ನಂಜನಗೂಡಿನಲ್ಲಿ ಜೆಡಿಎಸ್ ಬೆಳ್ಳಿ ಹಬ್ಬದ ಸಂಭ್ರಮ

ಮೈಸೂರು: ಮೈಸೂರು ಜಿಲ್ಲೆ,
ನಂಜನಗೂಡು ವಿಧಾನಸಭಾ ಕ್ಷೇತ್ರದ ಜಾತ್ಯಾತೀತ ಜನತಾದಳದ 25ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮವನ್ನು ಶುಕ್ರವಾರ ಸಡಗರದಿಂದ ಆಚರಿಸಲಾಯಿತು.

ಪಟ್ಟಣದ‌ ಆರ್ ಪಿ ರಸ್ತೆಯಲ್ಲಿರುವ ಗಣೇಶ ದೇವಸ್ಥಾನದಲ್ಲಿ ಪ್ರಥಮ ಪೂಜೆಯನ್ನು ಸಲ್ಲಿಸಿ ಅಲ್ಲಿಂದ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಹಣ್ಣು ಹಂಪಲ ಹಂಚಲಾಯಿತು.

ಡಾ.ಅಂಬೇಡ್ಕರ್ ಅವರ ಪುತ್ಥಳಿಗೆ ಹೂವಿನ ಹಾರವನ್ನು ಹಾಕಿ ಗೌರವಿಸಲಾಯಿತು.
ನಂತರ ಪಟಾಕಿ ಸಿಡಿಸಿ ಕಾರ್ಯಕರ್ತರು ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಮೈಸೂರು ಜಿಲ್ಲೆಯ ಜಾತ್ಯಾತೀತ ಜನತಾ ದಳದ ಅಧ್ಯಕ್ಷ ನರಸಿಂಹಸ್ವಾಮಿ, ತಾಲೂಕು ಅಧ್ಯಕ್ಷ ಆರ್.ವಿ. ಮಹದೇವಸ್ವಾಮಿ, ಯಡಿಯಾಲದ ಸತೀಶ್,ಹಳೇಪುರದ ರಾಜಶೇಖರ್,ದೀಪಕ್, ಆನಂದ್, ಮಹದೇವ್ ಗೌಡರು, ಮಾಜಿ ಪುರಸಭೆ ಸದಸ್ಯರಾದ ಮಹದೇವಯ್ಯ ಅಲಿದ್ ಖಾನ್, ನಂಜಪ್ಪ, ರಾಜೇಶ್, ಪ್ರಕಾಶ್,ರಜತ್,ಕಸುವಿನಹಳ್ಳಿ ಶಿವಕುಮಾರ್ , ಕೃಷ್ಣಾರವರು,ಶೇಷಣ್ಣ ಸೇರಿದಂತೆ ಅನೇಕ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

ನಂಜನಗೂಡಿನಲ್ಲಿ ಜೆಡಿಎಸ್ ಬೆಳ್ಳಿ ಹಬ್ಬದ ಸಂಭ್ರಮ Read More

ಐಟಿ ರಸಪ್ರಶ್ನೆ ಕಾರ್ಯಕ್ರಮ ಗ್ರಾಮೀಣ ವಿದ್ಯಾರ್ಥಿಗಳ ಜ್ಞಾನಕ್ಕೆ ನಾಂದಿ-ದಿನೇಶ್

ನಂಜನಗೂಡು: ಗ್ರಾಮೀಣ ಐಟಿ ರಸಪ್ರಶ್ನೆ ಕಾರ್ಯಕ್ರಮವು ಗ್ರಾಮೀಣ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ-ಜ್ಞಾನಕ್ಕೆ ನಾಂದಿಯಾಗುವುದು ಎಂದು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸಿ.ಆರ್‌.ದಿನೇಶ್ ಹೇಳಿದರು.

ನಂಜನಗೂಡು ತಾಲೂಕು ಮಟ್ಟದ ಗ್ರಾಮೀಣ ಐಟಿ ರಸಪ್ರಶ್ನೆ ಕಾರ್ಯಕ್ರಮವನ್ನು ಉದ್ಘಾಟಿಸಿ,ಮಾತನಾಡಿದ ಅವರು,
ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುವ ಮೂಲಕ ಇಂತಹ ಕ್ವಿಜ್-ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಜ್ಞಾನ, ತಯಾರಿ, ಪರಿಣಯಶೀಲತೆಯನ್ನು ಎತ್ತಿಹಿಡಿಯುತ್ತದೆ ಎಂದು ಅಭಿಪ್ರಾಯಪಟ್ಟರು.

ರಸಪ್ರಶ್ನೆ ಸ್ಪರ್ಧೆಯಲ್ಲಿ ತಾಲೂಕಿನ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮೊದಲ ನಾಲ್ಕು ಬಹುಮಾನಗಳನ್ನು ಕ್ರಮವಾಗಿ ಸಿಂಧು.ಎಸ್. ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಥಮ ಸ್ಥಾನ, ಮತ್ತು ಆರ್ .ಗಣೇಶ್ ಎರಡನೇ ಹಾಗೂ ನಾಲ್ಕನೇ ಸ್ಥಾನವನ್ನು ಅರ್ಜುನ್ ಕಾರ್ಮೇಲ್ ಪ ಪೂ ಕಾಲೇಜು ಮತ್ತು ಸಿಟಿಜನ್ ಪ ಪೂ ಕಾಲೇಜಿನ ಬಿಂದೂಶ್ರೀ ಮೂರನೇ ಸ್ಥಾನವನ್ನು ಪಡೆದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಲಿಂಗಣ್ಣ ಸ್ವಾಮಿ,ಡಾ.ಟಿ.ಕೆ ರವಿ, ಚಿನ್ನಸ್ವಾಮಿ, ಆಯಿಶಾ, ಹೆಚ್.ಕೆ.ಸ್ವಾಮಿಗೌಡ, ಸಹನಾ, ನಾಗರಾಜು ಮತ್ತಿತರರು ಹಾಜರಿದ್ದರು.

ಐಟಿ ರಸಪ್ರಶ್ನೆ ಕಾರ್ಯಕ್ರಮ ಗ್ರಾಮೀಣ ವಿದ್ಯಾರ್ಥಿಗಳ ಜ್ಞಾನಕ್ಕೆ ನಾಂದಿ-ದಿನೇಶ್ Read More