ಹೊನ್ನಿಕುಪ್ಪೆಯಲ್ಲಿ ಜಾನಪದ ಮೆರಗು16 ದಿನ ಪೂಜಿಸಿದ ಕೊಂತಿಗುಡಿ ವಿಸರ್ಜನೆ

ಹುಣಸೂರು: ಹುಣಸೂರು ತಾಲೂಕು ಹೊನ್ನಿ ಕುಪ್ಪೆ ಗ್ರಾಮದಲ್ಲಿ ಊರಿನ ಹಿರಿಯರು ಹಿಂದಿನಿಂದ ನಡೆಸಿಕೊಂಡು ಬಂದ ಪದ್ದತಿಯನ್ನು ಈಗಲೂ ಮುಂದುವರಿಸುತ್ತಾ ಜಾನಪದ ಕಲೆಯನ್ನು ಉಳಿಸಿ ಬೆಳೆಸುತ್ತಿದ್ದಾರೆ.

ಹೊನ್ನಿಕುಪ್ಪೆ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಇಟ್ಟಿಗೆ ಮತ್ತು ಮಣ್ಣಿನಿಂದ ಕೊಂತಿಗುಡಿ ನಿರ್ಮಿಸಿ ಕಳಶ ಇಟ್ಟು ಪೂಜೆ ಮಾಡಲಾಯಿತು. ಇದಕ್ಕೆ ತಿಂಗಳ ಮಾಮನ ಪೂಜೆ ಎಂದು ಕರೆಯಲಾಗುತ್ತದೆ.

ದೀಪಾವಳಿ ಹಬ್ಬ ಮುಗಿದ ತಕ್ಷಣ ಕೊಂತಿಗುಡಿ ಅಂದರೆ ತಿಂಗಳ ಮಾಮನ ಪೂಜೆಯನ್ನು ನೆರವೇರಿಸ್ತಾ 16 ದಿನಗಳ ಕಾಲ ತಿಂಗಳ ಮಾಮನ ಪೂಜೆಯನ್ನು ಮಾಡಲಾಯಿತು.

ಊರಿನ ಮುಖಂಡರಲ್ಲಿ ಒಬ್ಬರು ಮತ್ತು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷರೂ ಆದ ಚೆಲುವರಾಜು ಮತ್ತಿತರ ನಾಯಕರ ಮುಂದಾಳತ್ವದಲ್ಲಿ 15 ದಿನ ಪೂಜೆ‌ ನೆರವೇರಿಸಿ 16ನೆ ದಿನ ಅಂದರೆ ಇಂದು ಮುಂಜಾನೆ ಕೊಂತಿಗುಡಿಯನ್ನು ಶಾಸ್ತ್ರೋಕ್ತವಾಗಿ ವಿಸರ್ಜಿಸಲಾಯಿತು.

ಕೊಂತಿ ಗುಡಿ ಪ್ರತಿಷ್ಠಾಪನೆ ಮಾಡಿ ಶಿವನನ್ನು ಆರಾಧನೆ ಮಾಡುವುದು ವಿಶೇಷ. ಇದನ್ನು ಕಳೆದ 70 ವರ್ಷಗಳಿಂದ ಊರಿನ ಹಿರಿಯರು ಮುಂದುವರಿಸಿಕೊಂಡು ಬಂದಿದ್ದು ಈ ಮೂಲಕ ಜಾನಪದ ಕಲೆಯನ್ನು ಬೆಳೆಸುವ ಕೆಲಸವನ್ನು ಮಾಡಲಾಗುತ್ತಿದೆ.

ತಿಂಗಳ ಮಾಮನ ಆರಾಧನೆ ಪ್ರಾರಂಭವಾದ ಮೇಲೆ ಪ್ರತಿದಿನ ಸಂಜೆ ಊರಿನ ಪ್ರತಿಯೊಂದು ಮನೆಯವರು ತಮ್ಮ ಮನೆಯಿಂದ ದೀಪವನ್ನು ತಂದು ಇಲ್ಲಿ ಇಟ್ಟು ಹಚ್ಚಿ ಪೂಜೆ ಮಾಡಿ ಮಧ್ಯರಾತ್ರಿ 12 ಗಂಟೆವರೆಗೂ ಜಾನಪದ ಗೀತೆಗಳನ್ನು ಹಾಡುವುದು, ಭಜನೆ ಮಾಡುವುದು ಕೋಲಾಟ ಆಡುವುದು ಹೀಗೆ ಒಂದೊಂದು ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು ಬಂದಿದ್ದಾರೆ.

ಜತೆಗೆ ಕಟ್ಟುನಿಟ್ಟಾಗಿ ನಡೆದುಕೊಳ್ಳುವುದು,ಅಪಚಾರವಾಗದಂತೆ ಎಚ್ಚರಿಕೆಯಿಂದ ಇದ್ದು ಕೊಂತಿಗುಡಿಗೆ ನಿನ್ನೆವರೆಗೂ ಪೂಜೆ ನೆರವೇರಿಸಲಾಯಿತು.

ನಗರ ಪ್ರದೇಶದ ಜನರಿಗೆ ತಿಂಗಳ ಮಾಮನ ಪೂಜೆ ಕೊಂತಿಗುಡಿ ಇದು ಯಾವುದು ಗೊತ್ತಿಲ್ಲ. ಆದರೆ ಹೀಗೆ ಸಣ್ಣ ಪುಟ್ಟ ಗ್ರಾಮದವರು ಶಿವನ ಆರಾಧನೆಯನ್ನು ಈ ರೀತಿ ಆಚರಿಸುತ್ತಾ ಜಾನಪದ ಕಲೆಯನ್ನು ಬೆಳೆಸುತ್ತಾ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾ ಬರುತ್ತಿರುವುದು ಶ್ಲಾಘನೀಯ ಮತ್ತು ಇದು ಮುಂದಿನ ಪೀಳಿಗೆಗೂ ಮುಂದುವರಿಯುವ ಅಗತ್ಯವಿದೆ.

ನಿನ್ನೆ ಮಧ್ಯರಾತ್ರಿವರೆಗೂ ಇಡೀ ಹೊನ್ನಿಕುಪ್ಪೆ ಜನ ತಿಂಗಳ ಮಾಮನ ಪೂಜೆ,ಜನಪದಗೀತೆ,ಕೋಲಾಟದಲ್ಲಿ ತೊಡಗಿದರು.

ಊರಿನ ಎಲ್ಲರೂ ತಮ್ಮ ತಮ್ಮ ಮನೆಯಲ್ಲಿ ತಯಾರಿಸಿದ್ದ ಒಬ್ಬಟ್ಟು, ಪಾಯಸ, ಚಿರೋಟಿ ವಡೆ, ರವೆ ಉಂಡೆ ಹೀಗೆ ಅನೇಕ ಭಕ್ಷ ಭೋಜಗಳನ್ನು ತಂದು ಕೊಂತಿ ಗುಡಿಗೆ ನೈವೇದ್ಯ ಮಾಡಲಾಯಿತು.

ನಂತರ ಎಲ್ಲರೂ ಸೇರಿ ಆಹಾರ ಸಿದ್ಧಪಡಿಸಿ ಅನ್ನದಾನ ಕೂಡ ಮಾಡಲಾಯಿತು. ಕೊನೆಯಲ್ಲಿ ಕೊಂತಿ ಗುಡಿಯನ್ನು ಹುರುಳಿ ಮತ್ತು ಹುಚ್ಚೆಳ್ಳು ಬೆಳೆ ಬೆಳೆದ ಹೊಲದಲ್ಲಿ ತೆಗೆದುಕೊಂಡು ಹೋಗಿ ಶಾಸ್ತ್ರೋಕ್ತವಾಗಿ ವಿಸರ್ಜನೆ ಮಾಡುವ ಮೂಲಕ ತಿಂಗಳ ಮಾಮನ ಪೂಜೆ ಮುಕ್ತಾಯ ಹಾಡಿದರು.

ಕುಂತಿ ಗುಡಿಯನ್ನು ಹುರುಳಿ ಮತ್ತು ಹುಚ್ಚೆಳ್ಳು ಹೊಲದಲ್ಲಿಯೇ ವಿಸರ್ಜನೆ ಮಾಡಬೇಕೆಂಬ ಪದ್ಧತಿಯು ಇದೆ.

ಹೊನ್ನಿಕುಪ್ಪೆಯಲ್ಲಿ ಜಾನಪದ ಮೆರಗು16 ದಿನ ಪೂಜಿಸಿದ ಕೊಂತಿಗುಡಿ ವಿಸರ್ಜನೆ Read More

ಸುನಿಲ್ ಬೋಸ್ ಹೆಸರಿನಲ್ಲಿ ವಿಶೇಷ ಪೂಜೆ

ಮೈಸೂರು: ಚಾಮುಂಡೇಶ್ವರಿ ಯುವ ಬಳಗ ಹಾಗೂ ಕಾಂಗ್ರೆಸ್ ಮುಖಂಡರು ಅಗ್ರಹಾರದ 101 ಗಣಪತಿ ದೇವಸ್ಥಾನದಲ್ಲಿ ಸಂಸದ ಸುನಿಲ್ ಬೋಸ್ ಅವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಸುನಿಲ್ ಅವರ ಹುಟ್ಟುಹಬ್ಬದ ಅಂಗವಾಗಿ ಅವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಸಿಹಿ ವಿತರಿಸಿ ಜನುಮದಿನದ ಶುಭಕೋರಿದರು

ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್, ಇಂದಿರಾ ಗಾಂಧಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಮಂಚೇಗೌಡನ ಕೊಪ್ಪಲು ರವಿ, ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್, ಲೋಕೇಶ್ ಕುಮಾರ್ ಮಾದಾಪುರ, ಜಿ. ರಾಘವೇಂದ್ರ, ರಾಜಶೇಖರ್, ಸೇವಾದಳ ಮೋಹನ್ ಕುಮಾರ್, ರವಿಚಂದ್ರ, ಲೋಕೇಶ್,ದಿನೇಶ್, ಡೈರಿ ವೆಂಕಟೇಶ್, ಗಂಟಯ್ಯ ಕೃಷ್ಣಪ್ಪ, ಎಸ್ ಎನ್ ರಾಜೇಶ್, ಮಲ್ಲೇಶ್, ಜಯರಾಮ,ಪುನೀತ್ ರಾಜ್, ಗೌರಿಶಂಕರ್ ನಗರ ಶಿವು, ಮೈಸೂರು ಬಸವಣ್ಣ,
ಮತ್ತಿತರರು ಸುನಿಲ್ ಬೋಸ್ ಹೆಸರಿನಲ್ಲಿ ಸಿಹಿ ವಿತರಿಸಿದರು.

ಸುನಿಲ್ ಬೋಸ್ ಹೆಸರಿನಲ್ಲಿ ವಿಶೇಷ ಪೂಜೆ Read More