ನಿಸ್ವಾರ್ಥ ಸೇವೆ ನೀಡುವ ಶುಶ್ರೂಷಕರನ್ನ ಗೌರವಿಸಿ-ನಜರ್ಬಾದ್ ನಟರಾಜ್

ಮೈಸೂರು: ಮಾರಕ ಕೊರೊನಾ ಆತಂಕದ ನಡುವೆಯೂ ನಿಷ್ಠೆ ಮತ್ತು ನಿಸ್ವಾರ್ಥದಿಂದ ಸೇವೆ ಸಲ್ಲಿಸುತ್ತಿರುವ ಶುಶ್ರೂಷಕರನ್ನು ಎಲ್ಲರೂ ಗೌರವಿಸಬೇಕು ಎಂದು ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್ ಹೇಳಿದರು.

ನಗರದ ಜೀವದಾರ ರಕ್ತ ನಿಧಿ ಕೇಂದ್ರದಲ್ಲಿ ಶ್ರೀ ದುರ್ಗಾ ಫೌಂಡೇಶನ್ ವತಿಯಿಂದ
ದಾದಿಯರ ಜೊತೆ ಫ್ಲಾರೆನ್ಸ್‌ ನೈಟಿಂಗೆಲ್‌ ಅವರ ಜನ್ಮದಿನದ ಪ್ರಯುಕ್ತ ವಿಶ್ವ ದಾದಿಯರ ದಿನ ಆಚರಿಸಿದ ವೇಳೆ ನಜರಬಾದ್ ನಟರಾಜ್ ಮಾತನಾಡಿದರು.

ಪ್ರತಿಯೊಬ್ಬ ರೋಗಿಗೂ ತಾವೊಬ್ಬ ತಾಯಿಯಂತೆ ಸೇವೆ ಸಲ್ಲಿಸುವ ನರ್ಸ್‌ಗಳು ಧನ್ಯರು ಎಂದು ಹೇಳಿದರು.

ಆರೋಗ್ಯ ಸೇವಾ ಕ್ಷೇತ್ರದಲ್ಲಿ ಪರಿಣಾಮಕಾರಿ ಯಾದ ಶುಶ್ರೂಷಾ ವಿಭಾಗಕ್ಕೆ ದಾದಿಯರದೇ ನೇತೃತ್ವ. ವೈದ್ಯರ ನಿರ್ದೇಶನವನ್ನು ಯಥಾವತ್ತಾಗಿ ಪಾಲಿಸಲು ದಾದಿಯರು ಸಹಕರಿಸುತ್ತಾರೆ, ವಿಶ್ವ ದಾದಿಯರ ದಿನಾಚರಣೆಯ ನಿಮಿತ್ತ ಶುಶ್ರೂಷಾ ಸೇವೆಯ ಬಗ್ಗೆ ಉಲ್ಲೇಖೀಸುವುದು ಔಚಿತ್ಯದಾಯಕ, ಅವರಿವರೆನ್ನದೆ ಎಲ್ಲರ ಆರೋಗ್ಯ ಕಾಪಾಡಲು ಹಗಲಿರುಳು ಶ್ರಮಿಸುವ ಅವರ ಔದಾರ್ಯ ದೊಡ್ಡದು ಎಂದು ಶ್ಲಾಘಿಸಿದರು.

ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್ ಮಾತಮಾಡಿ,ಒಬ್ಬ ನರ್ಸ್ ತಾನು ಆರೈಕೆ ಮಾಡೋ ರೋಗಿ ಯಾವ ಜಾತಿ, ಧರ್ಮ,ಪಕ್ಷ, ಯಾವ ಊರು ಎಂಬುದನ್ನೆಲ್ಲ ನೋಡುವುದಿಲ್ಲ. ರೋಗಿ ಯಾರೇ ಇರಲಿ, ಅವರನ್ನು ಮಗುವಿನಂತೆ ಆರೈಕೆ ಮಾಡಿ ಮನೆಗೆ ಕಳುಹಿಸೋದಷ್ಟೇ ಅವರ ಏಕೈಕ ಗುರಿ ಎಂದು ಹೇಳಿದರು.

ಈ ವೇಳೆ ಮೇಣದ ಬತ್ತಿ ಹಚ್ಚಿ ಫ್ಲಾರೆನ್ಸ್‌ ನೈಟಿಂಗೆಲ್‌ ರನ್ನು ಸ್ಮರಿಸಲಾಯಿತು.

ಆನಂತರ ಹಲವು ವರ್ಷದಿಂದ ದಾದಿಯರಾಗಿ ಸೇವೆ ಸಲ್ಲಿಸಿದ
ರಶ್ಮಿ, ರಶೀದ, ಕೋಮಲಾ,ಪೂರ್ಣಿಮಾ
ಅವರುಗಳನ್ನು ಸನ್ಮಾನಿಸಿ ಶುಭಕೋರಲಾಯಿತು.

ಈ ಸಂದರ್ಭದಲ್ಲಿ ಮಹದೇವ್, ರಮೇಶ್ ರಾಮಪ್ಪ, ರವಿಚಂದ್ರ, ಸುಜಾತ ಮತ್ತಿತರರು ಹಾಜರಿದ್ದರು.

ನಿಸ್ವಾರ್ಥ ಸೇವೆ ನೀಡುವ ಶುಶ್ರೂಷಕರನ್ನ ಗೌರವಿಸಿ-ನಜರ್ಬಾದ್ ನಟರಾಜ್ Read More