ನಂಜನಗೂಡಿನಲ್ಲೂ ಗೋವಿನ ಮೇಲೆ ಹಲ್ಲೆ

ಮೈಸೂರು: ಬೆಂಗಳೂರಿನ ಚಾಮರಾಜ ಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ದ ಘಟನೆ ಹಸಿರಾಗಿರುವಾಗಲೇ ಹಸುವಿನ ಮೇಲೆ ದಾಳಿ ನಡೆಸಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಈ ಅಮಾನವೀಯ ಘಟನೆ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿರುವ ನಂಜುಂಡೇಶ್ವರ ದೇವಾಲಯ ಬಳಿ ನಡೆದಿದ್ದು,ಕಿಡಿಗೇಡಿಗಳು ಹಸುವಿನ ಬಾಲಕ್ಕೆ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ.

ನಂಜನಗೂಡಿನ‌ ನಂಜುಡೇಶ್ವರ ದೇವಾಲಯಕ್ಕೆ ಹರಕೆ ರೂಪದಲ್ಲಿ ಹಸುಗಳನ್ನ ಧಾನವಾಗಿ ಭಕ್ತರು ನೀಡುತ್ತಾರೆ.

ಅಂತಹ ಹಸುಗಳನ್ನು ಕಳ್ಳತನ ಮಾಡಲು ಯತ್ನಿಸಿರುವ ಗೋ ಕಳ್ಳರು ಈ ಸಂದರ್ಭದಲ್ಲಿ ಹಸುವಿನ ಮೇಲೆ ಮಚ್ಚಿನಿಂದ ದಾಳಿ ನಡೆಸಿ ಅದರ ಬಾಲಕ್ಕೆ ತೀವ್ರ ಸ್ವರೂಪದ ಗಾಯ ಮಾಡಿದ್ದಾರೆ.ಇದರಿಂದ ಪಟ್ಟಣದ ಜನತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತೀವ್ರವಾಗಿ ಗಾಯಗೊಂಡಿರುವ ಹಸುವಿಗೆ ಪಶುವೈದ್ಯರು ಚಿಕಿತ್ಸೆ ನೀಡಿದ್ದಾರೆ.

ಹಸುವಿನ ಮೇಲೆ ದಾಳಿ ಮಾಡಿರುವ ಸಂಬಂಧ ನಂಜನಗೂಡು ಟೌನ್ ಪೊಲೀಸರು ದಾಖಲಿಸಿದ್ದಾರೆ.

ಡಿವೈಎಸ್ಪಿ ರಘು ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ನಂಜನಗೂಡಿನಲ್ಲೂ ಗೋವಿನ ಮೇಲೆ ಹಲ್ಲೆ Read More

ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಒಳಿತು: ಸಿ.ಆರ್.ದಿನೇಶ್

ಮೈಸೂರು: ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಕ್ರಮಬದ್ಧವಾಗಿ ಭಾಗವಹಿಸಿದರೆ ಉನ್ನತ ಮಟ್ಟಕ್ಕೆ ಹೋಗಲು ಸಾಧ್ಯ ಎಂದು ರಾಜ್ಯ ಪ್ರಶಸ್ತಿ ವಿಜೇತರಾದ
ಲಯನ್ ಸಿ.ಆರ್. ದಿನೇಶ್ ಹೇಳಿದರು.

ನಂಜನಗೂಡು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರೂ ಆದ ಅವರು, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿಗಳಿಗೆ ತರಬೇತಿ ನೀಡುವ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಕಾರ್ಯಕ್ರಮ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಸರ್ಕಾರ,ಸರ್ಕಾರೇತರ ಹಾಗೂ ವಿವಿಧ ಸಂಘ ಸಂಸ್ಥೆಗಳ ಮೂಲಕ ಕಾರ್ಯಕ್ರಮಗಳನ್ನು ಆಯೋಜಿಸಿ ಜೀವನ ಮೌಲ್ಯ, ಜೀವನ ಕೌಶಲ್ಯ ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮೈಸೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ. ಎಂ. ಬಿ ಸುರೇಶ್ ಅವರು ಮಾತನಾಡಿ ರಾಜಕೀಯ ಸೇವಾ ಯೋಜನೆಯಲ್ಲಿ ವಿಶ್ವವಿದ್ಯಾನಿಲಯ, ರಾಜ್ಯ ,ರಾಷ್ಟ್ರ ಪ್ರಶಸ್ತಿಗಳನ್ನು ಯಾವ ರೀತಿ ಪಡೆದುಕೊಳ್ಳಬೇಕು ಎಂದು ಮಾಹಿತಿ ನೀಡಿದರು.

ಮುಂಜಾನೆ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ವಿಶ್ರಾಂತ ರಾ.ಸೇ.ಯೋ ಸಂಯೋಜನಾದಿಕಾರಿ ಡಾ.ರುದ್ರಯ್ಯ ಅವರು ಮಾತನಾಡಿ ಕಾರ್ಯಕ್ರಮ ಅಧಿಕಾರಿಗಳು ಖುಷಿಯಿಂದ ಸ್ವಂತ ಇಚ್ಛೆಯಿಂದ ಕಾರ್ಯಕ್ರಮ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರೆ ಕಾರ್ಯಕ್ರಮದಲ್ಲಿ ಸಫಲತೆಯನ್ನು ಸಾಧಿಸಬಹುದು ಎಂದು ಹೇಳಿದರು.

ಡಾ. ಜಿ .ಬಿ ಶಿವರಾಜ್ ಅವರು ಮಾತನಾಡಿ ಸಣ್ಣ ಸಣ್ಣ ವಿಚಾರಗಳ ಬಗ್ಗೆ ಸೂಕ್ಷಮತೆಯಿಂದ ಗಮನ ವಹಿಸಬೇಕು, ಗಾಂಧೀಜಿಯವರ ಜೀವನ ತತ್ವಗಳನ್ನು ಸ್ವಲ್ಪ ಮಟ್ಟಿಗಾದರೂ ಕಾರ್ಯಕ್ರಮ ಅಧಿಕಾರಿಗಳು ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.

ಡಾ.ವೀರಯ್ಯ, ಡಾ. ನಿಂಗರಾಜು ಹಾಗೂ ಪದವಿ ಕಾಲೇಜು ,ಇಂಜಿನಿಯರಿಂಗ್ ಕಾಲೇಜು , ಪದವಿ ಪೂರ್ವ ಕಾಲೇಜಿನ ನೂರು ಜನ ರಾಷ್ಟ್ರೀಯ ಯೋಜನೆಯ ಕಾರ್ಯಕ್ರಮ ಅಧಿಕಾರಿಗಳು ಕಾರ್ಯಗಾರದಲ್ಲಿ ಭಾಗವಹಿಸಿದ್ದರು.

ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಒಳಿತು: ಸಿ.ಆರ್.ದಿನೇಶ್ Read More

ಕೃಷಿಕ ರವಿಚಂದ್ರರ ನಂದಿನಿ ವನದಲ್ಲಿಟೀಂ ಮೈಸೂರು ತಂಡದಿಂದ ರೈತ ದಿನಾಚರಣೆ

ಮೈಸೂರು: ಟೀಂ ಮೈಸೂರು ವತಿಯಿಂದ ರೈತ ದಿನಾಚರಣಯನ್ನು ಜಿಲ್ಲೆಯ ನಂಜನಗೂಡಿನಲ್ಲಿ ಕೃಷಿ ಕಾಯಕ ಮಾಡುತ್ತಿರುವ ರವಿಚಂದ್ರ ಅವರ ನಂದಿನಿ ವನ ದಲ್ಲಿ ವಿಶೇಷವಾಗಿ ಆಚರಿಸಲಾಯಿತು.

ಪಾರಂಪರಿಕ ಮತ್ತು ವೈಜ್ಞಾನಿಕವಾಗಿ ಸಾವಯವ ಪದ್ಧತಿಯಲ್ಲಿ ಮಿಶ್ರ ಬೇಸಾಯ ಮಾಡುತ್ತಿರುವ ರವಿಚಂದ್ರ ಮತ್ತು ಅವರ ಕುಟುಂಬ ಕೃಷಿಯಲ್ಲಿ ಸಾರ್ಥಕತೆ ಗಳಿಸಿದ್ದಾರೆ.

ಟೀಂ ಮೈಸೂರು ತಂಡ ಅವರ ತೋಟಕ್ಕೆ ತೆರಳಿ ರವಿಚಂದ್ರ ಅವರ ಕುಟುಂಬದೊಂದಿಗೆ ಸೌಹಾರ್ದ ಯುತವಾಗಿ ಬೆರೆತು
ಅವರ ಅನುಭವವನ್ನು ತಿಳಿದುಕೊಂಡಿತು.

ಈ ವೇಳೆ ತಂಡದ ಗೋಕುಲ್ ಗೋವರ್ಧನ್ ಮಾತನಾಡಿ ದೇಶದ 5ನೇ ಪ್ರಧಾನ ಮಂತ್ರಿಗಳಾದ ಶ್ರೀ ಚೌದರಿ ಚರಣ್ ಸಿಂಗ್ ಅವರ ಜನ್ಮ ದಿನವನ್ನು
ಯಾಕೆ ರೈತ ದಿನಾಚರಣೆಯನ್ನಾಗಿ
ಆಚರಿಸಲಗುತ್ತದೆ, ಚರಣ್ ಸಿಂಗ್ ರೈತರ ಪರವಾಗಿ ತಮ್ಮ ಜೀವನಪರ್ಯಂತ ಹೋರಾಟ ಮಾಡಿಕೊಂಡು ಬಂದಿದ್ದರು ಎಂದು ಹೇಳಿದರು.

ಉತ್ತರಪ್ರದೇಶದಲ್ಲಿ ಜಮೀನ್ದಾರ್ ಪದ್ಧತಿ ವಿರುದ್ಧ ಹೋರಾಡಿದರು, ಸದಾ ಸರಳ ಜೀವನ ನಡೆಸಿದ ಚರಣ್ ಸಿಂಗ್, ಸದಾ ಖಾದಿ ಉಡುಪನ್ನು ಬಳಸಿದರು, ಅವರಿಗೆ 2023ನೇ ಸಾಲಿನಲ್ಲಿ ಮರಣಣೋತ್ತರ
ಭಾರತ ರತ್ನ ನೀಡಿಲಾಗಿದೆ ಎಂದು ತಿಳಿಸಿದರು.

ರವಿಚಂದ್ರ ಅವರು ಕೃಷಿಯಿಂದ ವಿಮುಖರಾಗುತ್ತಿರುವ ಯುವಸಮೂಹವನ್ನು ಬಡಿದೆಬ್ಬಿಸುವ ರೀತಿಯಲ್ಲಿ ನಮ್ಮ ಕುಟುಂಬ ಕೆಲಸ ಮಾಡುತ್ತಿದೆ, ಕೃಷಿಯಿಂದ ಏನೆಲ್ಲಾ ಸಾಧ್ಯ ಎಂಬುದನ್ನು ಕಂಡುಕೊಂಡಿದ್ದೇವೆ 5 ಎಕರೇ ಯಲ್ಲಿ ಏಲಕ್ಕಿ ಬಾಳೆ ಬೆಳೆದು ಒಂದು ಬಾರಿಗೆ 18ಲಕ್ಷ ರೂ ಪಸಲನ್ನು ತೆಗೆದಿದೆದ್ದೇವೆ ಎಂದು ಮಾಹಿತಿ ನೀಡಿದರು ‌

ನಾವು ಮೂಲತಃ ರೈತರಲ್ಲ, ಕುಂಚ ಕಲಾವಿದ 2019 ರ ಕೋವಿಡ್ ಸಂದರ್ಭದಲ್ಲಿ ಇಲ್ಲಿ ಬಂದು ಜಮೀನನ್ನು ತೆಗೆದುಕೊಂಡು ತೋಟ ಮಾಡಿದ್ದೇವೆ ನಾನು ಕೇವಲ ಯೂಟ್ಯೂಬ್, ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಗಳಿಸಿ, ಕಲಿತು ಯಶಸ್ವಿ ಕೃಷಿಕರಾಗಿದ್ದೇನೆ ಎಂದು ತಿಳಿಸಿದರು.

ಕೃಷಿಯಲ್ಲಿ ಶ್ರಮ ವಹಿಸಿ ದುಡಿದರೆ ಪ್ರತಿಫಲವಿದೆ, ತಾಳ್ಮೆ ಮುಖ್ಯ ಹಾಗೆ ಯಾವ ಯಾವ ರೀತಿಯಲ್ಲಿ ಬೆಳೆ ಮಾಡಿದರೇ ಒಳಿತು ಎಂದು ಅಪ್ಡೇಟ್ ಆಗಬೇಕು ಕೃಷಿಯನ್ನು ಪ್ರೀತಿಸಬೇಕು ಅವಾಗ ಯಶಸ್ಸು ತಾನಾಗಿಯೇ ಸಿಗುತ್ತದೇ ಎಂದು ಹೇಳಿದರು.

ಟೀಂ ಮೈಸೂರು ತಂಡದ ವತಿಯಿಂದ ರವಿಚಂದ್ರ ಹಾಗೂ ಧರ್ಮಪತ್ನಿ ಕಮಲಾ ಅವರನ್ನು ಗೌರವಿಸಲಾಯಿತು.

ಉರಗ ತಜ್ಞ ಗೋಳೂರು ಬಸವರಾಜು ಅವರು ಹಾವುಗಳ ಬಗ್ಗೆ ಅರಿವು ನೀಡಿದರು.

ಕಾರ್ಯಕ್ರಮದಲ್ಲಿ ರವಿಚಂದ್ರ ಅವರ ಪುತ್ರ ಮುರಳಿಕೃಷ್ಣ, ಪುತ್ರಿ ರಶ್ಮಿ ,ಪ್ರಕಾಶ್ ಮತ್ತು ಗೆಳಯರು ಹಾಜರಿದ್ದರು.

ಟೀಂ ಮೈಸೂರು ತಂಡದ ಸದಸ್ಯರುಗಳಾದ ಗೋಕುಲ್ ಗೋವರ್ಧನ್, ರಾಮಪ್ರಸಾದ್, ಯತೀಶ್, ಹೇಮಂತ್, ಬಾಲಕೃಷ್ಣ, ಹರೀಶ್ ಶೆಟ್ಟಿ, ಬಸವರಾಜು, ನವೀನ್ ಶೆಟ್ಟಿ , ಸೃಜನ್, ಬಸವರಾಜ್ ಫ್ಯಾಕ್ಟರಿ, ದಿನೇಶ್, ಸುನೀಲ್, ನಂದಿನಿ, ಮನೋಹರ್, ಕಲ್ಯಾಣಿ, ಮಿನುಗು, ಕಲ್ಯಾಣಿ, ವಿಸ್ಮಯ, ನಯನಿತಾ, ವೇಧಶ್ರೀ, ಯಶ್ಮಿತ್ ಭಾಗವಹಿಸಿದ್ದರು.

ಕೃಷಿಕ ರವಿಚಂದ್ರರ ನಂದಿನಿ ವನದಲ್ಲಿಟೀಂ ಮೈಸೂರು ತಂಡದಿಂದ ರೈತ ದಿನಾಚರಣೆ Read More

ಮಹಿಳಾ ಪ್ರಯಾಣಿಕರ ಜೊತೆ ನಿರ್ವಾಹಕ ಅನುಚಿತ ವರ್ತನೆ: ಡಿಪೋ ಮ್ಯಾನೇಜರ್ ಗೆ ದೂರು

ಮೈಸೂರು: ಮಹಿಳಾ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ ಕೆ ಎಸ್ ಆರ್ ಟಿ ಸಿ ಬಸ್ ನಿರ್ವಾಹಕನ ವಿರುದ್ದ ಸಂಘಟಕರು ಡಿಪೋ ಮ್ಯಾನೇಜರ್ ಗೆ ದೂರು ನೀಡಿದ್ದಾರೆ.

ನಂಜನಗೂಡಿನಿಂದ ಚಿಕ್ಕಬರಗಿ ಗ್ರಾಮಕ್ಕೆ ತೆರಳುವ ಬಸ್ ಸಂಖ್ಯೆ KA59 F 0879 ನ ಚಾಲಕ ಹಾಗೂ ನಿರ್ವಾಹಕ ಮಂಜುನಾಥ್ ವಿರುದ್ದ ದೂರು ನೀಡಲಾಗಿದೆ.

ಮಹಿಳೆಯೊಬ್ಬರೊಂದಿಗೆ ಮಾತನಾಡುವಾಗ ಅಶ್ಲೀಲ ಪದ ಬಳಸಿ ಆಕೆಯ ಫೋಟೋ ಹಾಗೂ ವಿಡಿಯೋ ಚಿತ್ರೀಕರಣ ಮಾಡಿದ್ದಾರೆಂದು ಆರೋಪಿಸಿ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ.

ಡಿ.20ರಂದು ಸರ್ಕಾರಿ ಬಸ್ ಹೆಡಿಯಾಲ ಸಮೀಪ ನಿಳಲಹಳ್ಳಿ ಗ್ರಾಮದ ಸರ್ಕಾರಿ ಶಾಲೆ ಮುಂಭಾಗ ಸಾಗಿದೆ.ಬಸ್ ಗೆ ಕಾದಿದ್ದ ಶಾಲೆ ಸಿಬ್ಬಂದಿ ನಾಗಮ್ಮ ಅವರು ನಿಲ್ಲಿಸುವಂತೆ ಕೈ ತೋರಿಸಿದ್ದಾರೆ.

ಚಾಲಕ ಸ್ವಲ್ಪದೂರ ಸಾಗಿ ಬಸ್ ನಿಲ್ಲಿಸಿದ್ದಾನೆ.ಈ ಬಗ್ಗೆ ಪ್ರಶ್ನಿಸಿದಾಗ ಮಹಿಳೆ ಎಂದು ಪರಿಗಣಿಸದೆ ಅಶ್ಲೀಲ ಪದ ಬಳಕೆ ಮಾಡಿ ನಿಂದಿಸಿದ್ದಾನೆ.

ಬಸ್ ನಿಂತ ಮೇಲೆ ನಾಗಮ್ಮ ಅವರ ಫೋಟೋ ಮತ್ತು ವಿಡಿಯೋ ಗಳನ್ನ ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾನೆ.ಈ ವಿಚಾರವನ್ನ ನಾಗಮ್ಮ ತಮ್ಮ ಪತಿ ಮಹದೇವಸ್ವಾಮಿಗೆ ತಿಳಿಸಿದ್ದಾರೆ.

ಕೂಡಲೇ ಸಂಘಟಕರ ನೆರವಿನಿಂದ ಮಹದೇವಸ್ವಾಮಿ ನಂಜನಗೂಡು ಘಟಕದ ಬಸ್ ಡಿಪೋ ಮ್ಯಾನೇಜರ್ ಗೆ ದೂರು ನೀಡಿದ್ದಾರೆ.

ಡಿಪೋ ಮ್ಯಾನೇಜರ್‌ ಅವರು ಮಂಜುನಾಥ್ ಮೊಬೈಲ್ ವಶಕ್ಕೆ ಪಡೆದಿದ್ದು,ಪರಿಶೀಲಿಸಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಮಹಿಳಾ ಪ್ರಯಾಣಿಕರ ಜೊತೆ ನಿರ್ವಾಹಕ ಅನುಚಿತ ವರ್ತನೆ: ಡಿಪೋ ಮ್ಯಾನೇಜರ್ ಗೆ ದೂರು Read More

ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್,ಪ್ರವೃತ್ತಿಯಲ್ಲಿ ಕೃಷಿಕ ಗಿರೀಶ್

ನಂಜನಗೂಡು: ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್,ಆದರೆ‌ ಕೃಷಿಯತ್ತ ಒಲವು ಬೆಳೆಸಿಕೊಂಡು ಯಶಸ್ವಿಯತ್ತ‌ ಸಾಗಿರುವ ಗಿರೀಶ್ ಅವರ ಯಶೋಗಾತೆ ಇದು.

ನಂಜನಗೂಡು ತಾಲೂಕು ಅಂಬಳೆಯ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಗಿರೀಶ್ ಅವರಿಗೆ
ಇತ್ತೀಚೆಗೆ ಕೃಷಿ ಕಡೆ ಒಲವು ಬಂದು ಹಗಿನವಾಳಿನಲ್ಲಿ ನರ್ಸರಿ ಪ್ರಾರಂಭಿಸಿದ್ದಾರೆ.

ಈ ನರ್ಸರಿ ಯಲ್ಲಿ ಎಲ್ಲಾ ರೀತಿಯ ಉತ್ತಮ ಗುಣಮಟ್ಟದ ತರಕಾರಿ ಸಸಿಗಳನ್ನು ಬೆಳೆದು ರೈತರಿಗೆ ನೀಡುವ ಉದ್ದೇಶ ಹೊಂದಿದ್ದಾರೆ.

ಇದೀಗ ಅವರು ಬಸವೇಶ್ವರ ನರ್ಸರಿ ಯನ್ನು ಮೂಢನಂಬಿಕೆಯನ್ನು ತೊರೆದು ಹುಣ್ಣಿಮೆಯಂದೆ ಪ್ರಾರಂಭಿಸಿದದು ವಿಶೇಷ.

ಈ ವೇಳೆ ಅಲ್ಲಿ ಸೇರಿದ್ದ ರೈತರು ಬಸವೇಶ್ವರ ನರ್ಸರಿ ಯನ್ನು ಬಸವೇಶ್ವರ ಭಾವಚಿತ್ರಕ್ಕೆ ಪುಷ್ಪನಮನ ಮಾಡುವ ಮೂಲಕ ಉದ್ಘಾಟನೆ ಮಾಡಿದರು.

ಸಾನಿಧ್ಯ ವಹಿಸಿದ್ದ ಪೂಜ್ಯ ಶ್ರೀ ಬಸವಯೋಗಿಪ್ರಭುಗಳು ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ವೃಷ್ಟಿ ಮಾಡುವ ಮೂಲಕ ಅಂಬಳೆ ಗಿರೀಶ್ ಅವರನ್ನು ಅಭಿನಂದಿಸಿದರು.

ಬಸವಾದಿ ಶರಣರ ವಚನ ಪುಸ್ತಕವನ್ನು ನೀಡಿ ಶರಣರ ಕಾಯಕ ನಿಷ್ಠೆ, ಪ್ರಾಮಾಣಿಕತೆಯನ್ನು ಅಳವಡಿಸಿಕೊಂಡು ಬದುಕಬೇಕು,ವಚನಗಳನ್ನು ಪ್ರತಿದಿನವು ಓದಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ನಂಜನಗೂಡು ಅಕ್ಕಮಹಾದೇವಿ ವಿದ್ಯಾರ್ಥಿ ನಿಲಯದ ವ್ಯವಸ್ಥಾಪಕ ಚೆನ್ನಪ್ಪ, ಬಸವಸೇನೆ ಅದ್ಯಕ್ಷ ಯೋಗಿಶ್ ಮಹೇಶ್, ಮುದ್ದಹಳ್ಳಿ ಅಶೋಕ್ ಮತ್ತು ಅಕ್ಕಪಕ್ಕದ ಹಳ್ಳಿಯ ರೈತರು ಭಾಗವಹಿಸಿದ್ದರು.

ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್,ಪ್ರವೃತ್ತಿಯಲ್ಲಿ ಕೃಷಿಕ ಗಿರೀಶ್ Read More

ಆರೋಗ್ಯ ಅರಿವಿನ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಸಹಕಾರಿ:ರಾಜೇಶ್

ನಂಜನಗೂಡು: ಆರೋಗ್ಯ ಅರಿವಿನ ಕಾರ್ಯಕ್ರಮಗಳು ವಿದ್ಯಾರ್ಥಿಗಳು ತಿಳಿದುಕೊಳ್ಳಲು ಸಹಾಯವಾಗುತ್ತದೆ ಎಂದು
ತಾಲೂಕು ಆರೋಗ್ಯ ಕೇಂದ್ರದ ಸಂಪನ್ಮೂಲ ವ್ಯಕ್ತಿ ರಾಜೇಶ್ ತಿಳಿಸಿದರು.

ತಾಲೂಕು ಆರೋಗ್ಯ ಇಲಾಖೆಯ ವತಿಯಿಂದ ಹದಿಹರೆಯದ ಆರೋಗ್ಯ ಶಿಕ್ಷಣ ಕಾರ್ಯಕ್ರಮದಡಿ ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಏಡ್ಸ್ ಮತ್ತು ಇತರ ಮಾರಕ ರೋಗಗಳ ಅರಿವಿನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾವು ತಿಳಿದುಕೊಂಡ ವಿಷಯಗಳನ್ನು ನಿಮ್ಮ ಕುಟುಂಬದವರಿಗೆ ಸ್ನೇಹಿತರಿಗೆ ನೆರೆಹೊರೆ ಅವರಿಗೆ ತಿಳಿಸಬೇಕೆಂದು ಸಲಹೆ ನೀಡಿದರು.

ರಾಜೇಶ್ ರವರು ವಿದ್ಯಾರ್ಥಿಗಳಿಗೆ ಮಾರಕ ರೋಗಗಳ ಹರಡುವಿಕೆ, ಅವುಗಳ ಪರಿಣಾಮಗಳು ಮತ್ತು ನಿಯಂತ್ರಣ ಕ್ರಮಗಳ ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ನಾಗವೇಣಿ, ಚೇತನ್, ಯಶವಂತ ಉಪಸ್ಥಿತರಿದ್ದರು

ಆರೋಗ್ಯ ಅರಿವಿನ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಸಹಕಾರಿ:ರಾಜೇಶ್ Read More

ಕನಕದಾಸರ ಚಿಂತನೆಗಳು ಪ್ರಸ್ತುತ ಸನ್ನಿವೇಶಕ್ಕೆ ಅತ್ಯಗತ್ಯ:ಹೆಚ್.ಎಸ್ ರಾಮನುಜ

ನಂಜನಗೂಡು: ಕನಕದಾಸರ ಚಿಂತನೆಗಳು ಪ್ರಸ್ತುತ ಸನ್ನಿವೇಶಕ್ಕೆ ಅತಿ ಅಗತ್ಯವಾಗಿದೆ ಎಂದು ಭೌತಶಾಸ್ತ್ರ ಉಪನ್ಯಾಸಕ ಹೆಚ್.ಎಸ್. ರಾಮನುಜ ಅವರು ತಿಳಿಸಿದರು.

ಕನಕದಾಸರ ಆಧ್ಯಾತ್ಮಿಕ ಚಿಂತನೆಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಒಂದು ಸುಂದರ ಸಮಾಜ ನಿರ್ಮಾಣ ಮಾಡಬಹುದು ಎಂದು ಹೇಳಿದರು.

ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನಕದಾಸ ಜಯಂತಿ ಪ್ರಯುಕ್ತ ವಿಶೇಷ ಉಪನ್ಯಾಸ ನೀಡಿದ ಅವರು ವಿದ್ಯಾರ್ಥಿಗಳಿಗೆ ಕನಕರ ಬಗ್ಗೆ ಮಾಹಿತಿ ನೀಡಿದರು.

ಕನ್ನಡ ಉಪನ್ಯಾಸಕಿ ಡಾ.ಕೆ. ಮಾಲತಿ ಅವರು ಕನಕದಾಸರ ಜೀವನ ಚಿತ್ರಣ ಮತ್ತು ಸಾಹಿತ್ಯದ ಬಗ್ಗೆ ತಿಳಿಸಿಕೊಟ್ಟರು.

ಆಂಗ್ಲ ಭಾಷೆಯ ಉಪನ್ಯಾಸಕ ರಂಗಸ್ವಾಮಿಯವರು ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಸಮಾನತೆಯ ಭಾವನೆಗಳನ್ನು ತರಬೇಕಾದರೆ ಕನಕದಾಸರ ಚಿಂತನೆಗಳ ಬಗ್ಗೆ ಅಧ್ಯಯನ ಮಾಡಬೇಕು ಎಂದು ತಿಳಿಸಿದರು.

ಜೀವಶಾಸ್ತ್ರ ಉಪನ್ಯಾಸಕಿ ಎಮ್.ಬಿ. ಪದ್ಮಾವತಿ ಅವರು ಕನಕದಾಸರು ಬರೆದ ಸಾಹಿತ್ಯದ ಹಾಡುಗಳನ್ನು ಹಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಸಿ.ಆರ್‌ ದಿನೇಶ್ ಅವರು ದಾಸ ಸಾಹಿತ್ಯ ಮತ್ತು ವಚನ ಸಾಹಿತ್ಯ ಭಾರತದಲ್ಲಿ ತಣ್ಣನೆಯ ಸಾಮಾಜಿಕ ಕ್ರಾಂತಿಯನ್ನು ಉಂಟು ಮಾಡಿದೆ. ಜಾಗತಿಕ ವ್ಯವಸ್ಥೆಯಲ್ಲಿ ತನ್ನದೇ ಆದ ಹಿರಿಮೆಯನ್ನು ದಾಸ ಸಾಹಿತ್ಯ ಪಡೆದಿದೆ ಎಂದು ಹೇಳಿದರು.

ದಿನೇಶ್, ಎನ್. ನಾಗರಾಜು, ಉಪನ್ಯಾಸಕರಾದ ಅಶ್ವತ ನಾರಾಯಣ ಗೌಡ, ಲಿಂಗಣ್ಣ ಸ್ವಾಮಿ,ಡಾ.ಟಿ.ಕೆ.ರವಿ, ಸುಮಿತ್ರ ,ಸ್ವಾಮಿಗೌಡ ,ಮೀನಾ ಹೆಚ್. ಕೆ ಪ್ರಕಾಶ್ ,ಆದಿಲ್ ಹುಸೇನ್, ರೂಪ ,ಸುಮ ,ವತ್ಸಲಾ,ನಾಗರಾಜ ರೆಡ್ಡಿ, ಸುಲಕ್ಷಣ, ಕೆ.ಎಸ್ ಹರೀಶ್ ,ಶೃತಿ ,ಹರೀಶ್ ಎನ್.ಎಂ ,ನಿಂಗಣ್ಣ, ದಿವ್ಯ ಉಪಸ್ಥಿತರಿದ್ದರು.

ಕನಕದಾಸರ ಚಿಂತನೆಗಳು ಪ್ರಸ್ತುತ ಸನ್ನಿವೇಶಕ್ಕೆ ಅತ್ಯಗತ್ಯ:ಹೆಚ್.ಎಸ್ ರಾಮನುಜ Read More