ಕಸಾಯಿಖಾನೆಗೆ ಸಾಗಿಸುತ್ತಿದ್ದ 13 ರಾಸುಗಳ ರಕ್ಷಿಸಿದ ಪೊಲೀಸರು

ಮೈಸೂರು: ಬೊಲೆರೋ ಪಿಕ್ ಅಪ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 13 ರಾಸುಗಳನ್ನ ಪೊಲೀಸರು ರಕ್ಷಿಸಿದ್ದಾರೆ.

ಈ ವೇಳೆ ಆರೋಪಿಗಳು ಪರಾರಿಯಾಗಿದ್ದು,ಪೊಲೀಸರು
ಪಿಕಪ್ ವಾಹನವನ್ನ ವಶಪಡಿಸಿಕೊಂಡಿದ್ದಾರೆ.

ಬೋಗಾದಿ ರಿಂಗ್ ರಸ್ತೆ ಜಂಕ್ಷನ್ ನಲ್ಲಿ ಹೆಬ್ಬಾಳ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ಧನರಾಜ್ ಅವರು ಗರುಡಾ ವಾಹನದ ಗಸ್ತಿನಲ್ಲಿದ್ದಾಗ ಗದ್ದಿಗೆ ಮಾರ್ಗವಾಗಿ ಮೈಸೂರಿನತ್ತ ಬೊಲೆರೋ ಪಿಕಪ್ ವಾಹನ ಬಂದಿದೆ.

ಆಗ ವಾಹನವನ್ನ ನಿಲ್ಲಿಸಿ ಪರಿಶೀಲಿಸಿದಾಗ ಕಿರಿದಾದ ಜಾಗದಲ್ಲಿ 13 ರಾಸುಗಳನ್ನ ಅಮಾನವೀಯವಾಗಿ ಹಿಂಸೆಯಾಗುವಂತೆ ತುಂಬಿರುವುದು ಗೊತ್ತಾಗಿದೆ.ಗರುಡಾ ವಾಹನ ಕಂಡ ಕೂಡಲೇ ವಾಹನದಲ್ಲಿದ್ದ ಇಬ್ಬರು ವ್ಯಕ್ತಿಗಳು ಓಡಿಹೋಗಿದ್ದಾರೆ.

ರಾಸುಗಳನ್ನ ರಕ್ಷಿಸಿದ ಧನರಾಜ್ ಅವರು ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು,ರಾಸುಗಳನ್ನ ಪಿಂಜರಾಪೋಲ್ ಗೆ ಸಾಗಿಸಲಾಗಿದೆ.

ಕಸಾಯಿಖಾನೆಗೆ ಸಾಗಿಸುತ್ತಿದ್ದ 13 ರಾಸುಗಳ ರಕ್ಷಿಸಿದ ಪೊಲೀಸರು Read More

ಪೊಲೀಸ್ ಅಧಿಕಾರಿಗಳಿಗೆ ಚಾಮುಂಡೇಶ್ವರಿ ಬಳಗದಿಂದ ಅಭಿನಂದನೆ

ಮೈಸೂರು: ಮೈಸೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್ ಅವರಿಗೆ ಚಾಮುಂಡೇಶ್ವರಿ ಬಳಗದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.

ಎನ್. ವಿಷ್ಣುವರ್ಧನ್ ಅವರಿಗೆ
ರಾಜ್ಯ ಸರ್ಕಾರದಿಂದ ಪಧೋನ್ನತಿ ಸಿಕ್ಕಿದೆ.ಹಾಗಾಗಿ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.

ನೂತನ ಎಎಸ್ ಪಿಯಾಗಿ ನೇಮಕವಾಗಿರುವ ಮಲ್ಲಿಕ್ ಅವರನ್ನು ಚಾಮುಂಡೇಶ್ವರಿ ಬಳಗದ ವತಿಯಿಂದ ಅಭಿನಂದಿಸಲಾಯಿತು.

ಚಾಮುಂಡೇಶ್ವರಿ ಬಳಗದ ಅಧ್ಯಕ್ಷ ಹಾಗೂ ಕೆಪಿಸಿಸಿ ಸದಸ್ಯ ನಜರ್ ಬಾದ್ ನಟರಾಜ್, ಪಂಚಾಯತ್ ರಾಜ್ ಕಾರ್ಯದರ್ಶಿ ಲೋಕೇಶ್, ರಮೇಶ ರಾಮಪ್ಪ, ಸುನಿಲ್ ನಾರಾಯಣ್ ಮತ್ತು ರಾಜಶೇಖರ್ ಅವರುಗಳು ವಿಷ್ಣುವರ್ಧನ್ ಮತ್ತು ಮಲ್ಲಿಕ್ ಅವರುಗಳನ್ನು ಶಾಲು ಹೊದಿಸಿ, ಹಾರ ಹಾಕಿ ಗೌರವಿಸಿ ಶುಭ ಕೋರಿದರು.

ಪೊಲೀಸ್ ಅಧಿಕಾರಿಗಳಿಗೆ ಚಾಮುಂಡೇಶ್ವರಿ ಬಳಗದಿಂದ ಅಭಿನಂದನೆ Read More

ಅಪರಾಧಿಗಳಿಗೆ ಭಯದ ವಾತಾವರಣ, ಜನರಿಗೆ ಭಯ ಮುಕ್ತ ವಾತಾವರಣ ನಿರ್ಮಿಸಿ: ಪೊಲೀಸರಿಗೆ ಸಿಎಂ‌ ಸೂಚನೆ

ಬೆಂಗಳೂರು: ಅಪರಾಧಿಗಳಿಗೆ ಭಯದ ವಾತಾವರಣ, ಜನ ಸಾಮಾನ್ಯರಿಗೆ ಭಯ ಮುಕ್ತ ವಾತಾವರಣ ನಿರ್ಮಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಸೂಚಿಸಿದರು.

ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಚಾಮರಾಜಪೇಟೆ, ಕಬ್ಬನ್ ಪಾರ್ಕ್ ಮತ್ತು ಹೈಗ್ರೌಂಡ್ಸ್ ಪೊಲೀಸ್ ಠಾಣೆ, ಕಚೇರಿಗಳನ್ನು ಉದ್ಘಾಟಿಸಿ ನಂತರ ಪುಲಕೇಶಿ ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಪೊಲೀಸ್ ವಸತಿ ಸಮುಚ್ಛಯಗಳನ್ನು ಉದ್ಘಾಟಿಸಿ ಸಿಎಂ ಮಾತನಾಡಿದರು.

ರಾಜ್ಯದ ಜನಸಂಖ್ಯೆ 7 ಕೋಟಿ ದಾಟಿದೆ,ಇವರೆಲ್ಲರ ರಕ್ಷಣೆ, ಆಸ್ತಿ, ಪಾಸ್ತಿ ಮಾನ, ಪ್ರಾಣ ರಕ್ಷಿಸಿ ನೆಮ್ಮದಿಯ ಬದುಕಿಗೆ ಸುರಕ್ಷಿತ ವಾತಾವರಣ ಸೃಷ್ಟಿಸುವ ಜವಾಬ್ದಾರಿ ಪೊಲೀಸ್ ಇಲಾಖೆ ಮೇಲಿದೆ.ಅದಕ್ಕಾಗಿ ಇಲಾಖೆಗೆ ಅಗತ್ಯವಾದ ಸವಲತ್ತು ಮತ್ತು ನೂತನ ಠಾಣೆಗಳನ್ನು ಒದಗಿಸಲು ಸರ್ಕಾರ ಸದಾ ಸಿದ್ದವಿದೆ ಎಂದು ಭರವಸೆ ನೀಡಿದರು.

ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಇದ್ದಾಗ ಅಭಿವೃದ್ಧಿಯ ವೇಗ ಹೆಚ್ಚುತ್ತದೆ. ಹೀಗಾಗಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ರೂಪಿಸಿ ಠಾಣೆಗೆ ಬರುವವರನ್ನು ಆರೋಗ್ಯಕರವಾಗಿ ನಡೆಸಿಕೊಳ್ಳಿ ಎಂದು ಸಲಹೆ ನೀಡಿದರು.

ರಾಜ್ಯದಲ್ಲಿ ಅಪರಾಧಗಳ ಪ್ರಮಾಣ ಕಡಿಮೆ ಆಗುತ್ತಿರುವುದು ನೆಮ್ಮದಿಯ ಸಂಗತಿ. ಆದರೆ ಪೊಲೀಸರು ಚಾಪೆ ಕೆಳಗೆ ತೂರಿದರೆ ಅಪರಾಧಿಗಳು ರಂಗೋಲಿ ಕೆಳಗೆ ತೂರಿ ಕಾನೂನಿನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ.ಅದಕ್ಕೆ ಎಂದೂ ಅವಕಾಶ ಕೊಡಬಾರದು ಎಂದು ತಿಳಿಸಿದರು.

ಪೊಲೀಸರು ರಿಯಲ್ ಎಸ್ಟೇಟ್ ಮಾಫಿಯಾ ಜೊತೆ ಕೈ ಜೋಡಿಸಿದರೆ ಸಹಿಸುವುದಿಲ್ಲ ಎಂದು ಎಚ್ಚರಿಸಿದರು ಸಿದ್ದರಾಮಯ್ಯ.

ಪೇದೆಗಳು, ಎಸ್ ಐ ಗಳು, ಇನ್ಸ್ ಪೆಕ್ಟರ್ ಗಳೇ ಹೆಚ್ಚೆಚ್ಚು ಕೆಲಸ ಮಾಡ್ತಾರೆ. ಇವರ ಯೋಗಕ್ಷೇಮ ಕೂಡ ನಮ್ಮ ಜವಾಬ್ದಾರಿ. ಪೊಲೀಸ್ ಸಿಬ್ಬಂದಿಯ ಗೃಹ ಯೋಜನೆಯನ್ನು ಸರ್ಕಾರ ಮುಂದುವರೆಸುತ್ತದೆ ಎಂದು ಸಿಎಂ ಆಶ್ವಾಸನೆ ನೀಡಿದರು.

ಅಪರಾಧಿಗಳಿಗೆ ಭಯದ ವಾತಾವರಣ, ಜನರಿಗೆ ಭಯ ಮುಕ್ತ ವಾತಾವರಣ ನಿರ್ಮಿಸಿ: ಪೊಲೀಸರಿಗೆ ಸಿಎಂ‌ ಸೂಚನೆ Read More

ಮುಮ್ತಾಜ್ ಅಲಿ ನಾಪತ್ತೆ:ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ-ಪರಮೇಶ್ವರ್

ಬೆಂಗಳೂರು: ಮಾಜಿ ಶಾಸಕ ಮೊಯುದ್ದೀನ್ ಬಾವಾ ಅವರ ಸಹೋದರ ಮುಮ್ತಾಜ್ ಅಲಿ ಅವರ ಬಿಎಂಡಬ್ಲೂ ಕಾರು ಮಂಗಳೂರಿನ ಕುಳೂರು ಸೇತುವೆ ಮೇಲೆ ಪತ್ತೆ ಆಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೆರಶ್ವರ್ ತಿಳಿಸಿದ್ದರೆ.

ಮುಮ್ತಾಜ್ ಅಲಿ ಅವರು ನಾಪತ್ತೆಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್,ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ ಎಂದು ಹೇಳಿದರು.

ಕಾರು ಅಪಘಾತವಾಗಿದೆಯಾ ಅಥವಾ ಬೇರೆ ದುರ್ಘಟನೆ ಆಗಿದೆಯಾ ಎಂಬ ಬಗ್ಗೆ ಪೊಲೀಸರು ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ ಎಂದು ಹೇಳಿದರು.

ಈಗಾಗಲೇ ಸ್ಥಳಕ್ಕೆ ಮಾಜಿ ಶಾಸಕ ಮೊಯಿದ್ದೀನ್ ಬಾವಾ ಮತ್ತು ಕುಟುಂಬದವರು ಭೇಟಿ ನೀಡಿದ್ದಾರೆ, ಮಂಗಳೂರು ಕಮಿಷನರ್ ಅನುಪಮ್ ಅಗರ್ ವಾಲ್ ಪ್ರಕರಣದ ತನಿಖೆ ಬಗ್ಗೆ ವಿವರಣೆ ನೀಡಿದ್ದಾರೆ ಎಂದು ಪರಮೇಶ್ವರ್ ತಿಳಿಸಿದರು.

ಮುಮ್ತಾಜ್ ಅಲಿ ನಾಪತ್ತೆ:ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ-ಪರಮೇಶ್ವರ್ Read More

ದಸರಾ ಮಹೋತ್ಸವಕ್ಕೆ ಭಾರೀ ಭದ್ರತೆ:ಸೀಮಾ ಲಾಟ್ಕರ್

ಮೈಸೂರು: ಅಕ್ಟೋಬರ್ ಮೂರರಿಂದ 12ರವರೆಗೆ ನಡೆಯುವ ದಸರಾ ಮಹೋತ್ಸವಕ್ಕೆ ಭಾರೀ ಪೊಲೀಸ್ ಬಂದೋ ಬಸ್ತ್ ಮಾಡಲಾಗಿದೆ ಎಂದು ಮೈಸೂರು ಪೊಲೀಸ್ ಆಯುಕ್ತರಾದ ಸೀಮಾ ಲಟ್ಕರ್ ಅವರು ತಿಳಿಸಿದ್ದಾರೆ.

ಒಂಬತ್ತು ದಿನಗಳ ಕಾಲ ನಡೆಯಲಿರುವ ನವರಾತ್ರಿ ಉತ್ಸವದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ‌ ಭದ್ರತೆ ಕೈಗೊಳ್ಳಲಾಗಿದೆ, 27 ಎಸ್ಪಿ ಮಟ್ಟದ ಅಧಿಕಾರಿಗಳು, 989 ಅಡಿಷನಲ್ ಡಿವೈಎಸ್ಪಿ ಹಾಗೂ ಇನ್ಸ್ಪೆಕ್ಟರ್ಗಳು, 3981 ಸಿಬ್ಬಂದಿ ಸೇರಿ ಈ ಬಾರಿ 5000ಕ್ಕೂ ಹೆಚ್ಚು ಮಂದಿ ಪೊಲೀಸರನ್ನು ದಸರಾ ವಿಶೇಷ ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ಹೇಳಿದರು.

13,670 ಸಿಸಿ ಕ್ಯಾಮೆರಾ ಕಣ್ಗಾವಲನ್ನು ಮೈಸೂರಿನಾದ್ಯಂತ ಅಳವಡಿಸಲಾಗಿದೆ, ಪೊಲೀಸ್ ಸಹಾಯ ಕೇಂದ್ರಗಳನ್ನು ಪ್ರಮುಖ ಸ್ಥಳಗಳಲ್ಲಿ ತೆಗೆಯಲಾಗಿದೆ, ಪ್ರಮುಖ ಸ್ಥಳಗಳಲ್ಲಿ ವಾಚ್ ಟವರ್ ಗಳನ್ನು ಸಹ ಸ್ಥಾಪನೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಮಹಿಳೆಯರ ರಕ್ಷಣೆಗಾಗಿಯೇ ಚಾಮುಂಡಿ ಕಾರ್ಯ ಪಡೆಯನ್ನು ಸಹ ದಸರಾ ಸಂದರ್ಭದಲ್ಲಿ ಆಯೋಜಿಸಲಾಗಿದೆ ಎಂದು ಅವರು ಸೀಮಾ ಲಾಟ್ಕರ್ ವಿವರಿಸಿದರು.

ದಸರಾ ಮಹೋತ್ಸವಕ್ಕೆ ಭಾರೀ ಭದ್ರತೆ:ಸೀಮಾ ಲಾಟ್ಕರ್ Read More

ಪತ್ನಿಯ ಮೇಲೆ‌ ಬೇರೊಬ್ಬ ಅತ್ಯಾಚಾರಕ್ಕೆ ಯತ್ನ: ಚಿತ್ರೀಕರಿಸಿದ ಪಾಪಿ ಪತಿ

ಮೈಸೂರು: ಪತ್ನಿಯ ಮೇಲೆ ಬೇರೆ ವ್ಯಕ್ತಿ ಅತ್ಯಾಚಾರಕ್ಕೆ ಯತ್ನಿಸಿದ ದೃಶ್ಯಗಳನ್ನ ಪತಿಯೇ ಮೊಬೈಲ್ ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಅಸಹ್ಯಕರ ಪ್ರಕರಣ ಮೈಸೂರಿನಲ್ಲಿ ನಡೆದಿದೆ.

ಇಂತಹ ಹೇಯ ಘಟನೆ ಮೈಸೂರಿನ ಕಲ್ಯಾಣಗಿರಿಯಲ್ಲಿ ನಡೆದಿದೆ

ಘಟನೆ ಸಂಬಂಧ ಪತ್ನಿ ಮುನ್ನಿ(ಹೆಸರು ಬದಲಿಸಲಾಗಿದೆ) ಪತಿ ಅಬ್ದುಲ್ ಫಾರೂಖ್,ನಜೀರ್ ಮಹಮದ್ ಹನೀಫಾ ಸೇರಿದಂತೆ 9 ಮಂದಿ ವಿರುದ್ದ ದೂರು ನೀಡಿದ್ದು‌ ಎಪ್ಐಆರ್ ದಾಖಲಾಗಿದೆ.

19 ವರ್ಷಗಳ ಹಿಂದೆ ಮುನ್ನಿ ಹಾಗೂ ಅಬ್ದುಲ್ ಫಾರೂಖ್ ವಿವಾಹವಾಗಿದ್ದು ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.ಅಬ್ದುಲ್ ಫಾರೂಖ್ ಮತ್ತೊಬ್ಬ ಮಹಿಳೆ ಜೊತೆ ಸಂಭಂಧ ಬೆಳೆಸಿ ಪತ್ನಿಯನ್ನ ನಿರ್ಲಕ್ಷಿಸಿದ್ದಾನೆ.

ಜೀವನೋಪಾಯಕ್ಕಾಗಿ ಮುನ್ನಿ ಹೈದರಾಬಾದ್ ಗೆ ತೆರಳಿ ನಂತರ ಮೈಸೂರಿಗೆ ಹಿಂದಿರುಗಿ ಕಲ್ಯಾಣಗಿರಿಯಲ್ಲಿ ಮನೆ ಬಾಡಿಗೆ ಪಡೆದು ಜೀವಿಸುತ್ತಿದ್ದಾರೆ.

ಜೀವನಾಂಶಕ್ಕಾಗಿ ಮುನ್ನಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.ಜೀವನಾಂಶ ನೀಡುವಂತೆ ನ್ಯಾಯಾಲಯ ಆದೇಶ ನೀಡಿದ್ದರೂ ಅಬ್ದುಲ್ ಫಾರೂಖ್ ಪಾಲಿಸಿಲ್ಲ.

ಜೀವನೋಪಾಯಕ್ಕಾಗಿ ಮುನ್ನಿ ಸಾಕಷ್ಟು ಸಾಲ ಮಾಡಿದ್ದು,ಎರಡು ತಿಂಗಳ ಹಿಂದೆ ಸಾಲದ ಹಣ ಪಡೆಯಲು ಹರ್ಷದ್ ಖಾನ್ ಎಂಬಾತ ಮನೆಗೆ ಬಂದಿದ್ದಾನೆ.

ಈ ವೇಳೆ ಮನೆಗೆ ನುಗ್ಗಿದ ಅಬ್ದುಲ್ ಫಾರೂಖ್,ನಾಸಿರ್,ಮಹಮದ್ ಹನೀಫ್ ಹಾಗೂ ಇತರರು ಮುನ್ನಿ ಹಾಗೂ ಹರ್ಷದ್ ಖಾನ್ ಮೇಲೆ ಹಲ್ಲೆ ನಡೆಸಿದ್ದಾರೆ.

ನಂತರ ಮುನ್ನಿಯ ಬಟ್ಟೆಗಳನ್ನ ಹರಿದುಹಾಕಿ ವಿಡಿಯೋ ಚಿತ್ರೀಕರಿಸಿದ್ದಾರೆ.ಅಬ್ದುಲ್ ಫಾರೂಖ್ ಜೊತೆ ಬಂದಿದ್ದ ನಾಜಿರ್ ಎಂಬಾತ ಮುನ್ನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

ಈ ದೃಶ್ಯಗಳನ್ನ ಪತಿ ಅಬ್ದುಲ್ ಫಾರೂಖ್ ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾನೆ.

ಕೆಲ ಸಮಯದಲ್ಲಿ ವಿಡಿಯೋ ಡಿಲೀಟ್ ಮಾಡಿ ನಂತರ ಎಡಿಡ್ ಮಾಡಿ ಮತ್ತೆ ಅಪ್ ಲೋಡ್ ಮಾಡಿ ಪತ್ನಿಯನ್ನ ತೇಜೋವಧೆ ಮಾಡಿದ್ದಾನೆ.

ಇದೆಲ್ಲದರಿಂದ ನೊಂದ ಮುನ್ನಿ ಉದಯಗಿರಿ ಠಾಣೆಗೆ ದೂರು ನೀಡಿದ್ದಾರೆ.
ಉದಯಗಿರಿ ಠಾಣೆ ಪೊಲೀಸರು ಅಬ್ದುಲ್ ಫಾರೂಕ್, ನಾಜೀರ್,ಮಹಮದ್ ಹನೀಫ್ ಸೇರಿ 6 ಮಂದಿ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

ಪತ್ನಿಯ ಮೇಲೆ‌ ಬೇರೊಬ್ಬ ಅತ್ಯಾಚಾರಕ್ಕೆ ಯತ್ನ: ಚಿತ್ರೀಕರಿಸಿದ ಪಾಪಿ ಪತಿ Read More