ಅನುರಾಗ್ ಮಕ್ಕಳಮನೆಯಲ್ಲಿ ಗಣರಾಜ್ಯೋತ್ಸವ ವಿಶೇಷ

ನಂಜನಗೂಡು: ನಂಜನಗೂಡು‌ ತಾಲೂಕು ಹಲ್ಲರೆ – ಹುರಾ ರಸ್ತೆ ಶ್ರೀ ನಂಜುಂಡೇಶ್ವರ ಟೌನ್ಶಿಪ್ ನಲ್ಲಿರುವ ಅನುರಾಗ್ ಮಕ್ಕಳಮನೆಯಲ್ಲಿ ೭೬ ನೇ ಗಣರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸಲಾಯಿತು.

ಧ್ವಜಾರೋಹಣವನ್ನು‌ ಶರಣ ತತ್ವ ಚಿಂತಕರಾದ ಪೂಜ್ಯ ಶ್ರೀ ಬಸವ ಯೋಗಿ ಪ್ರಭು ಸ್ವಾಮಿಗಳು ಮತ್ತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ ಮಹಿಳಾ ಘಟಕ ನಂಜನಗೂಡು ತಾಲೂಕು ಅಧ್ಯಕ್ಷರು ಶಶಿಕಲಾ ಗಿರೀಶ್ ಅವರು ನೆರವೇರಿಸಿದರು.

ಕಾರ್ಯಕ್ರಮದ ಮೊದಲು ನಮ್ಮ ಭಾರತ ಸಂವಿಧಾನದ ಪೀಠಿಕೆ ಮತ್ತು ಪ್ರಸ್ತಾವನೆಯನ್ನು ಎಲ್ಲರೂ ಪಠಣ ಮಾಡಿದರು.

ಗಿಡಕ್ಕೆ ನೀರನೆರೆಯುವುದರ ಮೂಲಕ ಉದ್ಘಾಟನೆ ಮಾಡಿದ್ದು‌ ವಿಶೇಷ. ಪ್ರಥಮ್ ಎಜುಕೇಷನ್ ಫೌಂಡೇಶನ್ ಸೆಂಟರ್ ಹೆಡ್ ನಂಜನಗೂಡು ನಾರಾಯಣ್ ಎಚ್. ಪಿ ಅವರು ನೆರವೇರಿಸಿದರು.

ನಮ್ಮ ಭಾರತ ದೇಶದ ಸಂವಿಧಾನ ಜಾರಿಗೆ ತರುವ ಉದ್ದೇಶದಿಂದ ಅನೇಕ ಜನರು ಶ್ರಮಿಸಿದ ಬಗ್ಗೆಗೆ, ಬಸವಣ್ಣನವರ ದಯವಿಲ್ಲದ ಧರ್ಮ ಅದ್ಯಾವುದಯ್ಯ ದಯವೇ ಬೇಕು ಸಕಲ ಪ್ರಾಣಿಗಳಲ್ಲಿ ಎಂಬ ವಚನದಂತೆ ಸಂವಿಧಾನದಲ್ಲಿರುವ ಸಾಮ್ಯತೆ ಮತ್ತು ಸ್ವಾಮಿ ವಿವೇಕಾನಂದರ ಯುವ ಜನತೆ ಬಗೆಗೆ ನುಡಿದಿರುವಂತೆ ಈ ಅನುರಾಗ್ ಸೇವಾ ಟ್ರಸ್ಟ್ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಗ್ರಾಮೀಣ ಅಭಿವೃದ್ಧಿ ಯೋಜನೆಯ ನಂಜನಗೂಡು ತಾಲ್ಲೂಕು ಯೋಜನಾಧಿಕಾರಿ
ಧರ್ಮರಾಜ್ ಅವರು ಮಾತನಾಡಿ ಇವತ್ತಿನ ಮಕ್ಕಳು ಮತ್ತು ಯುವ ಜನತೆ ದುಶ್ಚಟಗಳಿಗೆ ದಾಸರಾಗಬಾರದು ಎಂದು ಕುವಿ ಮಾತು ಹೇಳಿದರು.

ಮಕ್ಕಳ ಮನೆಯ ವಿದ್ಯಾರ್ಥಿಗಳು ಸಾಮಾಜಿಕ ಅಭಿವೃದ್ಧಿ ಕಾರ್ಯಗಳಲ್ಲಿ ಮತ್ತು ಕಪಿಲಾ ನದಿಯ ಸ್ವಚ್ಛತೆ ಮಾಡುವಲ್ಲಿ ತೊಡಗಿಸಿಕೊಂಡಿದ್ದುದರ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ಕರ್ನಾಟಕ ಪ್ರತಿಧ್ವನಿ ವೇದಿಕೆ ಮೈಸೂರು ಜಿಲ್ಲಾಧ್ಯಕ್ಷ ಪ್ರತಿಧ್ವನಿ ತ್ರಿಣೇಶ್ ಅವರು ಮಾತನಾಡಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ವಾಕ್ಯದಂತೆ ಸಂವಿಧಾನದ ಒಳಹೊಕ್ಕು ನೋಡಿದರೆ ಸಿಗುವ ಸ್ತ್ರೀ ಸ್ವಾತಂತ್ರ್ಯದ ಅಂಶವನ್ನು ಎತ್ತಿ ಹಿಡಿಯುವ ಕೆಲಸ ಅನುರಾಗ್ ಸೇವಾ ಟ್ರಸ್ಟ್ ಮಾಡಿದೆ ಎಂದು ನುಡಿದರು.

ಶಶಿಕಲಾ ಗಿರೀಶ್ ಅವರು ಮಾತನಾಡಿ ಅನುರಾಗ್ ಮಕ್ಕಳಮನೆ ವಿದ್ಯಾರ್ಥಿಗಳು ಸಂಸ್ಕಾರ ಸಹಿತವಾಗಿ ವಿಧ್ಯಾಭ್ಯಾಸ ಮಾಡುತ್ತಿರುವುದು ನಮಗೆಲ್ಲ ಸಂತಸ ತಂದಿದೆ, ಹಾಗೂ ಇಲ್ಲಿನ ವ್ಯವಸ್ಥೆ ರೂಪಿಸಿರುವ ಯೋಜನೆಗಳು ಮತ್ತು ಕಾರ್ಯಚಟುವಟಿಕೆಗಳು ಸಮಾಜಕ್ಕೆ ಅತ್ಯದ್ಭುತ ಕೊಡುಗೆಯನ್ನ ನೀಡುತ್ತಿದೆ, ಸಂವಿಧಾನದ ಆಶಯವನ್ನು ಎತ್ತಿ ಹಿಡಿಯುವ ಕೆಲಸವನ್ನು ಅನುರಾಗ್ ಸೇವಾ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾದ ಡಿ.ಜಿ.ಸೋಮಶೇಖರ ಮೂರ್ತಿಯವರು ಮಾಡುತ್ತಿದ್ದಾರೆ ಎಂದು ಹೇಳಿದರು.

ಮಕ್ಕಳ ಮನೆಯ ಹಳೆಯ ವಿದ್ಯಾರ್ಥಿ ವೃಷಬೇಂದ್ರ ಸಿ ನಿರೂಪಣೆ ಮಾಡಿದರು. ಪ್ರಾರ್ಥನೆ ವಿಧ್ಯಾರ್ಥಿ ಕಾಳಿ ಪ್ರಸಾದ್, ಸ್ವಾಗತ ಹಳೆಯ ವಿಧ್ಯಾರ್ಥಿ ಹರೀಶ್ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಅನುರಾಗ್ ಸೇವಾ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾದ ಡಿ.ಜಿ. ಸೋಮಶೇಖರ ಮೂರ್ತಿ, ಕಾ.ಸು. ನಂಜಪ್ಪ, ಪ್ರತಿಧ್ವನಿ ಕೀರ್ತಿ, ಪ್ರತಿಧ್ವನಿ ಲೋಕೇಶ್, ಮತ್ತಿತರರು ಭಾಗಿಯಾಗಿದ್ದರು.

ಅನುರಾಗ್ ಮಕ್ಕಳಮನೆಯಲ್ಲಿ ಗಣರಾಜ್ಯೋತ್ಸವ ವಿಶೇಷ Read More