ಕಾರ್ತೀಕ ಶುಕ್ರವಾರ:ದೇವಿ ಪಾರ್ವತಿ,ಮೃತ್ಯುಂಜಯೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ
ಮೈಸೂರು: ಕಾರ್ತೀಕ ಶುಕ್ರವಾರದ ಪ್ರಯುಕ್ತ
ಮೈಸೂರಿನ ಅಗ್ರಹಾರ ಕೆ ಆರ್ ಪೊಲೀಸ್ ಠಾಣೆಗೆ ಹೊಂದಿಕೊಂಡಿರುವ ಶ್ರೀ ನವಗ್ರಹ, ಶ್ರೀ ಮೃತ್ಯುಂಜಯೇಶ್ವರ,ಶ್ರೀ ಪಾರ್ವತಿ ದೇವಾಲಯದಲ್ಲಿ ವಿಶೇಷ ಪೂಜಾಕಾರ್ಯ ನೆರವೇರಿಸಲಾಯಿತು.
ತಾಯಿ ಗುಲಾಬಿ ಮತ್ತು ಕೆಂಪು ಬಣ್ಣದ ಸೀರೆ,ಮಲ್ಲಿಗೆ,ಸೇವಂತಿಗೆ,ಕನಕಾಂಬರ,ಗುಲಾಬಿ ಹೂಗಳಿಂದ ಶೋಭಿತಳಾಗಿದ್ದರೆ,
ಮೃತ್ಯುಂಜಯೇಶ್ವರ ಸ್ವಾಮಿ ಬೆಣ್ಣೆ ಅಲಂಕಾರದಲ್ಲಿ ಶೋಭಿತರಾಗಿದ್ದಾರೆ.
ತಾಯಿಯು ಕೈನಲ್ಲಿ ತ್ರಿಶೂಲ ಹಿಡಿದು ಬೆಳ್ಳಿಯ ಕೈ,ಕಾಲುಗಳಿಂದ ಅಲಂಕೃತಗೊಂಡಿದ್ದಾಳೆ,ಜೊತೆಗೆ ನಿಂಬೆಹಣ್ಣಿನ ಹಾರದಿಂದ ಕಂಗೊಳಿಸುತ್ತಿದ್ದಾಳೆ.
ಮೃತ್ಯುಂಜಯೇಶ್ವರ ಸ್ವಾಮಿಗೆ ಬೆಳ್ಳಿ ಮುಖವಾಡ ಧರಿಸಿ,ಸೇವಂತಿಗೆ ಹೂವಿನ ಹಾರದಿಂದ ಅಲಂಕರಿಸಿ ಪೂಜಿಸಲಾಯಿತು.
ಶಿವಾರ್ಚಕರಾದ ಎಸ್.ಯೋಗಾನಂದ ಅವರು ಪೂಜಾಕಾರ್ಯ ನೆರವೇರಿಸಿದರು.
ಯೋಗಾನಂದ ಅವರ ಪುತ್ರ ಅಭಿನಂದನ್ ಅವರು ತಾಯಿ ಪಾರ್ವತಿ ಮತ್ತು ಮೃತ್ಯುಂಜಯೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ ಮಾಡಿದ್ದು,ಭಕ್ತರ ಮನ ಸೂರೆಗೊಂಡಿತು.
ಕಾರ್ತೀಕ ಶುಕ್ರವಾರ:ದೇವಿ ಪಾರ್ವತಿ,ಮೃತ್ಯುಂಜಯೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ Read More
