ಶ್ರೀ ಪವಿತ್ರ ಅವರಿಗೆ ಪಿಎಚ್‌ಡಿ ಪದವಿ

ಮೈಸೂರು: ಬೆಂಗಳೂರಿನ ಕ್ರೈಸ್ಟ್ ಡೀಮ್ಡ್ ವಿಶ್ವವಿದ್ಯಾಲಯವು ಶ್ರೀಪವಿತ್ರ ಸಿ ಕೆ ಅವರಿಗೆ
ಕಂಪ್ಯೂಟರ್ ಸೈನ್ಸ್‌ನಲ್ಲಿ ಪಿಎಚ್‌ಡಿ ಪದವಿ ನೀಡಿದೆ.

ಬೆಂಗಳೂರಿನ ಕ್ರೈಸ್ಟ್ ಡೀಮ್ಡ್ ಯೂನಿವರ್ಸಿಟಿ ಕಂಪ್ಯೂಟರ್ ಸೈನ್ಸ್‌ ಅಸೋಸಿಯೇಟ್ ಪ್ರೊ. ಡಾ. ಕಿರುಬಾನಂದ್ ವಿ ಬಿ ಅವರ ಮಾರ್ಗದರ್ಶನದಲ್ಲಿ ಶ್ರೀಪವಿತ್ರ ಅವರು ಸಲ್ಲಿಸಲಾಗಿದ್ದ “ಡೈನಾಮಿಕ್ ಶೆಡ್ಯೂಲಿಂಗ್ ಆಫ್ ಬಜೆಟ್-ಕನ್ಸ್‌ಟ್ರೈನ್ಡ್ ವರ್ಕ್‌ಫ್ಲೋಸ್ ಇನ್ ದಿ ಕ್ಲೌಡ್ ಎನ್ವಿರಾನ್‌ಮೆಂಟ್ ವಿತ್ ಇಂಪ್ರೂವ್ಡ್ ರಿಸೋರ್ಸ್ ಯುಟಿಲೈಸೇಶನ್ ಅಂಡ್ ಎನರ್ಜಿ ಎಫಿಷಿಯೆನ್ಸಿ ಎಂಬ ಪ್ರಬಂಧಕ್ಕಾಗಿ ಪಿಎಚ್‌ಡಿ ಪದವಿ ನೀಡಲಾಗಿದೆ‌

ಶ್ರೀಪವಿತ್ರ ಸಿ ಕೆ ಅವರು ಮೈಸೂರಿನ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಶ್ರೀ ಪವಿತ್ರ ಅವರಿಗೆ ಪಿಎಚ್‌ಡಿ ಪದವಿ Read More

ಪಿ ಎಚ್ ಡಿ ಪದವಿ ಪಡೆದ ಹೇಮನಂದೀಶ್: ಬಿಜೆಪಿಯಿಂದ ಅಭಿನಂದನೆ

ಮೈಸೂರು: ಬಿಜೆಪಿ ನಗರ ಉಪಾಧ್ಯಕ್ಷರಾದ ಹೇಮಾ ನಂದೀಶ್ ಅವರು ಮೈಸೂರು ವಿಶ್ವವಿದ್ಯಾಲಯದ ಪಿ ಎಚ್ ಡಿ ಪದವಿ ಪಡೆದಿದ್ದು, ಬಿಜೆಪಿ ಮುಖಂಡರು ಅಭಿನಂದಿಸಿದರು.

ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಮೈಸೂರು ನಗರ ಬಿಜೆಪಿ ವತಿಯಿಂದ ಹೇಮಾ ನಂದೀಶ್‌ ಅವರಿಗೆ ಮೈಸೂರು ಪೇಟ ತೊಡಿಸಿ,ಶಾಲು ಹೊದಿಸಿ ಹಾರ ಹಾಕಿ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಮೈಸೂರು ಕೊಡಗು ಸಂಸದರಾದ ಯದುವೀರ್ ಒಡೆಯರ್,
ಬಿಜೆಪಿ ನಗರ ಅಧ್ಯಕ್ಷ ನಾಗೇಂದ್ರ,ಜಿಲ್ಲಾಧ್ಯಕ್ಷ ಎಲ್ ಆರ್ ಮಹದೇವಸ್ವಾಮಿ,ಮಾಜಿ ಮಹಾಪೌರರಾದ ಸಂದೇಶ ಸ್ವಾಮಿ,ಬಿಜೆಪಿ ಮುಖಂಡರಾದ ಎನ್. ವಿ.ಪಣೀಶ್, ಎಸ್ ಸಿ ಮೋರ್ಚಾ ಅಧ್ಯಕ್ಷ ಶೈಲೇಂದ್ರ, ನಗರ ಪ್ರಧಾನ ಕಾರ್ಯದರ್ಶಿ ಬಿ ಎಂ ರಘು, ಕೇಬಲ್ ಮಹೇಶ್, ಎಚ್ ಜಿ ಗಿರಿಧರ್ ಮತ್ತಿತರರು ಶುಭ ಕೋರಿದರು.

ಪಿ ಎಚ್ ಡಿ ಪದವಿ ಪಡೆದ ಹೇಮನಂದೀಶ್: ಬಿಜೆಪಿಯಿಂದ ಅಭಿನಂದನೆ Read More