ಪಿ.ಕಾಳಿಂಗರಾವ್ ಜನ್ಮದಿನೋತ್ಸವ: ಪುಷ್ಪನಮನ ಸಲ್ಲಿಸಿದ ಸಿಎಂ

ಮೈಸೂರು: ಕರ್ನಾಟಕ ಸುಗಮ ಸಂಗೀತದ ಪಿತಾಮಹ ಗಾನಕೋಗಿಲೆ ಪಿ. ಕಾಳಿಂಗರಾವ್ ಅವರ ಜನ್ಮದಿನೋತ್ಸವ ಪ್ರಯುಕ್ತ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪುಷ್ಪನಮನ ಸಲ್ಲಿಸಿದರು.

ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಕಚೇರಿಯಲ್ಲಿ ಪಿ‌.ಕಾಳಿಂಗರಾವ್ ಅವರ ಭಾವಚಿತ್ರಕ್ಕೆ ಸಿಎಂ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು.

ಈ ಸಂಧರ್ಭದಲ್ಲಿ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಅವರು ಮಾತನಾಡಿ, ಸುಗಮ ಸಂಗೀತ ಕ್ಷೇತ್ರದ ಪಿತಾಮಹ ಪಿ.ಕಾಳಿಂಗರಾಯರು ಕರ್ನಾಟಕ ಏಕೀಕರಣ ಸಂಧರ್ಭದಲ್ಲಿ ಹಾಡಿದ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಕರ್ನಾಟಕದ ಅಸ್ಮಿತೆ ಶಕ್ತಿಯನ್ನ ಹೆಚ್ಚಿಸಿತು ಎಂದು ಸ್ಮರಿಸಿದರು.

ಮೈಸೂರು ಅನಂತಸ್ವಾಮಿ ಅವರು ಸೇರಿದಂತೆ ಹಲವಾರು ಗಾಯಕರಿಗೆ ಕಾಳಿಂಗರಾಯರು ಪ್ರೇರಣೆಯಾಗಿದ್ದರು, ಸಾವಿರಾರು ಕಲಾವಿದರು ವಿಶ್ವ ಸುಗಮಸಂಗೀತ ದಿನಾಚರಣೆಯನ್ನಾಗಿಯೂ ಸಹ ಆಚರಿಸುತ್ತಿದ್ದಾರೆ, ನಮ್ಮ ಮೈಸೂರು ದಸರಾ ವಸ್ತು ಪ್ರದರ್ಶನದಲ್ಲಿ ಗಾನಕೋಗಿಲೆ ಪಿ. ಕಾಳಿಂಗರಾಯರ ಹೆಸರಿನಲ್ಲಿ ಸಾಂಸ್ಕೃತಿಕ ವೇದಿಕೆಯಿದ್ದು, ಪ್ರತಿದಿನ ವಿವಿಧ ಕಲಾಪ್ರಾಕಾರಗಳ ರಾಜ್ಯದ ವಿವಿಧ ಜಿಲ್ಲೆಯ ಮತ್ತು ಸ್ಥಳೀಯ ಕಲಾವಿದರಿಗೆ ವೇದಿಕೆ ಕಲ್ಪಿಸಿಕೊಡಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮ ದಲ್ಲಿ ಸಚಿವರಾದ ಕೆ.ವೆಂಕಟೇಶ್, ಜಮೀರ್ ಅಹಮದ್ ಖಾನ್, ಭೈರತ್ತಿ ಸುರೇಶ್, ಶಾಸಕರಾದ ತನ್ವೀರ್ ಸೇಠ್, ಕೆ.ಹರೀಶ್ ಗೌಡ, ಪುಟ್ಟಣ್ಣಯ್ಯ, ಪೊನ್ನಣ್ಣ, ರಾಘವೇಂದ್ರ ಇಟ್ನಾಳ್, ಮಾಜಿ ಶಾಸಕ ಎಂ.ಕೆ ಸೋಮಶೇಖರ್, ಕಾಂಗ್ರೆಸ್ ನಗರಾಧ್ಯಕ್ಷ ಆರ್.‌ಮೂರ್ತಿ, ಕಸಾಪ ಮಾಜಿ ಅಧ್ಯಕ್ಷರಾದ ವೈ.ಡಿ ರಾಜಣ್ಣ, ಚಂದ್ರಶೇಖರ್, ಸುಗಮ ಸಂಗೀತ ಪರಿಷತ್ ಅಧ್ಯಕ್ಷ ನಾಗರಾಜ ವಿ ಭೈರಿ, ಪಾಲಿಕೆ ಮಾಜಿ ಸದಸ್ಯರಾದ ಸೈಯದ್ ಹಜರತ್, ಕೆ.ವಿ ಮಲ್ಲೇಶ್, ಎಂಕೆ ಅಶೋಕ್, ರಘುರಾಜೇ ಅರಸ್, ಗಯಾಜ್ ಅಹಮದ್, ರಾಕೇಶ್, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ನಿರೂಪಕ ಅಜಯ್ ಶಾಸ್ತ್ರಿ, ಕೈಸರ್ ಅಹಮದ್, ಮಹೇಂದ್ರ ಕಾಗಿನೆಲೆ, ರಂಗಸ್ವಾಮಿ ಪಾಪು, ಲತಾ ರಂಗನಾಥ್, ಜಯಲಕ್ಷ್ಮಿ, ಶಾಂತಮ್ಮ, ನಾಗೇಶ್ ಮತ್ತಿತರರು ಹಾಜರಿದ್ದರು.

ಪಿ.ಕಾಳಿಂಗರಾವ್ ಜನ್ಮದಿನೋತ್ಸವ: ಪುಷ್ಪನಮನ ಸಲ್ಲಿಸಿದ ಸಿಎಂ Read More