ಶ್ರೀ ಕರಿಯಣ್ಣ, ಕೆಂಚಣ್ಣ ದೊಡ್ಡ ದೇವರುಗಳ ಪೂಜಾ ಕಾರ್ಯ

ರಾಮನಗರ: ಶ್ರಾವಣ ಮಾಸದ ಹಿನ್ನೆಲೆಯಲ್ಲಿ ರಾಮನಗರ ತಾಲೂಕಿನ ಶ್ರೀ ಕ್ಷೇತ್ರ ತಾಳವಾಡಿ,ಶ್ರೀ ಕರಿಯಣ್ಣ, ಕೆಂಚಣ್ಣ ದೊಡ್ಡ ದೇವರುಗಳ ಪೂಜಾ ಕಾರ್ಯ ನೆರವೇರಿಸಲಾಯಿತು.

ಶ್ರೀ ಕ್ಷೇತ್ರ ತಾಳವಾಡಿ ರಂಗನಾಥ ಸ್ವಾಮಿ ಭಂಡರಾದಂತಹ ಶ್ರೀ ಕರಿಯಣ್ಣ, ಕೆಂಚಣ್ಣ ದೊಡ್ಡ ದೇವರುಗಳನ್ನು ರಾಮನಗರ ತಾಲೂಕು ಕೈಲಂಚ ಹೋಬಳಿ ಅಚ್ಚಲು ದೊಡ್ಡಿ ಊರಿನ ಭಕ್ತರ ಮನೆಯಲ್ಲಿಟ್ಟು ಪೂಜೆ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.

ಶ್ರಾವಣ ಮಾಸದಲ್ಲಿ ಶ್ರೀ ಕ್ಷೇತ್ರ ತಳವಾಡಿ ರಂಗನಾಥ ಸ್ವಾಮಿಯ ಆರಾಧಕರು ಶ್ರೀ ಕರಿಯಣ್ಣ ಕೆಂಚಣ್ಣ ದೊಡ್ಡ ದೇವರುಗಳನ್ನು ಮನೆಗೆ ಆಹ್ವಾನಿಸಿ ವಿಶೇಷ ಪೂಜೆಯನ್ನು ನೆರವೇರಿಸಿ ಮತ್ತೆ ವಾಪಸು ಕಳಿಸಿಕೊಡುತ್ತಾರೆ ಒಂದೊಂದು ದಿನ ಒಬ್ಬೊಬ್ಬರ ಮನೆಗೆ ದೇವರನ್ನು ಆಗಮಿಸಿ ಪೂಜಿಸುವುದು ವಿಶೇಷ.

ಶ್ರೀ ಕರಿಯಣ್ಣ, ಕೆಂಚಣ್ಣ ದೊಡ್ಡ ದೇವರುಗಳ ಪೂಜಾ ಕಾರ್ಯ Read More

ಕರ್ನಾಟಕ ಪಬ್ಲಿಕ್ ಸ್ಕೂಲ್ ಮಕ್ಕಳ ಸಾಧನೆ:ಖೋ‌ಖೋ ಪಂದ್ಯದಲ್ಲಿ ಪ್ರಥಮ

ಕನಕಪುರ: ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿಯರು ಹೋಬಳಿ ಮಟ್ಟದ ಖೋ ಖೋ ಕ್ರೀಡೆಯಲ್ಲಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ತಾವು ಯಾವುದೇ ಖಾಸಗಿ ಶಾಲೆ ಮಕ್ಕಳಿಗೆ ಕಡಿಮೆ ಇಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ

ಕನಕಪುರ ತಾಲೂಕು ಉಯಂಬಳ್ಳಿ ಹೋಬಳಿ ದೊಡ್ಡ ಹಲ್ಲಳ್ಳಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿಯರು ಹೋಬಳಿ ಮಟ್ಟದ ಖೊ ಖೊ ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.

ವಿದ್ಯಾರ್ಥಿನಿಯರ‌ ಸಾಧನೆಗೆ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದ,ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಪಬ್ಲಿಕ್ ಸ್ಕೂಲ್ ಮಕ್ಕಳ ಸಾಧನೆ:ಖೋ‌ಖೋ ಪಂದ್ಯದಲ್ಲಿ ಪ್ರಥಮ Read More

ರಾಮನಗರದ ಪಿರಮಿಡ್ ಧ್ಯಾನ ಕೇಂದ್ರದಲ್ಲಿ‌ಅರ್ಥಪೂರ್ಣವಾಗಿ ನಡೆದ‌ ಸತ್ಸಂಗ

ರಾಮನಗರ: ರಾಮನಗರದ ಪಿರಮಿಡ್ ಧ್ಯಾನ ಕೇಂದ್ರದಲ್ಲಿ‌ ಪಿರಮಿಡ್ ಮಾಸ್ಟರ್ ಗುಬ್ಬಿ ಅವರು ಹಮ್ಮಿಕೊಂಡಿದ್ದ ಸತ್ಸಂಗ ಅರ್ಥಪೂರ್ಣ ವಾಗಿತ್ತು.

ರಾಮನಗರ ಪಿರಮಿಡ್ ಧ್ಯಾನ ಕೇಂದ್ರದ ಸಂಸ್ಥಾಪಕರಾದ ಕೃಷ್ಣಪ್ಪ ಅವರು ನಾವು ನಮ್ಮ ಜೀವನದಲ್ಲಿ ಯಾವುದಕ್ಕೆ ಪ್ರಾಮುಖ್ಯತೆ ಕೊಡಬೇಕು ಎಂಬುದರ ಬಗ್ಗೆ ಅಚ್ಚುಕಟ್ಟಾಗಿ ತಿಳಿಸಿದ ಗುಬ್ಬಿಯ ನಿಖಿತಾ ಅವರಿಗೆ ಅಭಿನಂದಿಸಿದರು.

ಬ್ರಹ್ಮರ್ಷಿ ಪಿತಾಮಹ ಡಾ. ಸುಭಾಷ್ ಪತ್ರಿಯವರ ಜೀವನದ ಲೋಕಕಲ್ಯಾಣ ಸಂಕಲ್ಪವನ್ನು ನಿಖಿತಾ ಅವರು ಸತ್ಸಂಗದಲ್ಲಿ ತಿಳಿಸಿಕೊಟ್ಟರು.

ಬ್ರಹ್ಮರ್ಷಿ ಪಿತಾಮಹ ಪತ್ರೀಜಿ ಯವರಿಗೆ ನಿಖಿತಾ ಅವರು ತಾವೇ ರಚಿಸಿದ ಗೀತೆಯನ್ನು ಗುರುಕಾಣಿಕೆಯಾಗಿ ಎಲ್ಲರ ಸಮ್ಮುಖದಲ್ಲಿ ಹಾಡಿ ಗುರುನಮನ ಅರ್ಪಿಸಿದರು.

ಕೃಷ್ಣವೇಣಿ, ಮಂಜುಳಾ, ಲಲಿತ ಐಯ್ಯರ್, ಪಾರ್ವತಮ್ಮ, ಸತ್ಯನಾರಾಯಣ,ಎನ್. ಗಂಗ ನರಸಿಂಹಯ್ಯ ಮತ್ತಿತರ ಧ್ಯಾನಿಗಳು ಉಪಸ್ಥಿತರಿದ್ದರು.

ರಾಮನಗರದ ಪಿರಮಿಡ್ ಧ್ಯಾನ ಕೇಂದ್ರದಲ್ಲಿ‌ಅರ್ಥಪೂರ್ಣವಾಗಿ ನಡೆದ‌ ಸತ್ಸಂಗ Read More

ಈ ಬಾರಿ ಜನ ನನಗೆ ಆಶೀರ್ವದಿಸುತ್ತಾರೆ:ನಿಖಿಲ್ ಮನದ ಮಾತು

ರಾಮನಗರ: ಕಳೆದ ಎರಡು ಬಾರಿ ರಾಜಕೀಯ ಕುತಂತ್ರದಿಂದ ಸೋಲು ಅನುಭವಿಸಿದೆ, ಈ‌ ಬಾರಿ ಆಶೀರ್ವಾದ ಸಿಗಲಿದೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ಈ ಬಾರಿ ಚುನಾವಣೆಗೆ ನಿಲ್ಲಬೇಕೆಂಬ ಆಸೆ ಇರಲಿಲ್ಲ, ಆದರೆ ಸ್ಪರ್ಧೆ ಅನಿವಾರ್ಯವಾಯ್ತು ಎಂದು ನಿಖಿಲ್ ಹೇಳಿದರು.

ಮಾಧ್ಯಮಗೋಷ್ಟಿಯಲ್ಲಿ ಮನದಾಳದ ಮಾತು ಬಿಚ್ಚಿಟ್ಟ ನಿಖಿಲ್,
ಕೊನೆ ಕ್ಷಣದಲ್ಲಿ ಆದ ರಾಜಕೀಯ ಪರಿಸ್ಥಿತಿಗೆ ಕಾರ್ಯಕರ್ತರ ಆತಂಕ, ಗೊಂದಲಕ್ಕೆ ಪರಿಹಾರ ಬೇಕಿತ್ತು, ಹಾಗಾಗಿ ಸ್ಪರ್ಧೆ ಅನಿವಾರ್ಯ ಆಯ್ತು ಎಂದು ಹೇಳಿದರು.

ರಾಜ್ಯದಲ್ಲಿ ನಿನ್ನೆ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದೆ. ಇದರಲ್ಲಿ ಚನ್ನಪಟ್ಟಣ ಕ್ಷೇತ್ರ ಬಹಳ ಮಹತ್ವ ಪಡೆದುಕೊಂಡಿದೆ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಚನ್ನಪಟ್ಟಣ ಫಲಿತಾಂಶದ ಬಗ್ಗೆ ಕುತೂಹಲ ಇದೆ.ಈ ಉಪಚುನಾವಣೆ ರಾಜ್ಯದ ಇತಿಹಾಸದ ಪುಟದಲ್ಲಿ ಉಳಿಯುತ್ತದೆ. ಈ ಉಪಚುನಾವಣೆ ನಿಖಿಲ್ ಕುಮಾರಸ್ವಾಮಿ ಉಪಚುನಾವಣೆ ಆಗಿರಲಿಲ್ಲ, ಎರಡೂ ಪಕ್ಷದ ಕಾರ್ಯಕರ್ತರ ಚುನಾವಣೆ ಎಂದು ನುಡಿದರು.

ಸೋಮವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾಜಿ ಅವರು ಸ್ಪಷ್ಟ ಸಂದೇಶ ಕೊಟ್ಟಿದ್ದರು, ನನ್ನ ಪರವಾಗಿ ನಡ್ಡಾರವರು ಮಾತನಾಡಿದ್ದಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದರು.

ಎರಡೂ ಪಕ್ಷದ ಕಾರ್ಯಕರ್ತರು ಒಟ್ಟಾಗಿ ಚುನಾವಣೆ ಮಾಡಿದ್ದಾರೆ. ಕಳೆದ 18 ದಿನಗಳ ಹಿಂದೆ ಎನ್ ಡಿ ಎ ಅಭ್ಯರ್ಥಿ ಯಾರು ಆಗಬೇಕು ಎಂಬ ಪ್ರಶ್ನೆ ಎದ್ದಿತ್ತು, ಆಗ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ನಿವಾಸಕ್ಕೆ ಕರೆದು ನನ್ನ ಹೆಸರು ಘೋಷಣೆ ಮಾಡಿದರು, ಕಳೆದ ಎರಡು ಬಾರಿ ರಾಜಕೀಯ ಕುತಂತ್ರದಿಂದ ನಾನು ಸೋಲು ಅನುಭವಿಸಬೇಕಾಯಿತು ಎಂದು ಬೇಸರದಲ್ಲೇ ಹೇಳಿದರು.

ಕಳೆದ 18 ದಿನಗಳಿಂದ ಸರಿಯಾಗಿ ನಿದ್ದೆ ಮಾಡಿಲ್ಲ. ಮುಖಂಡರು,ಎರಡೂ ಪಕ್ಷಗಳ ಕಾರ್ಯಕರ್ತರು ನಿದ್ದೆಗೆಟ್ಟು ಕೆಲಸ ಮಾಡಿದ್ದಾರೆ.ಈ ಚುನಾವಣೆಯಲ್ಲಿ ನನಗೆ ಪೂರಕವಾಗಿ ಜನ ಆಶೀರ್ವಾದ ಮಾಡಿದ್ದಾರೆ. ಹಿರಿಯ ನಾಗರೀಕರು, ಯುವಕರು ಹೆಚ್ಚು ಬೆಂಬಲ ನೀಡಿದ್ದಾರೆ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಈ ಉಪಚುನಾವಣೆ ನನಗೆ ಅಗ್ನಿ ಪರೀಕ್ಷೆ ಅಂತ ಹೇಳಿದ್ದೆ. ನಿನ್ನೆ ಶೇ 88.80 ರಷ್ಟು ಮತದಾನ ಆಗಿದೆ. ಚನ್ನಪಟ್ಟಣ ಇತಿಹಾಸದಲ್ಲಿ ದೊಡ್ಡ ಪ್ರಮಾಣದಲ್ಲಿ ಮತದಾನ ಆಗಿದೆ ತಾಲೂಕಿನ ಜನತೆ ಒಂದು ದೊಡ್ಡ ಸಂದೇಶ ಕೊಟ್ಟಿದ್ದಾರೆ, ನನಗೆ ಈ ಬಾರಿ ಅವಕಾಶ ಕೊಡುವ ತೀರ್ಮಾನ ಮಾಡಿದ್ದಾರೆ ಎಂದು ನಿಖಿಲ್‌ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಈ ಬಾರಿ ಜನ ನನಗೆ ಆಶೀರ್ವದಿಸುತ್ತಾರೆ:ನಿಖಿಲ್ ಮನದ ಮಾತು Read More