ಪಿ ಜಿ ಆರ್ ಎಸ್ ಎಸ್ ಬೃಂದಾವನದಲ್ಲಿಬಿ ಇ ವಿದ್ಯಾರ್ಥಿ ಜನ್ಮದಿನ ಆಚರಣೆ

ಮೈಸೂರು: ಪಿ ಜಿ ಆರ್ ಎಸ್ ಎಸ್ ನಿರಾಶ್ರಿತರು ಮತ್ತು ವೃದ್ಧರ ಬೃಂದಾವನದಲ್ಲಿ ಬಿ ಇ ವಿದ್ಯಾರ್ಥಿ ಪ್ರನವೀಹ ಜಿ ಪಿ ಅವರು ತಮ್ಮ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡರು.

ಅವರು ಭಾನುವಾರ ಪಿ ಜಿ ಆರ್ ಎಸ್ ಎಸ್ ನಿರಾಶ್ರಿತರು ಮತ್ತು ವೃದ್ಧರ ಬೃಂದಾವನಕ್ಕೆ
ಬೇಟಿ ನೀಡಿ ಜನುಮದಿನ ಆಚರಿಸಿಕೊಂಡರು.

ಜತೆಗೆ ಎಲ್ಲಾ ಹಿರಿಯರಿಗೂ ಊಟದ ವ್ಯವಸ್ಥೆ ಮಾಡಿ ಅವರ ಜೊತೆ ಸಂತಸದಿಂದ ಕಾಲ ಕಳೆದರು.

ಈ ವೇಳೆ ಪ್ರನವೀಹ ಜಿ ಪಿ ಅವರಿಗೆ ಪಿ ಜಿ ಆರ್ ಎಸ್ ಎಸ್ ನಿರಾಶ್ರಿತರು ಮತ್ತು ವೃದ್ಧರ ಬೃಂದಾವನದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ನಿರ್ದೇಶಕರು ಶುಭ ಕೋರಿದರು.

ಈ ಸಂದರ್ಬದಲ್ಲಿ ಸಂಸ್ಥೆಯ ಖಜಂಚಿ ಮಂಜುಳಾ,ಸಹನಾ‌ ಎಂ,ಅಕ್ಷಯ ಟಿ.ಎಂ,ಲೋಚನ ಎಂ,ಗೌತಮ್ ಟಿ ಎಂ ಮತ್ತಿತರರು ಹಾಜರಿದ್ದರು.

ಪಿ ಜಿ ಆರ್ ಎಸ್ ಎಸ್ ಬೃಂದಾವನದಲ್ಲಿಬಿ ಇ ವಿದ್ಯಾರ್ಥಿ ಜನ್ಮದಿನ ಆಚರಣೆ Read More

ಪಿ ಜಿ ಆರ್ ಎಸ್ ಎಸ್ ಆಶ್ರಮಕ್ಕೆ ಕೃಷಿ ತಜ್ಞ ಜೋಸೆಫ್ ಲೋಬೊ ಭೇಟಿ

ಮೈಸೂರು: ಪಿ ಜಿ ಆರ್ ಎಸ್ ಎಸ್ ನಿರಾಶ್ರಿತರು ಮತ್ತು ವೃದ್ಧರ ಆಶ್ರಮಕ್ಕೆ ಉಡುಪಿ ಜಿಲ್ಲೆಯ ಶಂಕರಪುರ ಗ್ರಾಮದ ಕೃಷಿ ತಜ್ಞರಾದ ಜೋಸೆಫ್ ಲೋಬೊ ಮತ್ತಿತರರು ಭೇಟಿ ನೀಡಿ ತಾಯಂದಿರ ಯೋಗಕ್ಷೇಮ ವಿಚಾರಿಸಿದರು.

ಜೋಸೆಫ್ ಲೋಬೊ ಅವರ ಪತ್ನಿ, ಒಂದು ಹೆಜ್ಜೆ ರಕ್ತದಾನಿ ಬಳಗ ಉಡುಪಿ ಜಿಲ್ಲೆ ಅಧ್ಯಕ್ಷರಾದ ರಕ್ತದಾನಿ ನೀಮಾ ಲೋಬೊ ಹಾಗೂ ಅವರ ಪುತ್ರಿ ದೇನಿಷಾ ಲೋಬೊ ಆಶ್ರಮಕ್ಕೆ ಭೇಟಿಕೊಟ್ಟು ತಾಯಂದಿರನ್ನು ಮಾತನಾಡಿಸಿ, ಅವರಿಗೆ ಬಟ್ಟೆ ಮತ್ತು ಅಕ್ಕಿಯನ್ನು ವಿತರಣೆ ಮಾಡುವ ಮುಖಾಂತರ ಶುಭ ಕೋರಿದರು.

ಪಂಚಾಯಿತಿ ಗ್ರಾಮೀಣಾಭಿವೃದ್ಧಿ ರೈತರ ಸೇವಾ ಸಮಿತಿ ಹಾಗೂ ನಿರಾಶ್ರಿತರು ಮತ್ತು ವೃದ್ಧರ ಬೃಂದಾವನದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಆಶ್ರಮವಾಸಿಗಳು ಲೋಬೋ ಕುಟುಂಬಕ್ಕೆ ಚಾಮುಂಡೇಶ್ವರಿ ತಾಯಿಯ ಆಶೀರ್ವಾದ ಸದಾ ಕಾಲ ಇರಲಿ ಎಂದು ಹಾರೈಸಿ, ಧನ್ಯವಾದ ಸಲ್ಲಿಸಿದರು.

ಪಿ ಜಿ ಆರ್ ಎಸ್ ಎಸ್ ಆಶ್ರಮಕ್ಕೆ ಕೃಷಿ ತಜ್ಞ ಜೋಸೆಫ್ ಲೋಬೊ ಭೇಟಿ Read More

ಶಿಕ್ಷಕರಿಗೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಉತ್ತಮ ಶಿಕ್ಷಣ ರತ್ನ ಪ್ರಶಸ್ತಿ ಪ್ರದಾನ

ಮೈಸೂರು: ಶಿಕ್ಷಕರ ದಿನಾಚರಣೆ ಅಂಗವಾಗಿ ಮೈಸೂರಿನ ಹೆಬ್ಬಾಳ ಸಂಕ್ರಾಂತಿ ವೃತ್ತದ ಲ್ಲಿರುವ EURO KIDS ಶಾಲೆಯಲ್ಲಿ ಪಂಚಾಯತ್ ಗ್ರಾಮೀಣ ಅಭಿವೃದ್ಧಿ ರೈತರ ಸೇವಾ ಸಮಿತಿ ವತಿಯಿಂದ ಶಿಕ್ಷಕರಿಗೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಉತ್ತಮ ಶಿಕ್ಷಣ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಹಿರಿಯ ಶಿಕ್ಷಕರಿಗೆ ಸಂಸ್ಥೆಯ ವತಿಯಿಂದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಉತ್ತಮ ಶಿಕ್ಷಣ ರತ್ನ ಪ್ರಶಸ್ತಿ 2025 ಪ್ರಶಸ್ತಿ ಪತ್ರವನ್ನು ವಿತರಿಸಿ ಗೌರವಿಸಲಾಯಿತು.

ಪಂಚಾಯತ್‌ ಗ್ರಾಮಾಭಿವೃದ್ಧಿ ಮತ್ತು ರೈತರ ಸೇವಾ ಸಮಿತಿ ಅಧ್ಯಕ್ಷ ಯಾದವ ಹರೀಶ್‌ ಹೆಚ್‌ ಎ , ಕಾರ್ಯದರ್ಶಿ ಪಲ್ಲವಿ ಹೆಚ್‌, ಸಂಚಾಲಕ ರಕ್ತದಾನಿ ಮಂಜು, ಸಂಘಟನಾ ಕಾರ್ಯದರ್ಶಿ ಚೈತ್ರಾ ಹೆಚ್‌ ಆರ್‌ ಗೌಡ, ಗೌರವಾಧ್ಯಕ್ಷೆ ಸವಿತಾ ಎ ಆರ್‌, ಮತ್ತು ಸಹಯೋಜಕರಾದ ಪಲ್ಲವಿ ಮತ್ತು EURO KIDS ಶಾಲೆಯ ಮುಖ್ಯಸ್ಥೆ ಅಂಬಿಕಾ, ಶಾಲೆಯ ಸಿಇಒ ಆಶಿಕಾ ಹಾಗೂ ಎಲ್ಲಾ ಹಿರಿಯ ಶಿಕ್ಷಕರು ಪಾಲ್ಗೊಂಡಿದ್ದರು.

ಶಿಕ್ಷಕರಿಗೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಉತ್ತಮ ಶಿಕ್ಷಣ ರತ್ನ ಪ್ರಶಸ್ತಿ ಪ್ರದಾನ Read More

ಆಶ್ರಮದ ಹಿರಿಯ ನಾಗರೀಕರ ಜತೆ ಹುಟ್ಟುಹಬ್ಬ

ಮೈಸೂರು: ಉದ್ದೇಶಿತ ಗ್ರಾಮ ಸಮೃದ್ಧಿ ಕ್ರೆಡಿಟ್ ಕೋ ಆಪರೇಟಿವ್ ಸಂಸ್ಥೆಯ ಪ್ರವರ್ತಕರಾದ ನೇತ್ರಾವತಿ ಅವರು ನೇತ್ರಾವತಿ ಅವರು ಜನ್ಮ ದಿನಾಚರಣೆಯನ್ನು ಆಶ್ರಮದ ಹಿರಿಯ ನಾಗರೀಕರ ಜತೆ ಆಚರಿಸಿ ಕೊಂಡರು.

ಈ ವೇಳೆ ಪಿಜಿಆರ್‌ಎಸ್‌ಎಸ್‌ ಗೌರವಾಧ್ಯಕ್ಷರಾದ ಸವಿತಾ,ರಾಜ್ಯ ಸಂಚಾಲಕರಾದ ರಕ್ತದಾನಿ ಮಂಜು,ರೇಣುಕಮ್ಮ, ಹರಿಣಿ ಬಿ, ನಗರಸಭೆ ಸಮುದಾಯ ಸಂಚಾಲಕರು ಮತ್ತು ಎಲ್ಲಾ ಹಿರಿಯ ತಾಯಂದಿರು ಹಾಜರಿದ್ದು ನೇತ್ರಾವತಿ ಅವರಿಗೆ ಜನುಮದಿನದ ಶುಭ ಕೋರಿದರು.

ಆಶ್ರಮದ ಹಿರಿಯ ನಾಗರೀಕರ ಜತೆ ಹುಟ್ಟುಹಬ್ಬ Read More

ಸರ್ಕಾರಿ ಯೋಜನೆಗಳ ಅನುಷ್ಠಾನ:ಡಿಸಿಗೆಪಿ ಜಿ‌ ಆರ್ ಎಸ್ ಎಸ್ ನಿಂದ ಪ್ರಸ್ತಾವನೆ

ಮೈಸೂರು: ಮೈಸೂರಿನ ಪಂಚಾಯತ್ ಗ್ರಾಮೀಣಾಭಿವೃದ್ಧಿ ರೈತರ ಸೇವಾ ಸಮಿತಿ ಸಂಸ್ಥೆ ವತಿಯಿಂದ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಅವರನ್ನು ಭೇಟಿ ಮಾಡಲಾಯಿತು.

ಈ ವೇಳೆ ಜಿಲ್ಲಾಧಿಕಾರಿಗಳಿಗೆ ಸಂಸ್ಥೆಯ ಕಾರ್ಯಗಳನ್ನು ವಿವರಿಸಿ ಸರ್ಕಾರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಪ್ರಸ್ತಾವನೆ ಸಲ್ಲಿಸಲಾಯಿತು.

ಯೋಗ ನರಸಿಂಹ ಸ್ವಾಮಿ ದೇವಸ್ಥಾನದ ಆಡಳಿತಾಧಿಕಾರಿ ಶ್ರೀ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಪಿ ಜಿ ಆರ್ ಎಸ್ ಎಸ್ ಅಧ್ಯಕ್ಷ ಯಾದವ್ ಹರೀಶ್, ಕಾರ್ಯದರ್ಶಿ ರವೀಂದ್ರ, ಸಂಘಟನಾ ಕಾರ್ಯದರ್ಶಿ ಝಾನ್ಸಿ ರಾಣಿ, ರಾಜ್ಯ ಸಂಚಾಲಕ ರಕ್ತದಾನಿ ಮಂಜು ಅವರು ಜಿಲ್ಲಾಧಿಕಾರಿ ಗಳಿಗೆ ಪ್ರಸ್ತಾವನೆ ಸಲ್ಲಿಸಿದರು.

ಸರ್ಕಾರಿ ಯೋಜನೆಗಳ ಅನುಷ್ಠಾನ:ಡಿಸಿಗೆಪಿ ಜಿ‌ ಆರ್ ಎಸ್ ಎಸ್ ನಿಂದ ಪ್ರಸ್ತಾವನೆ Read More

ಸರ್ಕಾರಗಳು ಮಾಡುವ ಕೆಲಸವನ್ನು ಸಂಸ್ಥೆಗಳು ಮಾಡುತ್ತಿವೆ: ಶ್ರೀ ಶ್ರೀನಿವಾಸ್

ಮೈಸೂರು: ಸಂಸ್ಥೆಗಳು ಕೂಡಾ ಸರ್ಕಾರಗಳು ಮಾಡುವ ಕೆಲಸವನ್ನು ಮಾಡುತ್ತಿವೆ ಎಂದು
ಯೋಗ ನರಸಿಂಹಸ್ವಾಮಿ ದೇವಸ್ಥಾನದ ಆಡಳಿತಾಧಿಕಾರಿ ಶ್ರೀ ಶ್ರೀನಿವಾಸ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ ಪಿ.ಜಿ.ಆರ್.ಎಸ್.ಎಸ್. ಸಂಸ್ಥೆಯು ತನ್ನದೇ ಆದ ರೀತಿಯಲ್ಲಿ ಕಾರ್ಯವನ್ನು ನಿರ್ವಹಿಸುತ್ತಿದೆ. ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ನೀಡುತ್ತಲ್ಲಿರುವುದು ಸ್ತ್ಯುತ್ಯ್ರರ್ಹ” ಎಂದು ಯೋಗ ನರಸಿಂಹಸ್ವಾಮಿ ದೇವಸ್ಥಾನದ ಆಡಳಿತ ಅಧಿಕಾರಿಯಾದ ಶ್ರೀ ಶ್ರೀನಿವಾಸ್ ರವರು ತಿಳಿಸಿದರು.

ಹೂಟಗಳ್ಳಿಯಲ್ಲಿ ಪಿ.ಜಿ.ಅರ್.ಎಸ್.ಎಸ್. ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಎರಡನೆ ಆಷಾಡ ಶುಕ್ರವಾರದ ಚಾಮುಂಡೇಶ್ವರಿ ದೇವಿಯ ಪೂಜಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮೈಸೂರಿನಲ್ಲಿ ಪಿ.ಜಿ.ಆರ್.ಎಸ್.ಎಸ್. ಸಂಸ್ಥೆಯು ತನ್ನದೇ ಆದ ರೀತಿಯಲ್ಲಿ ಕಾರ್ಯವನ್ನು ನಿರ್ವಹಿಸುತ್ತಿದೆ. ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ನೀಡುತ್ತಿವುದು ಸ್ತ್ಯುತ್ಯ್ರಾರ್ಹ ಎಂದು ತಿಳಿಸಿದರು.

ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹರೀಶ ಯಾದವ್ ಮಾತನಾಡಿ,
ಪಿ.ಜಿ.ಆರ್.ಎಸ್. ಎಸ್. ಸಂಸ್ಥೆಯು ಕಳೆದ ನಾಲ್ಕು ವರ್ಷಗಳಿಂದ ಮೈಸೂರು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಸಮಾಜಮುಖಿಯಾಗಿ ಕಾರ್ಯವನ್ನು ನಿರ್ವಹಿಸುತ್ತಲ್ಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿ. ರವೀಂದ್ರ ಪ್ರಧಾನ ಕಾರ್ಯದರ್ಶಿ, ಸತೀಶ್ ಉಪಾಧ್ಯಕ್ಷರು, ಎ.ಸವಿತ ಗೌರವಾಧ್ಯಕ್ಷರು,. ಪಲ್ಲವಿ, ಸಹ ಕಾರ್ಯದರ್ಶಿ, ರಾಜ್ಯ ಸಂಚಾಲಕರು ರಕ್ತದಾನಿ ಮಂಜು, ಝನ್ಸಿರಾಣಿ, ಸಂಘಟನಾ ಕಾರ್ಯದರ್ಶಿ ಮತ್ತು ಮಂಜುಳಾ ಖಜಾಂಜಿ ಹಾಗೂ ಪತ್ರಕರ್ತ ಮನೋಹರ್ ಮತ್ತು ಸಾರ್ವಜನಿಕರು ಭಾಗವನಸಿದ್ದರು.

ಸರ್ಕಾರಗಳು ಮಾಡುವ ಕೆಲಸವನ್ನು ಸಂಸ್ಥೆಗಳು ಮಾಡುತ್ತಿವೆ: ಶ್ರೀ ಶ್ರೀನಿವಾಸ್ Read More

ಹೃದಯ ಸಂಬಂದಿ ಆರೋಗ್ಯದ ಬಗ್ಗೆ ಶಿಬಿರ

ಮೈಸೂರು: ಮೈಸೂರಿನ
ಪಿ ಜಿ ಆರ್ ಎಸ್ ಎಸ್ ಸಂಸ್ಥೆ, ಪೂಜಾಬಾಗವತ್ ಸ್ನಾತಕೋತ್ತರ ಕೇಂದ್ರ ಹಾಗೂ ನಾರಾಯಣ ಆಸ್ಪತ್ರೆ ಸಹಯೋಗದಲ್ಲಿ ಹೃದಯ ಸಂಬಂದಿ ಆರೋಗ್ಯದ ಬಗ್ಗೆ ಶಿಬಿರ ಹಮ್ಮಿಕೊಳ್ಳಲಾಯಿತು.

ಹೃದಯ ಕಾಯಿಲೆಗಳು ಹಾಗೂ ಹೃದಯದ ಆರೋಗ್ಯದ ಬಗ್ಗೆ ಯುವಕ ಯುವತಿಯರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಪೂಜಾಬಾಗವತ್ ಸ್ನಾತಕೋತ್ತರ ಕೇಂದ್ರದಲ್ಲಿ ಶುಕ್ರವಾರ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮವನ್ನು ಗಿಡಗಳಿಗೆ ನೀರುಣಿಸುವ ಮುಖಾಂತರ ಉದ್ಘಾಟಿಸಲಾಯಿತು.

ಕಾರ್ಯಕ್ರಮವನ್ನು , ಪಿ ಜಿ ಆರ್ ಎಸ್ ಎಸ್ ಸಂಸ್ಥೆಯ ರಾಜ್ಯಾಧ್ಯಕ್ಷ ಯಾದವ ಹರೀಶ ಹೆಚ್ ಎ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು,ಇಂತಹ ಶಿಬಿರ ಗಳನ್ನು ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ವಿ ರವೀಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಕ್ತದಾನಿ ಮಂಜು ರಕ್ತದಾನದ ಬಗ್ಗೆ ಅರಿವು ಮೂಡಿಸಿದರು.

ಕಾರ್ಯಕ್ರಮದಲ್ಲಿ ನಾರಾಯಣ ಆಸ್ಪತ್ರೆಯ
ಡಾ. ಗುಲ್ಜಾರ್, ಸಮಾಜಶಾಸ್ತ್ರ ವಿಭಾಗದ ಡಾ. ಭಾವನಾ ಮತ್ತಿತರರು ಪಾಲ್ಗೊಂಡಿದ್ದರು.

ಹೃದಯ ಸಂಬಂದಿ ಆರೋಗ್ಯದ ಬಗ್ಗೆ ಶಿಬಿರ Read More

ಭಾರತ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಪಿ ಜಿ ಆರ್ ಎಸ್ ಎಸ್ ನಿಂದ ಪರಿಸರ ದಿನಾಚರಣೆ

ಮೈಸೂರು: ಪಂಚಾಯತ್ ಗ್ರಾಮ ಅಭಿವೃದ್ಧಿ ಮತ್ತು ರೈತರ ಸೇವಾ ಸಮಿತಿ ಹಾಗೂ ಭಾರತ್ ಕ್ಯಾನ್ಸರ್ ಹಾಸ್ಪಿಟಲ್ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆ ಹಮ್ಮಿಕೊಳ್ಳಲಾಯಿತು.

ಭಾರತ್ ಕ್ಯಾನ್ಸರ್ ಆಸ್ಪತ್ರೆಯ ಆವರಣದಲ್ಲಿ ಸಸಿ ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಪಿ ಜಿ ಆರ್ ಎಸ್ ಎಸ್
ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಯಾದವ ಹರೀಶ್ ಹೆಚ್.ಎ., ಕಾರ್ಯದರ್ಶಿ ರವೀಂದ್ರ ವಿ, ಸಹಕಾರದರ್ಶಿ ಮಂಜುಳಾ ಎಸ್, ಸಂಸ್ಥೆಯ ಸಂಚಾಲಕ ರಕ್ತದಾನಿ ಮಂಜು, ಭಾರತ್ ಕ್ಯಾನ್ಸರ್ ಆಸ್ಪತ್ರೆಯ ಶಿವ ಪ್ರಸಾದ್, ಜನರಲ್ ಮ್ಯಾನೇಜರ್, ಬಿ.ಹೆಚ್. ಐ.ಒ ಮೈಸೂರು ಆನಂದ್, ಮಾರ್ಕೆಟಿಂಗ್ ಮ್ಯಾನೇಜರ್, ಬಿ.ಹೆಚ್.ಐ.ಒ, ಮೈಸೂರು, ರಾಹುಲ್ ದಾಸ್, ತೋಟಗಾರಿಕಾ ಮತ್ತು ಬೇಸಾಯ ತಜ್ಞರು, ಗಾರ್ಡನರ್ ಗಳಾದ ಚೆಲುವರಾಜು, ಧರ್ಮ ನಾಯಕ, ಮಹದೇವ ಅವರುಗಳ ಸಮ್ಮುಖದಲ್ಲಿ ಗಿಡ ನೆಟ್ಟು ನೀರು ಹಾಕಿ ಪರಿಸರ‌ ದಿನಾಚರಣೆ ನೆರವೇರಿಸಲಾಯಿತು.

ಭಾರತ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಪಿ ಜಿ ಆರ್ ಎಸ್ ಎಸ್ ನಿಂದ ಪರಿಸರ ದಿನಾಚರಣೆ Read More