ಪಿ.ಡಬ್ಲ್ಯೂ.ಡಿ. ಕ್ವಾಟ್ರಸ್ ನಲ್ಲಿ ಶ್ರೀ ಕರಿಯಣ್ಣ ಕೆಂಚಣ್ಣ ಸ್ವಾಮಿ‌ ಗದ್ದಿಗೆ ಪೂಜೆ

ಮೈಸೂರು: ಮೈಸೂರಿನ ನಜರ್ಬಾದ್
ಪಿ.ಡಬ್ಲ್ಯೂ.ಡಿ. ಕ್ವಾಟ್ರಸ್ ನಲ್ಲಿ ಮೂರನೇ ಶ್ರಾವಣ ಶನಿವಾರದ ಪ್ರಯುಕ್ತ ಶ್ರೀ ಕ್ಷೇತ್ರ ತಾಳವಾಡಿ ಶ್ರೀ ಕರಿಯಣ್ಣ ಕೆಂಚಣ್ಣ ಸ್ವಾಮಿ ಹಾಗೂ ರೇಣುಕಾ ಎಲ್ಲಮ್ಮ ದೇವಿಯ ಗದ್ದಿಗೆ ಪೂಜೆ ಹಮ್ಮಿಕೊಳ್ಳಲಾಯಿತು.

ಶ್ರೀ ಕ್ಷೇತ್ರ ತಾಳವಾಡಿ ಕ್ಷೇತ್ರದ ಅರ್ಚಕರಾದ ಶಿವಮುತ್ತು ಅವರ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನೆರವೇರಿದವು.

ವೇದವತಿ ಅವರ ನಿವಾಸದಲ್ಲಿ ಶ್ರಾವಣ ಶಿನಿವಾರದ ಪ್ರಯುಕ್ತ ಶ್ರೀ ಕ್ಷೇತ್ರ ತಾಳವಾಡಿ ಶ್ರೀ ಕರಿಯಣ್ಣ ಕೆಂಚಣ್ಣ ಸ್ವಾಮಿ ಹಾಗೂ ರೇಣುಕಾ ಎಲ್ಲಮ್ಮ ದೇವಿಯನ್ನು ಆಹ್ವಾನಿಸಿ ಗದ್ದಿಗೆ‌ ಪೂಜೆ ನೆರವೇರಿಸಲಾಯಿತು.

ಪಿ.ಡಬ್ಲ್ಯೂ.ಡಿ. ಕ್ವಾಟ್ರಸ್ ನಲ್ಲಿ ಶ್ರೀ ಕರಿಯಣ್ಣ ಕೆಂಚಣ್ಣ ಸ್ವಾಮಿ‌ ಗದ್ದಿಗೆ ಪೂಜೆ Read More

ಮಡಿವಾಳ ಮಾಚಿದೇವರು 12ನೆ ಶತಮಾನದಲ್ಲಿ ಉದಯಿಸಿದ ಶರಣ ಕಿರಣ-ನಜರ್ ಬಾದ್ ನಟರಾಜ್

ಮೈಸೂರು: ಮಡಿವಾಳ ಮಾಚಿದೇವರು 12ನೆಯ ಶತಮಾನದಲ್ಲಿ ಉದಯಿಸಿದ ಶರಣ ಕಿರಣ ಎಂದು ಕೆಪಿಸಿಸಿ ಸದಸ್ಯ ನಜರ್ ಬಾದ್ ನಟರಾಜ್ ನುಡಿದರು.

ಮೈಸೂರಿನ ನಜರಬಾದ್ ನಲ್ಲಿ ಚಾಮುಂಡೇಶ್ವರಿ ಬಳಗ ಹಾಗೂ ಅಹಿಂದ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ವೀರ ಮಡಿವಾಳ ಮಾಚಿದೇವರ ಜಯಂತಿಯ ಅಂಗವಾಗಿ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ಮಾಚಿ ದೇವರು ಮಾಡುತ್ತಿದ್ದ ಮಡಿಕಾಯಕ ಅತಿ ಮಹತ್ವದ್ದು, ದೇಶದ ನಾನಾ ಭಾಗಗಳಿಂದ ಕಲ್ಯಾಣಕ್ಕೆ ಬರುವವರಿಗೆ ಪರೀಕ್ಷಿಸಿ , ‘ಮಡಿ’ ಹಾಸಿ ಸ್ವಾಗತಿಸುವ ಕೆಲಸ ಅವರದಾಗಿತ್ತು ಎಂದು ಹೇಳಿದರು.

ನಮ್ಮ ಸಮಾಜಕ್ಕಾಗಿ ಎಂದು ಬದುಕಿದವರು ಮಾಚಿದೇವರು.ಸೋಮಾರಿತನ ಬಿಟ್ಟು ನಿತ್ಯ ಕಾಯಕದಲ್ಲಿ ತೊಡಗುವಂತೆ ಸಂದೇಶ ನೀಡಿದ ಅವರು ನಮ್ಮೆಲ್ಲರ ಹೆಮ್ಮೆ ಎಂದು ನಜರಬಾದ್ ನಟರಾಜ್ ಬಣ್ಣಿಸಿದರು.

ಕಾಂಗ್ರೆಸ್ ಮುಖಂಡ ಬಸವರಾಜ್ ಪೂಜಾರಿ (ದೇವದುರ್ಗಾ) ಅವರು ಮಾತನಾಡಿ, ಸರ್ಕಾರದಿಂದ ಮಡಿವಾಳ ಮಾಚಿದೇವರ ಜಯಂತಿ ಆಚರಿಸುತ್ತಿರುವುದು ಸಂತೋಷದ ವಿಷಯ,ಶಾಲಾ ಕಾಲೇಜುಗಳಲ್ಲಿ ಮಡಿವಾಳ ಮಾಚಿದೇವರ ಕುರಿತು ಪಾಠ ಪ್ರವಚನ ಮೂಲಕ ತಿಳಿಸುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗದ ಅಧ್ಯಕ್ಷ ಎನ್ ಆರ್ ನಾಗೇಶ್, ಉಪಾಧ್ಯಕ್ಷ ರಮೇಶ್ ರಾಮಪ್ಪ, ಪಂಚಾಯತ್ ರಾಜ್ ಕಾರ್ಯದರ್ಶಿ ಲೋಕೇಶ್, ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರೇಖಾ ಶ್ರೀನಿವಾಸ್,ಸೇವಾದಳ ಮೋಹನ್, ಚಾಮುಂಡೇಶ್ವರಿ ಬಳಗದ ಮಂಜುನಾಥ್ ಮರಟಿ ಕ್ಯಾತನಹಳ್ಳಿ, ಕೃಷ್ಣಪ್ಪ ಘಂಟೆಯ, ಅಸಂಘಟಿತ ಕಾರ್ಮಿಕರ ವಿಭಾಗದ ಫ್ರಾಸಿಸ್, ಸುನಿಲ್ ನಾರಾಯಣ್, ಎಸ್ ಟಿ ವಿಭಾಗದ ಜಿಲ್ಲಾಧ್ಯಕ್ಷ ನಾಗವಾಲ ಮಹೇಶ್, ಪ್ರಕಾಶ್, ಡೈರಿ ವೆಂಕಟೇಶ್, ಅಂಬಾಭವಾನಿ ಮಹಿಳಾ ಸಮಾಜದ ಅಧ್ಯಕ್ಷರು ಸವಿತಾ ಘಾಟ್ಕೆ,ಸುರೇಶ್ ಎಸ್, ಮಹಾನ್ ಶ್ರೇಯಸ್ ಉಪಸ್ಥಿತರಿದ್ದರು.

ಮಡಿವಾಳ ಮಾಚಿದೇವರು 12ನೆ ಶತಮಾನದಲ್ಲಿ ಉದಯಿಸಿದ ಶರಣ ಕಿರಣ-ನಜರ್ ಬಾದ್ ನಟರಾಜ್ Read More

ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಜನನಾಯಕರಲ್ಲಿ ನೇತಾಜಿ ಒಬ್ಬರು:ನಜರ್ ಬಾದ್ ನಟರಾಜ್

ಬೆಂಗಳೂರು: ನೇತಾಜಿ ಎಂದೇ ಪ್ರಸಿದ್ಧರಾದ ಸುಭಾಷ್ ಚಂದ್ರ ಬೋಸ್ ಅವರು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಜನನಾಯಕರಲ್ಲಿ ಒಬ್ಬರು ಎಂದು ಕೆಪಿಸಿಸಿ ಸದಸ್ಯ ನಜರ್ ಬಾದ್ ನಟರಾಜ್ ಬಣ್ಣಿಸಿದರು.

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 128ನೇ ಜನ್ಮ ದಿನದ ಅಂಗವಾಗಿ ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿರುವ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ವೇಳೆ ಅವರು ಮಾತನಾಡಿದರು.

ಬ್ರಿಟಿಷರನ್ನು ಭಾರತ ಬಿಟ್ಟು ತೊಲಗಿಸಲು ಮಹಾತ್ಮ ಗಾಂಧಿಯವರ ಶಾಂತಿ ಮತ್ತು ಅಹಿಂಸೆ ಮಾರ್ಗದಲ್ಲಿ ನಡೆದರೆ ಸುಭಾಷ್ ಚಂದ್ರ ಬೋಸ್ ಅವರು ಇಂಡಿಯನ್ ನ್ಯಾಷನಲ್ ಆರ್ಮಿಯನ್ನು ಸ್ಥಾಪಿಸಿ ಮುನ್ನಡೆಸಿದ ವೀರ ಸೇನಾನಿ ಎಂದು ನುಡಿದರು.

ಹಿಂದುಳಿದ ವರ್ಗದ ಉಪಾಧ್ಯಕ್ಷ ರಮೇಶ ರಾಮಪ್ಪ ಮಾತನಾಡಿ, ಸುಭಾಷ್ ಚಂದ್ರ ಬೋಸ್ ಅವರು ಭಾರತೀಯರಲ್ಲಿ ಸ್ವಾತಂತ್ಯ್ರದ ಕಿಚ್ಚು ಹಚ್ಚಿದ ಮಹಾನ್ ನಾಯಕ ಎಂದು ಹೇಳಿದರು.

‘ನೇತಾಜಿ’ ಎಂದೇ ಗೌರವದಿಂದ ಇಂದು ಭಾರತೀಯರು ಅವರನ್ನು ನೆನಪಿಸಿಕೊಳ್ಳುತ್ತೇವೆ,ಹಲವು ಕಾರಣಗಳಿಂದ ನೇತಾಜಿ ಇಂದಿಗೂ ಭಾರತೀಯರ ಮನಸ್ಸಿನಲ್ಲಿ ಬೇರೂರಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಚಾಮುಂಡೇಶ್ವರಿ ಬಳಗದ ಕಾರ್ಯದರ್ಶಿ ಮಂಜುನಾಥ್ ಮರಾಟಿ ಕ್ಯಾತನಹಳ್ಳಿ ಮತ್ತು ಲೋಕೇಶ್ ಉಪಸ್ಥಿತರಿದ್ದರು..

ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಜನನಾಯಕರಲ್ಲಿ ನೇತಾಜಿ ಒಬ್ಬರು:ನಜರ್ ಬಾದ್ ನಟರಾಜ್ Read More

ದೇಶದ ಆರ್ಥಿಕಾಭಿವೃದ್ಧಿಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಸೇವೆ ಸ್ಮರಣೀಯ:ನಜರಬಾದ್ ನಟರಾಜ್

ಮೈಸೂರು: ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸೇವೆ ಎಂದಿಗೂ ಸ್ಮರಣೀಯ ಎಂದು ಕೆಪಿಸಿಸಿ ಸದಸ್ಯ ನಜರ್ ಬಾದ್ ನಟರಾಜ್ ಹೇಳಿದರು.

ಶನಿವಾರ ಮೈಸೂರಿನ ನಜರಬಾದ್ ಚಾಮುಂಡೇಶ್ವರಿ ಬಳಗದ ಕಚೇರಿಯಲ್ಲಿ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುಣ್ಯಸ್ಮರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ವೇಳೆ ಅವರು ಮಾತನಾಡಿದರು.

ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಸ್ವತಂತ್ರ ಭಾರತದ ಎರಡನೇ ಪ್ರಧಾನಿಯಾಗಿ ಅತಿ ಕಡಿಮೆ ಸಮಯದಲ್ಲಿ ತಮ್ಮ ಉದಾತ್ತ ನೀತಿಗಳು ಮತ್ತು ಪ್ರಭಾವಶಾಲಿ ಘೋಷಣೆಗಳಿಂದ ರಾಷ್ಟ್ರದ ಆಕಾರವನ್ನು ಬದಲಾಯಿಸಿದರು ಎಂದು ಹೇಳಿದರು.

1965 ರಲ್ಲಿ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ಜೈ ಜವಾನ್, ಜೈ ಕಿಸಾನ್ ಎಂಬ ಜನಪ್ರಿಯ ಘೋಷಣೆ ಮಾಡಿದರು ಎಂದು ನಜರಬಾದ್ ನಟರಾಜ್ ಸ್ಮರಿಸಿದರು.

ಹೊಯ್ಸಳ ಟ್ರಸ್ಟ್ ಸಂಸ್ಥಾಪಕ ರಾಜೇಶ್ ಪಳನಿ ಮಾತನಾಡಿ,ಶಾಸ್ತ್ರೀ ಜೀ ಅವರು ಯಾವುದೇ ಸಂದರ್ಭದಲ್ಲೂ ಶಾಂತಿ ಮತ್ತು ಶಾಂತಿಯುತ ಅಭಿವೃದ್ಧಿಯನ್ನು ನಂಬಿಕೆಯ ಮಂತ್ರ ಎಂದು ನಂಬಿ ನಮಗಾಗಿ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಜನರಿಗೆ ಶಾಂತಿಯ ಸಂದೇಶ ಸಾರಿದ ಮಹಾನ್ ಚೇತನ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಮಹಿಳಾ ಪ್ರಧಾನ ಕಾರ್ಯದರ್ಶಿ ರೇಖಾ ಶ್ರೀನಿವಾಸ್, ಕಾಂಗ್ರೆಸ್ ಹಿಂದುಳಿದ ವರ್ಗದ ರಮೇಶ ರಾಮಪ್ಪ, ವರುಣ ಪ್ರಕಾಶ್, ಅಂಬಾ ಭವಾನಿ ಮಹಿಳಾ ಸಮಾಜದ ಅಧ್ಯಕ್ಷೆ ಸವಿತಾ ಘಾಟ್ಕೆ, ಚಾಮುಂಡೇಶ್ವರಿ ಬಳಗದ ಲೋಕೇಶ್, ಮಂಜುನಾಥ್ ಗೌಡ ಮರಟಿಕ್ಯಾತನಹಳ್ಳಿ ಮತ್ತು ಸುನಿಲ್ ನಾರಾಯಣ್,ಸೇವಾ ದಾಳ ಮೋಹನ್, ರಾಮಚಂದ್ರ ಮತ್ತಿತರರು ಪಾಲ್ಗೊಂಡಿದ್ದರು.

ದೇಶದ ಆರ್ಥಿಕಾಭಿವೃದ್ಧಿಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಸೇವೆ ಸ್ಮರಣೀಯ:ನಜರಬಾದ್ ನಟರಾಜ್ Read More

ಶಿಕ್ಷಣದ ಮೂಲಕ ಸಾವಿರಾರು ದೀಪಗಳನ್ನು ಹಚ್ಚಿದ ಸಾವಿತ್ರಿ ಬಾಯಿ ಪುಲೆ:ನಜರ್ ಬಾದ್ ನಟರಾಜ್

ಮೈಸೂರು: ಶಿಕ್ಷಣದ ಮೂಲಕ ಸಾವಿರಾರು ದೀಪಗಳನ್ನು ಹಚ್ಚಿದ ಆಧುನಿಕ ಶಿಕ್ಷಣದ ತಾಯಿ ಸಾವಿತ್ರಿಬಾಯಿ ಫುಲೆ,ಅವರಿಗೆ ನಾವು ಎಂದಿಗೂ ಚಿರಋಣಿಯಾಗಿರಬೇಕು ಎಂದು
ಕೆಪಿಸಿಸಿ ಸದಸ್ಯ ನಜರ್ ಬಾದ್ ನಟರಾಜ್
ಹೇಳಿದರು.

ಭಾರತದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಪುಲೆ ಅವರ 194ನೇ ಜಯಂತೋತ್ಸವ ಪ್ರಯುಕ್ತ ಇಂದು ಮೈಸೂರಿನ ನಜರಬಾದ್ ನ ಚಾಮುಂಡೇಶ್ವರಿ ಬಳಗದ ಕಚೇರಿಯಲ್ಲಿ ಸಾವಿತ್ರಿ ಬಾಯಿ ಪುಲೆ ಅವರ ಭಾವಚಿತ್ರಕ್ಕೆ
ಪುಷ್ಪ ನಮನ ಸಲ್ಲಿಸಿದ ವೇಳೆ ಅವರು ಮಾತನಾಡಿದರು.

ಇಂದಿನ ಅಕ್ಷರಸ್ಥ ಭಾರತೀಯರ ಪ್ರತಿಯೊಬ್ಬ ಮಹಿಳೆಯ ಮನದಲ್ಲೂ ಸಾವಿತ್ರಿಬಾಯಿ ಫುಲೆ ಇದ್ದಾರೆ ಎಂದು ಅವರು ವರ್ಣಿಸಿದರು.

ಸೇವಾದಾಳದ ಮೋಹನ್ ಕುಮಾರ್ ಮಾತನಾಡಿ,ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಮಹತ್ವ ಕೊಟ್ಟು ಸಮಾಜಕ್ಕೆ ಶಿಕ್ಷಣದ ಮೂಲಕ ಕಾಣಿಕೆ ನೀಡಿ, ದಮನಿತ ಸಮುದಾಯಗಳ ಶಿಕ್ಷಣಕ್ಕಾಗಿ ಪ್ರತ್ಯೇಕ ಶಾಲೆಯನ್ನು ಸ್ಥಾಪಿಸಿ, ಕ್ರಾಂತಿಕಾರಿ ಚಳವಳಿ ಮಾಡಿದ ಭಾರತದ ಮಹಾನ್ ಚೇತನ ಎಂದು ನುಡಿದರು.

ಕಾಂಗ್ರೆಸ್ ಹಿಂದುಳಿದ ವರ್ಗದ ಉಪಧ್ಯಕ್ಷ ರಮೇಶ್ ರಾಮಪ್ಪ ಅವರು ಮಾತನಾಡಿ, ೧೫೦ ವರ್ಷಗಳ ಹಿಂದೆ ಸ್ತ್ರೀ ವಿಮೋಚನೆ ಕನಸಾಗಿದ್ದ ಕಾಲದಲ್ಲಿ ಅದನ್ನು ನನಸಾಗಿಸಲು ಸಾವಿತ್ರಿಬಾಯಿ ಫುಲೆ ಶ್ರಮಿಸಿದ್ದಾರೆ ಎಂದು ಹೇಳಿದರು.

ಈ ವೇಳೆ ಚಾಮುಂಡೇಶ್ವರಿ ಬಳಗದ ಲೋಕೇಶ್, ಮಂಜುನಾಥ್ ಮರಾಟಿಕ್ಯಾತನಹಳ್ಳಿ, ಕಾರ್ಮಿಕ ವಿಭಾಗದ ಉಪಾಧ್ಯಕ್ಷ ಸುನಿಲ್ ನಾರಾಯಣ್ ಮತ್ತು ನರಸಿಂಹ ಉಪಸ್ಥಿತರಿದ್ದರು.

ಶಿಕ್ಷಣದ ಮೂಲಕ ಸಾವಿರಾರು ದೀಪಗಳನ್ನು ಹಚ್ಚಿದ ಸಾವಿತ್ರಿ ಬಾಯಿ ಪುಲೆ:ನಜರ್ ಬಾದ್ ನಟರಾಜ್ Read More