ಮುದುಕನ ಮದುವೆ ನಾಟಕ ಪ್ರದರ್ಶನ:ಕಲಾವಿದ, ರಕ್ತದಾನಿ ಮಂಜು ಅವರಿಗೆ ಸನ್ಮಾನ

ಮೈಸೂರು: ದಿ.ಪಿ.ಬಿ.ರೈ ಬೆಳ್ಳಾರೆ ಅವರ ಸವಿ ನೆನಪಿನಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹ ಯೋಗದಲ್ಲಿ ಮಂಗಳೂರಿನ ಶ್ರೀ ನಂದಿ ಕೇಶ್ವರ ನಾಟಕ ಸಂಘದ ೪೧ನೇ ವರ್ಷದ ಸಂಭ್ರಮದ ಪ್ರಯುಕ್ತ ಮೈಸೂರಿನ ಪುರಭವನದಲ್ಲಿ ಗುರುವಾರ ಮುದುಕನ ಮದುವೆ ಹಾಸ್ಯ ನಾಟಕ ಏರ್ಪಡಿಸಲಾಗಿತ್ತು.

ದಿ.ಪಿ.ಬಿ.ದುತ್ತರಗಿ ವಿರಚಿತ ಈ ನಾಟಕವನ್ನು ತಂಡದ ಬಿ.ಮಲ್ಲಿಕಾರ್ಜುನ(ಹೊಸದುರ್ಗ), ಯಶಸ್ವಿನಿ ಲೋಕೇಶ್ವರ(ಮಂಡ್ಯ), ಶರತ್ ತಾಲೂರು(ಬಳ್ಳಾರಿ), ಜಯರಾಮ್ (ಮಂಡ್ಯ), ಮಂಗಳೂರು ಮೀನನಾಥ್ (ರಾಘವೇಂದ್ರ ರೈ), ಮಹೇಶ್ವರಿ ಗಣೇಶ್(ಬೆಂಗಳೂರು), ಚೈತ್ರ(ಮೈಸೂರು),ಹೆಲನ್(ಮೈಸೂರು) ಮತ್ತು ಶೋಭಾ ರೈ(ಮಂಗಳೂರು) ಈ ಎಲ್ಲ ಕಲಾವಿದರು ಉತ್ತಮ ಪ್ರದರ್ಶನ ನೀಡಿದರು.

ಹಿರಿಯ ಕಲಾವಿದರಾದ ರಾಮೇಗೌಡ್ರು ಅವರು ಪ್ರದರ್ಶ ಉದ್ಘಾಟಿಸಿದರು, ಕಾರ್ಯ ಕ್ರಮದಲ್ಲಿ ಮೈಸೂರಿನ ವಿಜಯನಗರದ ಶ್ರೀ ಯೋಗಾನರಸಿಂಹಸ್ವಾಮಿ ದೇವಾಲಯದ ಆಡಳಿತಾಧಿಕಾರಿ ಎನ್.ಶ್ರೀನಿವಾಸನ್, ಶಾಸಕ ಟಿ.ಎಸ್.ಶ್ರೀವತ್ಸ, ನಾಟಕ ರಚನೆಕಾರರಾದ ಎಸ್.ಎಸ್.ಪುಟ್ಟೇಗೌಡ್ರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಇದೇ ವೇಳೆ ಕಾರ್ಯಕ್ರಮದಲ್ಲಿ ರಕ್ತದಾನಿ, ಸಮಾಜ ಸೇವಕ ಹಾಗೂ ರಂಗಭೂಮಿ ಕಲಾವಿದರಾದ ಮಂಜು.ವಿ.ಅವರನ್ನು ಶ್ರೀ ಯೋಗಾನರಸಿಂಹಸ್ವಾಮಿ ದೇವಾಲಯದ ಆಡಳಿತಾಧಿಕಾರಿ ಎನ್.ಶ್ರೀನಿವಾಸನ್ ಅಭಿನಂದಿಸಿ ಸನ್ಮಾನಿಸಿದರು.

ಮುದುಕನ ಮದುವೆ ನಾಟಕ ಪ್ರದರ್ಶನ:ಕಲಾವಿದ, ರಕ್ತದಾನಿ ಮಂಜು ಅವರಿಗೆ ಸನ್ಮಾನ Read More

ಅಂಬೇಡ್ಕರರ ಆದರ್ಶ,ವ್ಯಕ್ತಿತ್ವ ಎಲ್ಲರಿಗೂ ಸ್ಫೂರ್ತಿ-ಕಲ್ಯಾಣ ಶ್ರೀ ಬಂತೇಜಿ

ಮೈಸೂರು: ವಿವಿಧ ಭಾಷೆ, ವಿವಿಧ ಜನಾಂಗ ಹಾಗೂ ಸಂಸ್ಕೃತಿಯನ್ನು ಹೊಂದಿರುವ ನಮ್ಮ ಭಾರತದ ನೆಲಕ್ಕೆ ಮತ್ತು ಜನರಿಗೆ ಸಮಾನತೆಯನ್ನು ಸಾರುವ ಸಂವಿಧಾನವನ್ನು ನೀಡಿದ ಅಂಬೇಡ್ಕರ್ ಅವರ ಆದರ್ಶ ಹಾಗೂ ವ್ಯಕ್ತಿತ್ವ ಎಲ್ಲರಿಗೂ ಸ್ಫೂರ್ತಿ ಎಂದು
ಕಲ್ಯಾಣ ಶ್ರೀ ಬಂತೇಜಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮೈಸೂರು ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ರವರ 68 ನೇ ಮಹಾಪರಿನಿರ್ವಾಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಾಬಾ ಸಾಹೇಬರರ ಚಿಂತನೆ ಹಾಗೂ ಸಾಮಾಜಿಕ ಮೌಲ್ಯಗಳಿಗೆ ಬೆಲೆಕೊಡಬೇಕು. ನಮ್ಮ ದೇಶದಲ್ಲಿ ಇಂದಿಗೂ ಜಾತಿ ವ್ಯವಸ್ಥೆ ಇದೆ,ನಗರದ ಜೀವನಕ್ಕೆ ಒಗ್ಗಿಕೊಂಡು ಸಾಮಾಜಿಕ ವ್ಯವಸ್ಥೆ ಸುಧಾರಣೆ ಕಂಡಿದ್ದರೂ ಸಹ ಮಾನಸಿಕ ವ್ಯವಸ್ಥೆ ಸುಧಾರಣೆ ಗೊಂಡಿಲ್ಲ. ಎಲ್ಲಿಯವರೆಗೂ ಜಾತಿ ಹಾಗೂ ತಾರತಮ್ಯ ಹೋಗುವುದಿಲ್ಲವೋ, ನಮ್ಮಲ್ಲಿ ಮಾನವೀಯ ಗುಣಗಳು ಬರುವುದಿಲ್ಲವೋ ಅಲ್ಲಿಯವರೆಗೂ ನಮಗೆ ನಿಜವಾದ ಸ್ವತಂತ್ರ ಸಿಗುವುದಿಲ್ಲ ಎಂದು ತಿಳಿಸಿದರು.

ನಮ್ಮ ದೇಶದಲ್ಲಿ ಧಾರ್ಮಿಕವಾಗಿ ಸಾಮಾಜಿಕವಾಗಿ ಸ್ವತಂತ್ರವನ್ನು ಇನ್ನೂ ಪಡೆದಿಲ್ಲ. ಅದು ಸಿಗಬೇಕೆಂದರೆ ಭಾರತೀಯರೆಲ್ಲರೂ ಸಹೋದರತೆಯಿಂದ ಬದುಕಬೇಕು. ಯಾವುದೇ ವ್ಯಕ್ತಿಯನ್ನು ಜಾತಿ -ಧರ್ಮ ಹಾಗೂ ವರ್ಣದಿಂದ ಅಳೆಯದೆ. ಪ್ರೀತಿಯಿಂದ ಭ್ರಾತೃತ್ವ ಭಾವನೆಯಿಂದ ಕಾಣಬೇಕೆಂಬುದೇ ಅಂಬೇಡ್ಕರ್ ಅವರ ಆಶಯ. ಇಂದು ಪ್ರಪಂಚದಾದ್ಯಂತ ಸುಭಧ್ರವಾಗಿ ನಿಂತಿರುವ ಅವರ ಪರಿಪೂರ್ಣವಾದ ವ್ಯಕ್ತಿತ್ವ ಎಲ್ಲರಿಗೂ ಆದರ್ಶ. ಬುದ್ಧ ಎಂಬ ಸುಜ್ಞಾನ ಸಾಗರಕ್ಕೆ ಮಹಾ ನದಿಯಾಗಿರುವುದು ಬಾಬಾ ಸಾಹೇಬರು, ಅವರೊಂದಿಗೆ ನಾವು ಉಪ ನದಿಗಳಾಗಿ ಸೇರಿ,ಪ್ರಬುದ್ಧ ಸಂವಿಧಾನವನ್ನು ಅನುಸರಿಸೋಣ ಎಂದು ಡಾ. ಕಲ್ಯಾಣ ಶ್ರೀ ಬಂತೇಜಿ ಕರೆ ನೀಡಿದರು.

ಈ ಸಂದರ್ಭದಲ್ಲಿ ಡಾ. ಕಲ್ಯಾಣ ಶ್ರೀ ಬಂತೇಜಿ ಹಾಗೂ ಭೋದಿ ರತ್ನ ಬಂತೇಜಿ ಅವರು ಬುದ್ಧ ವಂದನೆ, ಧಮ್ಮ ವಂದನೆ ಹಾಗೂ ಸಂಘ ವಂದನೆಯನ್ನು ಬೋಧಿಸಿದರು.

ಟೌನ್ ಹಾಲ್ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ರವರ ಪ್ರತಿಮೆಗೆ ಜಿಲ್ಲಾಧಿಕಾರಿಗಳಾದ ಜಿ. ಲಕ್ಷ್ಮೀ ಕಾಂತ ರೆಡ್ಡಿ ಅವರು ಪುಷ್ಪ ನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಎಂ. ಗಾಯತ್ರಿ, ಜಿಲ್ಲಾ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಆಶಾದ್ ಉರ್ ರೆಹಮಾನ್ ಶರೀಫ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ರಂಗೇಗೌಡ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಸಂಘ-ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಅಂಬೇಡ್ಕರರ ಆದರ್ಶ,ವ್ಯಕ್ತಿತ್ವ ಎಲ್ಲರಿಗೂ ಸ್ಫೂರ್ತಿ-ಕಲ್ಯಾಣ ಶ್ರೀ ಬಂತೇಜಿ Read More

ಅಂಬೇಡ್ಕರ್ ಭವನ ಅಪೂರ್ಣ: ಸರ್ಕಾರಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ದಸಂಸ

ಮೈಸೂರು: ಮೈಸೂರಿನಲ್ಲಿ ಅಂಬೇಡ್ಕರ್ ಭವನ ಕಾಮಗಾರಿ ಪೂರ್ಣಗೊಳ್ಳದೆ ಇರುವುದರಿಂದ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಸಿಡಿದೆದ್ದಿದ್ದಾರೆ.

ಜಿಲ್ಲಾಡಳಿತ ಡಿ.6ರಂದು ಪುರಭವನದ ಆವರಣದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರಿ ನಿಬ್ಬಾಣ ದಿನದ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಈ ವೇಳೆ ನೂರಾರು ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ದಾವಿಸಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಈ
ಸರ್ಕಾರಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದರು.

ನಂತರ ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ ಅವರು ಮತ್ತು ಪೊಲೀಸ್ ಅಧಿಕಾರಿಗಳು ಕಾರ್ಯಕರ್ತರನ್ನು ಸಮಾಧಾನಪಡಿಸಲು ಯತ್ನಿಸಿದರು.ಆಗ ಅವರೊಂದಿಗೆ ವಾಗ್ವಾದ ನಡೆಸಿದರು.

ಯಾರ ಸಮಾಧಾನಕ್ಕೂ ಜಗ್ಗದೆ ಪುರಭವನದ ಆವರಣದಲ್ಲೇ ಪ್ರತಿಭಟನೆಗೆ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಕುಳಿತರು.ಶೀಘ್ರವಾಗಿ ಅಂಬೇಡ್ಕರ್ ಭವನ ಕಾಮಗಾರಿ ಪೂರ್ಣಗೊಳ್ಳಬೇಕೆಂದು ಆಗ್ರಹಿಸಿದರು.

ಅಂಬೇಡ್ಕರ್ ಭವನ ಅಪೂರ್ಣ: ಸರ್ಕಾರಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ದಸಂಸ Read More

ಮಹಿಷ ದಸರಾಗೆ ವಿದ್ಯುಕ್ತ ಚಾಲನೆ

ಮೈಸೂರು: ಸಣ್ಣ,ಪುಟ್ಟ ವಿರೋಧದ ನಡುವೆಯೂ ಮಹಿಷ ದಸರಾಗೆ ವಿದ್ಯುಕ್ತ ಚಾಲನೆ ನೀಡಲಾಯಿತು.

ಮೂಲ ನಿವಾಸಿಗಳ ರಾಜ ಎಂದೇ‌ ಕರೆಯಲ್ಪಡುವ ಮಹಿಷನನ್ನು ದ್ರಾವಿಡ ದೊರೆ ಎನ್ನುತ್ತಾರೆ.

ಮಹಿಷ ದಸರಾ ಆಚರಣಾ ಸಮಿತಿ ವತಿಯಿಂದ ನಗರದ ಪುರಭವನದಲ್ಲಿ ಮಹಿಷನ ಕಂಚಿನ‌ ಸಣ್ಣ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಖ್ಯಾತ ಚಿಂತಕ ಯೋಗೇಶ್ ಮಾಸ್ಟರ್ ಚಾಲನೆ‌ ನೀಡಿ ದರು.

ಇದೇ ವೇಳೆ ಬುದ್ದ, ಅಂಬೇಡ್ಕರ್ ಮೂರ್ತಿಗಳಿಗೂ ಪುಷ್ಪ ನಮನ ಸಲ್ಲಿಸಲಾಯಿತು.

ಚಾಮುಂಡಿ ಬೆಟ್ಟದಲ್ಲಿರುವ ಮಹಿಷ ಮೂರ್ತಿಗೆ ಪುಷ್ಪಾರ್ಚನೆ ಕಾರ್ಯಕ್ರಮ‌ ಏರ್ಪಡಿಸಲಾಗಿತ್ತಾದರೂ ನಗರ ಪೊಲೀಸರು ನಿಷೇಧಾಜ್ಞೆ ಜಾರಿ ಮಾಡಿದ್ದರಿಂದ ಪುರಭವನದ ಆವರಣದಲ್ಲೇ ಮಹಿಷ ದಸರಾ ಆಚರಿಸಲಾಗುತ್ತಿದೆ.

ಕಾರ್ಯಕ್ರಮದಲ್ಲಿ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಬೋದಿ ದತ್ತ ಬಂತೇಜಿ, ಚಿಂತಕ ಶಿವಸುಂದರ್, ಪ್ರೊ‌.ಕೆ.ಎಸ್.ಭಗವಾನ್, ಲೇಖಕ ಸಿದ್ಧಸ್ವಾಮಿ, ಪ್ರೊ.ಪಿ.ವಿ.ನಂಜರಾಜೇ ಅರಸ್, ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದಾರೆ.

ಮಹಿಷ ದಸರಾಗೆ ವಿದ್ಯುಕ್ತ ಚಾಲನೆ Read More