ಅಕ್ರಮ ಮಧ್ಯ ಮಾರಾಟಕ್ಕೆ ಕಡಿವಾಣ ಹಾಕದ‌ ಅಧಿಕಾರಿ ಬಗ್ಗೆ ಜನರ ಆಕ್ರೋಶ

ನಂಜನಗೂಡು,ಮಾ.11: ಅಕ್ರಮ ಮಧ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಗ್ರಾಮಸ್ಥರು ದೂರು ನೀಡಿದ್ದರಿಂದ ಅಬಕಾರಿ ಅಧಿಕಾರಿ ಸ್ಥಳಕ್ಕೆ ಬಂದರೂ ಯಾವುದೇ ಕ್ರಮ ಕೈಗೊಳ್ಳದೆ ಹಿಂದಿರುಗಿದ್ದು,ಗ್ರಾಮಸ್ಥರು ತೀವ್ರ ಆಕ್ರೋಶ‌ ವ್ಯಕ್ತಪಡಿಸಿದ್ದಾರೆ.

ಕೆಲ ದಿನಗಳ ಹಿಂದೆ ನಂಜನಗೂಡಿನ ಬಳ್ಳೂರು ಹುಂಡಿ ಗ್ರಾಮದ ಮಹದೇವ ಈರೇಗೌಡನ ಹುಂಡಿ ಗ್ರಾಮದ ಚೆನ್ನಪ್ಪ ಅಕ್ರಮ ಮಧ್ಯದ ಚಟಕ್ಕೆ ಬಲಿಯಾಗಿದ್ದಾರು.

ಅದೇ ರೀತಿ ನಾಗಣಪುರ ಆದಿವಾಸಿ ಕಾಲೋನಿಯಲ್ಲೂ ಇಂತಹ ಪ್ರಕರಣಗಳು ನಡೆದಿವೆ.

ಬಳ್ಳೂರು ಹುಂಡಿ, ಈರೇಗೌಡನ ಹುಂಡಿ, ಅಂಜನಾಪುರ, ಮಡುವಿನಹಳ್ಳಿ, ಕೊತ್ತನಹಳ್ಳಿ ಆದಿವಾಸಿ ಕಾಲೋನಿ ಇನ್ನು ಅನೇಕ ಗ್ರಾಮಗಳಲ್ಲಿ ಪೆಟ್ಟಿ ಅಂಗಡಿ ಮತ್ತು ಗಿರಣಿ ಅಂಗಡಿಗಳಲ್ಲಿ ಎಗ್ಗಿಲ್ಲದೆ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ ಎಂದು ಸ್ಥಳೀಯರು ಅಬಕಾರಿ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಈರೇಗೌಡನ ಹುಂಡಿ,ಅಂಜನಪುರ ,ಗ್ರಾಮಕ್ಕೆ ಪರಿಶೀಲನೆಗೆ ಬಂದ ಅಬಕಾರಿ ಅಧಿಕಾರಿಗೆ ಕುಡಿದು ಬಿಸಾಡಿರುವ ಕಾಲಿ ಪ್ಯಾಕೆಟ್ ಗಳ ರಾಶಿಯ ದರ್ಶನವಾಗಿದೆ.

ಆದರೂ ಪರಿಶೀಲನೆಗೆ ಬಂದ ಅಧಿಕಾರಿ ಅಫ್ಸಲ್ ಯಾವುದೇ ಕ್ರಮ ಕೈಗೊಳ್ಳದೆ ಬರಿಗೈಲಿ ಹಿಂದಿರುಗಿದ್ದಾರೆ.ಈ ಬಗ್ಗೆ ಸ್ಥಳೀಯರು ಪ್ರಶ್ನಿಸಿದರೂ ಏನೂ ಹೇಳದೆ‌ ಹಾಗೆಯೇ ಹಿಂದಿರುಗಿದ್ದಾರೆ.

ಅಬಕಾರಿ ಅಧಿಕಾರಿ ಅಫ್ಸಲ್ ನಿರ್ಲಕ್ಷ್ಯಕ್ಕೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ,ಜತೆಗೆ ಅನುಮಾನ ಕೂಡಾ ಪಟ್ಟಿದ್ದಾರೆ. ಅಕ್ರಮ ಮಧ್ಯ ಮಾರಾಟಕ್ಕೆ ಕೂಡಲೇ ಬ್ರೇಕ್ ಹಾಕಬೇಕೆಂದು ಆಗ್ರಹಿಸಿದ್ದಾರೆ.

ಅಕ್ರಮ ಮಧ್ಯ ಮಾರಾಟಕ್ಕೆ ಕಡಿವಾಣ ಹಾಕದ‌ ಅಧಿಕಾರಿ ಬಗ್ಗೆ ಜನರ ಆಕ್ರೋಶ Read More

ಬ್ಯಾಂಕಿಗೆ ಕಟ್ಟ ಬೇಕಿದ್ದ ಹಣದೊಂದಿಗೆ ನಾಪತ್ತೆಯಾದ ಬಾರ್ ಕ್ಯಾಶಿಯರ್

ಮೈಸೂರು: ಬ್ಯಾಂಕಿಗೆ ಕಟ್ಟಲು ಹೇಳಿದ್ದ ಹಣದೊಂದಿಗೆ ಬಾರ್‌ ಕ್ಯಾಶಿಯರ್ ನಾಪತ್ತೆಯಾದ ಘಟನೆ ಜಿಲ್ಲೆಯ ನಂಜನಗೂಡಿನಲ್ಲಿ ನಡೆದಿದೆ.

ಈ‌ ಬಗ್ಗೆ ಗಾಜನೂರು ಗ್ರಾಮದ ಮಹದೇವ್ ಎಂಬಾತನ ವಿರುದ್ದ ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲವು ತಿಂಗಳಿಂದ ಮಹದೇವ್ ನಂಜನಗೂಡು ಗುಂಡ್ಲುಪೇಟೆ ಮುಖ್ಯ ರಸ್ತೆಯಲ್ಲಿರುವ ಎಸ್.ಎಲ್.ವಿ.ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದ.

ಅಲ್ಲಿ ವ್ಯವಸ್ಥಾಪಕರಾಗಿದ್ದ ಆನಂದ್ ಎಂಬುವರು ಕಳೆದ ವರ್ಷ ಜುಲೈ ನಲ್ಲಿ ಕಾರ್ಯನಿಮಿತ್ತ ರಜೆ ಪಡೆದು ತೆರಳಿದ್ದಾಗ ವ್ಯಾಪಾರ ವಹಿವಾಟಿನಲ್ಲಿ ಬಂದ ಹಣವನ್ನ ಬ್ಯಾಂಕ್ ಗೆ ಕಟ್ಟುವಂತೆ ಮಹದೇವ್ ಗೆ ಸೂಚಿದಿ ಹೋಗಿದ್ದರು.

ರಜೆ ಮುಗಿಸಿ ವಾಪಸ್ ಬಂದಾಗ ವ್ಯಾಪಾರದಿಂದ ಸಂಗ್ರಹವಾಗಿದ್ದ 6.70 ಲಕ್ಷ ಹಣ ಕ್ಯಾಶಿಯರ್ ಮಹದೇವ್ ಕಟ್ಟದೆ ಕೆಲಸಕ್ಕೂ ಬಾರದೆ ನಾಪತ್ತೆಯಾಗಿರುವುದು ಗೊತ್ತಾಗಿದೆ.

ತಕ್ಷಣ ಕಾರ್ಯಪ್ರವೃತ್ತರಾದ ಅವರು,ಮಹದೇವ್ ರನ್ನ ಪತ್ತೆ ಹಚ್ಚಿ ಹಣ ಹಿಂದಿರುಗಿಸುವಂತೆ ಕೇಳಿದಾಗ ಆತ ಸಮಯಾವಕಾಶ ಪಡೆದಿದ್ದ.

ಆದರೆ ಆತ ಇನ್ನೂ ಹಣ ಹಿಂದಿರುಗಿಸಿಲ್ಲಾ ಕೈಗೂ ಸಿಗುತ್ತಿಲ್ಲ,ಹಾಗಾಗಿ ಆನಂದ್ ಅವರು ಮಹದೇವ್ ವಿರುದ್ದ ನಂಜನಗೂಡು ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಬ್ಯಾಂಕಿಗೆ ಕಟ್ಟ ಬೇಕಿದ್ದ ಹಣದೊಂದಿಗೆ ನಾಪತ್ತೆಯಾದ ಬಾರ್ ಕ್ಯಾಶಿಯರ್ Read More

ಹದಿನಾರು ಗ್ರಾಮದಲ್ಲಿ ಕೊರಗಜ್ಜ ದೈವಸ್ಥಾನ ನಿರ್ಮಾಣ

ಮೈಸೂರು: ಮೈಸೂರಿನ ನಂಜನಗೂಡು ತಾಲೂಕು ಹದಿನಾರು ಗ್ರಾಮದಲ್ಲಿ ನೂತನವಾಗಿ ಸ್ವಾಮಿ ಕೊರಗಜ್ಜ ದೈವಸ್ಥಾನ ನಿರ್ಮಾಣ ಮಾಡಲಾಗಿದೆ.

ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಹದಿನಾರು ಗ್ರಾಮದಲ್ಲಿ ಫೆ.19 ರಂದು ಸ್ವಾಮಿ ಕೊರಗಜ್ಜ ದೈವಸ್ಥಾನ ನೂತನವಾಗಿ ಉದ್ಘಾಟನೆ ಗೊಂಡಿದೆ‌

ಸ್ವಾಮಿ ಕೊರಗಜ್ಜನ ಭಕ್ತಾಯರು ಇನ್ನು ಮುಂದೆ ದೈವಸ್ಥಾನಕ್ಕೆ ಆಗಮಿಸಿ ಅಜ್ಜನ ಕೃಪೆಗೆ ಪಾತ್ರರಾಗ ಬಹುದೆಂದು ವ್ಯವಸ್ಥಾಪಕರು ಮತ್ತು ಪ್ರಧಾನ ಅರ್ಚಕರಾದ ಶ್ರೀ ತೇಜು ಕುಮಾರ್ ಅವರು ತಿಳಿಸಿದ್ದಾರೆ.

ಮೈಸೂರ ನಗರ ಬಸ್ ನಿಲ್ದಾಣದಿಂದ ದೈವಸ್ಥಾನಕ್ಕೆ ಬಸ್ ಸಂಖ್ಯೆ 204/ 205 ರಲ್ಲಿ ಬರಬಹುದಾಗಿದೆ ಎಂದು ತಿಳಿಸಿದ್ದಾರೆ
ವಿವರಗಳಿಗೆ ಮೊಬೈಲ್ ಸಂಖ್ಯೆ 93531 90603 ಸಂಪರ್ಕಿಸಬಹುದಾಗಿದೆ.

ಹದಿನಾರು ಗ್ರಾಮದಲ್ಲಿ ಕೊರಗಜ್ಜ ದೈವಸ್ಥಾನ ನಿರ್ಮಾಣ Read More

ವೈದ್ಯ ಲೋಕಕ್ಕೆ ಸವಾಲಾದ ವಿಚಿತ್ರ ರೂಪದ ಮಗು!

ಮೈಸೂರು: ವೈದ್ಯ ಲೋಕಕ್ಕೇ ಸವಾಲಾಗುವಂತ ವಿಚಿತ್ರ ರೂಪ ಹೊಂದಿದ ಮಗು ಜಿಲ್ಲೆಯ ನಂಜನಗೂಡಿನ ಹುರಾ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದೆ.

ವಿಚಿತ್ರವಾದ ಕಣ್ಣು ಮತ್ತು ತುಟಿ ಮೈಯೆಲ್ಲಾ ಇದ್ದಲಿನಂತೆ ಕಪ್ಪು ಬಣ್ಣ.ನೋಡುಗರನ್ನ ಬೆಚ್ಚಿಬೀಳುವಂತಹ ರೂಪ ಇರುವ‌ ಮಗು ಜನಿಸಿದ್ದು,ಆರೋಗ್ಯ ಇಲಾಖೆ ಬೆರಗಾಗಿದೆ.

ಹುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಸೇರಿರುವ ಗ್ರಾಮ ಒಂದರ ದಂಪತಿಗೆ ವಿಚಿತ್ರ ರೂಪ ಹೊಂದಿರುವ ಮಗು ಹುಟ್ಟಿದೆ.

ಮಗುವಿನ ಆಕಾರ ಮತ್ತು ರೂಪ ಕಂಡು ಗ್ರಾಮಸ್ಥರು ಮತ್ತು ದಂಪತಿ ಕುಟುಂಬಸ್ಥರು ಬೆಚ್ಚಿಬಿದ್ದಿದ್ದಾರೆ.

ಈ ವಿಚಿತ್ರ ಮಗುವನ್ನು ಉಳಿಸಿಕೊಳ್ಳಲು ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ.

ವಿಚಿತ್ರ ರೂಪದ ಮಗುವನ್ನ ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು,ಏಳು ದಿನಗಳ ಕಾಲ ತುರ್ತು ಚಿಕಿತ್ಯ ಘಟಕದಲ್ಲಿ ಇರಿಸಿ ವೈದ್ಯರು ಚಿಕಿತ್ಸೆ ನೀಡಲಿದ್ದಾರೆ.

ಕಳೆದ ವರ್ಷ ಕೂಡಾ ಇದೇ ದಂಪತಿ ಇಂತದ್ದೇ ರೂಪ ಹೊಂದಿದ ಮಗುವಿಗೆ ಜನ್ಮ ನೀಡಿತ್ತು. ನಾಲ್ಕೈದು ದಿನಗಳ ನಂತರ ಮಗು ಸಾವನ್ನಪ್ಪಿತ್ತು.

ಮತ್ತೆ ಇದೇ ರೀತಿ ಮಗು ಜನನವಾಗಿದ್ದು ಇಡೀ ಕುಟುಂಬ ಆತಂಕಕ್ಕೆ ಒಳಗಾಗಿದೆ.

ಈ ಹಿಂದೆ ನಡೆದ ಪ್ರಕರಣದ ನಂತರ ಆರೋಗ್ಯ ಇಲಾಖೆ ನೀಡಿದ್ದ ಸಲಹೆ ಸೂಚನೆಗಳನ್ನ ದಂಪತಿ ಪಾಲಿಸಿಲ್ಲ ಎಂದು ಹೇಳಲಾಗಿದೆ.

ಮಗುವನ್ನ ಉಳಿಸಿಕೊಳ್ಳಲು ಚೆಲುವಾಂಬಾ ಆಸ್ಪತ್ರೆಯ ತುರ್ತು ಘಟಕದಲ್ಲಿ ಹರಸಾಹಸ ನಡೆಸಲಾಗುತ್ತಿದೆ.ಆದರೆ ಈ ವಿಚಿತ್ತ ಮಗು ಬದುಕುವುದೊ ಇಲ್ಲವೊ ಆ ದೇವನಿಗೆ ಗೊತ್ತು.ವಿಚಿತ್ರ ಮಗು ವೈದ್ಯಲೋಕಕ್ಕೆ ಸವಾಲಾಗಿರುವುದಂತೂ ಸತ್ಯ.

ವೈದ್ಯ ಲೋಕಕ್ಕೆ ಸವಾಲಾದ ವಿಚಿತ್ರ ರೂಪದ ಮಗು! Read More

ಮೈಕ್ರೋ ಫೈನಾನ್ಸ್ ಮೇಲೆ ಎಫ್ಐಆರ್ ದಾಖಲು

ಮೈಸೂರು: ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳದಿಂದ ಮತ್ತೊಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲೂಕಿನಲ್ಲಿ ನಡೆದಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ನಂಜನಗೂಡು ತಾಲೂಕಿನ ಮಲ್ಕುಂಡಿ ಗ್ರಾಮದ ಕೃಷ್ಣಮೂರ್ತಿ (33) ಎಂಬವರು ವಾಸದ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೃಷ್ಣಮೂರ್ತಿ ಮೈಕ್ರೋ ಫೈನಾನ್ಸ್ ನ ವಿವಿಧ ಸಂಘ ಸಂಸ್ಥೆಗಳಿಂದ 6 ಲಕ್ಷ ಸಾಲ ಪಡೆದಿದ್ದರು.
ಸಾಲ ಕಟ್ಟಲಾಗದೆ ಬೆದರಿ ಆತ್ಮತೆಗೆ ಶರಣಾಗಿದ್ದಾರೆ ಎಂಬ ದೂರು ಕೇಳಿ ಬಂದಿದೆ.

ಸ್ಥಳಕ್ಕೆ ಹುಲ್ಲಹಳ್ಳಿ ಪೊಲೀಸ್ ಠಾಣೆ ಪಿಎಸ್ಐ ಚೇತನ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.

ಕಿರುಕುಳ ನೀಡುತ್ತಿದ್ದ 5 ಮೈಕ್ರೋ ಫೈನಾನ್ಸ್ ಮೇಲೆ ಹುಲ್ಲಹಳ್ಳಿ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ.ಕಿರುಕುಳಕ್ಕೆ ಬೇಸತ್ತು ನೇಣಿಗೆ ಶರಣಾದ ಮಲ್ಕುಂಡಿ ಗ್ರಾಮದ ರೈತ ಕೃಷ್ಣಮೂರ್ತಿ ಪತ್ನಿ ಲತಾ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಮೈಕ್ರೋ ಫೈನಾನ್ಸ್ ಮೇಲೆ ಎಫ್ಐಆರ್ ದಾಖಲು Read More

ಸಾಲಕ್ಕೆ ಹೆದರಿ ಮಹಿಳೆ ಆತ್ಮಹತ್ಯೆ

ಮೈಸೂರು: ಸಾಲ ತೀರಿಸಲಾಗದೆ ಹೆದರಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡ‌‌ ಪ್ರಕರಣ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.

ನಂಜನಗೂಡು ತಾಲ್ಲೂಕಿನ ಅಂಬಳೆ ಗ್ರಾಮದ ಜಯಶೀಲ (53) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.‌

ಈಕೆ ಐ ಐ ಎಫ್ ಎಲ್, ಫೈವ್ ಸ್ಟಾರ್ ಮೈಕ್ರೋ ಫೈನಾನ್ಸ್‌ನಲ್ಲಿ ಮನೆ, ವ್ಯವಸಾಯ ಹಾಗೂ ಹಸು ಸಾಕಾಣಿಕೆಗಾಗಿ
5 ಲಕ್ಷ ಸಾಲ ಪಡೆದಿದ್ದರು.

ಮೈಕ್ರೋ ಫೈನಾನ್ಸ್ ನವರಿಗೆ
ಪ್ರತಿ ತಿಂಗಳು 20 ಸಾವಿರಕ್ಕೂ ಹೆಚ್ಚು ಇ ಎಂ ಐ ಕಟ್ಟಬೇಕಾಗಿತ್ತು.
ಸಾಲ ತೆಗೆದುಕೊಂಡಿದ್ದ ಹಸು ಕೂಡ ಇತ್ತೀಚೆಗೆ ಮೃತಪಟ್ಟಿತ್ತು.

ಹಾಗಾಗಿ ಜೀವನ ನಿರ್ವಹಣೆ ಮಾಡಲು ಬಹಳ ಕಷ್ಟ ಪಡುತ್ತಿದ್ದರು,ಬಹಳ ನೊಂದಿದ್ದರು.
ಸಮೀಪದ ಹುಲ್ಲಹಳ್ಳಿಗೆ ಹೋಗಿ ವಿಷದ ಮಾತ್ರೆಗಳನ್ನು ತಂದು ಜಮೀನಿನಲ್ಲಿ ನುಂಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮೈಕ್ರೊ ಫೈನಾನ್ಸ್ ನವರ ಕಾಟದಿಂದ ಜಯಶೀಲ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.ಪೊಲೀಸರ ತನಿಖೆಯಿಂದ ನಿಜ ತಿಳಿಯಬೇಕಿದೆ.

ಸಾಲಕ್ಕೆ ಹೆದರಿ ಮಹಿಳೆ ಆತ್ಮಹತ್ಯೆ Read More

ದೇಶದ ಅಭಿವೃದ್ಧಿಗೆ ಸಂವಿಧಾನವೇ ಮುಖ್ಯ ಕಾರಣ- ಎಮ್.ರಾಮ್ ಪ್ರಸಾದ್

ನಂಜನಗೂಡು: ಒಂದು ದೇಶ ಸರ್ವತೋಮುಖ ಅಭಿವೃದ್ಧಿ ಸಾದಿಸಲು ಆ ದೇಶದ ಗಣತಂತ್ರ ವ್ಯವಸ್ಥೆ ಮತ್ತು ಸಂವಿಧಾನ ಬಹಳ ಮುಖ್ಯ ಪಾತ್ರ ವಹಿಸುತ್ತದೆ ಎಂದು ನಂಜನಗೂಡು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎಂ.ರಾಮಪ್ರಸಾದ್ ಹೇಳಿದರು.

ಇಂದು ಕಾಲೇಜಿನಲ್ಲಿ ೭೬ನೇ ಗಣರಾಜ್ಯೋತ್ಸವದ ಸಮಾರಂಭದಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಒಬ್ಬ ವಿದ್ಯಾರ್ಥಿ ಗಣರಾಜ್ಯೋತ್ಸವದ ಪಥಸಂಚನ ಕಾರ್ಯಕ್ರಮದಲ್ಲಿ ಭಾಗವಹಿಸಲು ಉಪನ್ಯಾಸಕರು ಶ್ರಮವಹಿಸಬೇಕೆಂದು ತಿಳಿಸಿದರು.

ಸಮಾಜಶಾಸ್ತ್ರ ಉಪನ್ಯಾಸಕ ಡಾ. ಬಿ ಜೆ.ಗೋಪಾಲಕೃಷ್ಣ ಅವರು ಮಾತನಾಡಿ, ಗಣತಂತ್ರ ವ್ಯವಸ್ಥೆಯ ಇತಿಹಾಸ, ಮಹತ್ವದ ಮಾಹಿತಿಯನ್ನು ನೀಡಿದರು. ಸಂವಿಧಾನವನ್ನು ಯಾವ ರೀತಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿಕೊಟ್ಟರು.

ಭೌತಶಾಸ್ತ್ರ ಉಪನ್ಯಾಸಕ ಎಚ್.ಎಸ್ ರಾಮಾನುಜ ಅವರು ಮಾತನಾಡಿ ಭಾರತ ರಾಷ್ಟ್ರಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಗಣತಂತ್ರ ವ್ಯವಸ್ಥೆಯಿಂದ ಮುಂದೆ ಸಾವಿರಾರು ವರ್ಷಗಳ ಕಾಲ ಈ ದೇಶ ಸುಭದ್ರವಾಗಿ ಇರುತ್ತದೆ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಸಿ.ಆರ್ ದಿನೇಶ್ ಅವರು ಧ್ವಜಾರೋಹಣ ಮಾಡಿ ಸ್ವಾತಂತ್ರ್ಯ ಮತ್ತು ಸಂವಿಧಾನ ಇವೆರಡು ಒಂದು ರಾಷ್ಟ್ರದ ಬಲಿಷ್ಠ ಆಯುಧಗಳು. ಹಾಗಾಗಿ ಇವೆರಡನ್ನೂ ನಾವು ಬಹಳ ಜೋಪಾನವಾಗಿ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.

ಸ್ವತಂತ್ರವನ್ನು ಗಾಂಧೀಜಿಯವರು ಸಂವಿಧಾನವನ್ನು ಡಾ. ಬಿ ಆರ್ ಅಂಬೇಡ್ಕರ್ ಅವರು ನಮ್ಮ ದೇಶಕ್ಕೆ ನೀಡಿದ ಮಹತ್ವಪೂರ್ಣವಾದ ಕೊಡುಗೆಗಳು,ಹಾಗಾಗಿ ಇಂದು ಪ್ರಪಂಚದ ಬೇರೆ ದೇಶಗಳು ಭಾರತದ ಕಡೆ ನೋಡಬೇಕಾದರೆ ನಮ್ಮ ದೇಶದ ಬಲಿಷ್ಠ ಸಂವಿದಾನವೇ ಕಾರಣ‌ ಎಂದು ಹೇಳಿದರು .

ಕಾರ್ಯಕ್ರಮದ ನಿರೂಪಣೆಯನ್ನು ಡಾ. ಎ.ಸುಮಾ ,ಸಾಗತ ಎನ್. ದಿನೇಶ್ ,ವಂದನೆಯನ್ನು ರಂಗಸ್ವಾಮಿಯವರು ಮಾಡಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಅಶ್ವಥ್ ನಾರಾಯಣ ಗೌಡ, ಲಿಂಗಣ್ಣಸ್ವಾಮಿ, ಸ್ವಾಮಿಗೌಡ ,ಎಚ್ ಕೆ ಪ್ರಕಾಶ್ , ಆದಿಲ್ ಹುಸೇನ್, ನಾಗರಾಜ ರೆಡ್ಡಿ, ಡಾ. ಟಿ.ಕೆ ರವಿ ಎನ್.ನಾಗರಾಜ್,ಡಾ. ಕೆ. ಮಾಲತಿ ,ಸುಮಿತ್ರ, ನಾಗರಾಜ ರೆಡ್ಡಿ ,ಕೆ.ಎಸ್.ಹರೀಶ್ ,ರೂಪ ,ವತ್ಸಲ, ಮೀನಾ,ಪದ್ಮಾವತಿ ಎಂ.ಬಿ ,ವಸಂತಕುಮಾರಿ ,ಶೃತಿ ,ಸುಲಕ್ಷಣ, ಹರೀಶ್ ಎನ್.ಎಮ್, ಮಿಲ್ಟನ್ ,ನಿಂಗಯ್ಯ,ಮಹದೇವ ಸ್ವಾಮಿ,ನಾಗಮ್ಮ ಉಪಸ್ಥಿತರಿದ್ದರು.

ದೇಶದ ಅಭಿವೃದ್ಧಿಗೆ ಸಂವಿಧಾನವೇ ಮುಖ್ಯ ಕಾರಣ- ಎಮ್.ರಾಮ್ ಪ್ರಸಾದ್ Read More

ತಲೆ ಹೊರಹಾಕಿದ ಮಹಿಳೆಯ ಕುತ್ತಿಗೆ ಕಟ್

ಮೈಸೂರು: ಚಲಿಸುತ್ತಿದ್ದ ಬಸ್ ನಿಂದ ಉಗುಳಲು ತಲೆ ಹೊರಹಾಕಿದ ಮಹಿಳೆಯ ಕುತ್ತಿಗೆ ಕಟ್ ಆಗಿ ಭೀಕರವಾಗಿ ಮೃತಪಟ್ಟ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.

ನಂಜನಗೂಡು ತಾಲೂಕು ತಾಲೂಕು ಸಿಂಧುವಳ್ಳಿ ಸಮೀಪ ಈ ಘಟನೆ ನಡೆದಿದ್ದು ಗುಂಡ್ಲುಪೇಟೆ ಆಲಹಳ್ಳಿ ಗ್ರಾಮದ ಶಿವಲಿಂಗಮ್ಮ(45) ಮೃತಪಟ್ಟಿದ್ದಾರೆ.

ಸಾಮಾನ್ಯವಾಗಿ ಬಸ್ ಗಳಲ್ಲಿ ಚಾಲಜ ನಿರ್ವಾಹಕರು ಯಾರಾದರೂ ತಲೆ ಅಥವಾ ಕೈ ಹೊರ ಹಾಕಿದರೆ ಎಚ್ಚರಿಕೆ ನೀಡುತ್ತಲೇ ಇರುತ್ತಾರೆ.ಆದರೂ ಇಂತಹ ಘಟನೆಗಳು ನಡೆಯುತ್ತಲೆ ಇರುವುದು ನಿಜಕ್ಕೂ ದುರಂತ.

ಮೈಸೂರಿನಿಂದ ಗುಂಡ್ಲುಪೇಟೆಯತ್ತ ತೆರಳುತ್ತಿದ್ದ ಕೆಎಸ್ ಆರ್.ಟಿ ಸಿ ಬಸ್ ನಲ್ಲಿ ಶಿವಲಿಂಗಮ್ಮ ಪ್ರಯಾಣಿಸುತ್ತಿದ್ದರು.

ಸಿಂಧುವಳ್ಳಿ ಸಮೀಪ ಬಸ್ ಮುಂದೆ ಹೋಗುತ್ತಿದ್ದ ವಾಹನವೊಂದನ್ನ ಓವರ್ ಟೇಕ್ ಮಾಡುವ ಸಂಧರ್ಭದಲ್ಲಿ ಶಿವಲಿಂಗಮ್ಮ ಉಗುಳಲು ತಲೆ ಹೊರಹಾಕಿದ್ದಾರೆ.ಆಗ ಪಕ್ಕದಲ್ಲಿ ಸಾಗುತ್ತಿದ್ದ ವಾಹನ‌ ವೇಗವಾಗಿ ಚಲಿಸಿ ಶಿವಲಿಂಗಮ್ಮನ ಕತ್ತು ಹಾಗೂ ಕೈ ಕಟ್ ಆಗಿದೆ.

ಶಿವಲಿಂಗಮ್ಮ ಸ್ಥಳದಲ್ಲೇ ಭೀಕರವಾಗಿ ಮೃತಪಟ್ಟಿದ್ದಾರೆ.ಬಸ್ ನಲ್ಲಿದ್ದ ಇತರೆ ಪ್ರಯಾಣಿಕರು ಭಯಪಟ್ಟರು.

ನಂಜನಗೂಡು ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ತಲೆ ಹೊರಹಾಕಿದ ಮಹಿಳೆಯ ಕುತ್ತಿಗೆ ಕಟ್ Read More

ಪಾಳುಬಿದ್ದ ಮನೆಗೆ ಬೆಂಕಿ: ಅನಾಹುತ ತಪ್ಪಿಸಿದ ಅಗ್ನಿಶಾಮಕ ಸಿಬ್ಬಂದಿ

ಮೈಸೂರು: ಪಾಳು ಬಿದ್ದ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡು ಅಕ್ಕಪಕ್ಕದ ನಿವಾಸಗಳಿಗೂ ವ್ಯಾಪಿಸಿ ಆತಂಕ ಸೃಷ್ಟಿಸಿದ ಘಟನೆ ನಂಜನಗೂಡಿನಲ್ಲಿ ನಡೆದಿದೆ.

ಪಟ್ಟಣದ ತ್ಯಾಗರಾಜ ಕಾಲೋನಿಯ ಎರಡನೇ ತಿರುವಿನಲ್ಲಿರುವ ಗೋವಿಂದರಾಜು ಎಂಬುವರಿಗೆ ಸೇರಿದ ಮನೆಗೆ ಬೆಂಕಿ ಬಿದ್ದಿದೆ.

ಹಲವು ವರ್ಷಗಳಿಂದ ಹೆಂಚಿನ ಮನೆ ಪಾಳು ಬಿದ್ದಿದೆ.ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಅಕ್ಕಪಕ್ಕದ ಮನೆಗಳಿಗೂ ವ್ಯಾಪಿಸಲಾರಂಭಿಸಿದೆ,ತಕ್ಷಣ ಎಚ್ಚೆತ್ತ ಮನೆಯವರು ಆತಂಕದಿಂದ ಹೊರಬಂದು ಅನಾಹುತದಿಂದ ತಪ್ಪಿಸಿಕೊಂಡಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಯಾರೋ ಕಿಡಿಗೇಡಿಗಳು ಪಾಳು ಬಿದ್ದ ಮನೆಗೆ ಬೆಂಕಿ ಹಚ್ಚಿದ್ದಾರೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಅಗ್ನಿಶಾಮಕ ಠಾಣಾಧಿಕಾರಿ ಚೆಲುವರಾಜು ಸ್ಪಷ್ಟಪಡಿಸಿದ್ದಾರೆ.

ಅಗ್ನಿಶಾಮಕ ಠಾಣಾಧಿಕಾರಿ ಚೆಲುವರಾಜು ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಬಸಪ್ಪ, ರಘುನಂದನ್, ವಿಶ್ವನಾಥ್, ರಾಹುಲ್, ಮಂಜುನಾಥ್, ಪಿ. ಆರಾಧ್ಯ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.

ಪಾಳುಬಿದ್ದ ಮನೆಗೆ ಬೆಂಕಿ: ಅನಾಹುತ ತಪ್ಪಿಸಿದ ಅಗ್ನಿಶಾಮಕ ಸಿಬ್ಬಂದಿ Read More

ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ: ಗ್ರಾಮ ತೊರೆಯುತ್ತಿವೆ ಕುಟುಂಬಗಳು

ಮೈಸೂರು: ನಂಜನಗೂಡಿನಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳಕ್ಕೆ ಬೇಸತ್ತು ಸಾಲಗಾರರು ಗ್ರಾಮವನ್ನೇ ತೊರೆಯುತ್ತಿದ್ದಾರೆ.

ನಂಜನಗೂಡು ತಾಲೂಕಿನ ಹುಲ್ಲಹಳ್ಳಿ, ರಾಂಪುರ, ಕುರಿಹುಂಡಿ, ಶಿರಮಳ್ಳಿ, ಕಗ್ಗಲೂರು ಹೆಗ್ಗಡಹಳ್ಳಿ, ಮುದ್ದಹಳ್ಳಿ ಸೇರಿದಂತೆ ಹಲವು ಗ್ರಾಮಗಳ ಕುಟುಂಬಗಳಲ್ಲಿದಗದವರು ಗ್ರಾಮ ತೊರೆಯುತ್ತಿದ್ದಾರೆ.

ಮನೆಗಳ ಮುಂಭಾಗದಲ್ಲಿ ನಾಮಫಲಕಗಳನ್ನ‌ ಅಳವಡಿಸಿ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ ಎಂಬ ಜನ ಆರೋಪಿಸಿದ್ದಾರೆ.

ಬಲವಂತವಾಗಿ ಸಾಲ ಕೊಡುತ್ತಿರುವ ಕೆಲ ಮೈಕ್ರೋ ಫೈನಾನ್ಸ್​ಗಳು ನಂತರ ವಸೂಲಿಗೆ ಅನ್ಯ ಮಾರ್ಗಗಳನ್ನು ಹಿಡಿದು ಕಿರುಕುಳ ಕೊಡುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಈ‌ ಬಗ್ಗೆ ಗ್ರಾಮದ ಕಾಂಗ್ರೆಸ್ ಮುಖಂಡ ಹುಚ್ಚಯ್ಯ ಮಾತನಾಡಿ,ಇತ್ತೀಚೆಗೆ ಮೈಕ್ರೋ ಫೈನಾನ್ಸ್​ಗಳ ಹಾವಳಿ ಹೆಚ್ಚಾಗಿದೆ. ಶಿರಮಳ್ಳಿ ಗ್ರಾಮದಲ್ಲಿ ಕನಿಷ್ಠ 15 ಕುಟುಂಬಗಳು ಗ್ರಾಮ ತೊರೆದಿವೆ ಎಂದು ಹೇಳಿದರು.

ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲ ಕೊಡುವಾಗ ಅವರಿಗೆ ಸಾಲ ತೀರಿಸುವ ಸಾಮರ್ಥ್ಯ ಇದೆಯೇ ಎಂದು ನೋಡದೇ ಮಿತಿಮೀರಿ ಸಾಲ ಕೊಡುತ್ತಿವೆ.ಅವರುಗಳು ಸಾಲ ತೀರಿಸಲಾಗದೇ ಊರು ಬಿಟ್ಟು ಹೋಗುತ್ತಿದ್ದಾರೆ. ಮೈಕ್ರೋ ಫೈನಾನ್ಸ್​ಗಳು ಸಾಲಗಾರರಿಗೆ ಮಾನಸಿಕವಾಗಿ ತುಂಬಾ ಹಿಂಸೆ ನೀಡುತ್ತಿವೆ ಎಂದು ಅವರು ಆರೋಪಿಸಿದರು.

ಮೈಕ್ರೋ ಫೈನಾನ್ಸ್ ವ್ಯವಸ್ಥೆಯನ್ನು ನಿಯಂತ್ರಿಸಬೇಕೆಂದು ಸರ್ಕಾರಕ್ಕೆ ಹುಚ್ಚಯ್ಯ ಮನವಿ ಮಾಡಿದರು.​

ರಾಂಪುರ ಗ್ರಾಮದ ಹಲವು ಮಹಿಳೆಯರು ಮಾತನಾಡಿ, ನಮಗೆ ಮೈಕ್ರೋ ಫೈನಾನ್ಸ್​ನವರು ತುಂಬ ಹಿಂಸೆ ಕೊಡುತ್ತಿದ್ದಾರೆ. ಹಗಲು – ರಾತ್ರಿ ಎನ್ನದೆ ಮನೆಗೆ ಬಂದು ಹಣ ಕಟ್ಟುವ ತನಕ ಮನೆ ಬಿಟ್ಟು ಹೋಗೋದಿಲ್ಲ ಅಂತ ಇಲ್ಲೇ ಕುಳಿತಿರುತ್ತಾರೆ, ನಮಗೆ ಹಣ ಕಟ್ಟಲಾಗುತ್ತಿಲ್ಲ, ಪರಿಹಾರ ಕೊಡಸಬೇಕು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದರು.

ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ: ಗ್ರಾಮ ತೊರೆಯುತ್ತಿವೆ ಕುಟುಂಬಗಳು Read More