ಕಡೇ ಕಾರ್ತೀಕ ಸೋಮವಾರ: ಮೃತ್ಯುಂಜಯೇಶ್ವರ ಸ್ವಾಮಿಗೆ‌ ವಿಶೇಷ ಪೂಜೆ

ಮೈಸೂರು: ಕಡೇ ಕಾರ್ತೀಕ ಸೋಮವಾರದ ಪ್ರಯುಕ್ತ ಮೈಸೂರಿನ ಅಗ್ರಹಾರ ಕೆ.ಆರ್ ಪೊಲೀಸ್ ಸ್ಟೇಷನ್ ಪಕ್ಕದಲ್ಲಿರುವ ಮೃತ್ಯುಂಜಯೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಯಿತು.

ಮುಂಜಾನೆಯೇ ಸ್ವಾಮಿಗೆ ಪಂಚಾಮೃತ ಹಾಗೂ ಕ್ಷೀರಾಭಿಷೇಕ ಮಾಡಿ‌ ಭಸ್ಮಲೇಪನ ಮಾಡಿ ಪೂಜೆ ಸಲ್ಲಿಸಲಾಯಿತು.

ಮೃತ್ಯುಂಜಯೇಶ್ವರನಿಗೆ ಬೆಳ್ಳಿ ಮುಖವಾಡ ಧರಿಸಿ ಬಣ್ಣ,ಬಣ್ಣದ ಸೇವಂತಿಗೆ, ಕನಕಾಂಬರ, ಮಲ್ಲಿಗೆ, ಕಾಕಡ, ತುಳಸಿ,ಗುಲಾಬಿ ಸೇರಿದಂತೆ ಅನೇಕ ಹೂಗಳಿಂದ ಅದ್ಬುತವಾಗಿ ಅಲಂಕಾರ ಮಾಡಿ ಪೂಜಿಸಲಾಯಿತು.

ಇದೇ‌ ವೇಳೆ‌ ಶಿವಲಿಂಗುವಿಗೆ ಆಭರಣ ತೊಡಿಸಿ ಪೂಜಿಸಿದ್ದು ನೋಡಲು ಎರಡು ಕಣ್ಣುಗಳು ಸಾಲದು.

ಕೊನೆಯ ಕಾರ್ತೀಕ ಸೋಮವಾರ ಪ್ರಯುಕ್ತ ನವಗ್ರಹ ಮಂದಿರದ ಮುಂಭಾಗ ಶ್ರೀ ಮಹದೇಶ್ವರನ ಭಾವಚಿತ್ರವನ್ನು ಅಲಂಕೃತ ಮಂಟಪದಲ್ಲಿಟ್ಟು ಬಗೆ,ಬಗೆಯ ಹೂಗಳಿಂದ ಅಲಂಕರಿಸಿ ಪೂಜೆ ನೆರವೇರಿಸಲಾಯಿತು.

ಇದೇ‌ ವೇಳೆ ತಾಯಿ ಪಾರ್ವತಿಗೂ ವಿಶೇಷ ಪೂಜೆ ಮಾಜಿ ಮಾಡಿ ಭವ್ಯವಾದ ಅಲಂಕಾರ ಮಾಡಲಾಯಿತು.ಬೆಳಗಿನಿಂದಲೇ ನೂರಾರು ಭಕ್ತರು ಆಗಮಿಸಿ,ದೇವರುಗಳ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.

ದೇವಾಲಯದ ಶಿವಾರ್ಚಕರಾದ ಎಸ್. ಯೋಗಾನಂದ ಹಾಗೂ ಅವರ ಪುತ್ರ ಅಭಿನಂದನ್ ಅವರು ಮೃತ್ಯುಂಜಯೇಶ್ವರ,ಪಾರ್ವತಿ ದೇವಿ,ಮಹದೇಶ್ವರನಿಗೆ ವಿಶೇಷ ಪೂಜೆ ಮಹಾ ಮಂಗಳಾರತಿ ನೆರವೇರಿಸಿ ಪ್ರಸಾದ ವಿನಿಯೋಗ ಮಾಡಿದರು.

ದೇವರುಗಳಿಗೆ ಅಭಿನಂದನ್ ಅವರು ಅಲಂಕಾರ ಮಾಡಿದ್ದು ನೂರಾರು ಮಂದಿ ಭಕ್ತರು ಕಣ್ತುಂಬಿ ಕೊಂಡರು.

ಕಡೇ ಕಾರ್ತೀಕ ಸೋಮವಾರ: ಮೃತ್ಯುಂಜಯೇಶ್ವರ ಸ್ವಾಮಿಗೆ‌ ವಿಶೇಷ ಪೂಜೆ Read More

ಕಾತ್ಯಾಯಿನಿದೇವಿ ಅಲಂಕಾರದಲ್ಲಿ ದೇವಿ ಪಾರ್ವತಿ

ಮೈಸೂರು: ದಸರಾ ಮತ್ತು ‌ನವರಾತ್ರಿ ಪ್ರಯುಕ್ತ ಮೈಸೂರಿನ ಅಗ್ರಹಾರ‌ದ ನವಗ್ರಹ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿ ತಾಯಿ ಪಾರ್ವತಿಗೆ ವಿಶೇಷ ಅಲಂಕಾರ ಮಾಡಲಾಗುತ್ತಿದೆ.

ನಗರದ‌ ಅಗ್ರಹಾರ‌‌ ಕೆ ಆರ್ ಪೊಲೀಸ್ ಠಾಣೆಗೆ ಹೊಂದಿಕೊಂಡಿರುವ ಶ್ರೀ ನವಗ್ರಹ, ಶ್ರೀ ಮೃತ್ಯುಂಜಯೇಶ್ವರ,ಶ್ರೀ ಪಾರ್ವತಿ ದೇವಾಲಯದಲ್ಲಿ‌‌ ನವರಾತ್ರಿಯ ವಿಶೇಷ ಪೂಜಾಕಾರ್ಯಗಳು ನೆರವೇರಿಸಲಾಗುತ್ತಿದೆ.

ಶಿವಾರ್ಚಕರಾದ‌ ಎಸ್.ಯೋಗಾನಂದ ಅವರ ಪುತ್ರ ಅಭಿನಂದನ್ ಅವರು ಪ್ರತಿದಿನ ತಾಯಿ ಪಾರ್ವತಿಗೆ ವಿಶೇಷ ಅಲಂಕಾರಗಳನ್ನು ಮಾಡುತ್ತಿದ್ದಾರೆ.

ನವರಾತ್ರಿ ಆರನೆ ದಿನವಾದ ಶನಿವಾರ ತಾಯಿ ಕಾತ್ಯಾಯಿನಿ ದೇವಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾಳೆ. ತಾಯಿಯನ್ನು ನೋಡಲು ಎರಡು ಕಣ್ಣು ಸಾಲದು.ಅಷ್ಟು ಸುಂದರವಾಗಿ ಅಲಂಕಾರ ಮಾಡಿದ್ದಾರೆ ಅಭಿನಂದನ್.

ದೇವಿಯು ಹಳದಿ ಬಣ್ಣ‌ ಮತ್ತು ಕಪ್ಪು ಪಟ್ಟಿ ಕೆಂಪು‌ ಬಾರ್ಡರ್ ನಿಂದ ಅಲಂಕರಿಸಲಾಗಿದ್ದು ಸೌಂದರ್ಯ ಮಾತೆಯಂತೆ ಕಾಣುತ್ತಿದ್ದಾಳೆ. ತಾಯಿ ಪಾರ್ವತಿಗೆ‌ ಮಲ್ಲಿಗೆ,ಸೇವಂತಿಗೆ,ಗುಲಾಬಿ ಹೂಗಳಿಂದ ಅಲಂಕರಿಸಲಾಗಿದೆ ತುಳಸಿ ಮತ್ತು ಬೆಳ್ಳಿಯ ಕವಚಗಳಿಂದ ಸುಂದರಗೊಳಿಸಲಾಗಿದೆ.

ಜತೆಗೆ ಬೆಳ್ಳಿಯ ಕೈಗಳು ಮತ್ತು ತ್ರಿಶೂಲಧಾರಿಯಾಗಿ ಮನಸಿಗೆ ಮುದ ನೀಡುತ್ತಿರುವಂತೆ ಕಾಣುತ್ತಾಳೆ.ನೂರಾರು ಭಕ್ತರು ಆಗಮಿಸಿ ತಾಯಿಯ ದರ್ಶನ ಪಡೆದು ಮಂಗಳಾರತಿ ತೆಗೆದುಕೊಂಡು ಪ್ರಸಾದ ಸ್ವೀಕರಿಸಿದರು.

ಕಾತ್ಯಾಯಿನಿದೇವಿ ಅಲಂಕಾರದಲ್ಲಿ ದೇವಿ ಪಾರ್ವತಿ Read More

ಕೂಷ್ಮಾಂಡದೇವಿ ಅಲಂಕಾರದಲ್ಲಿ ತಾಯಿ ಪಾರ್ವತಿ

ಮೈಸೂರು: ದಸರಾ ಮತ್ತು ‌ನವರಾತ್ರಿ ಪ್ರಯುಕ್ತ ಮೈಸೂರಿನ ಅಗ್ರಹಾರ‌ದ ನವಗ್ರಹ ದೇವಸ್ಥಾನದಲ್ಲಿ ವಿಶೇಷ ಪೂಜೆ ಅಲಂಕಾರ ಮಾಡಿಕೊಂಡು ಬರಲಾಗುತ್ತಿದೆ.

ನಗರದ‌ ಅಗ್ರಹಾರ‌‌ ಕೆ ಆರ್ ಪೊಲೀಸ್ ಠಾಣೆಗೆ ಹೊಂದಿಕೊಂಡಿರುವ ಶ್ರೀ ನವಗ್ರಹ, ಶ್ರೀ ಮೃತ್ಯುಂಜಯೇಶ್ವರ,ಶ್ರೀ ಪಾರ್ವತಿ ದೇವಾಲಯದಲ್ಲಿ‌‌ ನವರಾತ್ರಿಯ ವಿಶೇಷ ಪೂಜಾಕಾರ್ಯಗಳನ್ನು ನೆರವೇರಿಸಲಾಗುತ್ತಿದೆ.

ಶಿವಾರ್ಚಕರಾದ‌ ಎಸ್.ಯೋಗಾನಂದ ಅವರ ಪುತ್ರ ಅಭಿನಂದನ್ ಅವರು ತಾಯಿ ಪಾರ್ವತಿಗೆ ವಿಶೇಷ ಅಲಂಕಾರಗಳನ್ನು ಮಾಡುತ್ತಿದ್ದಾರೆ.

ನವರಾತ್ರಿ ನಾಲ್ಕನೆ ದಿನವಾದ ಗುರುವಾರ ತಾಯಿ ಕೂಷ್ಮಾಂಡ ದೇವಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾಳೆ. ತಾಯಿಯನ್ನು ನೋಡಲು ಎರಡು ಕಣ್ಣು ಸಾಲದೆಂಬಂತಿದೆ.ಅಷ್ಟು ಚೆಂದದ ಅಲಂಕಾರ ಮಾಡಿದ್ದಾರೆ ಅಭಿನಂದನ್.

ದೇವಿಯು ಅರಿಶಿಣ ಬಣ್ಣ‌ದಲ್ಲಿ‌ ಸಿರಿಗೌರಿಯಂತೆ ಕಾಣುತ್ತಿದ್ದಾಳೆ. ತಾಯಿ ಪಾರ್ವತಿಗೆ‌ ವಿವಿಧ ಹೂಗಳು ಅದರಲ್ಲೂ ವಿಶೇಷವಾಗಿ ವೀಳ್ಯದೆಲೆ ‌ಹಾರದಿಂದ ಅಲಂಕರಿಸಲಾಗಿದೆ.

ಜತೆಗೆ ಬೆಳ್ಳಿಯ ಕೈಗಳು ಹಾಗೂ ಕಿರೀಟಧಾರಿ ಮತ್ತು ತ್ರಿಶೂಲಧಾರಿಯಾಗಿ ಭವ್ಯವಾಗಿ ಕಾಣುತ್ತಾಳೆ.ನೂರಾರು ಭಕ್ತರು ಆಗಮಿಸಿ ತಾಯಿಯ ದರ್ಶನ ಪಡೆದು ಮಂಗಳಾರತಿ ತೆಗೆದುಕೊಂಡು ಪ್ರಸಾದ ಸ್ವೀಕರಿಸಿದರು.

ಕೂಷ್ಮಾಂಡದೇವಿ ಅಲಂಕಾರದಲ್ಲಿ ತಾಯಿ ಪಾರ್ವತಿ Read More

ತಾಯಿ ಪಾರ್ವತಿಗೆ ಭಸ್ಮಾಲಂಕಾರ

ಮೈಸೂರು: ದಸರಾ ಮತ್ತು ‌ನವರಾತ್ರಿ ಪ್ರಯುಕ್ತ ಮೈಸೂರಿನ ಬಹುತೇಕ ಎಲ್ಲಾ‌‌ ದೇವಾಲಯಗಳಲ್ಲೂ ವಿಶೇಷ ಪೂಜೆ ಅಲಂಕಾರ ಮಾಡಲಾಗುತ್ತದೆ.

ನಗರದ‌ ಅಗ್ರಹಾರ‌‌ ಕೆ ಆರ್ ಪೊಲೀಸ್ ಠಾಣೆಗೆ ಹೊಂದಿಕೊಂಡಿರುವ ಶ್ರೀ ನವಗ್ರಹ, ಶ್ರೀ ಮೃತ್ಯುಂಜಯೇಶ್ವರ,ಶ್ರೀ ಪಾರ್ವತಿ ದೇವಾಲಯದಲ್ಲೂ ವಿಶೇಷ ಪೂಜಾಕಾರ್ಯ ನೆರವೇರಿಸಲಾಗುತ್ತಿದೆ.

ಶಿವಾರ್ಚಕರಾದ‌ ಎಸ್.ಯೋಗಾನಂದ ಅವರ ಪುತ್ರ ಅಭಿನಂದನ್ ಅವರು ತಾಯಿ ಪಾರ್ವತಿಗೆ ವಿಶೇಷ ಅಲಂಕಾರ ಮಾಡಿದ್ದು ಭಕ್ತರ ಮನ ಸೂರೆಗೊಂಡಿದೆ.

ನವರಾತ್ರಿ ಮೊದಲ ದಿನ ಕುಂಕುಮ ಅಲಂಕಾರ ಮಾಡಲಾಗಿತ್ತು,ಎರಡನೆ ದಿನ ಭಸ್ಮಾಲಂಕಾರ ಮಾಡಲಾಗಿದ್ದು ತಾಯಿಯನ್ನು ನೋಡಲು ಎರಡು ಕಣ್ಣು ಸಾಲದು ಎಂಬಂತಿದೆ.

ತಾಯಿ ಪಾರ್ವತಿಗೆ ಭಸ್ಮಾಲಂಕಾರ Read More