ಲೈಂಗಿಕ ದೌರ್ಜನ್ಯ ಸಾಬೀತು:ವ್ಯಕ್ತಿಗೆ ಜೈಲು ಶಿಕ್ಷೆ

ಚಾಮರಾಜನಗರ,ಮಾ.6: ಪ್ರೀತಿ ಮಾಡುವುದಾಗಿ ನಂಬಿಸಿ ಮದುವೆ ಆಗುವ ಉದ್ದೇಶದಿಂದ ಅಪಹರಿಸಿ ಲೈಂಗಿಕ ದೌರ್ಜನ್ಯ ನಡೆಸಿದ ಕೃತ್ಯ ಸಾಬೀತಾದ ಕಾರಣ ವ್ಯಕ್ತಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ
ಜಿಲ್ಲಾ ಮತ್ತು ಸತ್ರ ಎಫ್.ಟಿ.ಎಸ್.ಸಿ 1 ವಿಶೇಷ ಪೋಕ್ಸೊ ನ್ಯಾಯಾಧೀಶರು ಆದೇಶಿಸಿದ್ದಾರೆ.

ಕೊಳ್ಳೆಗಾಲ ತಾಲ್ಲೋಕು,ಚಿಕ್ಕಮಾಲಾಪುರ ಗ್ರಾಮದ ಆರೋಪಿ ಟ್ರಾಕ್ಟರ್ ಚಾಲಕ
ಮನೋಜ್ @ ಮನೋಜ್ ಕುಮಾರ್ (22) ಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ಚಾಮರಾಜನಗರ ‌‌ಅಧಿಕ ಜಿಲ್ಲಾ ಮತ್ತು ಸತ್ರ ಎಫ್.ಟಿ.ಎಸ್.ಸಿ-1 ವಿಶೇಷ ಪೋಕ್ಸೊ ನ್ಯಾಯಾಧೀಶರಾದ
ಎಸ್. ಜೆ ಕೃಷ್ಣ ಅವರು ಈ ಕೆಳಕಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆ ವಿಧಿಸಿದ್ದಾರೆ.

ಆರೋಪಿಯು ನೊಂದ ಬಾಲಕಿಯು ಅಪ್ರಾಪ್ತೆ ಆಗಿರುವಾಗ ಪ್ರೀತಿ ಮಾಡುವುದಾಗಿ ಪುಸಲಾಯಿಸಿ. ಅವಳನ್ನು ಮದುವೆ ಆಗುವ ಉದ್ದೇಶದಿಂದ ಅಪಹರಿಸಿ ಲೈಂಗಿಕವಾಗಿ ಪೀಡಿಸಿದ ಕೃತ್ಯ ಸಾಬೀತಾದ ಕಾರಣ ಅಪಹರಿಸಿದಕ್ಕೆ 3 ವರ್ಷ ಶಿಕ್ಷೆ ಮತ್ತು 15 ಸಾವಿರ ದಂಡ ಹಾಗೂ ಲೈಂಗಿಕವಾಗಿ ಪೀಡಿಸಿದಕ್ಕೆ 1 ವರ್ಷ ಶಿಕ್ಷೆ, 5 ಸಾವಿರ ದಂಡ ವಿಧಿಸಿದ್ದು ಹಾಗೂ ನೊಂದ ಬಾಲಕಿಗೆ 15 ಸಾವಿರ ರೂ ಪರಿಹಾರ ನೀಡಿ ಆರೋಪಿತನಿಗೆ ನ್ಯಾಯಾಲಯವು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಈತನ ಮೇಲೆ ಕೊಳ್ಳೆಗಾಲ ಪಟ್ಟಣ ಪೊಲೀಸ್ ಠಾಣಾ ಪ್ರಕರಣ ದಾಖಲಾಗಿದ್ದು, ತನಿಖಾಧಿಕಾರಿಗಳಾದ ಕೊಳ್ಳೆಗಾಲ ವೃತ್ತ ನಿರೀಕ್ಷಕ ಶ್ರೀಕಾಂತ್.ಆರ್ ತನಿಖೆ ಪೂರೈಸಿ ಆರೋಪಿತನ ವಿರುದ್ಧ ದೋಷಾರೋಪಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಕೆ.ಯೋಗೇಶ್ ಅವರು ಸರ್ಕಾರದ ಪರವಾಗಿ ಆರೋಪಿತನ ವಿರುದ್ಧ ವಿಚಾರಣೆ ನಡೆಸಿ ವಾದವನ್ನು ಮಂಡಿಸಿದರು.

ಲೈಂಗಿಕ ದೌರ್ಜನ್ಯ ಸಾಬೀತು:ವ್ಯಕ್ತಿಗೆ ಜೈಲು ಶಿಕ್ಷೆ Read More

ಕಾಮುಕ ಮುಖ್ಯ ಶಿಕ್ಷಕನ ಬಂಧನ

ಮೈಸೂರು,ಮಾ.5: ಜಿಲ್ಲೆಯ ಎಚ್‌.ಡಿ.ಕೋಟೆ ಸರ್ಕಾರಿ ಶಾಲೆಯ ಲೈಂಗಿಕ ಕಿರುಕುಳದ
ಆರೋಪಿ ಮುಖ್ಯ ಶಿಕ್ಷಕ ಗಿರೀಶ್ ನನ್ನು ಬಂಧಿಸಲಾಗಿದೆ.

ಆರೋಪಿ ಗಿರೀಶ್ ಹುಬ್ಬಳ್ಳಿಯ ಅಜ್ಞಾತ ಸ್ಥಳದಲ್ಲಿ ಅಡಗಿದ್ದ.ಎಚ್‌.ಡಿ.ಕೋಟೆ ಪೊಲೀಸರು ಹುಡುಕಿ ವಶಕ್ಕೆ ಪಡೆದು
ಪೊಲೀಸ್‌ ವಾಹನದಲ್ಲಿ ಮೈಸೂರಿನತ್ತ ಕರೆತರುತ್ತಿದ್ದಾರೆ.

ಶಾಲೆಯಲ್ಲೇ ಈ ಮುಖ್ಯ ಶಿಕ್ಷಕ ಮಹಾಶಯ ಮತ್ತು ಬರುವ ಮಾತ್ರೆ ಕೊಟ್ಟು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ.ಈ ಬಗ್ಗೆ ಮಕ್ಕಳು ಪೋಷಕರಿಗೆ ತಿಳಿಸಿದ್ದರು.ನಂತರ ಪೋಷಕರು ಪ್ರತಿಭಟನೆ ಮಾಡಿ ಶಿಕ್ಷಕನ ಬಂಧನಕ್ಕೆ ಆಗ್ರಹಿಸಿದ್ದರು.

ಈ ಮುಖ್ಯ ಶಿಕ್ಷಕನ ವಿರುದ್ಧ ಪೊಕ್ಸೊ ಪ್ರಕರಣ ದಾಖಲಾಗಿತ್ತು.

ಕಾಮುಕ ಮುಖ್ಯ ಶಿಕ್ಷಕನ ಬಂಧನ Read More

ಬಿ ಎಸ್ ವೈಗೆ‌ ತಾತ್ಕಾಲಿಕ ರಿಲೀಫ್

ಬೆಂಗಳೂರು: ಪೋಕ್ಸೋ ಪ್ರಕರಣದಲ್ಲಿ ಬಿ.ಎಸ್ ಯಡಿಯೂರಪ್ಪಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದಂತಾಗಿದೆ.

ಯಡಿಯೂರಪ್ಪ ವಿರುದ್ಧ ಸದ್ಯ ಯಾವುದೇ ಕ್ರಮ ಕೈಗೊಳ್ಳದಂತೆ ಧಾರವಾಡ ಹೈಕೋರ್ಟ್ ಆದೇಶ ನೀಡಿದ್ದು,ಸಧ್ಯಕ್ಕೆ ಯಡಿಯೂರಪ್ಪ ನಿರಾಳರಾಗಿದ್ದಾರೆ.

ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದ್ದು, ಬಂಧನ ಭೀತಿಯಿಂದ ಬಿಎಸ್‌ವೈ ಪಾರಾಗಿದ್ದಾರೆ.

ತಮ್ಮ ವಿರುದ್ಧ ದಾಖಲಾಗಿದ್ದ ಪೋಕ್ಸೋ ಪ್ರಕರಣವನ್ನು ರದ್ದು ಮಾಡುವಂತೆ ಕೋರಿ ಯಡಿಯೂರಪ್ಪ ಅವರು ಕೋರ್ಟ್ ಮೆಟ್ಟಿಲೇರಿದ್ದರು. ಜನವರಿ 17ರಂದು ವಿಚಾರಣೆ ಪೂರ್ಣಗೊಳಿಸಿದ್ದ ಕೋರ್ಟ್ ಇಂದಿಗೆ ತೀರ್ಪು ಕಾಯ್ದಿರಿಸಿತ್ತು.

ಪೋಕ್ಸೋ ಪ್ರಕರಣವನ್ನು ರದ್ದು ಮಾಡಲು ನಿರಾಕರಿಸಿರುವ ಧಾರವಾಡ ಹೈಕೋರ್ಟ್, ಯಡಿಯೂರಪ್ಪ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ ಎಂದು ಮಾತ್ರ ಸೂಚಿಸಿದೆ.

ಬಿ ಎಸ್ ವೈಗೆ‌ ತಾತ್ಕಾಲಿಕ ರಿಲೀಫ್ Read More

ಪೋಕ್ಸೋ ಪ್ರಕರಣ; ಅಪರಾಧಿಗೆ ಗಲ್ಲು ಶಿಕ್ಷೆ

ಬೆಳಗಾವಿ: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಪೋಕ್ಸೊ ಪ್ರಕರಣದಲ್ಲಿ ಬೆಳಗಾವಿಯಲ್ಲಿ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ.

ಏಳು ವರ್ಷದ ಹಿಂದೆ ಬೆಳಗಾವಿ ಜಿಲ್ಲೆ ಹಾರೂಗೇರಿಯ 3 ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಮಾಡಿ ಹತ್ಯೆಗೈದಿದ್ದ ಪ್ರಕರಣಲ್ಲಿ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ.

21.9.2017 ರಂದು ಸುಧಾ ಅಪ್ಪಾಸಾಬ ಸನ್ನಕ್ಕಿನವರ ಎಂಬವರು ತನ್ನ 3 ವರ್ಷದ ಮಗಳ ಅಪಹರಣ ಕುರಿತು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

21-09-2017 ರಂದು ಉದ್ದಪ್ಪ ರಾಮಪ್ಪ ಗಾಣಿಗೇರ (32) ಎಂಬಾತ ನಮ್ಮ ಮನೆಯ ಮುಂದೆ ಮಗಳನ್ನು ಅಪಹರಣ ಮಾಡಿದ್ದ ಎಂದು ದೂರು ನೀಡಿದ್ದರು.

ಹಾರೂಗೇರಿ ಪೊಲೀಸ್ ಠಾಣೆ‌ಯ
ಪಿಎಸ್‌ಐ ದೂರು ಸ್ವೀಕರಿಸಿಕೊಂಡು ತನಿಖೆ ಕೈಕೊಂಡಿದ್ದರು.

ಉದ್ದಪ್ಪ ರಾಮಪ್ಪ ಗಾಣಿಗೇರ ಮೂರು ವರ್ಷದ ಮಗುವನ್ನು ಅಪಹರಿಸಿ ಕುರಬಗೋಡಿಯಲ್ಲಿರುವ ಭೀಮಪ್ಪ ನೇಮಣ್ಣ ನಾಗನೂರ ಅವರ ಕಬ್ಬಿನ ಗದ್ದೆಯಲ್ಲಿ ಅತ್ಯಾಚಾರ ಎಸಗಿ ನಂತರ ಕೊಲೆ ಮಾಡಿ ಸಾಕ್ಷಿ ನಾಶಪಡಿಸುವ ಉದ್ದೇಶದಿಂದ ಮುಖದಿಂದ ಸೊಂಟದವರೆಗೆ ಮಣ್ಣು ಮುಚ್ಚಿಬಿಟ್ಟಿದ್ದ.

ತನಿಖಾಧಿಕಾರಿಯಾದ ಸಿಪಿಐ ಸುರೇಶ. ಪಿ. ಶಿಂಗಿ ಉದ್ದಪ್ಪ ಅವರು ರಾಮಪ್ಪ ಗಾಣಿಗೇರ ವಿರುದ್ಧ 8.12.2017 ರಂದು ದೋಷಾರೋಪಣ ಪಟ್ಟಿ ಸಿದ್ದಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪೋಕ್ಸೋ ಕಾಯ್ದೆಯಡಿ ಪ್ರಕರಣವನ್ನು ಬೆಳಗಾವಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ಕೈಕೊಂಡು ಪ್ರಕರಣದ ಬಗ್ಗೆ ಸರ್ಕಾರಿ ಅಭಿಯೋಜಕ
ಎಲ್. ಬಿ. ಪಾಟೀಲ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

ಉದ್ದಪ್ಪ ರಾಮಪ್ಪ ಗಾಣಿಗೇರ ಅಪರಾಧಿ ಎಂಬುದು ಸಾಬೀತಾದ ಹಿನ್ನೆಲೆಯಲ್ಲಿ
ನ್ಯಾಯಾಲಯವು ಆತನಿಗೆ ಗಲ್ಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಪೋಕ್ಸೋ ಪ್ರಕರಣ; ಅಪರಾಧಿಗೆ ಗಲ್ಲು ಶಿಕ್ಷೆ Read More