ಕೇರಳ ಲಾಟರಿ ಟಿಕೇಟ್‌ ಅಕ್ರಮ ಮಾರಾಟ; ವ್ಯಕ್ತಿ ಬಂಧನ

ಚಾಮರಾಜನಗರ: ಅಕ್ರಮವಾಗಿ ಕೇರಳ ರಾಜ್ಯದ ಲಾಟರಿ ಟಿಕೆಟ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಮ್ಮು ಅಲಿಯಾಸ್ ಕಮರ್ ಪಾಷಾ ಬಂಧಿತ ಆರೋಪಿ.

ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದ ಮೇರೆಗೆ ಪೊಲೀಸರು ಅಲರ್ಟ್ ಆಗಿದ್ದಾರೆ.

ಅಗರ-ಮಾಂಬಳ್ಳಿ ಪೊಲೀಸ್ ಠಾಣೆಯ ಅರಕ್ಷಕ ಉಪನಿರೀಕ್ಷಕ ಕರಿಬಸಪ್ಪ ಎನ್ ಅವರು ಖಚಿತ ಮಾಹಿತಿ ಆಧರಿಸಿ ನಿನ್ನೆ ಸಂಜೆ ಸಿಬ್ಬಂದಿಗಳೊಡನೆ ಮಾಂಬಳ್ಳಿ ಗ್ರಾಮದ ರವಿ ಹೋಟೆಲ್ ಪಕ್ಕದ ರಸ್ತೆಯಲ್ಲಿ ಅಕ್ರಮವಾಗಿ ಲಾಟರಿ ಟಿಕೇಟ್‌ ಮಾರಾಟ ಮಾಡುತ್ತಿದ್ದ ಕಮ್ಮು ಅಲಿಯಾಸ್ ಕಮರ್ ಪಾಷಾ ಎಂಬಾತನನ್ನು ಬಂಧಿಸಿ ಆತನ ಬಳಿ ಇದ್ದ 84 ಕೇರಳ ರಾಜ್ಯದ ಲಾಟರಿ ಟಿಕೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಜತೆಗೆ 150 ಹಣವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಈ ಪತ್ತೆ ಕಾರ್ಯಕ್ಕೆ ಮಾನ್ಯ ಪೊಲೀಸ್ ಅಧೀಕ್ಷಕರಾದ ಡಾ. ಕವಿತಾ ಬಿ.ಟಿ ಅವರು ಪ್ರಶಂಸನೆ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲೂ ಇನ್ನೂ ಹೆಚ್ಚಿನ ಅಕ್ರಮ ಚಟುವಟಿಕೆಗಳನ್ನು ಪತ್ತೆ ಹಚ್ಚಿ ನಿಗ್ರಹಿಸುವಂತೆ ಸೂಚನೆ ನೀಡಿದ್ದಾರೆ.

ಕೇರಳ ಲಾಟರಿ ಟಿಕೇಟ್‌ ಅಕ್ರಮ ಮಾರಾಟ; ವ್ಯಕ್ತಿ ಬಂಧನ Read More

ಮಾಹಿತಿಗಾಗಿ ಬಂದ ಪೊಲೀಸ್ ಮುಂದೆ ಸೀರೆ ಬಿಚ್ಚಿ ಅನುಚಿತವಾಗಿ ವರ್ತಿಸಿದ ಮಹಿಳೆ

ಮೈಸೂರು,ಆ.1: ದೂರೊಂದಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಬಂದ ಪೊಲೀಸ್ ಎದುರೇ ಮಹಿಳೆ ನಡುರಸ್ತೆಯಲ್ಲಿ ಸೀರೆಯನ್ನ ಬಿಚ್ಚಿ ಎಸೆದು ಅನುಚಿತವಾಗಿ ವರ್ತಿಸಿದ ವಿಲಕ್ಷಣ ಪ್ರಕರಣ ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.

ವಿಡಿಯೋ ತೆಗೆಯುವಂತೆ ಅನುಚಿತವಾಗಿ ವರ್ತಿಸಿದ ಪ್ರಕರಣವೊಂದು ನಂಜನಗೂಡಿನ ಶಿರಮಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,ರತ್ನಮ್ಮ ಎಂಬಾಕೆ ಹೀಗೆ ಅನುಚಿತವಾಗಿ ಅದರಲ್ಲೂ ಊರಿನ ಜನರ ಎದುರೇ ಹೀಗೆ ಕೆಟ್ಟದಾಗಿ ವರ್ತಿಸಿದ್ದಾಳೆ.

ಮಹಿಳೆಯ ವರ್ತನೆ ವಿಡಿಯೋ ಇದೀಗ ವೈರಲ್ ಆಗಿದೆ.

ಶಿರಮಳ್ಳಿ ಗ್ರಾಮದಲ್ಲಿ ರತ್ನಮ್ಮ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.ಈ ಸಂಬಂಧ ರತ್ನಮ್ಮ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ನೋವು ಹೇಳಿಕೊಂಡಿದ್ದರು.ಅಲ್ಲದೆ ಎಸ್ಪಿ ಕಚೇರಿಯಲ್ಲೂ ಸಹ ದೂರು ನೀಡಿದ್ದರು.

ಹಾಗಾಗಿ ಈ ಬಗ್ಗೆ ಮಾಹಿತಿ ಪಡೆಯಲು ಹುಲ್ಲಹಳ್ಳಿ ಠಾಣೆ ಪೊಲೀಸ್ ಸಿಬ್ಬಂದಿ ರತ್ನಮ್ಮನ ಮನೆಗೆ ಭೇಟಿ ಕೊಟ್ಟಿದ್ದಾಗ ಹೀಗೆ ಹುಚ್ಚಾಟ ಪ್ರದರ್ಶಿಸಿದ್ದಾಳೆ.

ರತ್ನಮ್ಮನ ವಿರುದ್ದವೂ ಹುಲ್ಲಹಳ್ಳಿ ಹಾಗೂ ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಕೆಲವು ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.

ಮಾಹಿತಿ ಪಡೆಯಲು ತೆರಳಿದ ಪೊಲೀಸ್ ಗೆ ತನ್ನ ಬಟ್ಟೆ ಬಿಚ್ಚಿಹಾಕಿ ಆತನಜೊತೆ ಸೆಲ್ಫಿ ವಿಡಿಯೋ ಮಾಡಲು ಯತ್ನಿಸಿದ್ದಾಳೆ.

ಪೊಲೀಸರ ಕರ್ತವ್ಯಕ್ಕೆ ಹೀಗೆ ಅನುಚಿತವಾಗಿ ವರ್ತಿಸುವ ಮೂಲಕ ಅಡ್ಡಿ ಪಡಿಸಿ ಬೆದರಿಕೆ ಹಾಕಿರುವ ಈ ಮಹಿಳೆಯ ವಿರುದ್ಧ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಮಾಹಿತಿಗಾಗಿ ಬಂದ ಪೊಲೀಸ್ ಮುಂದೆ ಸೀರೆ ಬಿಚ್ಚಿ ಅನುಚಿತವಾಗಿ ವರ್ತಿಸಿದ ಮಹಿಳೆ Read More

ಇಬ್ಬರು ಮನೆಗಳ್ಳರು ಅರೆಸ್ಟ್ : 343 ಗ್ರಾಂ ಚಿನ್ನಾಭರಣ ವಶ

ನೆಲಂಮಗಲ: ಮನೆಗಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿ 343 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ನೆಲಮಂಗಲ ಪಟ್ಟಣಕ್ಕೆ ಸಮೀಪದ ವಾಜರಹಳ್ಳಿ ಜಾರ್ಜ್ ಲೇಔಟ್ ನಲ್ಲಿನ ಇಂಜಿನಿಯರ್ ಮನೆಯಲ್ಲಿ 56 ಲಕ್ಷ ಬೆಲೆ ಬಾಳುವ ಚಿನ್ನಾಭರಣ ದೋಚಿ ಖತರ್ನಾಕ್ ಕಳ್ಳರು ಪರಾರಿಯಾಗಿದ್ದರು.

ಅರ್ಧ ಕೆಜಿಗೂ ಹೆಚ್ಚು ಚಿನ್ನಾಭರಣವನ್ನು ಕಳ್ಳತನ ಮಾಡಿದ್ದರು.ಈ ಕುರಿತು ಪ್ರಕರಣ ದಾಖಲಿಸಿ ತನಿಖೆ ಪ್ರಾರಂಭಿಸಿದ್ದ
ನೆಲಮಂಗಲ ಪಟ್ಟಣ ಪೊಲೀಸರು ಇಬ್ಬರು ಆರೋಪಿಗಳ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜಯಂತ್ @ ಬ್ಯಾಟರಿ ಜಯಂತ ಹಾಗೂ ಯತೀಶ್ ಬಂಧಿತ ಆರೋಪಿಗಳು,ಆರೋಪಿಗಳಿಂದ 343 ಗ್ರಾಂ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇಬ್ಬರೂ ಆರೋಪಿಗಳು ನಟೋರಿಯಸ್ ಕಳ್ಳರಾಗಿದ್ದು ಈ ಹಿಂದೆ 25-26 ಕೇಸ್ ಗಳಲ್ಲಿ ಭಾಗಿಯಾಗಿದ್ದಾರೆಂಬುದು ವಿಚಾರಣೆ ವೇಳೆ‌ ಗೊತ್ತಾಗಿದೆ

ಇಬ್ಬರು ಮನೆಗಳ್ಳರು ಅರೆಸ್ಟ್ : 343 ಗ್ರಾಂ ಚಿನ್ನಾಭರಣ ವಶ Read More

ಹುಣಸೂರಿನಲ್ಲಿ ಪೊಲೀಸ್ ಇಲಾಖೆಯಿಂದಮಾದಕ ದ್ರವ್ಯ ವಿರೋಧಿ ದಿನ ಆಚರಣೆ

ಹುಣಸೂರು: ಹುಣಸೂರಿನಲ್ಲಿ ಇಂದು ಪೊಲೀಸ್ ಇಲಾಖೆ ವತಿಯಿಂದ ಮಾದಕ ದ್ರವ್ಯ ವಿರೋಧಿ ದಿನ ಆಚರಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.

ಹುಣಸೂರು ಡಿವೈಎಸ್ಪಿ ಗೋಪಾಲಕೃಷ್ಣ ಅವರ ನೇತೃತ್ವದಲ್ಲಿ ನಡೆದ ಈ ಜಾಥಾದಲ್ಲಿ ಹುಣಸೂರು ಪೊಲೀಸ್ ಇನ್ಸ್ಪೆಕ್ಟರ್‌ ಸಂತೋಷ್ ಕಶ್ಯಪ್,ಪಿಎಸ್ಐ ಗಳಾದ ತ್ಯಾಗರಾಜ ನಾಯಕ, ನಾಗಯ್ಯ ಹಾಗೂ ಹುಣಸೂರು ಮತ್ತು ಗ್ರಾಮಾಂತರ ಪೊಲೀಸ್ ಠಾಣೆಗಳ ಎಲ್ಲ ಸಿಬ್ಬಂದಿ ಪಾಲ್ಗೊಂಡಿದ್ದರು.

ಜಾಥಾದಲ್ಲಿ ಹುಣಸೂರಿನ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡು ಪೊಲೀಸರಿಗೆ ಸಾಥ್ ನೀಡಿದರು.

ಹುಣಸೂರು ಪಟ್ಟಣ ಮತ್ತು ಗ್ರಾಮಾಂತರದಿಂದ ಬಹಳಷ್ಟು ಸಾರ್ವಜನಿಕರು ಮತ್ತು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಪದಾಧಿಕಾರಿಗಳು ಹಾಗೂ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹೊರಟ ಜಾಥಾ ಕಲ್ಪತರು ಮೈದಾನದಲ್ಲಿ ಕೊನೆಗೊಂಡಿತು.

ಈ ವೇಳೆ ಪೊಲೀಸರು ಮಾದಕ ದ್ರವ್ಯ ಸೇವನೆಯಿಂದ ಆಗುವ ದುಷ್ಪರಿಣಾಮಗಳನ್ನು ಜನರಿಗೆ ತಿಳಿಸಿಕೊಟ್ಟರು.

ಹುಣಸೂರಿನಲ್ಲಿ ಪೊಲೀಸ್ ಇಲಾಖೆಯಿಂದಮಾದಕ ದ್ರವ್ಯ ವಿರೋಧಿ ದಿನ ಆಚರಣೆ Read More

ಮಾದಕ ವಸ್ತುಗಳ ಬಳಕೆ:ಜಾಗೃತಿ ಜಾಥಾಗೆ ಎಸ್ಪಿ ಕವಿತಾ ಚಾಲನೆ

(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ಮಾದಕ ವಸ್ತುಗಳ ಬಳಕೆ, ಸಾಗಾಣಿಕೆ ವಿರೋಧಿ ಜಾಗೃತಿ ದಿನಾಚರಣೆಯ ಸಂಬಂಧ ಚಾ ನಗರ ಜಿಲ್ಲಾ ಪೊಲೀಸ್ ವತಿಯಿಂದ ಮಾದಕ ವಸ್ತುಗಳ ಬಗ್ಗೆ ಅರಿವು ಮೂಡಿಸಲು ಜಾಗೃತಿ ಜಾಥ ನಡೆಸಲಾಯಿತು.

ಪಟ್ಟಣದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಪ್ರಮುಖ ಬೀದಿಗಳಲ್ಲಿ ನಡೆಸಿದ ಚಾಮರಾಜನಗರ ಜಿಲ್ಲಾ ಪೊಲೀಸರ ಜಾಗೃತಿ ಜಾಥಾದಲ್ಲಿ
ವಿವಿದ ಕಾಲೇಜಿನ ಮಕ್ಕಳು ಹಾಗೂ ಆಟೋ ಚಾಲಕರು ಬಾಗವಹಿಸಿದ್ದರು.

ಜಾಥಾ ವೇಳೆ ಎಎಸ್ಪಿ,ಡಿವೈಸ್ಪಿ ಪಟ್ಟಣ ಠಾಣಾ ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು‌.

ಮಧ್ಯಾಹ್ನ ಎಡಬೆಟ್ಟದಲ್ಲಿರುವ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಮಾದಕ ವಸ್ತುಗಳ ಜಾಗೃತಿ ವೇದಿಕೆ ಕಾರ್ಯಕ್ರಮ ಮತ್ತು ಮಾದಕ ವಸ್ತುಗಳ ಬಗ್ಗೆ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು.

ಮಾದಕ ವಸ್ತುಗಳ ಬಳಕೆ:ಜಾಗೃತಿ ಜಾಥಾಗೆ ಎಸ್ಪಿ ಕವಿತಾ ಚಾಲನೆ Read More

ಹಕ್ಕಿಗಾಗಿ ಹೋರಾಡುತ್ತಿರುವ ರೈತರ ಬಂಧನ ಅಮಾನವೀಯ- ಮುಖ್ಯಮಂತ್ರಿ ಚಂದ್ರು

ಬೆಂಗಳೂರು: ದೇವನಹಳ್ಳಿ ಚಲೋ ಪ್ರತಿಭಟನೆ ವೇಳೆ ರೈತರನ್ನು ಏಕಾಏಕಿ ಬಂಧಿಸಿರುವ ಪೊಲೀಸರ ಕ್ರಮ ಸಿದ್ದರಾಮಯ್ಯ ಕಾಂಗ್ರೆಸ್ ಸರ್ಕಾರದ ಅಮಾನವೀಯ ನಡೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಖಂಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕಾಂಗ್ರೆಸ್ ಸರ್ಕಾರದ ಈ ನಡೆಯನ್ನು ನಾಡಿನ ಎಲ್ಲ ಜನತೆ ಖಂಡಿಸಬೇಕಾಗುತ್ತದೆ ಎಂದು ಹೇಳಿದರು.

ದೇವನಹಳ್ಳಿಯಲ್ಲಿ ಸಾವಿರಾರು ರೈತರು ತಮ್ಮ ವಂಶಾನುಗತ ಕೃಷಿ ಭೂಮಿ ಹಕ್ಕಿಗಾಗಿ ಸಾವಿರ ದಿವಸಗಳಿಂದ ಹೋರಾಟ ನಡೆಸುತ್ತಿದ್ದಾರೆ. ಮಹಿಳೆಯರು ವೃದ್ಧರು ಎಂಬುದನ್ನು ಸಹ ಪರಿಗಣಿಸದೆ ಪೊಲೀಸರು ಬಂಧನದ ವೇಳೆಯಲ್ಲಿ ನಡೆಸಿದ ದೌರ್ಜನ್ಯ ಯಾವುದೇ ನಾಗರೀಕ ಸಮಾಜ ತಲೆತಗ್ಗಿಸುವಂಥದ್ದು ಎಂದು ಚಂದ್ರು ಕಿಡಿಕಾರಿದರು.

ಈ ಹಿಂದೆ ಯಡಿಯೂರಪ್ಪನವರಿಗೆ ರಾಜ್ಯದ ಜನ ತಕ್ಕ ಪಾಠ ಕಲಿಸಿದ್ದಾರೆ. ಈಗ ಸಿದ್ದರಾಮಯ್ಯನವರಿಗೊ ಸಹ ರಾಜ್ಯದ ಜನ ತಕ್ಕಪಾಠ ಕಲಿಸುವ ಕಾಲ ಸನ್ನಿಹಿತವಾಗಿದೆ. ಈ ಘಟನೆಗೆ ಸರ್ಕಾರ ಉತ್ತರದಾಯಿತ್ವವಾಗಿರುತ್ತದೆ ಎಂದು ತಿಳಿಸಿದರು.

ರಾಜ್ಯದಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುವ ಎಲ್ಲ ರೈತಾಪಿ ವರ್ಗಗಳ ಮೇಲೆ ಈ ರೀತಿಯ ದೌರ್ಜನ್ಯವನ್ನು ಪಕ್ಷವು ಖಂಡಿಸುತ್ತದೆ ಮತ್ತು ಅವರ ಹೋರಾಟದಲ್ಲಿ ಸದಾಕಾಲ ನಿಲ್ಲುತ್ತದೆ ಎಂದು ಮುಖ್ಯಮಂತ್ರಿ ಚಂದ್ರು ಭರವಸೆ ನೀಡಿದರು.

ಹಕ್ಕಿಗಾಗಿ ಹೋರಾಡುತ್ತಿರುವ ರೈತರ ಬಂಧನ ಅಮಾನವೀಯ- ಮುಖ್ಯಮಂತ್ರಿ ಚಂದ್ರು Read More

ಮೈಸೂರಿನಲ್ಲಿ ‌ರೌಡಿಗಳ ಮನೆ ಮೇಲೆ ದಿಢೀರ್‌ ದಾಳಿ

ಮೈಸೂರು: ನಗರದಲ್ಲಿ ರೌಡಿ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ರೌಡಿ ಆಸಾಮಿಗಳ ಮನೆಗಳ ಮೇಲೆ ದಿಢೀರ್ ದಾಳಿ ಮಾಡಲಾಯಿತು.

ಮೈಸೂರು ನಗರದಲ್ಲಿ ರೌಡಿ ಆಸಾಮಿಗಳ ಮೇಲೆ ನಿಗಾ ವಹಿಸಲು ಹಾಗೂ ರೌಡಿ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಸಂಬಂಧ ಮೈಸೂರು ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ಮೈಸೂರು ನಗರ ಪೊಲೀಸರು 61 ರೌಡಿ ಆಸಾಮಿಗಳ ಮನೆಗಳ ಮೇಲೆ ದಿಢೀರ್ ದಾಳಿ ಮಾಡಿ ವಿಶೇಷ ತಪಾಸಣೆ ಮಾಡಿದರು.

ರೌಡಿ ಆಸಾಮಿಗಳಿಗೆ ಹೆಬ್ಬಾಳು ಪೊಲೀಸ್ ಠಾಣಾ ಆವರಣದಲ್ಲಿ ರೌಡಿ ಪರೇಡ್ ನಡೆಸಲಾಯುತು.

ಯಾವುದೇ ರೀತಿಯ ರೌಡಿ ಚಟುವಟಿಕೆಗಳು ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವಂತಹ ಕೃತ್ಯಗಳಲ್ಲಿ ಭಾಗಿಯಾಗದಂತೆ ಕಡಕ್ ಎಚ್ಚರಿಕೆ ನೀಡಲಾಯಿತು.

ಯಾವುದೇ ಕಾನೂನು ಬಾಹಿರ ಕೃತ್ಯದಲ್ಲಿ ಭಾಗಿಯಾದಲ್ಲಿ ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಸಿದರು.

ಮೈಸೂರು ನಗರದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅವರ ನೇತೃತ್ವದಲ್ಲಿ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಮತ್ತು ನಗರದ ಎಸಿಪಿ ಗಳು, ಅಧಿಕಾರಿಗಳು ಮತ್ತು ಸಿಬ್ಬಂದಿ ಈ ವಿಶೇಷ ತಪಾಸಣೆ ಹಾಗೂ ರೌಡಿ ಪರೇಡ್ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಮೈಸೂರಿನಲ್ಲಿ ‌ರೌಡಿಗಳ ಮನೆ ಮೇಲೆ ದಿಢೀರ್‌ ದಾಳಿ Read More

ಬೇಹುಗಾರಿಕೆ:ಇಬ್ಬರು ವ್ಯಕ್ತಿಗಳನ್ನ ಬಂಧಿಸಿದ ಪಂಜಾಬ್ ಪೊಲೀಸರು

ಪಂಜಾಬ್: ನವದೆಹಲಿಯ ಹೈಕಮಿಷನ್‌ನಲ್ಲಿ ನಿಯೋಜಿಸಲಾದ ಪಾಕಿಸ್ತಾನಿ ಅಧಿಕಾರಿಯೊಂದಿಗೆ ಸಂಪರ್ಕ ಹೊಂದಿ,ಬೇಹುಗಾರಿಕೆಯಲ್ಲಿ ಪಾಲ್ಗೊಂಡ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನು ಮಲೇರ್ಕೋಟ್ಲಾ ಪೊಲೀಸರು ಬಂಧಿಸಿದ್ದಾರೆ.

ಈ‌ ವುಷಯವನ್ನು ಪಂಜಾಬ್ ಪೊಲೀಸ್ ಮಹಾನಿರ್ದೇಶಕರು ಗೌರವ್ ಯಾದವ್(ಡಿಜಿಪಿ) ಎಕ್ಸ್ ಪೋಸ್ಟ್‌ ನಲ್ಲಿ ತಿಳಿಸಿದ್ದಾರೆ.

ವಿಶ್ವಾಸಾರ್ಹ ಗುಪ್ತಚರ ಮಾಹಿತಿ ಮೇರೆಗೆ ಕಾರ್ಯನಿರ್ವಹಿಸುತ್ತಾ, ಭಾರತೀಯ ಸೇನೆಯ ಚಲನವಲನಗಳ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನದ ನಿರ್ವಾಹಕರಿಗೆ ಸೋರಿಕೆ ಮಾಡಿದ್ದಕ್ಕಾಗಿ ಒಬ್ಬನನ್ನು ಬಂಧಿಸಲಾಗೆದೆ,ಈತನ ಬಂಧನದಿಂದ ಲಭ್ಯವಾದ ಮಾಹಿತಿಯ ಆಧಾರದಲ್ಲಿ ಇನ್ನೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ರಹಸ್ಯ ಮಾಹಿತಿಯನ್ನು ರವಾನಿಸಿ ಆನ್‌ಲೈನ್ ವಹಿವಾಟಿನ ಮೂಲಕ ಪಾವತಿಗಳನ್ನು ಪಡೆಯುತ್ತಿದ್ದರು ಎಂದು ಡಿಜಿಪಿ ಹೇಳಿದ್ದಾರೆ.

ಆರೋಪಿಗಳಿಬ್ಬರೂ ಹ್ಯಾಂಡ್ಲರ್ ಜೊತೆ ಆಗಾಗ್ಗೆ ಸಂಪರ್ಕದಲ್ಲಿದ್ದರು ಮತ್ತು ಅವರ ಸೂಚನೆಯಂತೆ ಇತರ ಸ್ಥಳೀಯ ಕಾರ್ಯಕರ್ತರಿಗೆ ಹಣ ರವಾನಿಸುವಲ್ಲಿ ಭಾಗಿಯಾಗಿದ್ದರು. ಬಂಧಿತರಿಂದ ಎರಡು ಮೊಬೈಲ್ ಫೋನ್‌‌ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೇಹುಗಾರಿಕೆ:ಇಬ್ಬರು ವ್ಯಕ್ತಿಗಳನ್ನ ಬಂಧಿಸಿದ ಪಂಜಾಬ್ ಪೊಲೀಸರು Read More

ಕೋಟ್ಯಾಂತರ ಮೌಲ್ಯದ ಮಾಲು ವಾರಸುದಾರಿಗೆ ಹಿಂದಿರುಗಿಸಿದ ಪೊಲೀಸರು

ಮೈಸೂರು: ನಗರದ ವಿವಿಧ ಪೋಲಿಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ಕಳುವು ಪ್ರಕರಣಗಳನ್ನು ಭೇದಿಸಿ ಪೊಲೀಸರು ವಶಪಡಿಸಿಕೊಂಡ ಮಾಲುಗಳನ್ನ ವಾರಸುದಾರರಿಗೆ ಹಿಂದಿರುಗಿಸಲಾಯಿತು.

ಕಳ್ಳತನ ಪ್ರಕರಣಗಳಲ್ಲಿ ಅಮಾನತು ಪಡಿಸಿಕೊಂಡ ಮಾಲುಗಳನ್ನ ವಾರಸುದಾರರಿಗೆ ಹಿಂದಿರುಗಿಸುವ ಕಾರ್ಯಕ್ರಮವನ್ನು ಮೈಸೂರು ನಗರ ಪೋಲಿಸರು ಆಯೋಜನೆ ಮಾಡಿದ್ದರು.

ಕಳೆದ 8 ತಿಂಗಳ ಅವಧಿಯಲ್ಲಿ ನಡೆದಿದ್ದ ಕಳುವು ಪ್ರಕರಣಗಳ ಪ್ರಾಪರ್ಟಿ ರಿಟರ್ನ್ ಪರೇಡ್ ನಡೆಸಲಾಗಿದ್ದು, ಕೋಟ್ಯಾಂತರ ರೂಪಾಯಿ ಮೌಲ್ಯದ ಮಾಲುಗಳನ್ನು ವಾರಸುದಾರಿಗೆ ಹಿಂದಿರುಗಿಸಲಾಯಿತು.

2 ದರೋಡೆ, 4 ಸುಲಿಗೆ, ಸರಗಳ್ಳತನ ಪ್ರಕರಣ 21, ಕಳ್ಳತನ 34, ಮನೆಗಳ್ಳತನ 6, ವಾಹನ ಕಳುವು 69 ಪ್ರಕರಣಗಳನ್ನ ಭೇದಿಸಿದ ಪೊಲೀಸರು 20 ಆರೋಪಿಗಳನ್ನು ದಸ್ತಗಿರಿ ಮಾಡಿ, ಒಟ್ಟು 4,23,60,000 ಮೌಲ್ಯದ 5 ಕೆ.ಜಿ 320 ಗ್ರಾಂ ಚಿನ್ನಾಭರಣ, 6 ಕೆ.ಜಿ 246 ಗ್ರಾಂ ಬೆಳ್ಳಿ ಪದಾರ್ಥಗಳು, 52 ದ್ವಿಚಕ್ರವಾಹನಗಳು, 9 ಕಾರುಗಳು, 8 ಗೂಡ್ಸ್ ವಾಹನಗಳು ಸೇರಿದಂತೆ 13,54,500 ರೂ ನಗದು ವಶಪಡಿಸಿಕೊಂಡಿದ್ದರು.

ದಸ್ತಗಿರಿ ಮಾಡಿರುವ 20 ಕಳ್ಳರಲ್ಲಿ ಇಬ್ಬರು ಅಂತರ ರಾಜ್ಯ ಕಳ್ಳರಾಗಿದ್ದಾರೆ ಎಂದು ಸುದ್ದಿ ಗೋಷ್ಠಿಯಲ್ಲಿ ಮೈಸೂರು ಪೋಲಿಸ್ ಕಮಿಷನರ್ ಸೀಮಾ ಲಾಟ್ಕರ್ ಮಾಹಿತಿ ನೀಡಿದರು‌.

ವಾರಸುದಾರರಿಗೆ ತಮ್ಮ ತಮ್ಮ ಸ್ವತ್ತುಗಳನ್ನ ಹಿಂದಿರುಗಿಸಲಾಗಿದ್ದು, ನಗರದ ವಿವಿಧ ಪೋಲಿಸ್ ಠಾಣಾ ಅಧಿಕಾರಿಗಳ ಕಾರ್ಯಕ್ಕೆ ಅಧಿಕಾರಿಗಳು ಶ್ಲಾಘಿಸಿದ್ದಾರೆ.

ಕೋಟ್ಯಾಂತರ ಮೌಲ್ಯದ ಮಾಲು ವಾರಸುದಾರಿಗೆ ಹಿಂದಿರುಗಿಸಿದ ಪೊಲೀಸರು Read More

ಪಾಕಿಸ್ತಾನಕ್ಕೆ ಸೇನಾ ಮಾಹಿತಿ ಸೋರಿಕೆ:ಇಬ್ಬರು ಅರೆಸ್ಟ್

ಚಂಡೀಗಢ: ಸೇನಾ ಕಂಟೋನ್ಮೆಂಟ್ ಪ್ರದೇಶಗಳು ಮತ್ತು ವಾಯುನೆಲೆಗಳ ಸೂಕ್ಷ್ಮ ಮಾಹಿತಿ ಹಾಗೂ ಛಾಯಾಚಿತ್ರಗಳನ್ನು ಸೋರಿಕೆ ಮಾಡಿದ ಆರೋಪದ ಮೇಲೆ ಪಂಜಾಬ್ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಶೇರ್ ಮಾಸಿಹ್ ಮತ್ತು ಸೂರಜ್ ಮಾಸಿಹ್ ಎಂಬವರನ್ನು ಬಂಧಿಸಿ ಅಮೃತಸರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.

ಈ ಆರೋಪಿಗಳಿಬ್ಬರೂ ಅಮೃತಸರ ಕೇಂದ್ರ ಕಾರಾಗೃಹದಲ್ಲಿರುವ ಹರ್‌ಪ್ರೀತ್ ಸಿಂಗ್ ಅಲಿಯಾಸ್ ಪಿಟ್ಟು ನಿರ್ದೇಶನ ನೀಡುತ್ತಿದ್ದರು ಎಂದು ತಿಳಿದುಬಂದಿದೆ.

ಪ್ರಾಥಮಿಕ ತನಿಖೆಯ ವೇಳೆ ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಜೊತೆ ಇವರು ಸಂಪರ್ಕ ಹೊಂದಿದ್ದರು. ಅಧಿಕೃತ ರಹಸ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನಕ್ಕೆ ಸೇನಾ ಮಾಹಿತಿ ಸೋರಿಕೆ:ಇಬ್ಬರು ಅರೆಸ್ಟ್ Read More