ಒಂದು ದೇಶ ಒಂದು ಚುನಾವಣೆ:ಆಲನಹಳ್ಳಿ ಚೇತನ್ ಗೌಡ ಅಸಮಾಧಾನ

ಮೈಸೂರು: ಕೇಂದ್ರ ಸರ್ಕಾರ ಕಲಾಪದಲ್ಲಿ
ಮಂಡಿಸಿರುವ ಒಂದುದೇಶ-
ಒಂದುಚುನಾವಣೆ ಪದ್ಧತಿ
ಪ್ರಜಾಪ್ರಭುತ್ವ ವಿರೋಧಿ ಮತ್ತು ಕಳಂಕ ತರುವ ವಿಷಯವಾಗಿದೆ ಎಂದು ಭಾರತೀಯ ರಾಷ್ಟ್ರೀಯ ಟ್ರೇಡ್ ಯೂನಿಯನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆಲನಹಳ್ಳಿ
ಎಂ ಎನ್ ಚೇತನ್ ಗೌಡ ಆಕ್ಷೇಪಿಸಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು, ಕೇಂದ್ರ ಸರ್ಕಾರವು ತುಘಲಕ್ ಮಾದರಿ, ಹಿಟ್ಲರ್ ಮಾದರಿ ಆಡಳಿತ ನಡೆಸುತ್ತಿದೆ. ಕಳೆದ ಹದಿನೈದು ವರ್ಷಗಳಿಂದ ನೋಟು ರದ್ದತಿ, ಕಾಶ್ಮೀರದ 370 ರದ್ದು ಸೇರಿದಂತೆ ಹಲವು ಕಾಯಿದೆಗಳು ಪ್ರಜಾಪ್ರಭುತ್ವವನ್ನು ಕಸಿದುಕೊಂಡಂತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮ್ಮದು ಒಕ್ಕೂಟ ವ್ಯವಸ್ಥೆ, ಒಂದು ದೇಶ ಒಂದು ಚುನಾವಣೆ ಸರಿಯಾಗುವುದಿಲ್ಲ, ಕೇಂದ್ರ ಸರ್ಕಾರ ಆಯಾ ರಾಜ್ಯಗಳ ಬೇಡಿಕೆಯನ್ನು ಪರಿಗಣಿಸಬೇಕು ಎಂದು ಎಂ ಎನ್ ಚೇತನ್ ಗೌಡ ಒತ್ತಾಯಿಸಿದ್ದಾರೆ.

ಒಂದು ದೇಶ ಒಂದು ಚುನಾವಣೆ:ಆಲನಹಳ್ಳಿ ಚೇತನ್ ಗೌಡ ಅಸಮಾಧಾನ Read More