ಕನ್ನಡ ಪ್ರೇಮ ಮನದಿಂದ‌ ಮೂಡಿಬರಬೇಕು: ಮಡ್ಡಿಕೆರೆ ಗೋಪಾಲ್

ಮೈಸೂರು: ಕನ್ನಡ ಭಾಷಾ ಪ್ರೇಮ, ನಾಡ ಪ್ರೇಮ ಮಾತಿನಲ್ಲಿ ತಿಳಿಸುವಂತದ್ದಲ್ಲ, ಅದು ನಮ್ಮ ಮನದಿಂದ ಮೂಡಿ ಬರುವಂತಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್
ತಿಳಿಸಿದರು.

ವಿಜಯನಗರದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭೈರವಿ ಗೌಡತಿಯರ ಬಳಗದಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಕನ್ನಡ ನಾಡು ಕನ್ನಡ ಭಾಷೆಯ ಮೇಲಿನ ಅಭಿಮಾನವನ್ನು ಸದಾ ಕಾಲ ನಮ್ಮ ಮನದಲ್ಲಿ ಉಳಿಸಿಕೊಂಡಿರಬೇಕು, ನವೆಂಬರ್ ತಿಂಗಳಲ್ಲಿ ಕನ್ನಡ ರಾಜ್ಯೋತ್ಸವದ ರಂಗು ಎಲ್ಲೆಡೆ ತುಂಬಿರುವುದನ್ನು ನಾವು ಕಾಣುತ್ತೇವೆ, ಇದು ಇಲ್ಲಿ ಆ ರಂಗಿನೊಂದಿಗೆ ಮಹಿಳೆಯರು ಶಿಸ್ತು, ಒಟ್ಟುಗೂಡಿ ಮತ್ತಷ್ಟು ಸೊಗಸು ತುಂಬಿದೆ ಎಂದು ನುಡಿದರು.

ಕನ್ನಡ ಭಾಷೆ ಉಳಿಸಿ ಬೆಳೆಸುವ ಕಾರ್ಯಗಳು ನಿಮ್ಮಿಂದ ಹೆಚ್ಚು ಹೆಚ್ಚು ಸಾಗಲಿ ಎಂದು ಭೈರವಿ ಗೌಡತಿಯರ ಬಳಗದವರಿಗೆ ಮಡ್ಡಿಕೆರೆ ಗೋಪಾಲ್ ಸಲಹೆ ನೀಡಿದರು.

ಇದೇ ವೇಳೆ ಜಾನಪದ ಕಲಾವಿದೆ ಹಾಡು ನೃತ್ಯ ಹಾಗೂ ಕಲೆಯಲ್ಲಿ ಖ್ಯಾತಿ ಗಳಿಸಿದ ಸುಮಾ ಪ್ರಶಾಂತ ಅವರನ್ನು ಸನ್ಮಾನಿಸಲಾಯಿತು.

ಕರ್ನಾಟಕದ ವೀರ ವನಿತೆಯರ ವೇಷ ಭೂಷಣ ಸ್ಪರ್ಧೆ ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಬೈರವಿ ಗೌಡ್ತಿಯರ ಬಳಗದ ಅಧ್ಯಕ್ಷರಾದ ರೇವತಿ ಕೃಷ್ಣಪ್ಪ, ಗೌರವಾಧ್ಯಕ್ಷರಾದ ರಾಧಾ ಲಂಕೇಗೌಡ, ಹಾಗೂ ನಿರ್ದೇಶಕರುಗಳಾದ ಡಾಕ್ಟರ್ ಹೇಮಾ ನಂದೀಶ್,ಕೋಮಲ ವೆಂಕಟೇಶ, ಸುಶೀಲ ಬಸುವರಾಜು ಅವರು ಉಪಸ್ಥಿತರಿದ್ದರು.

ಆಯೋಜಕರು ಗಳಾದ ಪೂರ್ಣಿಮಾ, ಛಾಯಾ ಮಹೇಶ್, ಪದ್ಮಾ ಸುರೇಶ್, ಸುಮಿತ್ರ ರಮೇಶ್, ಪುಷ್ಪ, ಹೇಮಾ ಕಿರಣ್, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಲಕ್ಷ್ಮಿ ಕಿರಣ್ ಪಾಲ್ಗೊಂಡಿದ್ದರು.

ಕನ್ನಡ ಪ್ರೇಮ ಮನದಿಂದ‌ ಮೂಡಿಬರಬೇಕು: ಮಡ್ಡಿಕೆರೆ ಗೋಪಾಲ್ Read More

ಹುಣಸೂರಲ್ಲಿ ವಿವಿಧ‌ ಸಂಘಗಳಿಂದ ಕನ್ನಡ ರಾಜ್ಯೋತ್ಸವ ಆಚರಣೆ

ಹುಣಸೂರು,ನವೆಂಬರ್.೧: ಹುಣಸೂರಿನ ಮಂಟಿ ವೃತ್ತದಲ್ಲಿ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ, ವಿಷ್ಣುವರ್ಧನ್ ಅಭಿಮಾನಿಗಳ ಸಂಘ ಹಾಗೂ ಆಟೋ ಚಾಲಕರ ಸಂಘದ ವತಿಯಿಂದ 70ನೇ ಕನ್ನಡ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸಲಾಯಿತು.

ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನದೊಂದಿಗೆ ಪೂಜೆ ಸಲ್ಲಿಸಿ ನಂತರ ಸಾರ್ವಜನಿಕರಿಗೆ ಹಣ್ಣು ಹಂಪಲು ವಿತರಿಸಲಾಯಿತು, ಮಧ್ಯಾಹ್ನ ಅನ್ನದಾನ ಹಮ್ಮಿಕೊಳ್ಳಲಾಗಿತ್ತು.

ನಂತರ‌ ಸಂಗೀತ ರಸಸಂಜೆ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ ವೇಳೆ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಅವರನ್ನು ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

ಮೂರೂ ಸಂಘಗಳ ಅಧ್ಯಕ್ಷರು,ಪದಾಧಿಕಾರಿಗಳು‌ ಹಾಗೂ ಕನ್ನಡಾಭಿಮಾನಿಗಳು‌ ಹಾಜರಿದ್ದರು.

ಹುಣಸೂರಲ್ಲಿ ವಿವಿಧ‌ ಸಂಘಗಳಿಂದ ಕನ್ನಡ ರಾಜ್ಯೋತ್ಸವ ಆಚರಣೆ Read More

ಏಕೀಕರಣಕ್ಕೆ ಶ್ರಮಿಸಿದ ಮಹನೀಯರನ್ನು ಸ್ಮರಿಸುವುದು ಎಲ್ಲರ ಕರ್ತವ್ಯ:ನಾಗರಾಜು

ನಂಜನಗೂಡು,ನವೆಂಬರ್. ೧: ಏಕೀಕರಣಕ್ಕೆ ಶ್ರಮಿಸಿದ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಎನ್. ನಾಗರಾಜ್ ತಿಳಿಸಿದರು.

ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದ ಎನ್. ನಾಗರಾಜ್ ಅವರು, ವಿದ್ಯಾರ್ಥಿಗಳು ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಅಧ್ಯಯನ ಮಾಡಿ, ಕನ್ನಡ ನೆಲದ ಉಜ್ವಲ ಭವಿಷ್ಯಕ್ಕಾಗಿ ತಮ್ಮ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.

ಭೌತಶಾಸ್ತ್ರ ಉಪನ್ಯಾಸಕ ಹೆಚ್.ಎಸ್ ರಾಮನುಜಾ ಅವರು ಮಾತನಾಡಿ, ಕನ್ನಡ ಭಾಷೆಯು ನಮ್ಮ ಅಸ್ತಿತ್ವ, ಆತ್ಮವಿಶ್ವಾಸ ಮತ್ತು ಸಂಸ್ಕೃತಿಯ ಮೂಲ ಎಂದು ಹೇಳಿದರು.

ರಾಜ್ಯೋತ್ಸವ ಎಂದರೆ ಕೇವಲ ಆಚರಣೆ ಅಲ್ಲ ಕನ್ನಡಿಗನ ಭಾವ, ಮಾನವೀಯತೆ ಮತ್ತು ಸಾಹಿತ್ಯ ಪರಂಪರೆಯ ನೆನಪು. ಯುವಕರು ಕನ್ನಡವನ್ನು ಕೇವಲ ಮನೆ ಮಾತುಗಳಲ್ಲಿ ಮಾತ್ರವಲ್ಲ, ತಂತ್ರಜ್ಞಾನ, ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರಗಳಲ್ಲೂ ಬಳಸಬೇಕು. ಕನ್ನಡಕ್ಕೆ ನಮ್ಮ ಪ್ರೀತಿ ಕೃತಿಯಲ್ಲಿ ವ್ಯಕ್ತವಾಗಬೇಕು ಎಂದು ಸಲಹೆ ನೀಡಿದರು.

ಆಂಗ್ಲ ಭಾಷಾ ಉಪನ್ಯಾಸಕ ರಂಗಸ್ವಾಮಿ ಅವರು ಮಾತನಾಡಿ,ಭಾಷೆ ಒಂದು ಜನಾಂಗದ ಒಗ್ಗಟ್ಟಿನ ಸಂಕೇತ. ಕನ್ನಡ ನಮ್ಮ ಅಸ್ತಿತ್ವ.ಕನ್ನಡಿಗರು ತಮ್ಮ ಭಾಷೆಯನ್ನು ಗೌರವಿಸಿದಾಗಲೇ ನಾಡು ಗೌರವ ಪಡೆಯುತ್ತದೆ,ಕನ್ನಡಕ್ಕೆ ಬೆಳಕನ್ನು ನೀಡೋಣ ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದದ್ದ ಕಾಲೇಜಿನ ಪ್ರಾಂಶುಪಾಲರಾದ ಸಿ.ಆರ್. ದಿನೇಶ್ ಅವರು ಅಧ್ಯಕ್ಷೀಯ ನುಡಿಗಳನ್ನಾಡಿ ಕನ್ನಡವು ಕೇವಲ ಭಾಷೆ ಅಲ್ಲ ಅದು ಸಾವಿರಾರು ವರ್ಷಗಳ ಸಂಸ್ಕೃತಿ, ಸಾಹಿತ್ಯ ಮತ್ತು ಮೌಲ್ಯಗಳ ಸಂಗ್ರಹ ಎಂದು ‌ಬಣ್ಣಿಸಿದರು.

ಇಂದಿನ ಕಾಲದಲ್ಲಿ ಕನ್ನಡದ ಬಳಕೆ ಹೆಚ್ಚಿಸುವುದು ಪ್ರತಿ ಯುವಕರ ಜವಾಬ್ದಾರಿ. ಸರ್ಕಾರದಿಂದ ಮಾತ್ರ ಭಾಷೆ ಉಳಿಯುವುದಿಲ್ಲ. ಸರ್ಕಾರಿ ಉದ್ಯೋಗಿ, ವಿದ್ಯಾರ್ಥಿ, ಶಿಕ್ಷಕ, ವ್ಯಾಪಾರಿ,ಹೀಗೆ ಯಾರೇ ಆಗಲಿ, ತಮ್ಮ ದಿನನಿತ್ಯದ ಜೀವನದಲ್ಲಿ ಕನ್ನಡ ಬಳಕೆ ಮಾಡಿದಾಗಲೇ ನಾಡು ಶಕ್ತಿಯಾಗಿ ಹೊರಹೊಮ್ಮುತ್ತದೆ. ಕನ್ನಡ ರಾಜ್ಯೋತ್ಸವವು ನಮ್ಮಲ್ಲಿ ಭಾಷಾಭಿಮಾನ ಮತ್ತು ಕರ್ತವ್ಯ ಭಾವಗಳನ್ನು ಬೆಳೆಸುವ ದಿನ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಉಪನ್ಯಾಕರಾದ ಲಿಂಗಣ್ಣಸ್ವಾಮಿ ,ಟಿ.ಕೆ ರವಿ, ರೂಪ ,ಭವ್ಯ ,ಮೀನಾ, ಸುಮಿತ್ರ ,ವತ್ಸಲ ನಾಗರಾಜ ರೆಡ್ಡಿ, ಅಂಬಿಕಾ ,ಗೋಪಾಲ್ ಹರೀಶ್, ಮಿಲ್ಟನ್ ,ನಿಂಗಯ್ಯ, ಮಾದೇವಸ್ವಾಮಿ, ಹೆಚ್ .ಕೆ.ಪ್ರಕಾಶ್, ದಿನೇಶ್ ಎನ್ ಮತ್ತಿತರರು ಪಾಲ್ಗೊಂಡಿದ್ದರು.

ಏಕೀಕರಣಕ್ಕೆ ಶ್ರಮಿಸಿದ ಮಹನೀಯರನ್ನು ಸ್ಮರಿಸುವುದು ಎಲ್ಲರ ಕರ್ತವ್ಯ:ನಾಗರಾಜು Read More

ನ್ಯಾಯಾಂಗ ಬಡಾವಣೆಯಲ್ಲಿ ರಾಜ್ಯೋತ್ಸವ:ನಾಡಗೀತೆ ಸ್ಪರ್ಧೆ

ಮೈಸೂರು: ಮೈಸೂರಿನ ನ್ಯಾಯಾಂಗ ಬಡಾವಣೆ ನಾಗರಿಕರು ಹಾಗೂ ರವಿಶಂಕರ ಬಡಾವಣೆಯ ನಾಗರಿಕರ ಸಂಯುಕ್ತಾಶ್ರಯದಲ್ಲಿ ಇದೇ ಮೊದಲ ಬಾರಿಗೆ ನವಂಬರ್ 1 ರಂದು ಕನ್ನಡ ರಾಜ್ಯೋತ್ಸವ ಪ್ರಯುಕ್ತ ‌ನಾಡಗೀತೆ ಸ್ಪರ್ಧೆ ಏರ್ಪಡಿಸಲಾಗಿದೆ.

ನ್ಯಾಯಾಂಗ ಬಡಾವಣೆಯ ಬೆಂಚಕಟ್ಟೆ ಮಾರಮ್ಮ ದೇವಸ್ಥಾನದ ಆವರಣದಲ್ಲಿ ಕನ್ನಡ ನಾಡ ಗೀತೆಗಳ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

6 ವರ್ಷ ಮೇಲ್ಪಟ್ಟ ಎಲ್ಲಾ ವಯಸ್ಸಿನವರಿಗೂ ಭಾಗವಹಿಸಲು ಅವಕಾಶವಿದೆ, ಮಕ್ಕಳು ಮತ್ತು ಹಾಡುಗಾರರನ್ನು ಪ್ರೋತ್ಸಾಹಿಸಿ
ಉಚಿತ ಪ್ರವೇಶವಿರುತ್ತದೆ.

ಭಾಗವಹಿಸಿದವರಿಗೆ ಪ್ರಶಸ್ತಿ ಪತ್ರ ನೀಡಲಾಗುವದು, ಮತ್ತು ವಿಜೇತರಿಗೆ ಪ್ರಶಸ್ತಿ ಪತ್ರ ಮತ್ತು ಪಾರಿತೋಷಕ ನೀಡಲಾಗುವದು ಎಂದು ಬಡಾವಣೆಯ ಮುಖಂಡರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ
ರಾಮೇಗೌಡರು ,94498 86062.
ಮಾಲತೇಶ 80735 87480,
ರಾಘವೇಂದ್ರ 72041 73440.
ಶ್ರೀನಿವಾಸ್ 99453 73459 ಇವರುಗಳನ್ನು ಸಂಪರ್ಕಿಸಬಹುದಾಗಿದೆ.

ಆಕ್ಟೋಬರ್ 30 ರ ಒಳಗಾಗಿ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕೆಂದು ಮನವಿ ಮಾಡಲಾಗಿದೆ.

ನ್ಯಾಯಾಂಗ ಬಡಾವಣೆಯಲ್ಲಿ ರಾಜ್ಯೋತ್ಸವ:ನಾಡಗೀತೆ ಸ್ಪರ್ಧೆ Read More

ಕಲಾಭೂಮಿ ಪ್ರತಿಷ್ಠಾನದಿಂದ ರಾಜ್ಯೋತ್ಸವ:69 ಸಾಧಕರಿಗೆ ಪ್ರಶಸ್ತಿ ಪ್ರದಾನ

ಬೆಂಗಳೂರು: ಕಲಾಭೂಮಿ ಪ್ರತಿಷ್ಠಾನದ ವತಿಯಿಂದ 69ನೇ ಕನ್ನಡ ರಾಜ್ಯೋತ್ಸವವನ್ನು ಬೆಂಗಳೂರಿನ ಕಲಾಗ್ರಾಮದಲ್ಲಿ ಆಚರಿಸಿ ವಿವಿಧ ಕ್ಷೇತ್ರಗಳ 69 ಸಾಧಕರಿಗೆ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕನ್ನಡಪರ ಹೋರಾಟಗಾರರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರೂ ಆದ ಸಾ.ರಾ ಗೋವಿಂದ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮುಖ್ಯ ಅತಿಥಿಗಳಾಗಿ ವಾಣಿಜ್ಯ ಮಂಡಳಿಯ ಗೌರವ ಕಾರ್ಯದರ್ಶಿ ಸುಂದರ್ ರಾಜ್, ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಬಿ.ಎನ್ ಜಗದೀಶ್, ಅಂಬೇಡ್ಕರ್ ಸೇನೆಯ ಅಧ್ಯಕ್ಷ ಪಿ. ಮೂರ್ತಿ, ಕನ್ನಡವೇ ಸತ್ಯ ರಂಗಣ್ಣ, ನಿರ್ಮಾಪಕರಾದ ಕಿರಣ್ ತೋಟಂಬೈಲು, ಚೇತನ್ ರಾಜ್, ಹಿರಿಯ ನಟರಾದ ಶಂಕರ್ ಭಟ್, ಪ್ರಣಯ ಮೂರ್ತಿ, ಹಿರಿಯ ಸಾಹಿತಿಗಳಾದ ಬೆ.ಗೋ ರಮೇಶ್, ಕಲಾಭೂಮಿ‌ ಪ್ರತಿಷ್ಠಾನದ ಅಧ್ಯಕ್ಷರಾದ ಆಸ್ಕರ್ ಕೃಷ್ಣ, ಸಂಚಾಲಕರಾದ ನಿಂಗರಾಜ್ ಮತ್ತು ರಕ್ತದಾನಿ ಮಂಜು, ಚಾನೆಲ್ ಗ್ರೀನ್ ಸಂಸ್ಥಾಪಕರಾದ ಬಸವರಾಜ್
ಉಪಸ್ಥಿತರಿದ್ದರು.

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ನಾಡಿನ 69 ಸಾಧಕರಿಗೆ, ಸಮಾಜ ಸೇವಕರಿಗೆ ಹಾಗೂ ಪ್ರತಿಭಾನ್ವಿತರಿಗೆ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ ಯನ್ನು ಪ್ರದಾನ ಮಾಡಿ ಗೌರವಿಸಲಾಯಿತು.

ಮೈಸೂರು ಜಿಲ್ಲೆಯಿಂದ ಒಂದು ಹೆಜ್ಜೆ ರಕ್ತದಾನಿಗಳ ಬಳಗದ ಅಧ್ಯಕ್ಷರಾದ ರಕ್ತದಾನಿ ಮಂಜು ಅವರ ಸಮಾಜ ಸೇವೆಯನ್ನು ಗುರುತಿಸಿ ಅವರಿಗೆ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಲಾಯಿತು.

ಕಲಾಭೂಮಿ ಪ್ರತಿಷ್ಠಾನದಿಂದ ರಾಜ್ಯೋತ್ಸವ:69 ಸಾಧಕರಿಗೆ ಪ್ರಶಸ್ತಿ ಪ್ರದಾನ Read More

ರೂಪಾನಗರದಲ್ಲಿ ಕನ್ನಡ ರಾಜ್ಯೋತ್ಸವ:ಪ್ರೊ. ಎಂ.ಕೃಷ್ಣಗೌಡರ ಭಾಷಣಕ್ಕೆ ಜನ ಫಿದಾ

ಮೈಸೂರು: ‌ರೂಪಾನಗರದ ದೀಪಾ ಶಾಲೆಯ ಸಭಾಂಗಣದಲ್ಲಿ ನಮ್ಮ ರೂಪಾನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ವಿಶೇಷವಾಗಿ ಹಮ್ಮಿಕೊಳ್ಳಲಾಯಿತು.

ಮುಖ್ಯ ಅತಿಥಿಗಳಾಗಿ‌ ಭಾಗವಹಿಸಿದ್ದ ಖ್ಯಾತ ವಾಗ್ಮಿ ಪ್ರೊ. ಎಂ.ಕೃಷ್ಣಗೌಡ ಅವರು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಮಹತ್ವ ಸಾರಿದರು.

ಅವರು ಸಂಯೋಜಿಸಿದ ಹಾಸ್ಯ ಮತ್ತು ಹಾಸ್ಯದ ಉಪಾಖ್ಯಾನಗಳು ಗಂಭೀರ ಚರ್ಚೆಗೆ ಲಘುವಾದ ಸ್ಪರ್ಶವನ್ನು ಸೇರಿಸಿತು. ಸಾಂಸ್ಕೃತಿಕ ಒಳನೋಟಗಳೊಂದಿಗೆ ಅವರ ಹಾಸ್ಯದ ಮಿಶ್ರಣವು ಪ್ರೇಕ್ಷಕರ ಮನರಂಜಿಸಿತು.

ಕನ್ನಡ ಪರಂಪರೆಯನ್ನು ಉಳಿಸುವ ಮತ್ತು ಪ್ರಚಾರ ಮಾಡುವ ಮಹತ್ವವನ್ನು ಎತ್ತಿ ತೋರಿಸಲು ಅವರು ಹಾಸ್ಯವನ್ನು ಬಳಸಿದ್ದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ಅಂತ್ಯಾಕ್ಷರಿ, ಪದಬಂಧ, ಪ್ರಬಂಧ, ಚಿತ್ರಕಲೆ, ಗಾಯನ ಮತ್ತು ರಂಗೋಲಿ ಸ್ಪರ್ಧೆಗಳಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಮುಖ್ಯ ಅತಿಥಿಗಳು ಬಹುಮಾನ ವಿತರಿಸಿದರು.

ಕಾರ್ಯಕ್ರಮವು ಕನ್ನಡ ಭಾಷೆ ಮತ್ತು ಮತ್ತು ಸಂಸ್ಕೃತಿ ಸಂಪ್ರದಾಯಗಳನ್ನು ಉತ್ತೇಜಿಸಲು ಮತ್ತು ಯುವ ಪ್ರತಿಭೆಗಳು ಸಕ್ರಿಯವಾಗಿ ಭಾಗವಹಿಸಲು ಮತ್ತು ಅವರ ಸೃಜನಶೀಲತೆಯನ್ನು ಪ್ರದರ್ಶಿಸಲು ಪ್ರೋತ್ಸಾಹ ನೀಡುವಲ್ಲಿ ಯಶಸ್ವಿಯಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ನರಸಿಂಹ ಮೂರ್ತಿ ಎಂ. ಎನ್. ಅವರು ವಹಿಸಿದ್ದರು.

ರೂಪಾನಗರದಲ್ಲಿ ಕನ್ನಡ ರಾಜ್ಯೋತ್ಸವ:ಪ್ರೊ. ಎಂ.ಕೃಷ್ಣಗೌಡರ ಭಾಷಣಕ್ಕೆ ಜನ ಫಿದಾ Read More

ಮಕ್ಕಳಿಗಾಗಿ ಆಸ್ತಿ ಮಾಡದೆ ಮಕ್ಕಳನ್ನೇ ಆಸ್ತಿಯಾಗಿಸಿ:ಪ್ರೊ.ಬೋರಲಿಂಗಯ್ಯ

ಮೈಸೂರು: ಮಕ್ಕಳಿಗಾಗಿ ಆಸ್ತಿ,ಹಣ ಕೂಡಿಡುವ ಬದಲು ಉತ್ತಮ, ಸಂಸ್ಕಾರವಂತ, ಆರೋಗ್ಯವಂತ ಮಕ್ಕಳನ್ನಾಗಿ ರೂಪಿಸಬೇಕು ಎಂದು ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ. ಎನ್
ಬೋರಲಿಂಗಯ್ಯ ಸಲಹೆ ನೀಡಿದರು.

ರೋಟರಿ ಕ್ಲಬ್ ಆಫ್ ಮೈಸೂರ್ ವೆಸ್ಟ್, ಅಥರ್ವ ಲೈಫ್ ಸ್ಕಿಲ್ಸ್ ಫೌಂಡೇಶನ್, ಇನ್ನರ್ ವೀಲ್ ಕ್ಲಬ್ ಆಫ್ ಮೈಸೂರು ವೆಸ್ಟ್ ಹಾಗೂ ಜೆಸಿಐ ಮೈಸೂರು ಸಿಲ್ಕ್
ಸಂಯುಕ್ತಾಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಮಕ್ಕಳಿಗಾಗಿ ಆಸ್ತಿ,ಹಣ ಮಾಡದೆ ಮಕ್ಕಳನ್ನೇ ನಮ್ಮ ಆಸ್ತಿಯನ್ನಾಗಿಸಬೇಕಿದೆ ಎಂದು ಹೇಳಿದರು.

ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆಗು ಒಂದಕ್ಕೊಂದು ಅವಿನಾಭಾವ ಸಂಬಂಧ ಇದೆ,ಮಕ್ಕಳಿಗೆ ಈಗಿನಿಂದಲೇ ನಾಡು, ನುಡಿ, ಭಾಷೆ, ನೆಲ, ಜಲದ ಕುರಿತು ಅಭಿಮಾನ ಮೂಡಿಸಲು ಇದು ಸಹಕಾರಿ ಆಗುತ್ತದೆ ಎಂದು ಪ್ರೊ.ಬೋರಲಿಂಗಯ್ಯ ಹೇಳಿದರು.

ಮಹಾಜನ ಕಾಲೇಜು
ಪ್ರಾಂಶುಪಾಲರಾದ ಡಾ।। ಬಿ.ಆರ್. ಜಯಕುಮಾರಿ,ರೋಟರಿ ಕ್ಲಬ್ ಆಫ್ ಮೈಸೂರು ವೆಸ್ಟ್ ಅಧ್ಯಕ್ಷ ನಾಗೇಶ್ ಎಂ ಎಸ್,ರೋಟರಿ ವೆಸ್ಟ್ ಅಸೋಸಿಯೇಷನ್ ಅಧ್ಯಕ್ಷರಾದ ಡಾ|| ಬಿ. ಚಂದ್ರ,ಇನ್ನರ್ ವೀಲ್ ಕ್ಲಬ್ ಆಫ್ ಮೈಸೂರು ವೆಸ್ಟ್ ಅಧ್ಯಕ್ಷೆ ಶಶಿಕಲಾ ಸುರೇಶ್,ಅಥರ್ವ ಲೈಫ್ ಸ್ಕಿಲ್ಸ್ ಫೌಂಡೇಶನ್ ಅಧ್ಯಕ್ಷೆ ಪುಷ್ಪಲತಾ,ಜೆಸಿಐ ಮೈಸೂರು ಸಿಲ್ಕ್ ಅಧ್ಯಕ್ಷ ಬಿ. ಎಂ. ರುದ್ರೇಶ, ರುಕ್ಮಿಣಿ,ನಾಗೇಶ್ ಎಂ ಎಲ್ ದೇವರಾಜು ,
ಚಂದ್ರ ,ಶಶಿಕಲಾ ,ಭವಾನಿ ಚಂದ್ರ,
ಪುಷ್ಪಲತಾ,ರುದ್ರೇಶ್ ,ಅನುಷ ,ಲಾವಣ್ಯ ಮತ್ತಿತರರು ಹಾಜರಿದ್ದರು.

ಮಕ್ಕಳಿಗಾಗಿ ಆಸ್ತಿ ಮಾಡದೆ ಮಕ್ಕಳನ್ನೇ ಆಸ್ತಿಯಾಗಿಸಿ:ಪ್ರೊ.ಬೋರಲಿಂಗಯ್ಯ Read More

ಕರಾಳ ದಿನ ಆಚರಿಸಿದವರ ಗಡಿಪಾರು ಮಾಡಲು ತೇಜಸ್ವಿ ಆಗ್ರಹ

ಮೈಸೂರು : ಕರ್ನಾಟಕ ರಾಜ್ಯೋತ್ಸವದ ದಿನದಂದು ಎಂಇಎಸ್ ಪುಂಡರು ಬೆಳಗಾವಿ ಯಲ್ಲಿ ಕರಾಳ ದಿನ ಆಚರಣೆ ಮಾಡಿರುವುದಕ್ಕೆ ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರಾಳ ದಿನಾಚರಣೆ ಮಾಡಿದವರ ವಿರುದ್ಧ ಕೇವಲ ಎನ್‌ಸಿ‌ಆರ್ ದಾಖಲಿಸಿ ಕಳುಹಿಸುತ್ತಿದ್ದಾರೆ, ಕೂಡಲೆ ಅವರನ್ನು ಬಂಧಿಸಿ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಕರಾಳ ದಿನಾಚರಣೆಗೆ ಸುರಕ್ಷತೆ ಒದಗಿಸಿದ ಪೋಲಿಸರ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಪರಮೇಶ್ವರ್ ರವರಿಗೆ ಕನ್ನಡ ಚಳವಳಿಗಾರ ತೇಜಸ್ವಿ ಆಗ್ರಹಿಸಿದ್ದಾರೆ

ನವೆಂಬರ್ 1 ರ ಪೂರ್ವ ದಿನವೇ ಜಿಲ್ಲಾಧಿಕಾರಿಗಳು ಎಂ ಇ ಎಸ್ ಪುಂಡರಿಗೆ ರಾಜ್ಯ ವಿರೋಧಿ ಚಟುವಟಿಕೆ ನಡೆಸದಂತೆ ಎಚ್ಚರಿಕೆ ನೀಡಿದ್ದರು.ಆದರೂ ಸಹ ಕರ್ನಾಟಕ ರಾಜ್ಯೋತ್ಸವದ ದಿನದಂದು ಕರಾಳ ದಿನಾಚರಣೆ ಆಚರಿಸಿದ್ದಾರೆ ಇದರಿಂದ ಪೋಲಿಸರ ಕರ್ತವ್ಯ ಲೋಪ ಎದ್ದು ಕಾಣುತ್ತದೆ ಎಂದು ತೇಜಸ್ವಿ ಹೇಳಿದ್ದಾರೆ.

ಕಾರಣ ಕರಾಳ ದಿನಾಚರಣೆ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಗಡಿಪಾರು ಮಾಡಬೇಕು ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಒತ್ತಾಯಿಸಿದ್ದಾರೆ.

ಕರಾಳ ದಿನ ಆಚರಿಸಿದವರ ಗಡಿಪಾರು ಮಾಡಲು ತೇಜಸ್ವಿ ಆಗ್ರಹ Read More

ಕನ್ನಡ ಭಾಷೆ ತನ್ನದೆ ಅಸ್ಮಿತೆ ಹೊಂದಿದೆ:ಡಾ.ಹೆಚ್.ಸಿ.ಮಹದೇವಪ್ಪ

ಮೈಸೂರು: ಕನ್ನಡ ಭಾಷೆಯು ತನ್ನದೇ ಅಸ್ಮಿತೆಯನ್ನು ಒಳಗೊಂಡಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಹೇಳಿದರು.

ಮೈಸೂರು ಜಿಲ್ಲಾಡಳಿತದ ವತಿಯಿಂದ ನಗರದ ಓವಲ್ ಮೈದಾನದಲ್ಲಿ ಆಯೋಜಿಸ ಲಾಗಿದ್ದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಸಾಧಕರನ್ನು ಸನ್ಮಾನಿಸಿ ಮಹದೇವಪ್ಪ ಮಾತನಾಡಿದರು.

ಕನ್ನಡ ಭಾಷೆಗೆ ಸುಮಾರು 2 ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದ್ದು, ಭಾಷೆ, ಬದುಕು, ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಯಲ್ಲಿ ಕನ್ನಡ ಭಾಷೆಯು ತನ್ನದೇ ಅಸ್ಮಿತೆಯನ್ನು ಒಳಗೊಂಡಿದೆ ಎಂದು ತಿಳಿಸಿದರು.

ಆಡಳಿತದ ಎಲ್ಲಾ ಕ್ಷೇತ್ರಗಳಲ್ಲಿ ಕನ್ನಡ ಬಳಕೆಗೆ ನಮ್ಮ ಸರ್ಕಾರ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ ಕನ್ನಡ ಭಾಷೆಯ ಶ್ರೀಮಂತಗೊಳಿಸು ವಿಕೆಯೊoದಿಗೆ ಸಾಹಿತ್ಯ ಹಾಗೂ ಸಂಸ್ಕೃತಿಗಳ ಉತ್ತೇಜನಕ್ಕೂ ನಮ್ಮ ಸರಕಾರವು ಸಾಕಷ್ಟು ಒತ್ತು ನೀಡಿದೆ ಎಂದು ತಿಳಿಸಿದರು.

ತಂತ್ರಜ್ಞಾನದ ವೇಗದಲ್ಲಿ ಹಾಗೂ ಇಂದಿನ ಡಿಜಿಟಲ್ ಲೋಕದಲ್ಲಿ ಕನ್ನಡ ಭಾಷೆ ಹಿಂದುಳಿಯದoತೆ ಸರಕಾರ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಕನ್ನಡದಲ್ಲಿ ಯೂನಿಕೋಡ್ ಅಕ್ಷರ ವಿನ್ಯಾಸ, ಪರಿವರ್ತಕಗಳು, ಚರವಾಣಿ (ಮೊಬೈಲ್ನಲ್ಲಿ) ಕನ್ನಡ ಬಳಕೆ, ಬ್ರೈಲ್ ಲಿಪಿಯಲ್ಲಿ ಕನ್ನಡ ಬಳಕೆ ಮತ್ತಿತರ ತಂತ್ರಾoಶಗಳನ್ನು ಅಭಿವೃದ್ಧಿಪಡಿಸಿದೆ ಎಂದು ಮಹದೇವಪ್ಪ ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲೂ ಕನ್ನಡ ಲಿಪಿಯು ಹೆಚ್ಚು ಬಳಕೆಯಾಗುತ್ತಿರುವುದು ಸಂತಸದ ಬೆಳವಣಿಗೆ, ವಿಜ್ಞಾನ-ತಂತ್ರಜ್ಞಾನದ ಜೊತೆ ಜೊತೆಗೆ ಕನ್ನಡವನ್ನು ಬಳಸಿ, ಬೆಳೆಸಬೇಕಾಗಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಒಂದುವರೆ ವರ್ಷ ಪೂರ್ಣಗೊಳ್ಳುತ್ತಿದ್ದು, ಹಲವು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಎಲ್ಲಾ ಜನರ ಮನ ಗೆದ್ದಿದೆ. ಕನ್ನಡ ನಾಡು ನುಡಿ ಸಂಸ್ಕೃತಿಯನ್ನು ಪಸರಿಸುವಲ್ಲಿ ಸರ್ಕಾರ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ ಎಂದು‌ ಸಚಿವರು ತಿಳಿಸಿದರು

ಮೈಸೂರು ರಾಜ್ಯವು ಕರ್ನಾಟಕ ಎಂದು ಮರು ನಾಮಕರಣವಾಗಿ 50 ವರ್ಷ ಪೂರ್ಣಗೊಂಡಿದೆ. ಈ ಶುಭ ಸಂದರ್ಭದಲ್ಲಿ ಹೆಸರಾಯಿತು ಕರ್ನಾಟಕ, ‘ಉಸಿರಾಗಲಿ ಕನ್ನಡ’ ಎಂಬ ಹೆಸರಿನಲ್ಲಿ ಇಡೀ ವರ್ಷ ಕರ್ನಾಟಕ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ನಾಡು ನುಡಿಗೆ ಸಂಬoಧಿಸಿದoತೆ ಹಾಗೂ ಯುವ ಜನತೆಯಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕದ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಕನ್ನಡ ನಾಡು-ನುಡಿ, ಕಲೆ, ಸಂಸ್ಕೃತಿ ಜಾನಪದ, ಸಾಹಿತ್ಯ ಹೀಗೆ ವಿವಿಧ ಕ್ಷೇತ್ರ ಅಭಿವೃದ್ಧಿಗೆ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕನ್ನಡ ನಾಡು-ನುಡಿಗೆ ವಿಶೇಷ ಆದ್ಯತೆ ನೀಡಿದೆ ಎಂದು ತಿಳಿಸಿದರು.

ನಮ್ಮ ಭಾಷೆಯ ಶ್ರೀಮಂತಿಕೆಗೆ ಹಲವಾರು ಮಹನೀಯರು ಶ್ರಮಿಸಿದ್ದಾರೆ. ಮುಂದಿನ ತಲೆಮಾರಿಗೆ ಈ ಭಾಷೆಯನ್ನು ಕೊಂಡೊಯ್ಯುವ ಜವಾಬ್ದಾರಿ ನಮ್ಮ ಮೇಲೆ ಇದೆ. ಕೇವಲ ಭೌಗೋಳಿಕವಾಗಿ, ಆಡಳಿತಾತ್ಮಕವಾಗಿ ಏಕೀಕರಣವಾದರೆ ಸಾಲದು. ಕನ್ನಡದ ಮನಸ್ಸುಗಳು ಏಕೀಕರಣವಾಗಬೇಕು ಎಂದು ಸಚಿವ ಮಹದೇವಪ್ಪ ಆಶಯ ವ್ಯಕ್ತಪಡಿಸಿದರು.

ಶಾಸಕ ತನ್ವೀರ್ ಸೇಠ್, ವಿಧಾನ ಪರಿಷತ್ ಸದಸ್ಯ ಸಿ. ಎನ್.ಮಂಜೇಗೌಡ,ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಜಿಲ್ಲಾಧಿಕಾರಿ ಜಿ ಲಕ್ಷ್ಮಿಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಜಿ ಪಂ‌ ಮುಖ್ಯ ಸಿಇಒ ಕೆ ಎಂ ಗಾಯಿತ್ರಿ, ಎಸ್ ಪಿ ವಿಷ್ಣುವರ್ಧನ್, ಉಪ ವಿಭಾಗಾಧಿಕಾರಿ ರಕ್ಷಿತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ ಸುದರ್ಶನ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಟಿ. ಕೆ ಹರೀಶ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ಕನ್ನಡ ಭಾಷೆ ತನ್ನದೆ ಅಸ್ಮಿತೆ ಹೊಂದಿದೆ:ಡಾ.ಹೆಚ್.ಸಿ.ಮಹದೇವಪ್ಪ Read More

ಸಿದ್ದಾರ್ಥನಗರದ ಫುಡ್ ಸ್ರ್ಟೀಟ್ ಬಳಿ ಕನ್ನಡ ರಾಜ್ಯೋತ್ಸವ ಆಚರಣೆ

ಮೈಸೂರು: ಮೈಸೂರಿನ ಸಿದ್ದಾರ್ಥ ನಗರದ ಲಲಿತಮಹಲ್ ರಸ್ತೆ ಫುಡ್ ಸ್ರ್ಟೀಟ್ ವ್ಯಾಪಾರಿಗಳ ಸಂಘ,ವಿಷ್ಣುಸೇನಾ ಸಮಾನ ಮನಸ್ಕರ‌ ಗುಂಪು ಮತ್ತು
ಕರ್ನಾಟಕ ಯುವ ರಕ್ಷಣಾ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸಲಾಯಿತು.

ಅಂಗಡಿ ಮುಂದೆ ಧ್ವಜ ಸ್ತಂಬ ನೆಟ್ಟು ತಾಯಿ ಭುವನೇಶ್ವರಿ ಭಾವಚಿತ್ರವನ್ನು ಇರಿಸಿ ಪೂಜೆ ನೆರವೇರಿಸಲಾಯಿತು.

ಧ್ವಜ ಸ್ತಂಭದ ಸುತ್ತ ಸ್ವಚ್ಛಪಡಿಸಿ ಬಣ್ಣ ಬಣ್ಣದ ರಂಗೋಲಿ ಹಾಕಿ ಅಲಂಕರಿಸಲಾಗಿತ್ತು.

ಈ ವೇಳೆ ನೂರಾರು ಕನ್ನಡಾಭಿಮಾನಿಗಳು ಆಗಮಿಸಿದ್ದರು.ನಂತರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾಬಾ‌ ದೇವರಾಜ್ ಅವರು ಕನ್ನಡ ಧ್ವಜಾರೋಹಣ ನೆರವೇರಿಸಿದರು.

ಇದೇ ಸಂದರ್ಭದಲ್ಲಿ ನಟ ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೂ ಅಭಿಮಾನಿಗಳು ನಮನ ಸಲ್ಲಿಸಿದರು.

ಇದೇ ವೇಳೆ‌ ಡಾಬಾ ದೇವರಾಜ್,ರವಿ,ವಿಜಯ್ ಕುಮಾರ್ ಮತ್ತು ದೀಪಿಕಾ ಮತ್ತಿತರರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಿದ್ದಾರ್ಥನಗರದ ಫುಡ್ ಸ್ರ್ಟೀಟ್ ಬಳಿ ಕನ್ನಡ ರಾಜ್ಯೋತ್ಸವ ಆಚರಣೆ Read More