ಅರಮನೆ ಆವರಣದಲ್ಲಿ ರಥಸಪ್ತಮಿ ಸಂಭ್ರಮ

ಮೈಸೂರು: ಮೈಸೂರು ಅರಮನೆ ಆವರಣದಲ್ಲಿ ರಥಸಪ್ತಮಿ ಸಂಭ್ರಮ ಮನೆಮಾಡಿದೆ.

7 ದೇವಾಲಯಗಳ ಉತ್ಸಮೂರ್ತಿಗಳ ಸಮಾಗಮವಾಗಿದೆ.ಉತ್ಸವ ಮೂರ್ತಿಗಳ ದರುಶನ ಪಡೆಯಲು ಭಕ್ತರ ದಂಡೇ ಹರಿದು ಬರುತ್ತಿದೆ.

ಮುಂಜಾನೆ 6 ಗಂಟೆಗೆ ಆರಂಭವಾದ ದರುಶನ ಮಧ್ಯಾಹ್ನ 12 ಗಂಟೆ ವರೆಗೂ ಮುಂದುವರೆದಿತ್ತು.

ತ್ರಿನೇಶ್ವರಸ್ವಾಮಿ,ಭುವನೇಶ್ವರಿ,ಗಾಯಿತ್ರಿ,ಲಕ್ಷ್ಮಿರಮಣಸ್ವಾಮಿ,ಪ್ರಸನ್ನಕೃಷ್ಣ,ವರಹ,ಖಿಲೆ ಲಕ್ಷ್ಮಿ ವೆಂಕಟರಮಣಸ್ವಾಮಿ ದೇವಾಲಯದ ಉತ್ಸವಮೂರ್ತಿಗಳನ್ನ ಅಂಬಾವಿಲಾಸ ಅರಮನೆ ಆವರಣದಲ್ಲಿ ಪ್ರತಿಷ್ಠಾಪಿಸಿ ದರುಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಸೂರ್ಯದೇವ ತನ್ನ ಪಥವನ್ನ ಬದಲಾಯಿಸುವ ದಿನವಾದ ಇಂದು ವಿಶೇಷವಾಗಿ ರಥಸಪ್ತಮಿಯನ್ನ ಆಚರಿಸಲಾಗುತ್ತದೆ.

ಈ ಹಿಂದೆ ರಾಜಮಹಾರಾಜರ ಆಡಳಿತದ ಅವಧಿಯಲ್ಲಿ ಅರಮನೆ ಆವರಣದಲ್ಲಿರುವ ಪ್ರಮುಖ ದೇವಾಲಯಗಳ ಉತ್ಸವ ಮೂರ್ತಿಗಳನ್ನ ಒಂದೆಡೆ ಸೇರಿಸಿ ಭಕ್ತರಿಗೆ ದರುಶನ ಪಡೆಯುವ ವ್ಯವಸ್ಥೆ ಮಾಡಿದ್ದರು.ಈ ಸಂಪ್ರದಾಯ ಇಂದಿಗೂ ಮುಂದುವರೆದಿದೆ.

ಅರಮನೆ ಆವರಣದಲ್ಲಿ ರಥಸಪ್ತಮಿ ಸಂಭ್ರಮ Read More

ಶನಿವಾರ ಸಂಜೆಯಿಂದ ಅರಮನೆಯಲ್ಲಿ ಮಾಗಿ ಉತ್ಸವ

ಮೈಸೂರು: ಮೈಸೂರಿನ ಸುಂಧರ ಅರಮನೆಯಲ್ಲಿ ಮಾಗಿ ಉತ್ಸವ ಆರಂಭವಾಗಲಿದೆ.

ಮಾಗಿ ಉತ್ಸವದ ಅಂಗವಾಗಿ ಮೈಸೂರು ಅರಮನೆಯ ಆವರಣದಲ್ಲಿ 11 ದಿನಗಳ ಫಲಪುಷ್ಪ ಪ್ರದರ್ಶನಕ್ಕೆ ಇಂದು ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್ ಸಿ ಮಹದೇವಪ್ಪ ಅವರು ಚಾಲನೆ ನೀಡಲಿದ್ದಾರೆ.

ಹಲವು ವೈಶಿಷ್ಟಗಳೊಂದಿಗೆ ಆಯೋಜಿಸಲಾಗಿರುವ ಮಾಗಿ ಉತ್ಸವದಲ್ಲಿ 25,000 ಹೂವಿನ ಕುಂಡಗಳಲ್ಲಿ ಮೇರಿ ಗೋಲ್ಡ್, ಸಾಲ್ವಿಯ, ಡೇಲಿಯ, ಕೋಲಿಯಸ್, ಸೇವಂತಿಗೆ, ಪಿಟೋನಿಯ ಸಿಲೋಶಿಯ, ಜಿರೇನಿಯಂ, ಕಾಶಿಗೊಂಡೆ ಸೇರಿದಂತೆ 35ಕ್ಕೂ ಹೆಚ್ಚು ವಿವಿಧ ಬಗೆಯ ಹೂವಿನ ಗಿಡಗಳನ್ನು ಬೆಳೆಸಿ ಜೋಡಿಸಲಾಗಿದೆ.

ಅಲಂಕಾರಿಕ ಹೂಗಳಿಂದ ವಿವಿಧ ಆಕೃತಿಗಳನ್ನು ಸಿದ್ಧಗೊಳಿಸಲಾಗಿದೆ.

ಸಾವಿರಾರು ಹೂಗಳಿಂದ ಅಕ್ಷರಧಾಮ ಮಾದರಿಯನ್ನು ಸಿದ್ಧಪಡಿಸಲಾಗಿದೆ. ಮುಮ್ಮಡಿ ಕೃಷ್ಣರಾಜ ಒಡೆಯರ್ ಆಕೃತಿ, ನಂಜುಂಡೇಶ್ವರ ದೇವಾಲಯ, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಬಿಂಬಿಸುವ ಮಾದರಿಯ ಆಕೃತಿಗಳು, ಆನೆ, ಆಮೆ, ರಾಜವಂಶದ ಲಾಂಛನ ಗಂಡಭೇರುಂಡ ಸೇರಿದಂತೆ ಇನ್ನೂ ಹಲವು ಮಾದರಿಗಳನ್ನು ಹೂಗಳಿಂದ ಸಿದ್ಧಪಡಿಸಲಾಗಿದೆಲ್ದು ಮನಸಳೆಯುತ್ತಿವೆ.

ಈ ಫಲಪುಷ್ಪ ಪ್ರದರ್ಶನದಲ್ಲಿ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ಈ ಬಾರಿ ಫಲಪುಷ್ಪ ಪ್ರದರ್ಶನಕ್ಕೆ ಶುಲ್ಕವನ್ನು ನಿಗಧಿ ಗೊಳಿಸಲಾಗಿದ್ದು ಭಾರತೀಯ ಹಾಗೂ ವಿದೇಶ ವಯಸ್ಕರಿಗೆ 30 ರೂ., 10 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶ, ಹತ್ತರಿಂದ ಹದಿನಾರು ವರ್ಷದ ಮಕ್ಕಳಿಗೆ ರೂ. 10 ಪ್ರವೇಶ ದರವನ್ನು ನಿಗಧಿಗೊಳಿಸಲಾಗಿದೆ.

ಶನಿವಾರ ಸಂಜೆಯಿಂದ ಅರಮನೆಯಲ್ಲಿ ಮಾಗಿ ಉತ್ಸವ Read More

ಡಿ.21ರಿಂದ ಅರಮನೆಯಲ್ಲಿ ಫಲಪುಷ್ಪ ಪ್ರದರ್ಶನ;ಸಾಂಸ್ಕೃತಿಕ ಕಾರ್ಯಕ್ರಮ

ಮೈಸೂರು: ವರ್ಷದ ಕೊನೆ ವಾರದಲ್ಲಿ ಮೈಸೂರಿನ ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನ, ವಿವಿಧ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ

ಅರಮನೆ ಮಂಡಳಿ ವತಿಯಿಂದ ಡಿ. 21ರಿಂದ ಡಿ. 31ರ ವರೆಗೆ 11 ದಿನಗಳ ಕಾಲ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ. ಜೊತೆಗೆ ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮುದ ನೀಡಲಿವೆ.

ಡಿ. 21ರ ಸಂಜೆ 5 ಗಂಟೆಗೆ ಫಲಪುಷ್ಪ ಪ್ರದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ.ಮಹದೇವಪ್ಪ ಚಾಲನೆ ನೀಡಲಿದ್ದಾರೆ. ಸಿಎಂ ಸಿದ್ದರಾಮಯ್ಯ, ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಉಪಸ್ಥಿತರಿರುವರು.

ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಬೆಳಿಗ್ಗೆ 10ರಿಂದ ರಾತ್ರಿ 9 ಗಂಟೆವರೆಗೆ ಅವಕಾಶವಿದೆ. ವಯಸ್ಕರು ಹಾಗೂ ವಿದೇಶಿಯರಿಗೆ 30 ರೂ. ಹಾಗೂ 10ರಿಂದ 18 ವರ್ಷದೊಳಗಿನ ಮಕ್ಕಳಿಗೆ 20 ರೂ. ಪ್ರವೇಶ ದರ ಇದೆ, 10 ವರ್ಷದೊಳಗಿನ ಮಕ್ಕಳಿಗೆ ಯಾವುದೇ ಶುಲ್ಕ ಇರುವುದಿಲ್ಲ.

ಸುಮಾರು 25,000 ವಿಭಿನ್ನ ರೀತಿಯ ಅಲಂಕಾರಿಕ ಹೂವಿನ ಕುಂಡಗಳು, ಮೆರಿಗೋಲ್ಡ್, ಸಾಲ್ವಿಯ, ಡೇಲಿಯ, ಪಿಟೋನಿಯ, ಸೇವಂತಿಗೆ, ಕೋಲಿಯಸ್, ಸಿಲೋಷಿಯ, ನಸ್ಪರ್‌ಸಿಯಂ, ಆಂಟಿರೈನಂ, ವರ್ಬಿನ, ಜಿರೇನಿಯಂ, ಕಾಶಿಗೊಂಡೆ, ಆಸ್ಟರ್, ಗೈರಾಲ್ಡಿಯಾ, ಸೈಡರ್, ಬೋನ್ಸಾಯ್ ಗಿಡಗಳು ಸೇರಿದಂತೆ 35 ಜಾತಿಯ ಹೂವಿನ ಗಿಡಗಳು ಹಾಗೂ ಅಂದಾಜು 6 ಲಕ್ಷ ವಿವಿಧ ಹೂವುಗಳಾದ ಗುಲಾಬಿಗಳು, ಕ್ರೈಸಾಂಥಿಮಮ್, ಪಿಂಗ್ ಪಾಂಗ್, ಕಾರ್ನೆಷನ್, ಆಸ್ಟಮೇರಿಯ, ಜರ್ಬೆರಾ, ಆಂಥೋರಿಯಮ್, ಆರ್ಕಿಡ್ಸ್, ಬ್ಲೂಡೈಸಿ ಮತ್ತಿತರ ಅಲಂಕಾರಿಕ ಹೂವುಗಳು ಹಾಗೂ ಊಟಿ ಕಟ್ ಪ್ಲವರ್‌ ಗಳಿಂದ ಅಲಂಕರಿಸಲಾಗಿರುತ್ತದೆ.

ನವದೆಹಲಿಯ ಅಕ್ಷರಧಾಮ, ಮುಮ್ಮಡಿ ಕೃಷ್ಣರಾಜ ಒಡೆಯರ್, ನಂಜನಗೂಡಿನ ನಂಜುಂಡೇಶ್ವರ, ಹದ್ದು, ರಾಜ್ಯ ಪಂಚ ಗ್ಯಾರಂಟಿ ಯೋಜನೆಗಳು, ಮರಿಯಾನೆ, ಗಂಡಭೇರುಂಡ, ಆಮೆ, ವನ್ಯಜೀವಿಗಳು, ಕಾರ್ಗಿಲ್ ಯುದ್ಧ ಸ್ಮಾರಕ, ನವಿಲು, ಸಂವಿಧಾನ ಪೀಠಿಕೆ ಮಾದರಿ ಚಿತ್ರಗಳನ್ನು ಹೂವಿನಿಂದ ಅಲಂಕರಿಸಲಾಗುತ್ತದೆ.
ಡಿ. 22ರಿಂದ ನಿತ್ಯ 7ರಿಂದ 9ರವರೆಗೆ ಅರಮನೆ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಲಿದೆ.

ಡಿ. 31ರಂದು ರಾತ್ರಿ 11ರಿಂದ 12ರವರೆಗೆ ಪೊಲೀಸ್ ಬ್ಯಾಂಡ್ ವಾದ್ಯ ಸಂಗೀತ ಇರಲಿದೆ. ಅಂದು ಮಧ್ಯರಾತ್ರಿ 12ರಿಂದ 12.15ರವರೆಗೆ ಹಸಿರು ಪಟಾಕಿಯ ಬಾಣ- ಬಿರುಸುಗಳಿಂದ ಹೊಸ ವರ್ಷವನ್ನು ಸ್ವಾಗತಿಸಲಾಗುತ್ತದೆ.

ಡಿ. 21ರಂದು ಸಂಜೆ 5.30ಕ್ಕೆ ಸಿ.ಆರ್.ರಾಘವೇಂದ್ರ ರಾವ್ ಅವರಿಂದ ವಾದ್ಯಸಂಗೀತ, ಸಂಜೆ 7ಕ್ಕೆ ಎ.ಆರ್.ಕಲಾ ಅವರಿಂದ ನಾಡಗೀತೆ ಸಂಸ್ಥಾನ ಗೀತೆ ಗಾಯನ 7.30ರಿಂದ ಮಧುಬಾಲಕೃಷ್ಣನ್ ಅವರಿಂದ ಸಂಗೀತ ಸಂಜೆ

ಡಿ.22ರಂದು ಸಂಜೆ 6ಕ್ಕೆ ರಘು ಮತ್ತು ತಂಡದಿಂದ ಗೀತ ಗಾಯನ 6.45ಕ್ಕೆ ಭಾರತೀಯ ವಿದ್ಯಾಭವನ ವಿದ್ಯಾರ್ಥಿಗಳಿಂದ ನೃತ್ಯ ರೂಪಕ 7.30ರಿಂದ ವಿಜಯಪ್ರಕಾಶ್ ಅವರಿಂದ ಸಂಗೀತ ರಸಸಂಜೆ.

ಡಿ.23ರಂದು ಸಂಜೆ 6ಕ್ಕೆ ಎಂ.ಡಿ.ಆಯುಷ್ ಮತ್ತು ತಂಡದಿಂದ ಶಾಸ್ತ್ರೀಯ ಸಂಗೀತ, 7ರಿಂದ ಆನೂರು ಅನಂತಕೃಷ್ಣಶರ್ಮ ಅವರಿಂದ ‘ಲಯ- ಲಾವಣ್ಯ’

ಡಿ.24ರಂದು ಸಂಜೆ 6ಕ್ಕೆ ಷಡಜ್ ಗೋಡ್ಬಂಡಿ- ಅಪೂರ್ವ ಕೃಷ್ಣ ಅವರಿಂದ ಕೊಳಲು- ವಯಲಿನ್ ಪ್ಯೂಷನ್ ಸಂಗೀತ, 7ಕ್ಕೆ ಹಿಂದೂಸ್ಥಾನಿ ಸಂಗೀತ- ಸಿದ್ದಾರ್ಥ ಬೆಲ್ಮಣ್ಣು ಗಂಜೀಫ ರಘುಪತಿ ಭಟ್ ಅವರಿಂದ ‘ದಾಸವಾಣಿ ಚಿತ್ರಣ’ 8ಕ್ಕೆ ಚಂಪಕ ಅಕಾಡೆಮಿ ಅವರಿಂದ ನೃತ್ಯರೂಪಕ

ಡಿ.25ರಂದು ಸಂಜೆ 5.45ರಿಂದ ನಾಹರ್ ಗುರುದತ್ತ ಅವರಿಂದ ಶಾಸ್ತ್ರೀಯ ಸಂಗೀತ, ಕೇಶವಚಂದ್ರ ಅವರಿಂದ ದ್ವಂದ್ವ ವೇಣುವಾದನ. ಸಂಜೆ 7ರಿಂದ 9ರವರೆಗೆ ಗಾಯಕರಾದ ದರ್ಶನ್ ನಾರಾಯಣ್ ಐಶ್ವರ್ಯ ರಂಗರಾಜನ್ ಸುನಿಲ್ ಗುಜಗೊಂಡ್ ವಸುಶ್ರೀ ಹಳೆಮನೆ ಜ್ಞಾನಗುರುರಾಜ್ ಅವರಿಂದ ‘ಸಂಗೀತ ಯಾನ’

ಡಿ.31ರಂದು ರಾತ್ರಿ 11ಕ್ಕೆ ಪೊಲೀಸ್ ಬ್ಯಾಂಡ್ ವಾದ್ಯ ಸಂಗೀತ ಕಾರ್ಯಕ್ರಮವನ್ನ ಆಯೋಜಿಸಲಾಗಿದೆ.

ಡಿ.21ರಿಂದ ಅರಮನೆಯಲ್ಲಿ ಫಲಪುಷ್ಪ ಪ್ರದರ್ಶನ;ಸಾಂಸ್ಕೃತಿಕ ಕಾರ್ಯಕ್ರಮ Read More

ಶ್ರೀ ವೈಷ್ಣವ ಸಮಾವೇಶ ಯಶಸ್ವಿಯಾಗಲಿ:ಶುಭ ಕೋರಿದ ಪ್ರೊ. ಡಾ.ಭಾಷ್ಯಂ ಸ್ವಾಮೀಜಿ

ಮೈಸೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಶ್ರೀ ವೈಷ್ಣವ ಬೃಹತ್ ಸಮಾವೇಶ ಯಶಸ್ವಿಯಾಗಲೆಂದು ಮೈಸೂರಿನ ವಿಜಯನಗರದ ಶ್ರೀ ಯೋಗಾ ನರಸಿಂಹಸ್ವಾಮಿ ದೇವಾಲಯದ ಸಂಸ್ಥಾಪಕರಾದ ಪ್ರೊ.ಡಾ.ಭಾಷ್ಯಂ ಸ್ವಾಮೀಜಿ ಹಾರೈಸಿದ್ದಾರೆ.

ಶ್ರೀ ಯತಿರಾಜ ಮಠ ಹಾಗೂ ಅಖಿಲ ಕರ್ನಾಟಕ ಶ್ರೀ ವೈಷ್ಣವ ಮಹಾಸಭಾ ವತಿಯಿಂದ ಇದೇ ಭಾನುವಾರ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿ ಆವರಣದಲ್ಲಿ ಶ್ರೀ ವೈಷ್ಣವ ಬೃಹತ್ ಸಮಾವೇಶ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಪ್ರೊ.ಡಾ.ಭಾಷ್ಯಂ ಸ್ವಾಮೀಜಿಯವರು ಯತಿರಾಜ ಮಠದ ಜಗದ್ಗುರುಗಳಾದ ಶ್ರೀ ಯಧುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್‌ ಅವರನ್ನು ಭೇಟಿಯಾಗಿ ಶುಭಕೋರಿ ಸಮಾವೇಶ ಯಶಸ್ವಿಯಾಗಲಿ ಎಂದು ಹಾರೈಸಿದರು.

ಈ ವೇಳೆ ದೇವಾಲಯದ ಆಡಳಿತಾಧಿಕಾರಿ ಎನ್.ಶ್ರೀನಿವಾಸನ್ ಉಪಸ್ಥಿತರಿದ್ದರು.

ಶ್ರೀ ವೈಷ್ಣವ ಸಮಾವೇಶ ಯಶಸ್ವಿಯಾಗಲಿ:ಶುಭ ಕೋರಿದ ಪ್ರೊ. ಡಾ.ಭಾಷ್ಯಂ ಸ್ವಾಮೀಜಿ Read More

ಇನ್ನೂ 10 ದಿನ ದಸರಾ ದೀಪಾಲಂಕಾರ:ಡಿಕೆಶಿ

ಮೈಸೂರು: ಈ ಬಾರಿ ದಸರಾ ದೀಪಾಲಂಕಾರ ಇನ್ನೂ ಹತ್ತು ದಿನಗಳ ಕಾಲ ಇರಲಿದೆ ಎಂದು ‌ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಬಳಿ ನಂದಿ ಧ್ವಜಕ್ಕೆ ಸಿಎಂ‌ ಸಿದ್ದರಾಮಯ್ಯ‌ ಅವರೊಂದಿಗೆ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಈ‌ ಬಾರಿ ಅದ್ದೂರಿ ದಸರಾ‌ ಆಚರಣೆ ಮಾಡಲಾಗಿದೆ, ದೀಪಾಲಂಕಾರ ಅದ್ಭುತವಾಗಿದೆ, ಜನತೆ ಮೈಸೂರಿಗೆ ಬರಬೇಕು ಇದನ್ನೆಲ್ಲ ಕಣ್ ತುಂಬಿಕೊಳ್ಳಬೇಕು ಎಂದು ಕರೆ ನೀಡಿದರು.

ದಸರಾ ಇಂದು‌ ಮುಕ್ತಾಯ ಆದರೂ ಕೂಡಾ ಇನ್ನೂ ಹತ್ತು ದಿನಗಳವರೆಗೂ ದೀಪಾಲಂಕಾರ ಇರಲಿದೆ ಜನ ನೋಡಬೇಕು ಎಂದು ಹೇಳಿದರು. ಇದೇ‌ ವೇಳೆ ಡಿಕೆಶಿ ರಾಜ್ಯದ ಜನತೆಗೆ ದಸರಾ ಹಬ್ಬದ ಶುಭಾಶಯ ಸಲ್ಲಿಸಿದರು.

ಇನ್ನೂ 10 ದಿನ ದಸರಾ ದೀಪಾಲಂಕಾರ:ಡಿಕೆಶಿ Read More

ದುಷ್ಟ ಶಿಕ್ಷೆ,ಶಿಷ್ಟ ರಕ್ಷೆ ದಸರಾ ಹಬ್ಬದ ವಿಶೇಷ: ಸಿಎಂ‌ ಬಣ್ಣನೆ

ಮೈಸೂರು: ರಾಜ್ಯದ ಜನರಿಗೆ‌ ದಸರಾ ಹಬ್ಬದ ಶುಭಾಶಯಗಳನ್ನು ಕೋರಿದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ದುಷ್ಟ ಶಿಕ್ಷೆ,ಶಿಷ್ಟ ರಕ್ಷೆ ಈ‌ ಹಬ್ಬದ ವಿಶೇಷ ಎಂದು ಹೇಳಿದರು.

ಅರಮನೆ ಮುಂಭಾಗ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಬಳಿ ಇತಿಹಾಸ ಪ್ರಸಿದ್ಧ ಮೈಸೂರು ದಸರಾ ಜಂಬೂ‌ ಸವಾರಿಗೂ ಮೊದಲು ಸಾಂಪ್ರದಾಯಿಕ ನಂದಿ ಧ್ವಜಕ್ಕೆ ಶುಭ ಮಕರ‌‌ ಲಗ್ನದಲ್ಲಿ ಪುಷ್ಪನಮನ ಸಲ್ಲಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಇದೊಂದು‌ ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದ ಸಿಎಂ, ಕಳೆದ ಬಾರಿ ಸರಿಯಾಗಿ ಮಳೆ ಆಗದೆ ಬರ ಪರಿಸ್ಥಿತಿ ಎದುರಾಗಿತ್ತು ಹಾಗಾಗಿ ಸರಳ ದಸರಾ ಆಚರಣೆ ಮಾಡಲಾಗಿತ್ತು ಎಂದು ಹೇಳಿದರು.

ಈ‌ ಬಾರಿ ರಾಜ್ಯಾದ್ಯಂತ ಚೆನ್ನಾಗಿ‌ ಮಳೆ ಆಗಿದೆ.ಎಲ್ಲೂ ಬರ ಪರಿಸ್ಥಿತಿ ಇಲ್ಲ ಹಾಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪನವರಿಗೆ ಅದ್ಧೂರಿ ದಸರಾ ಆಚರಣೆಗೆ ಹೇಳಿದ್ದೆ.ಇದು ನಾಡಹಬ್ಬ ಅದ್ದೂರಿಯಾಗಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಈ‌ ಸಂದರ್ಭದಲ್ಲಿ ರಾಜ್ಯದ ಎಲ್ಲ ಜನತೆಗೆ ಶುಭ ಕೋರುತ್ತೇನೆ ಎಂದು ಸಿದ್ದು ತಿಳಿಸಿದರು.

ಸಿದ್ದರಾಮಯ್ಯ ಅವರಿಗೆ ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ,ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತಿರರು ಸಾಥ್ ನೀಡಿದರು.

ದುಷ್ಟ ಶಿಕ್ಷೆ,ಶಿಷ್ಟ ರಕ್ಷೆ ದಸರಾ ಹಬ್ಬದ ವಿಶೇಷ: ಸಿಎಂ‌ ಬಣ್ಣನೆ Read More

ಮೈಸೂರು ಅರಮನೆಯಲ್ಲಿ‌ ಸಡಗರ:ಆದ್ಯವೀರ್ ಗೆ ಸಹೋದರ ಪ್ರಾಪ್ತಿ

ಮೈಸೂರು: ಮೈಸೂರು ಅರಮನೆಯಲ್ಲಿ ಸಡಗರವೋ ಸಡಗರ,ಯದುವಂಶಕ್ಕೆ ಹೊಸ ಸದಸ್ಯ ಸೇರ್ಪಡೆಯಾಗಿರುವುದೇ ಈ ಸಡಗರಕ್ಕೆ ಕಾರಣ.

ಯದುವಂಶದ ಯವರಾಣಿ ತ್ರಿಷಿಕಾ ಅವರು ಮೈಸೂರಿನ ಯಾದವಗಿರಿಯಲ್ಲಿರುವ ಮದರ್ ಹುಡ್ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಬೆಂಗಳೂರಿನ ವೈದ್ಯರ ತಂಡ ಮೈಸೂರಿನ ವೈದ್ಯರ ತಂಡದ ನೆರವು ಪಡೆದು ಹೆರಿಗೆ ಪ್ರಕ್ರಿಯೆ ಯಶಸ್ವಿಗೊಳಿಸಿದ್ದಾರೆ.

ಆದ್ಯವೀರ್ ಗೆ ಸಹೋದರ ಪ್ರಾಪ್ತಿಯಾಗಿದೆ‌,ಒಂದೆಡೆ ಅರಮನೆಯಲ್ಲಿ ಸಂಭ್ರಮದ ವಾತಾವರಣ ಇದೆ.ಮತ್ತೊಂದೆಡೆ ಮಗು ಜನಿಸಿದ ಸೂತಕ ಹಿನ್ನಲೆ ಪೂಜಾ ಕೈಂಕರ್ಯಗಳಿಗೆ ಅಡ್ಡಿಯಾಗಲಿದೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ.

ಈಗಾಗಲೇ ಯದುವೀರ್ ರವರು ಕಂಕಣ ತೊಟ್ಟಿದ್ದಾರೆ.ಮಗು ಹುಟ್ಟಿದಾಗ ಸಂಪ್ರದಾಯವಾಗಿ ಸೂತಕ ಆಚರಿಸುವ ವಾಡಿಕೆ ಇದೆ.ಈಗ ಅರಮನೆಯಲ್ಲಿ ಹೇಗೆ ಪೂಜಾ ಕೈಂಕರ್ಯಗಳು ನಡೆಯುತ್ತದೆ ಎಂಬ ಅಂಶ ಕುತೂಹಲಕ್ಕೆ ಕಾರಣವಾಗಿದೆ.

ಇಂದು ನವರಾತ್ರಿ ಸಂಪನ್ನಗೊಳ್ಳಬೇಕಿದೆ,ಹಾಗಾಗಿ ಮುಂದಿನ ಪೂಜಾ ವಿಧಿವಿಧಾನಗಳನ್ನ ಮುಂದುವರೆಸುವ ಬಗ್ಗೆ ಅರಮನೆ ಪುರೋಹಿತರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಅರಮನೆ ಮೂಲಗಳು ತಿಳಿಸಿವೆ.

ಮೈಸೂರು ಅರಮನೆಯಲ್ಲಿ‌ ಸಡಗರ:ಆದ್ಯವೀರ್ ಗೆ ಸಹೋದರ ಪ್ರಾಪ್ತಿ Read More

ಅರಮನೆ ಆವರಣದಲ್ಲಿ ಪೊಲೀಸ್ ವಾದ್ಯಮೇಳ:ಹರಿದು ಬಂದ ಜನ ಸಾಗರ

ಮೈಸೂರು: ನಾಡಹಬ್ಬ ಮೈಸೂರು ದಸರಾಪ್ರಯುಕ್ತ ಕರ್ನಾಟಕ ರಾಜ್ಯ ಪೊಲೀಸ್ ವತಿಯಿಂದ ಅರಮನೆ‌ ಆವರಣದಲ್ಲಿ ಆಯೋಜಿಸಿದ್ದ, ವಾದ್ಯಮೇಳ ವೀಕ್ಷಿಸಲು ಜನರ ಜನ ಸಾಗರವೇ ಹರಿದು ಬಂದಿತ್ತು.

ರಾಜ ಕಹಳೆ ಮೊಳಗಿಸುವ ಮೂಲಕ ಗೃಹ ಸಚಿವ ಜಿ ಪರಮೇಶ್ವರ ಅವರನ್ನು ಕರ್ನಾಟಕ‌ ಪೊಲೀಸ್ ಅವರು ಬರಮಾಡಿಕೊಂಡರು.

ಕರ್ನಾಟಕದ ವಿವಿಧ ಜಿಲ್ಲೆಗಳ
400 ಕ್ಕಿಂತಲೂ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನೊಳಗೊಂಡ ತಂಡ ಆಕರ್ಷಕ ವಿವಿಧ ವಿನ್ಯಾಸಗಳ ಸಾಮೂಹ ವಾದ್ಯಮೇಳವನ್ನು ಪ್ರದರ್ಶಿಸಿತು.

ಕನಕದಾಸರ ಕೀರ್ತನೆಯಾದ ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ ಎಂಬ ವಾದ್ಯಮೇಳಕ್ಕೆ ಜನರು ಮೂಕ ವಿಸ್ಮಿತರಾದರು.

ಮಧ್ವಾಚಾರ್ಯರ ಕೃತಿ ಪ್ರೇಣಯಾಮೋ ವಾಸುದೇವಂ ವಾದ್ಯಕ್ಕೆ ಜನರು ಮನಸೋತರು. ಸಂತ ತುಳಸಿದಾಸರ ಕೃತಿ ಶ್ರೀ ರಾಮಚಂದ್ರ ಕೃಪಾಲು ಭಜಮನ ವಾದ್ಯಗಳನ್ನು ವಾದ್ಯವೃಂದದವರು ಪ್ರಸ್ತುತ ಪಡಿಸಿದರು.

ಆಂಗ್ಲ ವಾದ್ಯ ವೃಂದದವರು ಹರ್ಮನ್ ಸ್ಪಾರ್ಕ್ ಅವರ ಲೈಟ್ ಕವಾಲಿ, ಎ ಆರ್ ರೆಹಮಾನ್ ಅವರ ಯಶಸ್ವಿ ಆರು ಗೀತೆಗಳನ್ನು ಒಟ್ಟುಗೂಡಿಸಿ ಬಹು ವಾದ್ಯೋಪಕರಣಗಳನ್ನು ಬಳಸಿ ತಮ್ಮದೇ ಆದ ಶೈಲಿಯ ವಾದ್ಯಮೇಳವನ್ನು ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ಸಚಿವರಾದ ಜಿ.ಪರಮೇಶ್ವರ, ಸತೀಶ್ ಎಲ್ ಜಾರಕಿಹೊಳಿ, ಡಾ.ಹೆಚ್ ಸಿ‌ ಮಹದೇವಪ್ಪ, ಬೆಂಗಳೂರಿನ ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರಾದ ಅಲೋಕ್ ಮೋಹನ್, ಶಾಸಕರಾದ ಟಿ. ಎಸ್.ಶ್ರೀವತ್ಸ, ತನ್ವೀರ್ ಸೇಠ್, ಪೊಲೀಸ್ ಆಯುಕ್ತರಾದ ಸೀಮಾ‌ ಲಾಟ್ಕರ್ ಮತ್ತಿತರರು ಉಪಸ್ಥಿತರಿದ್ದರು.

ಅರಮನೆ ಆವರಣದಲ್ಲಿ ಪೊಲೀಸ್ ವಾದ್ಯಮೇಳ:ಹರಿದು ಬಂದ ಜನ ಸಾಗರ Read More

ದಸರಾ ನಮ್ಮ ಹಿರಿಯರು ನಮಗಾಗಿ ನೀಡಿದಂತಹ ದೊಡ್ಡ ಉತ್ಸವ-ಶ್ರೀವತ್ಸ

ಮೈಸೂರು: ದಸರಾ ಎಂಬುದು ನಮ್ಮ ಹಿರಿಯರು ನಮಗಾಗಿ ನೀಡಿದಂತಹ ದೊಡ್ಡ ಉತ್ಸವ,ಈ ಉತ್ಸವವು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಲರ ಗಮನವನ್ನು ಸೆಳೆಯುತ್ತಿದೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು.

ಮೈಸೂರು ದಸರಾ ಅಂಗವಾಗಿ ಅರಮನೆ ಆವರಣದಲ್ಲಿ ಆಯೋಜಿಸಲಾಗಿದ್ದ, ರಂಗೋಲಿ ಸ್ಪರ್ಧೆ ಉದ್ಘಾಟಿಸಿ ಶಾಸಕರು ಮಾತನಾಡಿದರು.

ದಸರಾ ಮಹೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಕಲಾವಿದರಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಆಯೋಜಿಸಿ ಅವರ ಕಲಾ ಪ್ರತಿಭೆಗೆ ಪ್ರೋತ್ಸಾಹ ನೀಡಲಾಗುತ್ತದೆ, ಅದೇ ರೀತಿ ಮಹಿಳೆಯರಿಗೆ ಏರ್ಪಡಿಸಿರುವ ರಂಗೋಲಿ ಸ್ಪರ್ಧೆಯಲ್ಲಿ 100 ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿರುವುದು ಖುಷಿಯ ವಿಷಯ ಎಂದು ಹೇಳಿದರು.

ರoಗೋಲಿ ತಲತಲಾಂತರಗಳಿoದ ಬಂದ ಕೆಲೆ,ಹಿಂದೆ ಕೇವಲ ಮಹಿಳೆಯರಿಗಷ್ಟೇ ಸೀಮಿತವಾಗಿದ್ದ ಈ ಕಲೆ ಇಂದು ವಿವಿಧ ರೂಪ ತಾಳಿ ಪುರುಷರು ರಂಗೋಲಿಯಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಹೇಳಿದರು.

ಹಳ್ಳಿಗಳಲ್ಲಿ ಮಹಿಳೆಯರು ಜನಪದ ಗೀತೆಗಳನ್ನು ಹಾಡುತ್ತಾ ಸಗಣಿಯನ್ನು ಚಿಮ್ಮಿ ಅದರ ಮೇಲೆ ರಂಗೋಲಿ ಬಿಡುವಂಥದ್ದು, ನಗರಗಳಲ್ಲಿ ಮನೆಯ ಮುಂದಿನ ಸೌಂದರ್ಯವನ್ನು ಹೆಚ್ಚಿಸಲು ರಂಗೋಲಿ ಬಿಡುವ ದೃಶ್ಯಗಳು ಎಲ್ಲರ ಕಣ್ಮನ ಸೆಳೆಯುತ್ತವೆ ಎಂದರು.

ಇಂದು ರಂಗೋಲಿಯ ವಿಶಿಷ್ಟ ರೂಪ ಹಾಗೂ ಅದರ ಮಹತ್ವವನ್ನು ತಿಳಿಸಲು ಮೈಸೂರು ದಸರಾದಂತಹ ದೊಡ್ಡ ಮಹೋತ್ಸವದಲ್ಲಿ ಸ್ಪರ್ಧೆ ಮಾಡುತ್ತಿರುವುದರಿಂದ ಎಷ್ಟೋ ರಂಗೋಲಿ ಪ್ರತಿಭೆಗಳ, ಚಿತ್ರಕಲಾ ಕಲಾವಿದರ ಪ್ರತಿಭೆ ಅನಾವರಣಗೊಳ್ಳುತ್ತಿದೆ. ಸೋಲು-ಗೆಲುವಿನ ನಿರೀಕ್ಷೆ ಬಿಟ್ಟು ಪ್ರತಿಯೊಬ್ಬ ಸ್ಪರ್ಧಿಯು ತಮ್ಮಲ್ಲಿರುವ ಕಲೆಯನ್ನು ಪ್ರಸ್ತುತ ಪಡಿಸಲು ಮುಂದಾಗಬೇಕೆಂದು ಶ್ರೀವತ್ಸ ಶುಭ ಹಾರೈಸಿದರು.

ಮೈಸೂರಿನ ಇಬ್ಬರು ಕಲಾವಿದರು ಏಪ್ರಿಲ್ 14 ರಂದು ಇದೇ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂದೆ ರಂಗೋಲಿಯಲ್ಲಿ ಅಂಬೇಡ್ಕರ್ ಚಿತ್ರವನ್ನು ಬಿಡಿಸಿದ್ದು, ರಾಮ ಮಂದಿರ ಉದ್ಘಾಟನೆ ಸಮಾರಂಭದಲ್ಲಿ ಕುವೆಂಪು ನಗರ ಪಾರ್ಕ್ನಲ್ಲಿ 120 ಅಡಿಯ ರಾಮ ಮಂದಿರ ಚಿತ್ರವನ್ನು ರಂಗೋಲಿಯಲ್ಲಿ ಬಿಡಿಸಿದ್ದಂತಹ ಸಂದರ್ಭಗಳು ರಂಗೋಲಿಯ ಮಹತ್ವ ಹಾಗೂ ಸೌಂದರ್ಯವನ್ನು ತಿಳಿಸುತ್ತವೆ ಎಂದರು.

ರಾಜ್ಯಾದಂತ ಆಗಮಿಸಿದ್ದ ಮಹಿಳೆಯರು ಮೈಷಾಸುರ, ಅಂಬಾರಿಯನ್ನು ಹೊತ್ತಿರುವ ಆನೆಯ ಚಿತ್ರ, ಬಸವ ಮತ್ತು ಶಿವ, ಲಿಂಗ ಸಮಾನತೆಯನ್ನು ಉತ್ತೇಜಿಸೋಣ ಎಂಬ ವಿಷಯದ ಮೇಲೆ, ಮಹಿಳೆಯ ಮೇಲೆ ಆಗುತ್ತಿರುವ ಅತ್ಯಾಚಾರ ತಡೆಗಟ್ಟುವುದು ಸೇರಿದಂತೆ ಬಣ್ಣದ ಬಣ್ಣದ ರಂಗೋಲಿ ಬಿಡಿಸಿ ಸಂಭ್ರಮಿಸಿದರು.

ಸ್ಪರ್ಧೆಯಲ್ಲಿ ಮೂರು ಬಹುಮಾನ, ಮೂರು ಸಮಾಧಾನಕರ ಬಹುಮಾನ ಮತ್ತು ಭಾಗವಹಿಸಿದವರೆಲ್ಲರಿಗೂ ಪ್ರಶಸ್ತಿ ಪತ್ರಗಳನ್ನು ಅ.8 ರಂದು ನೀಡಲಾಗುತ್ತದೆ.

ದಸರಾ ನಮ್ಮ ಹಿರಿಯರು ನಮಗಾಗಿ ನೀಡಿದಂತಹ ದೊಡ್ಡ ಉತ್ಸವ-ಶ್ರೀವತ್ಸ Read More

ನಾಳೆಯಿಂದ ಯದುವೀರ್ ಖಾಸಗಿ ದರ್ಬಾರ್

ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಅ. 3ರಿಂದ 12ರವರೆಗೆ ಮೈಸೂರು ಅರಮನೆಯಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಅರಮನೆಯಲ್ಲಿ ನವರಾತ್ರಿ ವೇಳೆಯಲ್ಲಿ ಯದು ವಂಶಸ್ಥರಾದ ಯದುವೀರ್ ಅವರು ಖಾಸಗಿ ದರ್ಬಾರನ್ನು ನಡೆಸಲಿದ್ದಾರೆ.

ಸಂಸದರಾದ ಬಳಿಕ ಇದೇ ಮೊದಲ ಬಾರಿಗೆ ಯದುವೀರ್ ಅವರು ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಖಾಸಗಿ ದರ್ಬಾರನ್ನು ನಡೆಸುತ್ತಿದ್ದಾರೆ.

ಈಗಾಗಲೇ ಖಾಸಗೀ ದರ್ಬಾರ್ ನಡೆದಲು ರತ್ನಖಚಿತ ಸಿಂಹಾಸನ ಜೋಡಣೆ ಕಾರ್ಯ ಪೂರ್ಣಗೊಂಡಿದೆ.

ನಾಳೆಯಿಂದ ಯದುವೀರ್ ಖಾಸಗಿ ದರ್ಬಾರ್ Read More