ಮಹಿಳಾ ಸಾಧಕರಿಗೆ ರಾಜಮಾತೆ ಲಕ್ಷ್ಮಮ್ಮಣ್ಣಿ ಪ್ರಶಸ್ತಿ ಪ್ರದಾನ

ಮೈಸೂರು: ಮೈಸೂರಿನ ಅರಸು ಮಹಿಳಾ ಜಾಗೃತಿ ಸಭಾ ಟ್ರಸ್ಟ್ ನ ಐದನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕ ಮಹಿಳೆಯರನ್ನು ರಾಜಮಾತೆ ಲಕ್ಷ್ಮಮ್ಮಣ್ಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನಗರದ ರೋಟರಿ ಪಶ್ಚಿಮ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ‌ ಸಮಾರಂಭದಲ್ಲಿ ಸಾಹಿತ್ಯ ಕ್ಷೇತ್ರದಿಂದ ಶುಭ ಸಂಜಯ್ ಅರಸ್, ಕರಕುಶಲ ಪರಿಣಿತರಾದ ಶಾರದಾ ಅರಸ್, ಚಲನಚಿತ್ರ ಕ್ಷೇತ್ರದಿಂದ ಮಂಜುಳಾ ಅರಸ್ ಹಾಗೂ ಜಾಹೀರಾತು ಕ್ಷೇತ್ರದಿಂದ ಮೋನಿಕಾ ಅರಸ್ ಅವರನ್ನು‌ ರಾಜಮಾತೆ ಲಕ್ಷ್ಮಮ್ಮಣ್ಣಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಬೆಂಗಳೂರಿನ ಬಾಹ್ಯಾಕಾಶ ಸಂಸ್ಥೆಯ ನಿರ್ದೇಶಕ ಕೆ.ಆರ್ ಆದರ್ಶ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಿಕ್ಷಣ ತಜ್ಞರಾದ ಭ್ರಮರಾಂಬ ಅವರು ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ರಾಜ್ ಇಲಾಖೆ ಅಧೀಕ್ಷಕರಾದ ಸಿಂಧು ಅರಸ್‌ ಅವರು ರಾಜ ಮಾತೆ ಲಕ್ಷ್ಮಮ್ಮಣ್ಣಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಶುಭ ಸಂಜಯ್ ಅರಸ್ ಅವರು ಸಾಧನೆ ಬಗ್ಗೆ ಮಾತನಾಡಿದರು.

ಕೆಆರ್ ಪೇಟೆಯ ಪರಿಸರ ಅಭಿಯಂತರರಾದ ಪ್ರಿಯಾಂಕ ಅರಸ್ ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷರಾದ ಡಾಕ್ಟರ್ ಇಂದುಕಲಾ ಅರಸ್ ಮತ್ತು ಟ್ರಸ್ಟ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಾಧಕ ಮಹಿಳೆಯರಿಗೆ ಚುಟುಕು ಯುಗಾಚಾರ್ಯ ಡಾಕ್ಟರ್ ಎಂ ಜಿ ಆರ್ ಅರಸ್ ಸೇರಿದಂತೆ‌ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

ಮಹಿಳಾ ಸಾಧಕರಿಗೆ ರಾಜಮಾತೆ ಲಕ್ಷ್ಮಮ್ಮಣ್ಣಿ ಪ್ರಶಸ್ತಿ ಪ್ರದಾನ Read More