ನ್ಯಾಯಾಂಗ ಬಡಾವಣೆ ರಾಜ್ಯೋತ್ಸವ:ಕನ್ನಡ ನಾಡಗೀತೆ ಸ್ಪರ್ಧೆ

ಮೈಸೂರು, ನವೆಂಬರ್, ೧: ಮೈಸೂರಿನ ಬೋಗಾದಿ,ನ್ಯಾಯಾಂಗ ಬಡಾವಣೆಯಲ್ಲಿ
70ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಈ ವೇಳೆ ಕನ್ನಡ ನಾಡಗೀತೆ ಸ್ಪರ್ಧೆ ಆಯೋಜಿಸಲಾಗಿತ್ತು. 32 ಮಕ್ಕಳು ಪಾಲ್ಗೊಂಡಿದ್ದರು, ವಿಜೇತರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಣೆ ಮಾಡಲಾಯಿತು

ನಂತರ ಎಲ್ಲರಿಗೂ ಸಿಹಿ ವಿತರಿಸಿ ಸಂಭ್ರಮಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರೊ. ಹೆಚ್.ಟಿ. ವೆಂಕಟೇಶಮೂರ್ತಿ, ಗುರು, ರಾಕೇಶ್ ಭಟ್, ಶಿವ ಪಟೇಲ್, ರಾಘವೇಂದ್ರ ಬ್ರಿಗೇಡ್, ಅಧ್ಯಕ್ಷ ರಾಘವೇಂದ್ರ ಡಿ, ಶ್ರೀನಿವಾಸ್, ಯೋಗ ಮಾಸ್ಟರ್ ಮಾಲ್ತೇಶ್, ಕಿಶೋರ್, ಮಹೇಂದ್ರ, ಹರೀಶ್, ಮುರಳಿಧರ್, ಬಸವಣ್ಣ, ರಾಜು, ಪುಟ್ಟಣ್ಣಯ್ಯ, ಮತ್ತಿತರರು ಪಾಲ್ಗೊಂಡಿದ್ದರು.

ನ್ಯಾಯಾಂಗ ಬಡಾವಣೆ ರಾಜ್ಯೋತ್ಸವ:ಕನ್ನಡ ನಾಡಗೀತೆ ಸ್ಪರ್ಧೆ Read More

ನ್ಯಾಯಾಂಗ ಬಡಾವಣೆಯಲ್ಲಿ ರಾಜ್ಯೋತ್ಸವ:ನಾಡಗೀತೆ ಸ್ಪರ್ಧೆ

ಮೈಸೂರು: ಮೈಸೂರಿನ ನ್ಯಾಯಾಂಗ ಬಡಾವಣೆ ನಾಗರಿಕರು ಹಾಗೂ ರವಿಶಂಕರ ಬಡಾವಣೆಯ ನಾಗರಿಕರ ಸಂಯುಕ್ತಾಶ್ರಯದಲ್ಲಿ ಇದೇ ಮೊದಲ ಬಾರಿಗೆ ನವಂಬರ್ 1 ರಂದು ಕನ್ನಡ ರಾಜ್ಯೋತ್ಸವ ಪ್ರಯುಕ್ತ ‌ನಾಡಗೀತೆ ಸ್ಪರ್ಧೆ ಏರ್ಪಡಿಸಲಾಗಿದೆ.

ನ್ಯಾಯಾಂಗ ಬಡಾವಣೆಯ ಬೆಂಚಕಟ್ಟೆ ಮಾರಮ್ಮ ದೇವಸ್ಥಾನದ ಆವರಣದಲ್ಲಿ ಕನ್ನಡ ನಾಡ ಗೀತೆಗಳ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

6 ವರ್ಷ ಮೇಲ್ಪಟ್ಟ ಎಲ್ಲಾ ವಯಸ್ಸಿನವರಿಗೂ ಭಾಗವಹಿಸಲು ಅವಕಾಶವಿದೆ, ಮಕ್ಕಳು ಮತ್ತು ಹಾಡುಗಾರರನ್ನು ಪ್ರೋತ್ಸಾಹಿಸಿ
ಉಚಿತ ಪ್ರವೇಶವಿರುತ್ತದೆ.

ಭಾಗವಹಿಸಿದವರಿಗೆ ಪ್ರಶಸ್ತಿ ಪತ್ರ ನೀಡಲಾಗುವದು, ಮತ್ತು ವಿಜೇತರಿಗೆ ಪ್ರಶಸ್ತಿ ಪತ್ರ ಮತ್ತು ಪಾರಿತೋಷಕ ನೀಡಲಾಗುವದು ಎಂದು ಬಡಾವಣೆಯ ಮುಖಂಡರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ
ರಾಮೇಗೌಡರು ,94498 86062.
ಮಾಲತೇಶ 80735 87480,
ರಾಘವೇಂದ್ರ 72041 73440.
ಶ್ರೀನಿವಾಸ್ 99453 73459 ಇವರುಗಳನ್ನು ಸಂಪರ್ಕಿಸಬಹುದಾಗಿದೆ.

ಆಕ್ಟೋಬರ್ 30 ರ ಒಳಗಾಗಿ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕೆಂದು ಮನವಿ ಮಾಡಲಾಗಿದೆ.

ನ್ಯಾಯಾಂಗ ಬಡಾವಣೆಯಲ್ಲಿ ರಾಜ್ಯೋತ್ಸವ:ನಾಡಗೀತೆ ಸ್ಪರ್ಧೆ Read More

ಕನ್ನಡ ಭಾಷೆ ಕರಗತ ಮಾಡಿಕೊಂಡರೆ ಬೇರೆ ಭಾಷೆ ಕಲಿಕೆ ಸುಲಭ:ಮಡ್ಡೀಕೆರೆ ಗೋಪಾಲ್

ಮೈಸೂರು: ಕನ್ನಡ ಭಾಷೆಯನ್ನು ಕರಗತ ಮಾಡಿಕೊಂಡ ವಿದ್ಯಾರ್ಥಿಗಳು ಬೇರೆ ಯಾವುದೇ ಭಾಷೆಯಲ್ಲಿ ಪಾಂಡಿತ್ಯ ಗಳಿಸಲು ಸಾಧ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್
ಹೇಳಿದರು.

ನಗರದ ಭೋಗಾದಿ ನ್ಯಾಯಾಂಗ ಬಡಾವಣೆಯಲ್ಲಿ ಚಾಮುಂಡೇಶ್ವರಿ ಕನ್ನಡ ಪರ ಸಂಘಟನೆ ವತಿಯಿಂದ 69ನೇ ಕನ್ನಡ ರಾಜ್ಯೋತ್ಸವ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಾತೃಭಾಷೆ ಮೇಲೆ ಹಿಡಿತವಿಲ್ಲದವರು ಅನ್ಯ ಭಾಷೆ ಕರಗತ ಮಾಡಿ ಕೊಳ್ಳಲು ಕಷ್ಟವಾಗುತ್ತದೆ. ತಾತ್ಸಾರ ಭಾವನೆ ಬಿಟ್ಟು ಕನ್ನಡ ಭಾಷೆ ಕಲಿಕೆಗೆ ಪಾಲಕರು ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಈ ವೇಳೆ ಚಾಮುಂಡೇಶ್ವರಿ ಕನ್ನಡ ಪರ ಸಂಘಟನೆ ವತಿಯಿಂದ ಮಡ್ಡೀಕೆರೆ ಗೋಪಾಲ್ ಅವರನ್ನು ಸನ್ಮಾನಿಸಲಾಯಿತು

ಬಿಜೆಪಿ ಚಾಮುಂಡೇಶ್ವರಿ ನಗರ ಮಂಡಲ ಅಧ್ಯಕ್ಷರಾದ ರಾಕೇಶ್ ಭಟ್,
ಕೆಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್,ನಂಜುಂಡಸ್ವಾಮಿ,ರಾಘವೇಂದ್ರ.ಡಿ ಪ್ರಕಾಶ್, ಸೋಮಣ್ಣ, ಲೋಕೇಶ್, ವಿಶ್ವಣ್ಣ, ನಾಗರಾಜು, ಮರಿಸ್ವಾಮಿ, ಮಂಜು,ಪುಟ್ಟಣ್ಣ, ಹರೀಶ್ ಗೌಡ, ಕೃಷ್ಣಪ್ಪ, ಮತ್ತಿತರರು ಪಾಲ್ಗೊಂಡಿದ್ದರು.

ಕನ್ನಡ ಭಾಷೆ ಕರಗತ ಮಾಡಿಕೊಂಡರೆ ಬೇರೆ ಭಾಷೆ ಕಲಿಕೆ ಸುಲಭ:ಮಡ್ಡೀಕೆರೆ ಗೋಪಾಲ್ Read More