ನಜರಬಾದ್ ಪೊಲೀಸರ ಕಾರ್ಯಾಚರಣೆ: 11 ದ್ವಿಚಕ್ರ ವಾಹನ ವಶ

ಮೈಸೂರು: ಮೈಸೂರಿನ ನಜರಬಾದ್ ಪೊಲೀಸರು ಕಾರ್ಯಾಚರಣೆ ನಡೆಸಿ, ಕಳ್ಳನೊಬ್ಬನನ್ನು ಬಂಧಿಸಿ 7 ಲಕ್ಷ ರೂ ಬೆಲೆ ಬಾಳುವ ಒಟ್ಟು 11 ದ್ವಿಚಕ್ರ ವಾಹನಗಳನ್ನು
ವಶಪಡಿಸಿಕೊಂಡಿದ್ದಾರೆ.

ನಂಜನಗೂಡು ತಾಲ್ಲೋಕು,ಚಿಕ್ಕಯ್ಯನಛತ್ರ ಹೋಬಳಿ,ಹೊಸಕೋಟೆ ಗ್ರಾಮದ
ಕಾರ್ತಿಕ್ ಹೆಚ್.ವಿ (21)ಬಂಧಿತ ಆರೋಪಿ.

ಈತನಿಂದ ನಜರಬಾದ್ ಪೊಲೀಸ್ ಠಾಣೆಯ 5 ದ್ವಿಚಕ್ರ ವಾಹನ, ಆಲನಹಳ್ಳಿ ಪೊಲೀಸ್ ಠಾಣೆಯ 4 ದ್ವಿಚಕ್ರ ವಾಹನ, ಕೆ ಆರ್ ಪೊಲೀಸ್ ಠಾಣೆಯ 1 ದ್ವಿಚಕ್ರ ವಾಹನ, ನಂಜನಗೂಡು ಟೌನ್ ಪೊಲೀಸ್ ಠಾಣೆಯ 1 ಒಟ್ಟು 11 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಯ ಪತ್ತೆ ಕಾರ್ಯದಲ್ಲಿ ಡಿಸಿಪಿ
ಜಾಹ್ನವಿ ಅವರ ಮಾರ್ಗದರ್ಶನದಲ್ಲಿ ದೇವರಾಜ ಉಪವಿಭಾಗದ ಸಹಾಯಕ ಪೊಲೀಸ್ ಆಯಕ್ತ ಶಾಂತಮಲ್ಲಪ್ಪ ಎಸ್. ಕೆ ಅವರ ಉಸ್ತುವಾರಿಯಲ್ಲಿ ನಜರಬಾದ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮಹದೇವಸ್ವಾಮಿ ಎಂ,ಪೊಲೀಸ್ ಉಪನಿರೀಕ್ಷಕರಾದ ಶ್ರೀನಿವಾಸ್ ಪಾಟೀಲ್, ನಟರಾಜು, ಸಿಬ್ಬಂದಿಗಳಾದ ಪ್ರಕಾಶ್ ಬಿ.ವಿ., ಸತೀಶ್ ಕುಮಾರ್ ಎಸ್., ರಮೇಶ್ ಪಿ ಎಸ್., ಸಂಜು ಎಂ.,ವೆಂಕಟೇಶ್ ಆರ್., ಮೊಹಮ್ಮದ್ ಇಸ್ಮಾಯಿಲ್, ಆಟೋಮೆಷನ್ ಸೆಂಟರ್ ಪಿ.ಎಸ್.ಐ ಚಂದ್ರಶೇಖರ್ ರಾವ್, ಪ್ರದೀಪ್ ಮತ್ತು ಸಿಡಿಆರ್ ಘಟಕದ ಕುಮಾರ್.ಪಿ. ಪಾಲ್ಗೊಂಡಿದ್ದರು.

ನಜರಬಾದ್ ಪೊಲೀಸರ ಕಾರ್ಯಾಚರಣೆ: 11 ದ್ವಿಚಕ್ರ ವಾಹನ ವಶ Read More

ಇಬ್ಬರು ಮನೆಗಳ್ಳರ ಬಂಧನ: 17 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಶ

ಮೈಸೂರು: ಮೈಸೂರಿನ ನಜರಬಾದ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಮನೆಗಳ್ಳರನ್ನು ಬಂಧಿಸಿ 17 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ವಶಪಡಿಸಿಕೊಂಡಿದ್ದಾರೆ.

ಸಿದ್ದಾರ್ಥ ನಗರದ ಮನೆಯೊಂದರಲ್ಲಿ ಆರೋಪಿಗಳು ಕಳುವು ಮಾಡಿದ್ದರು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ನಜರಬಾದ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳಿಂದ ಪೊಲೀಸರು 17 ಲಕ್ಷ ರೂ. ಮೌಲ್ಯದ 245 ಗ್ರಾಂ ಚಿನ್ನಾಭರಣ ಹಾಗೂ 2.5 ಕೆಜಿ ಬೆಳ್ಳಿ ವಶಪಡಿಸಿಕೊಂಡಿದ್ದಾರೆ.

ಅಪರಾಧ ಮತ್ತು ಸಂಚಾರ ಡಿಸಿಪಿ ಜಾಹ್ನವಿ ಅವರ ಮಾರ್ಗದರ್ಶನದಲ್ಲಿ ದೇವರಾಜ ಉಪವಿಭಾಗದ ಎಸಿಪಿ ಶಾಂತಮಲ್ಲಪ್ಪ ಉಸ್ತುವಾರಿಯಲ್ಲಿ ನಜರಬಾದ್ ಠಾಣೆ ಇನ್ಸ್ ಪೆಕ್ಟರ್ ಮಹದೇವಸ್ವಾಮಿ ಅವರ ನೇತೃತ್ವದಲ್ಲಿ ಪಿ ಎಸ್ ಐ ಗಳಾದ ಶ್ರೀನಿವಾಸ ಪಾಟೀಲ್, ನಟರಾಜು, ಶೇಖ್ ಫಿರೋಜ್, ಚಂದ್ರಶೇಖರ್ ರಾವ್ ಹಾಗೂ ಸಿಬ್ಬಂದಿ ಪ್ರದೀಪ್, ಪ್ರಕಾಶ್, ರಮೇಶ್, ಸತೀಶ್ ಕುಮಾರ್, ಸಂಜು, ವೆಂಕಟೇಶ್, ಮೊಹಮ್ಮದ್ ಇಸ್ಮಾಯಿಲ್, ಕುಮಾರ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಇಬ್ಬರು ಮನೆಗಳ್ಳರ ಬಂಧನ: 17 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಶ Read More