ನಂಜನಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಬೇಕಿದೆ ಕ್ಯಾಂಟೀನ್ ವ್ಯವಸ್ಥೆ

ನಂಜನಗೂಡು: ಅತ್ಯಂತ ಜರೂರಾಗಿ ನಂಜನಗೂಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಕ್ಯಾಂಟೀನ್ ವ್ಯವಸ್ಥೆ ಕಲ್ಪಿಸುವ ಅತ್ಯಗತ್ಯವಿದೆ.

ಕ್ಯಾಂಟೀನ್ ವ್ಯವಸ್ಥೆ ಇಲ್ಲದ ಕಾರಣ ವಿಧಿ ಇಲ್ಲದೆ ಸೈಕಲ್ ಪಾರ್ಕಿಂಗ್ ಲಾಟ್‌ ಅಥವಾ ಮರದ ಕೆಳಗೆ ವಿದ್ಯಾರ್ಥಿಗಳು ಕುಳಿತು ಊಟ ಮಾಡುತ್ತಾರೆ.ಸೂಕ್ತ ವ್ಯವಸ್ಥೆ ಇಲ್ಲದೆ ವಿಧ್ಯಾರ್ಥಿಗಳು ತೊಂದರೆ ಪಡುತ್ತಿದ್ದಾರೆ.

ಸುಮಾರು 700 ಕ್ಕೂ ಹೆಚ್ಚು ವಿಧ್ಯಾರ್ಥಿಗಳಿರುವ ಈ ಕಾಲೇಜಿಗೆ ಕ್ಯಾಂಟೀನ್ ವ್ಯವಸ್ಥೆ ಇಲ್ಲದಿರುವುದು ನಾಚಿಕೆಗೇಡಿನ ಸಂಗತಿ.

ಕ್ಯಾಂಟೀನ್ ಗಾಗಿ ಕಟ್ಟಡ ಮೀಸಲಿದ್ದರೂ ನಡೆಸಲು ಯಾರೂ ಮುಂದೆ ಬಂದಿಲ್ಲ.ಕ್ಯಾಂಟೀನ್ ವ್ಯವಸ್ಥೆ ಇಲ್ಲದೆ ಮರಗಳ ನೆರಳೆ ಇವರಿಗೆ ಆಶ್ರಯವಾಗಿದೆ.

ತಕ್ಷಣ ಕಾಲೇಜು ಆವರಣದಲ್ಲಿ ಕ್ಯಾಂಟೀನ್ ವ್ಯವಸ್ಥೆ ಏರ್ಪಡಿಸಿ ಅನುಕೂಲ ಮಾಡಿಕೊಡುವಂತೆ ವಿದ್ಯಾರ್ಥಿಗಳು ಕೋರಿ
ದ್ದಾರೆ.

ವಿಧ್ಯಾರ್ಥಿಗಳ ಮನವಿಗೆ ಸ್ಪಂದಿಸಿರುವ ಶಾಸಕ ದರ್ಶನ್ ಧೃವನಾರಾಯಣ್ ಶೀಘ್ರದಲ್ಲೇ ಕ್ಯಾಂಟೀನ್ ತೆರೆಯಲು ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಶಾಸಕರ ಭರವಸೆ ಯಾವಾಗ ಈಡೇರುವುದೊ ಕಾದುನೋಡಬೇಕಿದೆ.

ನಂಜನಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಬೇಕಿದೆ ಕ್ಯಾಂಟೀನ್ ವ್ಯವಸ್ಥೆ Read More

ಕತ್ತು ಕುಯ್ದು ಯುವಕನ‌ ಹತ್ಯೆ:ವಾಮಾಚಾರ ಶಂಕೆ

ನಂಜನಗೂಡು: ತಾಲೂಕಿನ ಗ್ರಾಮ ಒಂದರಲ್ಲಿ ಕತ್ತು ಕುಯ್ದು ಯುವಕನ‌ ಹತ್ಯೆ ಮಾಡಲಾಗಿದ್ದು,ವಾಮಾಚಾರದ ಶಂಕೆ‌ ವ್ಯಕ್ತವಾಗಿದೆ.

ಮಾಲ್ಕುಂಡಿ ಗ್ರಾಮದ ಸದಾಶಿವ(43) ಕೊಲೆಯಾಗಿರುವ ವ್ಯಕ್ತಿ.

ನಂಜನಗೂಡು ತಾಲೂಕಿನ ಮಡುವಿನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಸಮೀಪ ನೀರು ಹರಿಯುವ ಸ್ಥಳದಲ್ಲಿ
ರಕ್ತದ ಮಡುವಿನಲ್ಲಿ ನರಳಾಡುತ್ತಿದ್ದ
ವ್ಯಕ್ತಿಯನ್ನ ನೋಡಿದ ಸ್ಥಳೀಯರು ಹುಲ್ಲಹಳ್ಳಿ ಠಾಣೆಗೆ ಮಾಹಿತಿ ನೀಡಿದ್ದಾರೆ.

ಪಿಎಸ್ಸೈ ಚೇತನ್ ಕುಮಾರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ನರಳಾಡುತ್ತಿದ್ದ ಸದಾಶಿವ (43) ನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಆದರೆ ಆತ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ.

ಸ್ಥಳದಲ್ಲಿ ಮಂತ್ರಿಸಿರುವ ನಿಂಬೆಹಣ್ಣು,101 ರೂಪಾಯಿ,ಎಲೆ, ಅಡಿಕೆ ಪತ್ತೆಯಾಗಿದ್ದು,
ಹುಣ್ಣಿಮೆ ಹಿನ್ನಲೆ ವಾಮಾಚಾರ ನಡೆಸಿ ಕೊಲೆ ಮಾಡಿರಬಹುದೆಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಹುಲ್ಲಹಳ್ಳಿ ಠಾಣೆ ಪೊಲೀಸರು ಪ್ರಕರಣ‌ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಕತ್ತು ಕುಯ್ದು ಯುವಕನ‌ ಹತ್ಯೆ:ವಾಮಾಚಾರ ಶಂಕೆ Read More

ಆನೆಕಂದಕಕ್ಕೆ ಬಿದ್ದು ಆನೆ ದುರ್ಮರಣ

ಮೈಸೂರು: ಆಹಾರ ಅರಸಿ ಕಾಡಿನಿಂದ ನಾಡಿಗೆ ಬರಲು ಯತ್ನಿಸಿ ಆನೆಯೊಂದು ಆನೆಕಂದಕಕ್ಕೆ ಬಿದ್ದು ಮೃತಪಟ್ಟ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಕೆಲ್ಲುಪುರ ಗ್ರಾಮದ ಮಲ್ಲಹಳ್ಳಿ ಬಳಿ ಆನೆಗಳ ಹಾವಳಿಯಿಂದ ಮುಕ್ತವಾಗಲು ನಿರ್ಮಿಸಿರುವ ಆನೆ ಕಂದಕಕ್ಕೆ ಬಿದ್ದು ಈ ಗಜ ಮೃತಪಟ್ಟಿದೆ.

ಕಂದಕದಲ್ಲಿ ಬಿದ್ದು ಘೀಳಿಡಿತ್ತಿದ್ದ ಆನೆಯನ್ನು ಗಮನಿಸಿ ಸ್ಥಳೀಯರು ಓಂಕಾರ ಅರಣ್ಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಬರುವಷ್ಟರಲ್ಲಿ ಪಾಪದ ಆನೆ
ಮೃತಪಟ್ಟಿತ್ತು.

ನಂಜನಗೂಡಿನ ಅರಣ್ಯ ಇಲಾಖೆ ಅಧಿಕಾರಿ ಎ ಸಿ ಎಫ್ ಪ್ರಭಾಕರ್, ಆರ್ ಎಫ್ ಒ ನಿತಿನ್ ಕುಮಾರ್ ಹಾಗೂ ಓಂಕಾರ ಅರಣ್ಯ ಇಲಾಖೆಯ ವೈಲ್ಡ್ ಲೈಫ್ ಅಧಿಕಾರಿಗಳು ಮತ್ತು ಸಿಬ್ಬಂದಿ ಆಗಮಿಸಿ ಜೆಸಿಬಿ ಮೂಲಕ ಮೃತ ಆನೆಯನ್ನ ಮೇಲಕ್ಕೆ ಎತ್ತಿ ಮುಂದಿನ ಕ್ರಮ ಕೈಗೊಂಡರು.

ಆನೆಕಂದಕಕ್ಕೆ ಬಿದ್ದು ಆನೆ ದುರ್ಮರಣ Read More

ಸಮಾಜಿಕ ಬಹಿಷ್ಕಾರವನ್ನು ಬೇರು ಸಮೇತ ಕೀಳಬೇಕು-ಶ್ಯಾಂಭಟ್

ಮೈಸೂರು: ನಾಗರಿಕ ಸಮಾಜದಲ್ಲಿ ಸಮಾಜಿಕ ಬಹಿಷ್ಕಾರ ಅನಿಷ್ಟ ಪದ್ದತಿಯನ್ನು ಬುಡ ಸಮೇತ ತೆಗೆದು ಹಾಕಬೇಕೆಂದು ಮನವ ಹಕ್ಕುಗಳ ಅಯೋಗದ ಅಧ್ಯಕ್ಷ ಶ್ಯಾಂಭಟ್ ಹೇಳಿದರು.

ಗುರುವಾರ ನಂಜನಗೂಡಿನ ಪ್ರವಾಸಿ ಮಂದಿರದಲ್ಲಿ ಸಾಮಾಜಿಕ ಬಹಿಷ್ಕಾರ ಘಟನೆಗಳ ಸಂಬಂಧ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಸಾಮಾಜಿಕ ಬಹಿಷ್ಕಾರದಂತಹ ಪ್ರಕರಣಗಳು ಕಂಡುಬಂದಲ್ಲಿ ಅವುಗಳನ್ನು ಪತ್ರಿಕೆಗಳು, ಸುದ್ದಿ ವಾಹಿನಿಗಳಲ್ಲಿ ಹೆಚ್ಚಾಗಿ ಪ್ರಕಟಿಸುವ ಮೂಲಕ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಇದರ ವಿರುದ್ದ ತೆಗೆದುಕೊಂಡಂತಹ ಕ್ರಮಗಳ ಬಗ್ಗೆ ಹೆಚ್ಚು ಪ್ರಕಟಿಸುವ ಮೂಲಕ ಜನರಲ್ಲಿ ಅರಿವು ಮೂಡಿಸಬೇಕು ಎಂದು ಅವರು ಸಲಹೆ ನೀಡಿದರು.

ಸಾಮಾಜಿಕ ಬಹಿಷ್ಕಾರವನ್ನು ಬುಡ ಸಮೇತ ಕೀಳಲು ಅಧಿಕಾರಿಗಳು ಹೆಚ್ಚು ಗಮನಹರಿಸಬೇಕು, ಮುಖ್ಯವಾಗಿ ತಹಸಿಲ್ದಾರ್ ಸಿಡಿಪಿಒ ಮತ್ತು ಪೊಲೀಸ್ ಇಲಾಖೆಯವರು ಇದರ ಬಗ್ಗೆ ಹೆಚ್ಚಾಗಿ ಗಮನ ವಹಿಸಬೇಕು. ಇಂತಹ ಘಟನೆ ಸಂಭವಿಸಿದಲ್ಲಿ ಕೂಡಲೇ ಕ್ರಮ ವಹಿಸಿ ನಮ್ಮ ಗಮನಕ್ಕೆ ತರಬೇಕು ಎಂದು ಸೂಚಿಸಿದರು.

ಸಾಮಾಜಿಕ ಬಹಿಷ್ಕಾರದ ದೂರಿನ ಹಿನ್ನೆಲೆಯಲ್ಲಿ ಶ್ಯಾಂಭಟ್ ಕಂದೇಗಾಲ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮದಲ್ಲಿ ಬಹಿಷ್ಕಾರವನ್ನು ಹಾಕಿರುವಂತಹ ವಾತಾವರಣ ಕಾಣುತಿಲ್ಲ ಒಂದು ವೇಳೆ ಅಂತಹ ಬೆಳವಣಿಗೆಗಳಾದರೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ವೆಂಟಿಗೋಡಿ, ನಂಜನಗೂಡು ಉಪ ವಿಭಾಗೀಯ ಡಿ ವೈ ಎಸ್ ಪಿ ರಘು, ತಾಲೂಕು ದಂಡಾಧಿಕಾರಿ ಶಿವಕುಮಾರ್, ಕಾಸನೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್, ನಗರಸಭೆ ಆಯುಕ್ತ ನಂಜುಂಡಸ್ವಾಮಿ, ಸಿಡಿಪಿಒ ಗಳಾದ ಭವ್ಯಶ್ರೀ, ಮಂಜುಳಾ ‌ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಸಮಾಜಿಕ ಬಹಿಷ್ಕಾರವನ್ನು ಬೇರು ಸಮೇತ ಕೀಳಬೇಕು-ಶ್ಯಾಂಭಟ್ Read More

ರೌಡಿ ಲಿಸ್ಟ್ ನಲ್ಲಿರುವ ವ್ಯಕ್ತಿಗೆ ನಗರಸಭೆ ಅಧ್ಯಕ್ಷ ಪಟ್ಟ:ಕಾಂಗ್ರೆಸ್ ವಿರುದ್ಧ ಹರ್ಷವರ್ಧನ್ ವಾಗ್ಧಾಳಿ

ಮೈಸೂರು: ನಂಜನಗೂಡಿನ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ರೌಡಿ ಲಿಸ್ಟ್ ನಲ್ಲಿರುವ ವ್ಯಕ್ತಿಯನ್ನ ಕಾಂಗ್ರೆಸ್ ಆಯ್ಕೆ ಮಾಡಿದೆ ಎಂದು ಮಾಜಿ ಶಾಸಕ ಹರ್ಷವರ್ಧನ್ ವಾಗ್ಧಾಳಿ ನಡೆಸಿದ್ದಾರೆ.

ಇದು ಶಾಸಕ ದರ್ಶನ ಧ್ರುವನಾರಾಯಣ ರವರ ಬದ್ದತೆಯನ್ನ ತೋರಿಸುತ್ತಿದೆ ಎಂದು ವ್ಯಂಗ್ಯವಾಡಿದರು.

ನಂಜನಗೂಡಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಘೋಷ್ಠಿಯಲ್ಲಿ ಮಾತನಾಡಿದ ಹರ್ಷವರ್ಧನ್,ನಂಜನಗೂಡಿನ ಶಾಸಕರಿಗೆ ಮತ್ತು ಚಾಮರಾಜನಗರ ಲೋಕಸಭಾ ಸದಸ್ಯರಿಗೆ ರಾಜಕೀಯ ಜ್ಞಾನ ಇಲ್ಲ ಎಂದು ಟೀಕಿಸಿದರು.

ಡಿವೈಎಸ್ಪಿ ಬದಲಾವಣೆಯಾಗಿ ಬೇರೆ ಡಿವೈಎಸ್ಪಿ ಬಂದರೆ ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷ ರೌಡಿ ಪೆರೇಡ್ ನಲ್ಲಿ ನಿಲ್ಲಬೇಕಾಗುತ್ತದೆ ಎಂದು ಹೇಳಿದರು.

ಕನಕಪುರ ಮೂಲದ ರೆಸಾರ್ಟಿಗೆ ಬಿಜೆಪಿ ಸದಸ್ಯರನ್ನ ಕರೆದೊಯ್ದು ಹಣದ ಆಮಿಷ ಒಡ್ಡಿ ಡೀಲ್ ಮಾಡಲಾಗಿದೆ ಎಂದು ಹರ್ಷವರ್ಧನ್ ಆರೋಪಿಸಿದರು.

ತಾಲೂಕು ಘಟಕದ ಅಧ್ಯಕ್ಷ ಸಿದ್ದರಾಜು, ಬಾಲಚಂದ್ರ, ಕೆಂಡಗಣಪ್ಪ ಮತ್ತಿತರ ಮುಖಂಡರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ರೌಡಿ ಲಿಸ್ಟ್ ನಲ್ಲಿರುವ ವ್ಯಕ್ತಿಗೆ ನಗರಸಭೆ ಅಧ್ಯಕ್ಷ ಪಟ್ಟ:ಕಾಂಗ್ರೆಸ್ ವಿರುದ್ಧ ಹರ್ಷವರ್ಧನ್ ವಾಗ್ಧಾಳಿ Read More