ಪ್ರಜಾಪ್ರಭುತ್ವದ ಮೌಲ್ಯ ತಿಳಿಸಲುವಿದ್ಯಾರ್ಥಿಗಳಿಗೆ ತಾ.ಮಟ್ಟದ ಪ್ರಬಂಧ ಸ್ಪರ್ಧೆ

ನಂಜನಗೂಡು: ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ
“ಮತದಾರರಿಗೆ ಶಿಕ್ಷಣ ನೀಡುವಲ್ಲಿ ಹಾಗೂ ಮತದಾರರ ಪಟ್ಟಿಯನ್ನು ಶುದ್ಧೀಕರಿಸುವಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳ ಪಾತ್ರ” ಎಂಬ ವಿಷಯದ ಮೇಲೆ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಯಿತು.

ಚುನಾವಣಾ ಜಾಗೃತಿ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಯುವಜನರಲ್ಲಿ ಬೇರೂರಿಸುವ ಉದ್ದೇಶದಿಂದ ನಂಜನಗೂಡಿನ ನೋಡಲ್ ಕೇಂದ್ರವೂ ಆದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಲೇಜಿನ ಪ್ರಾಂಶುಪಾಲರಾದ ಸಿ.ಆರ್.ದಿನೇಶ್ ಅವರು ಮಾತನಾಡಿ,ಮತದಾರರ ಪಟ್ಟಿ ನಿಖರವಾಗಿರುವುದು ಪ್ರಜಾಪ್ರಭುತ್ವದ ಶುದ್ಧತೆಯನ್ನು ಕಾಪಾಡುವ ಪ್ರಮುಖ ಹಂತ. ಈ ಕಾರ್ಯದಲ್ಲಿ ಬಿಎಲ್ಒ ಗಳು ನಿಷ್ಠೆಯಿಂದ ಮತ್ತು ತಳಮಟ್ಟದಲ್ಲಿ ದುಡಿಯುತ್ತಾರೆ,ವಿದ್ಯಾರ್ಥಿಗಳು ಇವರ ಕಾರ್ಯವನ್ನು ಅರ್ಥಮಾಡಿಕೊಳ್ಳುವುದ
ರಿಂದ ಮುಂದಿನ ದಿನಗಳಲ್ಲಿ ಜವಾಬ್ದಾರಿಯುತ ಮತದಾರರಾಗಿ ರೂಪಗೊಳ್ಳಬಹುದು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಾಲಕಿಯರ ಸರ್ಕಾರಿ ಪದವಿ ಪೂರ್ವಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ರಾಘವೇಂದ್ರ ಅವರು ಮಾತನಾಡಿ, “ಮತದಾನ ಪಟ್ಟಿ ಶುದ್ಧೀಕರಣ, ಮನೆಮನೆಗೆ ಸರ್ವೇ, ಹೊಸ ಮತದಾರ ನೋಂದಣಿ, ನಕಲು ಹೆಸರುಗಳು ಮತ್ತು ಮೃತರ ಹೆಸರುಗಳ ತಿದ್ದುಪಡಿ,ಇವುಗಳೆಲ್ಲವು ಚುನಾವಣೆ ಸುಗಮವಾಗಿ ನಡೆಯಲು ಅಗತ್ಯವಾದ ಮೂಲಭೂತ ಕಾರ್ಯಗಳು. ಜನರಿಗೆ ಚುನಾವಣೆ ಜಾಗೃತಿ ನೀಡುವುದು ಸಹ ಬಿಎಲ್ಒ ಗಳ ಮಹತ್ವದ ಹೊಣೆಗಾರಿಕೆ ಎಂದು ಹೇಳಿದರು.

ಪ್ರಬಂಧ ಸ್ಪರ್ಧೆಯ ವಿಷಯವನ್ನು ವಿದ್ಯಾರ್ಥಿಗಳಿಗೆ ಇನ್ನಷ್ಟು ಮನಮುಟ್ಟುವಂತೆ ಮಾಡುವ ವಿಧಾನವನ್ನು ಕಾರ್ಯಕ್ರಮದ ಸಂಯೋಜಕರಾದ ಹೆಚ್.ಕೆ.ಸ್ವಾಮಿ ಗೌಡ ಅವರು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಲಿಂಗಣ್ಣ ಸ್ವಾಮಿ ಹೇಮಕುಮಾರ್,ಡಾ. ಬಿ.ಜೆ ಗೋಪಾಲಕೃಷ್ಣ, ಶ್ರೀಧರ್ ,ಸೌಮ್ಯ ಉಪಸ್ಥಿತರಿದ್ದರು.

ಮೊದಲ ಮೂರು ಸ್ಥಾನ ಗಳಿಸಿದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕನ್ನಡ ಮಾದ್ಯಮ:
ಪ್ರಥಮ ಸ್ಥಾನ ಸೌಮ್ಯ. ಕಾರ್ಮಲ್ ಪಿಯು ಕಾಲೇಜ್ ನಂಜನಗೂಡು.
ದ್ವಿತೀಯ ಸ್ಥಾನ ಆರತಿ. ಬಾಲಕಿಯರ ಸ.ಪ.ಪೂ.ಕಾಲೇಜು ನಂಜನಗೂಡು,
ತೃತೀಯ ಸ್ಥಾನ ಶಾಲಿನಿ. ಜೆಎಸ್ಎಸ್ ಪ ಪೂ ಕಾ ನಂಜನಗೂಡು.

ಆಂಗ್ಲ ಮಾಧ್ಯಮ:
ಪ್ರಥಮ ಸ್ಥಾನ ಮರಿಯಾ ಸರ್ವತ್ ಪಿ.ಎನ್ ಬಾಲಕರ ಸರ್ಕಾರಿ ಪ ಪೂ. ಕಾಲೇಜು ನಂಜನಗೂಡು ,
ದ್ವಿತೀಯ ಸ್ಥಾನ ಐಶ್ವರ್ಯ ಎಂ, ಕಾರ್ಮಲ್ ಪ.ಪೂ. ಕಾಲೇಜು ನಂಜನಗೂಡು ,
ತೃತೀಯ ಸ್ಥಾನ ಪೂರ್ಣಿಮಾ ಡಿ.ಬಾಲಕರ ಸರ್ಕಾರಿ ಪ.ಪೂ. ಕಾಲೇಜು ನಂಜನಗೂಡು.

ಪ್ರಜಾಪ್ರಭುತ್ವದ ಮೌಲ್ಯ ತಿಳಿಸಲುವಿದ್ಯಾರ್ಥಿಗಳಿಗೆ ತಾ.ಮಟ್ಟದ ಪ್ರಬಂಧ ಸ್ಪರ್ಧೆ Read More

ಭಾರತದ ಸಂವಿಧಾನ ಪ್ರಪಂಚದಲ್ಲೇ ಬಲಿಷ್ಠ- ಸಿ.ಆರ್ ದಿನೇಶ್

ನಂಜನಗೂಡು: ಭಾರತದ ಸಂವಿಧಾನವು ಪ್ರಪಂಚದಲ್ಲಿಯೇ ಬಲಿಷ್ಠ ಸಂವಿದಾನ ಎಂದು ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಿ.ಆರ್ .ದಿನೇಶ್ ತಿಳಿಸಿದರು.

ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ‌ ಅವರು,
ಭಾರತದ ಶಕ್ತಿ ಅದರ ಸಂವಿಧಾನ. ಸಂವಿಧಾನವೇ ದೇಶದ ಆತ್ಮ ಮತ್ತು ಪ್ರಜಾಪ್ರಭುತ್ವದ ಮಾರ್ಗದರ್ಶಕ ಎಂದು ಹೇಳಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚನೆಗೆ ನೀಡಿದ ಕೊಡುಗೆಯನ್ನು ಸ್ಮರಿಸಿದ ದಿನೇಶ್, ಯುವ ಜನತೆ ಸಂವಿಧಾನ ಪಾಲನೆ ಹಾಗೂ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ಕರೆ ನೀಡಿದರು.

ಆಂಗ್ಲ ಭಾಷೆ ಉಪನ್ಯಾಸಕ ರಂಗಸ್ವಾಮಿ ಅವರು ಮಾತನಾಡಿ ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಹೇಳಿದರು.

ಸಂವಿದಾನದ ಪೀಠಿಕೆಯನ್ನು ವಿದ್ಯಾರ್ಥಿಗಳೊಂದಿಗೆ ಸಾಮೂಹಿಕವಾಗಿ ಓದಿಸಿ, ಸಂವಿಧಾನದ ಮೌಲ್ಯಗಳಾದ ಸಮಾನತೆ, ಸ್ವಾತಂತ್ರ್ಯ, ನ್ಯಾಯ ಮತ್ತು ಬಾಂಧವ್ಯಗಳ ಮಹತ್ವವನ್ನು ರಾಜ್ಯಶಾಸ್ತ್ರ ಉಪನ್ಯಾಸಕ ಹೆಚ್ ಕೆ. ಸ್ವಾಮಿಗೌಡರು ವಿವರಿಸಿದರು.

ಕಾರ್ಯಕ್ರಮವು ದೇಶಾಭಿಮಾನ, ಮಾನವೀಯತೆ ಮತ್ತು ಸಂವಿಧಾನ ಪ್ರಜ್ಞೆಯನ್ನು ಬಲಪಡಿಸುವ ಮೂಲಕ ಯಶಸ್ವಿಯಾಗಿ ಮುಕ್ತಾಯಗೊಂಡಿತು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಲಿಂಗಣ್ಣ ಸ್ವಾಮಿ ,ನಾಗರಾಜ್, ಹೆಚ್ಚ್ .ಕೆ.ಪ್ರಕಾಶ್ ,ಡಾ.ಕೆ ಮಾಲತಿ,ಡಾ. ಸುಮಾ, ವತ್ಸಲ ,ಹರೀಶ್, ನಾಗರಾಜರೆಡ್ಡಿ , ದಿನೇಶ್ ,ಸುಮಿತ್ರ.ಅಂಬಿಕಾ,ಪದ್ಮಾವತಿ, ಭವ್ಯ , ಅದಿಲ್ ಹುಸೇನ್ ,ಮೀನಾ ಮತ್ತಿತರರು ಉಪಸ್ಥಿತರಿದ್ದರು.

ಭಾರತದ ಸಂವಿಧಾನ ಪ್ರಪಂಚದಲ್ಲೇ ಬಲಿಷ್ಠ- ಸಿ.ಆರ್ ದಿನೇಶ್ Read More

ನಂಜನಗೂಡು ತಾಲ್ಲೂಕಿನಲ್ಲಿ ಸ್ಮಶಾನಗಳ ಬಗ್ಗೆ ದೂರು:ಕ್ರಮ ವಹಿಸಿ- ಯತೀಂದ್ರ

ಮೈಸೂರು: ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನಲ್ಲಿ ಸ್ಮಶಾನಗಳಿಗೆ ಸಂಬಂಧಿಸಿದಂತೆ ಸಾಕಷ್ಟು ದೂರುಗಳು ಬರುತ್ತಿದೆ ಈ ಬಗ್ಗೆ ತಕ್ಷಣ ಕ್ರಮ ವಹಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯತ್ ಮೈಸೂರು, ತಾಲ್ಲೂಕು ಪಂಚಾಯತ್ ನಂಜನಗೂಡು ಸಂಯುಕ್ತ ಆಶ್ರಯದಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಈ ಸೂಚನೆ ನೀಡಿದರು.

ವರುಣ ವಿಧಾನಸಭಾ ಕ್ಷೇತ್ರ ಹಾಗೂ ನಂಜನಗೂಡು ಕ್ಷೇತ್ರಗಳಲ್ಲಿ ಎಲ್ಲಾ ಜನಾಂಗದ ಸ್ಮಶಾನಗಳಿಗೆ ಸಂಬಂಧಿಸಿದಂತೆ ಜನ ಸಂಪರ್ಕ ಸಭೆಗಳಲ್ಲಿ ದಿನನಿತ್ಯ ದೂರು ಬರುತ್ತಿದೆ. ಈ ಬಗ್ಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿ ತೊಂದರೆಯಾಗದಂತೆ ಕ್ರಮ ವಹಿಸಬೇಕು ಎಂದು ಹೇಳಿದರು.

ಈ ಹಿಂದೆ ಶವವನ್ನು ಹೂಳುತ್ತಿದ್ದ ಜಾಗವನ್ನೇ ವಸಪಡಿಸಿಕೊಂಡು ಸ್ಮಶಾನಭೂಮಿಯನ್ನು ನೀಡಬೇಕು. ಯಾವುದೇ ಗ್ರಾಮಗಳಲ್ಲಿ ಸ್ಮಶಾನ ಇಲ್ಲ ಎಂದು ದೂರು ಬಂದರೆ ಸುಮ್ಮನಿರುವುದಿಲ್ಲ ಎಂದು ತಹಶೀಲ್ದಾರ್ ಗೆ ಎಚ್ಚರಿಕೆ ನೀಡಿದರು.

ಶ್ರೀ ನಂಜುಂಡೇಶ್ವರ ಸ್ವಾಮಿ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ದೂರು ಬಂದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಮಳೆ ಹಾನಿ ಸಂದರ್ಭದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಶೀಘ್ರದಲ್ಲೇ ಪರಿಹಾರ ಒದಗಿಸಿಕೊಡಬೇಕು. ಶೇ.50 ರಿಂದ 60 ಭಾಗ ಹಾನಿಯಾಗಿದ್ದರೂ ಪೂರ್ಣ ಪ್ರಮಾಣದ ಪರಿಹಾರ ಕೊಡಿಸಬೇಕು ಎಂದು ಡಾ.ಯತೀಂದ್ರ ಸೂಚಿಸಿದರು.

ಶಾಸಕ ದರ್ಶನ್ ಧ್ರುವನಾರಾಯಣ್ ಮಾತನಾಡಿ, ತಾಲ್ಲೂಕಿನಲ್ಲಿ ಗ್ರಾಮೀಣ ಮತ್ತು ಕುಡಿಯುವ ನೀರು ಇಲಾಖೆ ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಸಾಕಷ್ಟು ಶುದ್ಧ ಕುಡಿಯುವ ನೀರಿನ ಘಟಕಗಳು ರಿಪೇರಿಯಲ್ಲಿವೆ.

ಹಳೆಯ ಬಸ್ ನಿಲ್ದಾಣದಲ್ಲಿ ಅಕ್ರಮವಾಗಿ ಮಧ್ಯಪಾನ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ದೇವಸ್ಥಾನದ ಸುತ್ತಮುತ್ತ ಪಾರ್ಕಿಂಗ್ ಮಾಡದಂತೆ ಹಲವಾರು ಸಭೆಗಳಲ್ಲಿ ಹೇಳುತ್ತಿದ್ದರು ಈ ಬಗ್ಗೆ ಯಾವುದೇ ಕ್ರಮ ಆಗಿಲ್ಲ. ದೇವಸ್ಥಾನದ ಸಿಬ್ಬಂದಿಗಳು ಏನು ಮಾಡುತ್ತಿದ್ದಾರೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ನಗರದ ನ್ಯಾಯಬೆಲೆ ಅಂಗಡಿಗಳಲ್ಲಿ ಸರಿಯಾದ ತೂಕದಲ್ಲಿ ಆಹಾರ ಪದಾರ್ಥಗಳನ್ನು ವಿತರಣೆ ಮಾಡುತ್ತಿಲ್ಲ ಎಂಬುವುದರ ಬಗ್ಗೆ ದೂರುಗಳು ಬಂದಿವೆ, ಅನ್ನಭಾಗ್ಯ ಅಕ್ಕಿಯನ್ನು ಖರೀದಿ ಮಾಡಿ ಅಕ್ರಮವಾಗಿ ಮಾರಾಟ ದಂಧೆ ನಡೆಸಲಾಗುತ್ತಿದೆ ಎಂಬ ಬಗ್ಗೆಯೂ ದೂರುಗಳು ಕೇಳಿಬಂದಿದ್ದು ಸಂಬಂಧಪಟ್ಟ ಅಧಿಕಾರಿಗಳು ಎಚ್ಚರ ವಹಿಸಬೇಕೆಂದು ಹೇಳಿದರು.

ಸಭೆಯಲ್ಲಿ ತಹಶೀಲ್ದಾರ್ ಶಿವಕುಮಾರ್ ಕಾಸನೂರು, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಜರಾಲ್ಡ್ ರಾಜೇಶ್, ರಾಜ್ಯ ಮೃಗಾಲಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ, ಗ್ಯಾರಂಟಿ ಸಮಿತಿಯ ಅಧ್ಯಕ್ಷ ಮಾರುತಿ, ಟಿಎಪಿಸಿ ಎಮ್ ಎಸ್ ಅಧ್ಯಕ್ಷ ಕುರಹಟ್ಟಿ ಮಹೇಶ್, ಪಿ ಎಲ್‌ ಡಿ ಬ್ಯಾಂಕ್ ಅಧ್ಯಕ್ಷ ಚೆನ್ನಪ್ಪ ಸೇರಿದಂತೆ ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ನಂಜನಗೂಡು ತಾಲ್ಲೂಕಿನಲ್ಲಿ ಸ್ಮಶಾನಗಳ ಬಗ್ಗೆ ದೂರು:ಕ್ರಮ ವಹಿಸಿ- ಯತೀಂದ್ರ Read More

ಮನೆಗೆ ನುಗ್ಗಲು ಯತ್ನಿಸಿ ಸಿಕ್ಕಿಬಿದ್ದ ಕಳ್ಳ

ಮೈಸೂರು: ಮಕ್ಕಳ ಜೊತೆ ಇದ್ದ ಗೃಹಿಣಿಯ ಮನೆಗೆ ನುಗ್ಗಲು ಹೊಂಚು ಹಾಕಿದ್ದ ಕಳ್ಳನನ್ನು ಸಾರ್ವಜನಿಕರೆ ಹಿಡಿದ ಘಟನೆ ಜಿಲ್ಲೆಯ ನಂಜನಗೂಡಿನಲ್ಲಿ ನಡೆದಿದೆ.

ಕಳನನ್ನು ಪೊಲೀಸರು ಬಂಧಿಸಿದ್ದು,ಕಂಬಿ ಎಣಿಸಿದ್ದಾನೆ.

ನಂಜನಗೂಡಿನ ಎಂ.ಎಂ.ಬಡಾವಣೆಯಲ್ಲಿ ಘಟನೆ ನಡೆದಿದ್ದು, ಹುಲ್ಲಹಳ್ಳಿಯ ನಂಜೀಪುರ ಗ್ರಾಮದ ಶಿವಪಾದ ಸಿಕ್ಕಿಬಿದ್ದ ಕಳ್ಳ.

ಬುಧವಾರ ರಾತ್ರಿ 9 ಗಂಟೆಯಲ್ಲಿ ಕಳ್ಳ ವೀರಮಣಿ ಎಂಬುವರ ಮನೆ ಕಾಂಪೌಂಡ್ ಹಾರಿ ಬಂದು ಅವಿತುಕೊಂಡು ಒಳಗೆ ನುಗ್ಗಲು ಹೊಂಚು ಹಾಕಿದ್ದ.ಅದನ್ನ ನೋಡಿದ ಗೃಹಿಣಿ ಸೆಲ್ವಿ ಅವರು ಕೂಗಿಕೊಂಡಿದ್ದಾರೆ.

ತಕ್ಷಣ ಅಕ್ಕಪಕ್ಕದ ನಿವಾಸಿಗಳು ಓಡಿಬಂದು ಖದೀಮನನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿ ದ್ದಾರೆ.

ಈ ಹಿಂದೆಯೂ ಇದೇ ಕಳ್ಳ ಕಳ್ಳತನಕ್ಕೆ ಯತ್ನಿಸಿ ತಪ್ಪಿಸಿಕೊಂಡಿದ್ದ,ನನ್ನ ಪತಿ ಬರದೇ ಇದ್ದಿದ್ದರೆ ನಾನು ಕೊಲೆ ಆಗುತ್ತಿದ್ದೆ.ಇದು ಮೊದಲನೇ ಸಲ ಅಲ್ಲ,ಹಿಂದೆಯೂ ಕುತ್ತಿಗೆಗೆ ಚಾಕು ಹಿಡಿದಿದ್ದ,ನಮಗೆ ರಕ್ಷಣೆ ಬೇಕು ಎಂದು ಸೆಲ್ವಿ ಅವರು ಮನವಿ ಮಾಡಿದ್ದಾರೆ‌

ಕಳ್ಳನ ವಿರುದ್ದ ಕ್ರಮ ಕೈಗೊಳ್ಳಬೇಕು ಹಾಗೂ ತಮ್ಮ ಬಡಾವಣೆಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಎಂ.ಎಂ.ಬಡಾವಣೆ ಜನತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.

ಮನೆಗೆ ನುಗ್ಗಲು ಯತ್ನಿಸಿ ಸಿಕ್ಕಿಬಿದ್ದ ಕಳ್ಳ Read More

ಸಾಲ ಮರುಪಾವತಿಸದ ರೈತನ ಮನೆ ಜಪ್ತಿ ಮಾಡಿದ ಮೈಕ್ರೋ ಫೈನಾನ್ಸ್!

ಮೈಸೂರು: ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಅಟ್ಟಹಾಸ ಮುಂದುವರಿಸಿದ್ದು, ಬಡ ಕುಟುಂಬವೊಂದು ಬೀದಿಗೆ ಬಂದ ಘಟನೆ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.

ಸಾಲದ ಕಂತು ಕಟ್ಟಿಲ್ಲ ಎಂಬ ಕಾರಣಕ್ಕೆ ಮೈಕ್ರೋ ಫೈನಾನ್ಸ್ ನವರು ಮನೆ ಜಪ್ತಿ ಮಾಡಿದ್ದಾರೆ.

ನಂಜನಗೂಡು ತಾಲ್ಲೂಕಿನ ಕಂದೇಗಾಲ‌ ಗ್ರಾಮದಲ್ಲಿ ಈ ಘಟನೆ ನಡೆದಿದೆ.ಕಾಲವಕಾಶ ಕೋರಿದ್ದರೂ ಸ್ಪಂದಿಸದ ಫೈನಾನ್ಸ್ ನ್ಯಾಯಾಲಯದಿಂದ ಆದೇಶ ತಂದು ಮನೆ ಜಪ್ತಿ ಮಾಡಿದೆ,ಹಾಗಾಗಿ ಸಾಲ ಪಡೆದ ಕುಟುಂಬ ಬೀದಿಗೆ ಬಿದ್ದಿದೆ.

ಚಿನ್ನಸ್ವಾಮಿ ಎಂಬುವರು ಮನೆ ನಿರ್ಮಾಣ ಸಂಭಂದ ಇಕ್ವೀಟಾಸ್ ಸ್ಮಾಲ್ ಫೈನಾನ್ಸ್ ನಲ್ಲಿ 2023 ರಲ್ಲಿ 2,70,000 ರೂ ಸಾಲ‌ಪಡೆದಿದ್ದರು.
ಈಗಾಗಲೆ 19 ಕಂತುಗಳಲ್ಲಿ 189000 ಸಾಲ‌ ಮರುಪಾವತಿಸಿದ್ದಾರೆ.

ಚಿನ್ನಸ್ವಾಮಿ ಪತ್ನಿ ಸಹ ಇಕ್ವೀಟಾಸ್ ಫೈನಾನ್ಸ್ ನಲ್ಲಿ ಗಂಪು ಸಾಲ ಪಡೆದಿದ್ದರು.ಮನೆ ಸಾಲ‌ಮರುಪಾವತಿ ಕಂತಿನ ಹಣವನ್ನು ಗುಂಪುಸಾಲಕ್ಕೆ ಜಮೆ ಮಾಡಿಕೊಂಡಿದೆ ಎಂದು ಚಿನ್ನಸ್ವಾಮಿ ಆರೋಪಿಸಿದ್ದಾರೆ.

ತಮ್ಮ ಅನುಮತಿ ಪಡೆಯದೆ ಸುಮಾರು 60 ಸಾವಿರಕ್ಕೂ ಹೆಚ್ವು ಹಣ ಗುಂಪು ಸಾಲಕ್ಕೆ ಜಮೆ ಮಾಡಿಕೊಂಡಿದ್ದಾರೆ.ಇದೀಗ ಏಕಾಏಕಿ ಮನೆ ಸಾಲದ ಕಂತು ಕಟ್ಟಿಲ್ಲವೆಂದು ಮನೆ ಜಪ್ತಿ ಮಾಡಿದ್ದಾರೆ ಎಂದು ಅವರು ನೊಂದು ನುಡಿದಿದ್ದಾರೆ.

ಸಾಲ ಮರುಪಾವತಿಗಾಗಿ ಚಿನ್ನಸ್ವಾಮಿ ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಕಾಲಾವಕಾಶ ಕೋರಿದ್ದರು ಜತೆಗೆ ಮನೆ ಜಪ್ತಿ ತಡೆಯುವಂತೆಯೂ ಮನವಿ ಮಾಡಿದ್ದರು.

ಆದರೆ ಯಾವುದಕ್ಕು ತಲೆಕೆಡೆಸಿಕೊಳ್ಳದ ಫೈನಾನ್ಸ್ ಸಾಲ ಮರುಪಾವತಿ ಮಾಡುವಂತೆ ತಾಕೀತು ಮಾಡಿತ್ತು.ನೆನ್ನೆ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆ ಜಪ್ತಿ ಮಾಡಿ ನೋಟಿಸ್ ಅಂಟಿಸಿ ಹೋಗಿದ್ದಾರೆ.

ಮನೆ ಜಪ್ತಿ ತೆರವು ಗೊಳಿಸುವಂತೆ ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ಚಿನ್ನಸ್ವಾಮಿ ದೂರು ನೀಡಿದ್ದಾರೆ.

ಸಾಲ ಮರುಪಾವತಿಸದ ರೈತನ ಮನೆ ಜಪ್ತಿ ಮಾಡಿದ ಮೈಕ್ರೋ ಫೈನಾನ್ಸ್! Read More

ಸಮೂಹ ಶ್ರಮದಿಂದ ಶ್ರೇಷ್ಟ ಫಲಿತಾಂಶಗಳಿಸಲು ಸಾಧ್ಯ-ಜಾರ್ಜ್ ಫ್ಯಾನ್ಸಿಸ್

ನಂಜನಗೂಡು: ನಮ್ಮ ಸಮೂಹ ಶ್ರಮದಿಂದಲೇ ಕಾಲೇಜು ಶ್ರೇಷ್ಟ ಫಲಿತಾಂಶ ಗಳಿಸಬಹುದು ಎಂದು ಫಲಿತಾಂಶ ಸುಧಾರಣೆಯ ಜಿಲ್ಲಾ ಮಟ್ಟದ ಸಂಚಾಲಕರಾದ ಪ್ರಾಂಶುಪಾಲ ಜಾರ್ಜ್ ಫ್ಯಾನ್ಸಿಸ್ ತಿಳಿಸಿದರು.

ನಂಜನಗೂಡು ತಾಲೂಕು ಫಲಿತಾಂಶ ಸುಧಾರಣೆಯ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಹೆಚ್ಚಿಸಲು ಹಾಗೂ ಮುಂದಿನ ಪರೀಕ್ಷೆಗಳಲ್ಲಿ ಶೇ.100 ಫಲಿತಾಂಶ ಸಾಧಿಸುವ ಉದ್ದೇಶದಿಂದ ಉಪನ್ಯಾಸಕರಿಗೆ ಫಲಿತಾಂಶ ಸುಧಾರಣೆ ಕುರಿತು ಮಾಹಿತಿ ಸಭೆಯನ್ನು ನಂಜನಗೂಡು ತಾಲೂಕು ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಮತ್ತು ಉಪನ್ಯಾಸಕರ ಫಲಿತಾಂಶ ಸುಧಾರಣಾ ಕಾರ್ಯಗಾರವನ್ನು ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು,ಈ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಸಿ.ಆರ್. ದಿನೇಶ್ ಅವರು ಮಾತನಾಡಿ,ಪ್ರತಿ ಉಪನ್ಯಾಸಕರು ತಮ್ಮ ವಿಷಯದ ವಿದ್ಯಾರ್ಥಿಗಳೊಂದಿಗೆ ನಿಕಟ ಸಂಪರ್ಕ ಕಾಯ್ದುಕೊಂಡು, ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಹೆಚ್ಚುವರಿ ಮಾರ್ಗದರ್ಶನ ನೀಡುವುದು ಅತ್ಯವಶ್ಯಕ ಎಂದು ಸಲಹೆ ನೀಡಿದರು.

ನಿರಂತರ ಪರೀಕ್ಷೆಗಳು ಮತ್ತು ಫಲಿತಾಂಶ ವಿಶ್ಲೇಷಣೆಯಿಂದ ವಿದ್ಯಾರ್ಥಿಗಳ ಮಟ್ಟವನ್ನು ಸುಧಾರಿಸಬಹುದು ಎಂದು ತಿಳಿಸಿದರು.

ಸಭೆಯಲ್ಲಿ ವಿಷಯವಾರು ಫಲಿತಾಂಶ ವಿಶ್ಲೇಷಣೆ, ಅಭ್ಯಾಸ ಪಠ್ಯಗಳು, ಮತ್ತು ಬೋಧನಾ ವಿಧಾನಗಳ ಕುರಿತು ಚರ್ಚೆ ನಡೆಯಿತು.

ಉಪನ್ಯಾಸಕರಾದ ಗಿರೀಶ ಹಾಗೂ ಶಶಿಧರ್ ಅವರು ಫಲಿತಾಂಶ ಸುಧಾರಣೆಗೆ ನೂತನ ಆಲೋಚನೆಗಳನ್ನು ಮಂಡಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಫಲಿತಾಂಶ ಸುಧಾರಣೆ ಸದಸ್ಯರಾದ ಸಂತೋಷ್, ವೆಂಕಟೇಶ್, ಜನಾರ್ಧನ್, ರಮೇಶ್, ರಾಜಲಕ್ಷ್ಮಿ, ವಾಸು , ಪ್ರಾಂಶುಪಾಲರಾದ ಚಂದ್ರಶೇಖರ ಬಾಬು, ಬಿ.ಎಸ್ ನಾಗರಾಜು, ಸರಳ,ಚೆನ್ನಬಸಪ್ಪ ,ಕೆಂಡಗಣ್ಣಸ್ವಾಮಿ,ಪ್ರವೀಣ್ ,ಹೇಮಂತ್ ಕುಮಾರ್ ಮತ್ತು ತಾಲೂಕಿನ ಎಲ್ಲಾ ಸರ್ಕಾರಿ ಕಾಲೇಜಿನ ಉಪನ್ಯಾಸಕರು ಮತ್ತು ಲಿಂಗಣ್ಣ ಸ್ವಾಮಿ, ರಂಗಸ್ವಾಮಿ, ಡಾ. ಈ ಮಾಲತಿ ಮತ್ತಿತರರು ಹಾಜರಿದ್ದರು.

ಸಮೂಹ ಶ್ರಮದಿಂದ ಶ್ರೇಷ್ಟ ಫಲಿತಾಂಶಗಳಿಸಲು ಸಾಧ್ಯ-ಜಾರ್ಜ್ ಫ್ಯಾನ್ಸಿಸ್ Read More

ಗಾಂಧೀಜಿಯವರ ತತ್ವ ಆದರ್ಶಗಳು ಸರ್ವಕಾಲಿಕ: ರಂಗಸ್ವಾಮಿ ಅಭಿಮತ

ಮೈಸೂರು: ಮಹಾತ್ಮ ಗಾಂಧೀಜಿಯವರ ಜನ್ಮದಿನವು ಭಾರತದಲ್ಲಿ ರಾಷ್ಟ್ರೀಯ ಹಬ್ಬವಾಗಿದ್ದು, ಅವರ ತತ್ವ ಮತ್ತು ಆದರ್ಶಗಳು ಸರ್ವಕಾಲಿಕವಾದದ್ದು ಎಂದು ಆಂಗ್ಲ ಭಾಷೆಯ ಉಪನ್ಯಾಸಕರಾದ ರಂಗಸ್ವಾಮಿ ಅವರು ಹೇಳಿದರು.

ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದರು.

ಪ್ರತೀ ವರ್ಷ ಸಾರ್ವಜನಿಕರಿಗೆ ಸ್ಮರಣೀಯ ದಿನವಾಗಿದೆ. ಈ ದಿನ ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮಗಾಂಧಿಯವರ ಕೊಡುಗೆಯನ್ನು ಗೌರವಿಸುವುದು ಮುಖ್ಯ ಉದ್ದೇಶವಾಗಿದೆ ಅಹಿಂಸೆ ಮತ್ತು ಸತ್ಯದ ಕುರಿತು ಅವರು ನೀಡಿರುವ ಪಾಠ ಈ ದಿನದ ಪ್ರಮುಖ ಸಂದೇಶವಾಗಿದೆ‌ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಸಿ.ಆರ್ ದಿನೇಶ್ ಅವರು ಮಾತನಾಡಿ,ಮಕ್ಕಳಿಗೆ ಗಾಂಧೀಜಿಯವರ ಜೀವನ, ತತ್ವ ಮತ್ತು ಸಾಧನೆಗಳ ಬಗ್ಗೆ ಮಾಹಿತಿ ನೀಡಬೇಕು,ಅವರು ಉಡುಗೊರೆಯಾಗಿ ನೀಡಿರುವ ಅಹಿಂಸೆ, ಸತ್ಯ ಮತ್ತು ಶ್ರದ್ಧೆಯ ಮಾರ್ಗವನ್ನು ಅನುಸರಿಸಿ, ಸಮಾನ ಮತ್ತು ಶಾಂತಿಯುತ ಸಮಾಜ ಕಟ್ಟುವ ಬದ್ಧತೆಯನ್ನು ಈ ದಿನ ಪುನರಾವರ್ತಿಸೋಣ ಎಂದು ಕರೆ ನೀಡಿದರು.

ಅವರ ಕನಸು, ಆಶಯ ನಮ್ಮ ದೇಶದ ಪ್ರಗತಿಗೆ ದಾರಿ ತೋರಲಿ.‌ ಈ ಸಂದರ್ಭದಲ್ಲಿ ದೇಶದ ಪ್ರತಿಯೊಬ್ಬ ನಾಗರಿಕ ಗಾಂಧೀಜಿಯವರ ಸಿದ್ಧಾಂತಗಳನ್ನು ಜೀವನದಲ್ಲಿ ಪಾಲನೆ ಮಾಡುವ ಮೂಲಕ ಅವರ ಅಭಿಪ್ರಾಯಕ್ಕೆ ಸ್ಮರಣೆಯ ಗೌರವ ಸಲ್ಲಿಸೋಣ ಎಂದು ತಿಳಿಸಿದರು ‌

ಕಾರ್ಯಕ್ರಮದಲ್ಲಿ ಸರ್ವಧರ್ಮ ಪಠಣವನ್ನು ಎಂ.ಬಿ ಪದ್ಮಾವತಿ ಮತ್ತು ಆದಿಲ್ ಹುಸೇನ್ ನುಡಿದರು. ಗಾಂಧೀಜಿ ಅವರಿಗೆ ಪ್ರಿಯವಾದ ರಘುಪತಿ ರಾಘವ ರಾಜಾರಾಮ್ ಹಾಡನ್ನು ಹೇಳಲಾಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಲಿಂಗಣ್ಣ ಸ್ವಾಮಿ, ಹೆಚ್ಚ್.ಕೆ. ಪ್ರಕಾಶ್,ಎನ್ ನಾಗರಾಜ್ , ಡಾ. ಎ.ಸುಮ,ದಿನೇಶ್, ಹರೀಶ್ ಅಂಬಿಕಾ, ವತ್ಸಲ, ಸುಮಿತ್ರ ,ಸುಲೋಚನ ಮಹದೇವ ಸ್ವಾಮಿ, ನಿಂಗಯ್ಯ ಉಪಸ್ಥಿತರಿದ್ದರು.

ಗಾಂಧೀಜಿಯವರ ತತ್ವ ಆದರ್ಶಗಳು ಸರ್ವಕಾಲಿಕ: ರಂಗಸ್ವಾಮಿ ಅಭಿಮತ Read More

ದೈಹಿಕ, ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಬಹುಮುಖ್ಯ-ಶ್ರೀಕಂಠ ಸ್ವಾಮಿ

ನಂಜನಗೂಡು: ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಬಹುಮುಖ್ಯವಾಗಿದೆ ಹಾಗಾಗಿ ಎಲ್ಲ ಯುವಕರು ಕ್ರೀಡೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ನಂಜನಗೂಡು ನಗರಸಭೆ ಅಧ್ಯಕ್ಷ ಶ್ರೀಕಂಠ ಸ್ವಾಮಿ ಕರೆ ನೀಡಿದರು.

ನಂಜನಗೂಡು ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಧ್ವಜಾರೋಹಣ ಮಾಡಿದ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಎಂ ಎಸ್ ರಾಮಪ್ರಸಾದ್ ಅವರು ಮಾತನಾಡಿ, ಪ್ರಸ್ತುತ ಸನ್ನಿವೇಶದಲ್ಲಿ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸುವುದು ಕಡಿಮೆಯಾಗುತ್ತಿದೆ, ಕ್ರೀಡಾ ಸ್ಪೂರ್ತಿ ಇದ್ದರೆ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದಲ್ಲೂ ಕೂಡಾ ಪ್ರಗತಿ ಸಾಧಿಸಬಹುದು ಎಂದು ಹೇಳಿದರು.

ನಗರಸಭಾ ಸದಸ್ಯ ಮಹೇಶ್ ಅತ್ತಿಖಾನೆ ಅವರು ವಿದ್ಯಾರ್ಥಿಗಳಿಗೆ ಕ್ರೀಡಾ ಪ್ರತಿಜ್ಞಾ ವಿಧಿ ಬೋದಿಸಿ ಗೆಲುವು–ಸೋಲು ಸಾಮಾನ್ಯ, ಆದರೆ ಪ್ರತಿಯೊಂದು ಪಂದ್ಯವೂ ಹೊಸ ಪಾಠ ಕಲಿಸುತ್ತದೆ ಎಂದು ತಿಳಿಸಿದರು.

ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಿ.ಆರ್ ದಿನೇಶ್ ಅವರು ಅಧ್ಯಕ್ಷೀಯ ಭಾಷಣ ಮಾಡಿ,ಕ್ರೀಡೆ ಜೀವನದ ಒಂದು ಅವಿಭಾಜ್ಯ ಅಂಗ. ಕ್ರೀಡಾಂಗಣದಲ್ಲಿ ನೀವು ತೋರಿಸುವ ಪರಿಶ್ರಮ, ಶಿಸ್ತು, ಧೈರ್ಯ ಮತ್ತು ತಂಡಭಾವನೆಗಳು ಜೀವನದಲ್ಲಿಯೂ ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತವೆ. ಗೆಲುವು–ಸೋಲು ಸಾಮಾನ್ಯ, ಆದರೆ ಪ್ರತಿಯೊಂದು ಪಂದ್ಯವೂ ಹೊಸ ಪಾಠ ಕಲಿಸುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಂಜನಗೂಡಿನ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಹಿರಿಯ ವ್ಯವಸ್ಥಾಪಕರಾದ ಸಂಜಯ್ ಪಂಗ,ಪ್ರಾಂಶುಪಾಲರಾದ ಚಂದ್ರಶೇಖರಬಾಬು,ಜಾರ್ಜ್,ಕೆಂಡಗಂಡಸ್ವಾಮಿ ,ರೇವಣ್ಣ,ಸೋಮಶೇಕರ್,ಪ್ರವೀಣ್,ನಾಗರಾಜು.ಬಿ.ಎಸ್,ಸರಳ,ಪ್ರಸಾದ್, ಚೆನ್ನಬಸಪ್ಪ ,ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷರಾದ ನಂಜಪ್ಪ,ಉಪನ್ಯಾಸಕರಾದ ಲಿಂಗಣ್ಣ ಸ್ವಾಮಿ, ರಂಗಸ್ವಾಮಿ,ಕ್ರೀಡಾ ಕಾರ್ಯದರ್ಶಿ ಸ್ವಾಮಿ ಗೌಡ, ಟಿ ಕೆ ರವಿ ,ಲೋಕೇಶ್, ವೃಷಭೇಂದ್ರ ಸ್ವಾಮಿ ,ಪ್ರಕಾಶ್,ಅದಿಲ್,ಇಂದ್ರ,ಮಹದೇವಯ್ಯ,ಮಾಲತಿ ಮುಂತಾದವರು ಉಪಸ್ಥಿತರಿದ್ದರು.

ದೈಹಿಕ, ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಬಹುಮುಖ್ಯ-ಶ್ರೀಕಂಠ ಸ್ವಾಮಿ Read More

ಹಗಲಲ್ಲೇ ಮನೆ ಬೀಗ ಮುರಿದು ಒಳನುಗ್ಗಿದ ಕಳ್ಳರು:ಚಿನ್ನ,ಬೆಳ್ಳಿ,ಹಣ ದರೋಡೆ

ಮೈಸೂರು: ಹಗಲು ಹೊತ್ತಿನಲ್ಲೇ ಮನೆ ಬೀಗ ಮುರಿದು ಒಳನುಗ್ಗಿದ ಕಳ್ಳರು 80 ಗ್ರಾಂ ಚಿನ್ನ,ಬೆಳ್ಳಿ ಪದಾರ್ಥ ಮತ್ತು 1.40 ಲಕ್ಷ ಹಣ ದೋಚಿರುವ ಘಟನೆ ನಂಜನಗೂಡಿನ ಚಾಮುಂಡಿ ಟೌನ್ ಶಿಪ್ ನಲ್ಲಿ ನಡೆದಿದೆ.

ಖಾಸಗಿ ಕಂಪನಿ ಉದ್ಯೋಗಿ ಪುನೀತ್ ಕುಮಾರ್ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ.

ಮನೆ ಮಾಲೀಕರು ಬಂದರೂ ಹೆದರದ ಕಳ್ಳರು ಕಾರ್ ನಲ್ಲಿ ಪರಾರಿಯಾಗಿದ್ದಾರೆ.
ಸಿನಿಮೀಯ ಶೈಲಿಯಲ್ಲಿ ನಡೆದ ಕಳ್ಳತನಕ್ಕೆ ಚಾಮುಂಡಿ ಟೌನ್ ಶಿಪ್ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ.

ಕಾರಿನಲ್ಲಿ ಬಂದ ಕಳ್ಳರು ಬಾಗಿಲು ಮೀಟಿ ಕೃತ್ಯವೆಸಗಿದ್ದಾರೆ.
ದಂಪತಿಗಳಿಬ್ಬರು ಮನೆ ಮುಂಬಾಗಿಲು ಮತ್ತು ಗೇಟ್‌ಗೆ ಬೀಗ ಹಾಕಿ, ಕೆಲಸದ ನಿಮಿತ್ತ ಹೊರಗೆ ಹೋಗಿದ್ದರು,ಇದನ್ನು ನೋಡಿದ್ದ ಕಳ್ಳರು ಹೊಂಚುಹಾಕಿ ಮನೆಯ ಹಿಂಬದಿಯ ಬಾಗಿಲನ್ನು ಮೀಟಿ ಒಳಗೆ ನುಗ್ಗಿ ಕಳವು ಮಾಡಿದ್ದಾರೆ.

ಒಬ್ಬ ಮನೆ ಮುಂಭಾಗ ಕಾರಿನಲ್ಲಿ ಕುಳಿತಿದ್ದರೆ ಮತ್ತೊಬ್ಬ ಹಿಂಬದಿ ಬಾಗಿಲು ಮುರಿದು ಒಳನುಗ್ಗಿರಬಹುದೆಂದು ಶಂಕಿಸಲಾಗಿದೆ.

ಮನೆಗೆ ವಾಪಸಾಗುವಾಗ ದಂಪತಿ ಮನೆ ಮುಂದೆ ಕಾರು ನಿಂತಿದ್ದು ನೋಡಿದ್ದಾರೆ,ಒಳಗೆ ಹೋಗುತ್ತಿದ್ದಂತೆ, ಕಾರಿನಲ್ಲಿದ್ದ ವ್ಯಕ್ತಿ ಮನೆಯೊಳಗಿದ್ದ ವ್ಯಕ್ತಿಗೆ ಸಿಗ್ನಲ್‌ ನೀಡಿದ್ದಾನೆ. ಈ ವೇಳೆ ಚಿನ್ನಾಭರಣ ಮತ್ತು ನಗದು ಜೊತೆ ಮನೆಯೊಳಗಿದ್ದ ವ್ಯಕ್ತಿ ಕಾಂಪೌಂಡ್‌ ಹಾರಿ ಓಡಿದ್ದಾನೆ.

ಅವರ ಕಣ್ಣ ಮುಂದೆಯೆ ಕೃತ್ಯ ನಡೆದರೂ ಏನೂ ಮಾಡಲಾಗಿಲ್ಲ.

ಸ್ಥಳಕ್ಕೆ ಡಿವೈಎಸ್‌ಪಿ ರಘು, ಎಸ್‌ಐ ರಘು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಶೀಘ್ರವೇ ಕಳ್ಳರನ್ನು ಬಂಧಿಸುವುದಾಗಿ ಭರವಸೆ ನೀಡಿದ್ದಾರೆ.

ಹಗಲಲ್ಲೇ ಮನೆ ಬೀಗ ಮುರಿದು ಒಳನುಗ್ಗಿದ ಕಳ್ಳರು:ಚಿನ್ನ,ಬೆಳ್ಳಿ,ಹಣ ದರೋಡೆ Read More

ಫಲಿತಾಂಶ ಸುಧಾರಣೆಗೆ ನೂತನ ಕಾರ್ಯ ಚಟುವಟಿಕೆ ಹಮ್ಮಿಕೊಳ್ಳಿ:ಹನುಮಂತ ರಾವ್

ಮೈಸೂರು: ಮೈಸೂರು ಜಿಲ್ಲೆ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪ ನಿರ್ದೇಶಕರಾದ ಹನುಮಂತ ರಾವ್ ಅವರು ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿದರು.

ಈ ವೇಳೆ ಅವರು ಶೈಕ್ಷಣಿಕ ಪ್ರಗತಿಯ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳಲ್ಲಿ ಓದಿನ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುವಂತೆ ಶೈಕ್ಷಣಿಕ ವಾತಾವರಣವನ್ನು ಕಾಲೇಜಿನಲ್ಲಿ ನಿರ್ಮಿಸಬೇಕು‌ ಎಂದು ಸಲಹೆ ನೀಡಿದರು.

ಫಲಿತಾಂಶ ಸುಧಾರಣೆಗೆ ನೂತನ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ನೂತನವಾಗಿ ಪ್ರಭಾರ ವಹಿಸಿಕೊಂಡಿರುವ ಉಪ ನಿರ್ದೇಶಕರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.

ಕಾಲೇಜಿನ ಪ್ರಾಂಶುಪಾಲರಾದ ಸಿ.ಆರ್. ದಿನೇಶ್, ಉಪನ್ಯಾಸಕರಾದ ಲಿಂಗಣ್ಣಸ್ವಾಮಿ, ರಂಗಸ್ವಾಮಿ, ನಾಗರಾಜು, ಡಾ.ರವಿ, ಡಾ.ಮಾಲತಿ, ಡಾ. ಸುಮಾ ,ರೂಪ ಸ್ವಾಮಿಗೌಡ, ಭವ್ಯ, ಸುಮಿತ್ರ ,ಮೀನಾ, ರಾಮಾನುಜ, ನಾಗರಾಜ ರೆಡ್ಡಿ, ಹರೀಶ್, ದಿನೇಶ್, ಅಂಬಿಕಾ, ಪದ್ಮಾವತಿ, ಶ್ರುತಿ, ಬಿಂದು, ಬಸವಣ್ಣ, ನಟರಾಜ್, ಮಿಲ್ಟನ್, ಹರ್ಷಿತ್, ನಿಂಗಯ್ಯ,ಮಹದೇವಸ್ವಾಮಿ, ದಿವ್ಯ ಉಪಸ್ಥಿತರಿದ್ದರು.

ಫಲಿತಾಂಶ ಸುಧಾರಣೆಗೆ ನೂತನ ಕಾರ್ಯ ಚಟುವಟಿಕೆ ಹಮ್ಮಿಕೊಳ್ಳಿ:ಹನುಮಂತ ರಾವ್ Read More