ಜನಾಕರ್ಷಣೆಯ ಕೃಷಿ ವಸ್ತು ಪ್ರದರ್ಶನ
ಮೈಸೂರು: ಮೈಸೂರು ದಸರಾ ಪ್ರಯುಕ್ತ ನಗರದ ಜೆ.ಕೆ ಗ್ರೌಂಡ್ಸ್ ಮೈದಾನದಲ್ಲಿ ರೈತ ದಸರಾ ಉಪ ಸಮಿತಿಯ ವತಿಯಿಂದ ಆಯೋಜಿಸಿದ್ದ ಕೃಷಿ ವಸ್ತು ಪ್ರದರ್ಶನದಲ್ಲಿ ರೈತರು ಪಾಲ್ಗೊಂಡು ಖುಷಿ ಪಟ್ಟರು.
ಎಲ್ಲೆಲ್ಲೂ ಹಸಿರು ಟವಲ್‌ಗಳು ರಾರಾಜಿಸಿದವು.
ಕೃಷಿಯ ವೈವಿಧ್ಯಮಯ ಮಾಹಿತಿಯನ್ನು ನೀಡಲೆಂದೇ 46 ಮಳಿಗೆಗಳನ್ನು ತೆರೆಯಲಾಗಿದೆ. ಧಾನ್ಯಗಳು, ಪುಷ್ಪ ಕೃಷಿಯ ಜೊತೆಗೆ, ಖಾದ್ಯ ಯೋಗ್ಯ ಪ್ರಾಣಿಗಳ ಸಾಕಾಣಿಯನ್ನು ಸಹ ಪ್ರದರ್ಶನದಲ್ಲಿಡಲಾಗಿದೆ.
ಮೈಸೂರು ಪಶು ಸಂಗೋಪನೆ ಇಲಾಖೆ ವತಿಯಿಂದ ಬಂಡೂರು ಕುರಿ ಪ್ರದರ್ಶನ, ಡಾರ್ಕ್ ಫಾರ್ ಕುರಿ ಪ್ರದರ್ಶನ, ಮೈಸೂರು ನಾಟಿ ಕೋಳಿ, ಕಡಕ್ ನಾಷ್ ಕೋಳಿ, ಆಸಿಲ್ ಕೋಳಿ, ಟರ್ಕಿ ಕೋಳಿ, ಗಿನಿ ಪೌಲ್ ಕೋಳಿ, ಡಕ್ಸ್ ಕೋಳಿ, ಪುಂಗನೂರು ಹಸು ಪ್ರದರ್ಶನ, ಓಂಗೋಲ್ ಹಸು ಪ್ರದರ್ಶನ, ಸಾಹಿವಾಲ್ ಹಸು ಪ್ರದರ್ಶನ, ಗಿರ್ ಹಸು, ಹಳ್ಳಿಕಾರ್ ಹಸು ಹಾಗೂ ಮಲ್ನಾಡು ಗಿಡ್ಡ ಹಸುಗಳು ಎಲ್ಲರ ಆಕರ್ಶಣೆಯಾಗಿದ್ದವು.
ಪ್ರದರ್ಶನದಲ್ಲಿ ಒಟ್ಟು 46 ಮಳಿಗೆಗಳು ಗಮನ ಸೆಳೆಯುತ್ತಿವೆ. ಕೃಷಿ ಇಲಾಖೆ, ಮೀನುಗಾರಿಕೆ, ತೋಟಗಾರಿಕೆ, ರೇಷ್ಮೆ ಇಲಾಖೆಗಳು, ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯ ಬೀದರ, ನಾಗತಿಹಳ್ಳಿ ತೋಟಗಾರಿಕೆ ರೈತ ಉತ್ಪಾದಕರ ಕಂಪನ ಅ.ನಾಗಮಂಗಲ ಮಂಡ್ಯ, ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ( ವಾಲ್ಮಿ) ಧಾರವಾಡ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆ, ಸಾಮಾಜಿಕ ಅರಣ್ಯ ಇಲಾಖೆ ಮೈಸೂರು, ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ರೈತ ಉತ್ಪಾದಕರ ಸಂಸ್ಥೆ ಸೇರಿದಂತೆ ಹಲವು ಮಳಿಗೆಗಳಲ್ಲಿ ಬೇಕಾದಷ್ಟು ಮಾಹಿತಿ ಲಭ್ಯವಾಗುತ್ತಿದೆ.
ಮಂಡ್ಯದ ರೈತರು ತಂದಿದ್ದ ಸಾವಯವ ಬೆಲ್ಲ ಎಲ್ಲರ ಗಮನ ಸೆಳೆಯಿತು. ಅದೇ ರೀತಿ ಬರಗಾಲ ನಿರ್ವಹಣೆ ಪರ್ಯಾಯ ಬೆಳೆ ಪದ್ಧತಿ ಹಾಗೂ ಮಣ್ಣು ನೀರು ಸಂರಕ್ಷಣಾ ವಿಧಾನ, ಪಿಎಂ ಕಿಸಾನ್, ರೈತರ ಬೆಳೆ ಸಮೀಕ್ಷೆ, ಪ್ರಧಾನ ಮಂತ್ರಿ ಕೃಷಿ ಸಿಂಚಯ, ರೈತ ಸಂಪರ್ಕ ಕೇಂದ್ರಗಳು, ಸಿರಿಧಾನ್ಯ ವಿವರ ಮುಂತಾದವು ಗಮನ ಸೆಳೆಯುತ್ತಿವೆ.
ಜನಾಕರ್ಷಣೆಯ ಕೃಷಿ ವಸ್ತು ಪ್ರದರ್ಶನ Read More