ಮೈಸೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಎಸ್.ರಘುನಾಥ್ ಅವರು ವಿಜಯನಗರದ ಶ್ರೀ ಯೋಗಾನರಸಿಂಹ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಶ್ರೀ ಸ್ವಾಮಿಯ ದರ್ಶನ ಪಡೆದರು.
ರಘುನಾಥ್ ಅವರು ಸುವರ್ಣ ವಿಪ್ರ ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಅವರು ವಿಜಯನಗರದ ಶ್ರೀ ಯೋಗಾನರಸಿಂಹ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಶ್ರೀ ಸ್ವಾಮಿಯ ದರ್ಶನ ಪಡೆದರು.
ಈ ವೇಳೆ ದೇವಾಲಯದ ಸಂಸ್ಥಾಪಕರಾದ ಪ್ರೊ.ಡಾ.ಭಾಷ್ಯಂ ಸ್ವಾಮೀಜಿ ಅವರು ರಘುನಾಥ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ,ಗೌರವಿಸಿದರು.
ಈ ಸಂದರ್ಭದಲ್ಲಿ ದೇವಾಲಯದ ಆಡಳಿತಾಧಿಕಾರಿ ಎನ್.ಶ್ರೀನಿವಾಸನ್, ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷ ನಂ.ಶ್ರೀಕಂಠಕುಮಾರ್,ರಥಯಾತ್ರೆ ಸುರೇಶ್, ರಾಜಶೇಖರ್, ದಿಲೀಪ್, ಪುರುಷೋತ್ತಮ್,ಜಿ.ಆರ್.ಮೋಹನ್,ಎನ್.ಶ್ರೀನಿವಾಸ್ ಪ್ರಸಾದ್ ಮತ್ತಿತರರು ಹಾಜರಿದ್ದರು.
ಮೈಸೂರು, ಆ.2: ಸಮಾಜದ ಅಭಿವೃದ್ಧಿಯಲ್ಲಿ ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸಿ, ಕಟ್ಟಕಡೆಯ ವ್ಯಕ್ತಿಗೂ ಸಹಾಯ ನೀಡಿದಲ್ಲಿ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯಾಧ್ಯಕ್ಷ ರಘುನಾಥ್ ತಿಳಿಸಿದರು.
ಈ ನಿಟ್ಟಿನಲ್ಲಿ ಸಂಘಟನೆ ಅವಶ್ಯಕವಾಗಿದೆ, ಪ್ರಸ್ತುತ ದಿನಗಳಲ್ಲಿ ಬ್ರಾಹ್ಮಣ ಸಮಾಜ ಜಾಗೃತಿಯಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ಅವರು ಹೇಳಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ನಂತರ ಇದೇ ಪ್ರಥಮ ಬಾರಿಗೆ ಮೈಸೂರಿಗೆ ಆಗಮಿಸಿ ಅಗ್ರಹಾರದಲ್ಲಿರುವ ಶಾಸಕ ಟಿ.ಎಸ್ ಶೀವತ್ಸ ಅವರ ಕಚೇರಿಗೆ ಭೇಟಿ ನೀಡಿ ಜಿಲ್ಲೆಯ ಪ್ರಮುಖ ವಿಪ್ರ ಮುಖಂಡರೊಂದಿಗೆ ಉಪಹಾರ ಸೇವಿಸಿ ರಘುನಾಥ್ ಮಾತನಾಡಿದರು.
ಸರ್ವೇ ಜನಃ ಸುಖಿನೋ ಭವಂತು ಎಂಬ ವಾಣಿಯಂತೆ ಬ್ರಾಹ್ಮಣರು ಸಮಸ್ತ ಜನರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದವರು. ಸಂಘಟನೆಯಿಂದ ಯಾವುದೇ ಸಮಾಜದ ಅಭಿವೃದ್ಧಿ ಸಾಧ್ಯ, ಪ್ರಾಮಾಣಿಕವಾಗಿ ಸಂಘಟನೆಯಲ್ಲಿ ಕೆಲಸ ಮಾಡಿದರೆ ಜನ ಎತ್ತರದ ಸ್ಥಾನದಲ್ಲಿ ಕೂರಿಸುತ್ತಾರೆ ಎಂಬುದಕ್ಕೆ ನಾನು ಮತ್ತು ಶ್ರೀವತ್ಸ ಅವರೇ ಉದಾಹರಣೆ. ಇಬ್ಬರೂ ಸಹ ಬಿಜೆಪಿಯಲ್ಲಿ ಸಂಘಟನ ಪ್ರಧಾನ ಕಾರ್ಯದರ್ಶಿಗಳಾಗಿ ಕೆಲಸ ಮಾಡಿದ್ದೆವು ಎಂದು ಹೇಳಿದರು.
ಶಾಸಕ ಟಿ.ಎಸ್. ಶ್ರೀವತ್ಸ ಅವರು ಮಾತನಾಡಿ, ರಘುನಾಥ್ ಅವರ ಬಹು ವರ್ಷಗಳ ಒಡನಾಟದ ಬಗ್ಗೆ ತಿಳಿಸಿ, ಬ್ರಾಹ್ಮಣ ಸಮುದಾಯ ಸರ್ವರಿಗೂ ಶುಭವನ್ನು ಬಯಸುವ ಸಮುದಾಯವಾಗಿದ್ದು ಸಮಾಜದ ಸರ್ವತೋಮಖ ಅಭಿವೃದ್ಧಿಗೆ ಎಲ್ಲರೂ ಒಗಟ್ಟಿನಿಂದ ಹೋರಾಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಟಿ.ಎಸ್. ಶ್ರೀವತ್ಸರವರು ರಘುನಾಥ್ ಅವರನ್ನು ಅಭಿನಂದಿಸಿದರು.
ಬಿಜೆಪಿ ಮುಖಂಡರಾದ ಮೈ.ವಿ ರವಿಶಂಕರ್, ನಗರಪಾಲಿಕೆ ಮಾಜಿ ಸದಸ್ಯರಾದ ಎಂ.ಡಿ ಪಾರ್ಥಸಾರಥಿ, ಮಾ.ವಿ ರಾಮಪ್ರಸಾದ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷರುಗಳಾದ ದಿಲೀಪ್ ರಾಜಶೇಖರ್, ರಥಯಾತ್ರೆ ಸುರೇಶ್, ಜಂಟಿ ಕಾರ್ಯದರ್ಶಿಗಳಾದ ಬಾಲಕೃಷ್ಣ, ಕಲ್ಕೆರೆ ನಾಗರಾಜ್, ಟಿ.ಎಸ್ ಅರುಣ್, ಯೋಗ ನರಸಿಂಹ ಸ್ವಾಮಿ ದೇವಸ್ಥಾನದ ಸಿಇಒ ಮುರುಳಿ, ವೀರರಾಘವಾಚಾರ್, ಹವ್ಯಕ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ರಾಕೇಶ್ ಭಟ್, ಎಂ.ಎ ಮೋಹನ್, ಕೆ.ಎಂ. ನಿಶಾಂತ್, ಅಜಯ್ ಶಾಸ್ತ್ರಿ, ಮಂಜುನಾಥ್, ಟಿ.ಪಿ ಮಧುಸೂಧನ್, ಎಲ್ ಎಲ್ ಹೆಗಡೆ, ಸತೀಶ್ ಹಾಗೂ ವಿವಿಧ ಮೈಸೂರು ಜಿಲ್ಲೆಯ ಬ್ರಾಹ್ಮಣ ಸಂಘಟನೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮೈಸೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆಗೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಸ್. ರಘುನಾಥ್ ಹಾಗೂ ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ ಅಧಿಕೃತ ಅಭ್ಯರ್ಥಿಯಾಗಿ ಆರ್.ಎಸ್ ಸತ್ಯ ನಾರಾಯಣ್ ಸ್ಪರ್ಧಿಸಿದ್ದಾರೆ ಎಂದು ವಿಪ್ರ ಮುಖಂಡರಾದ ಎನ್ ಎಂ ನವೀನ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ನವೀನ್ ಕುಮಾರ್,ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆ ಏಪ್ರಿಲ್ 13 ರಂದು ರಾಜ್ಯದಂತ ನಡೆಯಲಿದ್ದು ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ ಎಸ್ ರಘುನಾಥ್ ಹಾಗೂ ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ ಸ್ಪರ್ಧಿಸಿರುವ ಅಧಿಕೃತ ಅಭ್ಯರ್ಥಿ ಆರ್.ಎಸ್ ಸತ್ಯ ನಾರಾಯಣ್ ಅವರನ್ನು ಗೆಲ್ಲಿಸಬೇಕೆಂದು ಕೋರಿದರು.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮದಲ್ಲಿ ಕೆಲವರನ್ನು ರಘುನಾಥ್ ಬೆಂಬಲಿತ ಅಭ್ಯರ್ಥಿಯೆಂದು ಅಪಪ್ರಚಾರ ಮಾಡುತ್ತಿದ್ದಾರೆ ಅದಕ್ಕೆ ವಿಪ್ರ ಸಮುದಾಯದವರು ಕಿವಿಗೊಡದೆ ಮೈಸೂರಿನ ರಘುನಾಥ್ ಬೆಂಬಲಿತ ಅಧಿಕೃತ ಅಭ್ಯರ್ಥಿ ಆರ್. ಎಸ್ ಸತ್ಯ ನಾರಾಯಣ ಅವರನ್ನು ಬೆಂಬಲಿಸಬೇಕು ಹಾಗೂ ಮತ್ತೊಂದು ಪ್ರತಿನಿಧಿ ಸ್ಥಾನದ ಅಭ್ಯರ್ಥಿ ಭಾಗ್ಯ ಶ್ರೀ ಭಟ್ ಅವರನ್ನು ಬೆಂಬಲಿಸಬೇಕೆಂದು ನವೀನ್ ಕುಮಾರ್ ಮನವಿ ಮಾಡಿದರು.
ಏ.13 ರಂದು ಮೈಸೂರಿನ ಕೃಷ್ಣಮೂರ್ತಿ ಪುರಂ ನಲ್ಲಿರುವ ಬಗನಿ ಸೇವಾ ಸಮಾಜದಲ್ಲಿ ಬೆಳಗೆ 8ರಿಂದ ಸಂಜೆ 4 ರವರೆಗೂ ಮತದಾನ ನಡೆಯಲಿದೆ, ಬ್ರಾಹ್ಮಣ ಬಂಧುಗಳು ತಪ್ಪದೇ ಆಗಮಿಸಿ ಮತದಾನ ಮಾಡುವುದರ ಮೂಲಕ ಬ್ರಾಹ್ಮಣ ಮಹಾಸಭಾ ಸಂಘಟನೆಗೆ ಶಕ್ತಿ ತುಂಬಬೇಕೆಂದು ಅವರು ಕೋರಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರತಿನಿಧಿ ಸ್ಥಾನದ ಅಭ್ಯರ್ಥಿ ಆರ್.ಎಸ್ ಸತ್ಯನಾರಾಯಣ್, ಭಾಗ್ಯಶ್ರೀ ಭಟ್, ಹಿರಿಯ ವಿಪ್ರ ಮುಖಂಡರಾದ ಸಿ ವಿ ಪಾರ್ಥಸಾರಥಿ, ಎಸ್ ಬಿ. ವಾಸುದೇವ್ ಮೂರ್ತಿ, ನಾಗಚಂದ್ರ, ರಾಜಕುಮಾರ್, ಜಗದೀಶ್ ಹಾಜರಿದ್ದರು.