ಯ ನಡೆದಿದೆ.

ಬೆಂಗಳೂರಿನ ರಾಮಮೂರ್ತಿ ನಗರ ಸಮೀಪದ ಹೊಯ್ಸಳ ನಗರದಲ್ಲಿ ಪರಿಶಾಚಿಕ ಕೃತ್ಯ ನಡೆದಿದ್ದು ಏನೂ ಅರಿಯದ ಮುಗ್ದ ಬಾಲೆ ಮೇಲೆ ಕಾಮುಕ ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದಾನೆ.

ಬಿಹಾರ ಮೂಲದ‌ ಅಭಿಷೇಕ್ ಕುಮಾರ್ (25) ಈ‌ ಕೃತ್ಯ ಎಸಗಿದ‌ ಪಾಪಿ.

ನಿರ್ಮಾಣ ಹಂತದ ಕಟ್ಟಡದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ಬಾಲಕಿ ಪೋಷಕರು ಸಮೀಪದಲ್ಲೇ ವಾಸವಾಗಿದ್ದಾರೆ.ಇವರು ಕೆಲಸ ಅರಸಿ ಬಂದು ರಾಮಮೂರ್ತಿ ನಗರದಲ್ಲಿ ನೆಲೆಸಿದ್ದಾರೆ.

ಆರು ವರ್ಷದ ಬಾಲಕಿ ತನ್ನ ಪಾಡಿಗೆ ತಾನು ಆಟ ಆಡಿಕೊಂಡಿದ್ದಾಗ ಬಿಹಾರ ಮೂಲದ ಪಾಪಿ ನಿನ್ನೆ ರಾತ್ರಿ ಕರೆದೊಯ್ದು ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ.

ಕೆಲಸ ಮುಗಿಸಿ ಮನೆಗೆ ಬಂದ ಪೊಶಕರಿಗೆ ಮಗಳು ಇಲ್ಲದಿರುವುದು ಕಂಡು ಹುಡುಕಿದ್ದಾರೆ.ಅಕ್ಕಪಕ್ಕದವರು ಅಭಿಷೇಕ್ ಜತೆ ಬಾಲಕಿ ಇದ್ದುದನ್ನು ನೋಡಿದ್ದಾಗಿ ಹೇಳಿದ್ದಾರೆ.

ಎಲ್ಲರೂ ಹುಡುಕಿದಾಗ ಬಾಲಕಿ ಅತ್ಯಾಚಾರ ಹಾಗೂ ಕೊಲೆಯಾಗಿರುವುದು ಗೊತ್ತಾಗಿದೆ. ಎಲ್ಲರೂ ಸೇರಿ ಕಾಮುಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.ಆದರೆ ಬಾಲಕಿ ಬದುಕಿಲ್ಲವಲ್ಲ ಎಂದು ಅಲ್ಲಿದ್ದವರು ಮಮ್ಮಲ ಮರುಗಿದರು.

ಹಬ್ಬದ ದಿನ ನೇಪಾಳಿ ಕುಟುಂಬ ಮಗುವನ್ನು ಕಳೆದುಕೊಂಡು ದುಃಖದ ಮಡುವಿನಲ್ಲಿದೆ.

ರಾಮಮೂರ್ತಿನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ,ಕಾಮುಕನನ್ನು ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ಪೈಶಾಚಿಕ ಘಟನೆ:ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ Read More