ಕಾನ್ ಸ್ಟೇಬಲ್ ಮೇಲೆ ಹಲ್ಲೆ ನಡೆಸಿದ ಯುವಕ

ಮೈಸೂರು: ಕಾರನ್ನ ತೆಗಿ ಎಂದು ಹೇಳಿದ ಕರ್ತವ್ಯ ನಿರತ ಪೊಲೀಸ್ ಕಾನ್ ಸ್ಟೇಬಲ್ ಮೇಲೆ ಯುವಕ ಹಲ್ಲೆ ನಡೆಸಿದ ಘಟನೆ ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಬಳಿ ನಡೆದಿದೆ.

ದೇವರಾಜ ಪೊಲೀಸ್ ಠಾಣೆ ಕಾನ್ ಸ್ಟೇಬಲ್ ಪುಟ್ಟರಾಜು ಎಂಬುವರು ಹಲ್ಲೆಗೊಳಗಾಗಿದ್ದಾರೆ.

ಕೆ.ಸಿ.ಲೇಔಟ್ ನ ನಿವಾಸಿ ಪ್ರೀತಂ ಹಲ್ಲೆ ನಡೆಸಿದ ಯುವಕ.

ನಿನ್ನೆ ತಡರಾತ್ರಿ ಜಯಮಾರ್ತಾಂಡ ಗೇಟ್ ಬಳಿ ಪ್ರೀತಂ ಕಾರನ್ನ ನಿಲ್ಲಿಸಿದ್ದ.ತಡರಾತ್ರಿ ಆದರೂ ಕಾರು ನಿಲ್ಲಿಸಿದ್ದರ ಬಗ್ಗೆ ಪ್ರಶ್ನಿಸಿದ ನೈಟ್ ಬೀಟ್ ನಲ್ಲಿದ್ದ ಪುಟ್ಟರಾಜು ಅವರು ಕಾರನ್ನು ತೆಗೆಯುವಂತೆ ತಿಳಿಸಿದ್ದಾರೆ.

ಈ ವೇಳೆ ಪುಟ್ಟರಾಜು ಜತೆ ವಾದ ಮಾಡಿದ ಪ್ರೀತಂ ಏಕಾಏಕಿ ಹಲ್ಲೆ ನಡೆಸಿದ್ದಾನೆ.ಕೂಡಲೇ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪ್ರೀತಂ ನನ್ನು ವಶಕ್ಕೆ ಪಡೆದರು.

ಪ್ರೀತಂ ವಿರುದ್ದ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಾರನ್ನ ಸೀಜ್ ಮಾಡಲಾಗಿದೆ.

ಕಾನ್ ಸ್ಟೇಬಲ್ ಮೇಲೆ ಹಲ್ಲೆ ನಡೆಸಿದ ಯುವಕ Read More

ಹಸೆಮಣೆ ಏರಬೇಕಿದ್ದ ಪೊಲೀಸ್ ಕಾನ್ಸ್‌ಟೇಬಲ್ ಹತ್ಯೆ

ಹಾಸನ: ತನ್ನದೆ ವಿವಾಹ ಆಮಂತ್ರಣ ಪತ್ರಿಕೆ ವಿತರಿಸಿ ವಾಪಸಾಗುತ್ತಿದ್ದ ಪೊಲೀಸ್ ಕಾನ್ಸ್ ಸ್ಟೇಬಲ್ ಒಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಹೇಯ ಘಟನೆ ಹಾಸನ ತಾಲೂಕಿನ ದುದ್ದ ಗ್ರಾಮದಲ್ಲಿ ನಡೆದಿದೆ

ಗ್ರಾಮದ ಹೊರವಲಯದಲ್ಲಿರುವ ಕೆಲವೆ ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಕಾನ್ಸ್ ಸ್ಟೇಬಲ್‌ ರನ್ನು ಡಾಬಾ ವೃತ್ತದಲ್ಲಿ ಕಳೆದ ರಾತ್ರಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ.

ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ಕಾನ್ಸ್ ಸ್ಟೇಬಲ್, ಬಾಗೇಶಪುರ ಗ್ರಾಮದ ಹರೀಶ್.ವಿ (32) ಕೊಲೆಯಾದ ಕಾನ್ಸ್ ಸ್ಟೇಬಲ್.

ನ. 11 ರಂದು ಹರೀಶ್ ಆವರ ವಿವಾಹ ನಿಗದಿಯಾಗಿತ್ತು. ತಮ್ಮ ಮದುವೆ ಆಮಂತ್ರಣ ಪತ್ರಿಕೆಗಳನ್ನು ನೀಡಿ ಸಂಬಂಧಿಕರನ್ನು ಆಹ್ವಾನಿಸಿ ರಾತ್ರಿ ಬುಲೆಟ್ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದಾಗ ದುಷ್ಕರ್ಮಿಗಳು‌ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ಸ್ಥಳಕ್ಕೆ ಎಸ್ಪಿ ಮಹಮದ್ ಸುಜೇತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು, ದುದ್ದ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಹಸೆಮಣೆ ಏರಬೇಕಿದ್ದ ಪೊಲೀಸ್ ಕಾನ್ಸ್‌ಟೇಬಲ್ ಹತ್ಯೆ Read More