ಮೈಸೂರು: ಶ್ರವಾಣ ಮಾಸದ ಹಿನ್ನೆಲೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಮೈಸೂರಿನ ರಾಮಾನುಜ ರಸ್ತೆಯಲ್ಲಿರುವ ಶ್ರೀ ಕಾಲ ಶನೇಶ್ವರ ದೇವಸ್ಥಾನ ದಲ್ಲಿ ವಿಶೇಷ ಪೂಜಾ ಕಾರ್ಯಗಳು ನೆರವೇರುತ್ತಿವೆ.
ಶನೇಶ್ವರ ಸ್ವಾಮಿಗೆ ವಿಜೃಂಭಣೆಯಿಂದ ಪೂಜಾ ಕಾರ್ಯಗಳು ರಾತೋತ್ಸವ ಸಾವಿರಾರು ಜನರಿಗೆ ಅನ್ನ ಸಂತರ್ಪಣೆ ನಡೆಯುತ್ತಿದೆ.
ಈ ವಿಶೇಷ ಸಂದರ್ಭದಲ್ಲಿ ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಅವರು ಕಾಲ ಶನೇಶ್ವರ ಸ್ವಾಮಿ ದೇವಸ್ಥಾನ ದ ಗುಡ್ಡಪ್ಪ ನವರಾದ ಸೂರ್ಯ ದೇವ ಅವರನ್ನು ಭೇಟಿ ಮಾಡಿ ಸನ್ಮಾನಿಸಿ ಆಶಿರ್ವಾದ ಪಡೆದರು.
ಮೈಸೂರು: ಸಾಂಸ್ಕೃತಿಕ ನಗರಿ ಈಗ ಕ್ರೈಮ್ ನಗರಿ ಆಗಿಬಿಡುತ್ತಿದೆಯೇನೊ ಅನಿಸುತ್ತಿದೆ.ಇದಕ್ಕೆ ಇಂದು ರಾತ್ರಿ ನಡೆದ ಒಂದು ಘಟನೆ ಸಾಕ್ಷಿಯಾಗಿದೆ.
ಮೈಸೂರಿನ ರಾಮಾನುಜ ರಸ್ತೆ 12 ಕ್ರಾಸ್ ಸಮೀಪ ಇನ್ನೂ ವಾಹನ ಸಂಚಾರ, ಜನ ಸಂಚಾರ ಇದ್ದಾಗಲೇ ಮಾರಕಾಸ್ತ್ರಗಳು ಸಾರ್ವಜನಿಕವಾಗಿ ರಾಜಾರೋಷವಾಗಿ ಝಳಪಿಸಿವೆ.
12 ನೆ ಕ್ರಾಸ್ ನಲ್ಲಿ ಮುಂದೆ ಹೋಗುತ್ತಿದ್ದ ಆಟೋವೊಂದನ್ನು ಹಿಂದಿನಿಂದ ಬಂದ ಕಾರ್ ನವರು ಅಡ್ಡಗಟ್ಟಿದ್ದಾರೆ.ಏಕಾಏಕಿ ಕಾರಿನಿಂದ ಇಳಿದ ಒಂದಿಬ್ಬರು ಪುರುಷರು ಆಟೋ ಮೇಲೆ ದಾಳಿ ಪ್ರಾರಂಭಿಸಿದ್ದಾರೆ.ತಕ್ಷಣ ಆಟೋ ಚಾಲಕ ಆತಂಕದಿಂದ ಇಳಿದು ಹೊರ ಬಂದು ನಿಲ್ಲುತ್ತಾರೆ.ಆದರೆ ಚಾಲಕನಿಗೆ ಆ ಪುರುಷರು ಏನೂ ಮಾಡಿಲ್ಲ.
ಆಟೊ ಒಳಗೆ ಇದ್ದವರ ಮೇಲೆ ಒಮ್ಮೆಗೆ ಲಾಂಗ್ ಗಳಿಂದ ಹಲ್ಲೆ ಮಾಡಿದ್ದಾರೆ.ಒಳಗಿದ್ದ ಮಹಿಳೆಯರು ಕೂಗಿಕೊಂಡರೂ ಬಿಡದೆ ಅವಾಚ್ಯ ಶಬ್ದ ಬಳಕೆ ಮಾಡಿ ಲಾಂಗ್ ಝಳಪಿಸಿ ಹಲ್ಲೆ ಮಾಡಿ ಬೆದರಿಕೆ ಹಾಕಿ ಪುರುಷರು ಪರಾರಿಯಾಗಿದ್ದಾರೆ.
ಇದನ್ನು ಕಂಡ ಸ್ಥಳೀಯರು ಆತಂಕಗೊಂಡಿದ್ದಾರೆ.
ಇದನ್ನೆಲ್ಲಾ ಸ್ಥಳದಲ್ಲಿದ್ದವರು ವಿಡಿಯೊ ಮಾಡಿ ಹಾಕಿದ್ದಾರೆ.ಈ ಘಟನೆ ಕೆ.ಆರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ,ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಕೆಟ್ಟ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕಿದೆ.
ಸಾಂಸ್ಕೃತಿಕ ನಗರಿ ಕ್ರೈಮ್ ನಗರಿಯಾಗದಂತೆ ಮೈಸೂರು ಪೊಲೀಸ್ ಕಮಿಷನರ್ ಎಚ್ಚೆತ್ತು ಈಗಿನಿಂದಲೇ ಪುಂಡು,ಪೋಕರಿಗಳು, ರೌಡಿಗಳಿಗೆ ತಿಳುವಳಿಕೆ ಮೂಡಿಸಿ ನಗರದಲ್ಲಿ ಶಾಂತಿ ನೆಲೆಸುವಂತೆ ಮಾಡಲಿ.ಜನ ನೆಮ್ಮದಿಯ ಬದುಕು ಕಟ್ಟಿಕೊಳ್ಳಲಿ.
ಮೈಸೂರು: ಮೈಸೂರಿನ ವಾರ್ಡ್ ಸಂಖ್ಯೆ 51 ಅಗ್ರಹಾರದ ಜೆ ಎಸ್ ಎಸ್ ಆಸ್ಪತ್ರೆಯ ಬಳಿ ಬುಧವಾರ ಮಧ್ಯಾಹ್ನ ಕಾರೊಂದು ಗುಂಡಿಗೆ ಬಿದ್ದು ಅವಾಂತರ ಉಂಟಾಯಿತು.
ಕಾರು ಗುಂಡಿಗೆ ಬುದ್ದು ಹೂತುಹೋಗಿತ್ತು. ನಂತರ ಕಾರನ್ನು ಜೆ ಸಿ ಬಿ ಮೂಲಕ ಮೇಲೆತ್ತಲಾಯಿತು.
ಇಂದಿನ ಈ ಘಟನೆಗೆ ಆಮೆಗತಿಯಲ್ಲಿ ಸಾಗುತ್ತಿರುವ ರಸ್ತೆ ಕಾಮಗಾರಿಯೇ ಕಾರಣ ಎಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾತಾಳ ಆಂಜನೇಯ ಸ್ವಾಮಿ ದೇವಸ್ಥಾನ ದಿಂದ ಜೆ ಎಸ್ ಎಸ್ ಆಸ್ಪತ್ರೆ ಬಳಿ ಚಾಮುಂಡೇಶ್ವರಿ ದೇವಸ್ಥಾನದ ವರಗಿನ ರಸ್ತೆ ಕಾಮಗಾರಿ ಶುರುವಾಗಿ ವರ್ಷಗಳೇ ಕಳೆದಿವೆ.
ಅದರೂ ಪದೇ ಪದೇ ಎರಡು ಮೂರು ಬಾರಿ ಅದೇ ರಸ್ತೆಯಲ್ಲಿ ಮತ್ತೆ ಮತ್ತೆ ಅಗೆದು ಕಾಮಗಾರಿ ಮಾಡುತ್ತಿದ್ದಾರೆ, ಇದುವರೆಗೂ ಪೂರ್ಣಗೊಂಡಿಲ್ಲ ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಇದರ ಪಕ್ಕದಲ್ಲೇ ಇರುವ ಮತ್ತೊಂದು ರಸ್ತೆ ಯಲ್ಲೂ ಕೂಡ ಇದೆ ಪರಿಸ್ಥಿತಿ ಇರುವುದು ವಿಪರ್ಯಾಸ.
ಕ್ಷೇತ್ರದ ಶಾಸಕರಾದ ಶ್ರೀ ವತ್ಸ ರವರ ಕಚೇರಿ ಇದೆ ಸ್ಥಳದಲ್ಲೇ ಇದ್ದರೂ ಶಾಸಕರೂ ರಸ್ತೆ ಅಭಿವೃದ್ಧಿ ಪಡಿಸದೆ ಇರುವುದು ಅಚ್ಚರಿ ತಂದಿದೆ ಎಂದು ತೇಜಸ್ವಿ ವಿಷಾದಿಸಿದ್ದಾರೆ.
ಈ ಕಳಪೆ ಕಾಮಗಾರಿ ಯಿಂದ ಸ್ಥಳೀಯ ನಿವಾಸಿಗಳಿಗೆ ಮತ್ತು ವ್ಯಾಪಾರಿಗಳಿಗೆ ವಾಹನ ಸವಾರರಿಗೆ ಮತ್ತು ವಿಶೇಷ ವಾಗಿ ಆಸ್ಪತ್ರೆಗೆ ಆಗಮಿಸುವ ಜನತೆಗೆ ದಿನನಿತ್ಯ ನರಕ ಸದೃಶ ವಾತಾವರಣ ನಿರ್ಮಾಣವಾಗಿದೆ.
ಜತೆಗೆ ಹೆಚ್ಚಾಗಿ ಟ್ರಾಫಿಕ್ ಸಮಸ್ಯೆ ಉಂಟಾಗಿ ಟ್ರಾಫಿಕ್ ಪೋಲಿಸರು ದಿನನಿತ್ಯವೂ ಹಿಂಸೆಯಿಂದ ಕೆಲಸ ಮಾಡುವ ಪರಿಸ್ಥಿತಿ ಉಂಟಾಗಿದೆ ಎಂದು ಕಿಡಿಕಾರಿದ್ದಾರೆ.
ಸಂಬಂಧಪಟ್ಟ ಮೈಸೂರು ಮಹಾನಗರ ಪಾಲಿಕೆ ಆಯುಕ್ತರು ಮತ್ತು ನಗರ ಪೋಲಿಸ್ ಆಯುಕ್ತರು ಈ ರಸ್ತೆ ಗುತ್ತಿಗೆದಾರನ ಮೇಲೆ ಕೂಡಲೇ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಆಗ್ರಹಿಸಿದ್ದಾರೆ.
ಕೂಡಲೇ ಕಾಮಗಾರಿ ಪೂರ್ಣವಾಗಿ ದುರಸ್ತಿ ಕಾರ್ಯ ಮಾಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಸ್ತೆ ಅಭಿವೃದ್ಧಿಗಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳ ಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ತೇಜಸ್ವಿ ಎಚ್ಚರಿಕೆ ನೀಡಿದ್ದಾರೆ.
ಮೈಸೂರು: ಮೈಸೂರಿನ ಅಗ್ರಹಾರ ವಾರ್ಡಿನ ರಾಮಾನುಜ ರಸ್ತೆ ೯ ನೇ ತಿರುವಿನಲ್ಲಿ ಅವೈಜ್ಞಾನಿಕ ಚರಂಡಿ ಕಾಮಗಾರಿ ಮಾಡಿರುವುದರಿಂದ ಪಕ್ಕದಲ್ಲೇ ವಾಸಿಸುವ ಪರಿಶಿಷ್ಟ ಜಾತಿಯ ನಿವಾಸಿಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಆರೋಪಿಸಿದ್ದಾರೆ.
ಸ್ಥಳೀಯ ನಿವಾಸಿಗಳು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ತೇಜಸ್ವಿ ನಾಗಲಿಂಗ ಸ್ವಾಮಿ ಇದೊಂದು ಅವೈಜ್ಞಾನಿಕವಾಗಿ ಮಾಡಿರುವ ಕಾಮಗಾರಿ ಎಂದು ತಿಳಿಸಿದರು.
ರಾಮಾನುಜ ರಸ್ತೆಯ ೭ , ೮ , ೯, ರಿಂದ ಬರುವ ನೀರು ಸರಾಗವಾಗಿ ರಾಜಕಾಲುವೆ ಗೆ ಹೋಗುವಂತೆ ಕಾಮಗಾರಿ ಮಾಡಬೇಕಿತ್ತು.ಆದರೆ ಅಧಿಕಾರಿಗಳು ಇಳಿಜಾರು ಮಾಡಿರುವುದರಿಂದ ಪರಿಶಿಷ್ಟ ಜಾತಿಯ ನಿವಾಸಿಗಳ ಮನೆಗಳ ಬಳಿ ಕಲುಶಿತ ನೀರು ಸಾಗುವಂತೆ ಮಾಡಿದ್ದಾರೆ.
ಎಲೆತೋಟದ ಬಳಿ ರಾಜಕಾಲುವೆ ಗೆ ಕೊಳಕು ನೀರು ಹೋಗದಂತೆ ಅವೈಜ್ಞಾನಿಕ ವಾಗಿ ಚರಂಡಿ ಕಾಮಗಾರಿ ಮಾಡಿದ್ದಾರೆ ಎಂದು ಆರೋಪಿಸಿದರು.
ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಈ ಕಾಮಗಾರಿಯಿಂದ ಸ್ಥಳೀಯರಿಗೆ ಆಗುತ್ತಿರುವ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಲೋಪದೋಷಗಳನ್ನು ಸರಿಪಡಿಸಿ ಸ್ಥಳೀಯ ನಿವಾಸಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಆಗ್ರಹಿಸಿದ್ದಾರೆ.
ಮೈಸೂರು: ನಗರದ ರಾಮಾನುಜ ರಸ್ತೆಯಲ್ಲಿ ಒಳ ಚರಂಡಿ ಕಾಮಗಾರಿಗಾಗಿ ರಸ್ತೆ ಅಗೆದು ಕಾಮಗಾರಿ ಮಾಡಿದ್ದರೂ ಕೆಲವೆಡೆ ಡಾಂಬರು ಹಾಕದೆ ಮಲತಾಯಿ ಧೋರಣೆ ತೋರಲಾಗಿದೆ ಎಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ದೂರಿದ್ದಾರೆ.
ಅವರು ಶುಕ್ರವಾರ ರಾಮಾನುಜ ರಸ್ತೆ ಬಳಿ ಏಕಾಂಗಿ ಧರಣಿ ಸತ್ಯಾಗ್ರಹ ಮಾಡಿ ಗಮನ ಸೆಳೆದರು.
ದುರಂತದ ಸಂಗತಿ ಎಂದರೇ ೧ ರಿಂದ ೮ ನೇ ತಿರುವಿನ ವರೆಗೆ ರಸ್ತೆ ದುರಸ್ತಿ ಮಾಡಿ ಡಾಂಬರೀಕರಣ ಮಾಡಲಾಗಿದೆ,ಆದರೆ ಇನ್ನುಳಿದ ೯ ರಿಂದ ೧೯ ನೇ ತಿರುವಿನ ವರೆಗೂ ವರ್ಷಗಳೇ ಕಳೆದರೂ ಡಾಂಬರೀಕರಣ ಮಾಡಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಮಾರ್ಗದಲ್ಲಿ ಶಾಲೆ, ಮಠ, ಆಸ್ಪತ್ರೆ ಗಳಿದ್ದು ಸಾರ್ವಜನಿಕರಿಗೆ ಮತ್ತು ವ್ಯಾಪಾರಸ್ಥರಿಗೆ ತೊಂದರೆ ಉಂಟಾಗುತ್ತಿದೆ,ದ್ವೇಷ ರಾಜಕೀಯ ಮಾಡಿ ಮಲತಾಯಿ ಧೋರಣೆಯನ್ನು ತೋರುತ್ತಿರುವ ಶಾಸಕರು ಹಾಗೂ ಪಾಲಿಕೆ ಸದಸ್ಯರ ನಡೆಯನ್ನು ಖಂಡಿಸುತ್ತೇನೆ ಎಂದು ತೇಜಸ್ವಿ ತಿಳಿಸಿದರು.
ಶುಕ್ರವಾರ ನ.1 ರಂದು ತೇಜಸ್ವಿ ನಾಗಲಿಂಗಸ್ವಾಮಿ ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೦೬ ಗಂಟೆಯ ವರೆಗೂ ಏಕಾಂಗಿಯಾಗಿ ಸತ್ಯಾಗ್ರಹ ಮಾಡಿದರು.
ಇನ್ನಾದರೂ ರಾಮಾನುಜ ರಸ್ತೆಯ ೯ ರಿಂದ ೧೯ ನೇ ತಿರುವಿನ ವರೆಗೂ ಡಾಂಬರು ಹಾಕಿ ರಸ್ತೆ ಸರಿಪಡಿಸಬೇಕು ಎಂದು ನಗರ ಪಾಲಿಕೆಯನ್ನು ಮತ್ತು ಸಂಬಂಧಪಟ್ಟ ಜನಪ್ರತಿನಿಧಿಗಳನ್ನು ಅವರು ಒತ್ತಾಯಿಸಿರು.