ನೈರುತ್ಯ ರೈಲ್ವೇ ಕನ್ನಡ ಸಂಘದಿಂದಕನ್ನಡ ರಾಜ್ಯೋತ್ಸವ ಆಚರಣೆ

ಹುಬ್ಬಳ್ಳಿ: ನೈರುತ್ಯ ರೈಲ್ವೇ ಕನ್ನಡ ಸಂಘ ಹುಬ್ಬಳ್ಳಿ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧಾರವಾಡ ಶಾಖೆಯ ಪಾದಾಧಿಕಾರಿಗಳ ಮಕ್ಕಳು ಕನ್ನಡ ನಾಡಿನ ಹೆಮ್ಮೆಯ ಹಾಡಿಗೆ ನೃತ್ಯ ಮಾಡಿ ಎಲ್ಲರ ಗಮನ ಸೆಳೆದರು.

ಈ ಮಕ್ಕಳ ನೃತ್ಯದ ಮೋಡಿಯನ್ನು ಪ್ರಶಂಸಿಸಿದ ಉಪಾಧ್ಯಕ್ಷರಾದ ಪ್ರಾಣೇಶ ಅವರು ನಗದು ಬಹುಮಾನ ನೀಡಿ ಗೌರವಿಸಲಾಯಿತು.

ನೃತ್ಯದಲ್ಲಿ ನಿವೇದಿತಾ,ಶ್ರಾವಣಿ,ರೋಷನಿ,
ಮಿಜ್ಬಾ ಮತ್ತು ಅಚಲ ಭಾಗವಹಿಸಿದ್ದರು.

ಧಾರವಾಡ ಶಾಖೆಯ ಅಧ್ಯಕ್ಷರಾದ ರಾ.ಹ ಕೊಂಡಕೇರ, ಉಪಾಧ್ಯಕ್ಷರಾದ ಮಹೇಶ ಎಸ್ ತಳವಾರ ಪದಾಧಿಕಾರಿಗಳಾದ ಮುನೀರ್ ಅಹ್ಮದ್ ಕುರ್ಲಗೇರಿ,ಲಕ್ಷ್ಮಣ ಬಂಡಿವಡ್ಡರ ಹಾಗೂ ಎಲ್ಲ ಕುಟುಂಬ ವರ್ಗದವರು ಹಾಜರಿದ್ದರು.

ನೈರುತ್ಯ ರೈಲ್ವೇ ಕನ್ನಡ ಸಂಘದಿಂದಕನ್ನಡ ರಾಜ್ಯೋತ್ಸವ ಆಚರಣೆ Read More

ನೈರುತ್ಯ ರೈಲ್ವೇ ಕನ್ನಡ ಸಂಘ ಧಾರವಾಡ ಶಾಖೆಯಲ್ಲಿ ರಾಜ್ಯೋತ್ಸವ

ಧಾರವಾಡ: ನೈರುತ್ಯ ರೈಲ್ವೇ ಕನ್ನಡ ಸಂಘ ಧಾರವಾಡ ಶಾಖೆ ವತಿಯಿಂದ ಧಾರವಾಡ ರೈಲು ನಿಲ್ದಾಣದಲ್ಲಿ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸುವುದರ ಮೂಲಕ ಕನ್ನಡ ರಾಜ್ಯೋತ್ಸವವನ್ನ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರಾ.ಹ ಕೊಂಡಕೇರ,ಉಪಾಧ್ಯಕ್ಷ ಮಹೇಶ ಎಸ್ ತಳವಾರ,ಖಜಾಂಚಿ ಶಿವರಾಜ ಮರಿ ಉಜ್ಜಪ್ಪನವರ,ಎಸ್ ಎಸ್ ಇ ಶಿವಾಜಿ ಮಾಯೆಕರ್, ಸಂಘದ ಸದಸ್ಯರಾದ ಹನುಮಂತ ಅಡಗಲ್,ಮಂಜುನಾಥ ಮುತ್ತಣ್ಣವರ,ಸುಬ್ಬಣ್ಣ ಬಳ್ಳಾರಿ,ಪ್ರದೀಪ್ ಕಾಂಬ್ಳೆ ಸೇರಿದಂತೆ ಅನೇಕ ಕನ್ನಡ ಪ್ರೇಮಿಗಳು, ಹಿರಿಯರು ಉಪಸ್ಥಿತರಿದ್ದರು.

ನೈರುತ್ಯ ರೈಲ್ವೇ ಕನ್ನಡ ಸಂಘ ಧಾರವಾಡ ಶಾಖೆಯಲ್ಲಿ ರಾಜ್ಯೋತ್ಸವ Read More

ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಮೂಲಸೌಕರ್ಯ ಯೋಜನೆ ಪರಿಶೀಲಿಸಿದ ಯದುವೀರ್

ಮೈಸೂರು: ಸಂಸತ್ ಸದಸ್ಯ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮೈಸೂರು ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಮೂಲಸೌಕರ್ಯ ಯೋಜನೆಗಳನ್ನು ಪರಿಶೀಲಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು

ವಿಭಾಗದಾದ್ಯಂತ ನಡೆಯುತ್ತಿರುವ ಪ್ರಮುಖ ಮೂಲಸೌಕರ್ಯ ಹಾಗೂ ಸೇವಾ ಸಂಬಂಧಿತ ಅಭಿವೃದ್ಧಿಗಳ ಕುರಿತು ವಿವರ ಪಡೆದರು‌

ಮೈಸೂರು–ಚಾಮರಾಜನಗರ ರೈಲ್ವೆ ಮಾರ್ಗದ ಡಬಲಿಂಗ್ ಕಾಮಗಾರಿಗೆ ಸಂಬಂಧಿಸಿದ ಅಂತಿಮ ಸ್ಥಳ ಸಮೀಕ್ಷೆ ಆಗಿದ್ದು, ಈ ಮಾರ್ಗದ ಉದ್ದವು 60 ಕಿಮೀ. ಈ ಯೋಜನೆಯ ಕ್ಷೇತ್ರ ಸಮೀಕ್ಷೆ ಪೂರ್ಣಗೊಂಡಿದ್ದು, ಈಗ ವಿವರವಾದ ಯೋಜನಾ ವರದಿ ತಯಾರಾಗುತ್ತಿದೆ. ಈ ವರದಿಯನ್ನು ಆಗಸ್ಟ್ 2025ರೊಳಗೆ ರೈಲ್ವೆ ಮಂಡಳಿಗೆ ಸಲ್ಲಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು

ಅರಸೀಕೆರೆಯ ಮೂಲಕ ಹಾಸನ–ಮೈಸೂರು ರೈಲ್ವೆ ಮಾರ್ಗದ ಡಬಲಿಂಗ್ ಕಾರ್ಯದ ಪರಿಶೀಲನೆಯಾಗಿದ್ದು, ಈ ಮಾರ್ಗವು 165.80 ಕಿಮೀ ವಿಸ್ತಾರ ಹೊಂದಿದೆ, ಇದರ ಅಂತಿಮ ಸ್ಥಳ ಸಮೀಕ್ಷೆಗೆ ರೈಲ್ವೆ ಮಂಡಳಿಯಿಂದ ಆಗಸ್ಟ್ 2024ರಲ್ಲಿ ಅನುಮೋದನೆ ದೊರಕಿದೆ. ಹೆಲಿಕಾಪ್ಟರ್ ಆಧಾರಿತ ಗಗನ ಸಮೀಕ್ಷೆ ಪೂರ್ಣಗೊಂಡಿದ್ದು, ಪ್ರಸ್ತುತ ಭೂಸಮೀಕ್ಷೆ ನಡೆಯುತ್ತಿದೆ. ಈ ಯೋಜನೆ ಪೂರ್ಣಗೊಂಡ ಬಳಿಕ ಈ ಮಾರ್ಗದಲ್ಲಿ ರೈಲು ಸಂಚಾರ
ಸಾಮರ್ಥ್ಯ ಹೆಚ್ಚಳವಾಗಲಿದ್ದು, ಕಾರ್ಯಾಚರಣೆ ದಕ್ಷತೆಗೂ ಸಹಕಾರಿ ಆಗಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಮೈಸೂರಿನ ರೈಲ್ವೆ ನಿಲ್ದಾಣದ ಭಾರವನ್ನು ಕಡಿಮೆ ಮಾಡಲು ಪ್ರಸ್ತಾಪಿತ ನಾಗನಹಳ್ಳಿ ಹೊಸ ಟರ್ಮಿನಲ್ ಅಭಿವೃದ್ಧಿ ಕಾಮಗಾರಿಯ ಮೇಲೂ ಚರ್ಚೆ ನಡೆಯಿತು.

580 ಮೀ ಉದ್ದ ಮತ್ತು 10.5 ಮೀ ಅಗಲದ ವೇದಿಕೆಯನ್ನು ವಿಸ್ತರಿಸುವುದು
760 ಮೀ ಉದ್ದದ ಪ್ಯಾಸೆಂಜರ್ ಲೈನ್ ಮತ್ತು ಸ್ಟೆಬ್ಲಿಂಗ್ ಲೈನ್ ನಿರ್ಮಾಣ
750 ಮೀ ಉದ್ದದ ಶಂಟಿಂಗ್ ನೆಕ್, ಡ್ರೈ ಪಿಟ್ ಲೈನ್, 350 ಮೀ ಉದ್ದದ ಮೆಷಿನ್ ಸೈಡಿಂಗ್
1,176 ಚದರ ಮೀ ವ್ಯಾಪ್ತಿಯ ವೇದಿಕೆ ಛಾವಣಿ,ನಾಲ್ಕು ಸಣ್ಣ ಸೇತುವೆ ಹಾಗೂ ಒಂದು ರಸ್ತೆ ಕೆಳಸೇತುವೆ ವಿಸ್ತರಣೆ
ಈ ಯೋಜನೆಗಾಗಿ ಒಟ್ಟು 8 ಎಕರೆ 29 ಗುಂಟೆ ಭೂಮಿ ಗುರುತಿಸಲಾಗಿದ್ದು, ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಯದುವೀರ್ ಅವರಿಗೆ ಮನವಿ ಮಾಡಲಾಯಿತು.

ಕುವೆಂಪುನಗರ, ಮೈಸೂರುನಲ್ಲಿರುವ ಪಿಆರ್‌ಎಸ್ ಕೌಂಟರ್‌ಗೆ ಬಾಡಿಗೆರಹಿತ ವಸತಿ ಒದಗಿಸುವ ಕುರಿತು ವಿನಂತಿಸಲಾಯಿತು.

ಯದುವೀರ್ ಅವರು ಮೈಸೂರು ರೈಲ್ವೆ ವಿಭಾಗದ ಶ್ಲಾಘನೀಯ ಕಾರ್ಯಗಳನ್ನು ಮೆಚ್ಚಿ ರೈಲು ಸಂಪರ್ಕ ವಿಸ್ತರಣೆ ಹಾಗೂ ಪ್ರಯಾಣಿಕ ಸೌಲಭ್ಯಗಳ ಅನುಕೂಲತೆಗೆ ಉಪಯುಕ್ತ ಸಲಹೆಗಳನ್ನು ನೀಡಿದರು.

ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್,ಶಮ್ಮಸ್ ಹಮೀದ್,
ಗಿರೀಶ ಧರ್ಮರಾಜ ಕಲಗೊಂಡ ಮತ್ತಿತರರು ಉಪಸ್ಥಿತರಿದ್ದರು.

ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಮೂಲಸೌಕರ್ಯ ಯೋಜನೆ ಪರಿಶೀಲಿಸಿದ ಯದುವೀರ್ Read More

ನೈರುತ್ಯ ರೈಲ್ವೆ ಮೈಸೂರು ವಿಭಾಗದಿಂದ 76ನೇ ಗಣರಾಜ್ಯೋತ್ಸವ ಆಚರಣೆ,

ಮೈಸೂರು: ನೈರುತ್ಯ ರೈಲ್ವೆಯ ಮೈಸೂರು ವಿಭಾಗವು 76ನೇ ಗಣರಾಜ್ಯೋತ್ಸವವನ್ನು ಉತ್ಸಾಹದಿಂದ ಆಚರಿಸಿತು.

ಈ ಸಂದರ್ಭದಲ್ಲಿ ವಿಭಾಗವು ತನ್ನ ಪ್ರಮುಖ ಸಾಧನೆಗಳನ್ನು ಪ್ರದರ್ಶಿಸಿದ್ದು, ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿತು.

ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶಿಲ್ಪಿ ಅಗರವಾಲ್ ಅವರು ಮೈಸೂರು ಯಾದವಗಿರಿ ರೈಲ್ವೆ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿ, ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್) ಮತ್ತು ಸ್ಕೌಟ್ಸ್ ಮತ್ತು ಗೈಡ್ಸ್ ಅವರ ಪರೇಡ್‌ ವೀಕ್ಷಿಸಿದರು.

ನಂತರ ಮಾತನಾಡಿದ ಶಿಲ್ಪಿ ಅಗರವಾಲ್,ಹಣಕಾಸು ವೃದ್ಧಿ, ಸುರಕ್ಷತಾ ಕ್ರಮಗಳು, ಮೂಲಸೌಕರ್ಯ ಸುಧಾರಣೆ ಮತ್ತು ಪ್ರಯಾಣಿಕರ ಸೇವೆಗಳ ವಿಷಯದಲ್ಲಿ ವಿಭಾಗದ ಅತ್ಯುತ್ತಮ ಸಾಧನೆಗಳನ್ನು ವಿವರಿಸಿದರು.

ಹಣಕಾಸಿನ ಸಾಧನೆ ಈ ಸಾಲಿನಲ್ಲಿ 1,000 ಕೋಟಿ ಮೀರಿದ ಒಟ್ಟು ಆದಾಯವನ್ನು ವಿಭಾಗ ಗಳಿಸಿದ್ದು, ಸರಕು ಆದಾಯ 649.44 ಕೋಟಿ ಮತ್ತು ಪ್ರಯಾಣಿಕರ ಆದಾಯ 315.51 ಕೋಟಿ ಆಗಿದೆ. ವಾಹನಗಳ ಸಾಗಾಟಕ್ಕಾಗಿ 73 ಎನ್‌ಎಮ್‌ಜಿ ರೇಕ್‌ಗಳನ್ನು ಲೋಡ್ ಮಾಡುವ ಮೂಲಕ ಮತ್ತು ಆಹಾರ ಧಾನ್ಯಗಳ ಸಾಗಾಟದಲ್ಲಿ ದೊಡ್ಡ ಪ್ರಮಾಣದ ಬೆಳವಣಿಗೆ ಕಂಡುಬಂದಿದೆ ಎಂದು ವಿವರಿಸಿದರು.

ಕುಂಭಮೇಳವನ್ನು ಆಚರಿಸುವ ಪ್ರಯಾಗರಾಜ್ ಸೇರಿದಂತೆ ದೇಶದಾದ್ಯಂತ ಜನಪ್ರಿಯ ಸ್ಥಳಗಳನ್ನು ಸಂಪರ್ಕಿಸಲು ವಿಶೇಷ ರೈಲುಗಳನ್ನು ಪರಿಚಯಿಸಲಾಗಿದೆ ಎಂದು ಶಿಲ್ಪಿ ಅಗರ್ ವಾಲ್ ತಿಳಿಸಿದರು.

ಆಧುನಿಕೀಕರಣ ವಿಭಾಗದ ಎಲ್ಲಾ ನಿಲ್ದಾಣಗಳಲ್ಲಿ ಕಾಯ್ದಿರಿಸದ ಟಿಕೆಟ್ ವ್ಯವಸ್ಥೆ (UTS) ಏರ್ಪಡಿಸಲಾಗಿದ್ದು, ಕ್ಯೂಆರ್ ಕೋಡ್ ಟಿಕೆಟ್ ವ್ಯವಸ್ಥೆ ಪರಿಚಯಿಸಲಾಗಿದೆ. ಇಂಟಿಗ್ರೇಟೆಡ್ ಪ್ರಯಾಣಿಕರ ಮಾಹಿತಿ ವ್ಯವಸ್ಥೆ (IPIS) ಮತ್ತು ರೈಲುಗಳ ಮಾರ್ಗದರ್ಶನ ಫಲಕಗಳು ಆರಂಭಗೊಂಡಿವೆ ಎಂದು ಮಾಹಿತಿ ನೀಡಿದರು.

ಕಲ್ಯಾಣ ಚಟುವಟಿಕೆ 342 ನೌಕರರಿಗೆ ಹಣಕಾಸು ಉನ್ನತಿ ಮತ್ತು 308 ಮಂದಿಗೆ ಪ್ರೋತ್ಸಾಹ. ಯುನಿಯನ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ಸಿಬ್ಬಂದಿಗಾಗಿ ವಿಶೇಷ ಖಾತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಶ್ರೀಮತಿ ಅಗರವಾಲ್ ಅವರು, ಸಿಬ್ಬಂದಿಯ ತಂಡದ ಶ್ರಮಕ್ಕೆ ಕೃತಜ್ಞತೆ ಸಲ್ಲಿಸಿದರು.

ನೈರುತ್ಯ ರೈಲ್ವೆ ಮೈಸೂರು ವಿಭಾಗದಿಂದ 76ನೇ ಗಣರಾಜ್ಯೋತ್ಸವ ಆಚರಣೆ, Read More

ನೈಋತ್ಯ ರೈಲ್ವೆ ಮೈಸೂರು ವಿಭಾಗದಿಂದಸ್ವಚ್ಛತಾ ಅಭಿಯಾನ

ಮೈಸೂರು: ನೈಋತ್ಯ ರೈಲ್ವೆ ಮೈಸೂರು ವಿಭಾಗವು ಎರಡು ವಾರಗಳ ಅವಧಿಯ ಸ್ವಚ್ಛತಾ ಅಭಿಯಾನವನ್ನು ಪ್ರಾರಂಭಿಸಿದ್ದು, ಅಕ್ಟೋಬರ್ ಒಂದ ರವರೆಗೆ ನಡೆಯುತ್ತದೆ.

ಈ ಅಭಿಯಾನಕ್ಕೆ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರ್ವಾಲ್ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಛೇರಿಯ ಆವರಣದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸ್ವಚ್ಛತಾ ಪ್ರತಿಜ್ಞೆ ಬೋಧಿಸುವ ಮೂಲಕ ಚಾಲನೆ ನೀಡಿದರು.

ನಂತರ ಮೈಸೂರಿನ ರೈಲ್ವೆ ಆಸ್ಪತ್ರೆಯಲ್ಲಿ ಸಸಿಗಳನ್ನು ನೆಡಲಾಯಿತು.

ಈ ಉಪಕ್ರಮವು ರೈಲ್ವೆ ನಿಲ್ದಾಣಗಳು, ರೈಲುಗಳು, ಕಛೇರಿಗಳು ಮತ್ತು ಇತರ ರೈಲ್ವೆ ಆವರಣಗಳಲ್ಲಿ ಸ್ವಚ್ಛತೆಯನ್ನು ಹೆಚ್ಚಿಸುವ ಪ್ರಯತ್ನಗಳಲ್ಲಿ ರೈಲ್ವೆ ನೌಕರರು ಮತ್ತು ಸಾರ್ವಜನಿಕರನ್ನು ತೊಡಗಿಸುತ್ತದೆ.

ಸ್ವಚ್ಛ ಪರಿಸರ, ನೈರ್ಮಲ್ಯ ಅಭ್ಯಾಸಗಳು ಮತ್ತು ತ್ಯಾಜ್ಯ ನಿರ್ವಹಣೆಯನ್ನು ಉತ್ತೇಜಿಸುವ ಉದ್ದೇಶದಿಂದ ವ್ಯಾಪಕ ಶ್ರೇಣಿಯ ಚಟುವಟಿಕೆಗಳನ್ನು ಒಳಗೊಂಡಿದೆ.

ಈ ವೇಳೆ ಶಿಲ್ಪಿ ಅಗರ್ವಾಲ್ ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳುವ ಪ್ರಾಮುಖ್ಯತೆಯ ಬಗ್ಗೆ ಒತ್ತಿ ಹೇಳಿದರು.

ಅಭಿಯಾನಕ್ಕೆ ಸಕ್ರಿಯವಾಗಿ ಕೊಡುಗೆ ನೀಡುವಂತೆ ರೈಲ್ವೆ ಅಧಿಕಾರಿಗಳು, ಸಿಬ್ಬಂದಿ ಮತ್ತು ಪ್ರಯಾಣಿಕರನ್ನು ಪ್ರೋತ್ಸಾಹಿಸಿದರು.

ಸ್ವಚ್ಛತಾ ಅಭಿಯಾನವು ಶುಚಿತ್ವವನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಹಲವಾರು ಪ್ರಮುಖ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ.

ನೈರ್ಮಲ್ಯದ ಮಹತ್ವದ ಕುರಿತು ನೌಕರರು ಮತ್ತು ಪ್ರಯಾಣಿಕರಿಗೆ ಅರಿವು ಮೂಡಿಸಲು ಸಾರ್ವಜನಿಕ ಜಾಗೃತಿ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತದೆ.

ಸ್ವಚ್ಛತಾ ಕರ್ಮಚಾರಿಗಳ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ವಿಶೇಷ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತದೆ ಮತ್ತು ಏಕ್ ಪೆಡ್ ಮಾ ಕೆ ನಾಮ್ (ತಾಯಿಯ ಹೆಸರಿನಲ್ಲಿ ಒಂದು ಮರ)ಎಂಬ ಹಸಿರು ಉಪಕ್ರಮದ ಭಾಗವಾಗಿ ಸಸಿಗಳನ್ನು ನೆಡಲಾಗುವುದು. ತ್ಯಾಜ್ಯವನ್ನು ಕಡಿಮೆ ಮಾಡಲು, ತ್ಯಾಜ್ಯವನ್ನು ಮರುಬಳಕೆ ಮಾಡಿ ಬಳಸಲು ಜನರನ್ನು ಉತ್ತೇಜಿಸುವ ಮೂಲಕ ಈ ಅಭಿಯಾನವು ಕಸದ ನಿರ್ವಹಣೆಯಲ್ಲೂ ಗಮನ ಹರಿಸುತ್ತದೆ ಎಂದು ಶಿಲ್ಪಿ ತಿಳಿಸಿದರು.

ವಿಭಾಗವು ಅಕ್ಟೋಬರ್ 2 ರಂದು, ಗಾಂಧಿ ಜಯಂತಿ ಆಚರಣೆಯ ಭಾಗವಾಗಿ ರೈಲ್ವೆ ಆವರಣ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛಗೊಳಿಸಲು ರೈಲ್ವೆ ಸಿಬ್ಬಂದಿ, ಪ್ರಯಾಣಿಕರು ಮತ್ತು ಸ್ಥಳೀಯ ವ್ಯಕ್ತಿಗಳನ್ನು ಒಳಗೊಂಡ ಸಂಯೋಜಿತ ಶ್ರಮದಾನ ಕಾರ್ಯಕ್ರಮವನ್ನು ಆಯೋಜಿಸಿದೆ.

ನೈಋತ್ಯ ರೈಲ್ವೆ ಮೈಸೂರು ವಿಭಾಗದಿಂದಸ್ವಚ್ಛತಾ ಅಭಿಯಾನ Read More