ಶ್ರೀ ರಾಮಕೃಷ್ಣ ಪರಮಹಂಸ ಪ್ರತಿಷ್ಠಾನದಿಂದ ರಾಜ್ಯೋತ್ಸವ ಆಚರಣೆ

ಮೈಸೂರು: ಮೈಸೂರಿನ ‌
ಶ್ರೀ ರಾಮಕೃಷ್ಣ ಪರಮಹಂಸ ಪ್ರತಿಷ್ಠಾನದ
ವತಿಯಿಂದ 70ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

ರಾಮಕೃಷ್ಣ ನಗರದ ಜಿ ಮತ್ತು ಎಚ್ ಬ್ಲಾಕ್ ನಲ್ಲಿ 70ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

ತಾಯಿ ಭುವನೇಶ್ವರಿ ‌ಭಾವಚಿತ್ರ ಇಟ್ಟು ವಿಶೇಷ ಪೂಜೆ ಸಲ್ಲಿಸಲಾಯಿತು.

ಬಿಜೆಪಿ ಮುಖಂಡರಾದ ಪ್ರಸಾದ್ (ಪಚ್ಚು), ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀನಿವಾಸ ಪ್ರಸಾದ್ ಎನ್, ಸ್ಥಳೀಯರಾದ ಮಹೇಶ್, ಹೊನ್ನಗಂಗಪ್ಪ,ರಾಮೇಗೌಡ, ಸ್ವಾಮಿ, ಸುಧೀಂದ್ರ, ವಿಶ್ವಾಸ್, ಸುರೇಶ್ ಮತ್ತಿತರ ಅನೇಕ ಮುಖಂಡರು ಸ್ಥಳೀಯರು ಹಾಗೂ ಕನ್ನಡಾಭಿಮಾನಿಗಳು ಭಾಗವಹಿಸಿದ್ದರು.

ಶ್ರೀ ರಾಮಕೃಷ್ಣ ಪರಮಹಂಸ ಪ್ರತಿಷ್ಠಾನದಿಂದ ರಾಜ್ಯೋತ್ಸವ ಆಚರಣೆ Read More

ಗಿಡಗಳ ನೆಟ್ಟು, ಸಿಹಿ ವಿತರಿಸಿ ಅಮಿತ್ ಶಾ ಹುಟ್ಟುಹಬ್ಬ ಆಚರಣೆ

ಮೈಸೂರು: ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ವತಿಯಿಂದ‌ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು.

ರಾಮಕೃಷ್ಣನಗರ ಹೆಚ್ ಬ್ಲಾಕ್ ನಮೋ ಉದ್ಯಾನವನದಲ್ಲಿ ಗಿಡಗಳನ್ನು ನೆಟ್ಟು, ಸಿಹಿ ವಿತರಿಸಿ ಅಮಿತ್ ಶಾ ಅವರ ಜನುಮದಿನ ಆಚರಿಸಲಾಯಿತು.

ಈ ವೇಳೆ ಚಾಮುಂಡೇಶ್ವರಿ ಕ್ಷೇತ್ರದ ನಗರ ಮಂಡಲ ಅಧ್ಯಕ್ಷ ರಾಕೇಶ್ ಭಟ್ ಮಾತನಾಡಿ ಭಾರತದ ರಾಜಕೀಯದಲ್ಲಿ ಚುನಾವಣಾ ಚಾಣಕ್ಯ ಎಂದೇ ಹೆಸರುವಾಸಿಯಾಗಿರುವ ಅಮಿತ್ ಶಾ ಅವರು ದೇಶದಲ್ಲಿ ಬಿಜೆಪಿ ಸಂಘಟನೆಯನ್ನು ಬಲಪಡಿಸಿ ಅತಿ ಹೆಚ್ಚು ಸದಸ್ಯರನ್ನು ಹೊಂದಿದ ಪಕ್ಷವಾಗಿ ರೂಪಿಸುವಲ್ಲಿ ಶ್ರಮಿಸಿದವರು ಎಂದು ಬಣ್ಣಿಸಿದರು.

ಬಿಜೆಪಿ ಅಧ್ಯಕ್ಷರಾಗಿ ಪಕ್ಷ ಬಲಪಡಿಸಿ, ಅನೇಕ ರಾಜ್ಯಗಳಲ್ಲಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲು ಪ್ರಮುಖ ಪಾತ್ರ ವಹಿಸಿದವರು. ಹಾಗಾಗಿಯೇ ಕಾರ್ಯಕರ್ತರಿಗೆ ಅಚ್ಚು ಮೆಚ್ಚಿನ ನಾಯಕರಾಗಿ ಹೊರ ಹೊಮ್ಮಿದ್ದಾರೆ ಎಂದು ಹೇಳಿದರು.

ಕೇಂದ್ರ ಗೃಹ ಸಚಿವರಾಗಿ ಜಮ್ಮು ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸಲು, ಕಲ್ಲು ತೂರುತ್ತಿದ್ದ ಜನರ ಕೈಯಲ್ಲಿ ಪುಸ್ತಕ ಹಿಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು, ರಾಷ್ಟ್ರೀಯ ತನಿಖಾ ದಳ ಬಲ ಪಡಿಸಿ ದೇಶದ ಆಂತರಿಕ ಭದ್ರತೆಯನ್ನು ಹೆಚ್ಚಿಸಿದರು. ಜೊತೆಗೆ ನೆರೆ ದೇಶಗಳ ಅಲ್ಪಸಂಖ್ಯಾತರಿಗೂ ಭಾರತದ ನಾಗರೀಕತೆ ನೀಡುವ ಕಾನೂನು ತಂದರು, ಭಾರತದ ಅಭಿವೃದ್ಧಿಗೆ ಅಮಿತ್ ಶಾ ಅನೇಕ ಕೊಡುಗೆ ನೀಡಿದ್ದಾರೆ ಎಂದು ರಾಕೇಶ್‌ ಭಟ್ ಕೊಂಡಾಡಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ.ರಘು, ಉಪಾಧ್ಯಕ್ಷ ಶಿವು ಪಟೇಲ್, ಬಿ.ಸಿ. ಶಶಿಕಾಂತ್, ಹೆಚ್.ಎಸ್. ಹಿರಿಯಣ್ಣ, ಎಸ್.ಟಿ ಮೋರ್ಚಾ ನಗರ ಉಪಾಧ್ಯಕ್ಷ ಎಸ್ ತ್ಯಾಗರಾಜ್, ಎಸ್.ಟಿ ಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಎಸ್. ಮಹೇಶ್ ಕುಮಾರ್, ಸಿ.ಲೋಕೇಶ್, ಯುವ ಮೋರ್ಚಾ ಉಪಾಧ್ಯಕ್ಷರಾದ ಸಿ. ರಾಘವೇಂದ್ರ, ಸಿ.ಎಸ್. ಮಧು, ಜೀವ ಗೌಡ, ಮುಖಂಡರಾದ ಎಸ್. ಮಧು, ದೇವರಾಜ್, ರಾಮಕೃಷ್ಣಪ್ಪ, ಕಾಂತರಾಜ ಅರಸ್ ಸೇರಿದಂತೆ ಸ್ಥಳೀಯ ಮುಖಂಡರು ಭಾಗವಹಿಸಿದ್ದರು.

ಗಿಡಗಳ ನೆಟ್ಟು, ಸಿಹಿ ವಿತರಿಸಿ ಅಮಿತ್ ಶಾ ಹುಟ್ಟುಹಬ್ಬ ಆಚರಣೆ Read More

ಪ್ರಧಾನ ಮಂತ್ರಿಗಳ ಹುಟ್ಟುಹಬ್ಬ:ಮಾತೆಯರಿಗೆ ಗೌರವ

ಮೈಸೂರು: ಮೈಸೂರಿನ ರಾಮಕೃಷ್ಣ ನಗರದ ‘ಜಿ’ಬ್ಲಾಕ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನುಮ ದಿನವನ್ನು ತಾಯಿ ಸ್ವರೂಪದ ಮಾತೆಯರಿಗೆ ಗೌರವ ಸಮರ್ಪಿಸುವ ಮೂಲಕ ಆಚರಿಸಲಾಯಿತು.

ಈ‌ ವೇಳೆ ನಂ ಶ್ರೀ ಕಂಠಕುಮಾರ್ ಹಾಗೂ ಮಾಜಿ ಕಾರ್ಪೊರೇಟರ್ ಎಂ. ಕೆ ಶಂಕರ್ ಮೋದಿ ಅವರ ಕುರಿತು ಮಾತನಾಡಿ,ಪ್ರಧಾನಿ‌ ಮೋದಿ ಅವರ ಆದರ್ಶಗಳನ್ನು ನಾವೆಲ್ಲ ಪಾಲಿಸಬೇಕು ಎಂದು ಹೇಳಿದರು.

ಮೋದಿ ಅಭಿಮಾನಿ ಬಳಗದ ಎನ್ ಗಂಗಾಧರ್, ಎನ್ ಶ್ರೀನಿವಾಸ್ ಪ್ರಸಾದ್, ಚನ್ನಪ್ಪ,ಮಹೇಶ್, ಕೃಷ್ಣಪ್ಪ, ಕೆಂಪೇಗೌಡ, ಹರ್ಷ, ಪೂರ್ಣಿಮಾ,ಸುಕುಮಾರ್, ಶಶಿಧರ್ ಸೇರಿದಂತೆ ಅನೇಕ ಸದಸ್ಯರು ಹಾಜರಿದ್ದರು.

ಪ್ರಧಾನ ಮಂತ್ರಿಗಳ ಹುಟ್ಟುಹಬ್ಬ:ಮಾತೆಯರಿಗೆ ಗೌರವ Read More

ಸ್ವಚ್ಛತೆ ಜತೆ ಪರಿಸರ ಸ್ನೇಹಿ ಗಿಡಗಳ ನೆಟ್ಟುಬಸವಣ್ಣ ಅವರ ಜನುಮದಿನ ಆಚರಣೆ

ಮೈಸೂರು: ಬಿಜೆಪಿ ರಾಮಕೃಷ್ಣ ಮಹಾ ಶಕ್ತಿಕೇಂದ್ರದ ಅಧ್ಯಕ್ಷರು, ಪರಿಸರ ಸಂರಕ್ಷಕರೂ ಆದ ಬಸವಣ್ಣ ಅವರ 73ನೇ ಜನ್ಮದಿನವನ್ನು ರಾಮಕೃಷ್ಣನಗರದ ಉದ್ಯಾನವನದಲ್ಲಿ ವಿಶೇಷವಾಗಿ ಆಚರಿಸಲಾಯಿತು.

ಉದ್ಯಾನವನದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಿ ಪರಿಸರ ಸ್ನೇಹಿ ಗಿಡಗಳನ್ನು ನೆಡುವ ಮುಖಾಂತರ ಆಚರಿಸಲಾಯಿತು.

ಪ್ರಧಾನಮಂತ್ರಿಯಾಗಿ 11 ವರ್ಷ ಪೂರೈಸಿರುವ ನರೇಂದ್ರ ಮೋದಿಯವರಿಗೆ ಜನ್ಮದಿನದ ಸೇವಾ ಕಾರ್ಯವನ್ನು ಅರ್ಪಿಸಲಾಯಿತು.

ಬಸವಣ್ಣನವರು 1991-96ರ ನಡುವೆ ಈ ಭಾಗದ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದರು. ರಾಮಕೃಷ್ಣ ಸೇವಾ ಪ್ರತಿಷ್ಠಾನದ ಉಪಾಧ್ಯಕ್ಷರಾಗಿ, ಜಯಲಕ್ಷ್ಮಿ ಶಿಕ್ಷಣ ಸಂಸ್ಥೆಯ ನಿರ್ದೇಶಕರಾಗಿ, ವಾರ್ಡಿನ ನಾಗರಿಕ ಸಮಿತಿಯ ಸದಸ್ಯರಾಗಿ, ಐ ಬ್ಲಾಕ್ ಗಣಪತಿ ದೇವಸ್ಥಾನದ ಗೌರವ ಕಾರ್ಯದರ್ಶಿಯಾಗಿ ಸಾಮಾಜಿಕ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.

ಈ ಭಾಗದಲ್ಲಿ ಬಸ್ ತಂಗುದಾಣ, ಉದ್ಯಾನವನಗಳ ಅಭಿವೃದ್ದಿ, ಸಾವಿರಾರು ಗಿಡಗಳನ್ನು ನೆಟ್ಟು ಮರವಾಗುವ ತನಕ ಪೋಷಿಸಿದ್ದಾರೆ. ಮಾಜಿ ವಿಧಾನ ಪರಿಷತ್ ಸದಸ್ಯರಾದ ಡಿ. ಮಾದೇಗೌಡರ ಜೊತೆಯ ಒಡನಾಟದಿಂದ ಅನೇಕರಿಗೆ ವಸತಿ ರಹಿತರಿಗೆ ನಿವೇಶನ ಕೊಡಿಸುವುದರ ಜೊತೆ ನಾಗರಿಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಶ್ರಮಿಸುತ್ತಾ ಬಂದಿದ್ದಾರೆ,ಹಾಗಾಗಿ ಸ್ಥಳೀಯರು ಬಸವಣ್ಣ ಅವರ ಹುಟ್ಟುಹಬ್ಬವನ್ನು ಗಿಡಗಳನ್ನು ನೆಟ್ಟು, ಸಿಹಿ ವಿತರಿಸಿ ಸಂಭ್ರಮದಿಂದ ಆಚರಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮೈಸೂರು ನಗರ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಂ. ರಘು, ಚಾಮುಂಡೇಶ್ವರಿ ಕ್ಷೇತ್ರದ ಅಧ್ಯಕ್ಷರಾದ ರಾಕೇಶ್ ಭಟ್, ನಿವೃತ್ತ ಅರಣ್ಯ ಇಲಾಖೆ ಅಧಿಕಾರಿ ಅಂಬಾಡಿ ಮಾಧವ್, ಸ್ವಾಮಿಗೌಡ, ನಾಗೇಶ್ ಮೂರ್ತಿ, ಹಿರಿಯಣ್ಣ, ಬಾಲಕೃಷ್ಣ ಭಟ್, ಶಿವು ಪಟೇಲ್, ರವಿ ನಾಯಕಂಡ, ರಾಚಪ್ಪಾಜೀ, ತ್ಯಾಗರಾಜ್, ಶ್ರೀನಿವಾಸ್ ಪ್ರಸಾದ್, ರಾಘವೇಂದ್ರ, ರಂಗೇಶ್, ಮಹೇಶ್, ಚಂದ್ರ ಶೇಖರಸ್ವಾಮಿ, ರಾಜೇಶ್, ಮಂಜು, ಯಶೋಧ, ಪಂಕಜವಲ್ಲಿ, ಚಂದ್ರಕಾಂತ್, ಸತೀಶ್, ರೇಚಣ್ಣ, ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸ್ವಚ್ಛತೆ ಜತೆ ಪರಿಸರ ಸ್ನೇಹಿ ಗಿಡಗಳ ನೆಟ್ಟುಬಸವಣ್ಣ ಅವರ ಜನುಮದಿನ ಆಚರಣೆ Read More

ಚಿಕ್ಕ ವಯಸ್ಸಲ್ಲೇ ಕಾಲ್ನಡಿಗೆಯಲ್ಲಿ ದೇಶ ಪರ್ಯಟನೆ ಮಾಡಿದ್ದ ಶಂಕರರು:ರಾಕೇಶ್‌ ಭಟ್

ಮೈಸೂರು: ಶಂಕರಾಚಾರ್ಯರು 8ನೇ ವಯಸ್ಸಿಗೆ ಸನ್ಯಾಸ ಸ್ವೀಕರಿಸಿ 16ನೇ ವಯಸ್ಸಿಗೆ ಉಪನಿಷತ್ತುಗಳ ಮೇಲೆ ಭಾಷ್ಯ, ಸ್ತೋತ್ರಗಳು ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿದ್ದರು ಎಂದು ರಾಮಕೃಷ್ಣ ಶಾರದಾದೇವಿ ವಿಪ್ರ ವೃಂದದ ಅಧ್ಯಕ್ಷ ರಾಕೇಶ್ ಭಟ್ ನುಡಿದರು.

ಅತೀ ಚಿಕ್ಕ ವಯಸ್ಸಿನಲ್ಲೇ ದೇಶವನ್ನು ಕಾಲ್ನಡಿಗೆಯಲ್ಲಿ ಪರ್ಯಟನೆ ಮಾಡಿದವರು ಎಂದು ಬಣ್ಣಿಸಿದರು.

ರಾಮಕೃಷ್ಣ ಶಾರದಾದೇವಿ ವಿಪ್ರವೃಂದದ ವತಿಯಿಂದ ರಾಮಕೃಷ್ಣನಗರದಲ್ಲಿ ಶಂಕರ ಜಯಂತಿ ಪ್ರಯುಕ್ತ ಭಾನುವಾರ ಸಂಜೆ ಶಂಕರಾಚಾರ್ಯರ ಪ್ರತಿಮೆಯ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.

ಈ‌ ಸಂದರ್ಭದಲ್ಲಿ ಮಾತನಾಡಿದ ರಾಕೇಶ್ ಭಟ್,ಅದ್ವೈತ ತತ್ವದ ಮೂಲಕ ಎಲ್ಲಾ ಮನುಷ್ಯರು ಬ್ರಹ್ಮನ ಭಾಗವೇ ಆಗಿರುವುದರ ಬಗ್ಗೆ ಅರಿವು ಮೂಡಿಸಿದ್ದರು. ಭಾರತದ ಆಧ್ಯಾತ್ಮ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದು, ಧಾರ್ಮಿಕವಾಗಿಯೂ ದೊಡ್ಡ ಕೊಡುಗೆ ಅವರದ್ದಾಗಿದೆ. ಅನ್ಯ ಮತಗಳ ಪ್ರಭಾವ ತಗ್ಗಿಸಲು ಸಾಕ್ಷಾತ್ ಶಿವನೇ ಶಂಕರನಾಗಿ ಧರೆಗಿಳಿದಿರುವ ನಂಬಿಕೆ ಹಿಂದೂಗಳಲ್ಲಿದೆ ಎಂದು ನುಡಿದರು.

ಸಾಯಿಬಾಬಾ ದೇವಸ್ಥಾನದ ಮುಂಭಾಗ ಶಂಕರಾಚಾರ್ಯರ ಮೂರ್ತಿ ಹೊತ್ತ ವಾಹನಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷರಾದ ನಂ. ಶ್ರೀಕಂಠಕುಮಾರ್,ನವೀನ್ ಕುಮಾರ್ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ಲಕ್ಷ್ಮೀದೇವಿ ಚಾಲನೆ ನೀಡಿದರು.

ರಾಮಕೃಷ್ಣ ನಗರದ ದಕ್ಷಿಣೇಶ್ವರ ಮುಖ್ಯ ರಸ್ತೆಯಲ್ಲಿ ಹರ ಹರ ಶಂಕರ ಜಯ ಜಯ ಶಂಕರ ಘೋಷಣೆಯೊಂದಿಗೆ ಮೆರವಣಿಗೆ ಸಾಗಿ, ಒಳ ರಸ್ತೆಗಳಲ್ಲಿ ಚಲಿಸಿ ಯೋಗ ಉದ್ಯಾನವನದಲ್ಲಿ ಪ್ರಸಾದ ವಿನಿಯೋಗದೊಂದಿಗೆ ಅಂತ್ಯಗೊಂಡಿತು.

ವಿಪ್ರ ಮಹಿಳಾ ಸಂಗಮ, ನಾಗಲಕ್ಷ್ಮಿ, ಶ್ರೀದೇವಿ, ವೇದವ್ಯಾಸ ಭಜನಾ ಮಂಡಳಿಗಳು ಹಾಗೂ ಶನಿಮಹಾತ್ಮ ದೇವಸ್ಥಾನದ ಭಕ್ತ ಮಹಿಳೆಯರು ಶಂಕರಾಚಾರ್ಯ ವಿರಚಿತ ಭಜನೆಗಳನ್ನು ಹಾಡಿದರು.

ರಾಮಕೃಷ್ಣ ಶಾರದಾದೇವಿ ವಿಪ್ರ ವೃಂದದ ಉಪಾಧ್ಯಕ್ಷ ಶ್ರೀನಿವಾಸ್ ಪ್ರಸಾದ್, ಕಾರ್ಯದರ್ಶಿ ಎ.ರಾಘವೇಂದ್ರ, ಮಹಿಳಾ ಮುಖಂಡರಾದ ವಿಜಯಾ ಮಂಜುನಾಥ್, ಶಾಂತ, ಸೌಭಾಗ್ಯಮೂರ್ತಿ, ಬ್ರಾಹ್ಮಣ ಯುವ ವೇದಿಕೆಯ ವಿಕ್ರಂ ಅಯ್ಯಂಗಾರ್, ರಾಮಾನುಜ ಸಹಕಾರ ಬ್ಯಾಂಕಿನ ನಿರ್ದೇಶಕ ಟಿ.ಎಸ್. ಅರುಣ್, ಶ್ರೀರಾಮಚಂದ್ರಾಪುರ ಮಠದ ಹವ್ಯಕ ಮಹಾಮಂಡಲದ
ಕೃಷ್ಣ ಹೆಗ್ಡೆ, ಕೊಕ್ಕಡ ವೆಂಕಟರಮಣ ಭಟ್, ಹೊಯ್ಸಳ ಕರ್ನಾಟಕ ಸಂಘದ ನಿರ್ದೇಶಕರಾದ ಎಸ್.ರಂಗನಾಥ್, ಬ್ರಾಹ್ಮಣ ಮುಖಂಡರಾದ ಸತ್ಯನಾರಾಯಣ, ಮಿರ್ಲೆ ಫಣೀಶ್, ಆನಂದ್ ಶರ್ಮಾ, ಶ್ರೀಕಾಂತ್ ಕಶ್ಯಪ್, ಕುಂಚಿಟಿಗರ ಸಂಘದ ನಿರ್ದೇಶಕ ಎನ್.ದೀಪಕ್, ಬಿಜೆಪಿ ಮುಖಂಡರಾದ ಚಂದ್ರಶೇಖರ ಸ್ವಾಮಿ, ಸಿದ್ದೇಶ್, ತ್ಯಾಗರಾಜ್ ನಾಯಕ್, ರಂಗೇಶ್, ದೇವರಾಜ್, ಕಾಂತರಾಜ ಅರಸು, ಗೋಪಾಲ್, ಪುಟ್ಟಮ್ಮಣ್ಣಿ, ಮಂಜುಳಾ, ವಿಜಯಾ ನಂಜುಂಡಯ್ಯ, ವಿಶ್ವ ಹಿಂದೂ ಪರಿಷತ್ ನಗರ ಉಪಾಧ್ಯಕ್ಷರಾದ ಜಗದೀಶ್ ಹೆಬ್ಬಾರ್, ಕಾಂಗ್ರೆಸ್ ಮುಖಂಡ ರಾಜೇಶ್ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.

ರವಿ ಉತ್ತಪ್ಪರವರು ರಥದ ಸಾರಥಿಯಾಗಿ ಸೇವೆ ಸಲ್ಲಿಸಿದರು.

ಚಿಕ್ಕ ವಯಸ್ಸಲ್ಲೇ ಕಾಲ್ನಡಿಗೆಯಲ್ಲಿ ದೇಶ ಪರ್ಯಟನೆ ಮಾಡಿದ್ದ ಶಂಕರರು:ರಾಕೇಶ್‌ ಭಟ್ Read More