ಪಾರಂಪರಿಕ ‌ಕಟ್ಟಡ ಉಳಿವಿಗಾಗಿ ಪಾರಿವಾಳಗಳಿಗೆ ಧಾನ್ಯ ಹಾಕದಂತೆ ಮನವಿ

ಮೈಸೂರು: ಮೈಸೂರು ಅರಮನೆ ಮತ್ತು ಇತರೆ ಐತಿಹಾಸಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಧಾನ್ಯ ಚೆಲ್ಲುವುದನ್ನು ನಿಷೇಧಿಸುವ ಬಗ್ಗೆ ಸಂಘ ಸಂಸ್ಥೆಗಳು ಸಂಸದ ಯದುವೀರ್ ಒಡೆಯರ್ ಮಾತುಕತೆ ನಡೆಸಿ ಮನವಿ ಸಲ್ಲಿಸಿದರು

ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಯದುವೀರ್ ಅವರಿಗೆ ಸಂಘ ಸಂಸ್ಥೆಗಳಾದ ಕ್ಲೀನ್ ಮೈಸೂರು ಫೌಂಡೇಶನ್, ಮೈಸೂರು ಗ್ರಾಹಕರ ಪರಿಷತ್ತು,ಸುರಕ್ಷಾ ಫೌಂಡೇಶನ್, ಮೈಸೂರು ಟ್ರಾವೆಲ್ ಅಸೋಸಿಯೇಷನ್, ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟ, ಗಂಧದಗುಡಿ ಫೌಂಡೇಶನ್, ಅರಣ್ಯ ಔಟ್ರೇಚ್, ವಿಶ್ವ ಹಿಂದೂ ಪರಿಷತ್ ಸಂಘ ಸಂಸ್ಥೆಗಳ ವತಿಯಿಂದ ಮನವಿ ಸಲ್ಲಿಸಲಾಯಿತು.

ಮೈಸೂರು ಅರಮನೆ ಮತ್ತು ಮೈಸೂರಿನ ಇತರೆ ಐತಿಹಾಸಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಧಾನ್ಯ ಚೆಲ್ಲುವುದನ್ನು ನಿಷೇಧಿಸುವ ಕುರಿತು ಮಾನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಯದುವೀರ್ ಸಭೆ ನಡೆಸಿದರು.

ಪಾರಿವಾಳಗಳಿಗೆ ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಪ್ರತಿ ದಿನ ಹೆಲ್ಪಿಂಗ್ ಹ್ಯಾಂಡ್ ಸಂಸ್ಥೆಯವರು ಧಾನ್ಯಗಳನ್ನು ಹಾಕುತಿದ್ದರು.

ಧಾನ್ಯ ಹಾಕುವುದು ಸಹನಭೂತಿಯ ಕ್ರಿಯೆ, ಆದರೆ ಇದರಿಂದ ಪಾರಂಪರಿಕ ಕಟ್ಟಡಗಳಿಗೆ ಹಾನಿ ಉಂಟಾಗುತ್ತಿದೆ,ಆದ್ದರಿಂದ ಇದನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಸಂಘ ಸಂಸ್ಥೆಗಳು ಸಲ್ಲಿಸಿದ ಮನವಿ ಪರಿಶೀಲಿಸಿ, ಕಾನೂನಾತ್ಮಕವಾಗಿ ಪಾರಿವಾಳಗಳಿಗೆ ಆಹಾರ ಪದಾರ್ಥಗಳನ್ನು ಹಾಕುವುದನ್ನು ನಿಷೇಧಿಸಲು ಕ್ರಮ ಕೈಗೊಳ್ಳಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸಂಸದರು ಸೂಚನೆ ನೀಡಿದರು.

ಪಾರಂಪರಿಕ ‌ಕಟ್ಟಡ ಉಳಿವಿಗಾಗಿ ಪಾರಿವಾಳಗಳಿಗೆ ಧಾನ್ಯ ಹಾಕದಂತೆ ಮನವಿ Read More

ಮಾವುತರು,ಕಾವಾಡಿಗರಿಗೆ ಉಪಹಾರ ಬಡಿಸಿದ ಹೆಚ್.ಸಿ.ಮಹದೇವಪ್ಪ

ಮೈಸೂರು: ದಸರಾ ಅಂಗವಾಗಿ ಮಾವುತರು,ಕಾವಾಡಿಗಳಿಗೆ ಜಿಲ್ಲಾಡಳಿತ ಅರಮನೆ ಆವರಣದಲ್ಲಿ ಏರ್ಪಡಿಸಿದ್ದ ಉಪಹಾರದ‌ ವೇಳೆ ಸಚಿವ ಡಾ ಹೆಚ್.ಸಿ.ಮಹದೇವಪ್ಪ ಉಪಹಾರ ಬಡಿಸಿ ಕುಶಲೋಪರಿ‌ ವಿಚಾರಿಸಿದರು.

ಬಳಿಕ ಆನೆಗಳ ಪಾಲನೆ, ಪೋಷಣೆ ಮಾಡುತ್ತಿರುವ ಕಾವಾಡಿಗರು ಹಾಗೂ ಮಾವುತರ ಕಾರ್ಯವನ್ನು ಪ್ರಶಂಸಿಸಿ ಯೋಗಕ್ಷೇಮ ವಿಚಾರಿಸಿ ಅವರುಗಳೊಂದಿಗೇ ಉಪಹಾರ ಸವಿದರು.

ಮಾವುತರು ಹಾಗೂ ಕಾವಾಡಿಗರ ಮಕ್ಕಳಿಗೆ ತಾತ್ಕಾಲಿಕವಾಗಿ ತೆರೆದಿರುವ ಶಾಲೆಗೆ ಚಾಲನೆ ನೀಡಿದರು,ನಂತರ ಮಾವುತ ಮತ್ತು ಕಾವಾಡಿಗರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿದರು.

ಇದೇ ವೇಳೆ ಅರಮನೆ ಆವರಣದಲ್ಲಿ ತೆರೆಯಲಾಗಿರುವ ತಾತ್ಕಾಲಿಕ ಆರೋಗ್ಯ ತಪಾಸಣೆ ಕೇಂದ್ರವನ್ನು ಸಚಿವರು ವೀಕ್ಷಿಸಿದರು.

ಶಾಸಕ ತನ್ವೀರ್ ಸೇಠ್,ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ, ಜಿ ಪಂ ಸಿಇಒ ಕೆ.ಎಂ.ಗಾಯತ್ರಿ, ಮೈಸೂರು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಮತ್ತಿತರರು ಉಪಸ್ಥಿತರಿದ್ದರು.

ಮಾವುತರು,ಕಾವಾಡಿಗರಿಗೆ ಉಪಹಾರ ಬಡಿಸಿದ ಹೆಚ್.ಸಿ.ಮಹದೇವಪ್ಪ Read More

ಊಟದ ವೇಳೆ ಧನಂಜಯನ ಕಿರಿಕ್:ಬೆದರಿ ಓಡಿ ಆತಂಕ ತಂದ ಕಂಜನ್ !

ಮೈಸೂರು: ಆಟ,ಊಟಕ್ಕೆ ಮನುಷ್ಯ ಅಷ್ಟೇ ಅಲ್ಲಾ,ಪ್ರಾಣಿಗಳಲ್ಲೂ ಇದೇ ರೀತಿ ಗಲಾಟೆ ನಡಯುವುದು ಅಚ್ಚರಿ ತಂದಿದೆ.

ಇದು ಏನು ಅಂತೀರ,ದಸರಾ ಗಜಪೆಯ ಆನೆಗಳೂ ಕೂಡಾ ಊಟದ ವೇಳೆ ಜಗಳ ಮಾಡಿ ಕೆಲ ಕಾಲ ಆತಂಕ ಸೃಷ್ಟಿಸಿದವು.

ಮೈಸೂರು ಅರಮನೆ ಆವರಣದಲ್ಲಿರುವ ದಸರಾ ಗಜಪಡೆಯ ಕಂಜನ್ ಹಾಗೂ ಧನಂಜಯ ಆನೆ ನಡುವೆ ಊಟ ಮಾಡುವಾಗ ಗಲಾಟೆ ನಡೆದಿದೆ.‌ಅದು ಏನಾಯಿತೊ ಧನಂಜಯ ಕಂಜನ್ ಮೇಲೆ ಕೋಪಗೊಂಡಿದ್ದ.

ಆಕ್ರೋಶಗೊಂಡ ಧನಂಜಯ ಕಂಜನ್ ಆನೆ‌ ಮೇಲೆ ದಾಳಿಗೆ ಮುಂದಾಗಿ ಅಟ್ಟಿಸಿಕೊಂಡು ಹೋಗಿದೆ. ಇದರಿಂದ ಬೆದರಿದ ಕಂಜನ್ ಮಾವುತನಿಲ್ಲದೆ ಅರಮನೆಯಿಂದ‌ ಆಚೆ ಓಡಿ ಬಂದಿದೆ.

ಆದರೂ ಬಿಡದ ಧನಂಜಯ ಕಂಜನ್ ಆನೆಯನ್ನು ಓಡಿಸಿಕೊಂಡು ಬಂದಿದೆ. ಇದರಿಂದ ಇನ್ನೂ‌ ಗಾಬರಿಗೊಂಡ ಕಂಜನ್ ಬ್ಯಾರಿಕೇಡ್ ತಳ್ಳಿಕೊಂಡು ಹರಗೆ ಓಡಿ ಹೋಗಿದೆ.

ತಕ್ಷಣ ಧನಂಜಯ ಅನೆ ಮೇಲೆ ಇದ್ದ ಮಾವುತ ಧೈರ್ಯ ತೆಗೆದುಕೊಂಡು ಸಮಯಪ್ರಜ್ಞೆ ಮೆರೆದು ಕೋಪಗೊಂಡಿದ್ದ ಧನಂಜಯನನ್ನು ನಿಯಂತ್ರಣಕ್ಕೆ ತಂದು ಸಮಾಧಾನ ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಧನಂಜಯ ಆಟಾಟೋಪ‌ ನಿಂತ ಕೂಡಲೇ ಪಾಪ ಕಂಜನ್ ಆನೆ ಜನರ ಮುಂದೆಯೆ ನಿಂತುಕೊಂಡಿದೆ.

ನಂತರ ಕಂಜನ್ ಬಳಿ ಬಂದ ಮಾವುತ ಅರಮನೆ‌ ಒಳಗೆ ಕರೆ ತಂದಿದ್ದಾನೆ, ಅರಣ್ಯ ಇಲಾಖೆ ಅಧಿಕಾರಿಗಳು, ಮಾವುತರ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದ್ದು,ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಊಟದ ವೇಳೆ ಧನಂಜಯನ ಕಿರಿಕ್:ಬೆದರಿ ಓಡಿ ಆತಂಕ ತಂದ ಕಂಜನ್ ! Read More

ಗಣೇಶ‌ ಹಬ್ಬದಲ್ಲಿ ಗಜಪಡೆಗೆ ವಿಶೇಷ ಪೂಜೆ:21ಬಗೆಯ ಭಕ್ಷ್ಯ ಅರ್ಪಣೆ

ಮೈಸೂರು: ನಾಡಿನೆಲ್ಲೆಡೆ ಗಣೇಶ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದ್ದು,ಇತ್ತ ದಸರಾ ಆನೆಗಳಿಗೂ ವಿಶೇಷ ಪೂಜೆ ನೆರವೇರಿಸಲಾಯಿತು.

ನಾಡಹಬ್ಬ ದಸರಾ ಮಹೋತ್ಸವಕ್ಕಾಗಿ ಮೈಸೂರಿಗೆ ಆಗಮಿಸಿರುವ ಆನೆಗಳಿಗೆ ಅರಮನೆಯ ಆವರಣದಲ್ಲಿ ಪೂಜೆ ಸಲ್ಲಿಸಲಾಯಿತು.

ಜಿಟಿ,ಜಿಟಿ ಮಳೆಯ ನಡುವೆಯೇ
ಆನೆಗಳನ್ನು ಸಾಲಾಗಿ ನಿಲ್ಲಿಸಿ ಪೂಜೆ ನೆರವೇರಿಸಲಾಯಿತು.

ಗಣಪತಿಗೇ ಇಷ್ಟವಾದ ಮೋದಕ, ಬೆಲ್ಲ, ಕಬ್ಬು ಹೀಗೆ 21 ಬಗೆಯ
ಅನೇಕ ಭಕ್ಷ್ಯಗಳನ್ನು ಗಜಪಡೆಗೆ ನೈವೇದ್ಯವಾಗಿ ಅರ್ಪಿಸಲಾಯಿತು.

ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಸಿಸಿಎಫ್ ಮಾಲತಿ ಪ್ರಿಯಾ, ಡಿಸಿಎಫ್ ಡಾ.ಪ್ರಭುಗೌಡ ಸೇರಿದಂತೆ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು. ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಸುಗ್ರೀವ, ಮಹೇಂದ್ರ, ಗೋಪಿ, ಭೀಮ, ಲಕ್ಷ್ಮಿ, ವರಲಕ್ಷ್ಮಿ ಸೇರಿದಂತೆ ಎಲ್ಲ 14 ಆನೆಗಳಿಗೂ ಪೂಜೆ ಸಲ್ಲಿಸಲಾಯಿತು.

ಗಣೇಶ‌ ಹಬ್ಬದಲ್ಲಿ ಗಜಪಡೆಗೆ ವಿಶೇಷ ಪೂಜೆ:21ಬಗೆಯ ಭಕ್ಷ್ಯ ಅರ್ಪಣೆ Read More