ಇಬ್ಬರ ಜಗಳ ಮೂರನೆಯವನಿಗೆ ಪ್ರಾಣ ಸಂಕಟ

ಮೈಸೂರು,ಏ.1: ಇಬ್ಬರ ನಡುವೆ ನಡೆಯುತ್ತಿದ್ದ ಜಗಳ ಬಿಡಿಸಲು ಹೋದ ವ್ಯಕ್ತಿ ಮೇಲೆ ಡ್ರಾಗರ್ ನಿಂದ ಇರಿದ ಘಟನೆ ಸರಸ್ವತಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಉಮೇಶ್ ಎಂಬುವರು ಡ್ರಾಗರ್ ನಿಂದ ಇರಿತಕ್ಕೆ ಒಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ಸಂಭಂಧ ಅರ್ಜುನ್ ಎಂಬಾತನನ್ನ ಪೊಲೀಸರು ಬಂಧಿಸಿದ್ದು,ಇನ್ನು ಇಬ್ಬರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಯುಗಾದಿ ಹಬ್ಬದ ದಿನದಂದು ಸರಸ್ವತಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಸ್ವಾಗತ್ ಬಾರ್ ಬಳಿ ಜೂಜಾಟಕ್ಕೆ ಸಿದ್ದತೆ ಆಗಿತ್ತು.ಈ ವೇಳೆ ಇಬ್ಬರು ಯುವಕರ ನಡುವೆ ಆಟೋ ಮಾರಾಟದಿಂದ ಬಂದ ಹಣದ ಬಗ್ಗೆ ಜಗಳ ವಾಗಿದೆ,ಆಗ ಅಲ್ಲಿಗೆ ಬಂದ ಉಮೇಶ್ ಜಗಳ ಬಿಡಿಸಲು ಯತ್ನಿಸಿದ್ದಾರೆ.

ಆದರೆ ಯುವಕರು ಡ್ರಾಗರ್ ನಿಂದ ಉಮೇಶ್ ಕುತ್ತಿಗೆಗೆ ಇರಿದಿದ್ದಾರೆ.ತೀವ್ರ ಗಾಯಗೊಂಡಿದ್ದ ಉಮೇಶ್ ರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಸಂಬಂಧ ರವಿ,ಗಿರೀಶ್ ಸೇರಿದಂತೆ ಇತರರ ಮೇಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಅರ್ಜುನ್ ಎಂಬಾತನನ್ನ ಬಂಧಿಸಿದ್ದಾರೆ.

ಇಬ್ಬರ ಜಗಳ ಮೂರನೆಯವನಿಗೆ ಪ್ರಾಣ ಸಂಕಟ Read More

ಕ್ಷುಲ್ಲಕ ಕಾರಣಕ್ಕೆ ಜಗಳ:ಸ್ನೇಹಿತನ ಹತ್ಯೆ

ಮೈಸೂರು: ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಜಗಳವಾಗಿ ಒಬ್ಬನ ಹತ್ಯೆಯಾಗಿರುವ ಘಟನೆ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ‌ ನಡೆದಿದೆ.

ಈ ಘಟನೆ ಬೀಡಿ ಕಾಲೋನಿಯಲ್ಲಿ ನಡೆದಿದ್ದು,ಮುದಾಸಿರ್ ಪಾಷಾ(38)ಕೊಲೆಯಾದ ದುರ್ದೈವಿ,ರಿಜ್ವಾನ್ ಕೊಲೆ ಮಾಡಿದ ಸ್ನೇಹಿತ.

ಈ ಇಬ್ಬರು ಸ್ನೇಹಿತರು ಕೂಲಿ ಕೆಲಸ ಮಾಡಿ ಕೆಸಿಬಿ ಸಮುದಾಯದ ಭವನದ ಬಳಿ ಮಲಗಿದ್ದರು. ಕ್ಷುಲ್ಲಕ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿ ವಿಕೋಪಕ್ಕೆ ತಿರುಗಿದೆ.

ಈ ವೇಳೆ ಸಿಮೆಂಟ್ ಇಟ್ಟಿಗೆಯಿಂದ ರಿಜ್ವಾನ್ ಮುದಾಸಿರ್ ಪಾಷಾ ತಲೆಗೆ ಹೊಡೆದಿದ್ದಾನೆ.ಇದರಿಂದ ಮುದಾಸಿರ್ ಪಾಷಾ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಆರೋಪಿ ರಿಜ್ವಾನ್ ನನ್ನು ಉದಯಗಿರಿ ಠಾಣೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಜಗಳ:ಸ್ನೇಹಿತನ ಹತ್ಯೆ Read More