ತಾಯಿ ಭುವನೇಶ್ವರಿಗೆ ಹೆಚ್.ಸಿ.ಮಹದೇವಪ್ಪ ಪುಷ್ಪ ನಮನ

ಮೈಸೂರು, ನವೆಂಬರ್. ೧: ಕನ್ನಡ ರಾಜ್ಯೋತ್ಸವದ ಅಂಗವಾಗಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರು ಅರಮನೆ ಆವರಣದಲ್ಲಿರುವ ಶ್ರೀ ಭುವನೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದರು.

ಪೂಜೆಯ ನಂತರ ಶ್ರೀ ಭುವನೇಶ್ವರಿ ತಾಯಿಯ ಮೆರವಣಿಗೆ ರಥಕ್ಕೆ ಸಚಿವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಸಿಇಒ ಎಸ್.ಯುಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ಡಿಸಿಪಿಗಳಾದ ಸುಂದರ್ ರಾಜು, ಬಿಂದುಮಣಿ ಸೇರಿದಂತೆ ಅನೇಕ ಅಭಿಮಾನಿಗಳು ಹಾಜರಿದ್ದರು.

ತಾಯಿ ಭುವನೇಶ್ವರಿಗೆ ಹೆಚ್.ಸಿ.ಮಹದೇವಪ್ಪ ಪುಷ್ಪ ನಮನ Read More

ಬಟ್ಟೆ ಬ್ಯಾಗನ್ನೇ ಬಳಕೆ ಮಾಡಿ: ಅರಿವು ಕಾರ್ಯಕ್ರಮ

ಮೈಸೂರು: ಮೈಸೂರು ಅರಮನೆಯಲ್ಲಿ ಪ್ರವಾಸಿಗರಿಗೆ ಬಟ್ಟೆ ಬ್ಯಾಗ್ ವಿತರಣೆ ಮಾಡುವ ಮೂಲಕ ಏಕ ಬಳಕೆ ಪ್ಲಾಸ್ಟಿಕ್ ಉಪಯೋಗಿಸದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.

ಮಂಗಳವಾರ ಬೆಳಿಗ್ಗೆ‌ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಸ್ವಚ್ಛತೆ ಮತ್ತು ವ್ಯವಸ್ಥೆ ಉಪಸಮಿತಿಯ ಅಧ್ಯಕ್ಷರಾದ ಸುಭಾನ್, ಉಪಾಧ್ಯಕ್ಷರಾದ ವಸಂತ್ ಕುಮಾರ್ ಮತ್ತು ಸದಸ್ಯರಾದ ಮೊಹಮ್ಮದ್ ಶರೀಫ್, ದಿನೇಶ್, ರಾಘವಾಚಾರಿ, ರಾಮಚಂದ್ರ, ಮಲ್ಲಜ್ಜಮ್ಮ, ಕಲ್ಪನಾ, ಸುಬ್ರಮಣ್ಯ, ಮಹೇಶ್ ಗೌಡ, ಮರಿಯಪ್ಪ, ಸಾಗರ್, ಯೋಗೇಶ್, ಮಲ್ಲೇಶ್,ರವಿಚಂದ್ರ, ಮಹದೇವ್, ತಮ್ಮಯ್ಯ, ಜಾವಿದ್ ಪಾಷಾ ಮತ್ತು ಪರಿಸರ ಅಭಿಯಂತರರಾದ ಲೋಕೇಶ್ವರಿ, ಜ್ಯೋತಿ, ಆರೋಗ್ಯ ಪರಿವೀಕ್ಷಕರಾದ ಶಿವಪ್ರಸಾದ್, ಶೋಭಾ ಹಾಗೂ ಸಿಬ್ಬಂದಿ ವರ್ಗದವರು ಬಟ್ಟೆ ಬ್ಯಾಗ್ ಬಳಕೆ ಮಾಡುವಂತೆ ಜನರಲ್ಲಿ ಹಾಗೂ ಪ್ರವಾಸಿಗರಲ್ಲಿ ಮನವಿ ಮಾಡಿದರು.

ಬಟ್ಟೆ ಬ್ಯಾಗನ್ನೇ ಬಳಕೆ ಮಾಡಿ: ಅರಿವು ಕಾರ್ಯಕ್ರಮ Read More

ಅರಮನೆ ಆವರಣದಲ್ಲಿ ಸಿಂಚನ ದಿಕ್ಷೀತ್ ಗಾಯನ ಮೋಡಿ

ಮೈಸೂರು: ತಂಪಾದ ಇಳಿ ಸಂಜೆಯಲ್ಲಿ ಅರಮನೆ ಆವರಣದಲ್ಲಿ ನೆರೆದ್ದಿದ್ದ ಪ್ರೇಕ್ಷಕರು ಹಾಗೂ ಪ್ರವಾಸಿಗರನ್ನು ತಮ್ಮ ಸುಮಧುರ ಗಾನಸುಧೆಯ ಮೂಲಕ ಗಾಯಕಿ ಸಿಂಚನ ದಿಕ್ಷಿತ್ ಅವರು ರಂಜಿಸಿದರು.

ನಗರದ ಅರಮನೆ ಆವರಣದಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2025ರ ಅಂಗವಾಗಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸರಿಗಮ ತಂಡದ ಸಿಂಚನ ದಿಕ್ಷೀತ್ ಅವರು ಕಾಯೋ ಶ್ರೀ ಗೌರಿ ಕರುಣ ಲಹರಿ,ಐಗಿರಿ ನಂದಿನಿ ನಂದಿತಾ ವೇದಿನಿ…ಮಹಿಷಾಸುರ ಮರ್ದಿನಿ ಹಾಡಿನ ಮೂಲಕ ಬೆಟ್ಟದ ಚಾಮುಂಡಿ ದರ್ಶನ ಮಾಡಿಸಿ, ದೇವ ಶ್ರೀ ಗಣೇಶ…ಎಂದು ಏಕದಂತ ಹಾಗೂ ಸೂಜುಗಾದ ಸೂಜು ಮಲ್ಲಿಗೆ…ಮಹದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ…ಹಾಡಿನ ಮೂಲಕ ಮಹದೇಶ್ವರರನ್ನು ಭಜಿಸಿ ಪ್ರೇಕ್ಷಕರು ಭಕ್ತಿಯ ಕಡಲಲ್ಲಿ ತೇಲುವಂತೆ ಮಾಡಿದರು.

ಡೆನ್ನಾನಾ ಡೆನ್ನಾನಾ ಹಾಡಿಗೆ ಪ್ರೇಕ್ಷಕರು. ಸೂಪರ್ ಎಂದು ಕೂಗಿ ಸಂಭ್ರಮಿಸಿದರೆ, ಎಲ್ಲಿ ಕಾಣೆ ಎಲ್ಲಿ ಕಾಣೆ ಯಲ್ಲವ್ವ ನಿನ್ನ ಎಲ್ಲಿ ಕಾಣೆ…ಹಾಡಿನ ಮೂಲಕ ನೆರೆದಿದ್ದವರನ್ನು ರಂಜಿಸಿ, ಮೈಸೂರು ಅನಂತಸ್ವಾಮಿ ಅವರ ಎದೆ ತುಂಬಿ ಹಾಡಿದೆನು ಅಂದು ನಾನು… ಹಾಡಿದರು.

ಡಾ.ರಾಜ್ ಕುಮಾರ್ ಹಾಗೂ ಕಲ್ಪನ ಜೋಡಿಯ ಬಾಳ ಬಂಗಾರ ನೀನು… ಹಣೆಯ ಸಿಂಗಾರ ನೀನು… ಹಾಡನ್ನು ಹಾಡಿಕೊಂಡು ಪ್ರೇಕ್ಷರ ಬಳಿಗೆ ಹೋಗಿ ಹುರಿದುಂಬಿಸಿದರು.

ಬೊಂಬೆ ಹೇಳುತೈತೆ ಮತ್ತೇ ಹೇಳುತೈತೆ ನೀನೇ ರಾಜ ಕುಮಾರ ಹಾಡಿನನೊಂದಿಗೆ ಪುನೀತ್ ರಾಜ್ ಕುಮಾರ್ ಅವರನ್ನು ಸ್ಮರಿಸಿ…ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು ಎಂದು ಕನ್ನಡದ ಕಂಪಿನ ಗಾನಸುಧೆ ಮೊಳಗಿಸುವ ಮೂಲಕ ಪ್ರೇಕ್ಷಕರು ಹಾಗೂ ಪ್ರವಾಸಿಗರು ಶಿಳ್ಳೆ ಚಪ್ಪಾಳೆಯೊಂದಿಗೆ ಪ್ರೋತ್ಸಾಹಿಸಿದರು.

ಶ್ರೀ ನೀಲಾದ್ರಿ ಕುಮಾರ್ ಅಮೋಘವಾಗಿ ಸಿತಾರ್ ನುಡಿಸಿ ಪ್ರೇಕ್ಷಕರ ಮನ ಗೆದ್ದರೆ, ತಮ್ಮ ತಂಡದ ಡ್ರಮ್ಸ್ ನಲ್ಲಿ ಲೂಹಿ ಜಿನೊ ಬ್ಯಾಂಕ್ಸ್, ತಬಲ ಪಂಡಿತ್ ಸತ್ಯಜೀತ್ ತಲವಲ್ಕರ್, ಬಾಸೂರಿಯಲ್ಲಿ ರಿಷಿಕೇಶ್ ಮಜೊಂಧಾರ್, ಕೀ ಬೋರ್ಡ್, ಕೊಳಲು ವಾದಕರು ತಮ್ಮ ಝಲಕ್ ಪ್ರದರ್ಶಿಸಿ ಪ್ರೇಕ್ಷಕರಿಂದ ಶಿಳ್ಳೆ ಚಪ್ಪಾಳೆ ಗಿಟ್ಟಿಸಿಕೊಂಡರು.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ವಿಧಾನಪರಿಷತ್ ಸದಸ್ಯ ಶಿವಕುಮಾರ್, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ್ ರೆಡ್ಡಿ, ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಸ್.ಯುಕೇಶ್ ಕುಮಾರ್ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿ ಖುಷಿ ಪಟ್ಟರು.

ಅರಮನೆ ಆವರಣದಲ್ಲಿ ಸಿಂಚನ ದಿಕ್ಷೀತ್ ಗಾಯನ ಮೋಡಿ Read More

ಜನಮನ ತಣಿಸಿದ ಅರಮನೆ‌ ಅಂಗಳದ ಸಾಂಸ್ಕೃತಿಕ ಕಾರ್ಯಕ್ರಮ

ಮೈಸೂರು: ಮೈಸೂರು ರಾಜ್ಯದ ದೊರೆಯೇ , ರಣಧೀರ ನಾಯಕನೇ,ನಿನ್ನಂತವನ್ಯಾರೂ ಇಲ್ವಲ್ಲೋ.. ಲೋಕದ ದೊರೆ ಎಂಬ ಹಾಡಿಗೆ ಪ್ರೇಕ್ಷಕರು ನಿಂತ ನಿಂತಲ್ಲೇ‌ ಕುಣಿದು ಕುಪ್ಪಳಿಸಿದರು.

ಇದು ಎಲ್ಲಿ ಅಂತೀರಾ ಇದು ಅರಮನೆ ಮುಂಭಾಗದಲ್ಲಿ.

ಮೈಸೂರಿನ ಚಿಕ್ಕ‌ಗಡಿಯಾರದ ಮುಂಭಾಗದಲ್ಲೇ ಚಿತ್ರೀಕರಣಗೊಂಡಿರುವ‌ ಕನ್ನಡ ನಾಡು‌ ನುಡಿ ಕುರಿತು ಬರೆದಿರುವ ಬಾರಿಸು ಕನ್ನಡ ಡಿಂಡಿಮವ,ಓ ಕರ್ನಾಟಕ ಹೃದಯ ಶಿವಾ.. ಹಾಡು ನೆರೆದಿದ್ದವರನ್ನು ಮೋಡಿ ಮಾಡಿತು.

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಅಂಗವಾಗಿ ಅರಮನೆ ಅಂಗಳದಲ್ಲಿ ಸಾಂಸ್ಕೃತಿಕ‌ ಉಪ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಮೂರನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಾನಪದ ಗಾನ ವೈಭವ ಶೀರ್ಷಿಕೆಯಡಿ ಅತ್ಯುತ್ತಮ‌ ನಟಿ, ರಂಗಭೂಮಿ‌ ಕಲಾವಿದೆ ಹಾಗೂ ಪ್ರಸಿದ್ಧ ಗಾಯಕಿ ಅನನ್ಯ ಭಟ್ ಮತ್ತು ತಂಡದವರಿಂದ ಉತ್ತಮ ಆಯ್ದ ಜಾನಪದ ಗಾನಸುಧೆ ಹರಿಸುವ ಮೂಲಕ ನೆರೆದಿದ್ದವರನ್ನು ಮೋಡಿ ಮಾಡಿದರು.

ಇದಕ್ಕೂ ಮೊದಲಿಗೆ ಗಜವದನ ಹೇ ರಂಭಾ.. ಎಂಬ ರಂಗ ಗೀತೆ ನೆರೆದಿದ್ದವರನ್ನು ಭಕ್ತಿಯ ಕಡಲಲ್ಲಿ ತೇಲುಸಿತು.

ಕೆಜಿಎಫ್ ಚಿತ್ರದ ಧೀರ ಧೀರ ಈ ಸುಲ್ತಾನ ಎಂಬ ಹಾಡು, ಬೆಟ್ಟದ ಮೇಲಿನ ಮಹದೇವ ಕುರಿತ ಶರಣು ಶರಣಯ್ಯ ಎಂಬ ಕಂಸಾಳೆ ಪದಕ್ಕೆ ಜನ ತಲೆದೂಗಿದರು.

ಅನೂಪ್ ಸೀಳಿನ್ ಅವರ ಸಂಗೀತ ನಿರ್ದೇಶನದ ಡಾ.ವಿ ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯವುಳ್ಳ ವೀರಂ ಚಿತ್ರದ ಎಲ್ಲರ ಮೆಚ್ಚುಗೆ ಗಳಿಸಿರುವಂತಹ ಕೇಳೋ‌ ಮಾದೇವ… ಶಿವಾ..ಶಿವಾ.. ಹರ..ಹರ.. ಹಾಡಿನ ಮೋಡಿ ಮಾಡಿತು.

ಸಾಹಿತಿ ಬಿ.ಆರ್.ಲಕ್ಷ್ಮಣರಾವ್ ಅವರ ಮೃತ್ಯುಂಜಯ ದೊಡ್ಡವಾಡ ಅವರ ಸಂಗೀತ ಸಂಯೋಜನೆಯ ಜಾನಪದ ಗೀತೆ ಬಾಳ ಕಡಲಿನಲ್ಲಿ ಎರಡು ಪ್ರೀತಿಯ ದೋಣಿ, ಸೋಜುಗಾರ ಸೂಜಿ ಮಲ್ಲಿಗೆ, ಮಹದೇವ ನಿಮ್ಮ ಮಂಡೆ‌ ಮೇಲೆ ದುಂಡು ಮಲ್ಲಿಗೆ ಹಾಡಿಗೆ ಜನ ಚಪ್ಪಾಳೆ ತಟ್ಟಿದರು.

ಇದಕ್ಕೂ‌ ಮುನ್ನ ಕರ್ನಾಟಕ ಕಲಾಶ್ರೀಯವರಾದ ಡಾ. ರಾ.ಸಾ. ನಂದಕುಮಾರ್ ಮತ್ತು ಕಾಳಿದಾಸ ಸಮ್ಮಾನ್ ಪ್ರಶಸ್ತಿ ಪುರಸ್ಕೃತರಾದ ರಘುಪತಿ ಭಟ್ ಅವರಿಂದ ಗೀತಾ ಚಿತ್ರಗಳ ಕುರಿತಾಗಿ ಸಂಗೀತದೊಂದಿಗೆ ಭಗವತ್ ಗೀತೆಯ 11ನೇ‌ ಅಧ್ಯಾಯದಲ್ಲಿರುವ ವಿಶ್ವರೂಪ ದರ್ಶನವನ್ನು ಅನಾವರಣಗೊಳಿಸಿದರು.

ಶ್ರೀ ಸಾಯಿ ಶಿವ್ ಲಕ್ಷ್ಮಿಕೇಶವ ಮತ್ತು ತಂಡದವರಿಂದ ಕರ್ನಾಟಕ ಫ್ಯೂಷನ್ ವಾದ್ಯ ಸಂಗೀತವನ್ನು ಹಾಗೂ ಡಾ.ಮೈಸೂರು ಮಂಜುನಾಥ್ ಮತ್ತು ತಂಡದವರಿಂದ ವಯೋಲಿನ್ ಟ್ರಯೋ ಮಧುರವಾಗಿ ನುಡಿಸಿದರು.

ಇದಕ್ಕೂ‌ ಮುನ್ನವೇ ಚಂದನ ಕಲಾತಂಡದಿಂದ ಸುಗಮ ಸಂಗೀತ, ಕಲಾಕ್ಷೀರ ಸಂಗೀತ ಪ್ರದರ್ಶಕ ಕಲೆಗಳ ಕೇಂದ್ರದ ವಿದ್ವಾನ್ ಸಾಗರ್‌ ಸಿಂಗ್ ಮತ್ತು ತಂಡದಿಂದ ಭರತನಾಟ್ಯದ ನೃತ್ಯ ಎಲ್ಲರ ಮನಸೂರೆಗೊಂಡಿತು.

ಜನಮನ ತಣಿಸಿದ ಅರಮನೆ‌ ಅಂಗಳದ ಸಾಂಸ್ಕೃತಿಕ ಕಾರ್ಯಕ್ರಮ Read More

ರತ್ನ ಖಚಿತ ಸಿಂಹಾಸನವೇರಿ ಖಾಸಗಿ ದರ್ಬಾರ್ ಆರಂಭಿಸಿದ ಯದುವೀರ್

ಮೈಸೂರು: ಇತಿಹಾಸ ಪ್ರಸಿದ್ದ ಮೈಸೂರು ಅರಮನೆಯಲ್ಲಿ ಪಾರಂಪರಿಕ‌ ಯದುವಂಶದ ಖಾಸಗಿ ದರ್ಬಾರ್ ಆರಂಭವಾಗಿದೆ.

ಅಂಬಾವಿಲಾಸ ಅರಮನೆಯಲ್ಲಿ ಖಾಸಗಿ ದರ್ಬಾರ್ ಪ್ರಾರಂಭವಾಯಿತು.

ರತ್ನ ಖಚಿತ ಸಿಂಹಾಸನವೇರಿ ಧಾರ್ಮಿಕ ವಿಧಿ ವಿಧಾನವನ್ನು ರಾಜ ವಂಶಸ್ಥ ಯದುವೀ‌ರ ಕೃಷ್ಣ ದತ್ತ ಚಾನರಾಜ ಒಡೆಯರ್
ಪ್ರಾರಂಭಿಸಿದರು.

10 ಗಂಟೆಗೆ ಯದುವೀ‌ರ್ ಹಾಗೂ ತ್ರಿಷಿಕಾ ಕುಮಾರಿ ಒಡೆಯರ್ ಗೆ ವಾಣಿವಿಲಾಸ ದೇವರ ಮನೆಯಲ್ಲಿ ಕಂಕಣ ಧಾರಣೆ ಮಾಡಲಾಯಿತು.

ಬೆಳಗ್ಗೆ 11. 35ಕ್ಕೆ ಅರಮನೆಯ ಆವರಣದ ಕೋಡಿ ಸೋಮೇಶ್ವರ ದೇವಾಲಯದ ಬಳಿ ಪಟ್ಟದ ಆನೆ ಹಾಗೂ ಕುದುರೆ, ಹಸು ಗಳಿಗೆ ಪೂಜೆ ಸಲ್ಲಿಸಲಾಯಿತು.

ಈ ವೇಳೆ ಕಳಸ ಹೊತ್ತು ಮಹಿಳೆಯರು ಆಗಮಿಸಿದರು. ಮಧ್ಯಾಹ್ನ 12.42 ರಿಂದ 12.58 ರ ಒಳಗೆ ಸಲ್ಲುವ ಶುಭ ಲಗ್ನದಲ್ಲಿ ರತ್ನ ಖಚಿತ ಸಿಂಹಾಸನವನ್ನೇರಿ ಯದುವೀ‌ರ್ ‌ಒಡೆಯರ್ ದರ್ಬಾರ್ ನಡೆಸಿದರು.

ರತ್ನ ಖಚಿತ ಸಿಂಹಾಸನವೇರಿ ಖಾಸಗಿ ದರ್ಬಾರ್ ಆರಂಭಿಸಿದ ಯದುವೀರ್ Read More

ಡಾ.ಯತೀಂದ್ರ ಸಿದ್ದರಾಮಯ್ಯ ಅಭಿಮಾನಿಗಳಿಂದ ಮಾವುತ ಮಡದಿಯರಿಗೆ ಬಾಗಿನ

ಮೈಸೂರು: ಅರಮನೆ ಆವರಣದಲ್ಲಿ ಡಾ. ಯತೀಂದ್ರ ಸಿದ್ದರಾಮಯ್ಯ ಅಭಿಮಾನಿ ಬಳಗ, ಕೆಂಪಿಸಿದ್ದನ ಹುಂಡಿ ರವಿಕುಮಾರ್ ನೇತೃತ್ವದಲ್ಲಿ ಮಾವುತರ ಮಡದಿಯರಿಗೆ‌ ಅರಿಶಿಣ ಕುಂಕುಮ ಬಳೆ ಸೀರೆ ನೀಡುವ ಮೂಲಕ ಬಾಗಿನ ಅರ್ಪಿಸಲಾಯಿತು.

ಆನೆ ಮಾವುತರ ಮಡದಿಯರಿಗೆ ಬಾಗಿನ ನೀಡುವ ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾನಿಲಯ‌ ನಿಕಟಪೂರ್ವ ಸಿಂಡಿಕೇಟ್ ಸದಸ್ಯರ ಜೆಟ್ಟಿಹುಂಡಿ ಡಾ.ಬಸವರಾಜು ಮಾತನಾಡಿ, ಮೈಸೂರು ದಸರಾ ವಿಶ್ವ ವಿಖ್ಯಾತ ಪರಂಪರೆಯನ್ನು ಹೊಂದಿರುವಂತದ್ದು. ಇದು ಮೈಸೂರಿಗೆ ಹಿರಿಮೆ ಜೊತೆಗೆ ಮೈಸೂರು ಶಾಂತಿಯ ಸಂಕೇತ ಇಂತಹ ಸುಂದರ ಅರಮನೆಯ ಒಳಗಡೆ ಆನೆ ಮಾವುತರ ಮಡದಿಯರಿಗೆ ಬಾಗಿನ ನೀಡುವ ಒಂದು ವಿಶಿಷ್ಟ ಪೂರ್ಣ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವಂಥದ್ದು ಮನಸ್ಸಿಗೆ ಬಹಳ ಸಂತೋಷವನ್ನುಂಟು ಮಾಡಿದೆ ಎಂದು ಹೇಳಿದರು.

ಮಾನವೀಯ ಮೌಲ್ಯಗಳು ಮನುಷ್ಯನಿಗೆ ಎಷ್ಟು ಮುಖ್ಯ, ಮನುಷ್ಯ ಸಂಬಂಧಕ್ಕೆ ಅದರದೇ ಆದ ಗೌರವವಿದೆ ಅದಕ್ಕೆ ಪೂರಕವಾಗಿ ಬಾಗಿನವನ್ನು ನೀಡಿರುವುದು ಬಹಳ ವಿಶಿಷ್ಟ ಹಾಗೂ ಎಮ್ಮೆ ವಿಚಾರ ಎಂದು ತಿಳಿಸಿದರು.

ಈ ವೇಳೆ ಮೈಸೂರು ಕುರುಬರ ಸಂಘದ ಜಿಲ್ಲಾಧ್ಯಕ್ಷರಾದ ಶಿವಪ್ಪ ಕೋಟೆ, ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಉಪಾಧ್ಯಕ್ಷರಾದ ಮಂಜುನಾಥ ವೈ.ಕೆ, ಮೈಸೂರು ಕಾರಾಗೃಹ ಮಂಡಳಿ ಸದಸ್ಯರಾದ ಪವನ್ ಸಿದ್ದರಾಮ, ಕಾಂಗ್ರೆಸ್ ಮುಖಂಡರಾದ ಮಹೇಶ್, ಚೇತನ್ ಹರಪನಹಳ್ಳಿ ಹಾಗೂ ಮಾವುತರ ಕುಟುಂಬದವರು ಹಾಜರಿದ್ದರು.

ಡಾ.ಯತೀಂದ್ರ ಸಿದ್ದರಾಮಯ್ಯ ಅಭಿಮಾನಿಗಳಿಂದ ಮಾವುತ ಮಡದಿಯರಿಗೆ ಬಾಗಿನ Read More

ಅರಮನೆಗೆ ಬಂದ ಗಜಪಡೆ:ಭವ್ಯ ಸ್ವಾಗತ

ಮೈಸೂರು: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ಅರಮನೆಗೆ ಆಗಮಿಸಿ ವಿಶ್ರಾಂತಿ ಪಡೆಯುತ್ತಿವೆ.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರ ನೇತೃತ್ವದಲ್ಲಿ ಜನಪ್ರತಿನುಧಿಗಳು,ಅಧಿಕಾರಿಗಳು ಗಜಪಡೆಯನ್ನು ಅರಮನೆಯ ಪೂರ್ವ ದಿಕ್ಕಿನಲ್ಲಿರುವ ಜಯಮಾರ್ತಾಂಡ ದ್ವಾರದಲ್ಲಿ ಅಂಬಾವಿಲಾಸ ಅರಮನೆಗೆ ಸ್ವಾಗತಿಸಿದರು.

ಈ ವೇಳೆ ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್, ಶಾಸಕರಾದ ತನ್ವೀರ್ ಸೇಠ್, ಜಿ.ಟಿ.ದೇವೇಗೌಡ, ಶ್ರೀವತ್ಸ, ರಮೇಶ್ ಬಂಡಿಸಿದ್ದೇಗೌಡ, ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಆಯೂಬ್ ಖಾನ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಸಿಇಒ ಎಸ್.ಯುಕೇಶ್ ಕುಮಾರ್, ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ, ಅಪರ ಜಿಲ್ಲಾಧಿಕಾರಿ ಡಾ ಪಿ. ಶಿವರಾಜು, ಡಿಸಿಪಿ ಸುಂದರ್ ರಾಜ್ ಮತ್ತಿತರರು ಭವ್ಯ ಅರಮನೆಗೆ‌ ಗಜಪಡೆಯನ್ನು ಬರಮಾಡಿಕೊಂಡರು.

ಅರಮನೆಗೆ ಬಂದ ಗಜಪಡೆ:ಭವ್ಯ ಸ್ವಾಗತ Read More

ಅಂಬಾರಿ ಕಾಣೆಯಾದ ಸುದ್ದಿ ಬಗ್ಗೆ ಸ್ಪಷ್ಟನೆ ನೀಡುವಂತೆ ತೇಜಸ್ವಿ ಮನವಿ

ಮೈಸೂರು,ಮಾ.9: ಕಳೆದ ಕೆಲವು ದಿನಗಳಿಂದ ಸುದ್ದಿ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮೈಸೂರು ಅರಮನೆಯಲ್ಲಿನ ಅಂಬಾರಿ ಕಾಣೆಯಾಗಿದೆ ಎಂಬ ಸುದ್ದಿ ಹರಡಿ ಆತಂಕ ಸೃಷ್ಟಿ ಯಾಗಿದೆ.

ಈ ಸುದ್ದಿ ರಾಜ್ಯದಾದ್ಯಂತ ಹರಿದಾಡುತ್ತಿದೆ ಇದರ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರಲ್ಲಿ ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಮನವಿ ಮಾಡಿದ್ದಾರೆ.

ಅಂಬಾರಿ‌ ಸರ್ಕಾರದ ಸುಪರ್ದಿಯಲ್ಲಿರುತ್ತದೆ ಅಂದರೆ ಅರಮನೆ ಮಂಡಳಿ ಹಾಗೂ ಸರ್ಕರ ಕೂಡಾ ಈ ಬಗ್ಗೆ ಸ್ಪಷ್ಟವಾಗಿ ತಿಳಿಸಬೇಕಿದೆ.

ಕಳೆದ ಮೂರು ತಿಂಗಳಿಂದ ಅಂಬಾರಿ ಜನರಿಗೆ ನೋಡಲು ಸಿಕ್ಕಿಲ್ಲಾ ಹಾಗಾದರೆ ಅದು ಎಲ್ಲಿದೆ ತಿಳಿಸಲೇಬೇಕು ಎಂದು ಜನತೆ ಆಗ್ರಹಿಸಿದ್ದಾರೆ.

ಅಂಬಾರಿ ಕಾಣೆಯಾಗಿದೆ ಎಂಬ ಸುದ್ದಿ ರಾಜ್ಯದಾದ್ಯಂತ ಹರಿದಾಡುತ್ತಿದೆ ರಾಜ್ಯದ ಜನತೆ‌ ಇದರಿಂದ ಆತಂಕಕ್ಕೆ ಒಳಗಾಗಿದ್ದಾರೆ ಎಂದು ತೇಜಸ್ವಿ ತಿಳಿಸಿದ್ದಾರೆ.

ಈ ರೀತಿಯ ಗೊಂದಲಗಳಿಗೆ ತೆರೆ ಎಳೆಯ ಬೇಕೆಂದರೆ ಮಹಾರಾಣಿ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರು ರಾಜ್ಯದ ಜನತೆಗೆ ಸ್ಪಷ್ಟನೆ ನೀಡಬೇಕು ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಕೋರಿದ್ದಾರೆ.

ಅಂಬಾರಿ ಕಾಣೆಯಾದ ಸುದ್ದಿ ಬಗ್ಗೆ ಸ್ಪಷ್ಟನೆ ನೀಡುವಂತೆ ತೇಜಸ್ವಿ ಮನವಿ Read More

ಪತ್ರಕರ್ತರ ಮೇಲೆ ಹಲ್ಲೆ: ಅರಮನೆ ಉಪ ನಿರ್ದೇಶಕರ ಬಂಧನಕ್ಕೆ ತೇಜಸ್ವಿ ಒತ್ತಾಯ

ಮೈಸೂರು: ಮೈಸೂರಿನ ಪತ್ರಕರ್ತರ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ ಅರಮನೆ ಉಪ ನಿರ್ದೇಶಕರನ್ನು ಕೂಡಲೇ ಬಂಧಿಸುವಂತೆ ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಪೊಲೀಸರನ್ನು ಒತ್ತಾಯಿಸಿದ್ದಾರೆ.

ಹಿಂದಿನಿಂದಲೂ ಅರಮನೆ ಉಪ ನಿರ್ದೇಶಕ ಸುಬ್ರಹ್ಮಣ್ಯ ಅವರ ಮೇಲೆ ಸಾಲು ಸಾಲು ಅರೋಪಗಳು ಬಂದಿತ್ತು ಆದರೆ ಸರ್ಕಾರ ಯಾವುದೇ ರೀತಿಯ ಕ್ರಮ ಕೈಗೊಳ್ಳಲಿಲ್ಲ ಆಗಲೆ ಅವರ ವಿರುದ್ಧ ಸೂಕ್ತ ಕ್ರಮ ಕೈ ಗೊಂಡಿದ್ದರೆ ಈ ರೀತಿಯ ಘಟನೆ ನಡೆಯುತ್ತಿರಲಿಲ್ಲ ಎಂದು ತೇಜಸ್ವಿ ಬೇಸರ ವ್ಯಕ್ತಪಡಿಸಿದ್ದಾರೆ.

ನಾಲ್ಕು ಸ್ತಂಭ ಗಳಲ್ಲಿ ಒಂದಾಗಿರುವ ಮಾಧ್ಯಮ ದ ಪತ್ರಕರ್ತರಿಗೆ ಹಲ್ಲೆ ನಡೆಸಿ ಅವಾಚ್ಯ ಶಬ್ದ ಗಳಿಂದ ನಿಂದಿಸಿರುವುದು ಖಂಡನೀಯ ಎಂದು ಪ್ರಕಟಣೆಯಲ್ಲಿ ತೇಜಸ್ವಿ ತಿಳಿಸಿದ್ದಾರೆ.

ಈಗಾಗಲೇ ಅರಮನೆ ಉಪ ನಿರ್ದೇಶಕ ಸುಬ್ರಹ್ಮಣ್ಯ ಅವರ ಮೇಲೆ ದೇವರಾಜ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಗೊತ್ತಾಗಿದೆ,
ಪ್ರಕರಣ ದಾಖಲಾದರೆ ಸಾಲದು ಕೂಡಲೇ ಸುಬ್ರಹ್ಮಣ್ಯ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕು ಇಲ್ಲವಾದಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ತೇಜಸ್ವಿ ನಾಗಲಿಂಗಸ್ವಾಮಿ ಎಚ್ಚರಿಸಿದ್ದಾರೆ.

ಪತ್ರಕರ್ತರ ಮೇಲೆ ಹಲ್ಲೆ: ಅರಮನೆ ಉಪ ನಿರ್ದೇಶಕರ ಬಂಧನಕ್ಕೆ ತೇಜಸ್ವಿ ಒತ್ತಾಯ Read More

ಸಾಂಸ್ಕೃತಿಕ ನಗರಿಯಲ್ಲಿ ಮಹಾ ಶಿವರಾತ್ರಿ ಸಂಭ್ರಮ

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಮಹಾಶಿವರಾತ್ರಿಯ ಸಡಗರ ಸಂಭ್ರಮ ಮನೆ ಮಾಡಿದೆ.

ಮೈಸೂರಿನ ವಿವಿಧ ಶಿವಾಲಯಗಳಲ್ಲಿ ಮಹೇಶ್ವರನಿಗೆ ಅಭಿಷೇಕ, ಪೂಜೆ ವಿಜೃಂಭಣೆಯಿಂದ ನೆರವೇರಿವೆ.

ಶಿವಭಕ್ತರಿಂದ ಹರನಾಮ ಸ್ತುತಿ ಮುಗಿಲು ಮುಟ್ಟಿದೆ.

ಮಹಾ ಶಿವರಾತ್ರಿ ಪ್ರಯುಕ್ತ ಮೈಸೂರು ಅರಮನೆ ಆವರಣದಲ್ಲಿರುವ ತ್ರಿಣೇಶ್ವರ ದೇಗುಲದಲ್ಲಿ ಶಿವಲಿಂಗಕ್ಕೆ ಮುಂಜಾನೆಯಿಂದಲೇ ವಿಶೇಷ ಪೂಜೆ ಸಲ್ಲಿಸಿ ಚಿನ್ನದ ಮುಖವಾಡ ಧಾರಣೆ ಮಾಡಲಾಗಿದೆ.

ತ್ರಿಣೇಶ್ವರನಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಸಹಸ್ರನಾಮಾರ್ಚನೆ ಸೇರಿದಂತೆ ವಿಶೇಷ ಪೂಜೆಗಳು ನೇರವೇರಿದೆ.

ತ್ರಿಣೇಶ್ವರ ದೇವಾಲಯದಲ್ಲಿ ವರ್ಷಕ್ಕೊಮ್ಮೆ ಚಿನ್ನದ ಮುಖವಾಡ ಧಾರಣೆ ಮಾಡಲಾಗುತ್ತದೆ. ಇದನ್ನು
ಜಯಚಾಮರಾಜೇಂದ್ರ ಒಡೆಯರ್ ಅವರು ಕಾಣಿಕೆ ರೂಪದಲ್ಲಿ ನೀಡಿದ್ದಾರೆ.

11 ಕೆ.ಜಿ ತೂಕದ ಚಿನ್ನದ ಮುಖವಾಡವನ್ನು
1952ರಲ್ಲಿ ಹರಕೆ ರೂಪದಲ್ಲಿ ನೀಡಲಾಗಿದ್ದು, ಶ್ರೀ ಕಂಠದತ್ತನರಸಿಂಹರಾಜ ಒಡೆಯ‌ರ್ ಜನ್ಮದಿನದ ನೆನಪಿನಾರ್ಥ ಚಿನ್ನದ ಮುಖವಾಡ ಧಾರಣೆ ಮಾಡಲಾಗುತ್ತದೆ.

ಶಿವನ ದರುಶನಕ್ಕೆ ಭಕ್ತಸಾಗರವೇ ಹರಿದು ಬರುತ್ತಿದೆ.ನಾಳೆ ಗುರುವಾರ ಬೆಳಿಗ್ಗೆ 11 ಗಂಟೆ ವರೆಗೆ ದರುಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ನಂತರ ಜಿಲ್ಲಾ ಖಜಾನೆಗೆ ಚಿನ್ನದ ಮುಖವಾಡವನ್ನು ರವಾನಿಸಲಾಗುತ್ತದೆ.

ಚಿನ್ನದ ಮುಖವಾಡ ಧಾರಣೆ ಮಾಡಿದ ಶಿವಲಿಂಗ ದರುಶನ ಮಾಡಿ ಭಕ್ತರು ಪುನೀತರಾಗಿದ್ದಾರೆ.

ಭಕ್ತರಿಗೆ ಪ್ರಸಾದ ವಿನಯೋಗ ವ್ಯವಸ್ಥೆ ಮಾಡಲಾಗಿದೆ.

ಹಾಗೆಯೇ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿರುವ ಶಿವ ದೇವಾಲಯ, ದಿವಾನ್ಸ್ ರಸ್ತೆಯಲ್ಲಿರುವ ಅಮೃತೇಶ್ವರ ದೇವಾಲಯ ಸೇರಿದಂತೆ ವಿವಿಧ ಶಿವ ದೇವಾಲಯಗಳಲ್ಲಿ ಈಶ್ವರನಿಗೆ ವಿಶೇಷ ಪೂಜೆಯನ್ನು ಇಂದು ಬೆಳಗಿನಿಂದ‌ ನೆರವೇರಿಸಲಾಗಿದ್ದು,ನಾಳೆ ಮುಂಜಾನೆವರೆಗೂ ಪೂಜೆ ಸಲ್ಲಿಸಲಾಗುತ್ತದೆ.

ಅರಮನೆ ಆವರಣದಲ್ಲಿರುವ ತ್ರಿಣೇಶ್ವರ ದೇವಾಲಯಕ್ಕೆ ರಾಜವಂಶಸ್ಥರಾದ ಯದುವೀರ‌ ಕೃಷ್ಣದತ್ತ‌ ಚಾಮರಾಜ‌ ಒಡೆಯರ್ ಅವರು ಪತ್ನಿ ತ್ರಿಶಿಕಾ ಮತ್ತು ಇಬ್ಬರು ಮಕ್ಕಳೊಂದಿಗೆ ಭೇಟಿ ನೀಡಿ ತ್ರಿಣೇಶ್ವರನ ದರ್ಶನ ಪಡೆದರು.

ಸಾಂಸ್ಕೃತಿಕ ನಗರಿಯಲ್ಲಿ ಮಹಾ ಶಿವರಾತ್ರಿ ಸಂಭ್ರಮ Read More