ವಸತಿ ಶಾಲೆ ವಿಧ್ಯಾರ್ಥಿಗಳ ಪ್ರತಿಭಟನೆ; ಪ್ರಿನ್ಸಿಪಲ್ ಸೇರಿ ಮೂವರು ಸಸ್ಪೆಂಡ್!

ಮೈಸೂರು: ಮೂಲಭೂತ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ನಂಜನಗೂಡು ತಾಲೂಕು ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ವಿಧ್ಯಾರ್ಥಿಗಳ ಪ್ರತಿಭಟನೆಗೆ ಸರ್ಕಾರ ಎಚ್ಚೆತ್ತು ಕ್ರಮ ಜರುಗಿಸಿದೆ.

ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ನಿರ್ಲಕ್ಷ್ಯ ವಹಿಸಿದ ಪ್ರಾಂಶುಪಾಲರು ಮತ್ತು ಮೂವರನ್ನು ಅಮಾನತುಗೊಳಿಸಲಾಗಿದೆ.

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹ ನಿರ್ದೇಶಕ ಕಾಂತರಾಜು ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಪ್ರಾಂಶುಪಾಲೆ ವಸಂತ,ಪ್ರಭಾರ ನಿಲಯಪಾಲಕ ಮಹದೇವಪ್ಪ,ಗಣಿತ ಶಿಕ್ಷಕ ಮಂಜುನಾಥ್ ಅವರನ್ನು ಅಮಾನತುಗೊಳಿಸಲಾಗಿದೆ.

ಮೂಲಭೂತ ಸೌಕರ್ಯಗಳನ್ನ ಕಲ್ಪಿಸಿಲ್ಲವೆಂದು ಆರೋಪಿಸಿ 500 ಕ್ಕೂ ಹೆಚ್ಚು ವಿಧ್ಯಾರ್ಥಿಗಳು ಮತ್ತು ಪೊಷಕರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿ ದೂರು ಸಲ್ಲಿಸಿದ್ದರು.

ಇದರಿಂದ ಕೂಡಲೇ ಎಚ್ಚೆತ್ತ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಪ್ರಿನ್ಸಿಪಲ್ ಸೇರಿ ಮೂವರನ್ನು ಅಮಾನತು ಮಾಡಿ ಕ್ರಮ ಕೈಗೊಂಡಿದೆ.

ವಸತಿ ಶಾಲೆ ವಿಧ್ಯಾರ್ಥಿಗಳ ಪ್ರತಿಭಟನೆ; ಪ್ರಿನ್ಸಿಪಲ್ ಸೇರಿ ಮೂವರು ಸಸ್ಪೆಂಡ್! Read More

ಮಾಹಿತಿಗಾಗಿ ಬಂದ ಪೊಲೀಸ್ ಮುಂದೆ ಸೀರೆ ಬಿಚ್ಚಿ ಅನುಚಿತವಾಗಿ ವರ್ತಿಸಿದ ಮಹಿಳೆ

ಮೈಸೂರು,ಆ.1: ದೂರೊಂದಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಬಂದ ಪೊಲೀಸ್ ಎದುರೇ ಮಹಿಳೆ ನಡುರಸ್ತೆಯಲ್ಲಿ ಸೀರೆಯನ್ನ ಬಿಚ್ಚಿ ಎಸೆದು ಅನುಚಿತವಾಗಿ ವರ್ತಿಸಿದ ವಿಲಕ್ಷಣ ಪ್ರಕರಣ ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.

ವಿಡಿಯೋ ತೆಗೆಯುವಂತೆ ಅನುಚಿತವಾಗಿ ವರ್ತಿಸಿದ ಪ್ರಕರಣವೊಂದು ನಂಜನಗೂಡಿನ ಶಿರಮಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,ರತ್ನಮ್ಮ ಎಂಬಾಕೆ ಹೀಗೆ ಅನುಚಿತವಾಗಿ ಅದರಲ್ಲೂ ಊರಿನ ಜನರ ಎದುರೇ ಹೀಗೆ ಕೆಟ್ಟದಾಗಿ ವರ್ತಿಸಿದ್ದಾಳೆ.

ಮಹಿಳೆಯ ವರ್ತನೆ ವಿಡಿಯೋ ಇದೀಗ ವೈರಲ್ ಆಗಿದೆ.

ಶಿರಮಳ್ಳಿ ಗ್ರಾಮದಲ್ಲಿ ರತ್ನಮ್ಮ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.ಈ ಸಂಬಂಧ ರತ್ನಮ್ಮ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ನೋವು ಹೇಳಿಕೊಂಡಿದ್ದರು.ಅಲ್ಲದೆ ಎಸ್ಪಿ ಕಚೇರಿಯಲ್ಲೂ ಸಹ ದೂರು ನೀಡಿದ್ದರು.

ಹಾಗಾಗಿ ಈ ಬಗ್ಗೆ ಮಾಹಿತಿ ಪಡೆಯಲು ಹುಲ್ಲಹಳ್ಳಿ ಠಾಣೆ ಪೊಲೀಸ್ ಸಿಬ್ಬಂದಿ ರತ್ನಮ್ಮನ ಮನೆಗೆ ಭೇಟಿ ಕೊಟ್ಟಿದ್ದಾಗ ಹೀಗೆ ಹುಚ್ಚಾಟ ಪ್ರದರ್ಶಿಸಿದ್ದಾಳೆ.

ರತ್ನಮ್ಮನ ವಿರುದ್ದವೂ ಹುಲ್ಲಹಳ್ಳಿ ಹಾಗೂ ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಕೆಲವು ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.

ಮಾಹಿತಿ ಪಡೆಯಲು ತೆರಳಿದ ಪೊಲೀಸ್ ಗೆ ತನ್ನ ಬಟ್ಟೆ ಬಿಚ್ಚಿಹಾಕಿ ಆತನಜೊತೆ ಸೆಲ್ಫಿ ವಿಡಿಯೋ ಮಾಡಲು ಯತ್ನಿಸಿದ್ದಾಳೆ.

ಪೊಲೀಸರ ಕರ್ತವ್ಯಕ್ಕೆ ಹೀಗೆ ಅನುಚಿತವಾಗಿ ವರ್ತಿಸುವ ಮೂಲಕ ಅಡ್ಡಿ ಪಡಿಸಿ ಬೆದರಿಕೆ ಹಾಕಿರುವ ಈ ಮಹಿಳೆಯ ವಿರುದ್ಧ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಮಾಹಿತಿಗಾಗಿ ಬಂದ ಪೊಲೀಸ್ ಮುಂದೆ ಸೀರೆ ಬಿಚ್ಚಿ ಅನುಚಿತವಾಗಿ ವರ್ತಿಸಿದ ಮಹಿಳೆ Read More

ವ್ಯಕ್ತಿ ಅರೆಸ್ಟ್-540 ಗ್ರಾಂ ಗಾಂಜಾ ವಶ

ಮೈಸೂರು: ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನ ನಂಜನಗೂಡು ಪಟ್ಟಣ ಪೊಲೀಸರು ಬಂಧಿಸಿದ್ದಾರೆ.

ಮೊಹಮ್ಮದ್ ಮಸೂದ್ (30) ಎಂಬಾತನನ್ನು ಬಂಧಿಸಲಾಗಿದೆ.

ಈ ವ್ಯಕ್ತಿ ನಂಜನಗೂಡಿನ ಕಲ್ಲಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಬೈಕ್‌ನಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ಮಾಡಿದ್ದಾರೆ.

ಇನ್ಸ್ಪೆಕ್ಟರ್ ಸಿ.ಎಂ ರವೀಂದ್ರ, ಪಿಎಸ್ಐ ಕೃಷ್ಣಕಾಂತಕೋಳಿ ನೇತೃತ್ವದ ತಂಡ ದಾಳಿ ನಡೆಸಿ ಮೊಹಮ್ಮದ್ ಮಸೂದ್ ನನ್ನು ಬಂಧಿಸಿದ್ದಾರೆ.

ಆರೋಪಿಯಿಂದ ಪೊಲೀಸರು 29 ಪೊಟ್ಟಣಗಳ ಒಟ್ಟು 540 ಗ್ರಾಂ ಗಾಂಜಾ, 550 ರೂ ನಗದು ಹಾಗೂ ದ್ವಿಚಕ್ರ ವಾಹನ ವಶ ಪಡಿಸಿಕೊಂಡಿದ್ದಾರೆ.

ನಂಜನಗೂಡು ಪಟ್ಟಣ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವ್ಯಕ್ತಿ ಅರೆಸ್ಟ್-540 ಗ್ರಾಂ ಗಾಂಜಾ ವಶ Read More

ಯುವತಿಯ ಫೊನ್ ರಿಸೀವ್ ಮಾಡಿದ್ದಕ್ಕೆ‌ ಸ್ನೇಹಿತನನ್ನೇ ಕೊಂ*ದ ಗೆಳೆಯರು!

ಮೈಸೂರು: ಈ ಹುಡುಗರಿಗೆ ಅದೇನಾಗಿದೆಯೊ ಸಣ್ಣ,ಪುಟ್ಟ ‌ವಿಚಾರಕ್ಕೆಲ್ಲ ಕೊಲೆ ಮಾಡುವ ಮಟ್ಟಕ್ಕೆ ಹೋಗುತ್ತಾರೆ.ನಾಳಿನ ಭವಿಷ್ಯದ ಬಗ್ಗೆ ಅಂಜಿಕೆಯೇ ಇಲ್ಲದಂತಾಗಿದೆ.ಇಂತಹ ಕ್ಷುಲ್ಲಕ ‌ವಿಚಾರಕ್ಕೆ ಒಂದು ಕೊ*ಲೆ ಮಾಡಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಗೆಳತಿಯ ಫೋನ್ ರಿಸೀವ್ ಮಾಡಿದಕ್ಕೇ ಗೆಳೆಯನನ್ನು ಭೀಕರವಾಗಿ ಕೊಲೆ ಮಾಡಿದ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ಕೆಂಪಿಸಿದ್ದನ ಹುಂಡಿ ಗ್ರಾಮದಲ್ಲಿ ನಡೆದಿದೆ.

ಕೇವಲ ಫೋನ್ ರಿಸೀವ್ ಮಾಡಿದ್ದಕ್ಕೆ ಬೈಕ್ ನಲ್ಲಿ ಗುದ್ದಿ ಕಿರಣ್ ಎಂಬ ಯುವಕನನ್ನು
ಕೊಲೆ ಮಾಡಲಾಗಿದೆ‌ ಅಂದರೆ ಯುವಕರು ಯಾವ ಮಟ್ಟಕ್ಕೆ ಹೋಗಿದ್ದಾರೆ ಎಂಬ ಬಗ್ಗೆ ಪೊಷಕರು ಯೋಚಿಸಬೇಕಿದೆ.

ಘಟನೆ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 5 ಸ್ನೇಹಿತರ ವಿರುದ್ದ ಪ್ರಕರಣ ದಾಖಲಾಗಿದ್ದು ಇಬ್ಬರನ್ನ ಪೊಲೀಸರು ವಶಕ್ಕೆ ಪಡೆಯಲಾಗಿದೆ.

ಕೆಂಪಿಸಿದ್ದನಹುಂಡಿ ಗ್ರಾಮದ ವಸಂತ್ ಕುಮಾರ್, ಮಧುಸೂದನ್, ಚಂದ್ರು, ರವಿಚಂದ್ರ, ಸಿದ್ದರಾಜು ಎಂಬುವರ ವಿರುದ್ದ ಪ್ರಕರಣ ದಾಖಲಾಗಿದೆ.

ಜುಲೈ 15 ರಂದು ರವಿಚಂದ್ರನ್ ಎಂಬಾತನ ಹುಟ್ಟುಹಬ್ಬ ಇತ್ತು.‌ ಕೊಲೆಯಾದ ಕಿರಣ್ ಬರ್ತ್ ಡೇ ಪಾರ್ಟಿ ಆಚರಿಸಲು 5 ಮಂದಿ ಸ್ನೇಹಿತರ ಜೊತೆ ಹೊರಟಿದ್ದ. ಹೆಜ್ಜಿಗೆ ಸೇತುವೆಯ ತೋಪಿನ ಬಳಿ 6 ಮಂದಿ ಸೇರಿ ಪಾರ್ಟಿ ಶುರುಮಾಡಿದರು.

ವಸಂತ್ ಮೂತ್ರ ವಿಸರ್ಜನೆ ಮಾಡಲು ಸ್ವಲ್ಪದೂರ ಹೋಗಿದ್ದ,ಆಗ ವಸಂತ್ ಫೋನ್ ರಿಂಗ್ ಆಗಿದ್ದರಿಂದ ಕಿರಣ್ ರಿಸೀವ್ ಮಾಡಿದ.

ರಶ್ಮಿ ಎಂಬಾಕೆಯಿಂದ ಫೋನ್ ಬಂದಿತ್ತು.ಅದನ್ನು ನೋಡಿ ಯಾಕೆ ವಸಂತ್ ಮೊಬೈಲ್ ಗೆ ಫೋನ್ ಮಾಡಿದ್ದೀಯ ಎಂದು ಕಿರಣ್ ಪ್ರಶ್ನಿಸಿ ಸುಮ್ಮನಾಗಿಬಿಟ್ಟ.

ನಂತರ ಮತ್ತೆ ರಶ್ಮಿಯಿಂದ ಬಂದ ಫೋನ್ ವಸಂತ್ ರಿಸೀವ್ ಮಾಡಿದಾಗ ಕಿರಣ್ ರಿಸೀವ್ ಮಾಡಿದ್ದ ವಿಚಾರ ಗೊತ್ತಾಗಿದೆ.ಅಷ್ಟಕ್ಕೇ ಇಬ್ಬರ ನಡುವೆ ಜಗಳ ವಾಗಿದೆ.ವಸಂತ್ ಜೊತೆ ಸೇರಿದ ನಾಲ್ವರು ಸ್ನೇಹಿತರು ಕಿರಣ್ ಮೇಲೆ ಹಲ್ಲೆ ನಡೆಸಿ, ಸ್ಕೂಟರ್ ನಿಂದ ಗುದ್ದಿ ಕೆಳಗೆ ಬೀಳಿಸಿ ಹಲ್ಲೆ ಮಾಡಿ ಪರಾರಿಯಾದರು.

ಮಾಹಿತಿ ಅರಿತ ಸಹೋದರ ಸ್ಥಳಕ್ಕೆ ಧಾವಿಸಿ ಅಣ್ಣನನ್ನ ಆಸ್ಪತ್ರೆಗೆ ದಾಖಲಿಸಿದ. ಚಿಕಿತ್ಸೆ ಫಲಕಾರಿಯಾಗದೆ ಕಿರಣ್ ಮೃತಪಟ್ಟಿದ್ದಾರೆ.

ಯುವತಿಯ ಫೋನ್ ರಿಸೀವ್ ಮಾಡಿದ ಕಾರಣಕ್ಕೆ ಸ್ನೇಹಿತ ಎನ್ನುವುದನ್ನ ಮರೆತು ಗೆಳೆಯನನ್ನ ಕೊಲ್ಲುತ್ತಾರೆ ಎಂದರೆ ಗೆಳೆತನಕ್ಕೆ‌ ಬೆಲೆ ಎಲ್ಲಿದೆ ?ಇಂತಹ ಹುಡುಗರಿಗೆ ಬುದ್ದಿ ಹೇಳುವವರು ಯಾರು?.

ಯುವತಿಯ ಫೊನ್ ರಿಸೀವ್ ಮಾಡಿದ್ದಕ್ಕೆ‌ ಸ್ನೇಹಿತನನ್ನೇ ಕೊಂ*ದ ಗೆಳೆಯರು! Read More

ಎಮ್.ಮರಿಸ್ವಾಮಿ ಅವರಿಗೆ ಆತ್ಮೀಯ ಸನ್ಮಾನ

ನಂಜನಗೂಡು: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪ ನಿರ್ದೇಶಕ ರಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದುತ್ತಿರುವ ಎಮ್.ಮರಿಸ್ವಾಮಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಿ.ಆರ್.ದಿನೇಶ್ ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ಸೇರಿ ಎಮ್.ಮರಿಸ್ವಾಮಿ ಅವರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಚಿದಾನಂದ ಕುಮಾರ್, ಸುದೀಪ್,ರಾಜೇಗೌಡ ಹಾಗೂ ರಾಜುಮಾರ್,ಮುಕುಂದ್,ಕೃಪಾಕರ್,ಬಾಲಾಜಿ,ರಾಹುಲ್ ,ಹರ್ಷಿತ್ ಹಾಜರಿದ್ದರು.

ಎಮ್.ಮರಿಸ್ವಾಮಿ ಅವರಿಗೆ ಆತ್ಮೀಯ ಸನ್ಮಾನ Read More

ಮಾದಕ ವಸ್ತು ಸೇವನೆ ನಮ್ಮ ಸಾವಿಗೆ ನಾವೇ ಆಹ್ವಾನ ಕೊಟ್ಟಂತೆ:ಲಿಂಗಣ್ಣಸ್ವಾಮಿ

ನಂಜನಗೂಡು: ಮಾದಕ ವಸ್ತುಗಳ ಸೇವನೆ ನಮ್ಮ ಸಾವಿಗೆ ನಾವೇ ಆಹ್ವಾನ ಕೊಟ್ಟಂತೆ ಎಂದು ಹಿರಿಯ ಉಪನ್ಯಾಸಕ ಲಿಂಗಣ್ಣಸ್ವಾಮಿ ರವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ಪ್ರತಿಜ್ಜಾ ವಿಧಿಯನ್ನು ಬೋಧಿಸಿದ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಎಚ್ ಕೆ ಸ್ವಾಮಿ ಗೌಡ ಅವರು ಇಂದಿನ ಯುವ ಪೀಳಿಗೆಯನ್ನು ಆವರಿಸಿದ ಮಾದಕ ವಸ್ತುಗಳು ಅವರ ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯವನ್ನು ಹಾಳು ಮಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಸಿ.ಆರ್. ದಿನೇಶ್ ಅವರು ಮಾತನಾಡಿ ವಿದ್ಯಾರ್ಥಿಗಳು ಕೇವಲ ಸಾಂಕೇತಿಕವಾಗಿ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರೆ ಸಾಲದು ಈ ಪ್ರತಿಜ್ಞಾವಿಧಿಯಲ್ಲಿರುವ ಅಂಶವನ್ನು ಮನಃಪೂರಕವಾಗಿ ಪಾಲಿಸಿದರೆ ಮಾತ್ರ ಇಂತಹ ದಿನಾಚರಣೆಗೆ ಅರ್ಥ ಬರುತ್ತದೆ ಎಂದು ತಿಳಿಹೇಳಿದರು.

ದೇಶಕ್ಕೆ ಅಗತ್ಯವಾದ ಯುವಜನರು ತಮ್ಮ ಸಾಮರ್ಥ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕಾದರೆ ಇಂತಹ ಚಟಗಳಿಂದ ದೂರ ಇದ್ದರೆ ಮಾತ್ರ ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ರಂಗಸ್ವಾಮಿ, ಎನ್.ನಾಗರಾಜು, ಡಾ. ಕೆ .ಮಾಲತಿ, ರೂಪ, ಡಾ. ಎ.ಸುಮಾ, ಭವ್ಯ ಸುಮಿತ್ರ ,ಅದಿಲ್ ಹುಸೇನ್, ರಾಮಾನುಜನ, ಮೀನಾ ಎಮ್,ನಾಗರಾಜು ,
ವತ್ಸಲ ,ಪದ್ಮಾವತಿ,ಬಿಂದು ಮತ್ತಿರರು ಪಾಲ್ಗೊಂಡಿದ್ದರು.

ಮಾದಕ ವಸ್ತು ಸೇವನೆ ನಮ್ಮ ಸಾವಿಗೆ ನಾವೇ ಆಹ್ವಾನ ಕೊಟ್ಟಂತೆ:ಲಿಂಗಣ್ಣಸ್ವಾಮಿ Read More

ನದಿಗೆ ಹಾರಿ ಶಿಕ್ಷಕ ಆತ್ಮಹತ್ಯೆ

ನಂಜನಗೂಡು: ಮಕ್ಕಳನ್ನು ತಿದ್ದಿ ಬುದ್ದಿ ಹೇಳಬೇಕಾದ ಶಿಕ್ಷಕರೆ ಆತ್ಮಹತ್ಯೆ ಹಾದಿ ಹಿಡಿದರೆ ಹೇಗೆ?.

ಮಂಡ್ಯದ ಮೂಲದ ಶಿಕ್ಷಕರೊಬ್ಬರು ನಂಜಗೂಡಿನ ಕಪಿಲಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮಂಡ್ಯ ತಾಲೂಕಿನ ಬೆಳ್ಳಂಗನ ಹುಂಡಿಯ ಶಿಕ್ಷಕ ಚಂದ್ರು (45) ನಂಜನಗೂಡಿನ ಕಪಿಲಾ ನದಿಗೆ ಬಿದ್ದು ಮಾಡಿಕೊಂಡಿದ್ದಾರೆ.

ಮಂಗಳವಾರ ನಂಜನಗೂಡಿಗೆ ಕಾರಿನಲ್ಲಿ ಬಂದ ಅವರು ರಾಷ್ಟ್ರೀಯ ಹೆದ್ದಾರಿ 766 ರ ಕಪಿಲಾ ಸೇತುವೆ ಮೇಲೆ ಕಾರು ನಿಲ್ಲಿಸಿ ಚಪ್ಪಲಿ ಮೊಬೈಲು ಹಾಗೂ ಕಾರಿನ ಕೀ-ಯನ್ನು ಕಾರಿನಲ್ಲೇ ಬಿಟ್ಟು ಅಲ್ಲೇ ಸೇತುವೆಯಿಂದ ನದಿಗೆ ಜಿಗಿದಿದ್ದಾರೆ.

ಬಾಗಿಲು ತೆರೆದ ಕಾರು ಬಹಳ ಸಮಯ ಅಲ್ಲೆ ನಿಂತಿರುವದನ್ನು ಕಂಡವರು ಪೊಲೀಸರಿಗೆ ಸುದ್ದಿ ತಲುಪಿಸಿದ್ದಾರೆ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಂಡ್ಯ ನೋಂದಣಿಯ ಕಾರಿನಿಂದ ಮಾಲಿಕರ ವಿಳಾಸ ಪತ್ತೆ ಮಾಡಿದಾಗ ಈ ಆತ್ಮಹತ್ಯೆಯ ಸುಳಿವು ದೊರಕಿದೆ.

ನಂತರ ನಂಜನಗೂಡು ನಗರ ಠಾಣೆಯ ಎಸ್ ರವೀಂದ್ರ ಹಾಗೂ ತಿಮ್ಮಯ್ಯ ಮೂರು ತೆಪ್ಪಗಳನ್ನು ತರಿಸಿ ನುರಿತ ಈಜುಗಾರರಿಂದ ಕಪಿಲಾ ನದಿಯಲ್ಲಿ ಹುಡುಕಿಸಿದಾಗ ಚಂದ್ರು ದೇಹ ಸೇತುವೆಯಿಂದ 1.ಕಿ.ಮಿ ದೂರದಲ್ಲಿ ಅಯ್ಯಪ್ಪ ಸ್ವಾಮಿ ದೇಗುಲಬಳಿ ಪತ್ತೆಯಾಗಿದೆ.

ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡ ಪಟ್ಟಣದ ಪೋಲಿಸರು ನದಿಯಿಂದ ಶವವನ್ನು ತೆಗೆದು ಮರಣೋತ್ತರ ಪರಿಕ್ಷೆಗೆ ಕಳುಹಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ‌

ಜಿ.ಪಂ ಉದ್ಯೋಗಿ ಪತ್ನಿ ಭಾಗ್ಯ ಹಾಗೂ ಮಕ್ಕಳಾದ ಮನೋಜ ಪಾಟೀಲ್ ಹಾಗೂ ಭಾನುಪ್ರಕಾಶರನ್ನು ಮಂಜು ಅಗಲಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

ನದಿಗೆ ಹಾರಿ ಶಿಕ್ಷಕ ಆತ್ಮಹತ್ಯೆ Read More

ಲೋಕಾ‌ ದಾಳಿ:ಇಂಜಿನಿಯರ್, ಅಕೌಂಟ್ ಸೂಪರಿಡೆಂಟ್ ಬಲೆಗೆ

ನಂಜನಗೂಡು: ಕಾಮಗಾರಿ ಬಿಲ್ ಪಾಸ್ ಮಾಡಲು ಲಂಚ ಪಡೆಯುತ್ತಿದ್ದ
ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರರು ಕಾವೇರಿ ರಂಗನಾಥ್‌ ಮತ್ತು ಅಕೌಂಟ್ ಸೂಪರಿಡೆಂಟ್ ಉಮಾಮಹೇಶ್ ಲೋಕಾ ಬಲೆಗೆ ಬಿದ್ದಿದ್ದಾರೆ.

ಟೆಂಡರ್ ಹಣ ಬಿಡುಗಡೆಗೆ ಡಿಮ್ಯಾಂಡ್ ಮಾಡಿ ಹಣ ಸ್ವೀಕಾರ ಮಾಡುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.

ಚಾಮರಾಜನಗರ ನಿವಾಸಿ ಅಬ್ದುಲ್ ಅಜೀಜ್ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದರು.

2022 ರಲ್ಲಿ ನಾಲೆ ರಿಪೇರಿಗೆ ಟೆಂಡರ್‌ ಕರೆಯಲಾಗಿತ್ತು,23 ಲಕ್ಷದ 10 ಸಾವಿರ ರೂ.ಗೆ ಕಾಮಗಾರಿ ಮಾಡಲಾಗಿತ್ತು.

ಕಾಮಗಾರಿಯ ಹಣ ಬಿಡುಗಡೆಗೆ ಶೇ.6ರಷ್ಟು ಬೇಡಿಕೆ ಇಟ್ಟಿದ್ದರು.1 ಲಕ್ಷದ 45 ಸಾವಿರ ರೂ ಕೊಡಬೇಕೆಂದು ಒತ್ತಾಯಿಸಿದ್ದರು.

ಕಾಮಗಾರಿ ಹಣ ಪಡೆಯಲು ಬಂದಾಗ ಶೇ.10ರಷ್ಟು ಏರಿಕೆ ಮಾಡಿದ್ದರಿಂದ ಬೇಸತ್ತ ಅಜೀಜ್ ಲೋಕಾಗೆ ದೂರು ನೀಡಿದ್ದರು.

ಲೋಕಾ ಎಸ್ಪಿ ಉದೇಶ್ ಮಾರ್ಗದರ್ಶನದಲ್ಲಿ,ಡಿವೈಎಸ್ಪಿ ಮ್ಯಾಥ್ಯೂ ಥಾಮಸ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು
ಹಣ ಪಡೆಯುವ ವೇಳೆ ರೆಡ್ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ.

ಇನ್ಸ್ಪೆಕ್ಟರ್‌ಗಳಾದ ರವಿಕುಮಾರ್, ಶಶಿಕುಮಾರ್ ದಾಳಿಯಲ್ಲಿ ಭಾಗಿಯಾಗಿದ್ದರು.

ಲೋಕಾ‌ ದಾಳಿ:ಇಂಜಿನಿಯರ್, ಅಕೌಂಟ್ ಸೂಪರಿಡೆಂಟ್ ಬಲೆಗೆ Read More