ನಿಜವಾದ ಕೂಗುಮಾರಿ ಪ್ರತಾಪ್‌ ಸಿಂಹ – ಬಿ ಸುಬ್ರಹ್ಮಣ್ಯ ಟಾಂಗ್

ಮೈಸೂರು: ಕೂಗು ಮಾರಿಗಳಿರುವುದು ರಾಜ್ಯ ಸರ್ಕಾರದಲ್ಲಲ್ಲ, ನಿಜವಾದ ಕೂಗುಮಾರಿ ಪ್ರತಾಪ್‌ ಸಿಂಹ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ಕೂಗುಮಾರಿಗಳಿದ್ದಾರೆ ಎಂಬ ಪ್ರತಾಪ್‌ ಸಿಂಹ ಹೇಳಿಕೆಗೆ ತಿರುಗೇಟು ನೀಡಿರುವ ಸುಬ್ರಹ್ಮಣ್ಯ, ಮೈಸೂರು ದಸರಾಕ್ಕೆ ಮೊದಲ ಕೂಗುಮಾರಿನೇ ಪ್ರತಾಪ್‌ ಸಿಂಹ ಎಂದು ಕುಟುಕಿದ್ದಾರೆ.

ಭಾನು ಮುಷ್ತಾಕ್‌ ಅವರ ಯಾವುದೋ ಒಂದು ವಿಡಿಯೋ ತುಣುಕನ್ನು ಹಾಕಿ ಇಡೀ ಹಿಂದೂ ಮುಸ್ಲಿಂ ಬಾಂಧವರ ನಡುವೆ ಎತ್ತಿಕಟ್ಟುವ ಕೆಲಸ ಮಾಡಿದ್ದು ಇದೇ ಪ್ರತಾಪ್‌ ಸಿಂಹ. ಹೈಕೋರ್ಟ್‌, ಸುಪ್ರೀಂ ಕೋರ್ಟ್‌ನಲ್ಲೂ ಛೀಮಾರಿ ಹಾಕಿಸಿಕೊಂಡ್ರು, ಜನರ ಕಾಯಕ ಮಾಡುತ್ತಿರುವ ಸಿದ್ದರಾಮಯ್ಯ ನವರ ಜನಪರ ಕೆಲಸಗಳು ಪ್ರತಾಪ್ ಸಿಂಹ ಅವರಿಗೆ ಕಾಣುತ್ತಿಲ್ಲ ಹಾಗಾಗಿ ಪದೇ ಪದೇ ಮೈಸೂರಿನಲ್ಲಿ ತಾನು ಬದುಕಿದ್ದೇನೆ ಎಂಬುದನ್ನು ತೋರಿಸಲು ಟೀಕೆ ಮಾಡುತ್ತಿರುವ ನಿಜವಾದ ಕೂಗುಮಾರಿ ಕೆಲಸ ಮಾಡ್ತಿರೋದೇ ಪ್ರತಾಪ್‌ ಸಿಂಹ ಎಂದು ಕಿಡಿ ಕಾರಿದ್ದಾರೆ.

ಮೈಸೂರಿನಲ್ಲಿ ಬಲೂನ್‌ ಮಾರುವ ಬಾಲಕಿ ಮೇಲೆ ನಡೆದದ್ದು ಘೋರ ಕೃತ್ಯ, ಅದನ್ನ ಯಾರೂ ಸಹಿಸಲು ಸಾಧ್ಯವಿಲ್ಲ, ಕೃತ್ಯ ಎಸಗಿದ ಕಿಡಿಗೇಡಿಯನ್ನ ಗಲ್ಲಿಗೇರಿಸಬೇಕು ಎಂಬುದು ಕೂಡಾ ನಮ್ಮ ಒತ್ತಾಯ ವಾಗಿದೆ ಎಂದು ಸುಬ್ರಹ್ಮಣ್ಯ ಹೇಳಿದ್ದಾರೆ.

ಈ ಘಟನೆ ದಸರಾ ಮುಗಿದ ಮೇಲೆ ಆಗಿದೆ, ಇದನ್ನ ನಾಡಹಬ್ಬಕ್ಕೆ ಹೋಲಿಸಿ ಧಕ್ಕೆ ತರುವುದು ಸರಿಯಲ್ಲಾ, ಅಲ್ಲದೇ ಘಟನೆಗೆ ಸರ್ಕಾರವನ್ನ ಹೊಣೆ ಮಾಡುವುದು ಕೂಡಾ ಸರಿಯಲ್ಲ ಎಂದು ಮಾಧ್ಯಮ ಪ್ರಕಟಣೆಯಲ್ಲಿ ಸುಬ್ರಹ್ಮಣ್ಯ ತಿಳಿಸಿದ್ದಾರೆ.

ಎನ್‌ಡಿಎ ಸರ್ಕಾರ ಇರುವ ಬಿಹಾರದಲ್ಲಿ, ಬಿಜೆಪಿ ಸರ್ಕಾರ ಇರುವ ಉತ್ತರ ಪ್ರದೇಶದಲ್ಲಿ ಪ್ರತಿದಿನ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ತಾಕತ್ತಿದ್ದರೆ ಹೋಗಿ ಯೋಗಿ ಅವರ ವಿರುದ್ಧ ಮಾತಾಡಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

ಈಗ ಬೊಬ್ಬೆ ಹೊಡೆಯುವ ಪ್ರತಾಪ್‌ ಸಿಂಹ ಸುಪ್ರೀಂ ಕೋರ್ಟ್‌ ಸಿಜೆಐ ಮೇಲೆ ಶೂ ಎಸೆದಾಗ ಏಕೆ ಸೊಲ್ಲೆತ್ತಲಿಲ್ಲ, ನಿಮ್ಮಿಂದ ಪಾಸ್‌ ಪಡೆದವರು ಪಾರ್ಲಿಮೆಂಟ್‌ನಲ್ಲಿ ಸ್ಮೋಕ್‌ ಬಾಂಬ್‌ ಹಾಕಿದ್ದರಲ್ಲಾ, ಆಗಲೂ ಏನೂ ಮಾತಾಡಲಿಲ್ಲ. ಮದ್ದೂರಲ್ಲಿ ಗಣೇಶ ಮೂರ್ತಿ ವಿಚಾರದಲ್ಲಿ ಗಲಾಟೆ ಆದಾಗ ಬೆಂಕಿ ಹಚ್ಚುವ ಕೆಲಸ ಮಾಡಿದ್ದರು ಎಂದು ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯ ಅವರ ಮೇಲೆ ಈವರೆಗೆ ಮಾಡಿದ ಆರೋಪಗಳು ಫಲ ಕೊಡಲಿಲ್ಲ ಅದಕ್ಕಾಗಿ ಈಗ ಅವರ ಮಗನ ಮೇಲೆ ಮಾತನಾಡಿದ್ದಾರೆ. ಸಿದ್ದರಾಮಯ್ಯ ಅವರು 5 ವರ್ಷ ಮುಖ್ಯಮಂತ್ರಿಗಳಾಗಿ ಅಧಿಕಾರ ಪೂರೈಸಿದರೆ 2028ರಲ್ಲೂ ಕಾಂಗ್ರೆಸ್‌ ಪಟ್ಟಕ್ಕೇರಿಬಿಡುತ್ತೆ ಅನ್ನೋ ಭಯ ಕಾಡುತ್ತಿದೆಯೇನೊ ಅಲ್ಲದೇ ಬಿಜೆಪಿ ಅವಧಿಯಲ್ಲಿ ನಡೆಯುತ್ತಿದ್ದ ಪ್ರೈವೆಟ್‌ ಕ್ಲಬ್‌ಗಳನ್ನ ಸಿದ್ದರಾಮಯ್ಯ ಅವರು ಬಂದ್‌ ಮಾಡಿಸಿದ್ದಾರೆ. ಅದಕ್ಕಾಗಿ ಪ್ರತಾಪ್‌ ಸಿಂಹ ಸಿಎಂ ಮಗನ ಮೇಲೆ ನಿರಾಧಾರವಾಗಿ ಆರೋಪ ಮಾಡ್ತಿದ್ದಾರೆ. ದಾಖಲೆಗಳಿದ್ದರೆ, ಬಿಡುಗಡೆ ಮಾಡಲಿ, ಅದು ಬಿಟ್ಟು ಬೀದಿಯಲ್ಲಿ ಕೂಗುಮಾರಿ ಕೆಲಸ ಮಾಡೋದು ನಾಚಿಗೇಡು ಎಂದು ಸುಬ್ರಹ್ಮಣ್ಯ ಲೇವಡಿ ಮಾಡಿದ್ದಾರೆ,

ಇನ್ನು ನಳಪಾಕ್‌ನಲ್ಲಿ ಕಾಫಿ ಕುಡಿಯಲು, ಮೈಲಾರಿ ಹೊಟೇಲ್ ನಲ್ಲಿ ದೋಸೆ ತಿನ್ನಲು ಅಷ್ಟೇ ಪೊಲೀಸರ ಬಳಕೆ ಮಾಡ್ತಿದ್ದಾರೆ ಅನ್ನೋ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸುಬ್ರಹ್ಮಣ್ಯ, ಪೊಲೀಸ್‌ ಭದ್ರತೆ ಕೊಡೋದು ಸಿದ್ದರಾಮಯ್ಯ ಅಂತ ಅಲ್ಲ, ಮುಖ್ಯಮಂತ್ರಿಗಳು ಎಂಬ ಕಾರಣಕ್ಕೆ.ಆ ಸ್ಥಾನದಲ್ಲಿ ಯಾರಿದ್ದರೂ ಅವರಿಗೆ ಸೂಕ್ತ ಭದ್ರತೆ ಕೊಟ್ಟೇ ಕೊಡ್ತಾರೆ. ಕಾರ್ಯಕ್ರಮ ನಿಮಿತ್ತ ಬಂದಾಗ ಊಟ, ತಿಂಡಿ ಮಾಡಲೇಬೇಕಲ್ಲವೇ? ಮೋದಿ ಅವರು ಮೈಸೂರಿನ ರ್‍ಯಾಡಿಸನ್ ಬ್ಲೂ ಹೋಟೆಲ್ ನಲ್ಲಿ ಉಳಿದುಕೊಂಡಿದ್ದಾಗ ಎಷ್ಟು ಖರ್ಚಾಗಿತ್ತು? ಆಗ ಎಷ್ಟು ಜನ ಭದ್ರತೆಗೆ ಇದ್ದರು? ಇದ್ಯಾವುದು ತಲೆಯಲ್ಲಿ ನಿಮ್ಮ ತಲೆಯಲ್ಲಿ ಇಲ್ಲವೆ, ಮೋದಿ ಅವರನ್ನೂ ಹೀಗೆಯೆಡ ಪ್ರಶ್ನೆ ಮಾಡಲು ಧೈರ್ಯ ಇದೆಯೇ ಎಂದು ಬಿ ಸುಬ್ರಹ್ಮಣ್ಯ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

ನಿಜವಾದ ಕೂಗುಮಾರಿ ಪ್ರತಾಪ್‌ ಸಿಂಹ – ಬಿ ಸುಬ್ರಹ್ಮಣ್ಯ ಟಾಂಗ್ Read More

ಧಾರ್ಮಿಕ ನಂಬಿಕೆಯಲ್ಲಿ ಅಡಗಿದೆ ಬದುಕಿನ ಶ್ರೇಷ್ಠತೆ: ಪ್ರತಾಪ್ ಸಿಂಹ

ಮೈಸೂರು: ಮಹಾಶಿವರಾತ್ರಿ ಪ್ರಯುಕ್ತ ಮಾಜಿ ಸಂಸದ ಪ್ರತಾಪ್ ಸಿಂಹ ಅವರು
ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ಶಿವನ ದರ್ಶನ ಮಾಡಿದರು.

ಪ್ರತಾಪ್ ಸಿಂಹ ಅವರು ಅಶೋಕ ರಸ್ತೆಯಲ್ಲಿರುವ ಶ್ರೀ ಕನಿಕಾ ಪರಮೇಶ್ವರಿ ದೇವಸ್ಥಾನ, ಹಳೆ ಸಂತೆಪೇಟೆಯ ಪ್ರಸನ್ನ ನಂಜುಂಡೇಶ್ವರ ದೇವಸ್ಥಾನ, ದೇವರಾಜ ಮೊಹಲ್ಲಾ ದಿವಾನ್ಸ್ ರಸ್ತೆ ಶ್ರೀ ಅಮೃತೇಶ್ವರ ದೇವಸ್ಥಾನ ಹಾಗೂ ಮೇಟಗಳ್ಳಿಯ ಶ್ರೀ ಮಹಾಲಿಂಗೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆಗಳಲ್ಲಿ ಪಾಲ್ಗೊಂಡಿದ್ದರು.

ಈ‌ ವೇಳೆ ಮಾತನಾಡಿದ ಅವರು ಮನುಷ್ಯನಲ್ಲಿಯ ಅಂಧಕಾರ, ಅಹಂಕಾರ ಮತ್ತು ವಿಕಾರಾದಿಗಳನ್ನು ದೂರ ಮಾಡುವ ಮೂಲಕ ಶಿವರಾತ್ರಿಯ ಧ್ಯಾನವು ಶಾಂತಿ, ನೆಮ್ಮದಿಯನ್ನು ಪ್ರಾಪ್ತಿಗೊಳಿಸುತ್ತದೆ
ಎಂದು ಹೇಳಿದರು.

ಧಾರ್ಮಿಕ ನಂಬಿಕೆಯಲ್ಲಿ ಬದುಕಿನ ಶ್ರೇಷ್ಠತೆ‌ ಅಡಗಿದೆ ಎಂದು ಹೇಳಿದ ಅವರು,
ಪ್ರತಿ ಜೀವಿಯಲ್ಲಿಯೂ
ದೇವರಿದ್ದಾನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರುಗಳಾದ ಎಸ್ ಕೆ ದಿನೇಶ್, ರಾ ಪರಮೇಶ್ ಗೌಡ, ಸಂದೇಶ್, ಸತೀಶ್, ಬ್ರಹ್ಮಚಾರ್, ವಿ ಎಸ್ ಕಿರಣ್, ರಾಮು, ಅರುಣ್, ವಿನೋದ್ ಅರಸ್, ಪ್ರಮೋದ್ ಗೌಡ, ಮಲ್ಲಿಕ್, ಕಾಂತ , ದೇವರಾಜ್, ಸಂಜೀವಿನಿ ಕುಮಾರ್, ದಿವಾಕರ್, ಟೆನ್ನಿಸ್ ಗೋಪಿ, ರವಿಕುಮಾರ್, ಚಿಕ್ಕ ರಾಮಣ್ಣ ಸೇರಿದಂತೆ ಸ್ಥಳೀಯ ಮುಖಂಡರು ಹಾಜರಿದ್ದರು.

ಧಾರ್ಮಿಕ ನಂಬಿಕೆಯಲ್ಲಿ ಅಡಗಿದೆ ಬದುಕಿನ ಶ್ರೇಷ್ಠತೆ: ಪ್ರತಾಪ್ ಸಿಂಹ Read More

ಪ್ರತಾಪ್‌ ಸಿಂಹ ವಿರುದ್ಧ ಎಫ್‌ಐಆರ್‌

ಮೈಸೂರು: ಉದಯ ಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲುತೂರಾಟ ಪ್ರಕರಣ ಸಂಬಂಧ ಮುಸ್ಲಿಮರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಮಾಜಿ ಸಂಸದ ಪ್ರತಾಪ್‌ ಸಿಂಹ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಮೈಸೂರು ಯುವ ಕಾಂಗ್ರೆಸ್‌ ಮುಖಂಡ ಸೈಯದ್‌ ಅಬ್ರರ್ ಅವರು ಪ್ರತಾಪ್ ಸಿಂಹ ವಿರುದ್ಧ ನೀಡಿದ ದೂರಿನ ಮೇರೆಗೆ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಇದೇ ಫೆ.10ರಂದು ಮುಸ್ಲಿಂ ಯುವಕರ ಗುಂಪು ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲುತೂರಾಟ ನಡೆಸಿತ್ತು. ಈ ಪ್ರಕರಣ ಕುರಿತು ಮಾಧ್ಯಮಗಳೊಂದಿಗೆ ಮಾತನಾಡುವಾಗ ಪ್ರತಾಪ್‌ ಸಿಂಹ ಅವರು ಮುಸ್ಲಿಮರ ಬಗ್ಗೆ ಅವಹೇಳಕಾರಿ ಹೇಳಿಕೆ ನಿಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪ್ರತಾಪ್‌ ಸಿಂಹ ವಿರುದ್ಧ ಎಫ್‌ಐಆರ್‌ Read More

ಅಧಿಕಾರ ಇರಲಿ, ಬಿಡಲಿ, ಜನರ ಪರ ಹೋರಾಟ ಮಾಡುತ್ತೇನೆ:ಪ್ರತಾಪ್ ಸಿಂಹ

ಮೈಸೂರು: ನನಗೆ ಯಾವುದೇ ಬಣ ಇಲ್ಲ, ನಾನೊಬ್ಬ ಬಿಜೆಪಿ ಕಾರ್ಯಕರ್ತ,ಅಧಿಕಾರ ಇರಲಿ, ಬಿಡಲಿ, ಜನರ ಪರವಾಗಿ ಹೋರಾಟ ಮಾಡುತ್ತೇನೆ ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ ಹೇಳಿದರು.

ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಮಾಧ್ಯಮಗೋಷ್ಟಿಯಲ್ಲಿ
ವಕ್ಫ್​ ವಿರುದ್ಧದ ಹೋರಾಟದಲ್ಲಿ ತಮ್ಮ ಹೆಸರನ್ನು ಪಟ್ಟಿಯಿಂದ ಕೈಬಿಟ್ಟಿರುವುದಕ್ಕೆ ಪ್ರತಾಪ್‌ ಸಿಂಹ ಈ‌ ರೀತಿ ಪ್ರತಿಕ್ರಿಯಿಸಿದರು.

ಮೈಸೂರು, ಚಾಮರಾನಗರ ಮತ್ತು ನಾನು ಪ್ರತಿನಿಧಿಸಿದ್ದ ಕೊಡಗು ಜಿಲ್ಲೆಯಲ್ಲಿ ವಕ್ಫ್ ಹೆಸರಿಗೆ ಸರ್ಕಾರಿ ಆಸ್ತಿಗಳನ್ನು ಬದಲಾಯಿಸಿದ ವಕ್ಫ್ ವಿರುದ್ಧ ನನ್ನ ಹೋರಾಟ ಅಷ್ಟೇ , ನಾನು ಜನರ ಕೆಲಸ ಮಾಡಲು ಬಂದಿದ್ದೇನೆ, ಅಧಿಕಾರ ಇದ್ದಾಗ ಜನಪರ ಕೆಲಸ ಮಾಡಿದ್ದೇನೆ,ಈಗ ಅಧಿಕಾರ ಇಲ್ಲದಿದ್ದರೂ ಜನಪರ ಹೋರಾಟದಲ್ಲಿ ಭಾಗಿಯಾಗಿದ್ದೇನೆ ಎಂದು ತಿಳಿಸಿದರು.

ಈ ವೇಳೆ ವಕ್ಫ್‌ ನೋಟಿಫಿಕೇಷನ್‌ ಆಗಿರುವ ದಾಖಲೆಗಳನ್ನ ಬಿಡುಗಡೆ ಮಾಡಿದ ಪ್ರತಾಪ್‌ ಸಿಂಹ, ಯಾವಾಗ ಆರ್.ಟಿ.ಸಿ. ಗಳು ಬದಲಾಗುತ್ತವೆ ಎಂಬ ಆತಂಕದಲ್ಲಿ, ಮಠಗಳು ಮತ್ತು ರೈತರು ಇದ್ದಾರೆ. ಈ ವಿಚಾರದಲ್ಲಿ ಸಿದ್ದರಾಮಯ್ಯ ಅವರ ಆಡಳಿತದಿಂದ ಜನ ರೋಸಿ ಹೋಗಿದ್ದಾರೆ ಎಂದು ಆರೋಪಿಸಿದರು.

ಸಿದ್ದರಾಮಯ್ಯ ಅವರ ಸರ್ಕಾರ ಬಂದಾಗ ಈ ರೀತಿಯಾಗುವುದು ಮಾಮೂಲು. ಈಗ ವಕ್ಫ್‌ ಆಸ್ತಿ ವಿಚಾರದಲ್ಲಿ ರೈತರಿಗೆ ಆತಂಕ ಸೃಷ್ಟಿಯಾಗಿದೆ. ಇದರಲ್ಲಿ ಗೆಜೆಟ್‌ ನೋಟಿಫಿಕೇಷನ್‌ ಹೊರಡಿಸಿದ್ದು, ಮೈಸೂರು – ಚಾಮರಾಜನಗರ ಭಾಗದಲ್ಲಿ 600ಕ್ಕೂ ಹೆಚ್ಚು ಎಕರೆ ಭೂಮಿ ಕಬಳಿಸಲು ಯತ್ನಿಸುತ್ತಿದ್ದಾರೆ ಎಂದು ದೂರಿದರು.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದು ವಕ್ಫ್​ ಆಸ್ತಿ ಒತ್ತುವರಿ ಮಾಡಿಕೊಂಡಿರುವ ಐದಾರು ಜನ ಮುಸ್ಲಿಂ ಮುಖಂಡರಿಂದ ತೆರವುಗೊಳಿಸಿ ಅಂತಾ. ಅದನ್ನು ಬೇರೆ ರೀತಿ ಬಿಂಬಿಸಲಾಗಿದೆ ಎಂದು ಪ್ರತಾಪ್​ ಸಿಂಹ ಹೇಳಿದರು.

ಮಂತ್ರಾಲಯಕ್ಕೂ ನಾವೇ ಭೂಮಿ ಧಾನ ಮಾಡಿದ್ದು ಎಂದು ಮಾಜಿ ಸಚಿವ ಸಿ ಎಂ ಇಬ್ರಾಹಿಂ ಹೇಳಿದ್ದಾರೆ. ಇಸ್ಲಾಂ ಧರ್ಮಕ್ಕೂ , ಭಾರತಕ್ಕೂ ಏನು ಸಂಬಂಧ, ನಮಗೆ ಭೂಮಿ ದಾನ ಮಾಡಲು ನಿಮಗೆ ಭೂಮಿ ಎಲ್ಲಿಂದ ಬಂತು ಎಂದು ಪ್ರತಾಪ್​ ಸಿಂಹ ಈ ವೇಳೆ ಕಾರವಾಗಿ ಪ್ರಶ್ನಿಸಿದರು.

ಇಸ್ಲಾಂ ಧರ್ಮ ಹುಟ್ಟಿದ್ದು ಮರುಭೂಮಿಯಲ್ಲಿ, ಮುಸ್ಲಿಂರಿಗೆ ಆಶ್ರಯ ಕೊಟ್ಟಿದ್ದು ನಾವು, ಈಗ ನಮ್ಮ ಭೂಮಿ ಉಳಿಸಿಕೊಳ್ಳಲು ಹೋರಾಟ ಮಾಡಬೇಕಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಅಧಿಕಾರ ಇರಲಿ, ಬಿಡಲಿ, ಜನರ ಪರ ಹೋರಾಟ ಮಾಡುತ್ತೇನೆ:ಪ್ರತಾಪ್ ಸಿಂಹ Read More

ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅದಕ್ಕೆ ಸರ್ಕಾರವೇ ನೇರ ಹೊಣೆ:ಪ್ರತಾಪ್ ಸಿಂಹ

ಮೈಸೂರು: ಮುಸ್ಲಿಂರ ಕೈಯಲ್ಲಿರುವ ಪೆಟ್ರೋಲ್ ಬಾಂಬ್, ತಲ್ವಾರ್ ಗಳನ್ನ ಸರ್ಕಾರ ಕಿತ್ತುಕೊಳ್ಳಬೇಕು,
ಇಲ್ಲದಿದ್ದರೆ ಮುಂದೆ ನಡೆಯುವ ಗಣೇಶ ಮೆರವಣಿಗೆಳಲ್ಲಿ ನಾವು ಅವುಗಳನ್ನು ಹಿಡಿಯಬೇಕಾಗುತ್ತದೆ‌ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಗುಡುಗಿದ್ದಾರೆ.

ಒಂದು ವೇಳೆ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅದಕ್ಕೆ ಸರ್ಕಾರವೇ ನೇರ ಹೊಣೆ ಎಂದು ಎಚ್ವರಿಸಿದರು.

ಕೇಂದ್ರ ಸಚಿವ ವಿ.ಸೋಮಣ್ಣ ಅವರೊಂದಿಗೆ ಸಭೆಯಲ್ಲಿ ಪಾಲ್ಗೊಂಡಿದ್ದ ವೇಳೆ ಅವರು ಮಾಧ್ಯಮದೊಂದಿಗೆ ಮಾತನಾಡಿದರು.

ಗಣೇಶ ಮೆರವಣಿಗೆ ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆಯುತ್ತದೆ,ಅಷ್ಟರಲ್ಲಿ ಸರ್ಕಾರ ಅನ್ಯ ಕೋಮಿನ ಪುಂಡರ ಮೇಲೆ ನಿಯಂತ್ರಣ ಹೇರಬೇಕು,ನಿಯಂತ್ರಣ ಹೇರದಿದ್ದರೆ ನಮ್ಮ ರಕ್ಷಣೆಯ ಜವಾಬ್ದಾರಿ ನಮಗೆ ಗೊತ್ತಿದೆ ಎಂದು ಹೇಳಿದರು.

ನಾಗಮಂಗಲ ಗಲಭೆ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ,
ಅಮಾಯಕ ಹಿಂದುಗಳ ಬಂಧನ ನಡೆದರೆ ಸುಮ್ಮನಿರುವುದಿಲ್ಲ, ನಾವು ಮತ್ತೆ ನಾಗಮಂಗಲಕ್ಕೂ ಬರುತ್ತೇವೆ ಪೊಲೀಸ್ ಠಾಣೆಗೂ ಬರುತ್ತೇವೆ,
ಗಲಾಟೆ ಶುರು ಮಾಡಿದವರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಆರ್ ಎಸ್ ಎಸ್ ಸಮನ್ವಯ ಸಭೆ ವಿಚಾರ‌ದ ಬಗ್ಗೆ ಮಾತನಾಡಿದ ಸಿಂಹ,
ನಾನು ಸಭೆಯಲ್ಲಿ ಯಾವ ಅಸಮಾಧಾನ ವ್ಯಕ್ತ ಪಡಿಸಿಲ್ಲ
ಸಭೆಯ ಕೊನೆಯ ಬೆಂಚ್ ನಲ್ಲಿ ಕುಳಿತುಕೊಂಡು ಅವರು ಹೇಳಿದ್ದನ್ನ ಕೇಳಿಕೊಂಡು ಎದ್ದು ಬಂದಿದ್ದೇನೆ.
ಆರ್ ಎಸ್ ಎಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸುವಷ್ಟು ನಾನು ದೊಡ್ಡವನಾಗಿಲ್ಲ.
ಆರ್ ಎಸ್ ಎಸ್ ನಿಂದಲೇ ಬೆಳೆದವನು ನಾನು ಎಂದು ಸ್ಪಷ್ಟಪಡಿಸಿದರು.

ಮಹಿಷ ದಸರಾ ಕುರಿತು ಮಾತನಾಡಿದ ಪ್ರತಾಪ್ ಸಿಂಹ ನಾನು ಎಂಪಿಯಾಗಿದ್ದರು ಅಷ್ಟೇ ಆಗದಿದ್ದರೂ ಅಷ್ಟೇ,ತಾಯಿ ಚಾಮುಂಡಿಗೆ ಅವಮಾನವಾಗುವುದಕ್ಕೆ ಬಿಡುವುದಿಲ್ಲ,ಬೆಟ್ಟದಲ್ಲಿ ಮಹಿಷ ದಸರಾ ನಡೆಸಲು ಬಿಡುವುದಿಲ್ಲ ಎಂದು ಕಡಕ್ಕಾಗಿ ಹೇಳಿದರು.

ಮೂಡಾ ಹಗರಣ ವಿಚಾರ ಕೋರ್ಟ್ ನಲ್ಲಿದೆ.
ಆ ಕೇಸ್ ವಿಚಾರ ಏನೇ ಆಗಲಿ ಅದು ಬೇರೆ ವಿಚಾರ,ಆದರೆ, ವಾಲ್ಮೀಕಿ ಹಗರಣದಲ್ಲಿ ಸಿಎಂ ತಲೆದಂಡ ನಿಶ್ಚಿತ ಎಂದು ಇದೇವೇಳೆ ಅವರು ಭವಿಷ್ಯ ನುಡಿದರು.

ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅದಕ್ಕೆ ಸರ್ಕಾರವೇ ನೇರ ಹೊಣೆ:ಪ್ರತಾಪ್ ಸಿಂಹ Read More