ಪ್ರಕಾಶ್ ಪ್ರಿಯದರ್ಶನ್ ಗೆ ಜನ್ಮದಿನದ ಶುಭ ಕೋರಿದ ಜೆಡಿಎಸ್ ನಾಯಕರು

ಮೈಸೂರು: ಮೈಸೂರಿನ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಪಕ್ಷದ ನಗರ ಕಾರ್ಯಾಧ್ಯಕ್ಷರೂ, ಸಮಾಜ ಸೇವಕರೂ ಆದ ಪ್ರಕಾಶ್ ಪ್ರಿಯದರ್ಶನ್ ಅವರ ಹುಟ್ಟುಹಬ್ಬವನ್ನು ವಿಶೇಷವಾಗಿ ‌ಆಚರಿಸಲಾಯಿತು.

ಜೆಡಿಎಸ್ ನಗರ ಅಧ್ಯಕ್ಷ‌ರಾದ ಕೆ. ಟಿ ಚೆಲುವೇಗೌಡ್ರು ನೇತೃತ್ವದಲ್ಲಿ ಎನ್ ಆರ್ ಬ್ಲಾಕ್ ಅಧ್ಯಕ್ಷರಾದ ರಾಮೆ ಗೌಡ್ರು, ಚಾಮರಾಜ ಕ್ಷೇತ್ರದ ಅಧ್ಯಕ್ಷರಾದ ಮಂಜು ಗೌಡ್ರು ಹಾಗೂ ಹಲವಾರು ಜೆಡಿಎಸ್ ನಾಯಕರುಗಳ ನೇತೃತ್ವದಲ್ಲಿ ಪ್ರಕಾಶ್ ಪ್ರಿಯದರ್ಶನ್ ಅವರ ಹುಟ್ಟುಹಬ್ಬವನ್ನು ಪಕ್ಷದ ಕಚೇರಿಯಲ್ಲಿ ಎಚ್ ಡಿ ಕುಮಾರಸ್ವಾಮಿ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ
ಶ್ರೀ ಕನಕದಾಸ ಜಯಂತಿ ಸಂದರ್ಭದಲ್ಲಿ ಆಚರಿಸಲಾಯಿತು.

ಆ ಸಂದರ್ಭದಲ್ಲಿ ನಗರ ಅಧ್ಯಕ್ಷರಾದ ಕೆ ಆರ್ ಮಿಲ್ ಆನಂದ್ ಗೌಡ್ರು,ನಗರ ಸಂಘಟನಾ ಕಾರ್ಯದರ್ಶಿ ಕೋದಂಡ, ಬಂಬೂ ಬಜಾರ್ ಮೆದರ್ ಬ್ಲಾಕ್ ನಿಖಿಲ್ ಕುಮಾರಸ್ವಾಮಿ ಬಳಗದ ಅಧ್ಯಕ್ಷರಾದ ಪ್ರದೀಪ್, ಕೃಷ್ಣೇಗೌಡ ಮತ್ತಿತರರು ಹಾಜರಿದ್ದರು.

ಈ ವೇಳೆ ಪ್ರಕಾಶ್ ಪ್ರಿಯದರ್ಶನ್ ಅವರಿಗೆ ಶಾಲು ಹೊದಿಸಿ,ಹಾರಹಾಕಿ ಜನುಮ‌ ದಿನದ ಶುಭ ಕೋರಲಾಯಿತು.

ಪ್ರಕಾಶ್ ಪ್ರಿಯದರ್ಶನ್ ಗೆ ಜನ್ಮದಿನದ ಶುಭ ಕೋರಿದ ಜೆಡಿಎಸ್ ನಾಯಕರು Read More

ಲೇಖನಿ ಸಾಮಗ್ರಿ ವಿತರಿಸಿರಾಮಕೃಷ್ಣ ಪರಮಹಂಸ ಜಯಂತಿ ಆಚರಣೆ

ಮೈಸೂರು: ವಿದ್ಯಾರ್ಥಿನಿಯರಿಗೆ
ಹಣ್ಣು, ಹಂಪಲು, ಲೇಖನಿ ಸಾಮಗ್ರಿಗಳನ್ನು ವಿತರಣೆ ಮಾಡುವ ಮೂಲಕ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದಿಂದ
ಶ್ರೀ ರಾಮಕೃಷ್ಣ ಪರಮಹಂಸರ ಜಯಂತಿ ಆಚರಿಸಲಾಯಿತು.

ನಗರದ ಕೆ.ಆರ್. ಮೊಹಲ್ಲ ಬಿ.ಬಿ. ಲಾಯ ದಲ್ಲಿರುವ ಶಿವಶ್ರೀ ವಿದ್ಯಾರ್ಥಿನಿಯರ ನಿಲಯದಲ್ಲಿ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ವತಿಯಿಂದ ಶ್ರೀ ರಾಮಕೃಷ್ಣ ಪರಮಹಂಸರ ಜಯಂತಿ ಅಂಗವಾಗಿ ಹಣ್ಣು, ಹಂಪಲು, ಹಾಗೂ ಲೇಖನಿ ಸಾಮಗ್ರಿಗಳನ್ನು ನೀಡಲಾಯಿತು.

ಈ ವೇಳೆ ಮಾತನಾಡಿದ
ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್,ಶ್ರೀ ರಾಮಕೃಷ್ಣ ಪರಮಹಂಸರು ಭಕ್ತಿ ಮಾರ್ಗದಲ್ಲಿ ಸಾಗಿ ಕಾಳಿ ಮಾತೆಯನ್ನು ಪೂಜಿಸಿದವರು, ಸ್ವಾಮಿ
ವಿವೇಕಾನಂದರಂತಹ ಚೈತನ್ಯವನ್ನು ಜಗತ್ತಿನಾದ್ಯಂತ ಆಧ್ಯಾತ್ಮಿಕ ಪ್ರಚಾರಕ್ಕಾಗಿ ಸನ್ನದ್ದಗೊಳಿಸಿದವರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಿವಶ್ರೀ ವಿದ್ಯಾರ್ಥಿನಿಯರ ನಿಲಯದ ಸ್ಥಾಪಕರಾದ ಪ್ರಭಾಮಣಿ, ಸುಬ್ರಮಣಿ, ಹಿರಿಯ ಕ್ರೀಡಾಪಟು ಮಹಾದೇವ,, ಛಾಯಾ,ಗಾಯಕ ಯಶ್ವಂತ್ ಕುಮಾರ್, ವೀರಭದ್ರ ಸ್ವಾಮಿ, ಮಹೇಶ್ ,ದತ್ತ, ಎಸ್.ಪಿ.ಅಕ್ಷಯ್ ಪ್ರಿಯಾದರ್ಶನ್, ಹರ್ಷಿತ್, ಎಸ್ ನಾಗೇಶ್ ಮತ್ತಿತರರು ಹಾಜರಿದ್ದರು.

ಲೇಖನಿ ಸಾಮಗ್ರಿ ವಿತರಿಸಿರಾಮಕೃಷ್ಣ ಪರಮಹಂಸ ಜಯಂತಿ ಆಚರಣೆ Read More

ವಿಶ್ವ ಹೃದಯ ದಿನಾಚರಣೆ ಅಂಗವಾಗಿವಿದ್ಯಾರ್ಥಿಗಳಿಗೆ ಜಾಗೃತಿ

ಮೈಸೂರು: ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ವತಿಯಿಂದ ವಿಶ್ವ ಹೃದಯ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಯಿತು.

ಕೆ.ಆರ್.ಮೊಹಲ್ಲ, ಬಿ.ಬಿ. ಲಾಯ ದಲ್ಲಿರುವ ಶಿವಶ್ರೀ ವಿದ್ಯಾರ್ಥಿನಿಯರ ನಿಲಯದ ಬಂಧುಗಳಿಗೆ ಹಣ್ಣುಗಳು ಹಾಗೂ ಲೇಖನಿ ಸಾಮಗ್ರಿಗಳನ್ನು ವಿತರಿಸಿ ಹೃದಯದ ಆರೋಗ್ಯದ ಬಗ್ಗೆ ಜಾಗೃತಿ ನೀಡಲಾಯಿತು.

ಈ ವೇಳೆ ಮಾತನಾಡಿದ ಜೆಡಿಎಸ್ ಕಾರ್ಯಧ್ಯಕ್ಷ ಎಸ್ ಪ್ರಕಾಶ್ ಪ್ರಿಯದರ್ಶನ್, ಹೃದಯ ದೇಹಕ್ಕೆ ಅತ್ಯಂತ ಪ್ರಮುಖ ಅಂಗವಾಗಿದ್ದು ನಮ್ಮ ದೇಹದ ಪ್ರತಿಯೊಂದು ಅಂಗಗಳಿಗೆ ರಕ್ತ ಆಕ್ಸಿಜನ್ ಪೂರೈಸುವುದರ ಮೂಲಕ ಎಲ್ಲ ಅಂಗಳು ಆರೋಗ್ಯವಾಗಿ ಕೆಲಸ ನಿರ್ವಹಿಸಲು ಕಾರಣವಾಗಿರುತ್ತದೆ ಎಂದು ತಿಳಿಸಿದರು.

ಪ್ರಸ್ತುತ ನಮ್ಮ ಜೀವನ ಶೈಲಿ, ಆಹಾರ ಪದ್ಧತಿ, ತಂಬಾಕು ಉತ್ಪನ್ನಗಳ ಸೇವನೆಯಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿದ್ದು, ಇದನ್ನು ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲಿದೆ. ನಾವು ಆರೋಗ್ಯಯುತವಾಗಿರುವುದೇ ಈ ಸಮಾಜಕ್ಕೆ ನೀಡುವ ಕೊಡುಗೆ ಎಂದು ತಿಳಿಸಿದರು.

ಈ ವೇಳೆ ಶಿವಶ್ರೀ ವಿದ್ಯಾರ್ಥಿನಿಯರ ನಿಲಯದ ಮುಖ್ಯಸ್ಥರಾದ ಪ್ರಭಾಮಣಿ, ಹೊಯ್ಸಳ ಕರ್ನಾಟಕ ಸಂಘದ ನಿರ್ದೇಶಕ ರಂಗನಾಥ್, ವೀರಭದ್ರ ಸ್ವಾಮಿ,ಮಹೇಶ್, ಎಸ್‌.ಪಿ. ಅಕ್ಷಯ್ ಪ್ರಿಯಾದರ್ಶನ್ ಮತ್ತಿತರರು ಉಪಸ್ಥಿತರಿದ್ದರು.

ವಿಶ್ವ ಹೃದಯ ದಿನಾಚರಣೆ ಅಂಗವಾಗಿವಿದ್ಯಾರ್ಥಿಗಳಿಗೆ ಜಾಗೃತಿ Read More

ಅಪೂರ್ವ ಎಂಜಿನಿಯರ್ ವಿಶ್ವೇಶ್ವರಯ್ಯ:ಪ್ರಕಾಶ್ ಪ್ರಿಯದರ್ಶನ್

ಮೈಸೂರು: ಸರ್ ಎಂ.ವಿಶ್ವೇಶ್ವರಯ್ಯನವರು ಕರುನಾಡು ಕಂಡ ಅಪೂರ್ವ ಎಂಜಿನಿಯರ್ ಎಂದು ಜೆಡಿಎಸ್ ಕಾರ್ಯಾಧ್ಯಕ್ಷ ಪ್ರಕಾಶ್ ಪ್ರಿಯದರ್ಶನ್ ಹೇಳಿದರು.

ರಾಮಾನುಜ ರಸ್ತೆಯಲ್ಲಿರುವ ಜ್ಯೋತಿರ್ಗಮಯ ವಿದ್ಯಾರ್ಥಿನಿಯರ ನಿಲಯದ ವಿದ್ಯಾರ್ಥಿಗಳಿಗೆ ಹಣ್ಣುಗಳು ಲೇಖನಿ ಸಾಮಗ್ರಿಗಳನ್ನು ವಿತರಿಸುವ ಮೂಲಕ ಸರ್ ಎಂ ವಿಶ್ವೇಶ್ವರಯ್ಯನವರ ಜಯಂತಿಯನ್ನು ಆಚರಿಸಿ ನಂತರ ಅವರು ಮಾತನಾಡಿದರು.

ಸ‌ರ್.ಎಂ.ವಿ. ಕರ್ನಾಟಕದ ಪ್ರಾತಃ ಸ್ಮರಣೀಯರು,ಅವರ ದೂರದರ್ಶಿತ್ವದಿಂದ ಇಂದು ರಾಜ್ಯ ಮುನ್ನಡೆಯುತ್ತಿದೆ ಎಂದು ಹೇಳಿದರು.

ಹಿರಿಯ ಶಿಕ್ಷಕರಾದ ಸುಜಿಯರಾಣಿ ಅವರು ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯು ಶ್ರದ್ಧೆಯಿಂದ ವಿದ್ಯೆಯನ್ನು ಕಲಿತು ಸರ್ ಎಂ ವಿಶ್ವೇಶ್ವರಯ್ಯ ಅವರನ್ನು ಮಾದರಿಯನ್ನು ನಿಮ್ಮಗಳ ಜೀವನದಲ್ಲಿ ಅಳವಡಿಸಿಕೊಂಡು ಅವರ ರೀತಿಯಲ್ಲಿ ದೇಶಕ್ಕೆ ಏನಾದರೂ ಕೊಡುಗೆ ನೀಡುವಂತ ರಾಗಿ ಎಂದು ಸಲಹೆ ನೀಡಿದರು.

ಜ್ಯೋತಿರ್ಗಮಯ ವಿದ್ಯಾರ್ಥಿನಿಯರ ನಿಲಯದ ಮುಖ್ಯಸ್ಥರಾದ ಮಾದೇಶ್ , ಪ್ರೊ. ಬಿ.ಎಸ್. ಪ್ರೇಮಕುಮಾರಿ, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್, ಸುಬ್ರಮಣ್ಯ, ಛಾಯಾ, ಯಶವಂತ್ ಕುಮಾರ್,ವೀರಭದ್ರ ಸ್ವಾಮಿ, ಪುರುಷೋತ್ತಮ್,ಚಂದನ, ಎಂ ಎಸ್ ನಂದಿನಿ,ಎಸ್ ನಾಗೇಶ,ಮಹೇಶ್, ಮಹದೇವ ಸ್ವಾಮಿ, ನವನೀತ್ ಕುಮಾರ್,ಎಸ್‌.ಪಿ. ಅಕ್ಷಯ್ ಪ್ರಿಯಾದರ್ಶನ್, ,ಹರ್ಷಿತ್ ಎಸ್ ನಾಗೇಶ್ ಮತ್ತಿತರರು ಹಾಜರಿದ್ದರು.

ಅಪೂರ್ವ ಎಂಜಿನಿಯರ್ ವಿಶ್ವೇಶ್ವರಯ್ಯ:ಪ್ರಕಾಶ್ ಪ್ರಿಯದರ್ಶನ್ Read More