ಪಂಚಾಯತ್ ಗ್ರಾಮ ಅಭಿವೃದ್ಧಿ ಮತ್ತು ರೈತರ ಸೇವಾ ಸಮಿತಿ 5 ನೆ ವಾರ್ಷಿಕೋತ್ಸವ

ಮೈಸೂರು: ಪಂಚಾಯತ್ ಗ್ರಾಮ ಅಭಿವೃದ್ಧಿ ಮತ್ತು ರೈತರ ಸೇವಾ ಸಮಿತಿಯ ಐದನೆ ವಾರ್ಷಿಕೋತ್ಸವ ಹಾಗೂ ನೇಮಕಾತಿ ಪತ್ರ ವಿತರಣಾ ಸಮಾರಂಭ ಯಶಸ್ವಿಯಾಗಿ ನೆರವೇರಿತು.

ಪಿ ಜಿ ಆರ್ ಎಸ್ ಎಸ್ ಸಂಸ್ಥೆಯ ಐದನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಮಾಜಸೇವಕಿ ಹಾಗೂ ಕೆ ಪಿ ಸಿ ಸಿ ಪ್ರದಾನ ಕಾರ್ಯದರ್ಶಿ ಕಮಲ ಮುಖ್ಯ ಅತಿಥಿಗಳಾಗಿ ಬಾಗವಹಿಸಿದ್ದರು.

ಈ ವೇಳೆ ಮಾತನಾಡಿದ ಕಮಲ ಅವರು, ಸಂಸ್ಥೆಯು 5 ನೆ ವರ್ಷಕ್ಕೆ ಕಾಲಿಡುತ್ತಿರುವುದು ಸಂತೋಷದ ಸಂಗತಿ. ಈ ಸಂಸ್ಥೆಯು ಇನ್ನೂ ಎತ್ತರಕ್ಕೆ ಬೆಳೆಯಲಿ ರಾಜ್ಯಮಟ್ಟದಲ್ಲಿ ಹೆಸರನ್ನು ಸಂಪಾದಿಸಲಿ ಮತ್ತು ರಾಜ್ಯದ ಜನರಿಗೆ ಸಹಾಯವಾಗಲಿ ಎಂದು ಹಾರೈಸಿದರು.

ಬೆಳಗಾವಿ ಜಿಲ್ಲೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವೈ ಎಲ್ ಚೌಧರಿ ಅವರು ಮಾತನಾಡಿ, ಪಿ ಜಿ ಆರ್ ಎಸ್ ಎಸ್ ಸಂಸ್ಥೆಯ ಔಚಿತ್ಯವು ಬೆಳಗಾವಿ ಹಾಗೂ ಬಾಗಲಕೋಟ ಜಿಲ್ಲೆಯಲ್ಲೂ ಪ್ರಸ್ತುತವಿದೆ ಎಂದು ಹೇಳಿದರು.

ಸಂಸ್ಥೆಯ ಉಪಾಧ್ಯಕ್ಷ ಸತೀಶ್ ಅವರು ಸಂಸ್ಥೆಯ ಚರಿತ್ರೆಯ ಬಗ್ಗೆ ತಿಳಿಸಿದರು.

ಸಂಸ್ಥೆಯ ಸಂಸ್ಥಾಪನಾ ಅಧ್ಯಕ್ಷ‌‌ ಯಾದವ ಹರೀಶ್ ಮಾತನಾಡಿ, ಇಂದಿನ ಕಾಲದಲ್ಲಿ ಸಂಸ್ಥೆಯನ್ನು ನಡೆಸಲು ಬಹಳ ಕಷ್ಟ ಆದರೆ ಹಲವಾರು ಸಮಸ್ಯೆ ಸವಾಲುಗಳ ನಡುವೆಯೂ ಸಂಸ್ಥೆಯು ಬೆಳೆಯುತ್ತಿದೆ ಎಂದು ತಿಳಿಸಿದರು.

ಮನುಗನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಜಯಕುಮಾರ್,ಕಾರ್ಯದರ್ಶಿ
ವಿ ರವೀಂದ್ರ, ಅಧ್ಯಕ್ಷರಾದ ರಾಜೇಶ್ವರಿ, ರಾಜ್ಯ ಸಂಚಾಲಕ ರಕ್ತದಾನಿ ಮಂಜು, ಸಹ ಕಾರ್ಯದರ್ಶಿ.ಪಲ್ಲವಿ ಹೆಚ್, ಗೌರವ ಅಧ್ಯಕ್ಷೆ.ಎ ಆರ್ ಸವಿತ, ರಾಜ್ಯ ಖಜಾಂಚಿ ಮಂಜುಳಾ ಎಸ್, ಬಾಗಲಕೋಟೆ ಜಿಲ್ಲೆ,ಸಂಘಟನಾ ಕಾರ್ಯದರ್ಶಿ
ವೀರೇಂದ್ರ ಸದಲಗಿ, ಚೈತ್ರ, ನೇತ್ರಾವತಿ, ಹರಣಿ, ಹರ್ಷ ಮತ್ತಿತರರು ಬಾಗವಹಿಸಿದ್ದರು.

ಪಂಚಾಯತ್ ಗ್ರಾಮ ಅಭಿವೃದ್ಧಿ ಮತ್ತು ರೈತರ ಸೇವಾ ಸಮಿತಿ 5 ನೆ ವಾರ್ಷಿಕೋತ್ಸವ Read More