ಶ್ರೀ ಚಾಮುಂಡೇಶ್ವರಿ ಕೃಪಾ ಪೋಷಿತ ನಾಟಕ ಮಂಡಳಿಯಿಂದ ಸತ್ಯ ಹರಿಶ್ಚಂದ್ರ ನಾಟಕ

ಮೈಸೂರು: ಚಾಮುಂಡೇಶ್ವರಿ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ಜುಲೈ 7 ರಂದು ಸತ್ಯ ಹರಿಶ್ಚಂದ್ರ ನಾಟಕ ಆಯೋಜಿಸಲಾಗಿದೆ.

ಚಾಮುಂಡೇಶ್ವರಿ ಹಬ್ಬದ ಪ್ರಯುಕ್ತ ಹಾಗೂ ದಿವಂಗತ ರಾಕೇಶ್ ಸಿದ್ದರಾಮಯ್ಯ ಹಾಗೂ ಮಾಜಿ ಶಾಸಕ ಎಂ ಸತ್ಯನಾರಾಯಣ ಅವರ ಜ್ಞಾಪಕಾರ್ಥವಾಗಿ 9ನೇ ವರ್ಷದ ಸತ್ಯ ಹರಿಶ್ಚಂದ್ರ ನಾಟಕ ಆಯೋಜನೆಯಾಗಿದ್ದು ಇದರ ಪೋಸ್ಟರ್ ಅನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಬಿಡುಗಡೆಗೊಳಿಸಿದರು.

ಜುಲೈ 7 ರಂದು ಮೈಸೂರಿನ ಇಲವಾಲದ ಚಾಮುಂಡೇಶ್ವರಿ ದೇವಸ್ಥಾನದ ಮುಂಭಾಗ ಸತ್ಯ ಹರಿಶ್ಚಂದ್ರ ನಾಟಕ ಆಯೋಜಿಸಲಾಗಿದೆ ಎಂದು ನಾಟಕ ಮಂಡಳಿಯ ವ್ಯವಸ್ಥಾಪಕರು ತಿಳಿಸಿದ್ದಾರೆ.

ಆದ್ದರಿಂದ ಸಾರ್ವಜನಿಕರು ಸಿನಿರಸಿಕರು ನಾಟಕ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದ್ದಾರೆ.

ಈ ವೇಳೆ ಚಾಮುಂಡೇಶ್ವರಿ ಕ್ಷೇತ್ರದ ಕೆಪಿಸಿಸಿ ಸದಸ್ಯ ನಜರ್ ಬಾದ್ ನಟರಾಜ್, ಇಲವಾಲ ಕಾಂಗ್ರೆಸ್ ಮುಖಂಡ ಸುರೇಶ್,ನಾಗವಾಲ ಮಹೇಶ ಮತ್ತು ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

ಶ್ರೀ ಚಾಮುಂಡೇಶ್ವರಿ ಕೃಪಾ ಪೋಷಿತ ನಾಟಕ ಮಂಡಳಿಯಿಂದ ಸತ್ಯ ಹರಿಶ್ಚಂದ್ರ ನಾಟಕ Read More

ಪಾತಿ ಫೌಂಡೇಶನ್ 125ನೇ ಕಾರ್ಯಕ್ರಮ: ಹಳೆ ಚಿತ್ರಗೀತೆಗಳು,ವಿಶೇಷ ಮಕ್ಕಳಿಗೆ ಧನಸಹಾಯ

ಮೈಸೂರು: ಮೈಸೂರಿನ ಜೆ ಎಲ್ ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಂಗೀತ ಸಭಾದಲ್ಲಿ ಜೂ. 26ರಂದು ಸಂಜೆ 5 ಗಂಟೆಗೆ ಪಾತಿ ಫೌಂಡೇಶನ್ 125 ನೇ ಕಾರ್ಯಕ್ರಮದ ಅಂಗವಾಗಿ ಚಲನಚಿತ್ರ ಹಾಡುಗಳ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಸಾಹಸಸಿಂಹ ವಿಷ್ಣುವರ್ಧನ್, ಪ್ರಣಯ ರಾಜ ಶ್ರೀನಾಥ್, ಅನಂತ್ ನಾಗ್ ಅವರುಗಳು ನಟಿಸಿರುವ ಚಿತ್ರದ ಹಾಡುಗಳ ಕಾರ್ಯಕ್ರಮ ಹಾಗೂ ವಿಶೇಷ ಅಂದ ಮಕ್ಕಳಿಗೆ ಸಹಾಯಧನ ಮತ್ತು ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದ ಪ್ರಚಾರ ಸಾಮಗ್ರಿಯನ್ನು
ಶ್ರೀರಾಂಪುರದಲ್ಲಿ ಶಾಸಕ ಟಿ ಎಸ್ ಶ್ರೀವತ್ಸ ಅವರು ಬಿಡುಗಡೆಗೊಳಿಸಿದರು.

ನಂತರ ಮಾತನಾಡಿದ ಅವರು ಪಾತಿ ಅವರು
ನಗರಪಾಲಿಕೆ ಸದ್ಯಸರಾದಾಗಿನಿಂದಲೂ ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿದು, ಅಸಹಾಯಕರಿಗೆ ಸಹಾಯ, ಮಾಡುತ್ತಾ ಬಂದಿರುವುದನ್ನು ಗಮನಿಸಿದ್ದೇವೆ
ಎಂದು ಹೇಳಿದರು.

ಅವರ ಈ 125ನೇ ಕಾರ್ಯಕ್ರಮ ಮನೋರಂಜನೆ ಹಾಗೂ ವಿಶೇಷ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಹಾಯಧನ ನೀಡುವ ಕಾರ್ಯಕ್ರಮ ಅರ್ಥಗರ್ಭಿತ ಕಾರ್ಯಕ್ರಮವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಲ್ಲಿ ಮೈಸೂರು ನಗರದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲಿ ಎಂದು ಕರೆ ನೀಡಿದರು.

ಪಾತಿ ಫೌಂಡೇಶನ್ ಅಧ್ಯಕ್ಷ ಎಂ ಡಿ ಪಾರ್ಥಸಾರಥಿ ಅವರು ಮಾತನಾಡಿ,
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕರ್ನಾಟಕ ಚಲನಚಿತ್ರ ಮಂಡಳಿಯ ಅಧ್ಯಕ್ಷರಾದ ನರಸಿಂಹಲು, ಶಾಸಕರಾದ ಟಿ ಎಸ್ ಶ್ರೀವತ್ಸ, ಮಾಜಿ ಸಂಸದರಾದ ಪ್ರತಾಪ್ ಸಿಂಹ, ಹಿರಿಯ ಪತ್ರಕರ್ತರಾದ ಅಂಶಿ ಪ್ರಸನ್ನ ಕುಮಾರ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ ,ಕರ್ನಾಟಕ ಸುಗಮ ಸಂಗೀತ ಪರಿಷತ್ ಅಧ್ಯಕ್ಷರಾದ ನಾಗರಾಜ್ ವಿ ಬೈರಿ, ಹಿರಿಯ ಸಮಾಜಸೇವಕರಾದ ಕೆ ರಘುರಾಮ್ ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರ ಪಾಲಿಕೆ ಮಾಜಿ ಸದಸ್ಯರಾದ ಚಂಪಕ, ಜಗದೀಶ್,
ಕೇಬಲ್ ರಮೇಶ್, ಜೋಗಿ ಮಂಜು,
ಸಂತೋಷ್, ಎಸ್ ಎನ್ ರಾಜೇಶ್,
ಮನೋಜ, ಹೇಮಂತ, ಅಭಿ, ಲಕ್ಷ್ಮಣ್, ಯೋಗೇಂದ್ರ ಮತ್ತಿತರರು ಹಾಜರಿದ್ದರು.

ಪಾತಿ ಫೌಂಡೇಶನ್ 125ನೇ ಕಾರ್ಯಕ್ರಮ: ಹಳೆ ಚಿತ್ರಗೀತೆಗಳು,ವಿಶೇಷ ಮಕ್ಕಳಿಗೆ ಧನಸಹಾಯ Read More

ನಾಡಪ್ರಭು ಕೆಂಪೇಗೌಡರ ಜಯಂತಿ; ರಕ್ತದಾನ ಶಿಬಿರ ಪೋಸ್ಟರ್ ಬಿಡುಗಡೆ

ಮೈಸೂರು: ಮೈಸೂರಿನ ಚಾಮುಂಡೇಶ್ವರಿ ಬಳಗ ಹಾಗೂ ಜೀವದಾರ ರಕ್ತ ನಿಧಿ ಕೇಂದ್ರದ ವತಿಯಿಂದ ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ.

ಈ ಕುರಿತಾದ ಪೋಸ್ಟರ್ ಅನ್ನು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಬಿಡುಗಡೆಗೊಳಿಸಿದರು.

ಜೂನ್ 26 ರಂದು ಬೆಳಗ್ಗೆ ಹತ್ತರಿಂದ ಮಧ್ಯಾಹ್ನ ಎರಡು ಗಂಟೆವರೆಗೆ ನ್ಯೂ ಸಯಾಜಿರಾವ್ ರಸ್ತೆ, ಜೀವದರ ರಕ್ತನಿಧಿ ಕೇಂದ್ರದ ಆವರಣದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ.

ಪೋಸ್ಟರ್ ಬಿಡುಗಡೆ ವೇಳೆ ಚಾಮುಂಡೇಶ್ವರಿ ಬಳಗದ ಮುಖ್ಯಸ್ಥರು ಹಾಗೂ ಕೆಪಿಸಿಸಿ ಸದಸ್ಯರಾದ ನಜರ್ ಬಾದ್ ನಟರಾಜ್, ಡಿ.ಕೆ ಶಿವಕುಮಾರ್ ಅಭಿಮಾನಿಗಳ ಬಳಗದ ಪಾಂಡವಪುರ ದಿನೇಶ್, ರವಿಚಂದ್ರ, ಡಿಸಿಸಿ ಚಂದ್ರು, ಬೋಗಾದಿ ರವಿಚಂದ್ರ, ಉತ್ತನಹಳ್ಳಿ ಶಿವಣ್ಣ ಹಾಗೂ ಕಾರ್ಯಕರ್ತರು ಮುಖಂಡರು ಉಪಸ್ಥಿತರಿದ್ದರು.

ನಾಡಪ್ರಭು ಕೆಂಪೇಗೌಡರ ಜಯಂತಿ; ರಕ್ತದಾನ ಶಿಬಿರ ಪೋಸ್ಟರ್ ಬಿಡುಗಡೆ Read More

ಫೆ.14 ರಂದು ಉಚಿತ ಸಾಮೂಹಿಕ ಅಕ್ಷರಭ್ಯಾಸ:ಪೋಸ್ಟರ್ ಬಿಡುಗಡೆ ಮಾಡಿದ ಸಿಂಹ

ಮೈಸೂರು: ಮೈಸೂರಿನ ಕೆ ಎಂ ಪಿ ಕೆ ಟ್ರಸ್ಟ್ ವತಿಯಿಂದ ಫೆ.14 ರಂದು ಉಚಿತ ಸಾಮೂಹಿಕ ಅಕ್ಷರಭ್ಯಾಸ ಹಮ್ಮಿಕೊಂಡಿದ್ದು ಇದರ ಪೋಸ್ಟರ್ ಅನ್ನು ಮಾಜಿ ಸಂಸದ ಪ್ರತಾಪ್ ಸಿಂಹ ಬಿಡುಗಡೆಗೊಳಿಸಿದರು.

ಕಾರ್ಯಕ್ರಮ ವಿಶ್ವೇಶ್ವರ ನಗರ,ಇಂಡಸ್ಟ್ರಿಯಲ್ ಸಬರ್ಬ್,
ಮಹರ್ಷಿ ಪಬ್ಲಿಕ್ ಶಾಲೆಯಲ್ಲಿ ಉಚಿತ ಸಾಮೂಹಿಕ ಅಕ್ಷರಭ್ಯಾಸ ಹಾಗೂ ಸರಸ್ವತಿ ಪೂಜೆ ಏರ್ಡಿಸಲಾಗಿದೆ.

ಪೋಸ್ಟರ್ ಬಿಡುಗಡೆ ಮಾಡಿ‌ ಶುಭ ಹಾರೈಸಿ ಮಾತನಾಡಿದ ಪ್ರತಾಪ್ ಸಿಂಹ, ಮಗುವಿಗೆ ಮಾತನಾಡುವ ಭಾಷೆ ಮತ್ತು ವಿದ್ಯೆ ಕಲಿಸುವ ಪ್ರಾರಂಭ ಹಂತ ಅಕ್ಷರಾಭ್ಯಾಸ. ಇದನ್ನು ಕೊಡುಸುವುದು ಪೋಷಕರ ಮೂಲ ಕರ್ತವ್ಯ ಎಂದು ಹೇಳಿದರು.

ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆಯಾಗಿದ್ದು, ತಾಯಿಯೇ ಮೊದಲ ಗುರು, ಮಗುವಿಗೆ ಅಕ್ಷರಭ್ಯಾಸ ಎನ್ನುವುದು ಜ್ಞಾನ ದೇಗುಲದ ಪ್ರಮುಖ ಘಟ್ಟ. ಅಕ್ಷರಾಭ್ಯಾಸದಲ್ಲಿ ಹೆಚ್ಚು ಮಕ್ಕಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು

ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಮಾತನಾಡಿ,ಎಲ್ಲಾ ಜನಾಂಗದವರಿಗೂ ಉಚಿತ ಸಾಮೂಹಿಕ ಅಕ್ಷರಭ್ಯಾಸ ಹಾಗೂ ಸರಸ್ವತಿ ಪೂಜೆ ಫೆ.14.ರ ಬುಧವಾರ ಬೆಳಗ್ಗೆ 8 ರಿಂದ 10.30 ರವರಿಗೂ ಮಹರ್ಷಿ ಪಬ್ಲಿಕ್ ಶಾಲೆಯಲ್ಲಿ ನಡೆಯಲಿದೆ.ಅಕ್ಷರಭ್ಯಾಸನವನ್ನು ಮಾಡಲಿಚ್ಚಿಸುವ ಮಕ್ಕಳ ಪೋಷಕರು ದೂರವಾಣಿ 9880752727/7829067769 ನೋಂದಾಯಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ಅಕ್ಷರಭ್ಯಾಸ ಮಾಡಿಸುವವರಿಗೆ ಸ್ಲೇಟ್ (ಪ್ಲೇಟ್)-ಬಳಪ ನಮ್ಮ ಟ್ರಸ್ಟ್ ವತಿಯಿಂದ ಉಚಿತವಾಗಿ ಪ್ರಸಾದ ರೂಪದಲ್ಲಿ ನೀಡಲಾಗುವುದು, ಪ್ರತ್ಯೇಕವಾಗಿ ತರುವ ಅಗತ್ಯವಿರುವುದಿಲ್ಲ. 13ರಂದು ನೋಂದಣಿಗೆ ಕಡೆಯ ದಿನವಾಗಿದೆ ಎಂದು ತಿಳಿಸಿದರು

ಈ ಸಂದರ್ಭದಲ್ಲಿ
ಮಹರ್ಷಿ ಪಬ್ಲಿಕ್ ಶಾಲೆಯ ಸಿಇಒ ತೇಜಸ್ ಶಂಕರ್, ಬಿಜೆಪಿ ಮುಖಂಡರಾದ ಆರ್ ಪರಮೇಶ್ ಗೌಡ ಮತ್ತಿತರರು ಹಾಜರಿದ್ದರು.

ಫೆ.14 ರಂದು ಉಚಿತ ಸಾಮೂಹಿಕ ಅಕ್ಷರಭ್ಯಾಸ:ಪೋಸ್ಟರ್ ಬಿಡುಗಡೆ ಮಾಡಿದ ಸಿಂಹ Read More

ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಪೋಸ್ಟರ್ ಬಿಡುಗಡೆ

ಮೈಸೂರು: ಫೆಬ್ರವರಿ 1ಮತ್ತು 2ನೇ ತಾರೀಖಿನಂದು ಕರ್ನಾಟಕ ಮುಕ್ತ ವಿಶ್ವವಿದ್ಯಾಲದ ಆವರಣದಲ್ಲಿರುವ ಕಾವೇರಿ ಮತ್ತು ನಳ ಸಭಾಂಗಣದಲ್ಲಿ ಅಂತರ್ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಮೈಸೂರು ಸಿನಿಮಾ ಸೊಸೈಟಿ ಮತ್ತು ಭಾರತೀಯ ಚಿತ್ರ ಸಾಧನದ ಸಹಯೋಗದೊಂದಿಗೆ ಈ ಸಮಾರಂಭ ನಡೆಯಲಿದ್ದು,ಇಂದು ಇದರ ಪೋಸ್ಟರ್ ಅನ್ನು ಸಮಿತಿಯ ಕಾರ್ಯದರ್ಶಿ ಪದ್ಮವಾತಿ ಭಟ್ ಬಿಡುಗಡೆ ಮಾಡಿದರು.

ಉದ್ಘಾಟನಾ ಕಾರ್ಯಕ್ರಮವನ್ನು ಖ್ಯಾತ ನಟ, ನಿರ್ದೇಶಕ ಪ್ರಕಾಶ್ ಬೆಳವಾಡಿ, ಬರಹಗಾರ ಮನೇಕ್ ಪ್ರೇಮಚಂದ್ ಮತ್ತು ಕರ್ನಾಟಕ ಮುಕ್ತ‌ ವಿಶ್ವವಿದ್ಯಾಲಯ‌ ಕುಲಪತಿ ಶರಣಪ್ಪ ಹಲಸೆ ನೆರವೇರಿಸಲಿದ್ದಾರೆ‌ ಎಂದು ಅವರು ತಿಳಿಸಿದರು.

ಪೃಥ್ವಿ ಕೊನನೂರ್,ಸಂಸದ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಟಿ.ಎಸ್.ಶ್ರೀ ವತ್ಸ,ಹಾಗೂ ಇನ್ನಿತರ ಶಾಸಕರು ಉಪಸ್ಥಿತರಿರುವರು.

ಚಿತ್ರೋತ್ಸವಕ್ಕೆ ಪ್ರಪಂಚದಾದ್ಯಂತ 109 ದೇಶಗಳಿಂದ 3123 ಕಿರು ಮತ್ತು ಸಾಕ್ಷ್ಯಚಿತ್ರಗಳು ಬಂದಿವೆ.

ಈ ಚಿತ್ರಗಳಲ್ಲಿ ಆಯ್ಕೆಯಾದ ಸಿನಿಮಾಗಳಿಗೆ 26 ವರ್ಗಗಳ ಪ್ರಶಸ್ತಿಗಳನ್ನು ನೀಡಲಾಗುತ್ತದೆ ಎಂದು ಹೇಳಿದರು.

ಭಾರತದಿಂದ 985, ಇರಾನ್,ಇರಾನ್,ಪ್ರಾನ್ಸ್, ಇಟಲಿ,ಜರ್ಮನಿ,ರಷ್ಯಾ ಗಳಿಂದ 42 138, 5 137, 108, ದೇಶಗಳಿಂದ 3123 ಸಿನಿಮಾಗಳು ಬಂದಿವೆ.

ಕನ್ನಡದ ಒಟ್ಟು 73 ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರಗಳು ಸೇರಿವೆ.ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಕೇಂದ್ರ ಸಚಿವರಾದ ಡ.ಎಲ್ ಮುರುಗನ್ ಅವರು ಉಪಸ್ಥಿತರಿರುತ್ತಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಯೋಜಕ ಚೇತನ ಜಿ.ಅರ್.,ಸದಸ್ಯರುಗಳಾದ ಜೋಗಿಮಂಜು,ಸೀಮಾ ಬುರುಡೆ,ವೇಣುಗೋಪಾಲ್ ಹಾಜರಿದ್ದರು.

ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಪೋಸ್ಟರ್ ಬಿಡುಗಡೆ Read More